ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಗಂಗೊಳ್ಳಿ ನಿನಾದ ಸಂಸ್ಥೆಯ ವತಿಯಿಂದ ಜರಗಿದ ಚಾತುರ್ಮಾಸ್ಯಾವಧಿ ಅಖಂಡ ಭಜನಾ ಮಹೋತ್ಸವ ಸವಿನೆನಪಿಗಾಗಿ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಆಯೋಜಿಸಲಾಗಿರುವ 11 ನೇ ವರ್ಷದ ಏಕಾಹ ಭಜನಾ ಕಾರ್ಯಕ್ರಮಕ್ಕೆ ದೀಪ ಪ್ರಜ್ವಲನ ಮೂಲಕ ಚಾಲನೆ ನೀಡಲಾಯಿತು. ದೇವಳದ ಪ್ರಧಾನ ಅರ್ಚಕ ಎಸ್.ವೆಂಕಟರಮಣ ಆಚಾರ್ಯ ದೀಪ ಪ್ರಜ್ವಲಟಿ ಮಾಡುವ ಮೂಲಕ ಏಕಾಹ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಪ್ರತಿನಿಧಿ ಜಿ.ವೇದವ್ಯಾಸ ಆಚಾರ್ಯ, ಜಿ.ವೆಂಕಟೇಶ ನಾಯಕ್, ಜಿ.ಶೇಷಗಿರಿ ನಾಯಕ್, ಎಚ್.ಸಂಜೀವ ನಾಯಕ್, ಬಿ.ಪ್ರಕಾಶ ಶೆಣೈ, ಜಿ.ಗಣಪತಿ ನಾಯಕ್, ನಿನಾದ ಸಂಸ್ಥೆಯ ಅಧ್ಯಕ್ಷ ಎಂ.ಮುಕುಂದ ಪೈ, ಕಾರ್ಯದರ್ಶಿ ಎನ್.ಗಜಾನನ ನಾಯಕ್, ಎಂ.ನಾಗೇಂದ್ರ ಪೈ, ಎನ್.ಕೃಷ್ಣಾನಂದ ನಾಯಕ್, ವನಮಾಲಾ ಶೆಣೈ, ಎನ್.ಕೀರ್ತನಾ ಎಸ್. ನಾಯಕ್, ಎಂ.ಭಾನುಶ್ರೀ ಎಸ್.ಪೈ ಮತ್ತಿತರರು ಉಪಸ್ಥಿತರಿದ್ದರು. ಎ.೧೮ರಂದು ಬೆಳಿಗ್ಗೆ ದೀಪ ವಿಸರ್ಜನೆಯೊಂದಿಗೆ ಏಕಾಹ ಭಜನೆ ಸಂಪನ್ನಗೊಳ್ಳಲಿದೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೈಂದೂರು ಇಲ್ಲಿ ವಾರ್ಷಿಕೋತ್ಸವ ಸಮಾರಂಭವು ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ವಾಣಿಜ್ಯಶಾಸ್ತ್ರ ವಿಬಾಗದ ಮುಖ್ಯಸ್ಥರಾದ ರಘು ನಾಯ್ಕ ವಹಿಸಿದ್ದರು. ವೇದಿಕೆಯಲ್ಲಿ ಡಾ.ಜಿ ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಂಚಾಲಕರಾದ ಡಾ. ಉಮೇಶ ಮಯ್ಯ ಹಾಗೂ ಮಾಜಿ ಸೈನಿಕರು ಮತ್ತು ಕಾರ್ಪೋರೇಷನ್ ಬ್ಯಾಂಕ್ ಉದ್ಯೋಗಿಗಳಾದ ಚಂದ್ರಶೇಖರ ನಾವಡ ಬೈಂದೂರು, ಕ್ರೀಡಾ ಸಮಿತಿಯ ಸಂಚಾಲಕರು ಹಾಗೂ ಸಹಪ್ರಾಧ್ಯಾಪಕರಾದ ಶಿವಕುಮಾರ ಪಿ.ವಿ, ನಾಗರಾಜ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಸತೀಶ ಎಂ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕರಾದ ನವೀನ್ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕರಾದ ಲತಾ ಪೂಜಾರಿ ವರದಿ ವಾಚಿಸಿದರು. ಕ್ರೀಡಾ ಸಂಚಾಲಕರಾದ ಶಿವಕುಮಾರ ಪಿ.ವಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕುಂದಾಪುರ ಬಾರ್ ಅಸೋಸಿಯೇಶನ್ ರಿ. ಕುಂದಾಪುರ ಇದರ ವತಿಯಿಂದ ರಾಷ್ಟ್ರ ಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಪೂರ್ಣಚಂದ್ರ ಎಲ್ ಪುರಾಣಿಕರನ್ನು ಸನ್ಮಾನಿಸಲಾಯಿತು. ಸನ್ಮಾನವನ್ನು ನೆರವೇರಿಸಿದ ಉಡುಪಿ ಜಿಲ್ಲಾ ಪ್ರಧಾನ ಮತ್ತು ಸದ್ರ ನ್ಯಾಯಾದೀಶರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಮಾಡುವ ಸಾಧನೆಗಳು ಮುಂದೆ ನಮ್ಮನ್ನು ಉನ್ನತ ಹುದ್ದೆ ಮತ್ತು ಸ್ಥಾನ ಮಾನಗಳು ಲಭಿಸಲು ಸಾದ್ಯವಾಗುತ್ತೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಕುಂದಾಪುರ ಬಾರ್ ಅಸೋಸಿಯೇಶನ್ ಅಧ್ಯಕ್ಷರಾದ ಸಲ್ವಾಡಿ ನಿರಂಜನ್ ಹೆಗ್ಡೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹೆಚ್ಚುವರಿ ಜಿಲ್ಲಾ ಮತ್ತು ಸದ್ರ ನ್ಯಾಯಾದೀಶರಾದ ಪ್ರಕಾಶ ಖಂಡೇರಿ ಕುಂದಾಪುರದ ಹಿರಿಯ ಸಿವಿಲ್ ನ್ಯಾಯಾದೀಶರಾದ ಡಿಪಿ ಕುಮಾರ ಸ್ವಾಮಿ, 2ನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾದೀಶರಾದ ಚಂದ್ರಶೇಖರ್ ಬಣ್ಕರ್ ಉಪಸ್ಥಿತರಿದ್ದರು. ರವಿಕಿರಣ ಮುರ್ಡೇಶ್ವರ ಅಭಿನಂದನಾ ಭಾಷಣ ಮಾಡಿದರು, ಶ್ರೀಕಾಂತ್ ಆರ್ಡಿ ಅಭಿನಂದನಾ ಪತ್ರ ವಾಚಿಸಿದರು, ಶರತ್ ಶಟ್ಟಿ ಸ್ವಾಗತಿಸಿ, ರಮೇಶ್ ಹತ್ವಾಲ್ ಕಾರ್ಯಕ್ರಮ ನಿರೂಪಿಸಿದರು, ಸಂಸ್ಥೆಯ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಇಲ್ಲಿನ ಐತಿಹಾಸಿಕ ಮಹತೋಭಾರ ಶ್ರೀ ಸೇನೇಶ್ವರ ದೇವರ ವಾರ್ಷಿಕ ಜಾತ್ರಾ ಮಹೋತ್ಸವವು ಎ.15ರಿಂದ ಮೊದಲ್ಗೊಂಡು ಎ.23ರ ತನಕ ಜರುಗಲಿದ್ದು, ಆ ಪ್ರಯುಕ್ತ ದೇವಳದ ತಂತ್ರಿ ಕೃಷ್ಣ ಸೋಮಯಾಜಿ ಆಚಾರ್ಯತ್ವದಲ್ಲಿ ಧ್ವಜಾರೋಹಣ ನೆರವೇರಿತು. ಬೆಳಿಗ್ಗೆ ದೇವಳದಲ್ಲಿ ಕಲಶಪ್ರತಿಷ್ಠೆ, ಕಂಕಣ ಧಾರಣೆಯ ನಂತರ ರುಜ್ಜು ಬಂಧನ ಮುಂತಾದ ಧಾರ್ಮಿಕ ವಿಧಾನಗಳು ನಡೆಯಿತು. ಈ ಸಂದರ್ಭ ದೇವಳದ ಅಧ್ಯಕ್ಷ ಚೆನ್ನಕೇಶವ ಉಪಾಧ್ಯಾಯ, ಅರ್ಚಕ ವೃಂದ, ಸ್ಥಳೀಯ ಜನಪ್ರತಿನಿಧಿಗಳು, ದೇವಳದ ಸಿಬ್ಬಂದಿವರ್ಗ ಹಾಗೂ ಊರಿನ ಹತ್ತು ಸಮಸ್ತರು ಭಾಗವಹಿಸಿದ್ದರು. ಪ್ರತಿದಿನ ಅಪ್ಪಿಕಟ್ಟೆ, ಬಿಯಾರಕಟ್ಟೆ, ಜಟ್ಕನಕಟ್ಟೆ, ನಾಕಟ್ಟೆ, ಪಡುವರಿಕಟ್ಟೆ, ಬಂಕೇಶ್ವರಕಟ್ಟೆ ಉತ್ಸವಗಳು ಜರುಗಲಿದ್ದು, ಎ.21ರ ಶನಿವಾರ ಶ್ರೀ ಸೇನೇಶ್ವರ ದೇವರ ಶ್ರೀಮನ್ಮಹಾರಥೋತ್ಸವ ಹಾಗೂ ಎ.22ರಂದು ಅವಭೃತ ಸ್ನಾನ, ಓಕುಳಿ ಮತ್ತು ನಗರೋತ್ಸವ ನಡೆಯಲಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನದಲ್ಲಿ ದಲಿತರಿಗೆ ಮೀಸಲು, ದೌರ್ಜನ್ಯ ತಡೆ ಕಾಯ್ದೆಯ ವಿಶೇಷ ಸವಲತ್ತು ನೀಡಿದ ಪರಿಣಾಮ ಸಮಾಜದ ಮುಖ್ಯವಾಹಿನಿಗೆ ಬರುವಂತಾಗಿದೆ. ಕೆಲ ಜಾತಿವಾದಿ ಶಕ್ತಿಗಳು ಅದನ್ನು ಕಸಿದು ದಲಿತರ ನಿರ್ಮೂಲನೆಗೆ ಪಣ ತೊಟ್ಟಿವೆ ಎಂದು ದಸಂಸ ಜಿಲ್ಲಾ ಪ್ರಧಾನ ಸಂಘಟನಾ ಸಂಚಾಲಕ ಟಿ. ಮಂಜುನಾಥ ಗಿಳಿಯಾರು ಹೇಳಿದರು. ಬೈಂದೂರು ಶ್ರೀ ಶಾರದಾ ವೇದಿಕೆಯಲ್ಲಿ ಡಾ. ಅಂಬೇಡ್ಕರ್ ಅವರ 127 ನೇ ಜನ್ಮದಿನಾಚರಣೆ ಅಂಗವಾಗಿ ರಾಜ್ಯ ದಸಂಸ ಬೈಂದೂರು ತಾಲೂಕು ಶಾಖೆ ಇವರ ಸಹಕಾರದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಮಹಿಳಾ ಸಂಘ ಬೈಂದೂರು ಮತ್ತು ದಸಂಸ ಮಹಿಳಾ ಘಟಕದ ಜಂಟಿ ಆಶ್ರಯದಲ್ಲಿ ನಡೆದ ಅಂಬೇಡ್ಕರ್ ಜನ್ಮ ಜಯಂತಿ ಹಾಗೂ ಭೀಮ ಭಾರತ ಮಹಾ ರ‍್ಯಾಲಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಸಮಾಜದಲ್ಲಿ ಬಹುಸಂಖ್ಯೆಯಲ್ಲಿರುವ ದಲಿತರ ಕೈಗಿನ್ನು ರಾಜಕೀಯ ಅಧಿಕಾರದ ಚುಕ್ಕಾಣಿ ಸಿಕ್ಕಿಲ್ಲ. ಇದರಿಂದಾಗಿ ದಲಿತರ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದೆ ಎಂದ ಅವರು…
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಇಲ್ಲಿನ ಸೋಶಿಯಲ್ ಸ್ಪೋರ್ಟ್ಸ್ ಎಂಡ್ ಚಾರಿಟೇಬಲ್ ಅಸೋಸಿಯೇಶನ್ ವತಿಯಿಂದ ಕುಂದಾಪುರದ ಸಮಾಜಸೇವಕ ವಿ.ವಾಸುದೇವ ಹಂದೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗಂಗೊಳ್ಳಿ ಜಾಮೀಯಾ ಮೊಹಲ್ಲಾದ ವಂಟಿ ಕಂಪೌಂಡ್‌ನಲ್ಲಿ ಗುರುವಾರ ಜರಗಿದ ಸೋಶಿಯಲ್ ಸ್ಪೋರ್ಟ್ಸ್ ಎಂಡ್ ಚಾರಿಟೇಬಲ್ ಅಸೋಸಿಯೇಶನ್‌ನ 3ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗೋವಾದ ಮತ್ಸ್ಯೋದ್ಯಮಿ ಮೌಲಾನಾ ಇಬ್ರಾಹಿಂ ಸಾಹೇಬ್ ಅವರು ವಿ.ವಾಸುದೇವ ಹಂದೆ ಅವರನ್ನು ಸನ್ಮಾನಿಸಿ ಗೌರವಿಸಿದರು. ಕಿರಿಮಂಜೇಶ್ವರ ಪೇಶ್ ಇಮಾಮ್ ಜುಮ್ಮಾ ಮಸೀದಿಯ ಮೌಲಾನಾ ಜಮೀಕ್ ರಶದಿ, ನಾಗೂರು ಪೇಶ್ ಇಮಾಮ್ ಮೌಲಾನಾ ಮೀರಾ ಸಾಹೇಬ್ ನದ್ವಿ, ಗಂಗೊಳ್ಳಿ ಫಾತಿಮಾ ತುಜ್ ಜಹರಾ ಮದ್ರಸಾ ಮುಖ್ಯಸ್ಥ ಮೌಲಾನಾ ಮತಿನ್ ಸಿದ್ಧಿಕಿ, ಎಸ್‌ಡಿಪಿಐ ಗಂಗೊಳ್ಳಿ ಘಟಕದ ಅಧ್ಯಕ್ಷ ತಬ್ರೇಜ್ ಖಲೀಫೆ, ಅಬು ಮೊಹಮ್ಮದ್, ಖಾಜಿ ಅಶ್ರಫ್, ಗಂಗೊಳ್ಳಿ ಜಮಾತುಲ್ ಮುಸ್ಲಿಮಿನ್ ಕಾರ್ಯದರ್ಶಿ ಅಬ್ದುಲ್ ರಹೀಮ್, ಉಮ್ಮರ್ ಸಾಹೇಬ್ ಮತ್ತಿತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕೋಟ: ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನದಲ್ಲಿ ನಡೆಯಲಿರುವ ವಸಂತ ವೇದಿಕ ಶಿಬಿರಕ್ಕೆ ಚಾಲನೆ ನೀಡಲಾಯಿತು. ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆ ಸಂಯುಕ್ತ ಆಶ್ರಯದಲ್ಲಿ 20 ದಿನಗಳ ಕಾಲ ಈ ಶಿಬಿರ ನಡೆಯಲಿದೆ. ಆಡಳಿತ ಮಂಡಳಿ ಅಧ್ಯಕ್ಷ ಅನಂತಪದ್ಮನಾಭ ಅಡಿಗ ಕಾರ್ಯಕ್ರಮ ಉದ್ಘಾಟಿಸಿ, ಸುಮಾರು 20 ವರ್ಷದಿಂದ ಬೇಸಿಗೆ ರಜೆಯಲ್ಲಿ ವಿಪ್ರ ಬಾಂಧವರ ಮಕ್ಕಳಿಗಾಗಿ ಸಾಲಿಗ್ರಾಮದಲ್ಲಿ ಆಯೋಜಿಸುತ್ತಿರುವ ‘ವಸಂತ ವೇದ ಶಿಬಿರ’ ಪೂಜೆಯ ವಿಧಿ-ವಿಧಾನ, ವೈದಿಕ ಪದ್ಧತಿಯ ಆಚಾರ-ವಿಚಾರ ಮುಂತಾದ ಧಾರ್ಮಿಕ ಪ್ರಜ್ಞೆಯನ್ನು ಬೋಧಿಸುವಲ್ಲಿ ಯಶಸ್ವಿಯಾಗಿದೆ. ಈ ಬಾರಿ 20 ದಿನಗಳ ಕಾಲ ಸಂಪೂರ್ಣ ಉಚಿತವಾಗಿ ಶಿಬಿರ ನಡೆಯಲಿದೆ. ಗೋವಾ, ಮುಂಬೈ ಹಾಗೂ ಹೊರ ಜಿಲ್ಲೆಗಳ ಸಹಿತ 400 ವಿದ್ಯಾರ್ಥಿಗಳು ವಿದ್ಯಾರ್ಥಿಗಳಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದರು. ಆಡಳಿತ ಮಂಡಳಿ ಸದಸ್ಯ ಸದಾರಮ ಹೇರ್ಳೆ ಮಾತನಾಡಿ, ಮಕ್ಕಳಿಗೆ ಧಾರ್ಮಿಕತೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ಶಿಬಿರ ಸಹಾಯಕವಾಗಿದೆ. ವಿದ್ಯಾರ್ಥಿಗಳು ಶ್ರದ್ಧೆಯಿಂದ ಪಾಠ-ಪ್ರವಚನಗಳನ್ನು ತಿಳಿಯಬೇಕು ಎಂದರು. ಕೂಟ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕೋಟ: ಕಲ್ಮಾಡಿ ಯುವಕ ಮಂಡಲ ರಿ. ಇದರ ವಾರ್ಷಿಕೋತ್ಸವ ಸಮಾರಂಭ ಕೋಟತ್ತಟ್ಟು ಕಾರಂತ ಥೀಂ ಪಾರ್ಕ್ ಸಮೀಪ ಶ್ರೀಧರ ಗಾಣಿಗರ ಮನೆ ವಠಾರದಲ್ಲಿ ಜರಗಿತು. ಕಾರ್ಯಕ್ರಮವನ್ನು ಬೆಂಗಳೂರಿನ ಉದ್ಯಮಿ ಬೇಳೂರು ರಾಘವೇಂದ್ರ ಶೆಟ್ಟಿ ಉದ್ಘಾಟಿಸಿ ಮಾತನಾಡಿ ಒಗ್ಗಟ್ಟಿನ ಮೂಲಕ ಯುವ ಸಮುದಾಯ ಕಾರ್ಯಪ್ರವೃತ್ತಗಾಗುವುದನ್ನು ನಾವುಗಳು ಇತ್ತೀಚಿಗಿನ ದಿನಗಳಲ್ಲಿ ಕಾಣುತ್ತಿದ್ದೇವೆ ಅದು ಆಯಾ ಊರಿನ ಶ್ರೇಯಾಭಿವೃದ್ಧಿಗೆ ಪೂರಕವಾದ ಯುವಕ ಮಂಡಲಗಳನ್ನು ಸ್ಥಾಪಿಸಿಕೊಂಡು ಸಮಾಜಮುಖಿ ಚಿಂತನೆಗಳನ್ನಿರಿಸಿ ಕಾರ್ಯನಿರ್ವಹಿಸುತ್ತಿರುವುದು ಪ್ರಶಂಸನೀಯ. ಇಂಥಹ ಸಂಘಟನೆಗಳು ರಾಜಕೀಯ ರಹಿತವಾಗಿ ಚಟುವಟಿಕೆಯಲ್ಲಿದ್ದಾಗ ಬಹು ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತದೆ. ಸನ್ಮಾನಗಳು ಎತ್ತೇಚ್ಚವಾಗಿ ಹಲವು ಸಂಘಟನೆಗಳ ಮೂಲಕ ನಡೆಯುತ್ತದೆ.ಆದರೆ ಕಾರಂತರು ಹುಟ್ಟಿದ ಈ ನೆಲದಲ್ಲಿ ಸನ್ಮಾನಿಸುವ ವ್ಯಕ್ತಿಗಳು ಅದಕ್ಕೆ ಅರ್ಹರಾಗಿರುತ್ತಾರೆ ಎಂಬ ನಂಬಿಕೆ ನನ್ನದು ಅಂಥಹ ವ್ಯಕ್ತಿಯನ್ನು ನೀವು ಆರಿಸಿದ್ದೀರಿ. ಸುಕ್ರಿಬೋಮ್ಮೆಗೌಡ ಎನ್ನುವಂಥ ಮಹಿಳೆಗೆ ಗೌರವ ನೀಡುತ್ತಿರುವುದು ನಿಮ್ಮ ಸಂಘಟನೆಗೆ ಹಾಗೂ ಊರಿಗೆ ಗೌರವವನ್ನು ಇಮ್ಮಡಿಗೊಳಿಸಿದೆ ಎಂದು ಅಭಿಪ್ರಾಯಪಟ್ಟರು. ಪದ್ಮಶ್ರೀ ಪ್ರಶಸ್ತಿ ಪುರಸ್ಕ್ರತೆ ಸುಕ್ರಿ ಬೋಮ್ಮೆಗೌಡರಿಗೆ ಕಲ್ಮಾಡಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕೋಟ: ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದಲ್ಲಿ ಮೇ.2 ರಿಂದ 8 ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಪ್ರಯುಕ್ತ ಚಪ್ಪರ ಮುಹೂರ್ತ ಜರಗಿತು. ಈ ಪ್ರಯುಕ್ತ ವಿವಿಧ ದಾರ್ಮಿಕ ಕಾರ್ಯಕ್ರಮಗಳು ನಡೆಯಿತು. ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಆನಂತಪದ್ಮನಾಭ ಐತಾಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಪ್ರಯುಕ್ತ ನಡೆಯಲಿರುವ ಬ್ರಹ್ಮಕಲಶೋತ್ಸವ, ಧ್ವಜ ಪ್ರತಿಷ್ಠಾಪನೆ, ದುರ್ಗಾಪರಮೇಶ್ವರೀ ಬಿಂಬ ಪ್ರತಿಷ್ಠೆ, ಬ್ರಹ್ಮರಥೋತ್ಸವ ಕಾರ್ಯಕ್ರಮ ಸುಗಮವಾಗಿ ಸಾಗಲಿ ಎಂದು ಪುರೋಹಿತ ವೇ|ಮೂ| ಚಂದ್ರಶೇಖರ ಅಡಿಗ ಪ್ರಾರ್ಥನೆ ಸಲ್ಲಿಸಿದರು. ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆಯ ಕಾರ್ಯದರ್ಶಿ ರಾಮಕೃಷ್ಣ ಐತಾಳ, ಸಾಲಿಗ್ರಾಮ ಘಟಕದ ಅಧ್ಯಕ್ಷ ಕೆ.ತಾರನಾಥ ಹೊಳ್ಳ, ಚಂದ್ರಶೇಖರ್ ಉಪಾಧ್ಯ, ಚಂದ್ರಶೇಖರ ಹೊಳ್ಳ, ಸದಾರಮ ಹೇರ್ಳೆ, ಶಿವರಾಮ ಉಡುಪ ಮುಂತಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ : ಅಂತರ್ರಾಷ್ಟ್ರೀಯ ಜಾದೂಗಾರ ನಟ ಓಂಗಣೇಶ್ ಉಪ್ಪುಂದ ಇವರು ಬರೆದ 35 ಸಣ್ಣ ಸಣ್ಣ ಘಟನೆಯಾಧರಿತ ಜನಮನ ಕಥನಗಳ ಸಂಕಲನ ’ಗಿರಿಗಿಟ್ಲಿ ಹುಡುಗ’ ಕೃತಿಯನ್ನು ಪದ್ಮವಿಭೂಷಣ ಡಾ| ಡಿ ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು. ವಿಶ್ವ ಸಂಚಾರದ ಹಿನ್ನೆಲೆಯಿಂದ ಬರೆಯುತ್ತಿದ್ದ ಅಂಕಣ ಬರಹಗಳ ಸಂಕಲನ ಕೃತಿಯಿಂದ ತಮಗೆ ಇನ್ನಷ್ಟು ಶಾರದೆಯ ಅನುಗ್ರಹ ಹಾಗೂ ಮಂಜುನಾಥನ ಅನುಗ್ರಹ ಒದಗುವಂತಾಗಲಿ ಎಂದು ಅಭಿನಂದಿಸಿದ ಹೆಗ್ಗಡೆಯವರು ಶ್ರೀ ಮಂಜುನಾಥನ ಬೆಳ್ಳಿ ಪದಕವನ್ನು ಕೃತಿಕಾರ ಓಂಗಣೇಶರಿಗೆ ನೀಡಿ ಶುಭಹಾರೈಸಿದರು. ಓಂಗಣೇಶ್ ಅವರ ಪ್ರಪ್ರಥಮ ಕೃತಿ ಕೂಡಾ ಈ ಕ್ಷೇತ್ರದಲ್ಲೇ ಲೋಕಾರ್ಪಣೆ ಹೊಂದಿದ್ದು ಬಳಿಕ ದುಬೈ ಬಹರೈನ್ ಮಸ್ಕತ್‌ಗಳಲ್ಲಿ ಪುನಃ ಬಿಡುಗಡೆಯಾಗಿತ್ತು. ಇದೀಗ ಖ್ಯಾತ ಲೇಖಕಿ ವೈದೇಹಿಯವರ ಮುನ್ನುಡಿ ಹಾಗೂ ಸುಧಾಕರ ದರ್ಬೆಯವರ ಮುಖಪುಟ ಹೊಂದಿದ ಇದು ನನ್ನ 6 ನೇ ಕೃತಿಯಾಗಿದ್ದು ಇಲ್ಲಿಂದು ಬಿಡುಗಡೆ ಕಾಣುತ್ತಿರುವುದು ನನ್ನ ಯೋಗ ಎಂದು ಕೃತಿಕಾರ ತಮ್ಮ ಪುಸ್ತಕದ ಬಗ್ಗೆ ವಿವರಿಸಿದರು.…
