ಡಿ.16 ಮತ್ತು 17 ಹಕ್ಲಾಡಿಯಲ್ಲಿ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ತಾಲೂಕು 16 ನೇ ಕನ್ನಡ ಸಾಹಿತ್ಯ ಸಮ್ಮೇಳವು ಡಿಸೆಂಬರ್ 16 ಮತ್ತು 17 ರಂದು ಹಕ್ಲಾಡಿಯ ಕೆಎಸ್ಎಸ್ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಜರುಗಲಿದೆ. ಅಪರಾಹ್ನ 3 ಗಂಟೆಯಿಂದ ರಾತ್ರಿ 9 ಗಂಟೆಯ ತನಕ ನಡೆಯುವ ಸಮ್ಮೇಳನದಲ್ಲಿ ವಿಚಾರಗೋಷ್ಠಿ, ಕವಿಗೋಷ್ಠಿ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಮ್ಮೇಳನಾಧ್ಯಕ್ಷರನ್ನಾಗಿ ಹಿರಿಯ ಸಾಂಸ್ಕೃತಿಕ ನೇತಾರ ಬಿ.ಅಪ್ಪಣ್ಣ ಹೆಗ್ಡೆಯವರನ್ನು ಆಯ್ಕೆ ಮಾಡಲಾಗಿದೆ. ಎರಡು ದಿನಗಳ ಈ ನುಡಿಹಬ್ಬದಲ್ಲಿ ಸಾಹಿತ್ಯಾಭಿಮಾನಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕಾಗಿ ಪರಿಷತ್ ಪ್ರಕಟಣೆಯಲ್ಲಿ ಕೋರಲಾಗಿದೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಐತಿಹಾಸಿಕ ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಳಕ್ಕೆ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರ ರಾಜೇ ಅವರು ಕೊಲ್ಲೂರು ಭೇಟಿ ನೀಡಿ, ದೇವಿಯ ದರಶನ ಪಡೆದರು. ಬೆಳಿಗ್ಗೆ ದೇವಸ್ಥಾನಕ್ಕೆ ಆಗಮಿಸಿದ ಅವರು ಶ್ರೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದೇವಸ್ಥಾನ ಆಡಳಿತ ಮಂಡಳಿಯಿಂದ ಅವರನ್ನು ಗೌರವಿಸಲಾಯಿತು. ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ಕುಮಾರ್ ಶೆಟ್ಟಿ ಉಪ್ಪುಂದ, ಸದಸ್ಯರಾದ ರಮೇಶ್ ಗಾಣಿಗ ಕೊಲ್ಲೂರು, ವಡಂಬಳ್ಳಿ ಜಯರಾಮ ಶೆಟ್ಟಿ, ನರಸಿಂಹ ಹಳಗೇರಿ, ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ ಸೇರಿದಂತೆ ಇತರರು ಜೊತೆಗಿದ್ದರು.
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಉಪ್ಪಿನಕುದ್ರು ಗೊಂಬೆಗೆ ಮೊದಲು ಸೂತ್ರ ಹಿಡಿದು ಕುಣಿಸಿದ್ದು ಸಿಆರ್ಝಡ್ ನಿಯಮ. ನಂತರ ಸಾರಿಗೆ ಇಲಾಖೆ ಒಂದು ವರ್ಷ ಸೂತ್ರ ಕೈಗೆ ತೆಗೆದುಕೊಂಡಿತು. ಪ್ರಸಕ್ತ ಉಪ್ಪಿನಕುದ್ರು ಗೊಂಬೆಗೆ ಮೆಸ್ಕಾ ಸೂತ್ರ! ತಲ್ಲೂರು ಗ್ರಾಮ ಪಂಚಾಯತ್ ಬೀದಿ ದೀಪ ಅಳವಡಿಕೆಗೆ ನಿರ್ಣಯ ಮಂಡಿಸಿ ಮೆಸ್ಕಾಂ ಕಚೇರಿಗೆ ಕಳುಹಿಸಿದ್ದೇ ತಡ ಹಿಂದೆ ಮುಂದೆ ನೋಡದೆ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಕಂಪೌಂಡ್ ಒಳಗೆ ನೆಟ್ಟ ಕಂಬದಿಂದ ಅಕಾಡೆಮಿಯ ಒಂದು ಮಾತು ಕೇಳದೆ ಲೈನ್ ಎಳೆದು, ಸ್ವಾಗತಗೋಪುರ ಕೆಲಸಕ್ಕೆ ವಿಘ್ನ ತಂದಿದೆ. ಎಲ್ಲಾದರೂ ಸ್ವಾಗತ ಗೋಪುರ ಕಾಮಗಾರಿ ಮಾಡಿದರೆ ಕಾರ್ಮಿಕ ವಿದ್ಯುತ್ ಸ್ಪರ್ಶಿಸಿ ಜೀವ ಕಳೆದುಕೊಳ್ಳುವಂತ ದುಃಸ್ಥಿತಿ ಕಾಡುತ್ತಿದೆ. ಹೌದು.. ಗೊಂಬೆಯಾಟ ಅಕಾಡೆಮಿ ವಿದ್ಯುತ್ ಸಂಪರ್ಕ ಹಿನ್ನೆಲೆಯಲ್ಲಿ ಮೆಸ್ಕಾಂಗೆ ಕಂಬದ ಹಣತುಂಬಿ ಸಂಪರ್ಕ ಪಡೆದುಕೊಂಡಿತ್ತು. ಮೊನ್ನೆ ಮೊನ್ನೆ ಶಾಲೆಯೆಡೆಗೆ ಗೊಂಬೆ ನಡಿಗೆ ಕಾರ್ಯಕ್ರಮಕ್ಕೆ ಅಕಾಡೆಮಿ ಬಾಗಿಲು ಹಾಕಿ, ಗೇಟ್ ಬಂದ್ ಮಾಡಿ ಹೋದ ಸಂದರ್ಭದಲ್ಲಿ ಮೆಸ್ಕಾಂ ಕಂಪೌಂಡ್ ಜಿಗಿದು, ಸ್ವಾಗತ ಗೋಪುರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಆರ್.ಆರ್. ಕಾಂಪ್ಲೆಕ್ಸ್ನಲ್ಲಿ ಭಾನುವಾರ ನೂತನವಾಗಿ ಆರಂಭಗೊಂಡ ಶ್ರೀ ಸಾಯಿ ಮಹಿಳಾ ಆರ್ಥಿಕ ಸೇವಾ ಸಹಕಾರ ಸಂಘದ ಕಛೇರಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಎಸ್. ರಾಜು ಪೂಜಾರಿ ಉದ್ಘಾಟಿಸಿದರು. ಈ ಸಂದರ್ಭ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಸ್. ಮದನ್ ಕುಮಾರ್, ಉದ್ಯಮಿ ಕಾರ್ತಿಕೇಯ ಮಧ್ಯಸ್ಥ, ಮುಖ್ಯ ಪ್ರವರ್ತಕರಾದ ಬೇಬಿ ಕೊಠಾರಿ, ಸಹಕಾರಿ ಸಂಘದ ಅಧ್ಯಕ್ಷೆ ನಿರ್ಮಲ ಶಂಕರ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾಸ್ಕರ ಬಿಲ್ಲವ, ಸಂಸ್ಥೆಯ ನಿರ್ದೇಶಕರಾದ ಶಿಲ್ಪಾ ಕೆ. ಮಧ್ಯಸ್ಥ, ಮಂಜುಳಾ, ಪ್ರಭಾವತಿ, ಸ್ವಪ್ನ, ಸುಜಾತಾ ಖಾರ್ವಿ, ಶಕೀಲಾ, ಪ್ರೇಮಾ, ಕಲ್ಪನಾ ಶೇಖರ ಬಿಲ್ಲವ, ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕೇವಲ ವೃತ್ತಿಗಾಗಿ ಸೇನೆಗೆ ಸೇರದೆ, ದೇಶಪ್ರೇಮದಿಂದ ಯುವಜನತೆ ಸೈನಿಕರಾಗಬೇಕಾಗಿದೆ. ಶ್ರೀಮಂತ ವರ್ಗದವರು ದೇಶ ಕಾಯುವ ಕಾಯಕಕ್ಕೆ ತಮ್ಮ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಚಿಕ್ಕಂದಿನಿಂದಲೇ ಮಕ್ಕಳಿಗೆ ರಾಷ್ಟ್ರಪ್ರೇಮದ ಪಾಠವನ್ನು ಸರಿಯಾಗಿ ಹೇಳಿದರೆ ಮುಂದೆ ಅವರು ದೇಶಸೇವೆಗೆ ಸ್ವಯಂಪ್ರೇರಿತರಾಗಿ ಎದ್ದು ನಿಲ್ಲುತ್ತಾರೆ. ಈ ದಿಸೆಯಲ್ಲಿ ಪೋಷಕರು ಮತ್ತು ಶಿಕ್ಷಕರು ಕಾರ್ಯಪ್ರವೃತ್ತರಾಗಬೇಕಿದೆ ಎಂದು ಕುಂದಾಪುರ ತಾಲೂಕು ಕಸಾಪ ಅಧ್ಯಕ್ಷ ಹೇಳಿದರು. ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕ ಹಾಗೂ ಗೀತಾನಂದ ಫೌಂಡೇಷನ್ ಮಣೂರು ಇವರ ಜಂಟಿ ಆಶ್ರಯದಲ್ಲಿ ನಡೆದ ತಿಂಗಳ ಸಡಗರ ಸರಣಿಯ ಹಿರಿಯರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಾಡ ಗುಡ್ಡೇಅಂಗಡಿ ನಿವಾಸಿ ಮಾಜಿ ಸೈನಿಕರೂ ಹಿರಿಯರೂ ಆದ ವೆನೆಸಿಸ್ ಪಿರೇರಾ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಹಿಂದೆಲ್ಲಾ ಸೈನಿಕರ ಜೀವನ ದುಸ್ತರವಾಗಿತ್ತು. ಶಸ್ತ್ರಾಸ್ತ್ರಗಳ ಕೊರತೆ ಇತ್ತು, ಆದರೆ ಈಗ ನಮ್ಮ ದೇಶದ ಮೂರು ಸೇನೆಗಳು ಸದೃಢವಾಗಿದ್ದು,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಸಮಾನತೆ ಕಮ್ಮಿ ಮಾಡಿ, ಸಮಾನತೆ ಮೂಲಕ ಎಲ್ಲರಿಗೂ ಉತ್ತಮ ಜೀವನ ಕಾನೂನು ಮೂಲಕ ಸಿಗಬೇಕು. ಕೋರ್ಟಿಗೆ ಹೋಗುವವರ ಸಂಖ್ಯೆಗೆ ಅನುಗುಣವಾಗಿ ನ್ಯಾಯಾಲಯ, ನ್ಯಾದೀಶರು ಇಲ್ಲದಿದ್ದರಿಂದ ನ್ಯಾಯದಾನ ವಿಳಂಬ. ಉತ್ತಮ ಕಾನೂನು ವ್ಯವಸ್ಥೆಯಿಂದ ಸ್ವಾಸ್ಥ್ಯ ಸಮಾಜ ಹಾಗೂ ದೇಶಕಟ್ಟಲು ಸಾಧ್ಯ ಎಂದು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಹೇಳಿದರು. ಕುಂದಾಪುರ ಕಾನೂನು ಸೇವೆಗಳ ಪ್ರಾಧಿಕಾರಿ, ವಕೀಲರ ಸಂಘ, ಅಭಿಯೋಗ ಇಲಾಖೆ, ತಾಲೂಕ್ ಆಡಳಿತ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜೆಸಿಐ ಆಶ್ರಯದಲ್ಲಿ ಕುಂದಾಪುರ ನ್ಯಾಯಾಲಯ ವಠಾರದಲ್ಲಿ ನಡೆದ ಕಾನೂನು ಅಭಿಯಾನ ಸಮಾರೋಪದಲ್ಲಿ ಮಾತನಾಡುತ್ತಿದ್ದರು. ನ್ಯಾಯಾಲಯದಲ್ಲಿ ಸಾಕಷ್ಟು ದೂರುಗಳು ಬಾಕಿಯುದ್ದು, ಅದರ ವಿಲೇವಾರಿಗೆ ಬೇಕಾಗುವಷ್ಟು ನ್ಯಾಯಾಲಯ, ನ್ಯಾಯಾದೀಶ, ಹಾಗೂ ಸಿಬ್ಬಂದಿ ಕೊರತೆಸಮಸ್ಯೆ ಪರಿಹಾರದ ದೃಷ್ಟಿಯಲ್ಲಿ ಸರ್ಕಾರ ಕಾನೂನು ಪ್ರಾಧಿಕಾರದ ಮೂಲಕ ದೂರುಗಳ ವಿಲೇವಾರಿ ಮಾಡುವ ಪ್ರಯತ್ನ ಮಾಡುತ್ತಿದೆ. ಲೋಕಾಯುಕ್ತ ಹಾಗೂ ಕಾನೂನು ಪ್ರಾಧಿಕಾರ ಜತೆಜತೆಯಾಗಿ ಹೆಚ್ಚಿನ ಹಾಕಬೇಕು ಎಂದು ಸಲಹೆ ಮಾಡಿದರು. ಉಡುಪಿ ಜಿಲ್ಲಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರಭುತ್ವದ ಆಶಯಕ್ಕೆ ವಿರುದ್ಧವಾದ ಅಭಿವ್ಯಕ್ತಿಯನ್ನು ದಮನ ಮಾಡುತ್ತೇವೆ ಎಂಬ ಅಧಿಕಾರಯುತವಾದ ಧೋರಣೆಯ ನಡುವೆ ವ್ಯಂಗ್ಯಚಿತ್ರವೆಂಬುದು ದೊಡ್ಡ ಸವಾಲೇ ಆಗಿದೆ. ಕ್ರೀಯಾತ್ಮಕ ಮನಸ್ಸುಗಳಿಂದ ಮಾತ್ರ ಪ್ರಭುತ್ವದ ಅಹಂಕಾರವನ್ನು ದುರಹಂಕಾರದ ಮಟ್ಟಕ್ಕೇರದಂತೆ ವಿನಂಭ್ರತೆಯತ್ತ ಕೊಂಡೊಯ್ಯುವ ದಾರಿ ಮಾಡಿಕೊಡಲು ಸಾಧ್ಯವಿದೆ ಎಂದು ಸಮುದಾಯ ಕರ್ನಾಟಕದದ ಜೊತೆ ಕಾರ್ಯದರ್ಶಿ ವಿಮಲ ಕೆ. ಎಸ್ ಹೇಳಿದರು. ಶನಿವಾರ ಇಲ್ಲಿನ ಕಲಾಮಂದಿರದಲ್ಲಿ ವಿಭಿನ್ನ ಐಡಿಯಾಸ್ ಹಾಗೂ ಕಾರ್ಟೂನು ಕುಂದಾಪ್ರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಕಾರ್ಟೂನು ಹಬ್ಬದಲಿ ಸಮುದಾಯ ಕುಂದಾಪುರ ಸಹಯೋಗದೊಂದಿಗೆ ಹಮ್ಮಿಕೊಂಡ ಮಾಸ್ಟರ್ ಸ್ಟ್ರೋಕ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಭಿವ್ಯಕ್ತಿಯ ಜೊತೆಗೆ ಮೆದುವಾದ ಹಾಸ್ಯವನ್ನು ನೀಡುವ ಕುರುಂಬದಂತಿರುವ ಕಾರ್ಟೂನುಗಳ ಮೂಲಕ ಬಣ್ಣಗಳ ಪರಿಧಿಯನ್ನು ದಾಟಿ ಸಮಾಜದ ಅಂಕುಡೊಂಕುಗಳನ್ನು ತೋರಿಸುತ್ತಾ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದಕ್ಕೂ ಸಾಧ್ಯವಾಗಬೇಕಿದೆ. ಸೌಹಾರ್ದತೆ, ಸಮಾನತೆಯ ನಡುವೆ ಸಮಾನ ಸಂಬಂಧದ ಮನಸ್ಸುಗಳನ್ನು ಬೆಸೆಯುವ ಅಗತ್ಯವೂ ಇದೆ ಎಂಬದನ್ನು ಪ್ರತಿಪಾದಿಸಿದ ಅವರು, ಈ ಕ್ಷಣದ ಹಲವು ಘಟನೆಗಳಿಗೆ ತಕ್ಷಣ ಸ್ಪಂದಿಸುವ ವ್ಯಂಗ್ಯಚಿತ್ರಕಾರರು ತಮ್ಮ ತೃಪ್ತಿಗಾಗಿ ವ್ಯಂಗ್ಯಚಿತ್ರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಾಮಾಜಿಕ ಜಾಲತಾಣಗಳಲ್ಲಿ ಯಾವುದನ್ನು ಹರಡಬೇಕು ಹಾಗೂ ಯಾವುದನ್ನು ಹರಡಬಾರದು ಎಂಬ ಪರಿವೆ ಇಲ್ಲದ್ದರಿಂದ ಉಂಟಾಗಿರುವ ಗೊಂದಲವನ್ನು ವ್ಯಂಗ್ಯಚಿತ್ರಗಳು ವಿಡಂಭನಾತ್ಮಕವಾಗಿ ಬಿಂಬಿಸಿದ್ದು, ಹಾಸ್ಯದ ಮೂಲಕ ನಮ್ಮ ನಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳುವ ಅಗತ್ಯವೂ ಇದೆ ಎಂದು ಬೆಂಗಳೂರು ಅಭಿನಂದನ ಸಾಂಸ್ಕೃತಿಕ ಟ್ರಸ್ಟ್ನ ಅಧ್ಯಕ್ಷ, ಪತ್ರಕರ್ತ ರಾಘವೇಂದ್ರ ಕಾಂಚನ್ ಹೇಳಿದರು. ಅವರು ವಿಭಿನ್ನ ಐಡಿಯಾಸ್ ಹಾಗೂ ಕಾರ್ಟೂನು ಕುಂದಾಪ್ರ ಸಂಸ್ಥೆಯ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ ಕಾರ್ಟೂನು ಹಬ್ಬ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಕಾರ್ಟೂನು ಹಬ್ಬದ ಕೇವಲ ಸಂಭ್ರಮ ವಿನೋದಗಳಿಗೆ ಸೀಮಿತವಾಗಿರದೇ ಉತ್ತಮ ವಿಚಾರ ವಿನಿಮಯ ಹಾಗೂ ಸೃಜನಶೀಲ ಮನಸ್ಸುಗಳ ಸೃಷ್ಠಿಗೆ ಕಾರಣವಾಗಿದೆ. ಕಾರ್ಟೂನು ಬಗೆಗಿನ ಆಸಕ್ತಿರ ಹೊಸ ತಲೆಮಾರಿನ ಸೃಷ್ಠಿಗೂ ಕಾರಣವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಟೋರ್ಪೋಡೋಸ್ ಸ್ಪೋಟ್ಸ್ ಕ್ಲಬ್ನ ಗೌತಮ್ ಶೆಟ್ಟಿ, ಚಕ್ರವರ್ತಿ ಕ್ರಿಕೆಟ್ ಕ್ಲಬ್ನ್ ಕೋಚ್ ಪ್ರದೀಪ್ ವಾಜ್, ಬಾಲನಟಿ ಶ್ಲಾಘಾ ಸಾಲಿಗ್ರಾಮ ಉಪಸ್ಥಿತರಿದ್ದರು. ಕಾರ್ಟೂನು ಹಬ್ಬ ಹಾಗೂ ಸೈಂಟ್…
ಕುಂದಾಪ್ರ ಡಾಟ್ ಕಾಂ ಸುದ್ದಿ ಕನ್ನಡ ಮಾಧ್ಯಮದಲ್ಲಿ ಹತ್ತನೇ ತರಗತಿಯವರೆಗೆ ಕಲಿತು ಬಳಿಕ ಇತರ ಪದವಿಗಳನ್ನು ಪಡೆದವರಿಗೆ ಡಿಸೆಂಬರ್ 3, 2017 ರಂದು ಆಳ್ವಾಸ್ ವಿದ್ಯಾಗಿರಿ ಕ್ಯಾಂಪಸ್ ನಲ್ಲಿ “ಆಳ್ವಾಸ್ ಉದ್ಯೋಗಸಿರಿ” ವಿಶೇಷ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಉದ್ಯೋಗಸಿರಿಯು ಆಳ್ವಾಸ್ ನುಡಿಸಿರಿಯ ಹಿನ್ನೆಲೆಯಲ್ಲಿ ವಿಶೇಷ ಮಹತ್ವ ಪಡೆದಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದ್ರಿಯು ಕಳೆದ ಹದಿನಾಲ್ಕು ವರ್ಷಗಳಿಂದ ಸಾಹಿತ್ಯಿಕ , ಬೌದ್ಧಿಕ , ಸಾಂಸ್ಕೃತಿಕ ಮತ್ತು ವೈಚಾರಿಕ – ಹೀಗೆ ವಿವಿಧ ಆಯಾಮಗಳಲ್ಲಿ ನಡೆಸಿಕೊಂಡು ಬರುತ್ತಿರುವ ” ಆಳ್ವಾಸ್ ನುಡಿಸಿರಿ ” ಸಮ್ಮೇಳನವು ರಾಷ್ಟ್ರೀಯ ನಾಡು – ನುಡಿಯ ಉತ್ಸವವಾಗಿದೆ . ಈ ನಿಟ್ಟಿನಲ್ಲಿ ಆಳ್ವಾಸ್ ನುಡಿಸಿರಿಯ ಪ್ರಯುಕ್ತ, ಕನ್ನಡ ಮಾಧ್ಯಮದಲ್ಲಿ ಒಂದರಿಂದ ಹತ್ತನೇ ತರಗತಿಯವರೆಗೆ ಕಲಿತು ತದನಂತರ ಇತರೆ ಪದವಿಗಳನ್ನು (ಡಿಗ್ರಿ, ಸ್ನಾತಕೋತ್ತರ , ಇತ್ಯಾದಿ ) ಪಡೆದ ಅಭ್ಯರ್ಥಿ ಗಳಿಗೆ ಡಿಸೆಂಬರ್ 3 ರಂದು ವಿಶೇಷ ಉದ್ಯೋಗ ಮೇಳವನ್ನು ನಡೆಸಲು ನಿರ್ಧರಿಸಲಾಗಿದೆ. ಉದ್ಯೋಗಸಿರಿಯು ಮಹತ್ತರ ಉದ್ದೇಶದ ಈಡೇರಿಕೆಗಾಗಿ ನಡೆಸಲ್ಪಡುವುದರಿಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಇಲ್ಲಿನ ಶ್ರೀ ಕುಂದೇಶ್ವರ ದೇವಸ್ಥಾನ ದೀಪೋತ್ಸವಕ್ಕೆ ಸಹಸ್ರಾರು ಭಕ್ತರ ಸಾಕ್ಷಿಯಾದರು. ಶುಕ್ರವಾರ ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಿದ್ದು, ಸಂಜೆ ಪ್ರಣತಿ ದೀಪ ಬೆಳಗಿಸಲು ಸಹಸ್ರಾರು ಭಕ್ತರು ಕೈಜೋಡಿಸಿದರು. ಹಣತೆಯಿಂದ ಹಣತೆಗೆ ದೀಪ ಬೆಳಗಿಸಿ ಸಂಭ್ರಮಿಸಿದರು. ಶ್ರೀ ಕುಂದೇಶ್ವರ ದೇವಸ್ಥಾನಕ್ಕೆ ಐತಿಹಾಸಿಕ ಹಿನ್ನೆಲೆಯಿದ್ದು, ಕುಂದೇಶ್ವರ ರಾಜ ದೇವಸ್ಥಾನ ಪ್ರತಿಷ್ಠಾಪನೆ ಮಾಡಿದ್ದರಿಂದ ಕುಂದೇಶ್ವರ ಎಂಬ ಹೆಸರು ಬರಲು ಕಾರಣ ಎಂಬ ನಂಬಿಕೆಯಿದೆ. ಪ್ರಾತಕಾಲ ಪೂಜೆ, ರುದ್ರಾಭಿಷೇಕ ಹಾಗೂ ಶಿವನಿಗೆ ಪ್ರಿಯವಾದ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದಿದ್ದು, ಮಧ್ಯಾಹ್ನ ಮಹಾ ಅನ್ನಸಂತರ್ಣೆ ಕೂಡಾ ನಡೆಯಿತು. ಕುಂದೇಶ್ವರ ದೇವಸ್ಥಾನ ಬೀದಿ ದೀಪಾಲಂಕೃತವಾಗಿದ್ದು, ದೇವಸ್ಥಾನಕ್ಕೆ ಅಳವಡಿಸಿದ ಬಣ್ಣದ ದೀಪಗಳಿಂದ ಮತ್ತಷ್ಟು ಮೆರಗು ಬಂದಿತ್ತು. ಕುಂದೇಶ್ವರ ದೇವಸ್ಥಾನ ಪುಷ್ಕ್ಕರಣಿಗೆ ವಿಶೇಷ ವಿದ್ಯುತ್ ದೀಪ ಅಲಂಕಾರ ಮಾಡಿದ್ದು, ಪುಸ್ಕರಣಿಗೊಂದು ಹೊಸ ಕಳೆ ಮೂಡಿಸಿತ್ತು. ಹಾಗೆ ದೇವಸ್ಥಾನ ಬಳಿ ಇರುವ ಅಶ್ವಥಕಟ್ಟೆ ಬಳಿ ನಿರ್ಮಿಸಿದ ಬೃಹತ್ ಆಂಜನೇಯ ಮೂರ್ತಿ ಎಲ್ಲರ ಆಕರ್ಷಿಣೀಯ…
