ಟೋಲ್ ಸಂಗ್ರಹ ಖಂಡಿಸಿ ಉಡುಪಿ ಜಿಲ್ಲೆ ಬಂದ್. 144 ಸೆಕ್ಷನ್ ಜಾರಿ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಸಾರ್ವಜನಿಕ ಬೇಡಿಕೆಗಳನ್ನು ಈಡೇರಿಸದೆ ಕಾಮಗಾರಿ ಅಪೂರ್ಣವಿರುವಾಗಲೇ ಟೋಲ್ ಸಂಗ್ರಹ ಆರಂಭಿಸಿದ್ದಕ್ಕೆ ಮತ್ತು ಉಡುಪಿ ಜಿಲ್ಲಾಧಿಕಾರಿಗಳ ಜನವಿರೋಧಿ ನೀತಿಯನ್ನು ಖಂಡಿಸಿ ನಾನಾ ಸಂಘಟನೆಗಳು ಇಂದು ( ಜ. 13) ಕರೆದಿರುವ ಉಡುಪಿ ಜಿಲ್ಲಾ ಬಂದ್ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಹಾಲು, ಪತ್ರಿಕೆ, ಆ್ಯಂಬುಲೆನ್ಸ್, ವೈದ್ಯಕೀಯ ಸೇವೆಗಳಿಗೆ ಬಂದ್ನಿಂದ ವಿನಾಯಿತಿ ನೀಡಲಾಗಿದೆ. ಹೋರಾಟಗಾರರು ಬಂದ್ಗೆ ಬೆಂಬಲ ನೀಡುವಂತೆ ಅಂಗಡಿಯವರಿಗೆ ತಿಳಿಸಿದ್ದಾರೆ. ಜಿಲ್ಲಾಡಳಿತ ಸೋಮವಾರ ಶಾಲೆಗಳಿಗೆ ರಜೆ ನೀಡಿಲ್ಲ. ಪರಿಸ್ಥಿತಿ ನೋಡಿಧಿಕೊಂಡು ರಜೆ ಕೊಡುವ ಅಧಿಕಾರವನ್ನು ಮುಖ್ಯ ಶಿಕ್ಷಕರಿಗೆ ನೀಡಲಾಗಿದೆ.

Call us

Click Here

[quote bgcolor=”#ffffff” bcolor=”#dd3333″ arrow=”yes” align=”right”]ಸರಕಾರಿ ಬಸ್ ಇದೆ
ಬೆಳಗ್ಗಿನ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯಗಳು ನಡೆಯುವುಧಿದಿಲ್ಲ. ಬಂದ್ ಹಿನ್ನೆಲೆಯಲ್ಲಿ ಸಂಚಾರ ನಿಲ್ಲಿಸಬೇಕಾದ ಅಗತ್ಯ ಉಂಟಾದಲ್ಲಿ ಅಲ್ಲಿನ ಡಿಪೋ, ಇಲಾಖಾಧಿಕಾರಿ, ಪೊಲೀಸರನ್ನು ಸಂಪರ್ಕಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. – ವಿವೇಕಾನಂದ ಹೆಗಡೆ ವಿಭಾಗೀಯ ನಿಯಂತ್ರಕ, ಕೆಎಸ್ಆರ್ಟಿಸಿ, ಮಂಗಳೂರು[/quote]

144 ಸೆಕ್ಷನ್ ಜಾರಿ
ಹೆಜಮಾಡಿ ಮತ್ತು ಸಾಸ್ತಾನ ಟೋಲ್ಗೇಟ್ ಪ್ರದೇಶದಲ್ಲಿ ಈ ಹಿಂದೆಯೇ 144 ಸೆಕ್ಷನ್ ಅನ್ನು ಜಿಲ್ಲಾಧಿಕಾರಿಗಳು ಜಾರಿಗೊಳಿಸಿದ್ದರು. ಫೆ. 12ರಂದು ಇನ್ನೊಂದು ಅಧಿಸೂಚನೆ ಹೊರಡಿಸಿರುವ ಅಪರ ಜಿಲ್ಲಾ ದಂಡಾಧಿಕಾರಿಗಳು ಉಡುಪಿ ತಾಲೂಕಿನಾದ್ಯಂತ, ಉಡುಪಿ ನಗರಸಭೆ ವ್ಯಾಪ್ತಿ ಹಾಗೂ ತೆಕ್ಕಟ್ಟೆಯಿಂದ ಶಿರೂರು ರಾಷ್ಟ್ರೀಯ ಹೆದ್ದಾರಿ 66ರ ಇಕ್ಕೆಲ 2 ಕಿ.ಮೀ. ವ್ಯಾಪ್ತಿಯ ತನಕ ಫೆ. 12ರ ಮಧ್ಯರಾತ್ರಿ 11 ಗಂಟೆಯಿಂದ ಫೆ. 13ರ ಮಧ್ಯರಾತ್ರಿ 12 ಗಂಟೆಯವರೆಗೆ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

ಜಿಲ್ಲಾ ದಂಡಾಧಿಕಾರಿಗಳ ಆದೇಶ ಹೊರಬೀಳುತ್ತಿದ್ದಂತೆಯೇ ಆಯಾ ಭಾಗದ ಜನರಿಗೆ ತಿಳಿಯಪಡಿಸಲು ಪೊಲೀಸರು ತಮ್ಮ ವಾಹನಗಳ ಮೈಕ್ನಲ್ಲಿ ಸೆಕ್ಷನ್ 144 ಇರುವ ಬಗ್ಗೆ ಮಾಹಿತಿ ನೀಡಿದರು. ಯಾವುದೇ ಸಭೆ, ಸಮಾರಂಭ, ಮೆರವಣಿಗೆಗೆ ಅವಕಾಶವಿಲ್ಲ ಎಂದು ಪ್ರಕಟಿಸಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ

ಜಾಥಾ ನಡೆಸುವಂತಿಲ್ಲ:
ಎಎಸ್ಪಿ ಸೆಕ್ಷನ್ 144 ಜಾರಿ ಇರುವ ಪ್ರದೇಶದಲ್ಲಿ ಪ್ರತಿಭಟನೆ, ಜಾಥಾ ನಡೆಸಿದರೆ ಕಠಿನ ಕಾನೂನು ಕ್ರಮ ಕೈಗೊಳ್ಳಲೇಬೇಕಾಗುತ್ತದೆ ಎಂದು ಹೆಚ್ಚುವರಿ ಎಸ್ಪಿ ಎನ್. ವಿಷ್ಣುವರ್ಧನ ಅವರು ತಿಳಿಸಿದ್ದಾರೆ. ಅಗತ್ಯ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಅನ್ನು ಹಾಕಲಾಗಿದೆ. ಇಬ್ಬರು ಡಿವೈಎಸ್ಪಿ, 6 ಇನ್ಸ್ಪೆಕ್ಟರ್, 28 ಪಿಎಸ್ಐ ಮತ್ತು 400ಕ್ಕೂ ಅಧಿಕ ಪೊಲೀಸ್ ಸಿಬಂದಿಯವರನ್ನು ನಿಯೋಜಿಸಲಾಗಿದೆ. ಪಡುಬಿದ್ರಿ ಹೆಜಮಾಡಿ ಮತ್ತು ಕೋಟ ಸಾಸ್ತಾನದಲ್ಲಿ ಹೆಚ್ಚಿನ ಬಂದೋಬಸ್ತ್ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಎಎಸ್ಪಿ ತಿಳಿಸಿದ್ದಾರೆ.

Click here

Click here

Click here

Click Here

Call us

Call us

ಬಂದ್ಗೆ ಸಂಘ ಸಂಸ್ಥೆಗಳ ಬೆಂಬಲ
ಕೆನರಾ ಬಸ್ ಚಾಲಕ ಮಾಲಕರ ಸಂಘ, ಸಿಟಿ ಬಸ್ ಚಾಲಕ ಮಾಲಕ ಸಂಘ, ಜಿಲ್ಲಾ ಟ್ಯಾಕ್ಸಿಮೆನ್ ಮತ್ತು ಮ್ಯಾಕ್ಸಿಕ್ಯಾಬ್ ಚಾಲಕ ಮಾಲಕ ಸಂಘ, ಲಾರಿ ಮಾಲಕರ ಸಂಘ, ವರ್ತಕರ ಸಂಘ, ಆಲ್ ಕಾಲೇಜ್ ಸ್ಟೂಡೆಂಟ್ ಅಸೋಸಿಯೇಶನ್, ಎಬಿವಿಪಿ ಮತ್ತು ಎನ್ಎಸ್ಯುಐ, ಉಡುಪಿ ಜಿಲ್ಲಾ ಡಾಕ್ಟರ್ ಪೋರಮ್ ಅಸೋಸಿಯೇಶನ್, ಜೈ ಭಾರ್ಗವ ಬಳಗ, ಕರ್ನಾಟಕ ರಕ್ಷಣಾ ವೇದಿಕೆ, ಕುಲಾಲ ಸಂಘ, ವಿಶ್ವಕರ್ಮ ಒಕ್ಕೂಟ,ದಲಿತ ಸಮಾಜ ಸಂಘ,ಮುಂಡಾಲ ಸಮಾಜ, ದೇವಾಡಿಗ ಮಹಾಮಂಡಲ, ದ್ರಾವಿಡ ಬ್ರಾಹ್ಮಣ ಸಭಾ ಮತ್ತಿತರ ಸಂಘಟನೆಗಳು ಬಂದ್ ಬೆಂಬಲ ಸೂಚಿಸಿವೆ. ಕುಂದಾಪ್ರ ಡಾಟ್ ಕಾಂ ಸುದ್ದಿ

ವಿವಿಧ ಪಕ್ಷಗಳ ಸಹಿತ ಜಿಲ್ಲಾ ಆಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘಗಳ ಒಕ್ಕೂಟ ಬಂದ್ ಅನ್ನು ಬೆಂಬಲಿಸಿದ್ದು, ರಿಕ್ಷಾ ಬಂದ್ ಇರುವುದಿಲ್ಲ. ಬಸ್ಗಳು ಸಂಪೂರ್ಣ ಬಂದ್ ಆದರೆ ನಾವೂ ಬಂದ್ ಮಾಡಲು ಸಿದ್ಧರಾಗಿದ್ದೇವೆ ಎಂದು ರಿಕ್ಷಾ ಸಂಘಟನೆಗಳು ಹೇಳಿವೆ.

ಬೆಂಬಲ ಇದೆ; ಬಸ್ ಬಂದ್ ಇಲ್ಲ
ಈ ಪ್ರತಿಭಟನೆಗೆ ಬಸ್ ಮಾಲಕರ ಸಂಘದಿಂದ ಬೆಂಬಲವಿದೆ ಯಾದರೂ ಬಸ್ ಸಂಚಾರ ನಿಲ್ಲಿಸಲಾಗುವುದಿಲ್ಲ. ಒಂದು ವೇಳೆ ಬಸ್ ಸಂಚಾರ ನಿಲ್ಲಿಸಬೇಕಾದ ಪರಿಸ್ಥಿತಿ ಉಂಟಾದಲ್ಲಿ ಅನಿವಾರ್ಯವಾಗಿ ಬಸ್ ಸಂಚಾರವನ್ನು ನಿಲ್ಲಿಸಬೇಕಾಗಬಹುದು – ರಾಜವರ್ಮ ಬಲ್ಲಾಳ್, ಅಧ್ಯಕ್ಷ, ಕೆನರಾ ಬಸ್ ಮಾಲಕರ ಸಂಘ

Leave a Reply