ಯುವ ಸಮುದಾಯದ ವೇಗ ಹಾಗೂ ಉತ್ಸಾಹಕ್ಕೆ ಮಾರ್ಗದರ್ಶನ ಬೇಕಿದೆ: ನಾ. ಸೀತಾರಾಮ್

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸ್ವಾಮಿ ವಿವೇಕಾನಂದರು ಕಂಡ ಕನಸಿನ ಭಾರತ ಸಾಕಾರಗೊಳ್ಳುವ ದಿನಗಳು ಬಂದಿದ್ದು, ಜಗತ್ತು ಇಂದು ನಮ್ಮತ್ತ ಮುಖಮಾಡುವಂತಾಗಿದೆ. ವಿಶ್ವದ ಶಕ್ತಿಶಾಲಿ ದೇಶಗಳು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವ ಮೊದಲು ಅದರ ಬಗೆಗೆ ಭಾರತದ ನಿಲುವು ಹಾಗೂ ವಿಚಾರವೇನು ಎಂದು ಯೋಚಿಸುವ ಕಾಲಘಟ್ಟದಲ್ಲಿ ನಾವುರುವುದು ಹೆಮ್ಮೆಯ ಸಂಗತಿ ಎಂದು ಆರ್‌ಎಸ್‌ಎಸ್ ಮಂಗಳೂರು ವಿಭಾಗ ಕಾರ್ಯವಾಹಕ ನಾ. ಸೀತಾರಾಮ್ ಹೇಳಿದರು.

Call us

Click Here

ಅವರು ಬೈಂದೂರು ಸೀತಾರಾಮಚಂದ್ರ ದೇವಸ್ಥಾನದ ಸಭಾಭವನದಲ್ಲಿ ಜರುಗಿದ ಸಮರ್ಥ ಭಾರತ ಬೈಂದೂರು ಘಟಕದ ಆಯೋಜಿಸುತ್ತಿರುವ ವಿವೇಕ ಪರ್ವ ಕಾರ್ಯಕ್ರಮದ ಸ್ವಾಗತ ಸಮಿತಿ ಸಭೆ ಹಾಗೂ ಬೈಠಕ್‌ನಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಯುವ ಸಮಾಜ ದೇಶದ ಬಹುದೊಡ್ಡ ಆಸ್ತಿ. ವೇಗ ಹಾಗೂ ಉತ್ಸಾಹ ಇಂದಿನ ಯುವ ಸಮುದಾಯದಲ್ಲಿದೆ. ಅವರಿಗೆ ಸರಿಯಾದ ಮಾರ್ಗದರ್ಶವನ್ನು ನೀಡಿ ಸಮಾಜನವನ್ನು ಏಕೀಕೃತ ಭಾವದಿಂದ ಕೊಂಡೊಯ್ಯಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದ ಅವರು ಪ್ರತಿಯೊಬ್ಬರಲ್ಲೂ ಸಮಾಜದ ಕೆಲಸ ಮಾಡುವ ಮೂಲಕ ರಾಷ್ಟ್ರದ ಕೆಲಸ ಮಾಡುತ್ತಿದ್ದೇನೆಂಬ ಭಾವ ಮೂಡುವಂತಾಗಬೇಕು ಆಶಿಸಿದರು.

ಸಮಥ ಭಾರತ ಬೈಂದೂರು ಘಟಕದ ಅಧ್ಯಕ್ಷ ಜಯಾನಂದ ಹೋಬಳಿದಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಬೈಂದೂರಿನಲ್ಲಿ ಜನರಿ ೨೮ರಂದು ಜರುಗಲಿರುವ ವಿವೇಕ ಪರ್ವ ಕಾರ್ಯಕ್ರಮದಲ್ಲಿ ಬೈಂದೂರು ಕ್ಷೇತ್ರದ ಪ್ರತಿ ಜಿಲ್ಲಾ ಪಂಚಾಯತ್ ಮಟ್ಟದಿಂದಲೂ ಅಧಿಕ ಸಂಖ್ಯೆಯಲ್ಲಿ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಹದಿನೈದು ಸಾವಿರಕ್ಕೂ ಹೆಚ್ಚಿನ ಜನರನ್ನು ಸೇರಿಸಿ ವಿವೇಕ ಚಿಂತನೆಯನ್ನು ಮೂಡಿಸುವ ಕಾರ್ಯಕ್ಕೆ ಎಲ್ಲರೂ ಜೊತೆಯಾಗಬೇಕು ಮನವಿ ಮಾಡಿದರು.

ಸಮಥ ಭಾರತ ಬೈಂದೂರು ಘಟಕದ ಗೌರವಾಧ್ಯಕ್ಷ ವಿಶ್ವೇಶ್ವರ ಅಡಿಗ ಉಪಸ್ಥಿತರಿದ್ದರು. ಪ್ರಸನ್ನ ಕುಮಾರ್ ಸ್ವಾಗತಿಸಿ. ಸಮರ್ಥ ಭಾರತದ ಕಾರ್ಯದರ್ಶಿ ಶ್ರೀಧರ ಬಿಜೂರು ಕಾರ್ಯಕ್ರಮ ನಿರೂಪಿಸಿದರು.

Click here

Click here

Click here

Click Here

Call us

Call us

Leave a Reply