ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ಕರಾವಳಿ ಭಾಗದ ಸಂಸ್ಕೃತಿ, ಜನಪದ ಆಚರಣೆ, ಕ್ರೀಡೆ, ಜೀವನ ಶೈಲಿಯ ಶ್ರೀಮಂತಿಕೆ ಮತ್ತು ಕರಾವಳಿಯ ಖಾದ್ಯಗಳ ವೈವಿಧ್ಯತೆಯನ್ನು ಬೆಂಗಳೂರಿಗರಿಗೆ ಪರಿಚಯಿಸುವುದರ ಜೊತೆಗೆ ಇಲ್ಲಿ ನೆಲೆಸಿರುವ ಕರಾವಳಿಗರ ಅಪರೂಪದ ಸಮ್ಮಿಲನಕ್ಕೆ ವೇದಿಕೆ ಕಲ್ಪಿಸುವ ಮಹದಾಸೆಯೊಂದಿಗೆ ಬೆಂಗಳೂರಿನಲ್ಲಿ ಆಯೋಜಿಸುತ್ತಿರುವ ‘ನಮ್ಮೂರ ಹಬ್ಬ 2017’ಕ್ಕೆ ಸಕಲ ಸಿದ್ಧತೆ ನಡೆದಿದೆ. [quote font_size=”15″ bgcolor=”#ffffff” bcolor=”#dd3333″ arrow=”yes” align=”right”]ಜನವರಿ 21-22 ಶನಿವಾರ ಹಾಗು ಭಾನುವಾರ ಬೆಳಿಗ್ಗೆ 10 ರಿಂದ ರಾತ್ರಿ 10 ಗಂಟೆಯವರೆಗೆ ಬೆಂಗಳೂರಿನ ಜಯನಗರದ 5ನೇ ಹಂತದಲ್ಲಿರುವ ಚಂದ್ರಗುಪ್ತ ಮೌರ್ಯ ಕ್ರೀಡಾಂಗಣದಲ್ಲಿ (ಶಾಲಿನಿ ಗ್ರೌಂಡ್) ನಮ್ಮೂರ ಹಬ್ಬ ನಡೆಯಲಿದೆ.[/quote] ಹದಿನೈದು ಲಕ್ಷದಷ್ಟು ಕರಾವಳಿಯ ಮಂದಿ ಬದುಕು ಅರಸಿ ಬೆಂಗಳೂರಿನಲ್ಲಿಯೇ ನೆಲೆಸಿದ್ದರೂ ಕರಾವಳಿಯ ತಾಯಿಬೇರಿನ ಜೊತೆಗಿನ ಅನುಬಂಧವನ್ನು ಕಡಿದುಕೊಳ್ಳದೆ ಜತನದಿಂದ ಕಾಪಿಟ್ಟುಕೊಂಡಿದ್ದಾರೆ. ಇವರೆಲ್ಲರನ್ನೂ ಒಂದೇ ಸೂರಿನಡಿ ನೋಡುವ, ಅಪರೂಪದ ಕಲಾವಿದರಿಗೆ ವೇದಿಕೆ ಕೊಡುವ, ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಮೆಲುಕು ಹಾಕುವ ಹಾಗು ಸಂಸ್ಕೃತಿ ವಿನಿಮಯದಂತಹ ಸದುದ್ದೇಶದಿಂದ ಸತತವಾಗಿ ನಮ್ಮೂರ ಹಬ್ಬ ಆಯೋಜಿಸಲಾಗುತ್ತಿದೆ.…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜೆ.ಸಿ.ಐ ಕುಂದಾಪುರದ ಜ್ಯೂನಿಯರ್ ಜೆ.ಸಿ.ಐ 2017 ರ ಸಾಲಿನ ಅಧ್ಯಕ್ಷರಾಗಿ ಸುಬ್ರಮಣ್ಯ ಆಚಾರ್ ಗುಲ್ವಾಡಿ ಆಯ್ಕೆಯಾಗಿದ್ದಾರೆ ಯಕ್ಷಗಾನ, ನಾಟಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸುಬ್ರಹಣ್ಯ ಅವರು ಜ್ಯೂನಿಯರ್ ಜೆಸಿ ಅಧ್ಯಕ್ಷರಾಗಿ ಚುಕ್ಕಾಣಿ ಹಿಡಿದಿದ್ದಾರೆ. ನಿರ್ಣಾಯಕ ಮಂಡಳಿ ಸಭೆಯಲ್ಲಿ ಜೆ.ಸಿ.ಐ ೨೦೧೭ರ ಚುನಾಯಿತ ಅದ್ಯಕ್ಷರಾಗಿರುವ ಅಕ್ಷತಾ ಗಿರೀಶ್, ನಿಕಟಪೂರ್ವ ಅದ್ಯಕ್ಷ ವಿಷ್ಣು.ಕೆ.ಬಿ. ಹಾಗೂ ಕಾರ್ಯದರ್ಶಿ ರಾಘು ವಿಠಲವಾಡಿ ಉಪಸ್ಥಿತಿಯಲ್ಲಿ ಆಯ್ಕೆ ಪ್ರಕ್ರಿಯೆ ಜರುಗಿತು.
ಕುಂದಾಪ್ರ ಡಾಟ್ ಕಾಂ ಲೇಖನ ಕುಂದಾಪುರ: ಮೂರು ವರ್ಷಗಳ ಹಿಂದೆ ಸಮಾನ ಮನಸ್ಕರೆಲ್ಲರು ಸೇರಿ ಸಾಮಾಜಿಕ ಕಳಕಳಿಯೊಂದಿಗೆ ಹುಟ್ಟುಹಾಕಿದ ಸಂಸ್ಥೆ ಪ್ರೇರಣಾ ಯುವ ವೇದಿಕೆ ನೈಕಂಬ್ಳಿ ಚಿತ್ತೂರು. ಗ್ರಾಮೀಣ ಪ್ರದೇಶದ ಜನರ ಅಗತ್ಯಗಳಿಗೆ ಅನುಗುಣವಾಗಿ ಯಶಸ್ವಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಸುತ್ತಲಿನ ಪರಿಸರದಲ್ಲಿ ಜನಮನ್ನಣೆ ಗಳಿಸಿದ ನಮ್ಮ ಹೆಮ್ಮೆ ಸಂಸ್ಥೆಯದ್ದು. ಸಂಸ್ಥೆಯ ಕಾರ್ಯಕ್ರಮಗಳು: ಸಾವಯವ ಕೃಷಿಯ ಕುರಿತು ಸಮಗ್ರ ಮಾಹಿತಿ ತೆಂಗು ಮತ್ತು ಅಡಿಕೆ ಬೆಳೆಗಳಿಗೆ ಮಾರಕವಾದ ಕೆಂಪುಮೂತಿಯ ಹುಳಗಳಿಗೆ ಉಚಿತ ಮೋಹಕ ಬಲೆ ವಿತರಣೆ, ಕಿಸಾನ್ ಕಾರ್ಡ್ ನೋಂದಣಿ. ಆಧಾರ್ ಕಾರ್ಡ್ ನೋಂದಣಿ ಮತ್ತು ವಿತರಣೆ. ಉಚಿತ ಹೃದಯ ಸಂಬಂಧಿತ ತಪಾಸಣೆ ಮತ್ತು ಉಚಿತ ವೈದ್ಯಕೀಯ ನೆರವು ಔದ್ಯೋಗಿಕ ಪ್ರಪಂಚದಲ್ಲಿ ಇಂಗ್ಲಿಷ್ ಅಗತ್ಯತೆ ಅರಿತು ಹತ್ತಿರದ ನೈಕಂಬ್ಳಿ ಸರ್ಕಾರಿ ಶಾಲೆಗೆ ಇಂಗ್ಲಿಷ್ ಟೀಚರ್ ನಿಯೋಜಿಸಿ ವೇದಿಕೆ ವತಿಯಿಂದ ಸಂಬಳ ನೀಡುತ್ತಿದ್ದೇವೆ. ಮತ್ತು ಕಂಪೌಂಡ್ ಗೇಟ್, ಶಾಲಾ ಮಕ್ಕಳಿಗೆ ಉಚಿತ ನೋಟ್, ನೀರಿನ ಫಿಲ್ಟರ್, ಐಡಿ ಕಾರ್ಡ್ ವಿತರಣೆ. ಕೃಷಿ ಆರೋಗ್ಯ ಸಮಸ್ಯೆಯಿಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಂಡಾರ್‌ಕಾರ್ಸ್ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜಿನ ಯೂತ್‌ರೆಡ್‌ಕ್ರಾಸ್, ಎನ್.ಎಸ್.ಎಸ್, ಎನ್.ಸಿ.ಸಿ, ರೇಂಜರ್ಸ್ ಮತ್ತುರೋವರ್ಸ್ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸಂಯುಕ್ತಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಕಾಲೇಜಿನಆರ್.ಎನ್ ಶೆಟ್ಟಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕುಂದಾಪುರ ಚಿನ್ಮಯಿ ಆಸ್ಪತ್ರೆಯ ಮೂಳೆ ಮತ್ತು ಕೀಲು ತಜ್ಞರಾದ ಡಾ. ದಿನೇಶ್‌ಕುಮಾರ್ ಶೆಟ್ಟಿ ಉದ್ಘಾಟಿಸಿ ಮಾತನಾಡಿ ಒಂದು ಯೂನಿಟ್ ರಕ್ತದಿಂದ ಮೂರು ಜನರ ಜೀವವನ್ನು ಉಳಿಸಬಹುದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಆಡಳಿತಾಧಿಕಾರಿಗಳಾದ ಡಾ. ಹೆಚ್. ಶಾಂತಾರಾಮ್‌ಇವರು ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್.ಪಿ. ನಾರಾಯಣ ಶೆಟ್ಟಿಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಮಾರಂಭದಲ್ಲಿ ಪದವಿಪೂರ್ವಕಾಲೇಜಿನ ಪ್ರಾಂಶುಪಾಲರಾದ ಜಿ.ಎಂ. ಗೊಂಡ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿಗಳಾದ ಎಸ್. ಜಯಕರ ಶೆಟ್ಟಿ, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯ ಡಾ. ಮನೀಷ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಕಾರ್ತಿಕೇಯ ಮಧ್ಯಸ್ಥ, ಡಾ. ಹೆಚ್.ಎಸ್. ಮಲ್ಲಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕ್ರಿಕೆಟ್ ಜೊತೆ ಗ್ರಾಮೀಣ ಭಾಗದ ಕ್ರೀಡೆ ಹಾಗೂ ಜಾನಪದ ಕ್ರೀಡೆಗೆ ಹೆಚ್ಚಿನ ಆಧ್ಯತೆ ನೀಡಬೇಕು. ಕ್ರೀಡೆ ಸಹೋದರತೆ, ಭಾತೃತ್ವ, ಸಮಾನತೆ ಹಾಗೂ ಬಾಂಧವ್ಯ ವೃದ್ಧಿಸುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆಗಳ ಮೂಲಕ ಸೌಹಾರ್ಧ ಸಮ್ಮವರ್ಧನೆ ಸಾಧ್ಯ. ದೈಹಿಕ ಕ್ಷಮತೆ ಜೊತೆ ಕೌಶಲ್ಯ ವೃದ್ಧಿಗೂ ಕಾರಣವಾಗುತ್ತದೆ ಎಂದು ಉದ್ಯಮಿ ಹರ್ಕೂರು ಕಟ್ಟಿನಮಕ್ಕಿ ಚಿತ್ತರಂಜನ್ ಹೆಗ್ಡೆ ಅಭಿಪ್ರಾತ ಪಟ್ಟಿದ್ದಾರೆ. ಮುಳ್ಳಿಕಟ್ಟೆ ಅಂಬಾ ಕ್ರಿಕೆಟರ್ರ‍್ಸ್ ಆಶ್ರಯದಲ್ಲಿ ಹೊಸಾಡು ಮುಳ್ಳಿಕಟ್ಟೆಯಲ್ಲಿ ಎರಡು ದಿನ ನಡೆಯುವ ಹತ್ತೊಂಬತ್ತನೇ ವರ್ಷದ ಅಂಬಾ ಟ್ರೋಪಿ-೨೦೧೭ ಉದ್ಘಾಟಿಸಿ ಮಾತನಾಡುತ್ತಿದ್ದರು. ಯಾವುದೇ ಆಟೋಟಕಗಳ ಆರಂಭಿಸುವುದು ಸುಲಭವಾದರೆ, ಅದನ್ನು ಮುಂದುವರಿಸಿಕೊಂಡು ಹೋಗುವುದು ಕಷ್ಟದ ಕೆಲಸ. ಆದರೆ ಅಂಬಾ ಕ್ರಿಕೆಟರ್ರ‍್ಸ್ ೩೦ಗಜಗಳ ಆಂಡರ್ ಆರ್ಮ್ ಸೀಮಿತ ಓವರ್ ಕ್ರಿಕೆಟ್ ಪಂದ್ಯ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಗ್ರಾಮ ಭಾಗದಲ್ಲಿ ಪಂದ್ಯ ನಡೆಯುವುದರಿಂದ ಸ್ಥಳೀಯ ಆಟಗಾರರಿಗೆ ಉತ್ತೇಜನ ನೀಡುವ ಜೊತೆ, ಪರಿಸರದ ಜನರಿಗೆ ಮನೋರಂಜನೆ ಒದಗಿಸಿದಂತೆಯೂ ಆಗುತ್ತದೆ ಎಂದು ಬಣ್ಣಿಸಿದರು. ಅಂಬಾ ಟ್ರೋಪಿ ಸಂಯೋಜಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತ್ರಿಮಧುರ – ಗಾನ – ನೃತ್ಯ – ಅಭಿನಯದ ಸಮ್ಮಿಲನ – ಸಾಧನ ಕಲಾ ಸಂಗಮ ರಿ, ಕುಂದಾಪುರ ಪ್ರಸ್ತುತಪಡಿಸಿದ ಈ ಕಾರ್ಯಕ್ರಮವು ರೋ| ಲಕ್ಷ್ಮಿ ನರಸಿಂಹ ಕಲಾಮಂದಿರ, ಬೋರ್ಡ ಹ್ಯಸ್ಕೂಲ್, ಕುಂದಾಪುರದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ೨೦೧೫- ೨೦೧೬ರ ಸಾಲಿನ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಖ್ಯಾತ ಹಿನ್ನೆಲೆ ಗಾಯಕಿ ಕೆ. ಎಸ್. ಸುರೇಖಾ ಅವರು ಉದ್ಘಾಟಿಸಿ ಮಾತನಾಡಿ ಲಲಿತ ಕಲೆಗಳ ಮೂಲಕ ಯುವ ಪ್ರತಿಭೆಗಳಿಗೆ ಬೆಳಗಲು ಅವಕಾಶ ಮಾಡಿಕೊಡುತ್ತಿರುವ ಸಾಧನ ಕಲಾ ಸಂಗಮವನ್ನು ಅಭಿನಂದಿಸಿದರು. ನಿರಂತರ ಪ್ರಯತ್ನದಿಂದಷ್ಟೆ ಕಲೆಯಲ್ಲಿ ದೊಡ್ಡ ಸಾಧನೆ ಮಾಡಬಹುದು, ಅಂತಃವರಿಗೆ ಮಾರ್ಗದರ್ಶಕರಾಗಲು ಅನುದಿನವು ನಾವಿದ್ದವೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ವಿದ್ವಾನ್ ಕೆ. ವಿ. ರಮಣ, ಕುಂದಗನ್ನಡದ ನಟರಾದ ಓಂ ಗುರು, ವಿಜಯ ಹಾಗು ಕ್ಷೇತ್ರ ಸಂಪ್ನಮೂಲ ವ್ಯಕ್ತಿಗಳಾದ ಸದಾನಂದ ಬೈಂದೂರು ಉಪಸ್ಥಿತರಿದ್ದರು. ಸಂಸ್ಥೆಯ ರೂವಾರಿ ನಾರಾಯಣ ಐತಾಳ್ ಸ್ವಾಗತಿಸಿದರು, ಸುಧೀಂದ್ರ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೈತರು ಬೆಳೆ ಉತ್ಪನ್ನಗಳಿಗೆ ನೇರೆ ಮಾರುಕಟ್ಟೆ ವ್ಯವಸ್ಥೆ, ನಿರ್ದಿಷ್ಟ ಬೆಲೆ ನೀಡುವ ಬಗ್ಗೆ ಸಕರಾರಕ್ಕೆ ಅಸಕ್ತಿ ಇಲ್ಲ. ಸಾಲ ಮನ್ನಾ ಬಗ್ಗೆ ರಾಜ್ಯ, ಕೇಂದ್ರ ಸರಕಾರಕ್ಕೆ ಆಸಕ್ತಿಯಿಲ್ಲ. ಕೃಷಿ ಕೂಲಿ ಕಾರ್ಮಿಕರ ಕೊರೆತೆ ಸರಕಾರದ ನಿರ್ಲಕ್ಷೆಯಿಂದ ಕೃಷಿ ಭೂಮಿ ಹಡಿಲು ಬೀಳುತ್ತಿದೆ. ರೈತರು ಏಕ ಬೆಳೆಗೆ ಜೋತು ಬೀಳದೆ ಮಿಶ್ರಬೆಳೆ ಕ್ರಮ ಅನುಸರಿಸುವುದು ಉತ್ತಮ ಎಂದು ಮಾಜಿ ಶಾಸಕ ಬಿ,ಅಪ್ಪಣ್ಣ ಹೆಗ್ಡೆ ಅಭಿಪ್ರಾಯಪಟ್ಟರು. ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನ ಹಾಗೂ ಕುಂದಾಪುರ ತಾಲೂಕು ಪ್ರಗತಿಪರ ಕೃಷಿಕರ ವೇದಿಕೆ ಆಶ್ರಯದಲ್ಲಿ ಬಾಂಡ್ಯಾ ಇಂದ್ರಪ್ರಸ್ತದಲ್ಲಿ ಸೋಮವಾರ ನಡೆದ ನೆಲೆ, ಜಲ, ಕೃಷಿ ಉಳಿಸೋಣ ಬನ್ನಿ ಹಸಿರು ಗೋಷ್ಠಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಂಗಳೂರು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಉದ್ಘಾಟಿಸಿ ಮಾತನಾಡಿ ವಿಶ್ವದಲ್ಲೇ ಅಡಿಕೆ ಬೆಳೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದು, ಆರ್ಥಿಕ ಹಾಗೂ ಜನ ಜೀವನಕ್ಕೆ ಶಕ್ತಿ ಅಡಕೆ. ಅಡಕೆ ಹೊಟ್ಟೆ ತುಂಬುವ ಉತ್ಪನ್ನವಾಗಿಲ್ಲದ ಕಾರಣ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ನಮ್ಮ ಭಾರತ ದೇಶದ ಹೆಗ್ಗಳಿಕೆಯನ್ನು ಜಗತ್ತಿನಾದ್ಯಂತ ಪಸರಿಸಿದ, ಬದುಕಿನ ಅತ್ಯಲ್ಪ ಅವಧಿಯಲ್ಲಿ ಹಿಂದು ಧರ್ಮದ ಚೈತನ್ಯವನ್ನು ಉಣಬಡಿಸಿ ದೇಶಪ್ರೇಮದ ಕಿಚ್ಚನ್ನು ಹಚ್ಚಿ ಹೋದ ಮಹಾನ್ ಸಂತ ಸ್ವಾಮಿ ವಿವೇಕಾನಂದರ ತತ್ವ ಆದರ್ಶಗಳು ನಮ್ಮ ಯುವಕರಿಗೆ ಮಾದರಿಯಾಗಬೇಕು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಾಷ್ಟ್ರೀಯವಾದಿಗಳಿಗೆ ವಿವೇಕಾನಂದರ ಜೀವನ ಮತ್ತು ಸಂದೇಶಗಳು ಬಹಳ ಪ್ರೇರಣೆ ನೀಡಿತ್ತು ಎಂದು ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು. ಅವರು ಗಂಗೊಳ್ಳಿಯ ಕ್ರಾಂತಿವೀರರ ಅಭಿಮಾನಿ ಬಳಗದ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ೧೫೪ನೇ ಜನ್ಮದಿನೋತ್ಸವದ ಸಂಭ್ರಮಕ್ಕಾಗಿ ಗಂಗೊಳ್ಳಿ ಬಸ್ ನಿಲ್ದಾಣದ ಸಮೀಪದ ಜರಗಿದ ವಿವೇಕ ಉತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಕೋಮುವಾದ ಕೇಸರಿಕರಣದ ನೆಪದಿಂದ ಸರಕಾರ ಅನೇಕ ಕ್ರಾಂತಿವೀರರ ಬಗ್ಗೆ ಪಠ್ಯ ಪುಸ್ತಕಗಳಲ್ಲಿ ನೀಡುತ್ತಿಲ್ಲ. ಶಾಲಾ ಕಾಲೇಜುಗಳಲ್ಲಿ ಎಲ್ಲವನ್ನೂ ಹಾಳು ಮಾಡಿ ಬಿಂಬಿಸುವ ಕಾಲ ಬಂದಿದೆ. ಹೀಗಾಗಿ ಪೋಷಕರು ಮನೆಗಳಲ್ಲಿ ತಮ್ಮ ಮಕ್ಕಳಿಗೆ ಕ್ರಾಂತಿವೀರರ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡ ಮಹಾನ್…
ಕುಂದಾಪ್ರಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ) ಅಧ್ಯಕ್ಷ ರಾಗಿ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅವರನ್ನು ನೇಮಕಗೊಳಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ. ಬಂಗಾರಪ್ಪ ನೇತೃತ್ವದ ಕರ್ನಾಟಕ ಕ್ರಾಂತಿರಂಗ ಮೂಲಕ ರಾಜಕೀಯ ಜೀವನ ಆರಂಭಿಸಿದ್ದ ಗೋಪಾಲ ಪೂಜಾರಿ ಅವರು ಬಳಿಕ ಕಾಂಗ್ರೆಸ್ ಪಕ್ಷ ಕ್ಕೆ ಸೇರ್ಪಡೆಗೊಂಡು ಬೈಂದೂರು ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದರು. ಬಂಗಾರಪ್ಪನವರ ಕರ್ನಾಟಕ ಕ್ರಾಂತಿರಂಗದ ಮೂಲಕ ರಾಜಕೀಯ ಜೀವನ ಆರಂಭಿಸಿದ್ದ ಅವರು 1996ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕ್ಕೆ ಸೇರ್ಪಡೆಗೊಂಡು ಜಯ ಗಳಿಸಿದ್ದರು. ನಂತರ 1998, 2003ರಲ್ಲಿ ವಿಜಯಿಯಾಗಿದ್ದರು. 2008ರಲ್ಲಿ ಬಿಜೆಪಿ ಅಭ್ಯರ್ಥಿ ಲಕ್ಷ್ಮೀನಾರಾಯಣ ವಿರುದ್ಧ ಸೋತಿದ್ದ ಪೂಜಾರಿ 2014ರಲ್ಲಿ ಅವರ ವಿರುದ್ಧ 33 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಗಿಯೂ ಜಿಲ್ಲೆಯಲ್ಲಿ ಪಕ್ಷ ಬಲವರ್ಧನೆಗೆ ಶ್ರಮಿಸಿದ್ದ ಅವರು ಸಿದ್ದರಾಮಯ್ಯ ಮಂತ್ರಿ ಮಂಡಲದಲ್ಲಿ ಮಂತ್ರಿ ಪದವಿ ಪಡೆಯುವರು ಎಂಬ ನಂಬಿಕೆ ಕಾರ್ಯಕರ್ತರಲ್ಲಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯಡ್ತರೆ ನಾಕಟ್ಟೆಯಲ್ಲಿ ಕೋಟಿ ಚೆನ್ನಯ ಪಂಜುರ್ಲಿ ಗರಡಿಯ ಜೀಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಸೋಮವಾರ ದೇವಳದ ಶಿಲಾ ಮುಹೂರ್ತ ಜರುಗಿತು. ಶಿಲ್ಪಿ ಕೃಷ್ಣ ನಾಯ್ಕ್ ಶಿಲಾ ಮುಹೂರ್ತ ನೆರವೇರಿಸಿದರು. ಈ ಸಂದರ್ಭದಲ್ಲಿ ದೈವಸ್ಥಾನವನ್ನು ನಂಬಿದ ಭಕ್ತರಾದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಬೈಂದೂರು ಗ್ರಾಮ ಪಂಚಾಯತ್ ಸದಸ್ಯ ವೆಂಕ್ಟ ಪೂಜಾರಿ, ಗರಡಿಯ ಅರ್ಚಕ ಕುಟುಂಬದ ಮಂಜುನಾಥ ಪೂಜಾರಿ ಮೇಲ್ಹಿತ್ಲು, ಸ್ಥಳೀಯರಾದ ಜಗನ್ನಾಥ ಶೆಟ್ಟಿ ನಾಕಟ್ಟೆ, ಮಂಜಯ್ಯ ಪೂಜಾರಿ, ರಘುರಾಮ ಪೂಜಾರಿ ಶಿರೂರು, ಮಂಜುನಾಥ ಪೂಜಾರಿ ಮುಂಬೈ, ಕೋಟಿ ಪೂಜಾರಿ, ಚಂದ್ರ ಪೂಜಾರಿ ಕುದ್ರಿತ್ಲು, ಐ.ಆರ್.ಬಿ ಅಧಿಕಾರಿ ಯೋಗೇಂದ್ರಪ್ಪ ಮೊದಲಾದವರು ಉಪಸ್ಥಿತರಿದ್ದರು.
