ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಮನುಷ್ಯ ಜೀವನದಲ್ಲಿ ದೇವರನ್ನು ನಿರಂತರ ಸ್ಮರಿಸಿ ಆರಾಧಿಸಿ ಪೂಜಿಸುವುದರಿಂದ ಜೀವನವು ಅಭಿವೃದ್ಧಿಗೊಂಡು ಸಾಕ್ಷಾತ್ಕಾರವಾಗುತ್ತದೆ. ದೇವಾಲಯಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು ದೇವಾಲಯಗಳ ಮೂಲಕ ಮನುಷ್ಯ ಜನ್ಮ ಪಾವನವಾಗುತ್ತದೆ. ನಮ್ಮ ಜೀವನದ ನಿಯಮವನ್ನು ಉಲ್ಲಂಘಿಸಿದರೆ ಯಾವುದೇ ಪುಣ್ಯ ಪ್ರಾಪ್ತಿಯಾಗುವುದಿಲ್ಲ ಹಾಗೂ ಜೀವನದಲ್ಲಿ ಆನಂದವೂ ದೊರೆಯುವುದಿಲ್ಲ. ಇದನ್ನು ಅರಿತು ಜೀವನ ನಡೆಸಿದರೆ ಮತ್ತು ಭಕ್ತಿಭಾವದಿಂದ ದೇವರನ್ನು ಗುರುಗಳನ್ನು ನಿತ್ಯನಿರಂತವಾಗಿ ಸ್ಮರಿಸಿಕೊಂಡರೆ ನಮ್ಮ ಜೀವನದ ಎಲ್ಲಾ ಸಂಕಷ್ಟಗಳು ದೂರವಾಗಿ ಆನಂದಮಯ ಜೀವನ ಪ್ರಾಪ್ತಿಯಾಗುತ್ತದೆ ಎಂದು ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ಹೇಳಿದರು. ಅವರು ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಚಿತ್ತೈಸಿ ಆಶೀರ್ವಚನ ನೀಡಿ ಮಾತನಾಡಿದರು. ಐದು ನದಿಗಳ ಸಂಗಮ ತಾಣವಾಗಿರುವ ಗಂಗೊಳ್ಳಿಯ ಪುಣ್ಯಕ್ಷೇತ್ರದಲ್ಲಿರುವ ಸುಮಾರು ೩೫೦ ವರ್ಷ ಇತಿಹಾಸವಿರುವ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನವು ಶ್ರೀ ಮಠದ ಶಾಖಾ ಮಠವಾಗಿದ್ದು ಪಂಚಪರ್ವಾದಿ ಉತ್ಸವಗಳು ಅತಿ ವಿಜೃಂಭಣೆಯಿಂದ ಗುರುಗಳ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಜೆ.ಸಿ.ಐ ಶಿರೂರು ಇದರ ವತಿಯಿಂದ ಹತ್ತು ದಿನಗಳ ಕಾಲ ಪತಂಜಲಿ ಯೋಗಪೀಠ ಹರಿದ್ವಾರ, ಪತಂಜಲಿ ಯೋಗ ಸಮಿತಿ ಭಾರತ್ ಸ್ವಾಭಿಮಾನ ನ್ಯೂಸ್ ಉಡುಪಿ ಜಿಲ್ಲೆ ಇದರ ಸಹಭಾಗಿತ್ವದಲ್ಲಿ ಸ್ವಾಮಿ ರಾಮ್‌ದೇವ್ ಜಿ ಇವರಿಂದ ಶಿಕ್ಷಣ ಪಡೆದ ಶಿಕ್ಷಕರಿಂದ ಆರೋಗ್ಯ ಭಾಗ್ಯ ಯೋಗ ಶಿಬಿರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅರಮನೆಹಕ್ಲುವಿನ ಸಭಾಭವನದಲ್ಲಿ ಉದ್ಘಾಟನೆಗೊಂಡಿತು. ಉದ್ಯಮಿ ಪಾಲಾಕ್ಷ ಮೇಸ್ತ ಶಿಬಿರವನ್ನು ಉದ್ಘಾಟಿಸಿದರು.ಈ ಸಂಧರ್ಭದಲ್ಲಿ ಮಾತನಾಡಿದ ಅವರು ಆಧುನಿಕತೆಯ ಒತ್ತಡದ ಬದುಕಿನಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ರೀತಿಯ ಸವಾಲು. ಯೋಗ, ದ್ಯಾನ, ಪ್ರಾಣಾಯಾಮಗಳಿಂದ ಆರೋಗ್ಯಕರ ಜೀವನ ನಡೆಸಲು ಸಾಧ್ಯ ಎಂದರು.ಶಿರೂರು ಜೆ.ಸಿ.ಐ ಅಧ್ಯಕ್ಷ ಅರುಣ ಕುಮಾರ್ ಶಿರೂರು ಅಧ್ಯಕ್ಷತೆ ವಹಿಸಿದ್ದರು.ಈ ಸಂಧರ್ಭದಲ್ಲಿ ಪತಂಜಲಿ ಯೋಗ ಸಮಿತಿಯ ಶಿಕ್ಷಕ ಶ್ರೀನಿವಾಸ ಶ್ಯಾನುಭಾಗ್,ಜೆ.ಸಿ.ಐ ಸ್ಥಾಪಕಾಧ್ಯಕ್ಷ ಮೋಹನ್ ರೇವಣಕರ್, ಜೇಸಿರೇಟ್ ರೂಪಾ ರೇವಣಕರ್ ಉಪಸ್ಥಿತರಿದ್ದರು. ಮಂಜುನಾಥ ನಾಯ್ಕ ಸ್ವಾಗತಿಸಿದರು.ಕಾರ್ಯದರ್ಶಿ ಪಾಂಡುರಂಗ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಸಿದ್ದಾಪುರ: ಗುಡಿಯೊಳಗಿನ ದೇವರಲ್ಲಿನ ನಂಬಿಕೆಯಂತೆ ದೇಹದ ಆತ್ಮದೊಳಗಿನ ನಂಬಿಕೆಯು ಪವಿತ್ರವಾದದ್ದು. ಧಾರ್ಮಿಕ ಆಚರಣೆಗಳಲ್ಲಿ ಪರಿಶುದ್ಧತೆ ಆವಶ್ಯ. ಮಕ್ಕಳಿಗೆ ಶಿಕ್ಷಣದ ಆವಶ್ಯಕತೆಯಂತೆ ಧಾರ್ಮಿಕತೆಯ ಅರಿವು ಮೂಡಿಸುವ ಕಾರ್ಯವಾಗಬೇಕು ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಅವರು ಹೇಳಿದರು. ಅವರು ಕೊಂಜಾಡಿ ಶ್ರೀ ದುರ್ಗಾಪರಮೇಶ್ವರೀ ದೇಗುಲದ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಪ್ರವಚನ ನೀಡಿ ಮಾತನಾಡಿದರು. ಹಿಂದೂ ಧರ್ಮ ಶ್ರೇಷ್ಠವಾದದ್ದು. ಮಕ್ಕಳಲ್ಲಿ ಧಾರ್ಮಿಕತೆಯ ವಾಸ್ತವದ ವಿಚಾರಗಳ ಅರಿವಿನ ಕೊರತೆಯಿಂದ, ಧರ್ಮಕ್ಕೆ ಹಿನ್ನಡೆಯಾಗುತ್ತಿದೆ. ಹಿಂದೆ ವೃದ್ಧಾಶ್ರಮಗಳಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಜನತೆಯಲ್ಲಿ ಸಂಸ್ಕಾರ ಹಾಗೂ ಜೀವನ ಮೌಲ್ಯಗಳ ಕೊರತೆಯಿಂದಾಗಿ ಹಿರಿಯರ ಬಗ್ಗೆ ಗೌರವವಿಲ್ಲದೆ. ಇದರ ಪರಿಣಾಮ ಹಿರಿಯರನ್ನು ವೃದ್ಧಾಶಮಕ್ಕೆ ಸೇರಿಸುತ್ತಿರುವುದು ವಿಷಾದನೀಯ. ದೇವಸ್ಥಾನಗಳು ಕೇವಲ ಪೂಜೆ ಹಾಗೂ ಧಾರ್ಮಿಕ ಆಚರಣೆಗಳಿಗೆ ಸಿಮೀತವಾಗದೆ, ಸಾಮಾಜಿಕ ಕ್ಷೇತ್ರಗಳ ಅಭಿವೃದ್ಧಿಯ ಚಟುವಟಿಕೆಗಳೊಂದಿಗೆ ಸಮಾಜದ ಕುಂದು ಕೊರತೆಗಳಿಗೆ ಸ್ವಂದಿಸುವ ಕೇಂದ್ರಗಳಾಗಬೇಕು ಎಂದು ಹೇಳಿದರು. ಕೊಂಜಾಡಿ ಶ್ರೀ ದುರ್ಗಾಪರಮೇಶ್ವರೀ ದೇಗುಲದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬ್ಯೆಂದೂರು: ಉಡುಪಿ ಜಿ.ಪಂ, ಕೃಷಿ ಇಲಾಖೆ ಕುಂದಾಪುರ, ಕೆ.ಆರ್.ಐ.ಡಿ.ಎಲ್ ಉಡುಪಿ ಇದರ ಸಂಯುಕ್ತ ಆಶ್ರಯದಲ್ಲಿ ಬ್ಯೆಂದೂರಿನಲ್ಲಿ ನಿರ್ಮಾಣವಾದ ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡವನ್ನು ಬ್ಯೆಂದೂರು ಶಾಸಕ ಕೆ. ಗೋಪಾಲ ಪೂಜಾರಿ ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಅವರು ಸರಕಾರ ರೈತರ ಅಭಿವೃದ್ದಿಗಾಗಿ ಹಲವಾರು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ.ಬಡ್ಡಿಮನ್ನಾ ಪ್ರಸ್ತಾವನೆ ಬಗ್ಗೆ ಸರಕಾರದ ಚಿಂತನೆಯಿದೆ.ಬರಗಾಲ ಪೀಡಿತ ಪ್ರದೇಶಗಳಿಗೆ ವಿಶೇಷ ಪ್ಯಾಕೇಜ್ ಕಲ್ಪಿಸಲಾಗಿದೆ.ರೈತ ಸಂಪರ್ಕ ಕೇಂದ್ರದ ಮೂಲಕ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ರೈತರಿಗೆ ತಲುಪುವ ಕೆಲಸವಾಗಬೇಕು ಎಂದರು.ಕುಂದಾಪುರ ತಾ.ಪಂ ಅಧ್ಯಕ್ಷೆ ಜಯಶ್ರೀ ಮೊಗವೀರ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಹಸ್ತಾಂತರಿಸಲಾಯಿತು. ಈ ಸಂಧರ್ಭದಲ್ಲಿ ಜಿ.ಪಂ ಸದಸ್ಯರಾದ ಶಂಕರ ಪೂಜಾರಿ, ಸುರೇಶ್ ಬಟ್ವಾಡಿ, ಗೌರಿ ದೇವಾಡಿಗ, ಕೆ.ಡಿ.ಪಿ ಸದಸ್ಯ ಎಸ್.ರಾಜು ಪೂಜಾರಿ, ತಾ.ಪಂ ಉಪಾಧ್ಯಕ್ಷ ಪ್ರವೀಣ ಕುಮಾರ್ ಕಡ್ಕೆ, ತಾಲೂಕು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ, ತಾ.ಪಂ ಸದಸ್ಯ ಪುಷ್ಪರಾಜ್ ಶೆಟ್ಟಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ ಕೋಟ: ಸಾಸ್ತಾನ ಟೋಲ್ ಕೇಂದ್ರದಲ್ಲಿ ಸ್ಥಳೀಯರಿಗೆ ಶುಲ್ಕ ವಿನಾಯಿತಿ ಮುಂದುವರಿಸುವಂತೆ ಕೋರಿ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯ ಸದಸ್ಯರು ಫೆ.25ರಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಈ ಸಂದರ್ಭ ಹೆದ್ದಾರಿ ಸಮಸ್ಯೆಗಳ ಕುರಿತು ಸಮಾಲೋಚನೆ ನಡೆಸಲಾಯಿತು ಹಾಗೂ ಅವೈಜ್ಞಾನಿಕ, ಅಪೂರ್ಣ ಕಾಮಗಾರಿ ಬಗ್ಗೆ ಜಿಲ್ಲಾಧಿಧಿಕಾರಿಗಳಿಗೆ ವಿವರಣೆ ನೀಡಲಾಯಿತು. ಸ್ಥಳೀಯರಿಗೆ ಟೋಲ್ ವಿನಾಯಿತಿ ನೀಡದಿದ್ದಲ್ಲಿ ಹೋರಾಟ ಮುಂದುವರಿಸುವುದಾಗಿ ತಿಳಿಸಲಾಯಿತು ಹಾಗೂ ಜಿಲ್ಲೆಯ ಮರಳು ಸಮಸ್ಯೆಗೆ ಪರಿಹಾರ ಒದಗಿಸುವಂತೆ ಕೋರಲಾಯಿತು.ಟೋಲ್ ಸಮಸ್ಯೆಯ ಕುರಿತು ತನ್ನ ವ್ಯಾಪ್ತಿಗೆ ಬರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನು ಜಿಲ್ಲಾಧಿಕಾರಿಗಳು ಈ ಸಂದರ್ಭ ನೀಡಿದರು. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಹೆದ್ದಾರಿ ಜಾಗೃತಿ ಸಮಿತಿಯ ಪ್ರತಾಪ್ ಶೆಟ್ಟಿ ಸಾಸ್ತಾನ, ಜಿಲ್ಲಾ ಲಾರಿ ಮಾಲಿಕರ ಸಂಘದ ಅಧ್ಯಕ್ಷ ರಾಜೇಶ ಕಾವೇರಿ ಹಾಗೂ ಹೆದ್ದಾರಿ ಜಾಗೃತ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಬಿಲ್ಲವ ಅಸೋಸಿಯೇಶನ್ ಬೆಂಗಳೂರು ಇದರ ಬನ್ನೇರುಘಟ್ಟ ರಸ್ತೆಯಲ್ಲಿರುವ ಬಿಲ್ಲವ ಭವನದಲ್ಲಿ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಮಹಿಳಾ ದಿನಾಚರಣೆಯನ್ನು ಬೆಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ಜಿ. ಪದ್ಮಾವತಿ ಉದ್ಘಾಟಿಸಿದರು. ಈ ಸಂದರ್ಭ ಅವರು ಮಾತನಾಡಿ, ಮಹಿಳೆಯರ ಸಶಕ್ತೀಕರಣವನ್ನು ಮುಂದುವರಿಸಿಕೊಂಡು ಹೋಗಬೇಕಾದ ಅಗತ್ಯವನ್ನು ತಿಳಿಸಿದರು. ಮಹಿಳೆಯರ ಶಕ್ತಿ ಅವರಿಗೆ ಅಧಿಕಾರ ಕೊಟ್ಟಾಗಲೇ ತಿಳಿಯುವುದು. ಮಹಿಳೆ ಯರು ಸಹನಾಶೀಲರು, ಬದ್ಧತೆ ಇರುವ ಶ್ರಮಜೀವಿಗಳು ಎಂದರು. ಬಿಲ್ಲವ ಅಸೋಸಿಯೇಶನ್‌ನ ಅಧ್ಯಕ್ಷ ಎಂ. ವೇದಕುಮಾರ್ ಅವರು ಸ್ವಾಗತಿಸಿ ಮಾತನಾಡಿ, ಬಿಲ್ಲವ ಮಹಿಳಾ ಘಟಕದೊಂದಿಗೆ ಬಿಲ್ಲವ ಅಸೋಸಿಯೇಶನ್‌ನ ಕಾರ್ಯ ಚಟುವಟಿಕೆ ಬಗ್ಗೆ ತಿಳಿಸಿದರು.ಬನ್ನೇರುಘಟ್ಟ ರಸ್ತೆಯಲ್ಲಿರುವ ಜೆ.ಡಿ. ಮರ ಜಂಕ್ಷನ್‌ಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನಿಡುವಂತೆ ಮಾಡಿದ ಮನವಿಗೆ ಮಹಾ ಪೌರರು ಪೂರಕವಾಗಿ ಸ್ಪಂದಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸತೀಶ್ ರೆಡ್ಡಿ ಅವರು ಬಿಲ್ಲವ ಮಹಿಳೆಯರು ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿ ಸಾಮಾ ಜಿಕ ಜವಾಬ್ದಾರಿ ನಿಭಾಯಿಸುತ್ತಿರುವು ದನ್ನು ಶ್ಲಾಘಿಸಿದರು. ಅರೆಕೆರೆ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕುಂದಾಪುರ ತಾಲೂಕು ಪ್ರಗತಿ ಪರಿಶೀಲನ ಸಭೆ ಕುಂದಾಪುರ ತಾ.ಪಂ. ಸಭಾಂಗಣದಲ್ಲಿ ಶಾಸಕ ಕೆ. ಗೋಪಾಲ ಪೂಜಾರಿ ಅವರ ನೇತೃತ್ವದಲ್ಲಿ ಜರಗಿತು. ಕೆಎಸ್ಸಾರ್‌ಟಿಸಿ ಇನ್ನಷ್ಟು ಹೆಚ್ಚುವರಿ ಮಾರ್ಗದಲ್ಲಿ ಬಸ್ಸು ಸಂಚಾರ ಹಾಗೂ ಸಮಯ ಬದಲಾವಣೆಗೆ, ಹೆಚ್ಚು ಗ್ರಾಮಲೆಕ್ಕಿಗರ ನಿಯೋಜನೆಗೆ, ತೆರಿಗೆ ಪರಿಷ್ಕರಣೆ ಕುರಿತು ಮಾಹಿತಿ ನೀಡುವ ಕುರಿತು, ಆರೋಗ್ಯ ಕೇಂದ್ರಗಳ ಸಮಸ್ಯೆಗಳ ಕುರಿತು, ಬೈಂದೂರು ನೂತನ ಕೆಎಸ್ಸಾಆರ್‌ಟಿಸಿ ಬಸ್ಸು ನಿಲ್ದಾಣ ಹಾಗೂ ಡಿಪೋ ನಿರ್ಮಾಣ ಹಾಗೂ ಮರವಂತೆಯ ಕಡಲ್ಕೊರೆತದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಬೈಂದೂರಿನ ಕೆರ್ಗಾಲ್‌ನಲ್ಲಿ ಸರಕಾರಿ ಬಸ್ಸುಗಳನ್ನು ನಿಲುಗಡೆಗೊಳಿಸಲಾಗುತ್ತಿಲ್ಲ ಎಂದು ಜಿ.ಪಂ. ಸದಸ್ಯೆ ಗೌರಿ ದೇವಾಡಿಗ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಆದರೆ ಕುಂದಾಪುರ ಡಿಪೋ ಮೆನೇಜರ್ ಪ್ರಕಾರ ಬೆಳಗ್ಗೆ 4ರಿಂದ 5 ಬಸ್ಸುಗಳು ಕೆರ್ಗಾಲಿನಲ್ಲಿ ನಿಲುಗಡೆಗೊಳಿಸುತ್ತಾರೆ. ಇಲ್ಲಿ ನಿಲುಗಡೆಗೊಳಿಸದೇ ಇದ್ದಲ್ಲಿ ಪತ್ರಿಕಾ ಹೇಳಿಕೆ ನೀಡುವುದರ ಮೂಲಕ ಬಸ್ಸು ನಿಲುಗಡೆಗೆ ವ್ಯವಸ್ಥೆ ಮಾಡಲಾಗುವುದು ಎಂದರು. ಪ್ರಸ್ತುತ ನಾಡದಲ್ಲಿ ಸಂಚರಿಸುತ್ತಿರುವ ಕೆಎಸ್ಸಾರ್‌ಟಿಸಿ ಬಸ್ಸು ಯಾವುದೇ ಉಪಯೋಗಕ್ಕೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕನ್ನಡದಲ್ಲಿ ಸಿನೆಮಾ ಮಾಡುವುದು ಸವಾಲಿನ ಕೆಲಸವಾಗಿದೆ. ಸಿನೆಮಾ ತಯಾರಕರು ಹಾಗೂ ವೀಕ್ಷಕರ ನಡುವಿನ ಕೊಂಡಿ ತಪ್ಪಿದೆ. ಜನರಿಗೆ ಸಿನೆಮಾ ಮಾಡುವವರು ಇದ್ದಾರೆಂದೂ, ಸಿನೆಮಾ ಮಾಡುವವರಿಗೆ ನೋಡುವ ಜನರಿದ್ದಾರೆಂದೂ ತಿಳಿದಿದೆ ಆದರೆ ಪ್ರದರ್ಶನ ಹಾಗೂ ವಿತರಣಾ ವ್ಯವಸ್ಥೆ ವೈಫಲ್ಯದಿಂದಾಗಿ ಇವರಿಬ್ಬರ ನಡುವಿನ ಕಂದಕ ನಿರ್ಮಾಣವಾಗಿದೆ. ಇದರ ನಡುವೆಯೂ ಕೆಲವರು ಛಲದಿಂದ ಕಲಾತ್ಮಕ ಚಿತ್ರಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಕರ್ನಾಟಕ ಸರಕಾರದ ಕೊಡುಗೆ ದೊಡ್ಡದು ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹೇಳಿದರು. ಅವರು ಸುರಭಿ ಬೈಂದೂರು ಸಂಸ್ಥೆಯು ೧೭ನೇ ವರ್ಷದ ಸಂಭ್ರಮದಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ ಸುರಭಿ ಜೈಸಿರಿ ಕಾರ್ಯಕ್ರಮದಲ್ಲಿ ‘ಬಿಂದುಶ್ರೀ’ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು. ಕರ್ನಾಟಕದ ಸಾಹಿತ್ಯ, ರಂಗಭೂಮಿ, ಜಾನಪದ, ಸಿನೆಮಾ ಕ್ಷೇತ್ರಕ್ಕೆ ಕರಾವಳಿ ನೀಡಿದ ಕೊಡುಗೆ ಸಣ್ಣದಲ್ಲ. ಪ್ರತಿಭಾವಂತರ ದಂಡು ಈ ಭಾಗದಲ್ಲಿದೆ ಎಂದ ಅವರು ಸಿನೆಮಾ ಎಂದರೆ ಕೇವಲ ನಟ ನಟಿಯರಷ್ಟೇ ಅಲ್ಲ. ಅದರ ಹಿಂದೆ ಅನೇಕರು ಕೆಲಸ ಮಾಡುತ್ತಾರೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಹಳ್ಳಿಯ ಜನರ ಸೇವೆಗಾಗಿ ಹುಟ್ಟಿಕೊಂಡ ಕೆನರಾ ಬ್ಯಾಂಕ್ ಇಂದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದು ಪ್ರಗತಿಯ ಹಾದಿಯಲ್ಲಿದೆ. ಗ್ರಾಹರಿಂದ ಬ್ಯಾಂಕು ಹಾಗೂ ಬ್ಯಾಂಕಿನಿಂದ ಗ್ರಾಹಕರು ಪರಸ್ಪರ ಹೊಂದಾಣಿಕೆಯ ವ್ಯವಹಾರ ನಡೆಸುವ ಮೂಲಕ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಸಹಾಯಕ ಮಹಾಪ್ರಬಂಧಕ ರಾಜಶೇಖರ ಮೇಟಿ ಹೇಳಿದರು. ಅವರು ಇಲ್ಲಿನ ಮೂಕಾಂಬಿಕಾ ಕಾಂಪ್ಲೆಕ್ಸ್‌ಗೆ ನೆಲ ಅಂತಸ್ತಿಗೆ ಸ್ಥಳಾಂತರಗೊಂಡ ಕೆನರಾ ಬ್ಯಾಂಕ್ ಶಾಖೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಕಟ್ಟಡದ ಮಾಲಿಕರಾದ ಬಾಲಯ್ಯ ಶೇರುಗಾರ್, ಉದ್ಯಮಿಗಳಾದ ವೆಂಕಟೇಶ ಕಿಣಿ, ಜಯಾನಂದ ಹೋಬಳಿದಾರ್ ಮೊದಲಾದವರು ಉಪಸ್ಥಿತರಿದ್ದರು. ವೆಂಕಟೇಶ್ ಕಿಣಿ ಎಟಿಎಂ ಕೇಂದ್ರವನ್ನು, ಬಾಲಯ್ಯ ಶೇರುಗಾರ್ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು. ಬೈಂದೂರು ಶಾಖಾ ಪ್ರಬಂಧಕ ಪ್ರಭಾಕರ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದರು. ಸಿಬ್ಬಂಧಿ ದೀಪಕ್ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಬ್ರಾಹ್ಮಣರಿಗೆ ತಾನು ಬ್ರಾಹ್ಮಣ ಎಂದು ಹೇಳಿಕೊಳ್ಳಲು ಹಿಂಜರಿಕೆ ಬೇಡ. ಆದರೆ ಹುಟ್ಟಿನಿಂದ ಮಾತ್ರ ಬ್ರಾಹ್ಮಣನಾಗದೆ ಆಚರಣೆ, ಅನುಷ್ಠಾನಗಳಿಂದಲೂ ಬ್ರಾಹ್ಮಣನಾಗಬೇಕು. ಇಂದಿಗೂ ಬ್ರಾಹ್ಮಣರ ಬಗ್ಗೆ ಇತರರಿಗೆ ಗೌರವ ಇದೆ. ಆದರೆ ನಮಗೇ ಹೆಮ್ಮೆ ಇಲ್ಲ. ಈ ಕಾರಣದಿಂದಲೇ ಇಂದು ಬ್ರಾಹ್ಮಣರು ಅವಹೇಳನಕ್ಕೆ ಗುರಿಯಾಗಿರುವುದು. ಬ್ರಾಹ್ಮಣ ಸಂಘಟನೆ ಸ್ವಾವಲಂಬನೆ ಮತ್ತು ಸಂಸ್ಕೃತಿ ರಕ್ಷಣೆಗಾಗಿಯೇ ಹೊರತು ಪರಪೀಡೆಗಲ್ಲ ಎಂದು ಸಂಸ್ಕೃತ ಪ್ರಾಧ್ಯಾಪಕ ವಿದ್ವಾನ್ ಮಾಧವ ಅಡಿಗ ಹೇಳಿದರು. ಅವರು ಕೋಟೇಶ್ವರದ ಶ್ರೀ ಕೋದಂಡರಾಮ ಮಂದಿರದಲ್ಲಿ ಜರಗಿದ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್‌ನ ಕೋಟೇಶ್ವರ ವಲಯದ ವಾರ್ಷಿಕ ಅಧಿಧಿವೇಶನದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ತಾಲೂಕು ಪರಿಷತ್‌ನ ಅಧ್ಯಕ್ಷ ಟಿ.ಕೆ. ಮಹಾಬಲೇಶ್ವರ ಭಾಟ ಮಾತನಾಡಿ, ಪರಿಷತ್‌ನ ಪ್ರತಿವಲಯದಲ್ಲೂ ಸಂಸ್ಕೃತ ಕಲಿಕೆಗೆ ವ್ಯವಸ್ಥೆ ಮಾಡಲಾಗುವುದು ಎಂದರು. ಉಡುಪಿ ಜಿಲ್ಲಾ ಬ್ರಾಹ್ಮಣ ಮಾಹಾಸಭಾದ ಕಾರ್ಯದರ್ಶಿ ಕೆ. ಗಣೇಶ ರಾವ್ ಮಾತನಾಡಿ, ವಿಪ್ರ ಮಹಿಳೆಯರು, ಪುರುಷರು ಒಳಗೊಂಡ ನೂತನ ಚೆಂಡೆ ವಾದನ ಬಳಗ…
