ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಗಂಗೊಳ್ಳಿ ಇವರ ಆಶ್ರಯದಲ್ಲಿ ಗಂಗೊಳ್ಳಿ ಯು. ಶೇಷಗಿರಿ ಶೆಣೈ ಸ್ಮರಣಾರ್ಥ ಕುಂದಪ್ರಭ ಕುಂದಾಪುರ ಇವರ ಸಹಭಾಗಿತ್ವದೊಂದಿಗೆ ಆಯೋಜಿಸಿದ ನಾಲ್ಕನೆಯ ಉಡುಪಿ ಜಿಲ್ಲಾ ಕಾಲೇಜು ವಿದ್ಯಾರ್ಥಿಗಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ರೋಹನ್ ನಾಯಕ್ ಆಯ್ಕೆಯಾಗಿದ್ದಾರೆ. ವಿಶೇಷವೆಂದರೆ ರೋಹನ್ ಹುಟ್ಟು ಅಂಧ. ಕಣ್ಣಿಲ್ಲದಿದ್ದರೂ ಸದಾ ಕ್ರಿಯಾಶೀಲ, ಕುತೂಹಲ ಸ್ವಭಾವದ ನಗುಮೊಗದ, ಉಪನ್ಯಾಸಕರ ಅಚ್ಚುಮೆಚ್ಚಿನ ವಿದ್ಯಾರ್ಥಿ. ಕುಂದಾಪುರ ತಾಲೂಕಿನ ತ್ರಾಸಿ ಗ್ರಾಮದ ಉದ್ಯಮಿ ನಾಗರಮಠ ರಘುನಂದನ್ ನಾಯಕ್ ದಂಪತಿಯ ಹಿರಿಯ ಪುತ್ರನಾಗಿರುವ ಈತನ ಮಾತೃ ಭಾಷೆ ಕೊಂಕಣಿ. ಕೆ.ಜಿ. ತರಗತಿಯಿಂದ ೭ ನೇ ತರಗತಿಯವರೆಗೆ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ, ಅನಂತರ ೮ ರಿಂದ ೧೦ ರವರೆಗೆ ಮಂಗಳೂರಿನ ಖomಚಿಟಿ & ಅಚಿಣheಡಿiಚಿಟಿ ಐobo Sಛಿhooಟ ಈoಡಿ ಖಿhe ಃಟiಟಿಜನಲ್ಲಿ ವ್ಯಾಸಂಗ ಮಾಡಿರುವ ಈತ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ಪಿ.ಯು. ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ರಿಕ್ಷಾ ಚಾಲಕರ ಮತ್ತು ಮಾಲಕರ ಆಶ್ರಯದಲ್ಲಿ ಶ್ರೀ ಕುಂದೇಶ್ವರ ದೇವಸ್ಥಾನ ದೀಪೋತ್ಸವ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಚೇತನರಿಗೆ ಸಹಾಯಧನ, ವಿದ್ಯಾರ್ಥಿ ವೇತನ, ಶಾಲಾ ಚಿಣ್ಣರಿಗೆ ಸ್ಕೂಲ್ ಬ್ಯಾಗ್, ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ವಿದ್ಯಾರ್ಥಿ ನೀರಜ್ಗೆ ಸಹಾಯಧನ ವಿತರಣೆ ಮಾಡಲಾಯಿತು. ರಾಮಕ್ಷತ್ರಿಯ ಮಂಡಳಿ ಅಧ್ಯಕ್ಷ ಕೆ.ಅಜಯ ಹವ್ದಾರ್ ಉದ್ಘಾಟಿಸಿದರು. ಯುವ ಉದ್ಯಮಿ ಅಭಿನಂದನ್ ಎ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಕೀಲ ಕೆ.ಪ್ರದೀಪ್ ಕುಮಾರ್ ಶೆಟ್ಟಿ, ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘ ಅಧ್ಯಕ್ಷ ವಿಠಲ ಖಾರ್ವಿ ಇದ್ದರು. ಕಾರ್ಗಿಲ್ ಯುದ್ಧ ಹಾಗೂ ೨೦೧೫ರಲ್ಲಿ ಇಂಡೋ ಮಾಯನ್ಮಾರ್ ಸರ್ಜಿಕಲ್ ದಾಳಿ ನೇತೃತ್ವ ವಹಿಸಿದ ಕುಂದಾಪುರ ಯೋಧ ಕಿಶನ್ ಕುಮಾರ್ ಡಿ.ಕೆ. ಅವರ ಸನ್ಮಾನಿಸಲಾಯಿತು. ವೆಂಕಟೇಶ್ ಸನ್ಮಾನ ಪತ್ರ ವಾಚಿಸಿದರು.ಕಾರ್ಯದರ್ಶಿ ನಾಗರಾಜ್ ಖಾರ್ವಿ ವರದಿ ಮಂಡಿಸಿದರು. ದೀಪಾ ವೆಂಕಟೇಶ್ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಸ್ವಪ್ನಾ ಪ್ರಕಾಶ್ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ಸನ್ನಿಧಿಗೆ ಶ್ರೀಲಂಕಾ ಪ್ರಧಾನಿ ರೆನಿಲ್ ವಿಕ್ರಮ ಸಿಂಘೆ ಪತ್ನಿ ಡಾ. ಮೈತ್ರಿ ಹಾಗೂ ಕುಟುಂಬ ಸಮೇತರಾಗಿ ಭೇಟಿಕೊಟ್ಟು ವಿಶೇಷ ಪೂಜೆ ಸಲ್ಲಿಸಿದರು. ಶ್ರೀಲಂಕಾದಿಂದ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಅಲ್ಲಿಂದ ಮಂಗಳೂರು ಮೂಲಕ ಅರೆಶಿರೂರಿಗೆ ಹೆಲಿಕಾಪ್ಟರ್ ನಲ್ಲಿ ಬಂದಿಳಿದರು. ಪ್ರಧಾನಿ ವಿಕ್ರಮಸಿಂಘೆಯವರನ್ನು ಕೊಲ್ಲೂರು ಆಡಳಿತ ಮಂಡಳಿ ಅದ್ಧೂರಿಯಾಗಿ ಸ್ವಾಗತಿಸಿತು. ದೇವಸ್ಥಾನದ ಮುಂಭಾಗದಲ್ಲಿ ಕಾಲು ತೊಳೆದು ದೇವಸ್ಥಾನ ಮುಖ್ಯದ್ವಾರದ ಮೂಲಕ ಬಲಗಾಲಿಟ್ಟು ಪ್ರವೇಶಿಸಿದರು. ಮಂತ್ರ ಪಠಣೆ ಮೂಲಕ ದೇವಾಲಯದ ಪ್ರಮುಖ ಅರ್ಚಕರು ಪ್ರಧಾನಿ ಮತ್ತು ಪತ್ನಿಯನ್ನು ಒಳಗೆ ಕರೆಸಿಕೊಂಡರು. ಗರುಡಗಂಭಕ್ಕೆ ನಮಸ್ಕರಿಸಿ ಮೂಕಾಂಬಿಕೆಯ ದರ್ಶನ ಮಾಡಿದ ಪ್ರಧಾನಿ, ಚಂಡಿಕಾ ಹೋಮ ಸೇರಿದಂತೆ ದೇವಸ್ಥಾನದ ಪ್ರಾಂಗಣದಲ್ಲಿರುವ ಎಲ್ಲಾ ಗುಡಿಗಳಿಗೆ ಭೇಟಿಕೊಟ್ಟು ಅರ್ಚನೆ ಸಲ್ಲಿಕೆ ಮಾಡಿದರು. ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ಅರ್ಚಕರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಕೊಲ್ಲೂರು ಪರಿಸರದಲ್ಲಿ ವಿಶೇಷ ಭದ್ರತೆ ಒದಗಿಸಲಾಗಿತ್ತು. ದೇವಸ್ಥಾನಕ್ಕೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಆಟ ಮತ್ತು ಪಾಠ ಕಲಿಕೆಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸುದೃಡವಾದ ದೇಹದಲ್ಲಿ ಸ್ವಸ್ಥವಾದ ಮನಸ್ಸು ಸದಾ ನೆಲೆಯೂರಿರುತ್ತದೆ. ಯಾವ ಶಾಲಾ ಸಂಸ್ಥೆಯು ವಿದ್ಯಾರ್ಥಿಗಳ ಕಲಿಕೆಗಳಲ್ಲಿ ಕ್ರೀಡೆಗೆ ಪ್ರಾಶಸ್ತ್ಯವನ್ನು ಕೊಡುತ್ತದೆಯೊ ಆ ಸಂಸ್ಥೆಯು ಮಕ್ಕಳ ಸರ್ವಾಂಗೀಣ ಪ್ರಗತಿಗೆ ಗುರುತರವಾದ ಲಕ್ಷ್ಯವನ್ನು ಇಟ್ಟಿದೆ ಎಂದು ತಿಳಿಯಬೇಕು. ಕ್ರೀಡಾ ಜಗತ್ತಿನಲ್ಲಿ ಅನೇಕ ಕ್ರೀಡಾ ಪಟುಗಳು ತಮ್ಮ ಪ್ರತಿಭೆಗಳ ಮೂಲಕ ವಿಶವಿಖ್ಯಾತರಾಗಿದ್ದಾರೆ. ಕ್ರೀಡೆಯು ದೈಹಿಕ ಶ್ರಮದ ಜೊತೆಗೆ ಆಂತರಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಅಲ್ಲದೇ ವಿದ್ಯಾರ್ಥಿಗಳು ನಿರಂತರವಾಗಿ ಕಲಿಕೆಯಲ್ಲಿ ತೊಡಗಿಕೊಳ್ಳಲು ಕ್ರೀಡೆ ಪ್ರಮುಖ ಕಾರಕ ಅಂಶಗಳಾಗಿದೆ. ಕ್ರೀಡೆಯ ಮೂಲಕವೇ ನಮ್ಮ ಪ್ರತಿಭೆಗಳನ್ನು ಹಾಗೂ ಜೀವನವನ್ನು ನಡೆಸಲು ಸಾಧ್ಯವಿದೆ. ಇದು ವ್ಯಕ್ತಿಗಳಲ್ಲಿ ಶಿಸ್ತು, ಸಂಯಮ, ಸಹಬಾಳ್ವೆ, ನಾಯಕತ್ವ , ಐಕ್ಯತೆ ಮತ್ತು ಕ್ರೀಡಾ ಸ್ಪೂರ್ತಿಯನ್ನು ಬೆಳೆಸುತ್ತದೆ ಎಂದು ಕುಂದಾಪುರ ತಾಲೂಕಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಪ್ರಭಾಕರನ್, ಐ.ಎಫ್.ಎಸ್ ನುಡಿದರು. ಅವರು ಗುರುಕುಲ ವಿದ್ಯಾಸಂಸ್ಥೆಯ 12ನೇ ವಾರ್ಷಿಕ ಕ್ರೀಡಾಕೂಟದ ಉದ್ಘಾಟಕರಾಗಿ ಆಗಮಿಸಿ,…
ಡಿ.16 ಮತ್ತು 17 ಹಕ್ಲಾಡಿಯಲ್ಲಿ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ತಾಲೂಕು 16 ನೇ ಕನ್ನಡ ಸಾಹಿತ್ಯ ಸಮ್ಮೇಳವು ಡಿಸೆಂಬರ್ 16 ಮತ್ತು 17 ರಂದು ಹಕ್ಲಾಡಿಯ ಕೆಎಸ್ಎಸ್ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಜರುಗಲಿದೆ. ಅಪರಾಹ್ನ 3 ಗಂಟೆಯಿಂದ ರಾತ್ರಿ 9 ಗಂಟೆಯ ತನಕ ನಡೆಯುವ ಸಮ್ಮೇಳನದಲ್ಲಿ ವಿಚಾರಗೋಷ್ಠಿ, ಕವಿಗೋಷ್ಠಿ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಮ್ಮೇಳನಾಧ್ಯಕ್ಷರನ್ನಾಗಿ ಹಿರಿಯ ಸಾಂಸ್ಕೃತಿಕ ನೇತಾರ ಬಿ.ಅಪ್ಪಣ್ಣ ಹೆಗ್ಡೆಯವರನ್ನು ಆಯ್ಕೆ ಮಾಡಲಾಗಿದೆ. ಎರಡು ದಿನಗಳ ಈ ನುಡಿಹಬ್ಬದಲ್ಲಿ ಸಾಹಿತ್ಯಾಭಿಮಾನಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕಾಗಿ ಪರಿಷತ್ ಪ್ರಕಟಣೆಯಲ್ಲಿ ಕೋರಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಐತಿಹಾಸಿಕ ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಳಕ್ಕೆ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರ ರಾಜೇ ಅವರು ಕೊಲ್ಲೂರು ಭೇಟಿ ನೀಡಿ, ದೇವಿಯ ದರಶನ ಪಡೆದರು. ಬೆಳಿಗ್ಗೆ ದೇವಸ್ಥಾನಕ್ಕೆ ಆಗಮಿಸಿದ ಅವರು ಶ್ರೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದೇವಸ್ಥಾನ ಆಡಳಿತ ಮಂಡಳಿಯಿಂದ ಅವರನ್ನು ಗೌರವಿಸಲಾಯಿತು. ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ಕುಮಾರ್ ಶೆಟ್ಟಿ ಉಪ್ಪುಂದ, ಸದಸ್ಯರಾದ ರಮೇಶ್ ಗಾಣಿಗ ಕೊಲ್ಲೂರು, ವಡಂಬಳ್ಳಿ ಜಯರಾಮ ಶೆಟ್ಟಿ, ನರಸಿಂಹ ಹಳಗೇರಿ, ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ ಸೇರಿದಂತೆ ಇತರರು ಜೊತೆಗಿದ್ದರು.
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಉಪ್ಪಿನಕುದ್ರು ಗೊಂಬೆಗೆ ಮೊದಲು ಸೂತ್ರ ಹಿಡಿದು ಕುಣಿಸಿದ್ದು ಸಿಆರ್ಝಡ್ ನಿಯಮ. ನಂತರ ಸಾರಿಗೆ ಇಲಾಖೆ ಒಂದು ವರ್ಷ ಸೂತ್ರ ಕೈಗೆ ತೆಗೆದುಕೊಂಡಿತು. ಪ್ರಸಕ್ತ ಉಪ್ಪಿನಕುದ್ರು ಗೊಂಬೆಗೆ ಮೆಸ್ಕಾ ಸೂತ್ರ! ತಲ್ಲೂರು ಗ್ರಾಮ ಪಂಚಾಯತ್ ಬೀದಿ ದೀಪ ಅಳವಡಿಕೆಗೆ ನಿರ್ಣಯ ಮಂಡಿಸಿ ಮೆಸ್ಕಾಂ ಕಚೇರಿಗೆ ಕಳುಹಿಸಿದ್ದೇ ತಡ ಹಿಂದೆ ಮುಂದೆ ನೋಡದೆ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಕಂಪೌಂಡ್ ಒಳಗೆ ನೆಟ್ಟ ಕಂಬದಿಂದ ಅಕಾಡೆಮಿಯ ಒಂದು ಮಾತು ಕೇಳದೆ ಲೈನ್ ಎಳೆದು, ಸ್ವಾಗತಗೋಪುರ ಕೆಲಸಕ್ಕೆ ವಿಘ್ನ ತಂದಿದೆ. ಎಲ್ಲಾದರೂ ಸ್ವಾಗತ ಗೋಪುರ ಕಾಮಗಾರಿ ಮಾಡಿದರೆ ಕಾರ್ಮಿಕ ವಿದ್ಯುತ್ ಸ್ಪರ್ಶಿಸಿ ಜೀವ ಕಳೆದುಕೊಳ್ಳುವಂತ ದುಃಸ್ಥಿತಿ ಕಾಡುತ್ತಿದೆ. ಹೌದು.. ಗೊಂಬೆಯಾಟ ಅಕಾಡೆಮಿ ವಿದ್ಯುತ್ ಸಂಪರ್ಕ ಹಿನ್ನೆಲೆಯಲ್ಲಿ ಮೆಸ್ಕಾಂಗೆ ಕಂಬದ ಹಣತುಂಬಿ ಸಂಪರ್ಕ ಪಡೆದುಕೊಂಡಿತ್ತು. ಮೊನ್ನೆ ಮೊನ್ನೆ ಶಾಲೆಯೆಡೆಗೆ ಗೊಂಬೆ ನಡಿಗೆ ಕಾರ್ಯಕ್ರಮಕ್ಕೆ ಅಕಾಡೆಮಿ ಬಾಗಿಲು ಹಾಕಿ, ಗೇಟ್ ಬಂದ್ ಮಾಡಿ ಹೋದ ಸಂದರ್ಭದಲ್ಲಿ ಮೆಸ್ಕಾಂ ಕಂಪೌಂಡ್ ಜಿಗಿದು, ಸ್ವಾಗತ ಗೋಪುರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಆರ್.ಆರ್. ಕಾಂಪ್ಲೆಕ್ಸ್ನಲ್ಲಿ ಭಾನುವಾರ ನೂತನವಾಗಿ ಆರಂಭಗೊಂಡ ಶ್ರೀ ಸಾಯಿ ಮಹಿಳಾ ಆರ್ಥಿಕ ಸೇವಾ ಸಹಕಾರ ಸಂಘದ ಕಛೇರಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಎಸ್. ರಾಜು ಪೂಜಾರಿ ಉದ್ಘಾಟಿಸಿದರು. ಈ ಸಂದರ್ಭ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಸ್. ಮದನ್ ಕುಮಾರ್, ಉದ್ಯಮಿ ಕಾರ್ತಿಕೇಯ ಮಧ್ಯಸ್ಥ, ಮುಖ್ಯ ಪ್ರವರ್ತಕರಾದ ಬೇಬಿ ಕೊಠಾರಿ, ಸಹಕಾರಿ ಸಂಘದ ಅಧ್ಯಕ್ಷೆ ನಿರ್ಮಲ ಶಂಕರ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾಸ್ಕರ ಬಿಲ್ಲವ, ಸಂಸ್ಥೆಯ ನಿರ್ದೇಶಕರಾದ ಶಿಲ್ಪಾ ಕೆ. ಮಧ್ಯಸ್ಥ, ಮಂಜುಳಾ, ಪ್ರಭಾವತಿ, ಸ್ವಪ್ನ, ಸುಜಾತಾ ಖಾರ್ವಿ, ಶಕೀಲಾ, ಪ್ರೇಮಾ, ಕಲ್ಪನಾ ಶೇಖರ ಬಿಲ್ಲವ, ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕೇವಲ ವೃತ್ತಿಗಾಗಿ ಸೇನೆಗೆ ಸೇರದೆ, ದೇಶಪ್ರೇಮದಿಂದ ಯುವಜನತೆ ಸೈನಿಕರಾಗಬೇಕಾಗಿದೆ. ಶ್ರೀಮಂತ ವರ್ಗದವರು ದೇಶ ಕಾಯುವ ಕಾಯಕಕ್ಕೆ ತಮ್ಮ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಚಿಕ್ಕಂದಿನಿಂದಲೇ ಮಕ್ಕಳಿಗೆ ರಾಷ್ಟ್ರಪ್ರೇಮದ ಪಾಠವನ್ನು ಸರಿಯಾಗಿ ಹೇಳಿದರೆ ಮುಂದೆ ಅವರು ದೇಶಸೇವೆಗೆ ಸ್ವಯಂಪ್ರೇರಿತರಾಗಿ ಎದ್ದು ನಿಲ್ಲುತ್ತಾರೆ. ಈ ದಿಸೆಯಲ್ಲಿ ಪೋಷಕರು ಮತ್ತು ಶಿಕ್ಷಕರು ಕಾರ್ಯಪ್ರವೃತ್ತರಾಗಬೇಕಿದೆ ಎಂದು ಕುಂದಾಪುರ ತಾಲೂಕು ಕಸಾಪ ಅಧ್ಯಕ್ಷ ಹೇಳಿದರು. ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕ ಹಾಗೂ ಗೀತಾನಂದ ಫೌಂಡೇಷನ್ ಮಣೂರು ಇವರ ಜಂಟಿ ಆಶ್ರಯದಲ್ಲಿ ನಡೆದ ತಿಂಗಳ ಸಡಗರ ಸರಣಿಯ ಹಿರಿಯರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಾಡ ಗುಡ್ಡೇಅಂಗಡಿ ನಿವಾಸಿ ಮಾಜಿ ಸೈನಿಕರೂ ಹಿರಿಯರೂ ಆದ ವೆನೆಸಿಸ್ ಪಿರೇರಾ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಹಿಂದೆಲ್ಲಾ ಸೈನಿಕರ ಜೀವನ ದುಸ್ತರವಾಗಿತ್ತು. ಶಸ್ತ್ರಾಸ್ತ್ರಗಳ ಕೊರತೆ ಇತ್ತು, ಆದರೆ ಈಗ ನಮ್ಮ ದೇಶದ ಮೂರು ಸೇನೆಗಳು ಸದೃಢವಾಗಿದ್ದು,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಸಮಾನತೆ ಕಮ್ಮಿ ಮಾಡಿ, ಸಮಾನತೆ ಮೂಲಕ ಎಲ್ಲರಿಗೂ ಉತ್ತಮ ಜೀವನ ಕಾನೂನು ಮೂಲಕ ಸಿಗಬೇಕು. ಕೋರ್ಟಿಗೆ ಹೋಗುವವರ ಸಂಖ್ಯೆಗೆ ಅನುಗುಣವಾಗಿ ನ್ಯಾಯಾಲಯ, ನ್ಯಾದೀಶರು ಇಲ್ಲದಿದ್ದರಿಂದ ನ್ಯಾಯದಾನ ವಿಳಂಬ. ಉತ್ತಮ ಕಾನೂನು ವ್ಯವಸ್ಥೆಯಿಂದ ಸ್ವಾಸ್ಥ್ಯ ಸಮಾಜ ಹಾಗೂ ದೇಶಕಟ್ಟಲು ಸಾಧ್ಯ ಎಂದು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಹೇಳಿದರು. ಕುಂದಾಪುರ ಕಾನೂನು ಸೇವೆಗಳ ಪ್ರಾಧಿಕಾರಿ, ವಕೀಲರ ಸಂಘ, ಅಭಿಯೋಗ ಇಲಾಖೆ, ತಾಲೂಕ್ ಆಡಳಿತ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜೆಸಿಐ ಆಶ್ರಯದಲ್ಲಿ ಕುಂದಾಪುರ ನ್ಯಾಯಾಲಯ ವಠಾರದಲ್ಲಿ ನಡೆದ ಕಾನೂನು ಅಭಿಯಾನ ಸಮಾರೋಪದಲ್ಲಿ ಮಾತನಾಡುತ್ತಿದ್ದರು. ನ್ಯಾಯಾಲಯದಲ್ಲಿ ಸಾಕಷ್ಟು ದೂರುಗಳು ಬಾಕಿಯುದ್ದು, ಅದರ ವಿಲೇವಾರಿಗೆ ಬೇಕಾಗುವಷ್ಟು ನ್ಯಾಯಾಲಯ, ನ್ಯಾಯಾದೀಶ, ಹಾಗೂ ಸಿಬ್ಬಂದಿ ಕೊರತೆಸಮಸ್ಯೆ ಪರಿಹಾರದ ದೃಷ್ಟಿಯಲ್ಲಿ ಸರ್ಕಾರ ಕಾನೂನು ಪ್ರಾಧಿಕಾರದ ಮೂಲಕ ದೂರುಗಳ ವಿಲೇವಾರಿ ಮಾಡುವ ಪ್ರಯತ್ನ ಮಾಡುತ್ತಿದೆ. ಲೋಕಾಯುಕ್ತ ಹಾಗೂ ಕಾನೂನು ಪ್ರಾಧಿಕಾರ ಜತೆಜತೆಯಾಗಿ ಹೆಚ್ಚಿನ ಹಾಕಬೇಕು ಎಂದು ಸಲಹೆ ಮಾಡಿದರು. ಉಡುಪಿ ಜಿಲ್ಲಾ…
