ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಬಿಲ್ಲವ ಅಸೋಸಿಯೇಶನ್ ಬೆಂಗಳೂರು ಇದರ ಬನ್ನೇರುಘಟ್ಟ ರಸ್ತೆಯಲ್ಲಿರುವ ಬಿಲ್ಲವ ಭವನದಲ್ಲಿ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಮಹಿಳಾ ದಿನಾಚರಣೆಯನ್ನು ಬೆಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ಜಿ. ಪದ್ಮಾವತಿ ಉದ್ಘಾಟಿಸಿದರು.
ಈ ಸಂದರ್ಭ ಅವರು ಮಾತನಾಡಿ, ಮಹಿಳೆಯರ ಸಶಕ್ತೀಕರಣವನ್ನು ಮುಂದುವರಿಸಿಕೊಂಡು ಹೋಗಬೇಕಾದ ಅಗತ್ಯವನ್ನು ತಿಳಿಸಿದರು. ಮಹಿಳೆಯರ ಶಕ್ತಿ ಅವರಿಗೆ ಅಧಿಕಾರ ಕೊಟ್ಟಾಗಲೇ ತಿಳಿಯುವುದು. ಮಹಿಳೆ ಯರು ಸಹನಾಶೀಲರು, ಬದ್ಧತೆ ಇರುವ ಶ್ರಮಜೀವಿಗಳು ಎಂದರು. ಬಿಲ್ಲವ ಅಸೋಸಿಯೇಶನ್‌ನ ಅಧ್ಯಕ್ಷ ಎಂ. ವೇದಕುಮಾರ್ ಅವರು ಸ್ವಾಗತಿಸಿ ಮಾತನಾಡಿ, ಬಿಲ್ಲವ ಮಹಿಳಾ ಘಟಕದೊಂದಿಗೆ ಬಿಲ್ಲವ ಅಸೋಸಿಯೇಶನ್‌ನ ಕಾರ್ಯ ಚಟುವಟಿಕೆ ಬಗ್ಗೆ ತಿಳಿಸಿದರು.ಬನ್ನೇರುಘಟ್ಟ ರಸ್ತೆಯಲ್ಲಿರುವ ಜೆ.ಡಿ. ಮರ ಜಂಕ್ಷನ್‌ಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನಿಡುವಂತೆ ಮಾಡಿದ ಮನವಿಗೆ ಮಹಾ ಪೌರರು ಪೂರಕವಾಗಿ ಸ್ಪಂದಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸತೀಶ್ ರೆಡ್ಡಿ ಅವರು ಬಿಲ್ಲವ ಮಹಿಳೆಯರು ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿ ಸಾಮಾ ಜಿಕ ಜವಾಬ್ದಾರಿ ನಿಭಾಯಿಸುತ್ತಿರುವು ದನ್ನು ಶ್ಲಾಘಿಸಿದರು.
ಅರೆಕೆರೆ ವಾರ್ಡಿನ ಪಾಲಿಕೆ ಸದಸ್ಯರಾದ ಭಾಗ್ಯಲಕ್ಷ್ಮೀ ಮುರಳಿ, ಸಂಘದ ಹಿರಿಯ ಉಪಾಧ್ಯಕ್ಷ ಎಂ. ರಮೇಶ್ ಬಂಗೇರ, ಉಪಾಧ್ಯಕ್ಷ ಕೇಶವ ಪೂಜಾರಿ, ಪ್ರಧಾನ ಕಾರ್ಯದರ್ಶಿ ಭಾಸ್ಕರ ಪೂಜಾರಿ ಜತೆ ಕಾರ್ಯದರ್ಶಿ ರಾಜೇಶ್ ಕುಮಾರ್, ಖಜಾಂಚಿ ಮಾಚ ಬಿಲ್ಲವ, ಸಂಘಟನಾ ಕಾರ್ಯದರ್ಶಿ ಉದಯ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ರತ್ನಾಜಯರಾಮ್, ನಳಿನಾಕ್ಷಿ ಸಣ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.
ಸಂದರ್ಭ ಬಿಲ್ಲವ ಮಹಿಳಾ ಘಟಕ ದಲ್ಲಿ ಉತ್ತಮ ಸೇವೆ ಸಲ್ಲಿಸಿದ ಭವಾನಿ ನಾರಾಯಣ್, ವೀಣಾ ವಿಶ್ವನಾಥ ಮತ್ತು ಪೂರ್ಣಿಮಾ ಬಾಬು ಅವರನ್ನು ಸಮ್ಮಾನಿಸಲಾಯಿತು. ರಂಜಿತಾ ಮತ್ತು ಶಾವಿಲಿ ಕಾರ್ಯ ಕ್ರಮ ನಿರ್ವಹಿಸಿದರು. ಜಲಜಾ ಶೇಖರ್ ವಂದಿಸಿದರು.















