ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜೇಸಿಐ ಕುಂದಾಪುರ ಸಿಟಿಯ ಜ್ಯೂನಿಯರ್ ಜೇಸಿ ಅಧ್ಯಕ್ಷರಾಗಿ ಕುಂದಾಪುರದ ಪ್ರಜ್ವಲ್ ದೇವಾಡಿಗ ಅವರನ್ನು ಆಯ್ಕೆ ಮಾಡಿರುವುದಾಗಿ ಜೇಸಿಐ ಕುಂದಾಪುರ ಸಿಟಿಯ ಅಧ್ಯಕ್ಷ ಶ್ರೀಧರ ಸುವರ್ಣ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮಕ್ಕಳಿಗೆ ಶಿಕ್ಷಣ ಶಿಕ್ಷೆಯಾಗಬಾರದು. ನಿಮ್ಮ ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಕೆ ಮಾಡಬೇಡಿ. ತಾಯಂದಿರು ತಮ್ಮ ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಆ ಮಾರ್ಗದಲ್ಲಿಯೇ ಅವರನ್ನು ಮುನ್ನೆಡೆಸುವ ಜೊತೆಗೆ ಬದುಕಿಗೆ ಬೇಕಾದ ಮೌಲ್ಯಯುತ ಶಿಕ್ಷಣ, ಸಂಸ್ಕಾರ ಹಾಗೂ ರಾಷ್ಟ್ರಪ್ರೇಮವನ್ನು ಕಲಿಸುವ ಗುರುತರ ಜವಾಬ್ದಾರಿಯನ್ನು ನಿರ್ವಹಿಸಬೇಕು. ಇದರಿಂದ ಮಕ್ಕಳ ಭವಿಷ್ಯ ಉತ್ತಮಗೊಳಿಸಲು ಸಾಧ್ಯವಾಗುತ್ತದೆ ಎಂದು ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ ಹೇಳಿದರು. ಹೇರಂಜಾಲು ಸಹಿಪ್ರಾ ಶಾಲೆಯ ನೂತನ ಅಕ್ಷರ ದಾಸೋಹ ಕೊಠಡಿ ಉದ್ಘಾಟನೆ ಮತ್ತು ಕವಿ ಮೊಗೇರಿ ಗೋಪಾಲಕೃಷ್ಣ ಅಡಿಗ ವೇದಿಕೆಯಲ್ಲಿ ನಡೆದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳ ಸಂಪೂರ್ಣ ಶಿಕ್ಷಣಾ ವೆಚ್ಚ ಭರಿಸುವ ಮತ್ತು ಕಲಿಕಾ ಸಾಮಗ್ರಿಗಳನ್ನು ನೀಡುವ ಮೂಲಕ ಸರ್ಕಾರ ವಿದ್ಯೆಗೆ ಹೆಚ್ಚು ಒತ್ತು ಕೊಡುತ್ತಿದೆ. ಶಾಲೆಯಲ್ಲಿ ದೊರೆಯುವ ಸರಕಾರಿ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ಉತ್ತಮ ಕಲಿಕೆಯೊಂದಿಗೆ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷತೆವಹಿಸಿದ್ದ ಜಿಪಂ ಸದಸ್ಯೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ವಿದ್ಯಾರ್ಥಿಗಳಿಗೆ ಶಿಕ್ಷಕರ ಮೇಲೆ ವಿಶ್ವಾಸವಿರಬೇಕು. ತರಗತಿಗಳಲ್ಲಿ ಕಲಿಸಿದ ಪಾಠ ಪ್ರವಚನಗಳನ್ನು ದಿನನಿತ್ಯ ಅಭ್ಯಾಸ ಮಾಡಬೇಕು. ತಿಳಿಯದ ವಿಷಯಗಳನ್ನು ಅಧ್ಯಾಪಕರಲ್ಲಿ ಕೇಳಿ ತಿಳಿದುಕೊಳ್ಳಬೇಕು. ಮಕ್ಕಳಿಗೆ ಯಾವುದೇ ವಿಷಯದಲ್ಲಿ ಬಲವಂತ ಮಾಡದೆ ಅವರಿಗೆ ಕಲಿಯಲು ಪ್ರೋತ್ಸಾಹ ನೀಡಬೇಕು. ಮಕ್ಕಳನ್ನು ಟ್ಯೂಷನ್ ತರಗತಿಗಳಿಗೆ ಕಳುಹಿಸುವುದರಿಂದ ಅವರಲ್ಲಿ ಗೊಂದಲ ಇನ್ನಷ್ಟು ಹೆಚ್ಚಾಗಿ ಅವರು ವಿದ್ಯಾಭ್ಯಾಸದಲ್ಲಿ ಹಿಂದುಳಿಯುವ ಸಾಧ್ಯತೆಗಳಿದೆ ಎಂದು ಅಂಪಾರು ಸಂಜಯ ಗಾಂಧಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಯು. ಗೀತಾ ಶ್ಯಾನುಭಾಗ್ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಠಾರದಲ್ಲಿ ಜರಗಿದ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದರು. ಯು. ರವೀಂದ್ರ ಶ್ಯಾನುಭಾಗ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಪ್ರಾಕ್ತನ ವಿದ್ಯಾರ್ಥಿ ಶ್ರೀಕಾಂತ ಶ್ಯಾನುಭಾಗ್ ಬೆಂಗಳೂರು ಸ್ವಸ್ಥಿವಾಚನಗೈದರು. ಗಂಗೊಳ್ಳಿಯ ಜಿಎಸ್ವಿಎಸ್ ಅಸೋಸಿಯೇಶನ್ ಅಧ್ಯಕ್ಷ ಡಾ.ಕಾಶೀನಾಥ ಪೈ, ಕಾರ್ಯದರ್ಶಿ ಎಚ್.ಗಣೇಶ ಕಾಮತ್, ಎಸ್.ವಿ.ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ., ಶಾಲೆಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ವಿದ್ಯಾರ್ಥಿಗಳು ಸೋಲಿಗೆ ಕುಗ್ಗದೆ, ಗೆಲುವಿಗೆ ಹಿಗ್ಗದೆ ಕ್ರೀಡಾ ಮನೋಭಾವನೆಯಿಂದ ಕ್ರೀಡೆಗಳಲ್ಲಿ ಭಾಗವಹಿಸಿ ಕ್ರೀಡಾ ಸ್ಫೂರ್ತಿ ಪ್ರದರ್ಶಿಸಬೇಕು. ನಿರಂತರವಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಆಗುವುದರಿಂದ ಮಕ್ಕಳಿಗೆ ಕ್ರೀಡಾ ಚಟುವಟಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಗಂಗೊಳ್ಳಿಯ ಸಮಾಜಸೇವಕ ಜಿ.ಗಣಪತಿ ಶಿಪಾ ಹೇಳಿದರು. ಅವರು ನಡೆದ ಗಂಗೊಳ್ಳಿ ಖಾರ್ವಿಕೇರಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಶಾಲೆಯ ಮುಖ್ಯಶಿಕ್ಷಕಿ ಸುಜಾತಾ ಕೆ., ಸ್ಥಳದಾನಿಗಳಾದ ಮೋಹನದಾಸ ಕಾನೋಜಿ, ಜ್ಞಾನದಾಸ ಕಾನೋಜಿ, ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ನಾಗರಾಜ ಖಾರ್ವಿ, ಸದಸ್ಯರಾದ ರವಿಶಂಕರ ಖಾರ್ವಿ, ಶ್ರೀಧರ ಮೊಗವೀರ, ಪವಿತ್ರ ಮೇಸ್ತ, ಶಾರದಾ, ಮಮತಾ, ದಿವಾಕರ ಖಾರ್ವಿ, ರಾಮ ಖಾರ್ವಿ, ಸುಧಾಕರ ಖಾರ್ವಿ, ವೆಂಕಟೇಶ ಕೋಟಾನ್, ಇಂದಿರಾ, ರೇಣುಕಾ, ಮಾನಸ, ಶಾಲೆಯ ಸಹಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಈ ಬಾರಿ ಎಂಪಿಎಲ್ ಮ್ಯಾಂಗಳೂರು ಪ್ರೀಮಿಯರ್ ಲೀಗ್ನಲ್ಲಿ ಕುಂದಾಪುರದ ಅದುವೇ ಪ್ರೆಸಿಡೆಂಟ್ ಸಿಕ್ಸರ್ಸ್ ಕ್ರಿಕೆಟ್ ತಂಡ ಭಾಗವಹಿಸುತ್ತಿದೆ. ಈ ತಂಡದ ಉದ್ಘಾಟನಾ ಸಮಾರಂಭ, ಕೋಟೇಶ್ವರ ಹೈಸ್ಕೂಲ್ ಮೈದಾನದಲ್ಲಿ ಜರುಗಿತು. ವರ್ಣರಂಜಿತ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ತುಳುನಾಡಿನ ಹೆಮ್ಮೆಯ ಪುತ್ರ ಸುನೀಲ್ ಶೆಟ್ಟಿ ತಂಡದ ಜೆರ್ಸಿಯನ್ನು ಮತ್ತು ತಂಡದ ಥೀಂ ಸಾಂಗ್ನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭ ಮಾತನಾಡಿದ ನಟ ಸುನೀಲ್ ಶೆಟ್ಟಿ, ನಮ್ಮಸ್ಕಾರ ಹೇಗಿದ್ದಿರಿ? ಎಂದು ಸಭಿಕರೊಂದಿಗೆ ಮಾತನಾಡಿದ ಸುನೀಲ್ ನಮಗೆ ಕನ್ನಡ ಸ್ವಲ್ಪ ಸ್ವಲ್ಪ ಬರುತ್ತದೆ. ತುಳು ಬರ್ತದೆ ಎಂದು ಮಾತನ್ನು ಶುರು ಮಾಡಿದರು. ನನಗೆ ಈ ಕಾರ್ಯಕ್ರಮಕ್ಕೆ ಬಂದಿರುವುದು ಬಹಳ ಸಂತೋಷವಾಗಿದೆ. ಕ್ರಿಕೆಟ್ ಎನ್ನುವುದು ನನ್ನ ಮೊದಲ ಪ್ಯಾಶನ್ ಆಗಿದೆ. ಆಯೋಜಕರು ನನಗೆ ನಮ್ಮನ್ನು ಬೆಂಬಲಿಸಿ ಎಂದಾಗ ಇಲ್ಲ ಎನ್ನಲಾಗಲಿಲ್ಲ. ಆ ಕಾರಣವಾಗಿ ಬಂದು ಬೆಂಬಲಿಸಿದ್ದೇನೆ. ನಾನು ಪ್ರೆಸಿಡೆಂಟ್ ಸಿಕ್ಸರ್ನ್ನು ಬೆಂಬಲಿಸುತ್ತೇನೆ ನೀವು ಬೆಂಬಲಿಸಿ ಎಂದು ಇಂಗ್ಲಿಷ್ ಮಿಶ್ರಿತ ತುಳುವಿನಲ್ಲಿ ತಮ್ಮ ಅಭಿಪ್ರಾಯ…
ಕರ್ತವ್ಯ, ಮಾನವೀಯತೆಗಿಂತ ಕಟ್ಟಡ ಕಟ್ಟಿಸುವುದರಲ್ಲೇ ಜನಪ್ರತಿನಿಧಿ, ಅಧಿಕಾರಿಗಳಿಗೆ ಆಸಕ್ತಿ! ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಗ್ರಾಮ ಪಂಚಾಯತ್ ಮಟ್ಟದಲ್ಲಿ ವಿಕಲಚೇತನರ ಆರೋಗ್ಯ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಲೆಂದೇ ಮೀಸಲಿಡುವ ಸರಕಾರದ ಶೇ.3% ಅನುದಾನದಲ್ಲಿ ನಾಡ ಗ್ರಾಮ ಪಂಚಾಯತ್ ಕಛೇರಿಯ ರ್ಯಾಂಪ್ ನಿರ್ಮಾಣಕ್ಕೆ ಮುಂದಾಗುವ ಮೂಲಕ ವಿಕಲಚೇತನರ ಹಕ್ಕು ಕಸಿದುಕೊಳ್ಳಲು ಮುಂದಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ವಿಕಲಚೇತನರಿಗೆ ಸವಲತ್ತು ವಿತರಣೆಗಾಗಿ ಅರ್ಜಿ ಆಹ್ವಾನಿಸಿದ್ದ ನಾಡ ಗ್ರಾ.ಪಂ ಕಚೇರಿ ನಾಮಫಲಕದಲ್ಲಿಯೂ ಸ್ಪಷ್ಟವಾಗಿ ಪ್ರಕಟಣೆಯನ್ನು ಹಾಕಿತ್ತು. ಅದರಂತೆ 54 ವಿಕಲಚೇತನರು ಅರ್ಜಿ ಸಲ್ಲಿಸಿದ್ದಾರೆ.ಫಲಾನುಭವಿಗಳ ಆಯ್ಕೆ ಮಾಡಿ, ಸೌಲಭ್ಯ ನೀಡಬೇಕಿದ್ದ, ಗ್ರಾಪಂ ರ್ಯಾಂಪ್ ಮಾಡಲು ವಿಕಲಾಂಗ ಚೇತರ ಅನುದಾನವೇ ಬೇಕಿತ್ತ ಎನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಮೊದಲು ಅರ್ಜಿ ಹಾಕುವಂತೆ ಹೇಳಿ, ನಂತರ ಅನುದಾನ ಬೇರೆ ವ್ಯವಸ್ಥೆಗೆ ಬಳಸಿಕೊಳ್ಳುದು ಎಷ್ಟು ಸಮಂಜಸ ಎನ್ನೋದು ವಿಕಲಾಂಗ ಚೇತನರು ಪ್ರಶ್ನಿಸುತ್ತಿದ್ದಾರೆ. ನಾಡಾ ಗ್ರಾಪಂನಲ್ಲಿ 1.8 ಲಕ್ಷ ರೂ.ವಿಕಲಾಂಗ ಚೇತನರಿಗೆ ವಿವಿಧ ಸೌಲಭ್ಯ ನೀಡಲು ಅನುದಾನವಿದ್ದು, ಅದರಲ್ಲಿ 8 ಸಾವಿರ ಶಿಕ್ಷಣಕ್ಕೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ತಗ್ಗರ್ಸೆ ಮಕ್ಕಿಗದ್ದೆ ಫೆಂಡ್ಸ್ ಸಂಯೋಜನೆಯಲ್ಲಿ ಶ್ರೀ ಪೆರ್ಡೂರು ಮೇಳದವರಿಂದ ಕುಂದಾಪುರ ತಾಲೂಕಿನಲ್ಲಿಯೇ ಮೊದಲು ಪ್ರದರ್ಶನ ಕಂಡ ಪುಪ್ಪಸಿಂಧೂರಿ ಯಕ್ಷಗಾನದಲ್ಲಿ ಗಾನ ಸಾರಥಿ ಬಿರುದಾಂಕಿತ ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ ಹಾಗೂ ಯಕ್ಷರಂಗದ ಸಿಡಿಲಮರಿ ಖ್ಯಾತಿಯ ಕಲಾವಿದ ತೀರ್ಥಹಳ್ಳಿ ಗೋಪಾಲ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ತಗ್ಗರ್ಸೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ನಾರಾಯಣ ಹೆಗ್ಡೆ ಈರ್ವ ಕಲಾವಿದರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಕ್ಕಿಗದ್ದೆ ಫೆಂಡ್ಸ್ನ ದೇವರಾಜ ಆಚಾರ್ಯ, ಗೋವಿಂದರಾಜ್ ಆಚಾರ್ಯ, ಪ್ರದೀಪ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಗಣೇಶ್ ಬಿಲ್ಲವ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗುರುಕುಲ ಪ.ಪೂ.ಕಾಲೇಜಿನಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ಕುಂದಾಪುರ, ವಕೀಲರ ಸಂಘ, ಕುಂದಾಪುರ ಅಭಿಯೋಗ ಇಲಾಖೆ ಕುಂದಾಪುರ ಹಾಗೂ ರೋಟರಿ ಮಿಡ್ಟೌನ್ ಕುಂದಾಪುರ ಇವರುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಯನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಉದ್ಘಾಟಿಸಿದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ರಾಜಶೇಖರ .ವಿ. ಪಾಟೀಲ್ ಮಾನವ ಹಕ್ಕುಗಳ ದಿನಾಚರಣೆಯ ಚರಿತ್ರೆ ಹಾಗೂ ಔಚಿತ್ಯವನ್ನು ವಿವರಿಸಿ , ಮಕ್ಕಳಲ್ಲಿ ಧನಾತ್ಮಕ ಹಾಗೂ ಆರೋಗ್ಯಕರ ಪೈಪೋಟಿ ಬೆಳೆಸಬೇಕು ಹಾಗೂ ೧೪ ವಯಸ್ಸಿಗಿಂತ ಕೆಳಗಿನ ಮಕ್ಕಳಿಗೆ ಅಂತರ್ಜಾಲ ಹಾಗೂ ಮೊಬೈಲ್ ಬಳಕೆಯ ನಿಷೇಧತೆ ತ್ವರಿತ ಅವಶ್ಯಕತೆಯಿದೆ ಎಂದರು. ಕುಂದಾಪುರ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ.ರವೀಶ್ಚಂದ್ರ ಶೆಟ್ಟಿ ರವರು ಮಾನವ ಹಕ್ಕುಗಳ ಅರಿವಿನ ಅವಶ್ಯಕತೆಯನ್ನು ವಿವರಿಸಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀ.ಶ್ರೀನಿವಾಸ ಸುವರ್ಣರವರು ಸಂವಿಧಾನವು ಜೀವಿಸುವ ಹಕ್ಕಿಗೆ ಹೆಚ್ಚಿನ ಶಕ್ತಿ ನೀಡಿದೆ ಹಾಗೂ ’ ಜೀವಿಸಿ ಹಾಗೂ ಜೀವಿಸಲು ಬಿಡಿ’ ನಿಯಮವನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಾವುಂದದ ಮೊಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಈದ್ ಮಿಲಾದ್ ಸಂಭ್ರಮಾಚರಣೆ ನಡೆಯಿತು. ನಸುಕಿನಲ್ಲಿ ಖತೀಬ್ ಇಕ್ರಮುಲ್ಲಾ ಸಖಾಫಿ ಅವರ ನೇತೃತ್ವದಲ್ಲಿ ನಬೀ ಮದಹ್ಗೀತೆ ಹಾಗೂ ಬುರ್ದಾ ಮಜ್ಲಿಸ್ ನಡೆಸಿ ನಬೀ ಜನ್ಮದಿನಾಚರಣೆಗೆ ಚಾಲನೆ ನೀಡಲಾಯಿತು. ಬೆಳಿಗ್ಗೆ ಮುತವಲ್ಲಿ ಬಿ. ಎ. ಸಯ್ಯದ್ ಧ್ವಜಾರೋಹಣಗೈದರು. ಮೆರವಣಿಗೆಯ ಬಳಿಕ ಮಧ್ಯಾಹ್ನ ಬೃಹತ್ ಅನ್ನದಾನ ನಡೆಯಿತು. ಈದ್ ಮಿಲಾದ್ ಪೂರ್ವಭಾವಿಯಾಗಿ ರವಿವಾರ ಜಮಾತ್ ಅಧ್ಯಕ್ಷ ಎನ್. ಅಬ್ದುಲ್ಲಾ ತೌಫೀಕ್ ಅವರ ಅಧ್ಯಕ್ಷತೆಯಲ್ಲಿ ಮಕ್ಕಳ ಪ್ರತಿಭಾ ಪ್ರದರ್ಶನ ನಡೆಯಿತು. ಕೇರಳ ಸಂಯುಕ್ತ ಸುನ್ನಿ ಶಿಕ್ಷಣ ಮಂಡಳಿ ನಡೆಸಿದ್ದ ಹತ್ತನೆ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ನಾವುಂದ ಕೋಯಾನಗರ ಬುಸ್ತಾನುಲ್ ಮದರಸದ ವಿದ್ಯಾರ್ಥಿನಿ ಆಯಿಶತ್ ಮೆಹರಾಜ್, ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ ಶಂಸೀರಾ ಮತ್ತು ಉಸ್ತಾದ್ ಹನೀಫ್ ಸಅದಿ ಅವರನ್ನು ಸನ್ಮಾನಿಸಲಾಯಿತು. ಬಿ. ಎಸ್. ಮೊಯ್ದಿನ್, ಡಬ್ಲ್ಯುಎಫ್ಕೆ ಹುಸೇನ್ ಹಾಜಿ, ಎಂ. ಎ. ಕಾದರ್ ಹಾಜಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಜೀವನದಲ್ಲಿ ವಿದ್ಯಯೇ ಮುಖ್ಯವಲ್ಲ. ವಿದ್ಯೆಯ ಜೊತೆಗೆ ಸಾಮಾನ್ಯಜ್ಞಾನ ಅತ್ಯಗತ್ಯ. ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿದ ಬಳಿಕ ಅಗತ್ಯ ತರಬೇತಿ ಪಡೆದುಕೊಂಡಾಗ ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯವಿದೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉತ್ತಮ ಸಾಧನೆಗೈದು ಉನ್ನತ ಸ್ಥಾನ ಅಲಂಕರಿಸಿದಾಗ ತಮಗೆ ಶಿಕ್ಷಣ ನೀಡಿದ ಶಾಲೆ ಹಾಗೂ ಅಧ್ಯಾಪಕರನ್ನು ಎಂದಿಗೂ ಮರೆಯಬಾರದು. ಶಾಲೆಯ ಅಭಿವೃದ್ಧಿಗೆ ತಮ್ಮಿಂದಾಗುವ ಸಹಾಯ ಮಾಡುವಂತಾಗಬೇಕು ಎಂದು ಬಳ್ಳಾರಿಯ ಉದ್ಯಮಿ ಪದ್ಮನಾಭ ಕೊತ್ವಾಲ್ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಠಾರದಲ್ಲಿ ಜರಗಿದ ಎಸ್.ವಿ.ಶಾಲೆಗಳ ಪ್ರಾಕ್ತನ ವಿದ್ಯಾರ್ಥಿ ಸಂಘದ ೪೭ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಂದಾಪುರ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಪೂಜಾರಿ, ಗಂಗೊಳ್ಳಿಯ ಜಿಎಸ್ವಿಎಸ್ ಅಸೋಸಿಯೇಶನ್ನ ಅಧ್ಯಕ್ಷ ಡಾ.ಕಾಶೀನಾಥ ಪೈ, ಗಂಗೊಳ್ಳಿಯ ಉದ್ಯಮಿ ಜಿ.ರಾಧಾಕೃಷ್ಣ ನಾಯಕ್ ಶುಭ ಹಾರೈಸಿದರು. ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜಿ.ಟಿ.ಮಂಜುನಾಥ ಅವರು ವಿವಿಧ ಸ್ಪರ್ಧೆಗಳಲ್ಲಿ…
