Author: ನ್ಯೂಸ್ ಬ್ಯೂರೋ

ಮೂಡಬಿದಿರೆ: ಹಳೆಗನ್ನಡ ಸಾಹಿತ್ಯಕ್ಕೆ ಅಸ್ತಮ ಎನ್ನುವುದಿಲ್ಲ. ಅದು ಎಲ್ಲಾ ಕಾಲದಲ್ಲೂ ಪ್ರತಿಪಲಿಸಲ್ಪಡುತ್ತದೆ. ಪಂಪ, ರನ್ನ, ಕುಮಾರವ್ಯಾಸರಾದಿಯಾಗಿ ಎಲ್ಲಾ ಕವಿಗಳ ತಮ್ಮ ಸಾಹಿತ್ಯದಲ್ಲಿ ಹೊಸತನವನ್ನು ಕಟ್ಟಿಕೊಡುವ ಮತ್ತು ಅದು ಸದಾ ಕಾಲ ಪ್ರಸ್ತುವಾಗುವ ವಸ್ತು ವಿಚಾರವನ್ನು ಕಟ್ಟಿಕೊಟ್ಟಿದ್ದಾರೆ ಡಾ. ಎನ್. ಎಸ್. ತಾರಾನಾಥ್ ಹೇಳಿದರು. ಆಳ್ವಾಸ್ ನುಡಿಸಿರಿಯ ಎರಡನೇ ದಿನ ರತ್ನಾಕರ ವರ್ಣ ವೇದಿಯಕೆ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ಜರುಗಿದ ಮೊದಲ ವಿಚಾರಗೋಷ್ಠಿಯಲ್ಲಿ ಪ್ರಾಚೀನ ಕನ್ನಡ ಸಾಹಿತ್ಯ: ಹೊಸತನದ ಹುಡುಕಾಟ’ ಎಂಬ ವಿಷಯದ ಕುರಿತು ಮಾತನಾಡಿದರು.

Read More

ಮೂಡುಬಿದಿರೆ: ಆಳ್ವಾಸ್ ನುಡಿಸಿರಿಯ ಎರಡನೇ ದಿನ ಡಾ. ವಿ. ಎಸ್. ಆಚಾರ್ಯ ವೇದಿಯಕೆಯಲ್ಲಿ ಬ್ರಹ್ಮಾವರ ರಘುನಂದನ್ ಭಟ್ ಮತ್ತು ಬಳಗದಿಂದ ಲಘು ಶಾಸ್ರ್ತೀಯ ಸಂಗೀತ ಕಾರ್ಯಕ್ರಮ ಜರುಗಿತು.

Read More

ಮೂಡುಬಿದಿರೆ: ಸಮಾಜ ಒಗ್ಗೂಡಬೇಕೆಂದಿದ್ದರೆ ಸಮಾನತೆ ಇರಬೇಕು. ಅಸಮಾನತೆಯನ್ನೇ ವಿವಿಧತೆಯಲ್ಲಿನ ಏಕತೆ ಎಂದು ನಮ್ಮನ್ನು ದಿಕ್ಕು ತಪ್ಪಿಸಲಾಗಿದೆ. ನಮ್ಮದು ಸಮಸ್ತರೂ ಸೇರದ ಸಮಾಜವಾಗಿರದೇ ಜಾತಿ, ಧರ್ಮ, ಮತ ಪಂಥದ ಆಧಾರದಲ್ಲಿ ವಿಭಜಿಸಲಾಗಿದೆ ಎಂದು ಚಿಂತಕ ನಿತ್ಯಾನಂದ ಶೆಟ್ಟಿ ಹೇಳಿದರು. ಆಳ್ವಾಸ್ ನುಡಿಸಿರಿಯ ಎರಡನೇ ದಿನ ರತ್ನಾಕರ ವರ್ಣ ವೇದಿಯಕೆ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ‘ಸಾಮಾಜಿಕ ನ್ಯಾಯ: ಹೊಸತನದ ಹುಡುಕಾಟ’ ಎಂಬ ವಿಷಯದ ಕುರಿತು ವಿಶೇಷೋಪನ್ಯಾಸ ನೀಡಿದರು. ಭಾತರದಂತಹ ದೇಶಗಳಲ್ಲಿ ಸಾಮಾಜಿಕ ನ್ಯಾಯ ಹೊಟ್ಟೆ ಪಾಡಿನ ಪ್ರಶ್ನೆಯಾಗಿ ಉಳಿದಿಲ್ಲ. ಜಾತಿ ವ್ಯವಸ್ಥೆಯಲ್ಲಿನ ತಪ್ಪು ಕಲ್ಪನೆಯಿಂದಾಗಿ ಒಂದೊಂದು ಜಾತಿ ಒಂದೊಂದು ರಾಷ್ಟ್ರವೆಂಬ ಕಲ್ಪನೆ ಮೂಡುತ್ತಿದೆ. ಸಾಮಾಜಿಕ ನ್ಯಾಯದ ಅಂತಿಮ ಉದ್ದೇಶ ಜಾತಿ ಹಾಗೂ ಅಸಮಾನ ಸಂಬಂಧಗಳನ್ನು ತೊಡೆದುಹಾಕುವುದೇ ಆಗಿದೆ ಎಂದ ಅವರು ನಾವೆಲ್ಲರೂ ಭಾರತೀಯರು ಎಂಬುವುದಕ್ಕಿಂತ ಮೊದಲು ನಾವೆಲ್ಲರೂ ಮನುಷ್ಯರು ಎಂಬುದನ್ನು ಅರಿಯಬೇಕಾಗಿದೆ ಎಂದರು. ನುಡಿಸಿರಿಯ ರೂವಾರಿ ಡಾ. ಎಂ. ಮೋಹನ ಆಳ್ವ ವೇದಿಕೆಯಲ್ಲಿದ್ದರು.

Read More

ಮೂಡುಬಿದಿರೆ: ಆಳ್ವಾಸ್ ನುಡಿಸಿರಿಯ ಎರಡನೇ ದಿನ ಡಾ. ವಿ. ಎಸ್. ಆಚಾರ್ಯ ವೇದಿಕೆಯಲ್ಲಿ ಬೆಂಗಳೂರಿನ ಮೈತ್ರಿರಾವ್  ಅವರಿಂದ ಭರತನಾಟ್ಯ ಕಾರ್ಯಕ್ರಮ ಜರುಗಿತು.

Read More

ಮೂಡುಬಿದಿರೆ: ಒಂದಲ್ಲಾ ಒಂದು ಕಾರಣಗಳಿಗಾಗಿ ವಿಶಿಷ್ಯತೆಯನ್ನು ಕಾಯ್ದುಕೊಂಡು ಬಂದಿರುವ ಆಳ್ವಾಸ್ ನುಡಿಸಿರಿ ಕಲೆ-ಸಾಹಿತ್ಯ-ಸಂಸ್ಕೃತಿಗೆ ನೀಡಿದ ಕೊಡುಗೆ ಅಪಾರ. ಆಧುನಿಕತೆಗೆ ಸಿಕ್ಕಿ ಅದೆಷ್ಟೋ ಕಲೆಗಳು ನುಡಿಯಲ್ಲಿ ಸ್ಥಾನ ಪಡೆಯುವುದು ವಿಶೇಷ. 12ನೇ ಆಳ್ವಾಸ್ ನುಡಿಸಿರಿಯಲ್ಲಿ ನಾವು ಯಾವುದೇ ಮೂಲೆಗೆ ಹೋದರೂ ಸಹ ಅಲ್ಲಿ ಭಾವಗೀತೆ, ಜಾನಪದ ಗೀತೆ, ದಾಸರ ಕೀರ್ತನೆಗಳು ನಮ್ಮ ಕಿವಿಗೆ ಇಂಪನ್ನು ಬೀರುತ್ತಿವೆ. ಇದಕ್ಕೆ ಕಾರಣೀಭೂತರು ಆವರಣದ ವಿವಿದೆಡೆಗಳಲ್ಲಿ ಕಾಣಸಿಗುವ ಕೀರ್ತನ ಗಾಯಕರು. ಶಿವಕುಮಾರ ಬಿರಾಲಿಯವರ ನೇತೃತ್ವದಲ್ಲಿ ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಕೊಪ್ಪಳ, ಧಾರವಾಡ ಹೀಗೆ ನಾನಾ ಜಿಲ್ಲೆಗಳಿಂದ ಒಟ್ಟು ಎಂಟು ತಂಡಗಳು ಆಳ್ವಾಸ್ ನುಡಿಸಿರಿಯ ಆವರಣಕ್ಕೆ ಆಗಮಿಸಿವೆ. ಇವರು ಬೆಳಗ್ಗೆ ಎಚಿಟರಿಂದ ಸಂಜೆ ಐದು ಗಂಟೆಯವರೆಗೆ ತಮ್ಮ ಗಾಯನದ ಕಂಪನ್ನು ಪಸರಿಸುತ್ತಿದ್ದಾರೆ. – ಅಪಾರ ಉಜಿರೆ

Read More

ಮೂಡುಬಿದಿರೆ: ಆಳ್ವಾಸ್ ನುಡಿಸಿರಿಯ ಎರಡನೇ ದಿನ ರತ್ನಾಕರ ವರ್ಣ ವೇದಿಯಕೆ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ಬೆಂಗಳೂರು ದಿವಾಕರ ಕಶ್ಯಪ್ ಮತ್ತು ಬಳಗದಿಂದ ನಡೆದ ಸಂಗೀತ ಸಾಧನಾ ಕಾರ್ಯಕ್ರಮ ಮುಂಜಾನೆಯ ಚಹಾ ಸವಿದು ಕುಳಿತವರಿಗೆ ಇಂಪು ನೀಡಿತು.

Read More

ಬೈಂದೂರು: ಇಲ್ಲಿನ ಪ್ರಸಿದ್ದ ಶ್ರೀ ದುರ್ಗಾಪರಮೇಶ್ವರಿ ದೇವಳದ ವಾರ್ಷಿಕ ಮನ್ಮಹಾ ರಥೋತ್ಸವ ಉಪ್ಪುಂದ ಕೊಡಿಹಬ್ಬ ಗುರುವಾರ ಸಡಗರ ಸಂಭ್ರಮದಿಂದ ಜರುಗಿತು. ದೇವಳದ ಕಾರ್ಯನಿರ್ವಹಣಾಕಾರಿ ಟಿ. ಜಿ. ಸುಧಾಕರ್ ಅವರ ಉಸ್ತುವಾರಿ ಹಾಗೂ ಗೋಕರ್ಣದ ತಂತ್ರಿ ಹಿರೇಗಂಗೆ ಗಣಪತಿ ಭಟ್ ನೇತೃತ್ವದಲ್ಲಿ ದೇವಳದಲ್ಲಿ ಪಂಚಾಮೃತ ಅಭಿಷೇಕ, ವಿಶೇಷ ಭೂತ ಬಲಿ ಸೇರಿದಂತೆ ಹಲವು ಧಾರ್ಮಿಕ ವಿಧಿವಿಧಾನ ನಡೆಯಿತು. ಮಧ್ಯಾಹ್ನ ದೇವಳದ ಸಭಾಭವನದಲ್ಲಿ ಸಾವಿರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಬಳಕ ದೇವಿಗೆ ಹರಕೆ ರೂಪದಲ್ಲಿ ಬಂದ ಸೀರೆಗಳನ್ನು ಬಹಿರಂಗ ಹರಾಜು ಮಾಡಲಾಯಿತು. ವಿಶೇಷ ಆಸಕ್ತಿಯಿಂದ ಹೆಚ್ಚಿನ ಮಹಿಳೆಯರು ಏಲಂನಲ್ಲಿ ಭಾಗವಹಿಸಿ ಪ್ರಸಾದ ರೂಪದಲ್ಲಿ ಸೀರೆಗಳನ್ನು ಖರೀದಿಸಿದರು. ಸಂಜೆ ನಡೆದ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ರಥ ಎಳೆದು ಸಂಭ್ರಮಿಸಿದರು. ಈ ಸಾಲಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ದ್ವಿತೀಯ ಜಾತ್ರೆ ಉಪ್ಪುಂದ ಕೊಡಿಹಬ್ಬವಾಗಿದ್ದು, ಇಲ್ಲಿನ ಗ್ರಾಮದೇವತೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ನ.೨೧ರಂದು ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಗಿತ್ತು. ರಥೋತ್ಸವದ ಪ್ರಯುಕ್ತ ದೇವಳದ ಮನವಿ…

Read More

ಮೂಡಬಿದಿರೆ: ಪುತ್ತಿಗೆ ಸಭಾಂಗಣದಲ್ಲಿ ನುಡಿಸಿರಿ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮುನ್ನ ಅತಿಥಿಗಳನ್ನು ಕರೆದೊಯ್ಯಲು ಆಯೋಜಿಸಲಾಗಿದ್ದ ಭವ್ಯ ಮೆರವಣಿಗೆಯ ನುಡಿಸಿರಿಯ ಸೊಬಗನ್ನು ಇನ್ನಷ್ಟು ಹೆಚ್ಚಿಸಿತ್ತು. ಸುಮಾರು 50ಕ್ಕೂ ಹೆಚ್ಚು ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿ ಮೆರಗು ನೀಡಿದ್ದವು. ಗರ್ನಲ್, ಪೋಲಿಸ್ ಬ್ಯಾಂಡ್, ನಂದಿ ಧ್ವಜ, ಪಕ್ಕಿನಿಶಾನೆ, 40 ತಟ್ಟಿರಾಯ, ಶಂಖ, 25 ಕೊಂಬು, 15 ಚೆಂಡೆ, ಆಟಿಕಳೆಂಜ, ರಮೇಶ್ ಕಲ್ಲಡ್ಕ ಅವರ ಕೀಲು ಕುದುರೆ, ಕರಗ, ಕೊಡೆಗಳು, ಪೂತನಿ, ಯಕ್ಷಗಾನ (ಬಡಗು, ತೆಂಕು), ಮಂಗಳೂರು ಡೋಲು, ಗೊರವರ ಕುಣಿತ, ಸೋಮನ ಕುಣಿತ, ಕಂಗೀಲು, ಪೂಜಾಕುಣಿತ (ದೇವರಾಜ್ ಮಂಡ್ಯ), ವೀರಭದ್ರನ ಕುಣಿತ, ಚಿತ್ರದುರ್ಗ ಬ್ಯಾಂಡ್ ಸೆಟ್, ಕೊಡಗಿನ ಉಮ್ಮತಾಟ್, ದುಡಿಕುಣಿತ, ಬೆಂಡರ ಕುಣಿತ, ತ್ರಿವರ್ಣ ಧ್ವಜ, ಕೇರಳದ ದೇವರ ವೇಷ, ಕುಂದಾಪುರ ಡೋಲು, ಭಜನಾ ತಂಡ, ಭಜನೆಗಾರರು, ಶ್ರೀಲಂಕಾ ಕಲಾವಿದರು, ಲಂಬಾಣಿ, ಬೀದಿ ಜಾದೂಗಾರರು+ಸುಡುಗಾಡು ಸಿದ್ಧರು, ಬಿಜಾಪುರ, ಬಾಗಲಕೋಟೆಯ ಉಡುಪುಗಳು, ಮೈಸೂರಿನ ಪೇಟ, ಕೋಟು, ಕಚ್ಚಾ, ಗುಮ್ಟೆ ಕುಣಿತ, ಹಗಲು ವೇಷ, ಸ್ಕೌಟ್ ಗೈಡ್ಸ್, ನಗಾರಿ(ಮಂಜು…

Read More

ಮೂಡುಬಿದಿರೆ: ಸಮಾಜದ ಇತರರಿಗೆ ತೊಂದರೆಯಾಗದಂತೆ ಬದುಕುವುದು ನಿಜವಾದ ವ್ಯಕ್ತಿ ಸ್ವಾತಂತ್ರ್ಯವೆನಿಸಕೊಳ್ಳುತ್ತದೆ. ನಮ್ಮ ಮಾತುನಂತೆ ನಡೆವಳಿಕೆ ಕಂಡುಬರುತ್ತಿದ್ದರೆ ಇದು ಸಾಧ್ಯವಾಗುತ್ತದೆ. ಅಭಿವ್ಯಕ್ತಿಯ ಸ್ವಾತಂತ್ರ್ಯವು ವ್ಯಕ್ತಿಸ್ವಾತಂತ್ರ್ಯದ ಹಾಗೆ ಪ್ರತಿಯೊಬ್ಬರಿಗೂ ದತ್ತವಾದ್ದು, ನಿಜ. ಆದರೆ ಇವಕ್ಕೆ ಗಡಿರೇಖೆಗಳು, ಗೊತ್ತುಪಾಡುಗಳು ಇರುವುದಿಲ್ಲವೇ ಎಂದು ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರೀ ಪ್ರಶ್ನೆಸಿದರು ಅವರು ಮೂಡುಬಿದಿರೆ ವಿದ್ಯಾಗಿರಿಯಲ್ಲಿ ನಡೆಯುವ ನಾಲ್ಕು ದಿನಗಳ ಕನ್ನಡ ನಾಡು ನುಡಿಯ ಸಾಂಸ್ಕೃತಿಕ ಸಮ್ಮೇಳನ ಆಳ್ವಾಸ್ ನುಡಿಸಿರಿ 2015ಕ್ಕೆ ಪುತ್ತಿಗೆಯ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಚಾಲನೆ ದೊರೆತ ಬಳಿಕ ನಡೆದ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿದರು. ಬುದ್ಧಿಜೀವಿಗಳ, ವಿಚಾರವಾದಿಗಳ, ಸಾಹಿತಿಗಳ ಮೇಲಣ ಹಲ್ಲೆಗಳು ಅತ್ಯಂತ ದುಃಖಕರ; ಖಂಡನಾರ್ಹ, ಶಿಕ್ಷಾರ್ಹ. ಅನ್ಯಾಯವಾಗಿ ಈಚೆಗೆ ನಮ್ಮ ನಡುವಿನ ಕ್ರಿಯಾಶಾಲಿ ಸಂಶೋಧಕಮಿತ್ರ ಎಂ.ಎಂ. ಕಲಬುರ್ಗಿಯವರನ್ನು ನಾವು ಕಳೆದುಕೊಂಡೆವು. ಸಮಾಜ ಸಾಹಿತಿಗಳ ಹಿತ ಕಾಯಬೇಕು; ಸಾಹಿತಿಗಳು ಸಮಾಜದ ಹಿತ ಕಾಯಬೇಕು. ಎರಡು ಕಡೆಗೂ ತಾಳ್ಮೆ ಸಂಯಮ ಸಮಾಧಾನಗಳು ಅವಶ್ಯವಾಗಿರಬೇಕು. ಸರ್ಕಾರದ ನಾಯಕತ್ವವೂ ಸಾಮಾಜಿಕನಾಯಕತ್ವವೂ ಒಗ್ಗೂಡಿ ಶ್ರಮಿಸಬೇಕು…

Read More

ಮೂಡುಬಿದಿರೆ: ಸಾಹಿತ್ಯ-ಸಂಗೀತ ಇತರ ಲಲಿತ ಕಲೆಗಳು ಮನುಷ್ಯನ ವ್ಯಕ್ತಿತ್ವವನ್ನು ಪರಿಷ್ಕರಿಸಿ, ಅತನಲ್ಲಿನ ದುಷ್ಟಶಕ್ತಿಗಳನ್ನು ನಾಶಗೊಳಿಸಿ ಮನಸ್ಸನ್ನು ಪರಿಶುದ್ಧಗೊಳಿಸಿ ಅವನನ್ನು ದೈವತ್ವದೆಡೆಗೆ ಕರೆದೊಯ್ಯುವ ಸಾಧನಗಳಾಗಿವೆ. ಎಲ್ಲೆಡೆ ತಾಂಡವವಾಡುತ್ತಿರುವ ಅಶಾಂತಿ, ಅಸಹನೆ, ಅಸಹಿಷ್ಣುತೆ ಇತ್ಯಾದಿ ಅನಿಷ್ಟಗಳನ್ನು ಸಮರ್ಥವಾಗಿ ಎದುರಿಸಿ ಹಿಮ್ಮೆಟ್ಟಿಸಲು ಅವಶ್ಯವಿರುವ ಮಾನಸಿಕ ಸ್ಥೈರ್ಯ ಪಡೆಯಲು ಇವೇ ಪೂರಕವಾದುದು. ಈ ನಿಟ್ಟಿನಲ್ಲಿಯೂ ನುಡಿಸಿರಿಯಂತಹ ಕಾರ್ಯಕ್ರಮಗಳು ಮುಖ್ಯವೆನಿಸುತ್ತದೆ ಎಂದು ಸಾಹಿತಿ ಡಾ. ವೀಣಾ ಶಾಂತೇಶ್ವರ ಹೇಳಿದರು. ಅವರು ಮೂಡುಬಿದಿರೆ ಪುತ್ತಿಗೆಯ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಕನ್ನಡ ನಾಡು ನುಡಿಯ ಸಾಂಸ್ಕೃತಿಕ ಸಮ್ಮೇಳನ ಆಳ್ವಾಸ್ ನುಡಿಸಿರಿ ೨೦೧೫ ಉದ್ಘಾಟಿಸಿ ಮಾತನಾಡಿದರು. ಹೊಸದಕ್ಕಾಗಿ ಹುಡಕಾಟ ಮನುಷ್ಯನ ಮೂಲಭೂತ ಸ್ವಭಾವ. ಸಾಹಿತ್ಯದಲ್ಲಷ್ಟೇ ಅಲ್ಲದೇ ವಿಜ್ಞಾನ-ಕೃಷಿ-ಕೈಗಾರಿಕೆ-ಶಿಕ್ಷಣ ಎಲ್ಲಾ ಕ್ಷೇತ್ರಗಳಲ್ಲಿಯೂ ಎಲ್ಲಾ ಕಾಲಗಳಲ್ಲಿಯೂ ಕ್ರಿಯಾಶೀಲ ಮನಸ್ಸುಗಳು ಹೊಸತನಕ್ಕಾಗಿ, ಭಿನ್ನತೆಗಾಗಿ, ಅನನ್ಯತೆಗಾಗಿ, ಅಸ್ಮಿತೆಗಾಗಿ, ಹುಡುಕಾಟ ನಡೆಸಿಯೇ ಇರುತ್ತವೆ. ಸಾಹಿತ್ಯದೊಳಗಂತೂ ‘ಹಳೆಯಸಾಹಿತ್ಯ’, ‘ಆಧುನಿಕ ಸಾಹಿತ್ಯ’ ಅಂತನ್ನುವುದು ವಿಶ್ಲೇಷಣೆಯ ಅನುಕೂಲಕ್ಕಾಗಿ ನಾವು ಕೊಟ್ಟಿರುವ ಕಾಲಸೂಚಕ ವಿಶೇಷಣಗಳಷ್ಟೇ. ಪ್ರತಿಯೊಂದು ಕಾಲಘಟ್ಟದ ಶ್ರೇಷ್ಠ ಸಾಹಿತ್ಯವೂ ಆ…

Read More