ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಗೌಡ ಸಾರಸ್ವತ ಬ್ರಾಹ್ಮಣ ಸಮಾಜದಲ್ಲಿ ಅನೇಕ ಮಂದಿ ಸಾಧಕರಿದ್ದು, ಬ್ಯಾಂಕಿಂಗ್, ಶೈಕ್ಷಣಿಕ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ನಮ್ಮ ಸಮಾಜದವರಿಗೆ ಉತ್ತಮ ಸ್ಥಾನಮಾನ ಗೌರವ ಇದೆ. ಈ ಗೌರವವನ್ನು ಕಾಪಾಡಿಕೊಂಡು ಹೋಗಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸಮಾಜಕ್ಕೆ ಮಾರ್ಗದರ್ಶನ ನೀಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆದ್ದರಿಂದ ಹಿರಿಯರನ್ನು ಗೌರವಿಸುವುದು, ಹಿರಿಯರ ಮಾರ್ಗದರ್ಶನದಂತೆ ನಡೆದುಕೊಳ್ಳಬೇಕು ಎಂದು ಕುಂದಪ್ರಭ ಪತ್ರಿಕೆಯ ಸಂಪಾದಕ ಯು.ಎಸ್.ಶೆಣೈ ಹೇಳಿದರು. ಅವರು ಗಂಗೊಳ್ಳಿಯ ವೇದಮೂರ್ತಿ ಕೃಷ್ಣಾನಂದ ವಿಶ್ವನಾಥ ಆಚಾರ್ಯ ಸ್ಮಾರಕ ದತ್ತಿನಿಧಿ ವತಿಯಿಂದ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜರಗಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ನಮ್ಮ ಹಿರಿಯರು ಆಚರಿಸಿಕೊಂಡು ಬಂದಿರುವ ಸಂಪ್ರದಾಯಗಳನ್ನು ಹಬ್ಬ ಹರಿದಿನಗಳನ್ನು ಆಚರಿಸಬೇಕು. ತಂದೆ, ತಾಯಿ ಗುರು ಹಿರಿಯರನ್ನು ಸದಾ ಸ್ಮರಿಸಿಕೊಳ್ಳುತ್ತಿರಬೇಕು. ದಿ.ಕೃಷ್ಣಾನಂದ ವಿಶ್ವನಾಥ ಆಚಾರ್ಯ ಅವರು ಸಮಾಜಕ್ಕೆ ಸಲ್ಲಿಸಿದ ಸೇವೆ ಅವಿಸ್ಮರಣೀಯವಾದುದು. ಅವರ ಮಾರ್ಗದರ್ಶನದಲ್ಲಿ ಸಮಾಜದಲ್ಲಿ ಅನೇಕ ಉತ್ತಮ ಕೆಲಸ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಾವುಂದ ಗ್ರಾಮದ ಕಂತಿಹೊಂಡ ಎಂಬಲ್ಲಿನ 10 ಎಕ್ರೆ ಪ್ರದೇಶದಲ್ಲಿ ಹೆದ್ದಾರಿ ವಿಸ್ತರಣೆ ಕಾಮಗಾರಿ ಗುತ್ತಿಗೆದಾರ ಸಂಸ್ಥೆ ಐಆರ್‌ಬಿ ಇನ್ಫ್ರಾಸ್ಟ್ರಕ್ಚರ್ ಡೆವಲಪರ‍್ಸ್ ಸ್ಥಾಪಿಸಿರುವ ಮಿಕ್ಸಿಂಗ್ ಪ್ಲಾಂಟ್‌ನಿಂದ ಪರಿಸರದ ನಿವಾಸಿಗಳಿಗೆ ಆಗುತ್ತಿರುವ ತೊಂದರೆಯ ವಿರುದ್ಧ ಪ್ರತಿಭಟನೆ ನಡೆಯಿತು. ಸಂಸ್ಥೆ ಈ ನಿವೇಶನದಲ್ಲಿ ಸಾಮಗ್ರಿ ದಾಸ್ತಾನು ಮಾಡಲಾಗುವುದೆಂದು ತಿಳಿಸಿ, ಆ ಉದ್ದೇಶಕ್ಕೆ ಗ್ರಾಮ ಪಂಚಾಯಿತಿಯ ಅನುಮತಿ ಪಡೆದಿತ್ತು. ಆದರೆ ಅಲ್ಲಿ ಬೃಹತ್ ಯಂತ್ರ್ರಗಳನ್ನು ಸ್ಥಾಪಿಸಿಕೊಂಡು ಜಲ್ಲಿ ಪುಡಿ ಮಾಡಲಾಗುತ್ತಿದೆ. ಜಲ್ಲಿ ಮತ್ತು ಟಾರು ಬೆರೆಸಲಾಗುತ್ತಿದೆ. ಜಲ್ಲಿಪುಡಿ ಮತ್ತು ಜಲ್ಲಿ ಬೆರೆಸಿ ವೆಟ್ ಮಿಕ್ಷ್ಚರ್ ತಯಾರಿಸಲಾಗುತ್ತಿದೆ. ಇಲ್ಲಿ ಸೃಷ್ಟಿಯಾಗುವ ಜಲ್ಲಿ, ಸಿಮೆಂಟಿನ ಧೂರು ಇಡೀ ಪರಿಸರವನ್ನು ವ್ಯಾಪಿಸಿ, ಮನೆಗಳಿಗೆ ಪ್ರವೇಶಿಸುತ್ತದೆ. ಉಸಿರಾಟದೊಂದಿಗೆ ಜನರ ದೇಹ ಪ್ರವೇಶಿಸುವ ಈ ಧೂಳಿನಿಂದ ಹಲವರಲ್ಲಿ ಕೆಮ್ಮು, ಉಬ್ಬಸ ಕಾಣಿಸಿಕೊಂಡಿದೆ. ಸಾಮಗ್ರಿಗಳ ಅವಿರತ ಸಾಗಾಟಕ್ಕಾಗಿ ಸಂಸ್ಥೆ ಬಳಸಿಕೊಳ್ಳುತ್ತಿರುವ ಅರೆಹೊಳೆ-ಉಳ್ಳೂರು ರಸ್ತೆ ಸಂಪೂರ್ಣ ಕೆಟ್ಟುಹೋಗಿದ್ದು, ಸಣ್ಣ ವಾಹನ, ಜನ ಸಂಚಾರ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಯಿತು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಂಗಳೂರು ಕೇಂದ್ರ ವಿಭಾಗ ಮಟ್ಟದ ಕನ್ಸಲ್ಟಿಂಗ ಸಿವಿಲ್ ಇಂಜಿನಿಯರ‍್ಸ್ ಇಂಡಿಯಾ ಸಂಸ್ಥೆ ಹಾಗೂ ಅಲ್ಟ್ರಾಟೆಕ್ ಸಿಮೆಂಟ್ ಪ್ರಾಯೋಜಕತ್ವದಲ್ಲಿ ನೀಡುವ ಅಲ್ಟ್ರಾಟೆಕ್ ಸಿಮೆಂಟ್ ಅವಾರ್ಡ ೨೦೧೬ನೇ ಉತ್ತಮ ಕಟ್ಟಡ ವಿನ್ಯಾಸಗಾರ ಪ್ರಶಸ್ತಿ ಇಕ್ಬಾಲ್ ಪಿ.ಎಂ ಅವರಿಗೆ ಲಭಿಸಿದೆ. ಗಂಗೊಳ್ಳಿ ಖೈರ ಮಂಝಿಲಗೆ ನೀಡಿದ ಅದ್ಬುತವಾದ ವಿನ್ಯಾಸಕ್ಕೆ ಈ ಪ್ರಶಸ್ತಿ ಲಭಿಸಿದೆ. ಇವರು ಕುಂದಾಪುರ ಗುತ್ತಿಗೆದಾರ ಪಿ.ಎಂ ಇಬ್ರಾಹಿಂ ಪುತ್ರ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪರಭಾಷಾ ಚಿತ್ರಗಳನ್ನು ರಿಮೇಕ್ ಮಾಡಲು ಅವಕಾಶ ನೀಡಿರುವುದರಿಂದ ಡಬ್ಬಿಂಗ್‌ನ ಅಗತ್ಯ ಇಲ್ಲ. ರಿಮೇಕ್ ಮಾಡುವುದರ ಮೂಲಕ ಆ ಚಿತ್ರಗಳಲ್ಲಿ ನಮ್ಮ ಸಂಸ್ಕೃತಿ, ಸಂಪ್ರ ದಾಯಗಳನ್ನು ಅಳವಡಿಕೊಳ್ಳಬಹುದು ಆದರೆ ಡಬ್ಬಿಂಗ್ ಮಾಡುವುದರಿಂದ ಕನ್ನಡದ ಪ್ರತಿಭೆಗಖಳಿಗೆ ಅವಕಾಶದಿಂದ ವಂಚಿತರಾಗುತ್ತಾರೆ, ತಂತ್ರಜ್ಞರಿಗೆ ಅನ್ಯಾಯವಾಗುತ್ತದೆ ಎಂದು ಮಾಜಿ ಶಾಸಕ , ಚಿತ್ರ ನಟ ಬಿ.ಸಿ. ಪಾಟೀಲ್ ಹೇಳಿದರು. ಅವರು ಕುಂದಾಪುರದ ವೈದ್ಯ ಡಾ| ಉಮೇಶ್ ಭಟ್ ಅವರ “ಕಲರ್ಸ್ ಆಫ್ ದಿ ರೈನ್’ ಕಾದಂಬರಿ ಬಿಡುಗಡೆಗೆ ಕುಂದಾಪುರಕ್ಕೆ ಬಂದಾಗ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಳೆದ ಎರಡು ವರ್ಷಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಯುವ ಕಲಾವಿದರು ಬರುತ್ತಿರುವುದು ತುಂಬಾ ಖುಷಿ ಕೊಟ್ಟಿದೆ. ಹೊಸ ಕಲಾವಿದರ ಆಗಮನದ ಬಳಿಕ ಚಿತ್ರರಂಗದಲ್ಲಿ ಮತ್ತೂಮ್ಮೆ ಹೊಸ ಅಲೆ ಎದ್ದಿದೆ. ಇತ್ತೀಚೆಗೆ ಬಿಡುಗಡೆಗೊಂಡ ಕಿರಿಕ್ ಪಾರ್ಟಿ ಇದಕ್ಕೆ ಒಂದು ಉದಾಹರಣೆೆ ಎಂದರು. ಪನ್ನಗ ನಾಗಭರಣ ನಿರ್ದೇಶನದಲ್ಲಿ “ಹ್ಯಾಪಿ ನ್ಯೂ ಇಯರ್’ ಚಿತ್ರ ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಗೊಳ್ಳಲಿದೆ. ಈ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನೃತ್ಯ ಸ್ಪರ್ಧೆಯು ಶಿಕ್ಷಣದ ಮುಖ್ಯ ಅಂಗವಾಗಿದ್ದು, ಅದು ಹಲವಾರು ಕೌಶಲಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಕೊಡುತ್ತದೆ ಎಂದು ಅದಾನಿ ಪವರ್ ಕಾರ್ಪೋರೇಶನ್‌ನ ನಿರ್ದೇಶಕರು ಹಾಗೂ ಜಂಟಿ ಅಧ್ಯಕ್ಷರಾದ ಶ್ರೀ ಕಿಶೋರ್ ಆಳ್ವ ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಜಂಟಿ ಆಶ್ರಯದಲ್ಲಿ ಅಂತರ್ ಕಾಲೇಜು ಮಟ್ಟದ ನೃತ್ಯ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷರಾದ ಬಿ.ಎಮ್. ಸುಕುಮಾರ್ ಶೆಟ್ಟಿ ಮಾತನಾಡಿ ವಿದ್ಯೆಯು ಸಮಾಜದಲ್ಲಿ ನಮ್ಮನ್ನು ಗುರುತಿಸುವಂತೆ ಮಾಡುತ್ತದೆ. ವಿದ್ಯಾವಂತರಾಗಿ ಜೊತೆಗೆ ಸಾಂಸ್ಕೃತಿಕವಾಗಿ ಬೆಳೆದು ಬಂದ ಕಲೆಗಳಲ್ಲಿ ತೊಡಗಿಸಿಕೊಳ್ಳಿ ಎಂದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ದೋಮ ಚಂದ್ರಶೇಖರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಣದ ಜೊತೆಗೆ ದೇಶದ ವಿವಿಧ ಸಂಸ್ಕೃತಿಯನ್ನು ಉಳಿಸುವುದು ಅಗತ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿಗಳಾದ ಸೀತರಾಮ ನಕ್ಕತ್ತಾಯ, ಆಡಳಿತ ಮಂಡಳಿಯ ಸದಸ್ಯರಾದ ಅನಿಲ್ ಛಾತ್ರ, ಹಾಗೂ ವಿದ್ಯಾಥಿ ಕ್ಷೇಮಪಾಲನಾಧಿಕಾರಿ ಮಹೇಶ್ ಬಾಬು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಆದಾಯಕ್ಕಿಂತ ಅಧಿಕ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಕೊಲ್ಲೂರು ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಶಿವರಾಮ ಆಚಾರ್ಯ ಅವರ ನಿವಾಸ, ಕಛೇರಿ ಹಾಗೂ ಅವರಿಗೆ ಸಂಬಂಧಿಸಿದ 5 ಕಡೆಯಲ್ಲಿ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಕೋಟ್ಯಾಂತರ ರೂ. ಮೌಲ್ಯದ ಚರ ಹಾಗೂ ಸ್ಥಿರಾಸ್ತಿಯನ್ನು ಪತ್ತೆ ಹಚ್ಚಿ ತನಿಕೆ ನಡೆಸುತ್ತಿದ್ದಾರೆ. ಎಸಿಬಿ ಎಸ್‌ಪಿ ಚೆನ್ನಬಸವಣ್ಣ ಎಸ್. ಎಲ್ ನೇತೃತ್ವದಲ್ಲಿ ಎಕಕಾಲದಲ್ಲಿ ಎಸಿಬಿ ಅಧಿಕಾರಿಗಳು ಕೊಲ್ಲೂರು ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಶಿವರಾಮ ಆಚಾರ್ಯನ ಕೊಲ್ಲೂರಿನಲ್ಲಿರುವ ಕಚೇರಿ ಹಾಗೂ ವಸತಿಗೃಹ, ಕಂಬದಕೋಣೆಯಲ್ಲಿರುವ ಬಂಗ್ಲೆ, ಆಜ್ರಿಯ ಹುಟ್ಟಿದ ಮನೆ, ಕಿರಿಮಂಜೇಶ್ವರದ ಪತ್ನಿ ಮನೆ ದಾಳಿ ನಡೆಸಿ 10ಲಕ್ಷ 8 ಸಾವಿರ ಮೌಲ್ಯದ ಚಿನ್ನಾಭರಣ, 8ಲಕ್ಷ 63 ಸಾವಿರ ರೂ. ನಗದು, ಒಂದು ಮಾರುತಿ ಸ್ವಿಪ್ಟ್ ಕಾರು, ಒಂದು ಮಾರುತಿ 800 ಕಾರು, ಕಂಬದಕೋಣೆಯಲ್ಲಿ ಸುಮಾರು 70ಲಕ್ಷ ರೂ, ಮೌಲ್ಯದ ಬಂಗ್ಲೆ, ನಾಗೂರಿನಲ್ಲಿ 10ಸೆಂಟ್ಸ್ ನಿವೇಶನ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತುಳುನಾಡಿನ ವೀರಪುರುಷರೆನಿಸಿಕೊಂಡಿರುವ ಶ್ರೀ ಕೋಟಿ ಚೆನ್ನಯ್ಯರ ಕೊನೆಯ ಗರಡಿ ಬೈಂದೂರು ನಾಕಟ್ಟೆಯಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವುದು ಸಂತಸದ ವಿಷಯವಾಗಿದ್ದು, ಗರಡಿಯ ಜೀಣೋದ್ಧಾರ ಕಾರ್ಯ ನಿರ್ವಿಘ್ನವಾಗಿ ನಡೆದು, ಕೋಟಿ ಚೆನ್ನಯ್ಯರ ಕೃಪೆ ಭಕ್ತವರ್ಗಕ್ಕೆ ದೊರೆಯುವಂತಾಗಲಿ. ಗರಡಿ ನಿರ್ಮಾಣಕ್ಕೆ ಅಗತ್ಯವಾದ ನೆರವು ನೀಡಲು ಸಿದ್ಧನಿರುವುದಾಗಿ ಬೈಂದೂರು ಕ್ಷೇತ್ರದ ಶಾಸಕರಾದ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಬೈಂದೂರು ನಾಕಟ್ಟೆಯ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿ ಇದರ ನವೀಕೃತ ಗರ್ಭಗುಡಿಗೆ ಶಿಲನ್ಯಾಸ ವಿಧಿ ಪೂರೈಸಿ ಬಳಿಕ ನಡೆದ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದರು. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ, ವೇ.ಮೂ ಕೇಂಜ ಶ್ರೀಧರ ತಂತ್ರಿ ಧಾರ್ಮಿಕ ಉಪನ್ಯಾಸ ನೀಡಿ ಜಗತ್ತಿನಲ್ಲಿ ೮೪ಲಕ್ಷ ಜೀವರಾಶಿಗಳಿದ್ದು ಅವನ್ನು ಸಸ್ಯ, ಪ್ರಾಣಿ, ಮನುಷ್ಯರೆಂದು ವಿಂಗಡನೆ ಮಾಡಲಾಗಿದೆ. ಈ ಮೂರು ವಿಭಾಗದ ಜೀವರಾಶಿಯಲ್ಲಿಯೂ ದೇವರ ಅಂಶ ಇದೆ ಎಂದು ಹಿಂದೂ ಧರ್ಮ ಪ್ರತಿಪಾದನೆ ಮಾಡುತ್ತದೆ. ಎಲ್ಲಾ ಜೀವರಾಶಿಗಳಿಗಿಂತ ಮಾನವ ಜನ್ಮ ದೊಡ್ಡದು ಎನ್ನಲಾಗುತ್ತದೆ. ಜೀವನದಲ್ಲಿ ಮಾಡುವ ಸಂಪಾದನೆಯನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕುಂದಾಪುರದ ದಿ ಕನ್ಸರ್° ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಯ ಆಶ್ರಯದಲ್ಲಿ ಉಡುಪಿ ಜಿಲ್ಲೆಯಲ್ಲಿ ಮಹಿಳೆಯರ ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆಗೆ ಮಾದರಿ ಯೋಜನೆಯನ್ನು ತರಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್ ಹೇಳಿದರು. ಅವರು ಮಹಿಳಾ ದಿನಾಚರಣೆಯ ಅಂಗವಾಗಿ ಕೊರ್ಗಿ ಗ್ರಾ.ಪಂ. ಮತ್ತು ಸಿಡಬ್ಲಿಸಿ ಸಹಯೋಗದಲ್ಲಿ ಹೆಸ್ಕೂತ್ತೂರು ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಮಕ್ಕಳ ಹಾಗೂ ಮಹಿಳೆಯರ ಹಕ್ಕು ಮತ್ತು ರಕ್ಷಣೆ ಕುರಿತ ಸಂವಾದದಲ್ಲಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಅಪಾಯಕಾರಿ ಕಲ್ಲುಕೋರೆ ಹೊಂಡಗಳು, ಅಕ್ರಮ ಮದ್ಯ ಮಾರಾಟದಿಂದ ಉಂಟಾಗುವ ಸಮಸ್ಯೆಗಳು, ಬಾಲಕಾರ್ಮಿಕರು ಮೊದಲಾದ ವಿಷಯಗಳ ಕುರಿತು ಸಂವಾದ ನಡೆಸಿದರು. ದುಡಿಯುವ ಮಕ್ಕಳ ವಿರುದ್ಧ ನಡೆಯುವ ದಾಳಿ ಮತ್ತು ರಕ್ಷಣೆಯ ಕಾರ್ಯಕ್ರಮದಿಂದ ಅತ್ಯಂತ ಹಿಂಸೆ ಅನುಭವಿಸಿದ ಮಕ್ಕಳ ಪ್ರತಿನಿಧಿಗಳು ಅವರ ಅನುಭವವನ್ನು ಹಂಚಿಕೊಂಡರು, ಆಲೂರು ಗ್ರಾ.ಪಂ.ನ ಮಕ್ಕಳ ಸಂಘದ ಪ್ರತಿನಿಧಿಗಳಾದ ಪವನ್, ಧನುಶ್,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಮೀನುಗಾರಿಕೆಗೆ ಸಹಕಾರ ನೀಡುವ ನಿಟ್ಟಿನಲ್ಲಿ ಬಂದರುಗಳ ಅಭಿವೃದ್ಧಿಗೆ ಸರಕಾರ ವಿಶೇಷ ಒತ್ತು ನೀಡಲಿದೆ. ಆ ನಿಟ್ಟಿನಲ್ಲಿ ಕರಾವಳಿಯ ಬಂದರುಗಳ ಸ್ಥಿತಿ-ಗತಿಯ ಕುರಿತು ಅವಲೋಕನ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಮತ್ತು ಬಂದರು, ಒಳನಾಡು ಸಚಿವ ಡಾ| ಎಚ್.ಸಿ. ಮಹದೇವಪ್ಪ ತಿಳಿಸಿದರು. ಅವರು ಮಂಗಳವಾರ ಬಂದರುಗಳ ವೀಕ್ಷಣೆಯ ಸಲುವಾಗಿ ಹಂಗಾರಕಟ್ಟೆ ಮೀನುಗಾರಿಕೆ ಜೆಟ್ಟಿಗೆ ಆಗಮಿಸಿದ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದರು. ಬಂದರುಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸುವುದು ಹಾಗೂ ಜೆಟ್ಟಿ ವಿಸ್ತರಣೆ ಮುಂತಾದ ಪ್ರಮುಖ ಕಾಮಗಾರಿಗಳಿಗೆ ಒತ್ತು ನೀಡಲಿದ್ದು, ಹಂಗಾರಕಟ್ಟೆಯಲ್ಲಿ ತಡೆಗೋಡೆ ನಿರ್ಮಾಣ ಪ್ರಮುಖ ಬೇಡಿಕೆಯಾಗಿದೆ. ಈ ಕುರಿತು ಅಧಿಕಾರಿಗಳ ಜತೆ ಚರ್ಚೆ ನಡೆಸಿ ತಡೆಗೋಡೆ ನಿರ್ಮಾಣಕ್ಕೆ ಸರ್ವೇ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಆದಷ್ಟು ಶೀಘ್ರ ಕಾಮಗಾರಿ ಆರಂಭಿಸಲು ಸೂಚನೆ ನೀಡಲಾಗಿದೆ ಮತ್ತು ಇಲ್ಲಿಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ನೀಡಲಾಗುವುದು ಎಂದರು. ಈ ಸಂದರ್ಭ ಕೋಡಿಬೆಂಗ್ರೆಯ ಮೀನುಗಾರಿಕೆ ಜೆಟ್ಟಿ ವಿಸ್ತರಣೆ ಹಾಗೂ ಅಭಿವೃದ್ಧಿಯ ಕುರಿತು ಕ್ರಮ…
