Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಸ. ಹಿ. ಪ್ರಾ ಶಾಲೆ ತಗ್ಗರ್ಸೆಯಲ್ಲಿ ರಾಷ್ಟ್ರೀಯ ಆವಿಷ್ಕಾರ್ ಅಭಿಯಾನ ಕಾರ್ಯಕ್ರಮ ಜರುಗಿತು. ತಾಲೂಕು ಪಂಚಾಯತ್ ಸದಸ್ಯೆ ಮಾಲಿನಿ ಕೆ. ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಪ್ರಭಾಕರ ಗಾಣಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯೆ ಭವಾನಿ ಗಾಣಿಗ, ಸಿಆರ್‌ಪಿ ದಿನಕರ್, ಹಾಗೂ ಎಸ್‌ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಧ್ಯಾಯ ತಿಮ್ಮಪ್ಪ ಗಾಣಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದ ನೋಡೆಲ್ ಶಿಕ್ಷಕಿ ಸಂಗೀತ ಸ್ವಾಗತಿಸಿ, ಸಾರಿಕಾ ವಂದಿಸಿದರು. ಸಹಶಿಕ್ಷಕಿ ಜ್ಯೋತಿ ಎಚ್ ನಿರೂಪಿಸಿದರು. ಸಹಶಿಕ್ಷಕಿಯರಾದ ಭಾಗೀರಥಿ ಎಲ್ ಹಾಗೂ ಅಂಬಾಬಾಯಿ, ಗೌರವ ಶಿಕ್ಷಕಿ ಸರಸ್ವತಿ ಸಹಕರಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಶಿರೂರು: ಜೆ.ಸಿ.ಐ ಶಿರೂರು ಇದರ ವತಿಯಿಂದ ಡಾ.ರಾಮ ಮನೋಹರ್ ಲೋಹಿಯಾ ಆರೋಗ್ಯ ಜೀವನ ಸಂಸ್ಥಾನ್ ಅಕ್ಯೂಪ್ರೆಶರ್ ಪೈನಿಂಗ್ ಮತ್ತು ರೀಸರ್ಚ್ ಸೆಂಟರ್ ರಾಜಸ್ಥಾನ ಸಂಸ್ಥೆಯ ಸಹಭಾಗಿತ್ವದಲ್ಲಿ ಉಚಿತ ಅಕ್ಯೂಪ್ರಶರ್ ಮತ್ತು ಸುಜೋಕ್ ತೆರಪಿ ಚಿಕಿತ್ಸಾ ಶಿಬಿರ ಶಿರೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.ಉದ್ಯಮಿ ನಾಗಶ್ರೀ ಧತ್ತಿನಿದಿ ಪ್ರತಿಷ್ಠಾನ ಟ್ರಸ್ಟಿ ಮಂಜುನಾಥ ಬಿಲ್ಲವ ಮುಂಬ್ಯೆ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ಮಾತನಾಡಿ ಜೆ.ಸಿ.ಐ ಸಂಸ್ಥೆ ಇಂತಹ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸುವುದರಿಂದ ಸಾಕಷ್ಟು ಜನರಿಗೆ ಅನುಕೂಲವಾಗುತ್ತದೆ. ಇಂತಹ ಉತ್ತಮ ಕಾರ್ಯಗಳು ನಿರಂತರವಾಗಿ ನಡೆಯಲಿ ಸಾರ್ವಜನಿಕರು ಇದರ ಉಪಯೋಗ ಪಡೆಯುವಂತಾಗಲಿ ಎಂದರು. ಶಿರೂರು ಜೆ.ಸಿ.ಐ ಅಧ್ಯಕ್ಷ ಅರುಣ ಕುಮಾರ್ ಶಿರೂರು ಅಧ್ಯಕ್ಷತೆ ವಹಿಸಿದ್ದರು.ಈ ಸಂಧರ್ಭದಲ್ಲಿ ಪ್ರಧಾನ ಪ್ರಾಯೋಜಕರಾದ ಗುತ್ತಿಗೆದಾರ ಕ್ಲೆಮೆಂಟ್ ರೋಡ್ರಿಗಸ್‌ರವರನ್ನು ಸಮ್ಮಾನಿಸಲಾಯಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಂಗಭೂಮಿ ಮಾನವ ಸಂಬಂಧಗಳನ್ನು ಗಟ್ಟಿಗೊಳಿಸುವುದಲ್ಲದೇ ಬದುಕಿಗೆ ಅಗತ್ಯವಾದ ಉತ್ತಮ ಮೌಲ್ಯಗಳನ್ನು ನೀಡುತ್ತದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಬಟವಾಡಿ ಹೇಳಿದರು. ಅವರು ಲಾವಣ್ಯ ರಿ. ಬೈಂದೂರು ಆಶ್ರಯದಲ್ಲಿ ೪೦ ಸಂಭ್ರಮದ ಅಂಗವಾಗಿ ಜರುಗುತ್ತಿರುವ ರಂಗ ಲಾವಣ್ಯ – ಕಲಾಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಲಾವಿದರಾದ ಚಂದ್ರ ಬಂಕೇಶ್ವರ್, ಸುಬ್ರಹ್ಮಣ್ಯ ಜಿ. ಉಪ್ಪುಂದ, ದಿನೇಶ್ ಪ್ರಭು ಉಪ್ಪುಂದ, ದುರ್ಗಾ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ಲಾವಣ್ಯದ ಸ್ಥಾಪಕ ಸದಸ್ಯ ಅನಿಲ್‌ಕುಮಾರ್ ಶ್ಯಾನುಭೋಗ್ ಅಧ್ಯಕ್ಷತೆ ವಹಿಸಿದ್ದರು. ಡಾ. ಪ್ರಕಾಶ್ ಕೊಡಂಚ ಶುಭಶಂಸನೆಗೈದರು. ಉದ್ಯಮಿ ಮೀರಾನ್ ಸಾಹೇಬ್, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಸಂಚಾಲಕ ಗಣೇಶ್ ಮಯ್ಯ ಉಪ್ಪುಂದ, ಲಾವಣ್ಯ ಬೈಂದೂರು ಅಧ್ಯಕ್ಷ ಗಿರೀಶ್ ಬೈಂದೂರು, ಉತ್ಸವ ಸಮಿತಿ ಅಧ್ಯಕ್ಷ ಸದಾಶಿವ ಡಿ. ಪಡುವರಿ, ಕಾರ್ಯದರ್ಶಿ ನಾರಾಯಣ ಕೆ ಮೊದಲಾದವರು ಉಪಸ್ಥಿತರಿದ್ದರು. ಲಾವಣ್ಯದ ಗೌರವಾಧ್ಯಕ್ಷ ಶ್ರೀನಿವಾಸ ಪ್ರಭು ಸ್ವಾಗತಿಸಿದರು. ಕಾರ್ಯದರ್ಶಿ ಮೋಹನ ಕಾರಂತ್ ವಂದಿಸಿದರು. ದಯಾನಂದ ಪಿ. ಕಾರ್ಯಕ್ರಮ ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಹಲವು ತಿರುವು ತಿರುಳುಗಳನ್ನು ಕಂಡ ರಂಗಭೂಮಿ ಲಾವಣ್ಯದಂತಹ ಸಂಸ್ಥೆಗಳಿಂದಾಗಿ ವಿಶಿಷ್ಟವಾಗಿ ಗುರುತಿಸಿಕೊಂಡಿದೆ. ಜನರ ಅಭಿಮಾನದ ಹೊಸ ಲಾವಣ್ಯ ಚಿರನೂತನವಾಗಲಿ ಎಂದು ಉಡುಪಿ ಟೀಚರ‍್ಸ್ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕ ಕೆ.ಸಿ. ರಾಜೇಶ್ ಹೇಳಿದರು. ಅವರು ಲಾವಣ್ಯ ರಿ. ಬೈಂದೂರು ಆಶ್ರಯದಲ್ಲಿ ೪೦ ಸಂಭ್ರಮದ ಅಂಗವಾಗಿ ಜರುಗುತ್ತಿರುವ ರಂಗ ಲಾವಣ್ಯ – ಕಲಾಮಹೋತ್ಸವ ಕಾರ್ಯಕ್ರಮದಲ್ಲಿ ಶುಭಶಂಸನೆಗೈದರು. ಲಾವಣ್ಯದ ಸ್ಥಾಪಕಾಧ್ಯಕ್ಷ ಯು ಶ್ರೀನಿವಾಸ ಪ್ರಭು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ರಾಜೇಂದ್ರ ಹೆಜ್ಜಾಲು, ರಾಹುಲ್ ಹೊಳ್ಳ, ಈಶ್ವರ ನಾಯ್ಕ್ ಭಟ್ಕಳ, ಮಹಮ್ಮದ್ ಇರ್ಷಾದ್ ಸಾಹೇಬ್, ಆರ್.ಡಿ. ಟೈಲರ್, ಪ್ರೀಯದರ್ಶಿನಿ ಕಮಲೇಶ್ ಬೆಸ್ಕೂರು ಮೊದಲಾದವರು ಉತ್ಸವ ಸಮಿತಿ ಅಧ್ಯಕ್ಷ ಸದಾಶಿವ ಡಿ. ಪಡುವರಿ, ಕಾರ್ಯದರ್ಶಿ ನಾರಾಯಣ ಕೆ. ಉಪಸ್ಥಿತರಿದ್ದರು. ಲಾವಣ್ಯದ ಕಲಾವಿದರುಗಳಾದ ರಾಮಚಂದ್ರ ಹೇನಬೇರು, ದಯಾನಂದ ಪಿ, ಆನಂದ ಗಾಣಿಗ, ಕೃಷ್ಣ ಬಾಳೆಹಿತ್ಲು ಅವರನ್ನು ಸನ್ಮಾನಿಸಲಾಯಿತು. ಲಾವಣ್ಯ ಬೈಂದೂರು ಅಧ್ಯಕ್ಷ ಗಿರೀಶ್ ಬೈಂದೂರು ಸ್ವಾಗತಿಸಿದರು. ಕಾರ್ಯದರ್ಶಿ ಮೋಹನ ಕಾರಂತ್ ವಂದಿಸಿದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರೀ ಬಗಳಾಂಬ ತಾಯಿ ದೇವಸ್ಥಾನದ 15ನೇ ವರ್ಷದ ಪ್ರತಿಷ್ಠಾ ವರ್ಧಂತಿಮಹೋತ್ಸವ, ಚಂಡಿಕಾಯಾಗ ಶ್ರೀ ಗುರುಪರಾಶಕ್ತಿ ಮಠ, ಮರಕಡದ ಶ್ರೀ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮಿಗಳವರ ಅನುಗ್ರಹದೊಂದಿಗೆ ವೇದಮೂರ್ತಿ ಕೆ. ಚಂದ್ರಶೇಖರ ಸೋಮಯಾಜಿಯವರ ನೇತೃತ್ವದಲ್ಲಿ ಫೆ ೦5 ಮತ್ತು ೦6ರಂದು ಜರುಗಲಿದೆ. ಫೆ೦5ರಂದು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ, ಗಣಯಾಗ, ಸತ್ಯನಾರಾಯಣ ಪೂಜೆ, ಗುರು ಸನ್ನಿಧಿಯಲ್ಲಿ ನವಕ ಪ್ರಧಾನ ಕಲಶಾಭಿಷೇಕ, ಮಹಾಪೂಜೆ, ಪರಿವಾರ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ವಾಸ್ತು ಪೂಜೆ, ಬ್ರಹ್ಮಕಲಶ ಸ್ಥಾಪನೆ, ಕಲಾಭಿವೃದ್ಧಿ ಹೋಮ, ಅಧಿವಾಸ ಹೋಮ ಫೆ.೦6ರಂದು ಬೆಳಿಗ್ಗೆ 7ಕ್ಕೆ ಬ್ರಹ್ಮಕಲಶಾಭಿಷೇಕ, ಚಂಡಿಕಾಯಾಗ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನ ಸಂತರ್ಪಣೆ ಸಂಜೆ ೬ಕ್ಕೆ ಕುಂದಾಪುರ ಮದ್ದುಗುಡ್ಡೆಯ ಶ್ರೀ ಮಾಸ್ತಿಯಮ್ಮ ಭಜನಾ ಮಂಡಳಿಯವರಿಂದ ಭಜನೆ, ರಾತ್ರಿ ೮ಕ್ಕೆ ಹೂವಿನ ಪೂಜೆ, ರಂಗ ಪೂಜೆ, ರಾತ್ರಿ ೯ಕ್ಕೆ ಶ್ರೀ ಬಪ್ಪನಾಡು ದಶಾವತಾರ ಯಕ್ಷಗಾನ ಮಂಡಳಿ, ಮೂಲ್ಕಿ ಇವರಿಂದ ಶ್ರೀ ದೇವಿ ಮಹಾತ್ಮೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಕ್ಕಳಲ್ಲಿ ಗಾಳಿಪಟದ ಬಗೆಗೆ ಆಸಕ್ತಿ ಮೂಡಿಸುವುದರೊಂದಿಗೆ, ಸುಂದರ ಕಡಲ ಕಿನಾರೆಯನ್ನು ಜಾಗತಿಕ ಪ್ರವಾಸಿ ತಾಣವನ್ನಾಗಿ ಬೆಳೆಸುವ ಉದ್ದೇಶಕ್ಕಾಗಿ ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆ ಮತ್ತು ಪದವಿ ಪೂರ್ವ ಮಹಾವಿದ್ಯಾಲಯದ ನೇತ್ರತ್ವದಲ್ಲಿ ತಾಲೂಕಿನ ಕೊಟೇಶ್ವರದ ಕಡಲ ಕಿನಾರೆಯಲ್ಲಿ ಫೆಬ್ರವರಿ 5ರ ಭಾನುವಾರ ಅಪರಾಹ್ನ 2:30 ಗಂಟೆಗೆ ವಿದ್ಯಾರ್ಥಿಗಳಿಗಾಗಿ ಗಾಳಿಪಟ ಸ್ಪರ್ಧೆ ಹಾಗೂ ಪ್ರದರ್ಶನದ ಗುರುಕುಲ ಗಾಳಿಪಟ ಉತ್ಸವ ವನ್ನು ನಡೆಯಲಿದೆ. ದಶಮಾನೋತ್ಸವದ ಸಂಭ್ರಮಾಚರಣೆಯಲ್ಲಿರುವ ಬಾಂಡ್ಯ ಎಜುಕೇಶನ್ ಟ್ರಸ್ಟ್ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ಹಲವಾರು ಸಾಂಸ್ಕ್ರತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ವಿಶಿಷ್ಟ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸುತ್ತಿರುವ ಸಂಸ್ಥೆಯು ಸತತ ೩ನೇ ಬಾರಿಗೆ ಗುರುಕುಲ ’ಕೈಟ್ ಫೆಸ್ಟ್ 2017 ಸಾರ್ವಜನಿಕರ ಸಹಕಾರದೊಂದಿಗೆ ಯಶಸ್ವಿಯಾಗಿ ಆಯೋಜಿಸುತ್ತಿದೆ. ಮುಗಿಲಂಗಳದಲ್ಲಿ ಕಾಗದದ ಹಕ್ಕಿಗಳ ಕಲರವ ಹಾಗೂ ಸ್ವದೇಶೀಯ ಸಂಸ್ಕ್ರತಿಯನ್ನು ಪ್ರತಿನಿಧಿಸುವ ಈ ಉತ್ಸವದಲ್ಲಿ ಅಂತರಾಷ್ಟ್ರೀಯ ಮಟ್ಟದ ಗಾಳಿಪಟ ಸ್ಪರ್ಧೆಯಲ್ಲಿ ಹಾಗೂ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆಗೈದ ಟೀಮ್ ಮಂಗಳೂರು ಮತ್ತು ಭಾರತದ ಪ್ರಥಮ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸದಾ ಪ್ರಯೋಗಶೀಲತೆ, ಕ್ರೀಯಾಶೀಲತೆ ಹಾಗೂ ಸೃಜನಶೀಲತೆಯ ಸಾಧ್ಯತೆಗಳನ್ನು ರಂಗಭೂಮಿಯಲ್ಲಿ ಅಳವಡಿಸಿಕೊಳ್ಳುವುದರಿಂದ ರಂಗಕಲೆಗಳು ಜೀವಂತವಾಗಿರುತ್ತದೆ ಎಂದು ಕುಂದಾಪುರ ರಂಗ ಅಧ್ಯಯನ ಕೇಂದ್ರದ ಶಿಕ್ಷಕ ವಿನಾಯಕ ಎಸ್.ಎಂ ಹೇಳಿದರು. ಅವರು ಲಾವಣ್ಯ ರಿ. ಬೈಂದೂರು ಆಶ್ರಯದಲ್ಲಿ ೪೦ ಸಂಭ್ರಮದ ಅಂಗವಾಗಿ ಜರುಗುತ್ತಿರುವ ರಂಗ ಲಾವಣ್ಯ – ಕಲಾಮಹೋತ್ಸವ ಕಾರ್ಯಕ್ರಮದಲ್ಲಿ ಶುಭಶಂಸನೆಗೈದರು. ನಲವತ್ತು ವರ್ಷಗಳನ್ನು ಪೂರೈಸಿರುವ ಲಾವಣ್ಯ ಸಂಸ್ಥೆಯು ರಂಗಕಲೆಯೊಂದಿಗೆ ವೈಚಾರಿಕತೆಯನ್ನು ಜಾಗೃತಿಗೊಳಿಸುತ್ತಾ ಬಂದಿದೆ. ಇದು ಊರಿನ ಪ್ರತಿಯೋರ್ವರು ನಮ್ಮ ಸಂಸ್ಥೆಯು ಎನ್ನುವ ಮಟ್ಟಿಗೆ ಬೆಳೆದು ನಿಂತಿದೆ ಎಂದರು. ಲಾವಣ್ಯದ ಕಲಾವಿದರಾದ ಉದಯ ಕಿಣಿ, ವಿನಾಯಕ ಪ್ರಭು, ಸತ್ಯಪ್ರಸನ್ನ, ನಾಗರಾಜ ತಗ್ಗರ್ಸೆ ಹಾಗೂ ನಾಗಪ್ಪ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ಲಾವಣ್ಯದ ರಿ. ಬೈಂದೂರು ವ್ಯವಸ್ಥಾಪಕ ಗಣೇಶ್ ಕಾರಂತ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಜಯಾನಂದ ಹೋಬಳಿದಾರ್, ಶಿಕ್ಷಕ ಗುರುರಾಜ್ ರಾವ್, ಲಾವಣ್ಯದ ಗೌರವಾಧ್ಯಕ್ಷ ಶ್ರೀನಿವಾಸ ಪ್ರಭು, ಉತ್ಸವ ಸಮಿತಿ ಅಧ್ಯಕ್ಷ ಸದಾಶಿವ ಡಿ. ಪಡುವರಿ, ಕಾರ್ಯದರ್ಶಿ ನಾರಾಯಣ ಕೆ., ಮೊದಲಾದವರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಸಮರ್ಥ ಭಾರತ ಬೈಂದೂರು ಆಶ್ರಯದಲ್ಲಿ ಜರುಗಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 154ನೇ ಜನ್ಮದಿನಾಚರಣೆ ‘ವಿವೇಕ ಪರ್ವ’ ಬೃಹತ್ ಸಾರ್ವಜನಿಕ ಸಮಾರಂಭ ಅದ್ಭುತ ಯಶಸ್ಸು ಕಂಡಿದೆ. ಬೈಂದೂರಿನಲ್ಲಿ ಮೊದಲ ಭಾರಿಗೆ ದೊಡ್ಡ ಸಂಖ್ಯೆಯಲ್ಲಿ ಸೇರಿದ ಜನ ವಿವೇಕಾಂನದರ ಚಿಂತನೆಗಳಿಗೆ ಕಿವಿಯಾದರು. ಬೈಂದೂರು ನಗರ ಕೆಸರಿಮಯ: ಕಾರ್ಯಕ್ರಮಕ್ಕಾಗಿ ಯಡ್ತರೆಯಿಂದ ಬೈಂದೂರು ಪೇಟೆಯ ಬಂಟಿಂಗ್ಸ್, ಬಾವುಟಗಳಿಂದ ಸಂಪೂರ್ವ ಕೆಸರಿಮಯವಾಗಿ ಮಾರ್ಪಟ್ಟಿತ್ತು. ಬೈಂದೂರಿನ ಗಾಂಧಿ ಮೈದಾನದಲ್ಲಿ ಬೃಹತ್ ವೇದಿಕೆಯನ್ನು ಸಿದ್ಧಗೊಳಿಸಿಲಾಗಿತ್ತು. ಎಲ್ಲೆಡೆಯೂ ಭಗವಧ್ವಜ ರಾರಾಜಿಸುತ್ತಿದ್ದವು. 6000 ವಿವೇಕ ಕಂಕಣ – 1500 ವಿವೇಕನಂದ ಭಾವಚಿತ್ರವಿರುವ ಟಿಶರ್ಟ್ ವಿಕ್ರಯ: ಸ್ವಾಮಿ ವಿವೇಕಾನಂದರ ಜನ್ಮದಿನದಿಂದ ಸಮರ್ಥ ಭಾರತ ಬೈಂದೂರು ಉತ್ತಮನಾಗು ಉಪಕಾರಿಯಾಗು ಎಂಬ ಸಂದೇಶವಿರುವ 6000 ವಿವೇಕ ಬ್ಯಾಂಡ್ ಹಾಗೂ 1500 ಟಿಶರ್ಟ್‌ಗಳನ್ನು ಮಾರಟ ಮಾಡಿದೆ. ರಾಜ್ಯದಲ್ಲಿಯೇ ಮೊದಲೆಂಬಂತೆ 6000 ಮಂದಿ ವಿವೇಕ ಕಂಕಣ ತೊಟ್ಟಿದ್ದರು. ವಿವೇಕ ಬ್ಯಾಂಡ್ ಹಾಗೂ ಟಿಶರ್ಟ್ ಮಾರಾಟದಿಂದ ಬರುವ ಲಾಭವನ್ನು ಸಮರ್ಥ ಭಾರತ ಸಂಸ್ಥೆಯು ವಿವಿಧ ಸೇವಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: 1400ವರ್ಷದ ಇತಿಹಾಸ ಇರುವ ಸೇನಾಪುರ ಶ್ರೀ ಮಹಾವಿಷ್ಣು ದೇವಸ್ಥಾನ ನವೀಕೃತ ಶಿಲಾಮಯ ದೇವಸ್ಥಾನ ಪ್ರತಿಷ್ಠಾ ಮಹೋತ್ಸವ ಹಾಗೂ ಬ್ರಹ್ಮ ಕಲಶೋತ್ಸವ ಫೆ.5 ರಿಂದ 8ರ ತನಕ ಸೇನಾಪುರದಲ್ಲಿ ಜರುಗಲಿದೆ. ದೇವಸ್ಥಾನ ಜೀಣೋದ್ಧಾರ ಸಮಿತಿ ಅಧ್ಯಕ್ಷ ಬಿ.ಅರಣು ಕುಮಾರ್ ಶೆಟ್ಟಿ, ದೇವಸ್ಥಾನ ಅರ್ಚಕ ವೆಂಕಟೇಶ ಮಂಜರ ನೇತೃತ್ವದಲ್ಲಿ ಕೋಟ ಲಕ್ಷ್ಮೀನಾರಾಯಣ ಸೋಮಯಾಜಿ ಆಚಾರ್ಯತ್ವದಲ್ಲಿ ಪ್ರತಿಷ್ಠಾ ಮಹೋತ್ಸವ, ಬ್ರಹ್ಮ ಕಲಶೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ‍್ಯಕ್ರಮ ನಡೆಯಲಿದೆ. ಫೆ.5 ರಂದು ಮಧ್ಯಾಹ್ನ 12:35ಕ್ಕೆ ಶ್ರೀ ವಿಷ್ಣುಮೂರ್ತಿ ದೇವರ ಪ್ರತಿಷ್ಠೆ, ಬೆಳಗ್ಗೆ ೯.೩೦ ರಿಂದ ಶ್ರೀ ದೇವರ ರಜತ ಕವಚ, ಹೊರೆಕಾಣಿಕೆ ಶೋಭಾಯಾತ್ರೆ ಚಂಡೆ ವಾದ್ಯಘೋಷ ಜೊತೆ ನಾಡಾ ಗುಡ್ಡೆಯಂಗಡಿ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಿಂದ ಹೊರಡಿಲಿದೆ. ಹೊರೆ ಕಾಣಿಕೆ ಫೆ.೪, ಮತ್ತು ೫ರಂದು ಸ್ವೀಕರಿಸಲಾಗುತ್ತದೆ. ಶ್ರೀ ಹರಿ ವೇದಿಕೆಯಲ್ಲಿ ಸಂಜೆ ೭ಕ್ಕೆ ನಾಡಾಗುಡ್ಡೆಯಂಗಡಿ ಬೆಸ್ಟ್‌ಗೈಸ್ ತಂಡದಿಂದ ನೃತ್ಯ ವೈಭವ ಜರುಗಲಿದೆ. ಫೆ.6, ದೇವತಾ ಪ್ರಾರ್ಥನೆ, ಪ್ರಾಯಶ್ಚಿತ ಹೋಮ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉತ್ತಮ ಸಾಧನೆಗೈದ, ಪ್ರತಿಭಾವಂತ ಜನರ ಒಡನಾಟ ಜೀವನದಲ್ಲಿ ಮುನ್ನಡೆಗೆ ಬಹಳ ಪ್ರೇರಣೆ ನೀಡುತ್ತದೆ ಎನ್ನುವುದಕ್ಕೆ ನಾನೇ ಸಾಕ್ಷಿ. ಉತ್ತಮ ವಾಗ್ಮಿ, ಚಿಂತಕ, ಪತ್ರಕರ್ತ, ಬ್ಯಾಂಕರ್, ಮಾರ್ಗದರ್ಶಕರಾಗಿದ್ದ, ಕೋಣಿ ಮಹಾಬಲೇಶ್ವರ ಕಾರಂತರು ನೀಡಿದ ತರಬೇತಿ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರೊಂದಿಗೆ ಸೇವೆ ಸಲ್ಲಿಸುವ ಸಾಮರ್ಥ್ಯ, ಆತ್ಮವಿಶ್ವಾಸ ಒದಗಿಸಿತು. ಕೋ.ಮ.ಕಾರಂತ ಹೆಸರಲ್ಲಿ ಇಂದು “ಕುಂದಪ್ರಭದಿಂದ ಪ್ರಶಸ್ತಿ ಪಡೆಯುತ್ತಿರುವ ಡಾ.ಹೆಚ್.ಶಾಂತಾರಾಮರು ಮಣಿಪಾಲ, ಉಡುಪಿ, ಕುಂದಾಪುರ ಸೇರಿದಂತೆ ಬಹಳ ಕಡೆ ಶೈಕ್ಷಣಿಕ, ಸಾಮಾಜಿಕ , ಹಾಗೂ ಕಲಾಕ್ಷೇತ್ರಗಳಲ್ಲಿ ಅಭಿವೃದ್ಧಿಯಲ್ಲಿ ಬಹುಮುಖ್ಯ ಪಾತ್ರ ವಹಿಸಿ ೮೯ರ ಹರೆಯದಲ್ಲೂ ಕ್ರಿಯಾಶೀಲರಾಗಿರುವವರು. ಇವರ ಒಡನಾಟದಿಂದ ಸಾವಿರಾರು ಮಂದಿ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ. ಈ ಅಪೂರ್ವ ಸಮಾರಂಭದಿಂದ ವಿದ್ಯಾರ್ಥಿಗಳು ಸ್ಫೂರ್ತಿ ಪ್ರೇರಣೆ ಪಡೆಯಬೇಕು ಎಂದು ಭಾರತ ಸರಕಾರದ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆಯ ನಿವೃತ್ತ ಸಾರ್ವಜನಿಕ ಸಂಪರ್ಕಾಧಿಕಾರಿ ಜಯಪ್ರಕಾಶರಾವ್ ಹೇಳಿದರು. ಕುಂದಪ್ರಭ ಸಂಸ್ಥೆಯ ಆಶ್ರಯದಲ್ಲಿ ಕುಂದಾಪುರದ ಭಂಡಾರ್‌ಕಾರ‍್ಸ್ ಕಾಲೇಜಿನ ವಠಾರದಲ್ಲಿ ನಡೆದ ಕೋ.ಮ.ಕಾರಂತ…

Read More