Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಇತ್ತೀಚೆಗೆ ನಡೆಸಿದ ಇಂಜಿನಿಯರಿಂಗ್ ಪದವಿ ಪರೀಕ್ಷೆಯ ಆಟೊಮೊಬೈಲ್ ವಿಭಾಗದಲ್ಲಿ ಬೆಂಗಳೂರಿನ ಆಕ್ಸ್‌ಫರ್ಡ್ ತಾಂತ್ರಿಕ ಮಹಾವಿದ್ಯಾಲಯದ ಸಂದೇಶ್ ಎ. ತೋಳಾರ್ ದ್ವಿತೀಯ ರ‍್ಯಾಂಕ್ ಗಳಿಸಿರುವರು. ಅವರು ನಾವುಂದದ ಆನಂದ ಆರ್. ತೋಳಾರ್, ಗಿರಿಜಾ ಎ. ತೋಳಾರ್ ದಂಪತಿಯ ಪುತ್ರ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಇಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಕಾರ್ಯನಿರ್ವಹಣಾಧಿಕಾರಿ ಎಸ್. ಯೋಗೇಶ್ವರ ಮತ್ತು ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎಚ್. ಕೃಷ್ಣಮೂರ್ತಿ ಸಚಿವ ದಂಪತಿಗಳನ್ನು ಸ್ವಾಗತಿಸಿ ಗೌರವಿಸಿದರು. ಕಂಬಳ ಉಳಿವಿಗೆ ಮನವಿ: ಸ್ಥಳೀಯ ಬಿಜೆಪಿ ಮುಖಂಡರು ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೂ ಸುಗ್ರೀವಾಜ್ಞೆ ಹೊರಡಿಸಿ ಕಾನೂನು ಅನುಮತಿ ದೊರಕಿಸಿಕೊಂಡುವಂತೆ ಸಚಿವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮಾಜಿ ಜಿಲ್ಲಾಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ಯಶಪಾಲ್ ಸುವರ್ಣ, ಬೈಂದೂರು ಮಂಡಲ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ಯುವ ಮೋರ್ಚ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ವಕೀಲರಾದ ಕೆ.ಬಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇನ್ಸಿಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಅವರು ಡಿಸೆಂಬರ್ ತಿಂಗಳಿನಲ್ಲಿ ನಡೆಸಿದ ಸಿ.ಎ-ಸಿಪಿಟಿ ಪರೀಕ್ಷೆಯಲ್ಲಿ ಬಸ್ರೂರಿನ ಎಮ್.ಸತೀಶ ಭಟ್ ಪ್ರಥಮ ಪ್ರಯತ್ನದಲ್ಲೇ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಪ್ರಸ್ತುತ ಕುಂದಾಪುರದ ಭಂಡಾರ್‌ಕಾರ‍್ಸ್ ಕಾಲೇಜಿನಲ್ಲಿ ದ್ವಿತೀಯ ಬಿ.ಕಾಂ. ಪದವಿಯ ವಿದ್ಯಾರ್ಥಿಯಾಗಿರುವ ಇವರು ಸತೀಶ ಭಟ್ ಮತ್ತು ಸ್ನೇಹ ಭಟ್ ಇವರ ಪುತ್ರ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರೀ ವಿನಾಯಕ ಯುವಕ ಸಂಘ ರಿ., ನೆಂಪು ಮತ್ತು ಭಟ್ ಬಳಗದ ವತಿಯಿಂದ ನೆಂಪು ಗ್ರಾಮಸ್ಥರ ಸಹಯೋಗದಲ್ಲಿ ನೆಂಪು ಶ್ರೀ ವಿನಾಯಕ ದೇವಸ್ಥಾನದ ೨೫ನೇ ವರ್ಷದ ಪ್ರತಿಷ್ಠಾ ವರ್ಧಂತಿಯ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ದೇವಳದ ಆಡಳಿತ ಮೊಕ್ತೇಸರ ರಾಮಕೃಷ್ಣ ಭಟ್ ನೆಂಪು ಶುಭ ಹಾರೈಸಿದರು. ಶ್ರೀ ವಿನಾಯಕ ಯುವಕ ಸಂಘದ ಅಧ್ಯಕ್ಷರಾದ ಸಂತೋಷ ಮಂಗಲ್ಸನಕಟ್ಟೆ, ಗೌರವಾಧ್ಯಕ್ಷರಾದ ಸುಕುಮಾರ ಶಾರಾಳ, ಉಪಾಧ್ಯಕ್ಷರಾದ ಪ್ರಶಾಂತ ಮಂಗಲ್ಸನಕಟ್ಟೆ, ಹರೀಶ ಆಚಾರ‍್ಯ ಹೆರ್ಜಾಡಿ, ಜೊತೆ ಕಾರ್ಯದರ್ಶಿ ರಾಜೇಂದ್ರ ಹರ್ಜಿಮನೆ, ನೆಂಪು ಫ್ರೆಂಡ್ಸ್ ಅಧ್ಯಕ್ಷರಾದ ರಾಘವೇಂದ್ರ ನೆಂಪು, ಉಪನ್ಯಾಸಕ ಮಂಜುನಾಥ ಚಂದನ್ ನೀರ್‌ಕೊಡ್ಲು, ಭಟ್ ಬಳಗದ ವೆಂಕಟರಾಮ್ ಭಟ್, ಪ್ರಶಾಂತ್ ಭಟ್ ಮತ್ತಿತ್ತರು ಉಪಸ್ಥಿತರಿದ್ದರು. ಬೆಳಿಗ್ಗೆ ೮ ಗಂಟೆಯಿಂದ ಮಧ್ಯಾಹ್ನ ೨ ಗಂಟೆಯ ತನಕ ದೇವಳ ಪರಿಸರ, ಕೆರೆ ಹಾಗೂ ಸ್ಥಳೀಯ ಅಂಗನವಾಡಿ ಪರಿಸರವನ್ನು ಸ್ವಚ್ಚಗೊಳಿಸಲಾಯಿತು.

Read More

ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ. ಬೈಂದೂರು: ಬೈಂದೂರು ಗ್ರಾಮೀಣ ಹಾಗೂ ಹಿಂದೂಳಿದ ಪ್ರದೇಶವೆಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಕಾಲಘಟ್ಟದಲ್ಲಿ ಅಲ್ಲಿನ ಸಾಂಸ್ಕೃತಿಕ ಶ್ರಿಮಂತಿಕೆಯನ್ನು ಪ್ರದರ್ಶಿಸಲು ಎಪ್ಪತ್ತರ ದಶಕದಲ್ಲಿ ಬೈಂದೂರಿನ ಪ್ರಾತಿನಿಧಿಕ ಕಲಾಸಂಸ್ಥೆಯಾಗಿ ಜನ್ಮತಳೆದ ಲಾವಣ್ಯ, ಕಲೆಗಾಗಿ ಕಲೆ ಎಂಬ ಸಿದ್ಧಾಂತಕ್ಕೆ ಬದ್ಧರಾಗಿ, ನಿರಂತರವಾಗಿ ರಂಗಪ್ರಜ್ಞೆಯನ್ನು ಮೂಡಿಸುತ್ತಾ ಬೆಳೆದು ನಲವತ್ತನೇ ವಸಂತಕ್ಕೆ ಕಾಲಿರಿಸಿದೆ. 1977ರಲ್ಲಿ ಹವ್ಯಾಸಿ ಯುವ ಕಲಾವಿದರಾಗಿದ್ದ ಬಿ. ಗಣೇಶ್ ಕಾರಂತ್, ಯು. ಶ್ರೀನಿವಾಸ ಪ್ರಭು, ಬಿ. ಕೃಷ್ಣ ಅಡಿಗ, ರಾಮ ಟೈಲರ್, ಅನಿಲ್ ಕುಮಾರ್, ಆರ್.ಡಿ. ಟೈಲರ್, ವಿ. ಆರ್ ಬಾಲಚಂದ್ರ, ಉಮೇಶ್ ಕುಮಾರ್, ದಿ ಮೋಹನ್ ನಾಯಕ್, ದಿ. ರತ್ನಾಕರ್ ಆಚಾರ್ ಮುಂತಾದವರು ಸೇರಿ ಆರಂಭಿಸಿದ ’ಲಾವಣ್ಯ’ ಎಂಬ ಕಲಾಸಂಸ್ಥೆ ನಿರಂತರವಾಗಿ ಚಟುವಟಿಕೆಯಲ್ಲಿ ತೊಡಗಿಕೊಂಡು ರಂಗಭೂಮಿಯ ಕಂಪು ಪಸರಿಸುತ್ತಿದೆ. ಆರಂಭದ ದಿನಗಳಲ್ಲಿಯೇ ಬೈಂದೂರಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ’ರೊಟ್ಟಿ ಋಣ’ ನಾಟಕವನ್ನು ಪ್ರದರ್ಶಿಸಿ ಪ್ರಥಮ ಸ್ಥಾನದ ಪಾರಿತೋಷಕ ಹಾಗೂ ಇತರ ಮೂರು ಪಾರಿತೋಷಕ ಪಡೆದ ಹೆಗ್ಗಳಿಕೆ…

Read More

ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಕುಂದಾಪುರದ ಇತಿಹಾಸದಲ್ಲೇ ಪ್ರಪ್ರಥಮವಾಗಿ ಮನೆ, ಶಾಲೆ, ದೇವಸ್ಥಾನಗಳು, ಸಭಾ ಮಂದಿರಗಳು ಹಾಗೂ ಸಾರ್ವಜನಿಕ ಸ್ಥಳದಲ್ಲಿ ಒಂದೇ ದಿನ ಐದುಸಾವಿರಕ್ಕೂ ಹೆಚ್ಚು ರಂಗೋಲಿ ರಚನೆ ಮಾಡುವ ಮೂಲಕ ಕುಂದಾಪುರದ ರಂಗೋಲಿ ಪ್ರಿಯರು ದಾಖಲೆಯನ್ನೇ ನಿರ್ಮಿಸಿದ್ದಾರೆ. ಈ ನಡುವೆ ರಾಜ್ಯಮಟ್ಟದ ರಂಗೋಲಿ ಸ್ಪರ್ಧೆಯು ಕುಂದಾಪುರದ ಶ್ರೀ ವೆಂಕಟರಮಣ ಆಂಗ್ಲಮಾಧ್ಯಮ ಶಾಲಾ ವಠಾರದಲ್ಲಿ ನಡೆದು ಬಹಳ ಆಕರ್ಷಣೆ ಪಡೆಯಿತು. ನೂರಾರು ಮಂದಿ ವಿದ್ಯಾರ್ಥಿಗಳು , ಹಾಗೂ ಹಿರಿಯರು ಪೈಪೋಟಿಯಲ್ಲಿ ರಂಗೋಲಿ ರಚಿಸುವ ಮೂಲಕ ರಂಗೋಲಿಯ ವೈವಿಧ್ಯಮಯ ಚಿತ್ರಣದ ಪ್ರದರ್ಶನ ನೀಡಿದರು. ಕುಂದಾಪುರದ ಬಹುತೇಕ ರಸ್ತೆ ಬದಿಯಲ್ಲಿರುವ ಮನೆಗಳಲ್ಲಿ ಮುಂಜಾನೆಯಿಂದಲೇ ಗೃಹಿಣಿಯರು ಮಕ್ಕಳು ರಂಗೋಲಿ ರಚಿಸಿದ್ದು ರಂಗೋಲಿ ಉತ್ಸವಕ್ಕೆ ಸ್ಫೂರ್ತಿ ತುಂಬಿದರು. ಕುಂದಾಪುರದ ಶ್ರೀ ವೆಂಕಟರಮಣ ದೇವಸ್ಥಾನದ ರಸ್ತೆ, ಚಿಕ್ಕನ್‌ಸಾಲ್ ರಸ್ತೆ , ರಾಮ ಮಂದಿರ ರಸ್ತೆ ಖಾರ್ವಿಕೇರಿ ಮದ್ದುಗುಡ್ಡೆ ಈಸ್ಟ್ ಬ್ಲಾಕ್ ರಸ್ತೆ, ವೆಸ್ಟ್ ಬ್ಲಾಕ್ ರಸ್ತೆ , ಬಡಾಕೆರೆ, ಕುಂದೇಶ್ವರ ದೇವಸ್ಥಾನದ ರಸ್ತೆ , ಸಲೀಂ ಆಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸ್ವಾಮಿ ವಿವೇಕಾನಂದರ ೧೫೪ನೇ ಜನ್ಮದಿನಾಚರಣೆಯ ಅಂಗವಾಗಿ ಜ.೨೮ರಂದು ಬೈಂದೂರಿನಲ್ಲಿ ಸಮರ್ಥ ಭಾರತ ಸಂಘಟನೆ ಹಮ್ಮಿಕೊಂಡಿರುವ ವಿವೇಕ ಪರ್ವ ಸಾರ್ವಜನಿಕ ಸಮಾರಂಭಕ್ಕೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಬೈಂದೂರು ಪ್ರಖಂಡ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ವಿಹಿಂಪ ಬೈಂದೂರು ಪ್ರಖಂಡದ ಅಧ್ಯಕ್ಷ ಶ್ರೀಧರ ಬಿಜೂರು ಹೇಳಿದರು. ಬೈಂದೂರಿನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಉತ್ತಮನಾಗು ಉಪಕಾರಿಯಾಗು ಎಂಬ ಸಂದೇಶದಡಿಯಲ್ಲಿ ಸಮರ್ಥ ಭಾರತ ಬೈಂದೂರು ಹಮ್ಮಿಕೊಂಡಿರುವ ವಿವೇಕ ಪರ್ವ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕರ್ನಾಟಕ ದಕ್ಷಿಣದ ಸಹಸಂಘಚಾಲಕ ಡಾ. ವಾಮನ ಪೈ, ಚಿತ್ರನಟ ಉಪೇಂದ್ರ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮೊದಲಾದವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಆರಂಭಕ್ಕೂ ಮುನ್ನ ಯಡ್ತರೆ ಬೈಪಾಸ್‌ನಿಂದ ಬೈಂದೂರು ಗಾಂಧಿ ಮೈದಾನದ ತನಕ ಬೃಹತ್ ಶೋಭಾಯಾತ್ರೆ ಜರುಗಲಿದೆ. ಈ ಎಲ್ಲಾ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಸಂಘಟನೆಯ ಕಾರ್ಯಕರ್ತರು ಸ್ವಪ್ರೇರಣೆಯಿಂದ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುವಂತೆ ವಿನಂತಿಸಿಕೊಂಡರು. ಪತ್ರಿಕಾಗೋಷ್ಠಿಯಲ್ಲಿ ವಿಹಿಂಪ ಬೈಂದೂರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಸುಳ್ಯದ ರಂಗಮನೆ ರಿ. ಸಾಂಸ್ಕೃತಿಕ ಕಲಾ ಕೇಂದ್ರವು ಕೊಡಮಾಡುವ 2017ರ ರಂಗಮನೆ ಪ್ರಶಸ್ತಿಯನ್ನು ಪ್ರಸಿದ್ಧ ರಂಗ ಶಿಕ್ಷಕ, ರಂಗವಿಮರ್ಶಕ, ನಾಟಕಕಾರ ಹಾಗೂ ಪ್ರಕಾಶಕರಾದ ಕೆ. ವಿ. ಅಕ್ಷರ ಅವರಿಗೆ ನೀಡಲಾಗುವುದೆಂದು ರಂಗ ನಿರ್ದೇಶಕ, ರಂಗಮನೆ ರೂವಾರಿ ಜೀವನ್‌ರಾಂ ಸುಳ್ಯ ತಿಳಿಸಿದ್ದಾರೆ. ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರಾದ ಕೆ.ವಿ.ಸುಬ್ಬಣ್ಣರವರ ಪುತ್ರರಾದ ಅಕ್ಷರ ಅವರು ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ಪದವಿ ಹಾಗೂ ಅಮೇರಿಕಾದ ಲೀಡ್ಸ್ ವಿಶ್ವ ವಿದ್ಯಾಲಯದ ರಂಗಶಾಲೆಯಿಂದ ಸ್ನಾತಕೋತ್ತರ ಎಂ.ಎ ಪದವಿಯನ್ನು ಪಡೆದವರು. ನೀನಾಸಂ ರಂಗಶಿಕ್ಷಣ ಕೇಂದ್ರದ ರಂಗಶಿಕ್ಷಕರಾಗಿ, ನಿರ್ದೇಶಕರಾಗಿ, ನೂರಾರು ರಂಗಪ್ರತಿಭೆಗಳನ್ನು ನಾಡಿಗೆ ನೀಡಿದವರು. ಕನ್ನಡದ ಪ್ರಸಿದ್ಧ ಪುಸ್ತಕ ಪ್ರಕಾಶನ ಅಕ್ಷರ ಪ್ರಕಾಶನದ ಮೂಲಕ ಅನೇಕ ಅಮೂಲ್ಯ ಪುಸ್ತಕಗಳನ್ನು ಹೊರತಂದವರು. ಸ್ವತಃ ನಾಟಕಕಾರರಾಗಿ, ಸಾಹಿತ್ಯ, ರಂಗಭೂಮಿ, ಸಿನಿಮಾ, ಸಂಸ್ಕೃತಿ ಹಾಗೂ ಅನುವಾದಕ್ಕೆ ಸಂಬಂಧಿಸಿದಂತೆ 30ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದವರು. ನೀನಾಸಂ ಬಳಗ, ನೀನಾಸಂ ತಿರುಗಾಟ ಮುಂತಾದ ತಂಡಕ್ಕೆ ಸ್ಮಶಾನ, ಕುರುಕ್ಷೇತ್ರ, ಅಹಲ್ಯಾ, ನೀಲಿ ಕುದುರೆ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬ್ಯಾಂಕುಗಳು ಗ್ರಾಹಕರ ಅನುಕೂಲಕ್ಕಾಗಿ ವಿನೂತನವಾದ ತಂತ್ರಜ್ಞಾನಗಳನ್ನು ಬಳಕೆಗೆ ತರುತ್ತಲೇ ಇವೆ. ಇದರಿಂದ ವೇಗದ ಬ್ಯಾಂಕಿಂಗ್ ವ್ಯವಹಾರ ಸರಳವಾಗಿ ಸಾಧ್ಯವಾಗುತ್ತದೆ. ಗ್ರಾಹಕರು ಈ ನಿಟ್ಟಿನಲ್ಲಿ ಅರಿವನ್ನು ಪಡೆದುಕೊಳ್ಳಬೇಕು ಎಂದು ವಾರಂಬಳ್ಳಿ ಕೆನರಾ ಬ್ಯಾಂಕಿನ ಅಧಿಕಾರಿ ಮನಿಷ್ ಹೇಳಿದರು. ಅವರು ಇತ್ತೀಚೆಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ನಡೆದ ನಗದು ರಹಿತ ವ್ಯವಹಾರ ಮತ್ತು ಮೊಬೈಲ್ ಬ್ಯಾಂಕಿಂಗ್ ಬಗೆಗೆ ಮಾಹಿತಿ ನೀಡುವ ಕಾರ‍್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಗಂಗೊಳ್ಳಿ ಕೆನರಾ ಬ್ಯಾಂಕಿನ ಅಧಿಕಾರಿ ಜಿ.ವಿ.ಅಶೋಕ್ ಮಾತನಾಡಿ ನಗದು ರಹಿತ ವ್ಯವಹಾರ ಇಂದಿನ ಅದ್ಯತೆಯಾಗಿದೆ.. ಬ್ಯಾಂಕಿನಿಂದ ದೊರೆಯುವ ಉತ್ತಮ ಸೌಲಭ್ಯಗಳನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು. ಸರಸ್ವತಿ ವಿದ್ಯಾಲಯದ ಪ್ರಾಂಶುಪಾಲೆ ಕವಿತಾ ಎಮ್ ಸಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಸುಜಯೀಂದ್ರ ಹಂದೆ ಸ್ವಾಗತಿಸಿ ನಿರೂಪಿಸಿದರು. ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕೋಟೇಶ್ವರ ಸಮೀಪದ ಕಟ್ಕೆರೆಯ ಯುವಶಕ್ತಿ ಯುವಕ ಮಂಡಲ(ರಿ)ಯ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಗಣೇಶ ಶೆಟ್ಟಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಪ್ರವೀಣಕುಮಾರ್ ಶೆಟ್ಟಿ, ಉಪಾಧ್ಯಕ್ಷರಾಗಿ ರಾಘವೇಂದ್ರ ಸ್ವಾಮಿ, ಸುಧಾಕರ ಕಟ್ಕೆರೆ, ಶಂಕರ ಕಟ್ಕೆರೆ, ಕಾರ್ಯದರ್ಶಿಯಾಗಿ ಸಂತೋಷ ಪೂಜಾರಿ, ಜತೆ ಕಾರ್ಯದರ್ಶಿಯಾಗಿ ರಮೇಶ್ ಕಟ್ಕೆರೆ, ಕೋಶಾಧಿಕಾರಿಯಾಗಿ ದಯಾನಂದ ಶೆಟ್ಟಿ, ಜತೆ ಕೋಶಾಧಿಕಾರಿಯಾಗಿ ಪ್ರಸಾದ ಕಟ್ಕೆರೆ, ಕ್ರೀಡಾ ಕಾರ್ಯದರ್ಶಿಯಾಗಿ ಯೋಗೀಶ ಕಟ್ಕೆರೆ, ಜತೆ ಕ್ರೀಡಾ ಕಾರ್ಯದರ್ಶಿಯಾಗಿ ಪ್ರದೀಪ ಕಟ್ಕೆರೆ ಪದಾಧಿಕಾರಿಗಳಾಗಿ ಆಯ್ಕೆಯಾದರು.

Read More