Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇತ್ತೀಚೆಗೆ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ೨೦೧೬-೨೦೧೭ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವು ಹುಣ್ಸೆಮಕ್ಕಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟನೆಗೊಂಡಿತು. ಶ್ರೀ ಕ್ಷೇತ್ರ ಕೋಲ್ಲೂರು ಇದರ ಮಾಜಿ ಧರ್ಮದರ್ಶಿಗಳಾದ ಎನ್. ಮಂಜಯ್ಯ ಶೆಟ್ಟಿ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಕೇವಲ ನಾಲ್ಕು ಗೋಡೆಗಳ ಮಧ್ಯೆ ಔಪಚಾರಿಕ ಶಿಕ್ಷಣವನ್ನಲ್ಲದೆ , ಸಮಾಜದಲ್ಲಿನ ವಿವಿಧ ವಿಷಯಗಳನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಎನ್.ಎಸ್.ಎಸ್ ವಿದ್ಯಾರ್ಥಿಗಳು ಕಾರ್ಯಪ್ರವೃತ್ತರಾಗಲಿ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ಪದವಿ ವಿಭಾಗದ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ಎಮ್.ರತ್ನಾಕರ ಶೆಟ್ಟಿ ವಲಯ ಅಧ್ಯಕ್ಷರು, ಲಯನ್ಸ ೩೧೭ಸಿ, ಸೂರಪ್ಪ ಹೆಗ್ಡೆ, ಮುಖ್ಯೋಪಾಧ್ಯಾಯರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹುಣ್ಸೆಮಕ್ಕಿ, ಚಂದ್ರ ಆಚಾರ್ಯ, ಅಧ್ಯಕ್ಷರು, ಪ್ರಗತಿ ಯುವಕ ಮಂಡಲ, ಹುಣ್ಸೆಮಕ್ಕಿ ಉಪಸ್ಥಿತರಿದ್ದರು. ಭಂಡಾರ್ಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಯೊಜನಾಧಿಕಾರಿ ರಾಮಚಂದ್ರ ಆಚಾರ್ ಶಿಬಿರದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಆಂಜನೇಯ ಅವರು ತಾಲೂಕಿನ ಮೂರೂರು ಹಾಡಿಯಲ್ಲಿ ಮರ್ಲಿ ಕೊರಗ ಅವರ ಮನೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿದರು. ಮೆರವಣಿಗೆಯಲ್ಲಿ ಸಚಿವರನ್ನು ಸಂಜೆಯ ವೇಳೆ ಹಾಡಿಯೊಳಕ್ಕೆ ಸ್ವಾಗತಿಸಲಾಯಿತು. ಹಾಳೆಯ ಮುಟ್ಟಾಳೆ ಧರಿಸಿದ ಸಚಿವರಿಗೆ ಮಲ್ಲಿಗೆಯ ಹಾರ ಹಾಕಲಾಯಿತು. ಹಾರಕ್ಕೆ ಗುಡ್ಡಗಾಡು ಪ್ರದೇಶದಲ್ಲಿರುವ ಕೆಂಪು ಬಣ್ಣದ ಕೇಪುಳ ಹೂವನ್ನೂ ನೇಯಲಾಗಿತ್ತು. ಸಚಿವರೊಂದಿಗೆ ಅಧಿಕಾರಿಗಳ ತಂಡವೂ ಗ್ರಾಮಕ್ಕೆ ಬಂದಿದ್ದು, ಸ್ಥಳೀಯರೊಂದಿಗೆ ಸಂವಾದ ನಡೆಸಿ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆ ಯನ್ನೂ ಸಚಿವರು ನೀಡಿದರು. ಮರ್ಲಿ ಮನೆಮಂದಿಯೊಂದಿಗೆ ವಿಶೇಷ ವಾಗಿ ಬೆರೆತ ಸಚಿವರು, ಅಡುಗೆ ಕೋಣೆಗೆ ಕೂಡ ಹೋಗಿ ಅಲ್ಲಿ ಅಡುಗೆ ತಯಾರಿ ಮಾಡುವುದನ್ನು ಅಲ್ಲಿಯೇ ನಿಂತು ವೀಕ್ಷಿಸಿದರು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಶಾಸಕ ಗೋಪಾಲ ಪೂಜಾರಿ, ಉಡುಪಿ ಜಿಲ್ಲಾಧಿಕಾರಿ ವೆಂಕಟೇಶ್,ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಕುಂದಾ ಪುರ ಉಪ ವಿಭಾಗಾಧಿಕಾರಿ ಶಿಲ್ಪಾನಾಗ್, ಗ್ರಾ.ಪಂ.…

Read More

ಬೈಂದೂರು ಮುರೂರು ಕೊರಗ ಕಾಲೋನಿಯಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಹೇಳಿಕೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ೫೦ಕ್ಕೂ ಜಾತಿಗಳಿದ್ದು ಆ ಪೈಕಿ ೩೫ಜಾತಿ ಸಮುದಾಯ ನಾಡಿನಲ್ಲಿ, ೧೫ ಜಾತಿ ಸಮುದಾಯದ ಜನರು ಕಾಡಿನಲ್ಲಿ ವಾಸಿಸುತ್ತಿದ್ದಾರೆ. ಅನಾದಿಕಾಲದಿಂದ ಅರಣ್ಯ ತಪ್ಪಲು ಪ್ರದೇಶದಲ್ಲಿ ನೆಲೆಸಿರುವ, ಮೃದು ಸ್ವಭಾವದ ಕಡಿಮೆ ಸಂಖ್ಯೆಯಲ್ಲಿರುವ ಕೊರಗ ಹಾಗೂ ಬುಡಕಟ್ಟು ಸಮುದಾಯಗಳಿಗೆ ಪರಿಶಿಷ್ಟ ಪಂಗಡದ ಇತರೆ ಜಾತಿಯೊಂದಿಗೆ ಸ್ವರ್ಧಿಸಲು ಕಷ್ಟಸಾಧ್ಯವಾಗುತ್ತಿದ್ದು, ಅವರ ಶ್ರೇಯೋಭಿವೃದ್ಧಿಗಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಒಳ ಮೀಸಲಾತಿ ನೀಡುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಸಿಎಂಗೆ ಮನವಿ ಮಾಡಲಾಗುವುದು ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದೂಳಿದ ವರ್ಗಗಳ ಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದರು. ಅವರು ಹೊಸ ವರ್ಷದ ಸಂಭ್ರಮಾಚರಣೆಗಾಗಿ ಕಾಲ್ತೋಡು ಗ್ರಾ.ಪಂ ವ್ಯಾಪ್ತಿಯ ಮುರೂರು ಕೊರಗ ಕಾಲೋನಿಯಲ್ಲಿ ವಾಸ್ತವ್ಯಕ್ಕಾಗಿ ಬಂದಿದ್ದ ಅವರು ಆದಿವಾಸಿ ಮನೆ ಬಾಗಿಲಿಗೆ ಸರಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಿಷ್ಠೆಗೆ ಮತ್ತೊಂದು ಹೆಸರು ಕೊರಗರು. ಅವರೊಂದಿಗೆ ಅವರೊಂದಿಗೆ ದಿನಪೂರ್ತಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ, ಪದವಿಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಹಾಗೂ ಎಸ್. ಎಸ್. ಪದವಿಪೂರ್ವ ಕಾಲೇಜು, ವಿಜಯಪುರ ಜಂಟಿ ಆಶ್ರಯದಲ್ಲಿ ವಿಜಯಪುರದಲ್ಲಿ ನಡೆದ ರಾಜ್ಯ ಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆ ಜನಪದ ಗಾಯನ ವಿಭಾಗದಲ್ಲಿ ಕುಂದಾಪುರ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮೇಘನಾ ಎ. ಅವರು ಪ್ರಥಮ ಸ್ಥಾನಗಳಿಸಿದ್ದಾರೆ. ವಿಜೇತ ವಿದ್ಯಾರ್ಥಿಗೆ ಕಾಲೇಜಿನ ಆಡಳಿತ ಮಂಡಳಿ ಮತ್ತು ಪ್ರಾಧ್ಯಾಪಕ ವೃಂದ ಅಭಿನಂದಿಸಿರುತ್ತಾರೆ. ಮೇಘನಾ ಶಿಕ್ಷಕರಾದ ರಾಮದಾಸ್ ಮತ್ತು ಸುಮನಾ ದಂಪತಿಯವರ ಪುತಿಯಾಗಿರುತ್ತಾರೆ.

Read More

ಸಮಾಜ ಕಲ್ಯಾಣ ಸಚಿವ ಆಂಜನೇಯ ವಾಸ್ತವ್ಯಕ್ಕೆ ಸಕಲ ಸಿದ್ಧತೆ. ಸ್ಥಳದಲ್ಲೇ ಬೀಡು ಬಿಟ್ಟ ಅಧಿಕಾರಿಗಳು ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಗ್ರಾಮ ಮುರೂರು ರಾಜ್ಯ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರ ವಾಸ್ತವ್ಯದ ಕಾರಣದಿಂದಾಗಿ ಸುದ್ದಿಯಾಗುತ್ತಿದೆ. ಆದರೆ ನೂರಾರು ವರ್ಷಗಳಿಂದ ವಾಸವಿರುವ ಇಲ್ಲಿನ ಮೂಲ ನಿವಾಸಿಗಳ ಬದುಕು ಹಾಗೂ ಮೂಲ ಸೌಕರ್ಯಗಳ ಸ್ಥಿತಿಗತಿ ಒಂದಿಷ್ಟು ಬದಲಾಗಿಲ್ಲ. ಭದ್ರವಿಲ್ಲದ ಸೂರು, ಸೋರುವ ಮಾಡು, ಶೌಚವಿಲ್ಲದ ಮನೆ, ಆಧುನಿಕ ತಂತ್ರಜ್ಞಾನದ ಬಾತ್‌ರೂಮ್! ವಿದ್ಯುತ್ ಎಲ್ಲದ ಮನೆ, ಕರೆಂಟಿದ್ದರೂ ತಪ್ಪದ ಗೋಳು, ಇದರೊಟ್ಟಿಗೆ ಹಕ್ಕುಪತ್ರ ಇಲ್ಲದ ಒಂದೆರಡು ಮನೆ, ಕೂಲಿ ಹೊಟ್ಟೆಪಾಡಿನ ದಾರಿ, ಕಣ್ಣು ಚಾ, ಸಾಸುವೆ ಬೇಕಿದ್ದರೂ ನಾಲ್ಕಾರು ಕಿ.ಮೀ ನಡೆಯುವ ಅನಿವಾರ್ಯತೆ. ಇದು ಮೂರೂರು ಕೊರಗ ಕಾಲನಿ ಯಥಾವತ್ ಚಿತ್ರಣ. ಮೂಲ ನಿವಾಸಿಗಳ ಸಂಪಕಷ್ಟದ ಬದುಕಿನ ಸಂಪೂರ್ಣ ಚಿತ್ರಣವೂ ಹೌದು. [quote font_size=”14″ bgcolor=”#ffffff” bcolor=”#dd3333″ arrow=”yes” align=”right”] ಜಿಲ್ಲೆಯಲ್ಲಿ ಮೂಲನಿವಾಸಿಗಳ ಸ್ಥಿತಿಗತಿ ಏನು? ಜಿಲ್ಲೆಯಲ್ಲಿ 276 ಮೂಲನಿವಾಸಿಗಳು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಾಜ್ಯ ಸರ್ಕಾರ ಕೃಷಿಕರಿಗೆ ಶೂನ್ಯ ಬಡ್ಡಿದರದಲ್ಲಿ ೩ ಲಕ್ಷ ರೂ. ಹಾಗೂ ಶೇ. ೩ ಬಡ್ಡಿದರದಲ್ಲಿ ೩ ರಿಂದ ೧೦ ಲಕ್ಷ ರೂ. ಸಾಲ, ಸಬ್ಸಿಡಿ ದರದಲ್ಲಿ ಕೃಷಿ ಯಂತ್ರೋಪಕರಣ, ಪ್ರತಿ ಲೀ. ಹಾಲಿಗೆ ೫ ರೂ. ಪ್ರೋತ್ಸಾಹ ಧನ ಸೇರಿದಂತೆ ಕೃಷಿಕರ ಕಲ್ಯಾಣಕ್ಕಾಗಿ ಹತ್ತಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಕೃಷಿಕರು ಇದರ ಸದುಪಯೋಗ ಪಡೆದು, ಕೃಷಿಗೆ ಹೆಚ್ಚಿನ ಒತ್ತನ್ನು ನೀಡುವ ಮೂಲಕ ಕೃಷಿಯನ್ನು ಲಾಭದಾಯಕ ಉದ್ಯಮವಾಗಿ ಪರಿವರ್ತಿಸಬೇಕು ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೃಷಿ ಉತ್ಸವ ವ್ಯವಸ್ಥಾಪನಾ ಸಮಿತಿ ಕುಂದಾಪುರ, ಆರ್ .ಕೆ ಸಂಜೀವ ರಾವ್ ಜನ್ಮ ಶತಾಬ್ದಿ ಸಂಸ್ಮರಣಾ ಸಮಿತಿ, ಸಂದೀಪನ್ ಆಂಗ್ಲ ಮಾಧ್ಯಮ ಶಾಲೆ ಕಂಬದಕೋಣೆ, ಪ್ರಗತಿ ಬಂಧು ಸ್ವಸಹಾಯ ಒಕ್ಕೂಟ ಇವರ ಸಂಯುಕ್ತ ಆಶ್ರಯದಲಿ, ಡಾ. ಡಿ. ವೀರೇಂದ್ರ ಹಗ್ಡೆಯವರ ಮಾರ್ಗದರ್ಶನದಲ್ಲಿ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಶಬರಿಮಲೆ ಯಾತ್ರೆಗೆ ತಮಿಳುನಾಡಿನಿಂದ ಕಾಲ್ನಡಿಗೆಯಲ್ಲಿ ಹೊರಟಿದ್ದ ಅಯ್ಯಪ್ಪಸ್ವಾಮಿ ವೃತಧಾರಿಯೋರ್ವರಿಗೆ ಬೀದಿ ನಾಯಿಯೊಂದು ಸಾಥ್ ನೀಡಿದ್ದು 600ಕಿ.ಮೀ ಅವರೊಂದಿಗೆ ತೆರಳಿ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ವೃತಧಾರಿ ಪ್ರವಾಸದಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಾಲಯದಿಂದ ಉಡುಪಿ ಮಾರ್ಗವಾಗಿ ಶಬರಿಮಲೆ ಯಾತ್ರೆಗೆ ಕಾಲ್ನಡಿಗೆ ಮೂಲಕ ಪಾದಯಾತ್ರೆಯಲ್ಲಿ ತೆರಳುತ್ತಿದ್ದ ನವೀನ್ ಅವರನ್ನು ನಾಯಿ ಹಿಂಬಾಲಿಸುತ್ತಿದ್ದಾಗ ಈ ಮಾಹಿತಿ ತಿಳಿದಿದೆ. ಕೇರಳದ ಕೋಳಿಕೋಡ್ ಮೂಲದವರಾಗಿರುವ ನವೀನ್ ಡಿಸೆಂಬರ್ ೭ರಂದು ಯಾತ್ರೆ ಆರಂಭಿಸಿದ್ದಾರೆ. ಆರಂಭದಲ್ಲಿ ಹಲವು ಬೀದಿ ನಾಯಿಗಳಂತೆ ಇದು ಹಿಂಬಾಲಿಸುತ್ತಿರಬೇಕು ಎಂದುಕೊಂಡು ಅದನ್ನ ಓಡಿಸಲು ಹಲವು ಬಾರಿ ಪ್ರಯತ್ನಿಸಿದ್ದಾರೆ. ಆದರೆ ಅವರು ಅನೇಕ ಸಲ ಪ್ರಯತ್ನಿಸಿದರೂ ಅದು ಹೋಗಿಲ್ಲ. ಕುಂದಾಪ್ರ ಡಾಟ್ ಕಾಂ ಸುದ್ದಿ. 600 ಕಿಲೋ ಮೀಟರ್ ಪಾದಯಾತ್ರೆಯಲ್ಲಿ ಅವರು 17 ದಿನಗಳ ಕಾಲ ಕಾಲ್ನಡಿಗೆ ಮುಗಿಸಿದ್ದು, ಶಬರಿಮಲೆಯಿಂದ ಹಿಂತಿರುಗುತ್ತಿದ್ದಾಗ ಸಹ ಶ್ವಾನ ಇವರನ್ನ ಹಿಂಬಾಲಿಸಿದೆ. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಇವರ ಪಕ್ಕದಲ್ಲೇ ಕುಳಿತುಕೊಂಡಿದೆ. ಕೇರಳ ರಾಜ್ಯ ವಿದ್ಯುತ್ ಮಂಡಳಿ ಉದ್ಯೋಗಿಯಾಗಿರುವ ನವೀನ್, ಈ ಶ್ವಾನದ ಬಗ್ಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುವ ತಾಲೂಕಿನ ಕೆರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿಸ್ಮಯಕಾರಿ ಮೂಡುಗಲ್ಲು ಶ್ರೀ ಕೇಶವನಾಥೇಶ್ವರ ದೇವಳದಲ್ಲಿ ಎಳ್ಳು ಅಮವಾಸ್ಯೆಯ ಪ್ರಯುಕ್ತ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿದವು. ದಟ್ಟ ಕಾನನದ ನಡುವೆ ಸುಮಾರು ಐವತ್ತು ಅಡಿಗಳಷ್ಟು ದೂರದ ಕಡುಗಲ್ಲು ಗುಹೆಯಲ್ಲಿನ ಶ್ರೀ ಕೇಶವನಾಥ ಕ್ಷೇತ್ರದಲ್ಲಿ ಎಳ್ಳು ಅಮಾವಾಸ್ಯೆಯಂದು ದೇವರಿಗೆ ವಿಶೇಷ ಪೂಜೆ, ಬೆಳಿಗ್ಗೆಯಿಂದ ಸಂಜೆಯತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.  ನೂರಾರು ಭಕ್ತರು ದೇವರ ದರ್ಶನ ಪಡೆದು ಪುನೀತರಾದರು. ಮಧ್ಯಾಹ್ನ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು. ಕೆರಾಡಿಯ ಶಶಿಧರ ಮಿತ್ರವೃಂದ ನೇತೃತ್ವದಲ್ಲಿ ದೇವಳಕ್ಕೆ ಆಗಮಿಸುವ ಭಕ್ತಾದಿಗಳಿಗಾಗಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇವಳದ ಅರ್ಚಕ ರಾಘವೇಂದ್ರ ಕುಂಜತ್ತಾಯ ಹಾಗೂ ಶಶಿಧರ ಮಿತ್ರವೃಂದದ ಸಂಚಾಲಕ ದಿವ್ಯಾಧರ ಶೆಟ್ಟಿ ಕೆರಾಡಿ ಮತ್ತವರ ತಂಡದಿಂದ ಸಕಲ ವ್ಯವಸ್ಥೆ ಮಾಡಲಾಗಿತ್ತು. ► ಮೂಡುಗಲ್ಲು: ವಿಸ್ಮಯಕಾರಿ ಗುಹಾಂತರ ಕೇಶವನಾಥ ದೇವಾಲಯ – http://kundapraa.com/?p=1522 ► ಬೆಳ್ಕಲ್ ಗೋವಿಂದ ತೀರ್ಥದಲ್ಲಿ ಎಳ್ಳಮಾವಾಸ್ಯೆ ಸಂಭ್ರಮ. ಅಸಂಖ್ಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಮದೂರು ಸಮೀಪದ ಬೆಳ್ಕಲ್ ಗೋವಿಂದ ತೀರ್ಥಕ್ಷೇತ್ರದಲ್ಲಿ ಎಳ್ಳು ಅಮಾವಾಸ್ಯೆಯ ಪ್ರಯುಕ್ತ ಸಾವಿರಾರು ಭಕ್ತರಿಂದ ಪವಿತ್ರ ತೀರ್ಥಸ್ನಾನ ನಡೆಯಿತು. ವರ್ಷಕ್ಕೊಮ್ಮೆ ಸಾವಿರಾರು ಭಕ್ತರು ಕಠಿಣ ಹಾದಿಯನ್ನು ಕ್ರಮಿಸಿ ಎತ್ತರದಿಂದ ಬೀಳುವ ನೀರಿಗೆ ತಲೆಯೊಡ್ಡಿ ಗೋವಿಂದನ ನಾಮಸ್ಮರಣೆಗೈಯುತ್ತಾ ನೀರಿಗೆ ಮೈಯೊಡ್ಡಿ ಪುನೀತರಾಗುತ್ತಾರೆ. ಸುಮಾರು ಎರಡೂವರೆ ಸಾವಿರ ಫೀಟ್ ಎತ್ತರದಿಂದ ಹರಿದು ಬರುವ ನೀರು ಗೋವಿಂದ ತೀರ್ಥವಾಗಿ ಧರೆಗಿಳಿಯುವಲ್ಲಿ ನೆರೆದ ಸಹಸ್ರಾರು ಭಕ್ತರು ತೀರ್ಥಸ್ನಾನ ಮಾಡುತ್ತಾರೆ. ಕೊಡಚಾದ್ರಿಯ ತಪ್ಪಲಿನಲ್ಲಿರುವ ಗೋವಿಂದ ತೀರ್ಥಕ್ಕೆ ನಡೆದೇ ಸಾಗಬೇಕಾದುದರಿಂದ ಎಳ್ಳಾಮವಾಸ್ಯೆ ದಿನ ಕಾಡು ದಾರಿಯಲ್ಲಿ ಗುಡ್ಡ ಹತ್ತಿ ಸಾಗುವವರಿಗೆ ಮಜ್ಜಿಗೆ ವ್ಯವಸ್ಥೆ, ಮಧ್ಯಾಹ್ನ ಅನ್ನಸಂತರ್ಪಣೆ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು. ಗುಡ್ಡದ ಕೆಳಗಿರುವ ಗಣಪತಿ ಗೋವಿಂದ ಕೊಟಿಲಿಂಗೇಶ್ವರ ದೇವರಿಗೆ ನಮಸ್ಕರಿಸಿ ಪ್ರಸಾದ ಸ್ವೀಕಸಿದರು. ►  ವಿಸ್ಮಯಕಾರಿ ತಾಣ ‘ಬೆಳ್ಕಲ್ ತೀರ್ಥ’ – http://kundapraa.com/?p=2297

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯಡ್ತರೆ ನಾಕಟ್ಟೆಯಲ್ಲಿ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿಯ ಜೀಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಪೂರ್ವಭಾವಿಯಾಗಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ, ವೇ.ಮೂ ಕೇಂಜ ಶ್ರೀಧರ ತಂತ್ರಿ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಎರಡು ದಿನಗಳ ಕಾಲ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಅಘೋರ ಹೋಮ, ವನದುರ್ಗಾ ಯಾಗ, ಸುದರ್ಶನ ಯಾಗ, ಅಘೋರ ಬಲಿ ವಿಧಾನ, ಪ್ರತಿಗತಿ ಸಂಖ್ಯೆಯಲ್ಲಿ ತುಲಾಯಾಗ, ವಿಷ್ಣು ಚಕ್ರಾಬ್ಜ್ಯ ಪೂಜೆ, ಹಾಗೂ ದೈವ ಸಾನಿಧ್ಯ ಶುದ್ಧಿ, ಮಧ್ನಾಹ್ನ ಅನ್ನ ಪ್ರಸಾದ ವಿತರಣೆ ಕಾರ್ಯಕ್ರಮಗಳು ಜರುಗಿದವು. ಧಾರ್ಮಿಕ ಕಾರ್ಯಕ್ರಮದಲ್ಲಿ ದೈವಸ್ಥಾನವನ್ನು ನಂಬಿದ ಭಕ್ತರಾದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಬೈಂದೂರು ಗ್ರಾಮ ಪಂಚಾಯತ್ ಸದಸ್ಯ ವೆಂಕ್ಟ ಪೂಜಾರಿ, ಮಹೇಶ ಪೂಜಾರಿ ಮುಂಬೈ, ಸ್ಥಳೀಯರಾದ ಜಗನ್ನಾಥ ಶೆಟ್ಟಿ ನಾಕಟ್ಟೆ, ಆನಂದ ಶೆಟ್ಟಿ, ನಾಕಟ್ಟೆ, ನಾಗಯ್ಯ ಶೆಟ್ಟಿ ನಾಕಟ್ಟೆ ಸೇರಿದಂತೆ ಗರಡಿಯ ಭಕ್ತರು ಪಾಲ್ಗೊಂಡಿದ್ದರು. ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ…

Read More