Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬ್ರಿಟೀಷರು ಬರೆದ ತಿರುಚಿದ ಇತಿಹಾಸ ನಮ್ಮ ದೇಶದ ಪಠ್ಯಕ್ರಮವಾಗಿದೆ. ಆದರೆ ಇನ್ನು ಮುಂದಿನ ಹತ್ತು ವರ್ಷಗಳಲ್ಲಿ ನಮ್ಮ ದೇಶದವರೇ ಬರೆದ ಭವ್ಯ ಇತಿಹಾಸ ನಮ್ಮ ಶಿಕ್ಷಣದಲ್ಲಿ ಪಠ್ಯವಾಗುವ ವಿಶ್ವಾಸವಿದೆ. ಭಾರತೀಯರು ಒಂದು ಕಾಲದಲ್ಲಿ ಬ್ರಿಟೀಷರಿಗೆ ಗುಲಾಮರಾಗಿದ್ದರೂ ಸ್ವಾಭಿಮಾನವನ್ನು ಮರೆತಿರಲಿಲ್ಲ. ಸ್ವಾತಂತ್ರ್ಯ ಬಳಿಕ ಹಿಂದೂಸ್ಥಾನಿಯರು ತಮ್ಮ ತಾಕತ್ತನ್ನು ಮರೆತುಬಿಟ್ಟಿದ್ದಾರೆ. ಇಂದು ಅದನ್ನು ಎಚ್ಚರಿಸುವ ಅಗತ್ಯವಿದೆ ಎಂದು ಅಖಿಲ ಭಾರತ ಇತಿಹಾಸ ಸಂಕಲನ ಯೋಜನೆ ನವದೆಹಲಿಯ ಹರಿಬಾಉ ವಝೆ ಹೇಳಿದರು. ಅವರು ಛತ್ರಪತಿ ಶಿವಾಜಿ ಅಭಿಮಾನಿ ಬಳಗ ಬಸ್ರೂರು ಹಾಗೂ ಭಾರತೀಯ ಇತಿಹಾಸ ಸಂಕಲನ ಸಮಿತಿ ಕರ್ನಾಟಕ ಇದರ ಜಂಟಿ ಆಶ್ರಯದಲ್ಲಿ ಬಸ್ರೂರು ತಿರುಮಲ ವೆಂಕಟರಮಣ ದೇವಸ್ಥಾನದ ಆಜಾದ್ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಬಸ್ರೂರು ಇತಿಹಾಸ ದಿನದ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮ ದೇಶದ ಸಂಸ್ಕೃತಿ ಪ್ರಪಂಚದ ಇತರೇ ದೇಶದ ಸಂಸ್ಕೃತಿಗಿಂತ ಭಿನ್ನವಾದುದು. ಭಾರತ ದೇಶದ ಮೇಲೆ ಇತರರು ದಾಳಿ ಮಾಡಿದ ದಾಖಲೆಗಳಿವೆಯೇ ಹೊರತು, ಭಾರತೀಯರು ಎಂದಿಗೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಟೋಲ್ ಹಣ ಸಂಗ್ರಹ ವಿರುದ್ಧ  ವಿವಿಧ ಸಂಘಟನೆ ಹಾಗೂ ಪಕ್ಷಾತೀತ ಉಡುಪಿ ಜಿಲ್ಲೆ ಬಂದ್ ಕರೆಗೆ ಕುಂದಾಪುರದಲ್ಲಿ ಮಿಶ್ರ ಪ್ರತಿಕ್ರಿಯೆ ದೊರೆಯಿತು.  ಸಾಸ್ತಾನದ ಟೋಲ್ ಬಳಿ, ಕೋಟ ತೆಕ್ಕಟ್ಟೆ ಕುಂದಾಪುರದಲ್ಲಿ ಮಿಶ್ರ ಪ್ರತಿಕ್ರಿಯೆ ದೊರೆತರೇ ಗ್ರಾಮೀಣ ಪ್ರದೇಶದಲ್ಲಿ ಎಂದಿನಂತೆ ಜನಸಂಚಾರವಿತ್ತು. ಖಾಸಗಿ ಬಸ್ ಸೇವೆ ಸಂಪೂರ್ಣ ಸ್ಥಗಿತಗೊಂಡಿದ್ದರೇ, ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳು ಎಂದಿನಂತೆ ಸಂಚರಿಸುತ್ತಿದ್ದವು. ಶೇ.೫ರಷ್ಟು ಮುಚ್ಚಿದ ಅಂಗಡಿ-ಮುಂಗಟ್ಟು. ಶಾಲಾ ಕಾಲೇಜ್ ರಜೆ ಘೋಷಣೆ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಆಟೋ ಸೇವೆಗೆ ಯಾವುದೇ ಅಡಚಣೆ ಆಗಿಲಿಲ್ಲ. ಕುಂದಾಪುರ ನಗರದಲ್ಲಿ ಖಾಸಗಿ ಬಸ್ ಸಂಚಾರ ಇಲ್ಲದ ಕಾರಣ ಗ್ರಾಮೀಣ ಪ್ರದೇಶ ಜನಸಂಚಾರ ಕಡಿಮೆಯಿತ್ತು. ಕುಂದಾಪುರದ ಬ್ಯಾಂಕ್ ಹಾಗೂ ಕಚೇರಿಗಳ ಜನಸಂಖ್ಯೆ ಕಡಿಮೆಯಿದ್ದರೇ; ಕೆಲವು ಹೋಟೆಲ್, ಅಂಗಡಿ ಬಂದ್ ಆಗಿದ್ದವು. ಮತ್ತೆಲ್ಲಾ ಮಾಮೂಲಿನಂತ ಕಾರ‍್ಯ ನಿರ್ವಹಿಸಿತು. ಬಸ್ ಸಂಚಾರವಿಲ್ಲದ್ದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜಿಗೆ ಬರಲಾಗಲಿಲ್ಲ. ಹಾಜರಾತಿ ಕಮ್ಮಿ ಇದ್ದರಿಂದ ರಜೆ ಘೋಷಣೆ ಮಾಡಲಾಯಿತು. ಬೇರೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ರಾಜಕೀಯದಲ್ಲಿ ತಾಳ್ಮೆ ಹಾಗೂ ನಿಷ್ಠೆಗಳು ಇದ್ದಾಗ ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಅವಕಾಶಗಳು ದೊರಕಿದಾಗ ಅಧಿಕಾರದ ವ್ಯಾಪ್ತಿಯಲ್ಲಿ ಜನರ ನಿರೀಕ್ಷೆಗಳನ್ನು ಪೂರೈಸುವವನೆ ನಿಜವಾದ ಜನಪ್ರತಿನಿಧಿಯಾಗುತ್ತಾನೆ ಎನ್ನುವುದನ್ನು ನನ್ನ ಅನುಭವದ ಮಾತುಗಳು ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು. ಇಲ್ಲಿಗೆ ಸಮೀಪದ ಕಟ್‌ಬೇಲ್ತೂರು ಶ್ರೀ ಭದ್ರಮಹಾಕಾಳಿ ದೇವಸ್ಥಾನದ ಮುಂಭಾಗದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿ ನಿಯುಕ್ತಿಗೊಂಡ ಅವರಿಗೆ ಗ್ರಾಮಸ್ಥರು ನೀಡಿದ ’ಹುಟ್ಟೂರ ಸನ್ಮಾನ’ ಸ್ವೀಕರಿಸಿ ಮಾತನಾಡಿದರು. ಆಕಸ್ಮಿಕವಾಗಿ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿದ ತನಗೆ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಆಸ್ಕರ್ ಫೆರ್ನಾಂಡಿಸ್, ಕೆ.ಪ್ರತಾಪ್‌ಚಂದ್ರ ಶೆಟ್ಟಿ, ವೀರಪ್ಪ ಮೊಯಿಲಿ ಮುಂತಾದವರಿಂದ ದೊರಕಿದ ಮಾರ್ಗದರ್ಶನಗಳಿಂದಾಗಿ ರಾಜಕೀಯದಲ್ಲಿ ಈ ಮಟ್ಟದವರೆಗೂ ಬೆಳೆಯಲು ಸಾಧ್ಯವಾಯಿತು. ೪ ಬಾರಿ ಶಾಸಕರನ್ನಾಗಿಸಿದ ಬೈಂದೂರು ಕ್ಷೇತ್ರದ ಮತದಾರರ ಪೂರ್ತಿ ಋಣವನ್ನು ತನ್ನಿಂದ ಖಂಡಿತಾ ತೀರಿಸಲು ಸಾಧ್ಯವಾಗಿಲ್ಲ ಎನ್ನುವ ನೋವು ನನಗಿದೆ. ಶಾಸಕತ್ವದ ಹಿರಿತನದಲ್ಲಿ ಸಚಿವನಾಗಬೇಕು ಎನ್ನುವ ನಿರೀಕ್ಷೆಗಳು ನನ್ನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಸಾರ್ವಜನಿಕ ಬೇಡಿಕೆಗಳನ್ನು ಈಡೇರಿಸದೆ ಕಾಮಗಾರಿ ಅಪೂರ್ಣವಿರುವಾಗಲೇ ಟೋಲ್ ಸಂಗ್ರಹ ಆರಂಭಿಸಿದ್ದಕ್ಕೆ ಮತ್ತು ಉಡುಪಿ ಜಿಲ್ಲಾಧಿಕಾರಿಗಳ ಜನವಿರೋಧಿ ನೀತಿಯನ್ನು ಖಂಡಿಸಿ ನಾನಾ ಸಂಘಟನೆಗಳು ಇಂದು ( ಜ. 13) ಕರೆದಿರುವ ಉಡುಪಿ ಜಿಲ್ಲಾ ಬಂದ್ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಹಾಲು, ಪತ್ರಿಕೆ, ಆ್ಯಂಬುಲೆನ್ಸ್, ವೈದ್ಯಕೀಯ ಸೇವೆಗಳಿಗೆ ಬಂದ್ನಿಂದ ವಿನಾಯಿತಿ ನೀಡಲಾಗಿದೆ. ಹೋರಾಟಗಾರರು ಬಂದ್ಗೆ ಬೆಂಬಲ ನೀಡುವಂತೆ ಅಂಗಡಿಯವರಿಗೆ ತಿಳಿಸಿದ್ದಾರೆ. ಜಿಲ್ಲಾಡಳಿತ ಸೋಮವಾರ ಶಾಲೆಗಳಿಗೆ ರಜೆ ನೀಡಿಲ್ಲ. ಪರಿಸ್ಥಿತಿ ನೋಡಿಧಿಕೊಂಡು ರಜೆ ಕೊಡುವ ಅಧಿಕಾರವನ್ನು ಮುಖ್ಯ ಶಿಕ್ಷಕರಿಗೆ ನೀಡಲಾಗಿದೆ. [quote bgcolor=”#ffffff” bcolor=”#dd3333″ arrow=”yes” align=”right”]ಸರಕಾರಿ ಬಸ್ ಇದೆ ಬೆಳಗ್ಗಿನ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯಗಳು ನಡೆಯುವುಧಿದಿಲ್ಲ. ಬಂದ್ ಹಿನ್ನೆಲೆಯಲ್ಲಿ ಸಂಚಾರ ನಿಲ್ಲಿಸಬೇಕಾದ ಅಗತ್ಯ ಉಂಟಾದಲ್ಲಿ ಅಲ್ಲಿನ ಡಿಪೋ, ಇಲಾಖಾಧಿಕಾರಿ, ಪೊಲೀಸರನ್ನು ಸಂಪರ್ಕಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. – ವಿವೇಕಾನಂದ ಹೆಗಡೆ ವಿಭಾಗೀಯ ನಿಯಂತ್ರಕ, ಕೆಎಸ್ಆರ್ಟಿಸಿ, ಮಂಗಳೂರು[/quote] 144 ಸೆಕ್ಷನ್ ಜಾರಿ ಹೆಜಮಾಡಿ ಮತ್ತು ಸಾಸ್ತಾನ ಟೋಲ್ಗೇಟ್ ಪ್ರದೇಶದಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹೆಮ್ಮಾಡಿಯಲ್ಲಿ ನಡೆದ ಅಪಘಾತದಲ್ಲಿ ಅಕಾಲಿಕ ಮರಣವನ್ನಪ್ಪಿದ ಚಿತ್ರಕಲಾ ಶಿಕ್ಷಕ ಭೋಜು ಹಾಂಡ ಅವರ ಸ್ಮರಣೆಯಲ್ಲಿ ಕೋಟೇಶ್ವರ ಪವವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು. ಭೋಜು ಹಾಂಡರ ವಿದ್ಯಾರ್ಥಿಗಳು, ಸ್ನೇಹಿತರು ಹಾಗೂ ಅಭಿಮಾನಿಗಳು ಮೇಣದ ಬತ್ತಿಗಳನ್ನು ಬೆಳಗಿ, ಪೋಟೋಗೆ ಪುಪ್ಪನಮನ ಸಲ್ಲಿಸಿದರು. ಜಿ.ಪಂ ಸದಸ್ಯೆ ಶ್ರೀಲತಾ ಶೆಟ್ಟಿ, ಕೋಟೇಶ್ವರ ಗ್ರಾ.ಪಂ ಅಧ್ಯಕ್ಷೆ ಜಾನಕಿ ಬಿಲ್ಲವ, ಭೋಜು ಹಾಂಡರ ಆಪ್ತಿ ಶಂಕರ ಮಡಿವಾಳ, ಸಂಘ ಸಂಸ್ಥೆಗಳ ಪ್ರಮುಖರಾದ ಡಾ. ಭಾಸ್ಕರ್ ಶೆಟ್ಟಿ, ಶೇಖರ ಕಲ್ಮಾಡಿ, ಗಣೇಶ್ ಕೊರಗ, ಸುಬ್ರಹ್ಮಣ್ಯ ಶೆಟ್ಟಿ, ಪ್ರವೀಣ್ ಹೆಗ್ಡೆ ಮೊದಲಾದವರು ಮಾತನಾಡಿದರು. ಕೋಟೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೃಷ್ಣಾನಂದ ಕೆ., ಸೇರಿದಂತೆ ಶಿಕ್ಷಕರು ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಭೋಜಹಾಂಡರ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಅಶ್ರುತರ್ಪಣ ಮಿಡಿದರು. ಶಿಕ್ಷಕ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ಬಳ್ಕೂರು, ಪ್ರವೀಣ್ ಹಾಗೂ ಸುಧೀರ್ ಸಹಕರಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಫೆ. ೨೩ ರಂದು ಕಿರಿಮಂಜೇಶ್ವರದ ಅಗಸ್ತ್ಯೇಶ್ವರ ದೇವಾಲಯದ ಆವರಣದಲ್ಲಿ ನಡೆಯುವ ಕುಂದಾಪುರ ತಾಲೂಕು ೧೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ವಿಶ್ರಾಂತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಸೋಮವಾರ ಬಿಡುಗಡೆ ಮಾಡಿ, ಪರಿಷತ್ ಘಟಕದ ಯುವ ಮತ್ತು ಉತ್ಸಾಹಿ ಅಧ್ಯಕ್ಷ ಮತ್ತು ಪದಾಧಿಕಾರಿಗಳ ನೇತೃತ್ವದಲ್ಲಿ ಕಿರಿಮಂಜೇಶ್ವರ ಪರಿಸರದ ಸಾಹಿತ್ಯಾಭಿಮಾನಿಗಳ ಸಹಕಾರದೊಂದಿಗೆ ಸಮ್ಮೇಳನವು ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು. ತಾಲೂಕು ಕಸಾಪ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಬೈಂದೂರು ಸಮ್ಮೇಳನದ ರೂಪುರೇಷೆಗಳ ಮಾಹಿತಿ ನೀಡಿ, ಯಶಸ್ಸಿಗೆ ಎಲ್ಲ ಹೋಬಳಿ ಘಟಕ ಮತ್ತು ಸ್ಥಳೀಯರ ನೆರವು ಕೋರಿದರು. ಕಸಾಪ ಗೌರವ ಕಾರ್ಯದರ್ಶಿ ಡಾ. ಕಿಶೋರಕುಮಾರ ಶೆಟ್ಟಿ ಸ್ವಾಗತಿಸಿ, ವಂದಿಸಿದರು. ಗೌ. ಕೋಶಾಧ್ಯಕ್ಷ ರವೀಂದ್ರ ಎಚ್, ಅಗಸ್ತ್ಯೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಪರಶುರಾಮ್, ಸ್ಥಳೀಯ ಪ್ರಮುಖರಾದ ಕೆ. ಸದಾಶಿವ ಶ್ಯಾನುಭಾಗ್, ಎಸ್. ಎಸ್. ಭಗವತಿ, ಕೆ. ಬಾಲಕೃಷ್ಣ ಶ್ಯಾನುಭೋಗ್, ಕೆ. ವಾಸುದೇವ ಕಾರಂತ, ಬೈಂದೂರು ಹೋಬಳಿ ಕಸಾಪ ಅಧ್ಯಕ್ಷ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜೇಸಿಐ ಕುಂದಾಪುರ ಪ್ರಾಯೋಜಿತ ಜೇಸಿಐ ಕುಂದಾಪುರ ಚರಿಷ್ಮಾ ಘಟಕದ ಪದಗ್ರಹಣ ಸಮಾರಂಭವು ಇತೀಚೆಗೆ ಸುಮೇದಾ ಹೋಟೆಲ್ ಸಹನಾ ಕನ್ವೆನ್ಷನ್ ಸೆಂಟರ್ ಕುಂದಾಪುರದಲ್ಲಿ ಜರುಗಿತು. ನಾಯಕತ್ವ ನಿರ್ಮಾಣಕ್ಕೆ ವ್ಯಕ್ತಿತ್ವ ವಿಕಸನಕ್ಕೆ ಈ ಪ್ರಪಂಚಕ್ಕೆ ಇವರುವ ಅದ್ಬುತ ಸಂಸ್ಥೆ ಜೇಸಿ ಸಂಸ್ಥೆ. ಇದರಲ್ಲಿ ಮಹಿಳೆಯರಿಗೆ ನಾಯಕರಾಗಲ ಬೇಕಾದಷ್ಟು ಅವಕಾಶವಿದೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನಾಯಕೀಯರಾಗಿ ಮಹಿಳೆಯರು ಮೂಡಿ ಬಂದಿದ್ದಾರೆ ಕಳೆದ ವರ್ಷದ ಪ್ರೇರಣೆಯಂತೆ ಈ ವರ್ಷದಲ್ಲಿ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಹಾಗೂ ವಲಯ ಆಡಳಿತ ಮಂಡಳಿ ಹಾಗೂ ಘಟಕದಲ್ಲಿ ಮಹಿಳಾ ಜೇಸಿಗಳೂ ಬಂದಿದ್ದಾರೆ ಎಂದು ಜೇಸಿಐ ಸೆನೆಟರ್ ಸದಾನಂದ ನಾವುಡ ಹೇಳಿದರು. ಪೂರ್ವ ರಾಷ್ಠೀಯ ಉಪಾಧ್ಯಕ್ಷ ಜೇಸಿಐ ಇಂಡಿಯಾ ಮಾನಾಡಿದರು. ಜೇಸಿಐ ಕುಂದಾಪುರದ ಅಧ್ಯಕ್ಷೆ ಜೆ.ಎಫ್.ಪಿ ಅಕ್ಷತಾ ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ನೂತನ ಅಧ್ಯಕ್ಷೆ ಗೀತಾಂಜಲಿ ಆರ್ ನಾಯಕ್ ಯವರಿಗೆ ಅಧಿಕಾರ ಹಸ್ತಾಂತರಿಸಲಾಯಿತು ಜೆ.ಎಫ್.ಪಿ ಸಂತೋಷ್ ಜಿ, ವಲಯ ಅಧ್ಯಕ್ಷರು ಜೆ.ಎಫ್.ಎಮ್ ಮರಿಯಪ್ಪ, ವಲಯ ಉಪಾಧ್ಯಕ್ಷರು ಜೆ.ಎಪ್.ಎಮ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಪ್ರಸಿದ್ಧ ಚಲನಚಿತ್ರ ನಟ ರಮೇಶ ಭಟ್ ಅವರು ಬುಧವಾರ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿದರು. ಶಾಲೆಯ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಅವರು ಶಾಲೆಯ ಅಭಿವೃದ್ಧಿ ಹಾಗೂ ಶೈಕ್ಷಣಿಕ ಸಾಧನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಚಲನಚಿತ್ರ ರಂಗದ ಬಗ್ಗೆ ಅನುಭವವನ್ನು ಹಂಚಿಕೊಂಡ ಅವರು ಶಾಲೆಯ ಉಪನ್ಯಾಸಕರು, ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು. ಚಲನಚಿತ್ರ ರಂಗದಲ್ಲಿ ಹೆಸರು ಪಡೆದುಕೊಂಡ ನಾನು ಉಡುಪಿ ಜಿಲ್ಲೆಯವನು ಎಂದು ಯಾರಿಗೂ ತಿಳಿದಿಲ್ಲ. ಈ ಪ್ರದೇಶಕ್ಕೆ ಬಂದು ಎಲ್ಲರೊಂದಿಗೆ ಸೇರಿ ನಮ್ಮ ಹಿಂದಿನ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವುದೇ ಒಂದು ಸಂತೋಷ. ಈ ಭಾಗದ ಜನರು ನೀಡುವ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರಋಣಿ ಎಂದು ಅವರು ಹೇಳಿದರು. ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ., ನಿವೃತ್ತ ಪ್ರಾಂಶುಪಾಲ ಆರ್.ಎನ್.ರೇವಣ್‌ಕರ್, ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ವಾಮನದಾಸ ಭಟ್, ಕಾಲೇಜಿನ ಉಪನ್ಯಾಸಕರು, ಸಹಶಿಕ್ಷಕರು, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಅಂತರ್-ಕಾಲೇಜು ಮಟ್ಟದ ಪುರುಷರ ಸಾಫ್ಟ್‌ಬಾಲ್ ಪಂದ್ಯಾಟದಲ್ಲಿ ಆತಿಥೇಯ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ತಂಡ ದ್ವಿತೀಯ ಸ್ಥಾನದೊಂದಿಗೆ ರಜತ ಪದಕವನ್ನು ಪಡೆದುಕೊಂಡಿದೆ. ವಿಜೇತ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ. ಎಮ್. ಸುಕುಮಾರ್ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲ ಪ್ರೊ. ದೋಮ ಚಂದ್ರಶೇಖರ್, ದೈಹಿಕ ಶಿಕ್ಷಣ ನಿರ್ದೇಶಕ ರಂಜಿತ್ ಟಿ. ಎನ್.ರವರು ಮತ್ತು ವಾಣಿಜ್ಯ ಉಪನ್ಯಾಸಕ ಹರೀಶ್ ಬಿ. ಅಭಿನಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಹೆಮ್ಮಾಡಿ ಬೈಪಾಸ್ ಬಳಿ ಖಾಸಗಿ ಬಸ್ ಹಾಗೂ ಬೈಕ್ ನಡುವಿನ ಅಪಘಾತದಲ್ಲಿ ಬೈಕ್ ಸವಾರ ಕೋಟೇಶ್ವರ ಸರಕಾರಿ ಪದವಿ ಪೂರ್ವ ಕಾಲೇಜಿನ ಚಿತ್ರಕಲಾ ಶಿಕ್ಷಕ ಭೋಜು ಹಾಂಡ (58) ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಬೈಕಿನ  ಹಿಂಬದಿಯಲ್ಲಿ ಕುಳಿತಿದ್ದ ಹುಡುಗಿ ಅರ್ಪಿತಾ (11) ಸಣ್ಣಪುಟ್ಟ ಗಾಯಗಳಾಗಿದ್ದ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಿಗ್ಗೆ ಯೋಗ ತರಬೇತಿ ನಡೆಸುವುದಕ್ಕಾಗಿ ಹೆಮ್ಮಾಡಿಯಿಂದ ಕಟ್‌ಬೆಲ್ತೂರಿಗೆ ತೆರಳಲು ಹೆಮ್ಮಾಡಿ ಬೈಪಾಸ್ ದಾಟುತ್ತಿದ್ದ ಸಂದರ್ಭದಲ್ಲಿ ಮಂಗಳೂರು ಕಡೆಗೆ ಸಾಗುತ್ತಿದ್ದ ಬಸ್ ಬೈಕಿಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಭೋಜ ಹಾಂಡ ಅವರಿಗೆ ಗಂಭೀರ ಗಾಯಗಳಾಗಿದ್ದು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಯೋಗ ತರಬೇತಿಗಾಗಿ ಅವರೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದ ಅರ್ಪಿತಾಗೂ ಸಣ್ಣಪುಟ್ಟ ಗಾಯಗಳಾಗಿದ್ದು ಕುಂದಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಂದಾಪುರ ಸಂಚಾರಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಂದಾಪುರ ಅತ್ಯುತ್ತಮ ಚಿತ್ರಕಲಾವಿದರಾಗಿದ್ದ…

Read More