Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಶಬರಿಮಲೆ ಯಾತ್ರೆಗೆ ತಮಿಳುನಾಡಿನಿಂದ ಕಾಲ್ನಡಿಗೆಯಲ್ಲಿ ಹೊರಟಿದ್ದ ಅಯ್ಯಪ್ಪಸ್ವಾಮಿ ವೃತಧಾರಿಯೋರ್ವರಿಗೆ ಬೀದಿ ನಾಯಿಯೊಂದು ಸಾಥ್ ನೀಡಿದ್ದು 600ಕಿ.ಮೀ ಅವರೊಂದಿಗೆ ತೆರಳಿ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ವೃತಧಾರಿ ಪ್ರವಾಸದಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಾಲಯದಿಂದ ಉಡುಪಿ ಮಾರ್ಗವಾಗಿ ಶಬರಿಮಲೆ ಯಾತ್ರೆಗೆ ಕಾಲ್ನಡಿಗೆ ಮೂಲಕ ಪಾದಯಾತ್ರೆಯಲ್ಲಿ ತೆರಳುತ್ತಿದ್ದ ನವೀನ್ ಅವರನ್ನು ನಾಯಿ ಹಿಂಬಾಲಿಸುತ್ತಿದ್ದಾಗ ಈ ಮಾಹಿತಿ ತಿಳಿದಿದೆ. ಕೇರಳದ ಕೋಳಿಕೋಡ್ ಮೂಲದವರಾಗಿರುವ ನವೀನ್ ಡಿಸೆಂಬರ್ ೭ರಂದು ಯಾತ್ರೆ ಆರಂಭಿಸಿದ್ದಾರೆ. ಆರಂಭದಲ್ಲಿ ಹಲವು ಬೀದಿ ನಾಯಿಗಳಂತೆ ಇದು ಹಿಂಬಾಲಿಸುತ್ತಿರಬೇಕು ಎಂದುಕೊಂಡು ಅದನ್ನ ಓಡಿಸಲು ಹಲವು ಬಾರಿ ಪ್ರಯತ್ನಿಸಿದ್ದಾರೆ. ಆದರೆ ಅವರು ಅನೇಕ ಸಲ ಪ್ರಯತ್ನಿಸಿದರೂ ಅದು ಹೋಗಿಲ್ಲ. ಕುಂದಾಪ್ರ ಡಾಟ್ ಕಾಂ ಸುದ್ದಿ. 600 ಕಿಲೋ ಮೀಟರ್ ಪಾದಯಾತ್ರೆಯಲ್ಲಿ ಅವರು 17 ದಿನಗಳ ಕಾಲ ಕಾಲ್ನಡಿಗೆ ಮುಗಿಸಿದ್ದು, ಶಬರಿಮಲೆಯಿಂದ ಹಿಂತಿರುಗುತ್ತಿದ್ದಾಗ ಸಹ ಶ್ವಾನ ಇವರನ್ನ ಹಿಂಬಾಲಿಸಿದೆ. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಇವರ ಪಕ್ಕದಲ್ಲೇ ಕುಳಿತುಕೊಂಡಿದೆ. ಕೇರಳ ರಾಜ್ಯ ವಿದ್ಯುತ್ ಮಂಡಳಿ ಉದ್ಯೋಗಿಯಾಗಿರುವ ನವೀನ್, ಈ ಶ್ವಾನದ ಬಗ್ಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುವ ತಾಲೂಕಿನ ಕೆರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿಸ್ಮಯಕಾರಿ ಮೂಡುಗಲ್ಲು ಶ್ರೀ ಕೇಶವನಾಥೇಶ್ವರ ದೇವಳದಲ್ಲಿ ಎಳ್ಳು ಅಮವಾಸ್ಯೆಯ ಪ್ರಯುಕ್ತ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿದವು. ದಟ್ಟ ಕಾನನದ ನಡುವೆ ಸುಮಾರು ಐವತ್ತು ಅಡಿಗಳಷ್ಟು ದೂರದ ಕಡುಗಲ್ಲು ಗುಹೆಯಲ್ಲಿನ ಶ್ರೀ ಕೇಶವನಾಥ ಕ್ಷೇತ್ರದಲ್ಲಿ ಎಳ್ಳು ಅಮಾವಾಸ್ಯೆಯಂದು ದೇವರಿಗೆ ವಿಶೇಷ ಪೂಜೆ, ಬೆಳಿಗ್ಗೆಯಿಂದ ಸಂಜೆಯತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.  ನೂರಾರು ಭಕ್ತರು ದೇವರ ದರ್ಶನ ಪಡೆದು ಪುನೀತರಾದರು. ಮಧ್ಯಾಹ್ನ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು. ಕೆರಾಡಿಯ ಶಶಿಧರ ಮಿತ್ರವೃಂದ ನೇತೃತ್ವದಲ್ಲಿ ದೇವಳಕ್ಕೆ ಆಗಮಿಸುವ ಭಕ್ತಾದಿಗಳಿಗಾಗಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇವಳದ ಅರ್ಚಕ ರಾಘವೇಂದ್ರ ಕುಂಜತ್ತಾಯ ಹಾಗೂ ಶಶಿಧರ ಮಿತ್ರವೃಂದದ ಸಂಚಾಲಕ ದಿವ್ಯಾಧರ ಶೆಟ್ಟಿ ಕೆರಾಡಿ ಮತ್ತವರ ತಂಡದಿಂದ ಸಕಲ ವ್ಯವಸ್ಥೆ ಮಾಡಲಾಗಿತ್ತು. ► ಮೂಡುಗಲ್ಲು: ವಿಸ್ಮಯಕಾರಿ ಗುಹಾಂತರ ಕೇಶವನಾಥ ದೇವಾಲಯ – http://kundapraa.com/?p=1522 ► ಬೆಳ್ಕಲ್ ಗೋವಿಂದ ತೀರ್ಥದಲ್ಲಿ ಎಳ್ಳಮಾವಾಸ್ಯೆ ಸಂಭ್ರಮ. ಅಸಂಖ್ಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಮದೂರು ಸಮೀಪದ ಬೆಳ್ಕಲ್ ಗೋವಿಂದ ತೀರ್ಥಕ್ಷೇತ್ರದಲ್ಲಿ ಎಳ್ಳು ಅಮಾವಾಸ್ಯೆಯ ಪ್ರಯುಕ್ತ ಸಾವಿರಾರು ಭಕ್ತರಿಂದ ಪವಿತ್ರ ತೀರ್ಥಸ್ನಾನ ನಡೆಯಿತು. ವರ್ಷಕ್ಕೊಮ್ಮೆ ಸಾವಿರಾರು ಭಕ್ತರು ಕಠಿಣ ಹಾದಿಯನ್ನು ಕ್ರಮಿಸಿ ಎತ್ತರದಿಂದ ಬೀಳುವ ನೀರಿಗೆ ತಲೆಯೊಡ್ಡಿ ಗೋವಿಂದನ ನಾಮಸ್ಮರಣೆಗೈಯುತ್ತಾ ನೀರಿಗೆ ಮೈಯೊಡ್ಡಿ ಪುನೀತರಾಗುತ್ತಾರೆ. ಸುಮಾರು ಎರಡೂವರೆ ಸಾವಿರ ಫೀಟ್ ಎತ್ತರದಿಂದ ಹರಿದು ಬರುವ ನೀರು ಗೋವಿಂದ ತೀರ್ಥವಾಗಿ ಧರೆಗಿಳಿಯುವಲ್ಲಿ ನೆರೆದ ಸಹಸ್ರಾರು ಭಕ್ತರು ತೀರ್ಥಸ್ನಾನ ಮಾಡುತ್ತಾರೆ. ಕೊಡಚಾದ್ರಿಯ ತಪ್ಪಲಿನಲ್ಲಿರುವ ಗೋವಿಂದ ತೀರ್ಥಕ್ಕೆ ನಡೆದೇ ಸಾಗಬೇಕಾದುದರಿಂದ ಎಳ್ಳಾಮವಾಸ್ಯೆ ದಿನ ಕಾಡು ದಾರಿಯಲ್ಲಿ ಗುಡ್ಡ ಹತ್ತಿ ಸಾಗುವವರಿಗೆ ಮಜ್ಜಿಗೆ ವ್ಯವಸ್ಥೆ, ಮಧ್ಯಾಹ್ನ ಅನ್ನಸಂತರ್ಪಣೆ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು. ಗುಡ್ಡದ ಕೆಳಗಿರುವ ಗಣಪತಿ ಗೋವಿಂದ ಕೊಟಿಲಿಂಗೇಶ್ವರ ದೇವರಿಗೆ ನಮಸ್ಕರಿಸಿ ಪ್ರಸಾದ ಸ್ವೀಕಸಿದರು. ►  ವಿಸ್ಮಯಕಾರಿ ತಾಣ ‘ಬೆಳ್ಕಲ್ ತೀರ್ಥ’ – http://kundapraa.com/?p=2297

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯಡ್ತರೆ ನಾಕಟ್ಟೆಯಲ್ಲಿ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿಯ ಜೀಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಪೂರ್ವಭಾವಿಯಾಗಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ, ವೇ.ಮೂ ಕೇಂಜ ಶ್ರೀಧರ ತಂತ್ರಿ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಎರಡು ದಿನಗಳ ಕಾಲ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಅಘೋರ ಹೋಮ, ವನದುರ್ಗಾ ಯಾಗ, ಸುದರ್ಶನ ಯಾಗ, ಅಘೋರ ಬಲಿ ವಿಧಾನ, ಪ್ರತಿಗತಿ ಸಂಖ್ಯೆಯಲ್ಲಿ ತುಲಾಯಾಗ, ವಿಷ್ಣು ಚಕ್ರಾಬ್ಜ್ಯ ಪೂಜೆ, ಹಾಗೂ ದೈವ ಸಾನಿಧ್ಯ ಶುದ್ಧಿ, ಮಧ್ನಾಹ್ನ ಅನ್ನ ಪ್ರಸಾದ ವಿತರಣೆ ಕಾರ್ಯಕ್ರಮಗಳು ಜರುಗಿದವು. ಧಾರ್ಮಿಕ ಕಾರ್ಯಕ್ರಮದಲ್ಲಿ ದೈವಸ್ಥಾನವನ್ನು ನಂಬಿದ ಭಕ್ತರಾದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಬೈಂದೂರು ಗ್ರಾಮ ಪಂಚಾಯತ್ ಸದಸ್ಯ ವೆಂಕ್ಟ ಪೂಜಾರಿ, ಮಹೇಶ ಪೂಜಾರಿ ಮುಂಬೈ, ಸ್ಥಳೀಯರಾದ ಜಗನ್ನಾಥ ಶೆಟ್ಟಿ ನಾಕಟ್ಟೆ, ಆನಂದ ಶೆಟ್ಟಿ, ನಾಕಟ್ಟೆ, ನಾಗಯ್ಯ ಶೆಟ್ಟಿ ನಾಕಟ್ಟೆ ಸೇರಿದಂತೆ ಗರಡಿಯ ಭಕ್ತರು ಪಾಲ್ಗೊಂಡಿದ್ದರು. ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸ್ವಾಮಿ ವಿವೇಕಾನಂದರು ಕಂಡ ಕನಸಿನ ಭಾರತ ಸಾಕಾರಗೊಳ್ಳುವ ದಿನಗಳು ಬಂದಿದ್ದು, ಜಗತ್ತು ಇಂದು ನಮ್ಮತ್ತ ಮುಖಮಾಡುವಂತಾಗಿದೆ. ವಿಶ್ವದ ಶಕ್ತಿಶಾಲಿ ದೇಶಗಳು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವ ಮೊದಲು ಅದರ ಬಗೆಗೆ ಭಾರತದ ನಿಲುವು ಹಾಗೂ ವಿಚಾರವೇನು ಎಂದು ಯೋಚಿಸುವ ಕಾಲಘಟ್ಟದಲ್ಲಿ ನಾವುರುವುದು ಹೆಮ್ಮೆಯ ಸಂಗತಿ ಎಂದು ಆರ್‌ಎಸ್‌ಎಸ್ ಮಂಗಳೂರು ವಿಭಾಗ ಕಾರ್ಯವಾಹಕ ನಾ. ಸೀತಾರಾಮ್ ಹೇಳಿದರು. ಅವರು ಬೈಂದೂರು ಸೀತಾರಾಮಚಂದ್ರ ದೇವಸ್ಥಾನದ ಸಭಾಭವನದಲ್ಲಿ ಜರುಗಿದ ಸಮರ್ಥ ಭಾರತ ಬೈಂದೂರು ಘಟಕದ ಆಯೋಜಿಸುತ್ತಿರುವ ವಿವೇಕ ಪರ್ವ ಕಾರ್ಯಕ್ರಮದ ಸ್ವಾಗತ ಸಮಿತಿ ಸಭೆ ಹಾಗೂ ಬೈಠಕ್‌ನಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಯುವ ಸಮಾಜ ದೇಶದ ಬಹುದೊಡ್ಡ ಆಸ್ತಿ. ವೇಗ ಹಾಗೂ ಉತ್ಸಾಹ ಇಂದಿನ ಯುವ ಸಮುದಾಯದಲ್ಲಿದೆ. ಅವರಿಗೆ ಸರಿಯಾದ ಮಾರ್ಗದರ್ಶವನ್ನು ನೀಡಿ ಸಮಾಜನವನ್ನು ಏಕೀಕೃತ ಭಾವದಿಂದ ಕೊಂಡೊಯ್ಯಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದ ಅವರು ಪ್ರತಿಯೊಬ್ಬರಲ್ಲೂ ಸಮಾಜದ ಕೆಲಸ ಮಾಡುವ ಮೂಲಕ ರಾಷ್ಟ್ರದ ಕೆಲಸ ಮಾಡುತ್ತಿದ್ದೇನೆಂಬ ಭಾವ ಮೂಡುವಂತಾಗಬೇಕು ಆಶಿಸಿದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಂಡ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ರಾಜ್ಯಮಟ್ಟದಲ್ಲಿ ನೀಡಲಾಗುವ ಗಾಂಧಿ ಗ್ರಾಮ ಪುರಸ್ಕಾರ ಪಡೆದಿರುವುದು ಹೆಮ್ಮೆಯ ವಿಚಾರ. ಈ ಪುರಸ್ಕಾರ ಇನ್ನಷ್ಟು ಪ್ರಗತಿಗೆ ಸ್ಪೂರ್ತಿಯಾಗಲಿ. ಗ್ರಾಮ ವಿಕಾಸ ಯೋಜನೆ ವಂಡ್ಸೆ ಪಂಚಾಯತ್‌ಗೆ ದೊರಕಿದ್ದು, ಬಹುತೇಕ ಬೇಡಿಕೆಗಳು ಇದರ ಮೂಲಕ ಈಡೇರಲಿವೆ ಎಂದು ಬೈಂದೂರು ಕ್ಷೇತ್ರದ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು. ಅವರು ವಂಡ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು ೭೫ ಲಕ್ಷ ರೂಪಾಯಿ ವೆಚ್ಚದ ಗ್ರಾಮ ವಿಕಾಸ ಯೋಜನೆಯನ್ವಯ ಕಾರ್ಯಗತಗೊಳ್ಳಲಿರುವ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಸರ್ಕಾರಿ ಶಾಲೆಗಳು ಮಕ್ಕಳ ಕೊರತೆಯಿಂದ ಮುಚ್ಚುತ್ತಿರುವ ಈ ಸಂದರ್ಭದಲ್ಲಿ ವಂಡ್ಸೆಯ ಸರ್ಕಾರಿ ಶಾಲೆ ಎಲ್.ಕೆಜಿ ಯುಕೆಜಿ ಆಂಗ್ಲ ಮಾಧ್ಯಮದಲ್ಲಿ ೧ನೇ ತರಗತಿ ಆರಂಭಿಸುವ ಮೂಲಕ ಮಾದರಿಯಾಗಿ ಮೂಡಿಬಂದಿದೆ. ಈ ಮಾದರಿಯನ್ನೇ ಬಹುತೇಕ ಸರ್ಕಾರಿ ಶಾಲೆಗಳು ಮಾಡಲು ಮುಂದಾಗಿವೆ. ಸರ್ಕಾರಿ ಶಾಲೆಯನ್ನು ಉಳಿಸುವಲ್ಲಿನ ಪ್ರಯತ್ನ ಅನುಕರಣೀಯ ಎಂದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯಕುಮಾರ್ ಶೆಟ್ಟಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮರವಂತೆಯ ಪ್ರಧಾನ ರಸ್ತೆಗಳಲ್ಲಿ ಒಂದಾದ ಮಹಾತ್ಮ ಗಾಂಧಿ ಮಾರ್ಗದಲ್ಲಿ ಬಿದ್ದಿರುವ ಹತ್ತಾರು ಗುಂಡಿಗಳಿಗೆ ಊರಿನ ರಿಕ್ಷಾ ಚಾಲಕರು ಮಂಗಳವಾರ ಗಟ್ಟಿ ಮಣ್ಣು ಭರ್ತಿಮಾಡಿ ತಾತ್ಕಾಲಿಕ ಕಾಯಕಲ್ಪ ನೀಡಿದರು. ತಮ್ಮೊಳಗೆ ದೇಣಿಗೆ ಒಟ್ಟುಗೂಡಿಸಿ ಮಣ್ಣು ತರಿಸಿಕೊಂಡ ಅವರು ಶ್ರಮದಾನ ಮಾಡಿ, ಸುರಿದ ಮಣ್ಣನ್ನು ಗಟ್ಟಿಗೊಳಿಸಿದರು. ಅಸಮರ್ಪಕವಾಗಿ ನಿರ್ಮಿಸಿದ ವೇಗತಡೆಗೆ ಮಣ್ಣಿನ ಇಳಿಜಾರು ನಿರ್ಮಿಸಿದರು. ಅವರ ಈ ಉಪಕ್ರಮವನ್ನು ಮೆಚ್ಚಿಕೊಂಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ. ಎ. ಅನಿತಾ ಮತ್ತಿತರರು ಅವರನ್ನು ಅಭಿನಂದಿಸಿದರೆ, ಸಾರ್ವಜನಿಕರಲ್ಲಿ ಕೆಲವರು ಈ ಕುರಿತು ಗಮನ ಹರಿಸದೆ ನಿರ್ಲಕ್ಷ್ಯ ತೋರಿರುವ ಸ್ಥಳೀಯಾಡಳಿತ ಮತ್ತು ಜನಪ್ರತಿನಿಧಿಗಳ ಬಗೆಗೆ ಅಸಮಾಧಾನ ವ್ಯಕ್ತಪಡಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಉಡುಪಿ ಜಿಲ್ಲಾ ಪಂಚಾಯತ್,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ, ತಾಲೂಕು ಪಂಚಾಯತ್ ಕುಂದಾಪುರ, ಗ್ರಾಮ ಪಂಚಾಯತ್ ಬೀಜಾಡಿ ಹಾಗು ಮಿತ್ರ ಸಂಗಮ (ರಿ) ಬೀಜಾಡಿ ಗೋಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕುಂದಾಪುರ ತಾಲೂಕು ಮಟ್ಟದ ಯುವಜನ ಮೇಳದಲ್ಲಿ ಗಂಗೊಳ್ಳಿಯ ಡಾ. ಅಂಬೇಡ್ಕರ್ ಯುವಕ ಮಂಡಲ (ರಿ) ಗೀಗಿ ಪದ ,ಲಾವಣಿ,ಕೋಲಾಟ, ವೀರಗಾಸೆ, ರಂಗಗೀತೆ, ಜಾನಪದ ನೃತ್ಯ ,ಭಜನೆ, ಜನಪದ ಗೀತೆ, ಚರ್ಮ ವಾದ್ಯ ವೀಭಾಗದಲ್ಲಿ ಪ್ರಥಮ, ಏಕಪಾತ್ರಾಭಿನಯದಲ್ಲಿ ದ್ವಿತೀಯ ಮತ್ತು ಭಾವಗೀತೆಯಲ್ಲಿ ತೃತೀಯ ಸ್ಥಾನ ಪಡೆದು ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಇತ್ತೀಚೆಗೆ ಮರಣಕಟ್ಟೆ ಬ್ರಹ್ಮ,ಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಚಿತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಹಿಳಾ ಗ್ರಾಮ ಸಮಿತಿ ಅಧ್ಯಕ್ಷರನ್ನಾಗಿ ಅಶ್ವಿನಿ ಶೆಟ್ಟಿ ಹಿಜಾಣ ಇವರನ್ನು ಬೈಂದೂರು ಬ್ಲಾಕ್ ಮಹಿಳಾ ಮೋರ್ಚಾ ಅಧ್ಯಕ್ಷರಾದ ಪ್ರಿಯದರ್ಶಿನಿ ಬಿಜೂರು ಇವರು ಆಯ್ಕೆ ಮಾಡಿರುತ್ತಾರೆ. ಕಾರ್ಯದರ್ಶಿಯನ್ನಾಗಿ ಶೋಭಾ ಶೆಟ್ಟಿ ನೈಕಂಬಳಿ, ಉಪಾಧ್ಯಕ್ಷರಾಗಿ ಸಂಗೀತಾ ಶೆಟ್ಟಿ, ಬೇಬಿ ಇವರನ್ನು ಆಯ್ಕೆ ಮಾಡಲಾಗಿದೆ. ಸಭೆಯಲ್ಲಿ ಬಿಜೆಪಿ ಮುಖಂಡರಾದ ಡಾ. ಅತುಲ್‌ಕುಮಾರ್ ಶೆಟ್ಟಿ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ರಾಮಚಂದ್ರ ಮಂಜ, ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ ಮಡಿವಾಳ, ಬೈಂದೂರು ಬಿಜೆಪಿ ಘಟಕದ ಕಾರ್ಯದರ್ಶಿ ಶ್ರೀಮತಿ ಮಾಲತಿ ಬಿ. ನಾಯ್ಕ್, ಶ್ರೀಮತಿ ಜಯಂತಿ ಪೂಜಾರಿ, ಗ್ರಾ.ಪಂ. ಸದಸ್ಯರಾದ ಪ್ರದೀಪ್ ಹೆಗ್ಡೆ, ಶ್ರೀಮತಿ ಜ್ಯೋತಿ, ಶ್ರೀಮತಿ ಪದ್ದು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಠಿಣ ಪರಿಶ್ರಮ, ತಾಳ್ಮೆ, ಸಾಧಿಸುವ ಛಲವಿದ್ದರೆ ಸಮಾಜದ ಯಾವುದೇ ವ್ಯಕ್ತಿ ನಿಶ್ಚಯಿಸಿದ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು ಎಂದು ಬೆಂಗಳೂರು ಭಾರತೀಯ ಇಸ್ರೋ ಸಂಸ್ಥೆಯ ವಿಜ್ಞಾನಿ ಭಾಸ್ಕರ್ ಮಂಜ ಹೇಳಿದರು. ನಾಯ್ಕನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಶಿಕ್ಷಣ ಸಂಸ್ಥೆಗಳು ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿವೆ. ಎಳೆಯ ಪ್ರಾಯದಲ್ಲಿ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವ ಮೂಲಕ ಭವಿಷ್ಯದ ಉತ್ತಮ ನಾಗರೀಕರನ್ನಾಗಿ ರೂಪಿಸಬಹುದು. ದೇಶದ ಪ್ರತಿಯೊಬ್ಬರಿಗೂ ಸಮರ್ಪಕ ಶಿಕ್ಷಣ ದೊರೆತಾಗ ಮಾತ್ರ ದೇಶ ಅಭಿವೃದ್ಧಿ ಕಾಣಬಹುದಾಗಿದೆ. ವಿದ್ಯೆಯೊಂದಿಗೆ ಮಾನಸಿಕ ಧೃಡತೆ, ಆರೋಗ್ಯ, ಸಮಯಪ್ರಜ್ಞೆ, ಏಕಾಗ್ರತೆ ಹಾಗೂ ಆತ್ಮವಿಶ್ವಾಸವನ್ನೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಕೆರ್ಗಾಲು ಗ್ರಾಪಂ ಅಧ್ಯಕ್ಷೆ ಸೋಮು ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭ ವಿಜ್ಞಾನಿ ಭಾಸ್ಕರ್ ಮಂಜ ಮತ್ತು ಅನುರಾಧ ದಂಪತಿಗಳನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮನ ವಿತರಿಸಲಾಯಿತು. ಗ್ರಾಪಂ ಉಪಾಧ್ಯಕ್ಷ ಸುಂದರ್ ಕೊಠಾರಿ, ಉದ್ಯಮಿ ಶಂಕರ…

Read More