ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜೆಮ್‌ಶೆಡ್‌ಪುರದಲ್ಲಿ ನಡೆದ ಅಂತರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ತಾಲೂಕಿನ ಆನಗಳ್ಳಿಯ ಯುವಕ, ಬಸ್ರೂರು ಕಾಲೇಜಿನ ವಿದ್ಯಾರ್ಥಿ ಜಾಕ್ಸನ್ ಡಿಸೋಜಾ ಎರಡು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಪಡೆದಿದ್ದಾರೆ. Read this ► ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್: ಜಾಕ್ಸನ್ ಕರ್ನಾಟಕದ ಪ್ರತಿನಿಧಿಯಾಗಿ ಆಯ್ಕೆ – http://kundapraa.com/?p=10851 ► ಕುಂದಾಪುರ: ಭರವಸೆಯ ಪವರ್ ಲಿಫ್ಟರ್ ಆನಗಳ್ಳಿಯ ಜಾಕ್ಸನ್ ಡಿಸೋಜಾ – http://kundapraa.com/?p=20027
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜೆಮ್‌ಶೆಡ್‌ಪುರದಲ್ಲಿ ನಡೆದ ಅಂತರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ತಾಲೂಕಿನ ಬಾಳಿಕೆರೆಯ ವಿಶ್ವನಾಥ ಗಾಣಿಗ ಅವರು ಎರಡು ಚಿನ್ನದ ಪದಕ ಗೆಲ್ಲುವ ಮೂಲಕ ಪವರ್ ಲಿಫ್ಟಿಂಗ್ ಹಾಗೂ ಡೆಡ್‌ಲಿಫ್ಟಿಂಗ್‌ನಲ್ಲಿ ಚಾಂಪಿಯನ್ ಆಫ್ ಚಾಂಪಿಯನ್ಸ್ ಗೌರವಕ್ಕೆ ಪಾತ್ರರಾಗಿದ್ದಾರೆ. ೮೩ಕೆ.ಜಿ ವಿಭಾಗದಲ್ಲಿ ಸ್ವರ್ಧಿಸಿದ್ದ ವಿಶ್ವನಾಥ್ ಪವರ್ ಲಿಫ್ಟಿಂಗ್‌ನಲ್ಲಿ ಚಿನ್ನ ಗೆದ್ದಿದ್ದಲ್ಲದೇ ಡೆಡ್‌ಲಿಫ್ಟ್‌ನಲ್ಲಿ ಅಗ್ರ ಸ್ಥಾನಿಯಾಗಿದ್ದರು. ಸುಬ್ರತಾ ಕ್ಲಾಸಿಕ್ ಅಂತಾರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್‌ನಲ್ಲಿ ಬೆಸ್ಟ್ ಲಿಫ್ಟರ್ ಗೌರವಕ್ಕೂ ವಿಶ್ವನಾಥ್ ಪ್ರಾತ್ರರಾದರು. ಬೆಂಗಳೂರಿನ ಸೂಪರ್ ಬಾಡೀಸ್ ಹಾಗೂ ರೆಡ್ ಕೇಜ್ ಜಿಮ್‌ನಲ್ಲಿ ವಿಶ್ವನಾಥ್ ತರಬೇತಿ ಪಡೆಯುತ್ತಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ, ಸುವರ್ಣ ಮಹೋತ್ಸವ ಸಮಿತಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಾರಂದಾಡಿಯ ಜಂಟಿ ಆಶ್ರಯದಲ್ಲಿ ಇಂಡಿಯನ್ ರೆಡ್‌ಕ್ರಾಸ್ ಕುಂದಾಪುರ ಘಟಕದ ಸಹಭಾಗಿತ್ವದಲ್ಲಿ ಬಾರಂದಾಡಿ ಶಾಲೆಯಲ್ಲಿ ರಕ್ತದಾನ ಶಿಬಿರ ನಡೆಯಿತು. ಶಿಬಿರವನ್ನು ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಉದ್ಘಾಟಿಸಿ ನಾವು ನೀಡುವ ರಕ್ತವು ಒಬ್ಬ ವ್ಯಕ್ತಿಯ ಜೀವವನ್ನು ಉಳಿಸಬಲ್ಲದ್ದಾಗಿದೆ ಅಂತಹ ಶ್ರೇಷ್ಠ ಕಾರ್ಯದಲ್ಲಿ ಭಾಗವಹಿಸುವುದು ಹೆಮ್ಮೆಯ ಸಂಗತಿ ಎಂದರು ಇಂಡಿಯನ್ ರೆಡ್‌ಕ್ರಾಸ್ ಕುಂದಾಪುರ ಘಟಕದ ಛೇರ್‌ಮೆನ್ ಜಯಕರ ಶೆಟ್ಟಿ ಅಧ್ಯಕ್ಷತೆವಹಿಸಿ ರಕ್ತದಾನದ ಮಹತ್ವ ಹಾಗೂ ಕುಂದಾಪುರ ರೆಡ್‌ಕ್ರಾಸ್‌ನ ಸೇವೆಯ ಕುರಿತು ತಿಳಿಸಿದರು. ಮುಖ್ಯ ಅಥಿತಿಯಾಗಿ ಕುಂದಾಪುರ ತಾ. ಪಂ ಸದಸ್ಯೆ ಇಂದಿರಾ ಶೆಟ್ಟಿ, ಯೂತ್ ರೆಡ್‌ಕ್ರಾಸ್ ಸಂಚಾಲಕ ಆವರ್ಸೆ ಮುತ್ತಯ್ಯ ಶೆಟ್ಟಿ, ಶಾಲೆಯ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಸುರೇಶ್ ಪೂಜಾರಿ, ಹಕ್ಲಾಡಿ ಗ್ರಾ. ಪಂ ಅಧ್ಯಕ್ಷೆ ಮಾಲತಿ ಶೆಟ್ಟಿ, ಸದಸ್ಯ ಕಿಶೋರ್ ಕುಮಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹಾದೇವ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ತೆಲಂಗಾಣದಲ್ಲಿ ನಡೆದ ರಾಷ್ಟ್ರಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ತ್ರೋಬಾಲ್ ಪಂದ್ಯಾಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ಬಹುಮುಖ ಕ್ರೀಡಾ ಪ್ರತಿಭೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ದ್ವಿತೀಯ ಸಿಇಬಿಎ ತರಗತಿಯ ವಿದ್ಯಾರ್ಥಿ ನಾಗೇಂದ್ರ ಮೊಗವೀರ ಅವರನ್ನು ಕಾಲೇಜಿನ ವಾರ್ಷಿಕೋತ್ಸವ ಸಂದರ್ಭದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಯಶ್ರೀ ಆರ್ ಪೈ, ಕುಸುಮ ಆರ್ ಕಿಣಿ, ಡಾ.ಕಿಶೋರ್ ಕುಮಾರ್ ಶೆಟ್ಟಿ, ಡಾ.ಕಾಶೀನಾಥ ಪೈ ,ಎನ್ ಸದಾಶಿವ ನಾಯಕ್, ಕವಿತಾ ಎಮ್ ಸಿ, ಸದಾನಂದ ವೈದ್ಯ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬಸ್ರೂರು ಸರಕಾರಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಸಂಘ, ಬಸ್ರೂರು ಸರಕಾರಿ ಪ್ರೌಡಶಾಲೆ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಬಸ್ರೂರು ಶಾಲಾ ಮೈದಾನದಲ್ಲಿ ಅದ್ದೂರಿಯಾಗಿ ಜರಗಿತು. ಆಳ್ವಾಸ್ ನುಡಿಸಿರಿ ವಿರಾಸತ್ ಕುಂದಾಪುರ ಘಟಕದ ಗೌರವಾಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಐವತ್ತೊಂಬತ್ತು ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಬಸ್ರೂರು ಸರಕಾರಿ ಪ್ರೌಡಶಾಲೆ ಇಂದು ಆಳ್ವಾಸ್ ಸಾಂಸ್ಕೃತಿಕ ವೈಭವದಿಂದ ಕಂಗೊಳಿಸುತ್ತಿದೆ. ಬಸ್ರೂರಿನಂತಹ ಗ್ರಾಮೀಣ ಪ್ರದೇಶದ ಈ ಪ್ರೌಢಶಾಲಾ ವಿದ್ಯಾರ್ಥಿಗಳು ರ‍್ಯಾಂಕ್ ಪಡೆದು ಉನ್ನತ ಸ್ಥಾನಕ್ಕೇರಿದ್ದಾರೆ. ಶಾಲೆಯ ಹಳೆ ವಿದ್ಯಾರ್ಥಿ ಇಂದು ಆಳ್ವಾಸ್ ಸಾಂಸ್ಕೃತಿಕ ವೈಭವವನ್ನು ಬಸ್ರೂರಿನಲ್ಲಿ ಏರ್ಪಡಿಸಿ ಇತಿಹಾಸ ನಿರ್ಮಿಸಿದ್ದಾರೆ. ಮುಂದಿನ ವರ್ಷ ವಜ್ರ ಮಹೋತ್ಸವವನ್ನು ಶಾಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸುವ ಮುನ್ನುಡಿಯಾಗಿ ಈ ಕಾರ್ಯಕ್ರಮ ಮೂಡಿಬಂದಿದೆ ಎಂದವರು ಅಭಿಪ್ರಾಯಪಟ್ಟರು. ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಮೋಹನ ಆಳ್ವ ಅವರು ಆಶಯ ಭಾಷಣ ಮಾಡಿ ಕುಂದಾಪುರದ ಮತ್ತು ಬಸ್ರೂರಿನ ಬಗ್ಗೆ ಹೆಮ್ಮೆಯ ಭಾವವಿದೆ. ಆಳ್ವಾಸ್ ಸಾಂಸ್ಕೃತಿಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಗರದ ಪುರಸಭೆ ಎದುರಿನ ರಸ್ತೆಯಲ್ಲಿ ಹೊಸ ಸ್ವಿಫ್ಟ್ ಡಿಸೈರ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಅಡ್ಡದಿಡ್ಡಿ ಚಲಾವಣೆಗೊಂಡ ಪರಿಣಾಮ, ಎದುರಿಗೆ ಸಾಗುತ್ತಿದ್ದು ಕಾರು, ಬಸ್ಸು ಹಾಗೂ ಸೈಕಲ್ ಸವಾರರಿಗೆ ಡಿಕ್ಕಿ ಹೊಡೆದಿದ್ದು, ಸೈಕಲ್ ಸವಾರ ತಂದೆ ಮಗಳು ಗಂಭೀರ ಗಾಯಗೊಂಡಿದ್ದಾರೆ. ಕುಂದಾಪುರ ಮೀನು ಮಾರುಕಟ್ಟೆ ರಸ್ತೆ ಬಾಡಿಗೆ ಮನೆ ನಿವಾಸಿ ಕೋಲ್ಕತ್ತಾ ಮೂಲದ ಶ್ರೀಕಾಂತ (೨೬) ಹಾಗೂ ಅವರ ಪುತ್ರಿ ಸಚಿತಾ ಮೈತಿ ಗಾಯಗೊಂಡವರು. ಕುಂದಾಪ್ರ ಡಾಟ್ ಕಾಂ ಸುದ್ದಿ. ರಸ್ತೆಯ ಬದಿಗೆ ಸೈಕಲ್‌ನಲ್ಲಿ ಶ್ರೀಕಾಂತ್, ತನ್ನ ಮಗಳನ್ನು ಶಾಲೆಗೆ ಬಿಡಲು ಹೋಗುತ್ತಿರುವ ಸಂದರ್ಭದಲ್ಲಿ ಪುರಸಭೆ ವಾಹನ ಚಾಲಕ ವಿಜಯ್ ಎಂಬವರಿಗೆ ಸೇರಿದ ಸ್ವಿಫ್ಟ್ ಡಿಸೈರ್ ಕಾರ್ ಪುರಸಭೆs ಇನ್ನೋರ್ವ ಸಿಬ್ಬಂದಿ ದೀಪಕ್ ಕಚೇರಿಯ ಆವರಣದಿಂದ ರಸ್ತೆಗಿಳಿಸುವಾಗ ಏಕಾಏಕಿಯಾಗಿ ಕಾರಿನ ಎಕ್ಸಲೇಟರ್ ಅದುಮಿದ ದೀಪಕ್ ಸೈಕಲ್‌ಗೆ ಢಿಕ್ಕಿ ಹೊಡೆದ ನಂತರ ಇನ್ನೊಂದು ಕಾರಿಗೂ ಢಿಕ್ಕಿ ಹೊಡೆಯಿತು. ಖಾಸಗಿ ಬಸ್‌ಗೆ ಕಾರ್ ಢಿಕ್ಕಿ ಹೊಡೆಯಿತು. ಗಾಯಾಳುಗಳನ್ನು ಚಿಕಿತ್ಸೆಗಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರದ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ 2016-17ನೇ ಶೈಕ್ಷಣಿಕ ಸಾಲಿನ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದ ಕಾರ್ಯಕ್ರಮದ ಭಾಗವಾಗಿ ಹೊಸೂರು ಶ್ರೀ ಮೂಕಾಂಬಿಕಾ ದೇವಳದ ಪ್ರೌಢ ಶಾಲೆಯ ಆವರಣದಲ್ಲಿ ಕುಂದಾಪುರದ ಅಗ್ನಿಶಾಮಕ ದಳದವರಿಂದ ಅರಿವು ಮತ್ತು ಪ್ರಾತ್ಯಕ್ಷಿಕೆ ನಡೆಯಿತು. ಆರಕ್ಷಕ ಸಿಬ್ಬಂದಿ ರಾಘವೇಂದ್ರ ಆಚಾರ್ಯ ಮಾಹಿತಿ ನೀಡಿದರು. ಕುಂದಾಪುರ ಅಗ್ನಿಶಾಮಕ ದಳದ ಪ್ರಭಾರ ಠಾಣಾಧಿಕಾರಿ ನವೀನ್ ಸುಧೀಂದ್ರ ಉಡುಪ, ರಘುರಾಮ್ ಶೆಟ್ಟಿ ಹೆಗ್ಗದ್ದೆ, ರವೀಶ್ಚಂದ್ರ ಶೆಟ್ಟಿ ವಕೀಲರು, ತಾಲೂಕು ಪಂಚಾಯತ್ ಸದಸ್ಯ ಉದಯ್ ಪೂಜಾರಿ, ನಾರಾಯಣ ಶೆಟ್ಟಿ, ಗುರುರಾಜ ಆಚಾರ್ಯ, ರಾಘವೇಂದ್ರ ಗುಲ್ವಾಡಿ ಅಶೋಕ್ ಶೆಟ್ಟಿ ದೇವಲ್ಕುಂದ, ಪ್ರವೀಣ್ ಶೆಟ್ಟಿ ಹೊಸೂರು, ಎನ್.ಎಸ್.ಎಸ್. ಯೋಜನಾಧಿಕಾರಿ ರಕ್ಷಿತ್ ರಾವ್ ಗುಜ್ಜಾಡಿ, ಸಹಯೋಜನಾಧಿಕಾರಿ ಪ್ರೀತಿ ಹೆಗ್ಡೆ, ಶಿಬಿರಾಧಿಕಾರಿಗಳಾದ ಚೇತನ್ ಶೆಟ್ಟಿ ಕೋವಾಡಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರವೀಣ್ ಮೊಗವೀರ ಗಂಗೊಳ್ಳಿ, ವಾಣಿಜ್ಯ ಉಪನ್ಯಾಸಕ ಶಿವರಾಜ್ ದೇವಾಡಿಗ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಳೆದ 37ವರ್ಷಗಳಿಂದ ಸಿಂಡಿಕೇಟ್ ಬ್ಯಾಂಕಿನಲ್ಲಿ ಸೇವೆ ಸಲ್ಲಿಸುತ್ತಿದ್ದು ಇತ್ತೀಚೆಗೆ ಕುಂದಾಪುರ ಮುಖ್ಯ ಶಾಖೆಯಲ್ಲಿ ನಿವೃತ್ತಿ ಹೊಂದಿದ ಜಿ. ಮಂಜುನಾಥ್ ಅವರನ್ನು ಮುಖ್ಯ ಶಾಖೆಯಲ್ಲಿ ನಡೆದ ಸಮಾರಂಭದಲ್ಲಿ ಬೀಳ್ಕೊಳ್ಳಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಹಾಯಕ ಪ್ರಬಂಧಕಿ ಪೂನಮ್ ಪ್ರಭು ವಹಿಸಿದ್ದರು. ವಿಶೇಷ ಅತಿಥಿಗಳಾಗಿ ಸಿಂಡಿಕೇಟ್ ಬ್ಯಾಂಕ್ ನೌಕರರ ಸಂಘದ ರಾಷ್ಟ್ರೀಯ ಉಪ ಮಹಾ ಕಾರ್ಯದರ್ಶಿ ರಾಮ ಮೋಹನ್ ಮತ್ತು ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷರಾದ ರಾಘವೇಂದ್ರ ರಾವ್ ಆಗಮಿಸಿದ್ದರು. ಶಾಖೆಯ ವತಿಯಿಂದ ಜಿ. ಮಂಜುನಾಥ್ ದಂಪತಿಗಳಿಗೆ ಶಾಲು ಹೊದಿಸಿ ಸ್ಮರಣಿಕೆಯನ್ನಿತ್ತು ಸನ್ಮಾನಿಸಲಾಯಿತು. ಸಿಂಡಿಕೇಟ್ ಬ್ಯಾಂಕ್ ನೌಕರರ ಸಂಘದ ವಿವಿಧ ಸ್ತರಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ ಜಿ. ಮಂಜುನಾಥ್ ಅವರನ್ನು ರಾಷ್ಟ್ರೀಯ ಉಪ ಮಹಾ ಕಾರ್ಯದರ್ಶಿ ರಾಮ ಮೋಹನ್ ಸನ್ಮಾನಿಸಿದರು. ಕಿಶೋರ್, ಪ್ರಸನ್ನ, ಭೋಜರಾಜ ಶೆಟ್ಟಿ ಮಾತನಾಡಿ ಜಿ. ಮಂಜುನಾಥ್‌ರ ಸೇವಾ ತತ್ಪರತೆಯನ್ನು ಪ್ರಶಂಶಿಸಿದರು. ನಿತ್ಯಾನಂದ ತೋಳಾರ್ ಅತಿಥಿಗಳನ್ನು ಸ್ವಾಗತಿಸಿದರು. ಗೋಪಾಲಕೃಷ್ಣ ಕುಂಭಾಸಿ ಕಾರ್ಯಕ್ರಮವನ್ನು ನಿರ್ವಹಿಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಹೋಬಳಿಗಳಲ್ಲೂ ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲಾಗುವುದು. ಶಾಲೆಯ ಕಟ್ಟಡ ಮತ್ತಿತರ ಮೂಲ ಸೌಲಭ್ಯಗಳನ್ನು ತಲಾ ರೂ ೧೫ ಲಕ್ಷ ಮೊತ್ತದಲ್ಲಿ ಆರಂಭದ ಹಂತದಲ್ಲೇ ಸೃಷ್ಟಿಸಿ ಅವುಗಳಲ್ಲಿ ಖಾಸಗಿ ಶಾಲೆಗಳಿಗಿಂತ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುವುದು ಎಂದು ರಾಜ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದರು. ಬೈಂದೂರು ವಿಧಾನಸಭಾ ಕ್ಷೇತ್ರದ ಹೇರಂಜಾಲಿನಲ್ಲಿ ರೂ೫.೫೩ ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಶಾಲಾ ಕಟ್ಟಡ, ಬಾಲಕ ಬಾಲಕಿಯರ ವಸತಿಗೃಹ, ಅಡುಗೆಮನೆ ಹಾಗೂ ಭೋಜನಾಲಯ ಸಂಕೀರ್ಣವನ್ನು ಉದ್ಘಾಟಿಸಿದ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದರು. ಸಮಾಜದ ಅವಕಾಶ ವಂಚಿತರಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರನ್ನು ಸಮುದಾಯದ ಆಸ್ತಿಯಾಗಿ ರೂಪಿಸುವುದು ಇಲಾಖೆಯ ಅಧೀನದ ಮೊರಾರ್ಜಿ ದೇಸಾಯಿ ಶಾಲೆಗಳ ಉದ್ದೇಶ. ಇಲ್ಲಿ ಕಲಿಯುವ ಮಕ್ಕಳಿಗೆ ಶಾಲಾ ಸಮವಸ್ತ್ರ, ಪುಸ್ತಕಗಳನ್ನು ಶೈಕ್ಷಣಿಕ ವರ್ಷದ ಆರಂಭದಲ್ಲೇ ಪೂರೈಸಲಾಗುತ್ತಿದೆ. ಅವರ ಪ್ರತಿನಿಧಿಗಳೇ ಆಯ್ಕೆ ಮಾಡಿದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪಡುವರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ದುರ್ಮಿ ತಿರಂಗಾ ಫೆಂಡ್ಸ್ ಇದರ ಮೂರನೇ ವಾರ್ಷಿಕೋತ್ಸವ ದುರ್ಮಿಯಲ್ಲಿ ಜರುಗಿತು. ಹಿಂದೂ ಹಾಗೂ ಕ್ರೈಸ್ತ ಸಮುದಾಯದವರು ಈ ಪ್ರದೇಶದಲ್ಲಿ ಅನ್ಯೂನ್ಯತೆಯಿಂದ ವಾಸಿಸುತ್ತಿದ್ದು ಪ್ರತಿವರ್ಷ ಹೊಸವವರ್ಷದ ಸಂದರ್ಭದಲ್ಲಿ ತಿಂರಂಗಾ ಫ್ರೆಂಡ್ಸ್ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಬಟವಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪಡುವರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ದೀಪಾ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯ ಮಾಣಿಕ್ಯ ಹೋಬಳಿದಾರ್ ಮೊದಲಾದವರು ಉಪಸ್ಥಿತರಿದ್ದರು. ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಕಾರ್ಯಕ್ರಮಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
