ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿ ಜಿಲ್ಲಾ ಮಾತಾ ಅಮೃತಾನಂದಮಯಿ ಸೇವಾ ಸಮಿತಿ ನೇತ್ರತ್ವದಲ್ಲಿ ಫೆ.೨೫ರಂದು ಉಡುಪಿಗೆ ಆಗಮಿಸಲಿರುವ ಸದ್ಗುರು ಮಾತಾ ಶ್ರೀ ಅಮೃತಾನಂದ ಮಯಿಯವರ ಕಾರ್ಯಕ್ರಮದ ಹಿನ್ನಲೆಯಲ್ಲಿ ಕುಂದಾಪುರದ ಹೋಟೆಲ್ ಹರಿಪ್ರಸಾದ್ ಸಭಾಂಗಣದಲ್ಲಿ ಕುಂದಾಪುರ ತಾಲೂಕು ಮಟ್ಟದ ಪೂರ್ವಭಾವಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮ ಸುವ್ಯವಸ್ಥೆಯಿಂದ ನಡೆಯುವಂತಾಗಲು ತಯಾರಿಯ ದೃಷ್ಠಿಯಿಂದ ಕುಂದಾಪುರ ತಾಲೂಕು ಮಟ್ಟದಲ್ಲಿ ಶ್ರೀ ಮಾತಾ ಅಮೃತಾನಂದಮಯಿ ಸೇವಾ ಸಮಿತಿಯನ್ನು ರಚಿಸಲಾಯಿತು. ಬಸ್ರೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೋಕ್ತೇಸರರಾದ ಬಿ. ಅಪ್ಪಣ್ಣ ಹೆಗ್ಡೆ ಅವರು ಗೌರವಾಧ್ಯಕ್ಷರಾಗಿರುವ ಸಮಿತಿಯ ಅಧ್ಯಕ್ಷರಾಗಿ ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯೆ ಶ್ರೀಮತಿ ಕಲ್ಪನಾ ಭಾಸ್ಕರ್ ಆಯ್ಕೆಯಾದರು. ಆರ್ಥಿಕ ಸಮಿತಿ ಸಂಚಾಲಕರಾಗಿ ಕೃಷ್ಣಪ್ರಸಾದ ಅಡ್ಯಂತಾಯ, ಪ್ರಚಾರ ಸಮಿತಿ ಸಂಚಾಲಕರಾಗಿ ಪುಂಡಲೀಕ ಬಂಗೇರ, ಬೀಜಾಡಿ, ಉಪಾಧ್ಯಕ್ಷರಾಗಿ ಹೆರಿಯಣ್ಣ ಬೀಜಾಡಿ, ಕೆ.ಕೆ. ಕಾಂಚನ್, ಕಿಶೋರ್ ಶೆಟ್ಟಿ ಮಂದಾರ್ತಿ, ಬಿ. ಚಂದ್ರಶೇಖರ, ಶ್ರೀಮತಿ ಆಶಾ ಎಸ್. ಶೆಟ್ಟಿ, ಪ್ರಧಾನ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಬಾನಲ್ಲಿ ಬಣ್ಣದ ಗಾಳಿಪಟ ಚಿಟ್ಟೆಗಳ ಹಾರಾಟ, ಚಾರ್ಲಿ ಚಾಪ್ಲಿನಿಂದ ಹಿಡಿದು, ಮಿಕಿಮೌಸ್ ವರೆಗೆ, ಯಕ್ಷಗಾನ ಬಣ್ಣದ ಒಡ್ಡೋಲಗ ಮೊದಲ್ಗೊಂಡು ಪುಟಾಣಿ ಗಾಳಿಪಟಗಳು ಬಾನೆತ್ತರದಲ್ಲಿ ವೈಯ್ಯಾರದಲ್ಲಿ ವಾಲಿ, ಅಕ್ಕಪಕ್ಕ ತೇಲಿ, ಒಮ್ಮೆ ಕೆಳಕ್ಕೆ ಬಂದು ಮತ್ತೆ ಸರಕ್ಕಂತ ಮೇಲಕ್ಕೇರುವ ಮೂಲಕ ಕೋಡಿಯಲ್ಲಿ ಗಾಳಿಪಟ ಮಾಡಿದ ಮೋಡಿ ಅವರ್ಣಿನೀಯ. ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆ ಕೋಟೇಶ್ವರ ಕಿನಾರೆಯಲ್ಲಿ ಮೂರನೇ ಬಾರಿಗೆ ಆಯೋಜಿಸಿದ್ದ ಗಾಳಿಪಟ ಉತ್ಸವ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.. ಟೀಮ್ ಮಂಗಳೂರು ಮತ್ತು ಒನ್ ಇಂಡಿಯಾ ಕೈಟ್ ಟೀಮ್ ಕೇರಳ ಉತ್ಸವದಲ್ಲಿ ಪಾಲ್ಗೊಂಡಿತ್ತು. ಕಡಲಬ್ಬರದ ಅಲೆಗಳ ಜೋರಿಗೆ ಗಾಳಿ ಪಟ ಹಾರಿಸುವ ಉಮೇದು ಜೋರಾಗಿಯೇ ನಡೆದಿತ್ತು. ಕಿರಿಕ್ ಪಾರ್ಟಿ ಸಿನೇಮಾ ನಿರ್ದೇಶಕ ರಿಶಬ್ ಶೆಟ್ಟಿ ಹಾಗೂ ಅವರ ಉತ್ಸವದ ಮೆರಗು ಹೆಚ್ಚಿಸಿದ್ದವು. ಒಂದು ಕಡೆ ಗಾಳಿಪಟದೊಟ್ಟಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರೆ, ಮತ್ತಷ್ಟು ಜನ ಸಿನೇಮಾ ಮಂದಿಯೊಟ್ಟಿಗೆ ಸೆಲ್ಫಿ ಕ್ರೇಜಿಗೆ ಬಿದ್ದಿದ್ದರು. ಅಲ್ಲೆ ಅರಳಿದ ಮರಳು ಶಿಲ್ಪ ಕಲೆ ಸಮುದ್ರ ತೀರಕ್ಕೊಂದು…
ಕುಂದಾಪ್ರ ಡಾಟ್ ಕಾಂ ಲೇಖನ ಕುಂದಾಪುರ: ತಾಲೂಕಿನ ಬಹು ಪುರಾತನ ದೇವಾಲಯಗಳಲ್ಲಿ ಸೇನಾಪುರದ ಶ್ರೀ ವಿಷ್ಣುಮೂರ್ತಿ ದೇವಸ್ಥಾನವೂ ಪ್ರಮುಖವಾದುದು. ಸುಮಾರು 1400 ವರ್ಷಗಳ ಇತಿಹಾಸ ಹೊಂದಿರುವ ದೇವಸ್ಥಾನ ಶ್ರೀ ವಿಷ್ಣುಮೂರ್ತಿ ದೇವರ ಆರಾಧನೆ ಪ್ರಧಾನವಾದುದು. ಮುರುಕಲ್ಲಿನ ಗರ್ಭಗುಡಿ ಹಾಗೂ ಎಡನಾಳಿ ಹೊಂದಿದ್ದ ದೇವಸ್ಥಾನದಲ್ಲಿ ಮೂರು ಅಡಿ ಎತ್ತರದ ರುದ್ರಾಕ್ಷಿ ಶಿಲೆಯಿಂದ ಭವ್ಯ ವಿಗ್ರಹ ನಿರ್ಮಿಸಲಾಗಿದೆ. ಮುಂಭಾಗದಲ್ಲಿ ತೀರ್ಥ ಮಂಟಪ ಹಾಗೂ ಸುತ್ತಲೂ ಬಲಿ ಕಲ್ಲುಗಳಿವೆ. ಈಶಾನ್ಯದಲ್ಲಿ ಕ್ಷೇತ್ರಪಾಲ, ದೇವರ ಪುಷ್ಕರಿಣಿಯೂ ಇರುವ ಸ್ಥಳವಿದೆ. ದೇವಸ್ಥಾನ ಪಶ್ಚಿಮ ದಿಕ್ಕಿನಲ್ಲಿ ಪರಿವಾರ ದೈವಸ್ಥಾನವಿದೆ. ದೇವರ ಕಂಬಳಗದ್ದೆಯು ದೇಗುಲದ ಪಕ್ಕದಲ್ಲೇ ಇದೆ. ಅನಾದಿಕಾಲದಿಂದ ದೇವರ ರಥೋತ್ಸವ ಹಾಗೂ ಇತರ ಉತ್ಸವ ನಡೆದ ಬಗ್ಗೆ ಕುರುಹುಗಳು ಸಿಗುತ್ತದೆ. ದೇವಸ್ಥಾನದ ಪರಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದ ಹುಟ್ಟು ಕಟ್ಟು ಮತ್ತು ಬಾಗಿನಮನೆ ಕುಟುಂಬದವರು ಈಗಲೂ ದೇವಸ್ಥಾನದ ಪರಿಸದರಲ್ಲಿಯೇ ವಾಸವಾಗಿದ್ದಾರೆ. ದೇವಳದ ಶ್ರೀ ದೇವರ ಪ್ರಭಾವಳಿಯು ಹಿತ್ತಾಳೆಯದ್ದು. ಗರ್ಭಗೃಹದ ಮಹಾದ್ವಾರಕ್ಕೆ ಹಿತ್ತಾಳೆಯ ಕವಚನ್ನು ಅಳವಡಿಸಲಾಗಿದ್ದು ಅದರಲ್ಲಿ ಶಾಲಿವಾಹನ ಶಕ 1,666 ಸೇನಾಪುರ ಮಾಧವ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಾತನಾಡುವ ಮಹಾಲಿಂಗ ಎಂದೇ ಪ್ರಖ್ಯಾತಿ ಪಡೆದಿರುವ ಕುಂದಾಪುರ ತಾಲೂಕಿನ ಉಳ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಜ ನೂತನವಾಗಿ ಶಿಲಾಮಯಗೊಂಡ ಗರ್ಭಗುಡಿ, ತೀರ್ಥಮಂಟಪ ಸಮರ್ಪಣಾ ಕಾರ್ಯ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯವು ಫೆಬ್ರವರಿ 7ರಿಂದ ಮೊದಲ್ಗೊಂಡು ಫೆಬ್ರವರಿ 9ರ ತನಕ ನಡೆಯಲಿದೆ. ಉಳ್ತೂರು ಜನರ ಆರಾಧ್ಯ ದೇವರಾಗಿರುವ ಶ್ರೀ ಮಹಾಲಿಂಗೇಶ್ವರನನ್ನು ವೋಳತ್ತೂರು ಕೇರಿಯ ಮಹಾದೇವ, ಮತಾನಾಡುವ ಮಹಾಲಿಂಗ ಎಂಬಿತ್ಯಾದಿ ಹೆಸರುಗಳಿಂದ ಕರೆಯಲಾಗುತ್ತಿರುವುದು ಕ್ಷೇತ್ರದ ಮ ಹಿಮೆಯನ್ನು ಸಾರಿ ಹೇಳುತ್ತದೆ. ಒಂದು ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ದೇವಾಲಯ ಕ್ರಮೇಣ ಪ್ರಾಕೃತಿಕ ಸನ್ನಿವೇಶಗಳಿಗೆ ಮಯ್ಯೊಡ್ಡಿ ಶಿಥಿಲಗೊಂಡಿತ್ತು. ಇತ್ತಿಚಿಗೆ ಮತ್ತೆ ಊರ ಪ್ರಮುಖರ ನೇತೃತ್ವದಲ್ಲಿ ದೇವಸ್ಥಾನದ ಜೀಣೋದ್ಧಾರ ಕಾರ್ಯ ನಡೆದಿದ್ದು ಪ್ರಥಮ ಹಂತವಾಗಿ ಹೊರ ಹೆಬ್ಬಾಗಿಲು ಮತ್ತು ವಸಂತ ಮಂಟಪ, ರಥದ ಮನೆ ಮತ್ತು ನೂತನ ನಂದಿ ವಿಗ್ರಹ ಬಳಿಕ ದೇವಸ್ಥಾನದ ಗರ್ಭಗುಡಿ, ತೀರ್ಥಮಂಟಪ, ಒಳಹೆಬ್ಬಾಗಿಲು ಮತ್ತು ಒಳಸುತ್ತಿನ ಕಲ್ಲು ಹಾಸು ಕಾರ್ಯ ಪೂರ್ಣಗೊಂಡಿದೆ. ದೇವಸ್ಥಾನದ ಜೀಣೋದ್ಧಾರ ಸಮಿತಿ ಅಧ್ಯಕ್ಷರಾದ ಮಂಬೈ ವಾಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಂಗಕಲೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ನಮ್ಮ ಮಾತು, ವರ್ತನೆ ಹಾಗೂ ಉತ್ತಮವಾಗಿ ಬದುಕು ರೂಪಿಸಿಕೊಳ್ಳುವ ಕಲೆ ಸಿದ್ಧಿಸುತ್ತದೆ. ಇಂತಹ ಸಂಸ್ಕೃತಿಯೊಂದಿಗೆ ಮುಂದಿನ ಪೀಳಿಗೆಯನ್ನು ಬೆಳಸಬೇಕಾಗಿದೆ. ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಒಳಗೊಂಡ ಸಮಾಜ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ರಂಗನಿರ್ದೇಶಕ ಬಾಸುಮಾ ಕೊಡಗು ಹೇಳಿದರು. ಅವರು ಲಾವಣ್ಯ ರಿ. ಬೈಂದೂರು ಆಶ್ರಯದಲ್ಲಿ ೪೦ನೇ ವರ್ಷದ ಸಂಭ್ರಮದೊಂದಿಗೆ ಜರುಗುತ್ತಿರುವ ರಂಗಲಾವಣ್ಯ – ಕಲಾಮಹೋತ್ಸವ ೨೦೧೭ರ ಏಳನೇ ದಿನದ ಕಾರ್ಯಕ್ರಮದಲ್ಲಿ ಶುಭಶಂಸನೆಗೈದರು. ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಆರಂಭಿಸುವ ಸಂಸ್ಥೆಗಳು ಅದರ ಸಾಧನೆಗಾಗಿಯೇ ತೊಡಗಿಕೊಳ್ಳುತ್ತದೆಯೇ ಹೊರತು ದುಡ್ಡಿನ ಹಿಂದೆ ಬೀಳುವುದಿಲ್ಲ ಎಂದರು. ಲಾವಣ್ಯದ ಕಲಾವಿದರುಗಳಾದ ನಾಗರಾಜ ಗಾಣಿಗ ಬಂಕೇಶ್ವರ, ನಾಗರಾಜ ಪಿ. ಯಡ್ತರೆ, ಸುರೇಶ್ ಹುದಾರ್, ಸುಧಾಕರ ಜೆ, ನಾಗೇಂದ್ರ ಗಾಣಿಗ ಬಂಕೇಶ್ವರ, ನಾಗರಾಜ ತೊಂಡೆಹಿತ್ಲು ಅವರನ್ನು ಸನ್ಮಾನಿಸಲಾಯಿತು. ಉಡುಪಿ ಪಿಪಿಸಿ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಮಾಧವಿ ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ಕನ್ನಡ ಸಾಹಿತ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟೇಶ್ವರ: ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವರ ಪ್ರತಿಷ್ಠಾ ವರ್ಧಂತ್ಯುತ್ಸವ ಜರುಗಿತು. ಬೆಳಿಗ್ಗೆ ದೇವತಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ ಸಾನಿಧ್ಯ ಹೋಮ,ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ, ಪವಮಾನ ಕಲಶಾಭಿಷೇಕ, ಶತಕಲಶಾಭಿಷೇಕ, ಮಂಗಲ ದ್ರವ್ಯ ನಿರೀಕ್ಷಣೆ, ಮಧ್ಯಾಹ್ನ ಮಹಾಪೂಜೆ ಹಾಗೂ ಮಹಾ ಸಂತರ್ಪಣೆ ನಡೆಯಿತು. ಸಂಜೆ ಮೊದಲು ೬ ಘಂಟೆಗೆ ಬೆಳ್ಳಿ ಪಲ್ಲಕಿಯಲ್ಲಿ ಹಗಲು ಉತ್ಸವ, ರಾತ್ರಿ ರಜತ ಪುಷ್ಪ ರಥ ಉತ್ಸವ ನಡೆಯಿತು. ವಿಶೇಷವಾಗಿ ಹೂವಿನಿಂದ ಅಲಂಕರಿಸಿದ ಬೆಳ್ಳಿ ರಥ ಪೇಟೆಯ ನಾಲ್ಕು ಪ್ರಮುಖ ಬೀದಿಗಳಲ್ಲಿ ಸಾಗಿ ಬಂತು. ಈ ಸಂದರ್ಭದಲ್ಲಿ ಸಮಾಜ ಭಾಂದವರು ಆರತಿ ನೀಡಿ ದೇವರ ಅನುಗ್ರಹಕ್ಕೆ ಪಾತ್ರರಾದರು. ಅಲ್ಲದೇ ಬೀದಿಯ ಪ್ರಮುಖ ಕಟ್ಟೆಯಲ್ಲಿ ದೇವರನ್ನು ಕುಳ್ಳಿರಿಸಿ ವಿಶೇಷ ಪೂಜೆ ನಡೆಸಲಾಯಿತು. ರಥದೊಂದಿಗೆ ದೇವರ ಭಜನೆ,ಸಂಕೀರ್ತನೆಯೊಂದಿಗೆ ಸಾಗಿ ಬಂದ ಭಜನಾ ತಂಡ ಮನೆಯ ಎದುರುಗಡೆ ಬಿಡಿಸಿದ ರಂಗೋಲಿ ಹಾಗೂ ದೀಪಕ್ಕೆ ಸುತ್ತು ಬಂದು ಮುಂದೆ ಸಾಗಿದರು. ರಾತ್ರಿ ದೇವಳದಲ್ಲಿ ಅಷ್ಠಾವಧಾನ ಸೇವೆ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯಡ್ತರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೈಂದೂರು ವೃತ್ತದ (ಬೈಪಾಸ್) ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮೇಲ್ ಸೇತುವೆ ನಿರ್ಮಿಸಬೇಕೆಂಬ ಆಗ್ರಹಿಸಿ ಬೈಂದೂರು ವಲಯ ರಾಷ್ಟ್ರೀಯ ಹೆದ್ದಾರಿ 66 ನಿರ್ಮಾಣ ಜಾಗೃತ ಸಮಿತಿ ನೇತೃತ್ವದಲ್ಲಿ ಬೈಪಾಸ್ ಬಳಿ ಬೃಹತ್ ಪ್ರತಿಭಟನೆ ಜರುಗಿತು. ಬೈಂದೂರು ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಪ್ರಗತಿಯಲ್ಲಿದ್ದು, ಪಾದಾಚಾರಿಗಳಿಗೆ, ಬೈಂದೂರು ನಗರ-ಬಂಕೇಶ್ವರ ರಸ್ತೆಯಲ್ಲಿ ಸಂಚರಿಸುವವರಿಗೆ ಒಳಸುರಂಗ (ಪಿಯುಪಿ) ನಿರ್ಮಿಸುವ ಕುರಿತು ನೀಲನಕ್ಷೆಯ ತಯಾರಾಗಿದೆ. ಆದರೆ ತಾಲೂಕು ಕೇಂದ್ರವಾಗಲಿರುವ ಬೈಂದೂರಿನ ಅಭಿವೃದ್ಧಿಗೆ ಇದರಿಂದ ಈ ನಿರ್ಧಾರದಿಂದ ತೊಂದರೆಯಾಗಲಿದೆ. ಈ ಕುರಿತು ಕಳೆದ ೨-೩ ವರ್ಷಗಳಿಂದ ಸಂಬಂಧಪಟ್ಟವರಿಗೆ ಸಾಕಷ್ಟು ಮನವಿಗಳನ್ನು ಸಲ್ಲಿಸಿದ್ದರೂ ಯಾವುದೇ ರೀತಿಯ ಸಕರಾತ್ಮಕ ಪ್ರತಿಸ್ಪಂದನ ದೊರೆತಿಲ್ಲ. ಬಹುಜನರ ಬೇಡಿಕೆಗೆ ಸ್ಪಂದಿಸದ ಇಲಾಖೆಯ ಧೋರಣೆಯನ್ನು ಖಂಡಿಸುವುದಾಗಿ ಪ್ರತಿಭನಾಕಾರರು ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದರು. ಬೈಂದೂರು ತಹಶೀಲ್ದಾರರ ಮೂಲಕ ಸಂಬಂಧಿಸಿದ ಇಲಾಖೆಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನಾಕಾರರು ಕೆಲಹೊತ್ತು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಬೈಂದೂರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಉಡುಪಿ ಜಿಲ್ಲೆಯವರಿಂದ ನಡೆದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕೇತ್ರದಲ್ಲಿ ಹೊಂದಿರುವ ಅಸಾಧಾರಣ ಪ್ರತಿಭೆಯನ್ನು ಗುರುತಿಸಿ ೨೦೧೬-೧೭ನೇ ಸಾಲಿನಲ್ಲಿ ಪರಮೇಶ್ವರ ಐತಾಳ ಕೋಟೇಶ್ವರ ಇವರ ಪುತ್ರಿ ಅಶ್ವಿನಿ ಬಿ ಜಿಲ್ಲಾ ಮಟ್ಟದ ಅಸಾಧಾರಣ ಪ್ರತಿಭಾ ಪುರಸ್ಕಾರ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಅಶ್ವಿನಿಯು ಸೇವಾ ಸಂಗಮ ವಿದ್ಯಾಕೇಂದ್ರದ ೫ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು ಶಾಲೆಗೆ ಕೀರ್ತಿ ತಂದಿರುವರು. ಅಶ್ವಿನಿಗೆ ಶಾಲಾ ಆಡಳಿತ ಮಂಡಳಿಯವರು, ಶಿಕ್ಷಕರು ಅಭಿನಂದಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಆರೋಗ್ಯಯುವ ಜೀವನಕ್ಕೆ ಆಯುರ್ವೇದದ ದಿನಚರಿಗಳು ಹಾಗೂ ಆಹಾರ ಪದ್ಧತಿಗಳನ್ನು ಪಾಲಿಸಬೇಕು. ಆಯುರ್ವೇದ, ಮನೆಮದ್ದಿನ ಅರಿವು ಮೂಡಿಸಲು ಪ್ರಯತ್ನಿಸಬೇಕು. ವಿವಿಧ ಪ್ರದೇಶಗಳಲ್ಲಿ ಆಯುರ್ವೇದದ ಬಗ್ಗೆ ಕಾರ್ಯಾಗಾರ ನಡೆಸಿ ಜನರಿಗೆ ಆಯುರ್ವೇದದ ಬಗ್ಗೆ ನಂಬಿಕೆ, ವಿಶ್ವಾಸ ಮೂಡಿಸಲು ಮುಂದಾಗಬೇಕು ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು. ಅವರು ಆಯುಷ್ ಇಲಾಖೆ ಬೆಂಗಳೂರು, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆಯುಷ್ ಇಲಾಖೆ ಉಡುಪಿ, ಹಾಗೂ ಸರಕಾರಿ ಆಯುಷ್ ಚಿಕಿತ್ಸಾಲಯ ಕಾಲ್ತೋಡು ಇವರ ಸಂಯುಕ್ತ ಆಶ್ರಯದಲ್ಲಿ ಕುಂದಾಪುರದ ಹೊಟೇಲ್ ಶೆರೋನ್ ಸಭಾಂಗಣದಲ್ಲಿ ಜರಗಿದ ಒಂದು ದಿನದ ತಾಲೂಕು ಮಟ್ಟದ ಆಯುಷ್ ಸೆಮಿನಾರ್/ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಕುಂದಾಪುರ ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಜಯಶ್ರೀ ಎಸ್.ಮೊಗವೀರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಪಂ ಉಪಾಧ್ಯಕ್ಷ ಪ್ರವೀಣ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಜಿ.ಪುತ್ರನ್, ತಾಪಂ ಸದಸ್ಯರಾದ ನಾರಾಯಣ ಕೆ.ಗುಜ್ಜಾಡಿ, ರಾಜು ದೇವಾಡಿಗ ತ್ರಾಸಿ, ಕುಂದಾಪುರ ಪುರಸಭೆ ಉಪಾಧ್ಯಕ್ಷ ರಾಜೇಶ ಕಾವೇರಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಾರತ್ ಸ್ಕೌಟ್ಸ್ ಎಂಡ್ ಗೈಡ್ಸ್ ಆಶ್ರಯದಲ್ಲಿ ಕರ್ನಾಟಕದಲ್ಲಿ 33 ವರ್ಷದ ಬಳಿಕ ಮೊದಲ ಬಾರಿಗೆ ಮೈಸೂರಿನಲ್ಲಿ ನಡೆದ 17ನೇ ರಾಷ್ಟ್ರೀಯ ಜಾಂಬೋರಿ ಸಮ್ಮೇಳನದಲ್ಲಿ ಭಾಗವಹಿಸಿದ ಕುಂದಾಪುರ ತಾಲೂಕಿನ ಬಿದ್ಕಲ್ಕಟ್ಟೆ ಸ.ಪ.ಪೂ. ಕಾಲೇಜಿನ ಉಪನ್ಯಾಸಕ ಹಾಗೂ ಸ್ಕೌಟ್ ಲೀಡರ್ ರವಿಚಂದ್ರ ಅವರಿಗೆ ಸಮ್ಮೇಳನದಲ್ಲಿ ಅತ್ಯುತ್ತಮ ವಯರ್ಲೆಸ್ ಕಮ್ಯೂನಿಕೇಶನ್ ಸೇವೆಗೆ ಇಂಡಿಯನ್ ಇನ್ಸಿಟ್ಯೂಟ್ ಆಫ್ ಹಾಮ್ಸ್ ಸಂಸ್ಥೆ ಪ್ರಶಸ್ತಿ ಪತ್ರ ನೀಡಿ ಪುರಸ್ಕರಿಸಿದೆ.
