ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರೈತರು ಬೆಳೆ ಉತ್ಪನ್ನಗಳಿಗೆ ನೇರೆ ಮಾರುಕಟ್ಟೆ ವ್ಯವಸ್ಥೆ, ನಿರ್ದಿಷ್ಟ ಬೆಲೆ ನೀಡುವ ಬಗ್ಗೆ ಸಕರಾರಕ್ಕೆ ಅಸಕ್ತಿ ಇಲ್ಲ. ಸಾಲ ಮನ್ನಾ ಬಗ್ಗೆ ರಾಜ್ಯ, ಕೇಂದ್ರ ಸರಕಾರಕ್ಕೆ ಆಸಕ್ತಿಯಿಲ್ಲ. ಕೃಷಿ ಕೂಲಿ ಕಾರ್ಮಿಕರ ಕೊರೆತೆ ಸರಕಾರದ ನಿರ್ಲಕ್ಷೆಯಿಂದ ಕೃಷಿ ಭೂಮಿ ಹಡಿಲು ಬೀಳುತ್ತಿದೆ. ರೈತರು ಏಕ ಬೆಳೆಗೆ ಜೋತು ಬೀಳದೆ ಮಿಶ್ರಬೆಳೆ ಕ್ರಮ ಅನುಸರಿಸುವುದು ಉತ್ತಮ ಎಂದು ಮಾಜಿ ಶಾಸಕ ಬಿ,ಅಪ್ಪಣ್ಣ ಹೆಗ್ಡೆ ಅಭಿಪ್ರಾಯಪಟ್ಟರು.
ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನ ಹಾಗೂ ಕುಂದಾಪುರ ತಾಲೂಕು ಪ್ರಗತಿಪರ ಕೃಷಿಕರ ವೇದಿಕೆ ಆಶ್ರಯದಲ್ಲಿ ಬಾಂಡ್ಯಾ ಇಂದ್ರಪ್ರಸ್ತದಲ್ಲಿ ಸೋಮವಾರ ನಡೆದ ನೆಲೆ, ಜಲ, ಕೃಷಿ ಉಳಿಸೋಣ ಬನ್ನಿ ಹಸಿರು ಗೋಷ್ಠಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂಗಳೂರು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಉದ್ಘಾಟಿಸಿ ಮಾತನಾಡಿ ವಿಶ್ವದಲ್ಲೇ ಅಡಿಕೆ ಬೆಳೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದು, ಆರ್ಥಿಕ ಹಾಗೂ ಜನ ಜೀವನಕ್ಕೆ ಶಕ್ತಿ ಅಡಕೆ. ಅಡಕೆ ಹೊಟ್ಟೆ ತುಂಬುವ ಉತ್ಪನ್ನವಾಗಿಲ್ಲದ ಕಾರಣ ಅದರ ಮೌಲ್ಯವರ್ಧಿತ ಅಂಶ ಪತ್ತೆಹಚ್ಚಿಸಲು ಸಂಘಟಿತ ಪ್ರಯತ್ನ ಮಾಡಬೇಕಿದೆ. ಅಡಿಕೆ ಉತ್ಪಾದನೆ ಹೆಚ್ಚಿದ್ದು, ಅಡಿಕೆ ತೋಟಗಳು ವಿಸ್ತರಣೆಯಿಂದ ಅಡಕೆ ಬೆಲೆ ವೈಪರೀತ್ಯಕ್ಕೆ ಕಾರಣವಾಗುತ್ತಿದೆ. ಅಡಕೆ ಜೊತೆ ಉಪಬೆಳೆಗಳಾದ, ಕಾಳು ಮೆಣಸು, ಕೋಕೋ, ಏಲಕ್ಕೆ ಮುಂತಾದ ಉಪಬೆಳೆಗಳ ಮೂಲಕ ರೈತರು ಆದಾಯ ಹೆಚ್ಚಿಸಿಕೊಳ್ಳಬೇಕು. ಅಡಕೆ ಮೌಲ್ಯವರ್ಧನೆಗೆ ಅದರಲ್ಲಿ ಪೂರಕ ಅಂಶಗಳ ಅನ್ವೇಷಣೆಗೆ ಕ್ಯಾಂಪ್ಕೋ ಕ್ರಿಯಾಶೀಲವಾಗಿದೆ. ಅಡಕೆ ನಿಧಿಷ್ಟಬೆಲೆ ಬಗ್ಗೆ, ಅಡಕೆ ಹಾನಿಕಾರಕ ಲಾಭಿ ತಡೆಗಟ್ಟಲು ಕ್ಯಾಂಪ್ಕೋ ಸ್ಪಷ್ಟ ಹೆಜ್ಜೆ ಇಡುತ್ತಿದ್ದೆ ಎಂದರು.
ವಿಜಯವಾಣಿ ಅಂಕಣಕಾರ ಡಾ.ನರೇಂದ್ರ ರೈ ದೇರ್ಲ, ಜಲಚಿಂತಕ ಶ್ರೀ ಪಡ್ರೆ, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಅಶೋಕ್ ಕುಮಾರ್ ಕೊಡ್ಗಿ, ಪ್ರಗತಿಪರ ಕೃಷಿಕರಾದ ಪ್ರಕಾಶ್ಚಂದ್ರ ಶೆಟ್ಟಿ, ಸಬ್ಲಾಡಿ ಮಂಜಯ್ಯ ಶೆಟ್ಟಿ, ದಕ ಹಾಲು ಉತ್ಪಾದಕರ ಒಕ್ಕೂಟ ನಿರ್ದೇಶಕ ಹದ್ದೂರು ರಾಜೀವ ಶೆಟ್ಟಿ, ಬಾಂಡ್ಯಾ ಎಜುಕೇಶನ್ ಟ್ರಸ್ಟ್ ಜಂಟಿ ನಿರ್ದೇಶಕಿ ಅನುಪಮಾ ಎಸ್. ಶೆಟ್ಟಿ ಇದ್ದರು. ಕುಂದಾಪುರ ತಾಲೂಕು ಪ್ರಗತಿಪರ ಕೃಷಿಕ ವೇದಿಕೆ ಸಂಸ್ಥಾಪಕ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಬಾಲಚಂದ್ರ ಭಟ್ ಸ್ವಾಗತಿಸಿ, ನಿರೂಪಿಸಿದರು. ಪ್ರದೀಪ್ ಹೆಬ್ಬಾರ್ ನಂಚಾರು ವಂದಿಸಿದರು.