ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಯಡ್ತರೆ ನಾಕಟ್ಟೆಯಲ್ಲಿ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿಯ ಜೀಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಪೂರ್ವಭಾವಿಯಾಗಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ, ವೇ.ಮೂ ಕೇಂಜ ಶ್ರೀಧರ ತಂತ್ರಿ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ಎರಡು ದಿನಗಳ ಕಾಲ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಅಘೋರ ಹೋಮ, ವನದುರ್ಗಾ ಯಾಗ, ಸುದರ್ಶನ ಯಾಗ, ಅಘೋರ ಬಲಿ ವಿಧಾನ, ಪ್ರತಿಗತಿ ಸಂಖ್ಯೆಯಲ್ಲಿ ತುಲಾಯಾಗ, ವಿಷ್ಣು ಚಕ್ರಾಬ್ಜ್ಯ ಪೂಜೆ, ಹಾಗೂ ದೈವ ಸಾನಿಧ್ಯ ಶುದ್ಧಿ, ಮಧ್ನಾಹ್ನ ಅನ್ನ ಪ್ರಸಾದ ವಿತರಣೆ ಕಾರ್ಯಕ್ರಮಗಳು ಜರುಗಿದವು.
ಧಾರ್ಮಿಕ ಕಾರ್ಯಕ್ರಮದಲ್ಲಿ ದೈವಸ್ಥಾನವನ್ನು ನಂಬಿದ ಭಕ್ತರಾದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಬೈಂದೂರು ಗ್ರಾಮ ಪಂಚಾಯತ್ ಸದಸ್ಯ ವೆಂಕ್ಟ ಪೂಜಾರಿ, ಮಹೇಶ ಪೂಜಾರಿ ಮುಂಬೈ, ಸ್ಥಳೀಯರಾದ ಜಗನ್ನಾಥ ಶೆಟ್ಟಿ ನಾಕಟ್ಟೆ, ಆನಂದ ಶೆಟ್ಟಿ, ನಾಕಟ್ಟೆ, ನಾಗಯ್ಯ ಶೆಟ್ಟಿ ನಾಕಟ್ಟೆ ಸೇರಿದಂತೆ ಗರಡಿಯ ಭಕ್ತರು ಪಾಲ್ಗೊಂಡಿದ್ದರು. ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅವರು ಸ್ಥಳಕ್ಕೆ ಭೇಟಿ ನೀಡಿ ಜೀಣೋದ್ಧಾರ ಕಾರ್ಯಕ್ಕೆ ನೆರವು ನೀಡುವ ಭರವಸೆಯಿತ್ತರು.
For more Photos click here – https://www.facebook.com/KotiChennayyaPanjurli