ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ದೀಪಾರಾಧನೆಯಿಂದ ನಮ್ಮ ಜೀವನದಲ್ಲಿನ ಅಂಧಕಾರ ಕತ್ತಲು ದೂರವಾಗುತ್ತದೆ. ಪ್ರತಿನಿತ್ಯ ದೇವತಾರಾಧನೆಯಿಂದ ಜೀವನದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ. ಸತ್ಕಾರ್ಯ ಹಾಗೂ ಸತ್ಕರ್ಮಗಳಿಂದ ಜೀವನ ಪಾವನವಾಗಿ ದೇವರ ಅನುಗ್ರಹ ಸಿದ್ಧಿಸುತ್ತದೆ ಎಂದು ವಿಶ್ವ ಹಿಂದೂ ಪರಿಷತ್‌ನ ಉಪಾಧ್ಯಕ್ಷ ಪ್ರೇಮಾನಂದ ಶೆಟ್ಟಿ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಜರಗಿದ ಗಂಗೊಳ್ಳಿಯ ಶ್ರೀ ವೀರೇಶ್ವರ ದೀಪೋತ್ಸವ ಸೇವಾ ಸಮಿತಿಯ ೯ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಧಾರ್ಮಿಕ ಪ್ರವಚನ ನೀಡಿ ಮಾತನಾಡಿದರು. ಕುಂದಾಪುರ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಿದ್ಧಾಪುರ ಕೆನರಾ ಬ್ಯಾಂಕಿನ ಸೀನಿಯರ್ ಮ್ಯಾನೇಜರ್ ರತ್ನಾಕರ ಗಾಣಿಗ ಗಂಗೊಳ್ಳಿ, ಬೈಂದೂರು ಉಪವಲಯ ಅರಣ್ಯಾಧಿಕಾರಿ ಸದಾಶಿವ ಕೆ. ನಾಯಕವಾಡಿ, ಶ್ರೀ ಶಾರದೋತ್ಸವ ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ಪ್ರೇಮಾ ಸಿ.ಎಸ್. ಪೂಜಾರಿ, ಶ್ರೀ ರಾಘವೇಂದ್ರ ಆರಾಧನಾ ಮಹೋತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ ಎಂ., ಕುಂದಾಪುರದ ಉದ್ಯಮಿ ಸತೀಶ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುವೆಂಪು ಶತಮಾನೋತ್ಸವ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿ ಸಿನಿಮಾ ನಟ ಮಣಿ ಶೆಟ್ಟಿ ಅವರನ್ನು ಶಾಲಾ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮಣಿ ಶೆಟ್ಟಿ, ನಾನು ಕುವೆಂಪು ಶತಮಾನೋತ್ಸವ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿ ಎನ್ನುವುದಕ್ಕೆ ಹೆಮ್ಮೆ ಇದೆ. ಈ ಶಾಲೆ ನನಗೆ ಬದುಕು ಕಟ್ಟಿ ಕೊಟ್ಟಿದೆ. ಸಿನೇಮಾ ನಟ, ನಾಯಕನಾಗಿ ಬೆಳೆದರೂ ನಾನು ಈ ಶಾಲೆಯನ್ನು ಮರೆಯುವುದಿಲ್ಲ. ಇದು ನನ್ನ ಹೆಮ್ಮೆಯ ಶಾಲೆ. ನನಗೆ ವಿದ್ಯೆ ಕಲಿಸಿದ ಗುರುಗಳನ್ನು ಸದಾ ಸ್ಮರಿಸುತ್ತೇನೆ. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಸಂಜೀವ ದೇವಾಡಿಗ, ಕೋಟೇಶ್ವರ ವೃತ್ತ ಶಿಕ್ಷಣ ಸಂಯೋಜಕಿ ಅನಿತಾ, ಮುಖ್ಯ ಶಿಕ್ಷಕಿ ಲಲಿತ, ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಮಲ್ಯಾಡಿ ಸದಾರಾಮ ಶೆಟ್ಟಿ, ನೀಲಾವರ ಸುರೇಂದ್ರ ಅಡಿಗ ಹಾಗೂ ಎಲ್ಲಾ ಅಧ್ಯಾಪಕ ವೃಂದದವರು, ಹಳೆ ವಿದ್ಯಾರ್ಥಿ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು. ಶಿಕ್ಷಕ ವಕ್ವಾಡಿ ವೇಣುಗೋಪಾಲ್ ಹೆಗ್ಡೆರವರು ಸ್ವಾಗತಿಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಶ್ರೀ ಬಗಳಾಂಬ ತಾಯಿ ದೇವಸ್ಥಾನದಲ್ಲಿ ವಾರ್ಷಿಕ ದೀಪೋತ್ಸವ ಸಂಭ್ರಮ ಸಡಗರದಿಂದ ಜರುಗಿತು. ಶ್ರೀ ದೇವಳದ ಭಕ್ತರು ಕಾರ್ತಿಕ ಮಾಸದ ದೀಪೋತ್ಸವದಲ್ಲಿ ಪಾಲ್ಗೊಂಡು ವಿಶೇಷ ವಿಶೇಷ ಪೂಜೆ ಸಲ್ಲಿಸಿದರು. ದೇವಳದ ಅರ್ಚಕ ಗಣಪತಿ ಸುವರ್ಣ ಪೂಜೆ ನೆರವೇರಿಸಿದರು. ದೇವಳದ ಉತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಕೆ. ಬಿ. ಇನ್ನಿತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಪ್ರಯುಕ್ತ ನಡೆದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟಕ್ಕೆ ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಕ್ರೀಡಾಜ್ಯೋತಿ ಬೆಳಗಿಸಿ ಚಾಲನೆ ನೀಡಿದರು. ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಪ್ರಶಾಂತ್ ಬಟ್ ಧ್ವಜಾರೋಹಣಗೈದರು. ಠಾಣಾಧಿಕಾರಿ ಸಂತೋಷ್ ಆನಂದ್ ಕಾಯ್ಕಿಣಿ ಧ್ವಜವಂದನೆ ಸ್ವೀಕರಿಸಿದರು. ವಿದ್ಯಾರ್ಥಿ ನಾಯಕ ಶರತ್ ಕುಮಾರ್ ಪ್ರತಿಜ್ಞಾವಿಧಿ ಬೋಧಿಸಿದರು. ಕಾಲೇಜಿನ ಪ್ರಾಂಶುಪಾಲ ಪಾಲಾಕ್ಷ ಟಿ, ಉಪಪ್ರಾಂಶುಪಲೆ ಜ್ಯೋತಿ ಶ್ರೀನಿವಾಸ್, ಹಳೆ ವಿದ್ಯಾರ್ಥಿಗಳಾದ ಎನ್. ಆನಂದ ಶೆಟ್ಟಿ, ಬಿ. ಎಂ. ನಾಗರಾಜ ಗಾಣಿಗ, ಮಣಿಕಂಠ, ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಭಾಕರ ಎಸ್., ಪುಷ್ಪ ಶೆಟ್ಟಿ ಮೊದಲದವರು ಉಪಸ್ಥಿತರಿದ್ದರು. ಶಿಕ್ಷಕ ರವೀಂದ್ರ ಪಿ. ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ : ಮೊಗವೀರ ಯುವ ಸಂಘ ಹಾಗೂ ಮಹಿಳಾ ಘಟಕ ಕೋಟ ಇವರುಗಳ ಆಶ್ರಯದಲ್ಲಿ ಕೋಟ ವ್ಯಾಪ್ತಿಯ ಹಿಂದೂ ರುದ್ರಭೂಮಿ ಸ್ವಚ್ಚಗೊಳಿಸುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಗೀತಾನಂದ ಪೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಚಾಲನೆ ನೀಡಿ ಮಾತನಾಡಿ ಮೊಗವೀರ ಸಂಘಟನೆ ರಕ್ತದಾನ ಶಿಬಿರಗಳ ಮೂಲಕ ಹೊಸ ದಾಖಲೆಯನ್ನು ಸೃಷ್ಠಿಸಿ ಇತರ ಸಮಾಜ ಮುಖಿ ಕಾರ್ಯಕ್ಕೂ ಸೈ ಎನಿಸಿದೆ ಆ ಮೂಲಕ ಇತರ ಸಂಘಗಳಿಗೆ ಮಾದರಿಯಾಗಿದೆ ಅಲ್ಲದೆ ಜಿಲ್ಲಾದ್ಯಂತ ಮೊಗವೀರ ಸಂಘಟನೆಯ ಮೂಲಕ ಬೃಹತ್ ಮಟ್ಟದಲ್ಲಿ ಸ್ವಚ್ಚತಾ ಅಭಿಯಾನಕ್ಕೆ ನಾಡೋಜ ಡಾ. ಜಿ ಶಂಕರ್ ಕರೆಕೊಟ್ಟ ಹಿನ್ನಲೆಗೆ ವಿವಿಧ ಘಟಕಗಳ ಮೂಲಕ ಹಿಂದೂ ರುದ್ರಭೂಮಿ ಸ್ವಚ್ಚಗೊಳಿಸಲು ಕಾರ್ಯದಲ್ಲಿ ತೋಡಗಿರುವುದು ಪ್ರಶಂಸನೀಯ ಇದು ಇನ್ನೂ ವಿಸ್ತರಿಸಿ ಮುಂದಿನ ದಿನಗಳಲ್ಲಿ ಇತರ ಸಂಘಗಳ ಮೂಲಕ ಸ್ಥಳೀಯ ಪರಿಸರವನ್ನು ಸ್ವಚ್ಚಗೊಳಿಸಲು ಕರೆ ನೀಡಿದರು ಮೊಗವೀರ ಯುವ ಸಂಘದ ಜಿಲ್ಲಾಧ್ಯಕ್ಷ ಗಣೇಶ್ ಕಾಂಚನ್ ಜಿಲ್ಲಾ ಸಂಘಟನೆಯ ಮಾಜಿ ಅಧ್ಯಕ್ಷ ಎಮ್.ಎಸ್ ಸಂಜೀವ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ರೋಟರಿ ವಲಯ೧ರ ಕ್ರೀಡಾಕೂಟ ಸ್ಪೂರ್ತಿ-೨೦೧೬ರ ಬಹುಮಾನ ವಿತರಣಾ ಸಮಾರಂಭ ಕುಂದಾಪುರದ ಬಸ್ರೂರು ಮೂರುಕೈ ಬಳಿಯಿರುವ ಆಶೀರ್ವಾದ ಹಾಲ್‌ನಲ್ಲಿ ಜರುಗಿತು. ನಿಯೋಜಿತ ರೋಟರಿ ಜಿಲ್ಲಾ ಗವರ್ನರ್ ಅಭಿನಂದನ ಶೆಟ್ಟಿ ಬಹುಮಾನ ವಿತರಿಸಿ, ಕ್ರೀಡಾ ಮನೋಭಾವ ಭಾಂಧವ್ಯದ ವೃದ್ಧಿಗೆ ಸಹಕಾರಿಯಾಗಿದೆ ಎಂದು ವಿಜೇತರನ್ನು ಅಭಿನಂದಿಸಿದರು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಅಧ್ಯಕ್ಷತೆವಹಿಸಿ ಅತ್ಯುತ್ತಮ ರೀತಿಯಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಿದ ರೋಟರಿ ಸದಸ್ಯರನ್ನು ಅಭಿನಂದಿಸಿ, ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಲು ಸಹಕರಿಸಿದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ಸ್‌ನ ನಿಯೋಜಿತ ರಾಷ್ಟ್ರೀಯ ಅಧ್ಯಕ್ಷ ಡಾ. ಸಂತೋಷ್ ಟಿ. ಸೋನ್ಸ್ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ರೋಟರಿ ಮಾಜಿ ಜಿಲ್ಲಾ ಗವರ್ನರ್ ಕೃಷ್ಣಯ್ಯ ಶೆಟ್ಟಿ, ರೋಟರಿ ಸಹಾಯಕ ಗವರ್ನರ್ ಮಧುಕರ ಹೆಗ್ಡೆ, ಜೋನಲ್ ಲೆಫ್ಟಿನೆಂಟ್ ಡಾ. ರವಿಕಿರಣ್, ರೋಟರಿ ಕುಂದಾಪುರ ಸ್ಥಾಪಕ ಸದಸ್ಯ ಸೋಲೋಮನ್ ಸೋನ್ಸ್ ಇನ್ನಿತರರು ಉಪಸ್ಥಿತರಿದ್ದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಧ್ಯಯನದಿಂದ ಮಾತ್ರ ಹೊಸ ಸಾಹಿತ್ಯ ಸೃಷ್ಟಿಯಾಗಲು ಸಾಧ್ಯವಿದೆ. ಸಾಹಿತ್ಯದಲ್ಲಿ ಹಾಸ್ಯ ಮಾರ್ಗವಾಗಿರಬೇಕೇ ಹೊರತು ಹಾಸ್ಯಕ್ಕೆ ಗುರಿಯಾಗಿರಬಾರದು. ಹಾಸ್ಯದ ಮೂಲಕ ಕಟು ಸತ್ಯವನ್ನು ದಾಟಿಸಬಹುದು. ಹೀಗಾಗಿ ಯುವಜನರು ಸಾಹಿತಿಗಳು ಮತ್ತು ಕವಿಗಳು ವಿಭಿನ್ನವಾಗಿ ಆಲೋಚಿಸಬೇಕು. ಕವಿತೆಗಳು ಹೊಸತನದಿಂದ ಕೂಡಿರಬೇಕು ಎಂದು ಖ್ಯಾತ ಚುಟುಕು ಸಾಹಿತಿ ಎಚ್.ದುಂಡಿರಾಜ್ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಸಾಹಿತ್ಯ ವೇದಿಕೆ ಮತ್ತು ಗಂಗೊಳ್ಳಿ ಯು. ಶೇಷಗಿರಿ ಶೆಣೈ ಸ್ಮರಣಾರ್ಥ ಕುಂದಪ್ರಭ ಸಹಭಾಗಿತ್ವದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದಲ್ಲಿ ಜರಗಿದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾ ಸಾಹಿತ್ಯ ಸಮ್ಮೇಳನ ಸವಿ ನುಡಿ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೇವಲ ಅಂಕಗಳಿಸುದಷ್ಟೇ ಶಿಕ್ಷಣಕ್ಕೆ ಸೀಮಿತವಾಗಿ ಮಕ್ಕಳನ್ನು ಬೆಳೆಸಲಾಗುತ್ತಿದೆ. ಇಂತಹ ಒತ್ತಡದ ಪ್ರಪಂಚದಲ್ಲಿ ಸಾಹಿತ್ಯ ಕಲೆ ಮೊದಲಾದ ಕ್ಷೇತ್ರಗಳಲ್ಲಿ ಮಕ್ಕಳನ್ನು ಬೆಳೆಸುವ ಅವರನ್ನು ಪ್ರೋತ್ಸಾಹಿಸುವ ಕೆಲಸಕಾರ್ಯ ಮಾಡಬೇಕು. ದೈಹಿಕವಾಗಿ ಹಾಗೂ ಮಾನಸಿಕವಾಗಿ ಮಕ್ಕಳ ವಿಕಸನದ ಜೊತೆಗೆ ಸಮಾಜದಲ್ಲಿ ಗುರುತಿಸಲ್ಪಡುವ ಸಾಧನೆ ಸಾಹಿತ್ಯದ ಮೂಲಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ರೊಜಾರಿ ಮಾತೆ ಇಗರ್ಜಿಯ ತೆರಾಲಿ ಹಬ್ಬ ಸಂಭ್ರಮದಿಂದ ಜರಗಿತು. ದೇವರ ವಾಕ್ಯದ ಭಕ್ತಿಯ ದೇವರ ವಾಕ್ಯದ ಭಕ್ತಿಯ ಪೂಜಾ ವಿಧಿಯಿಂದ ಆರಂಭಗೊಂಡಿತು. ಸಂಜೆ ರೋಜರಿ ಮಾತೆಯ ಪಲ್ಲಕ್ಕಿಯ ಮೆರವಣಿಗೆ ಬಹಳ ವಿಜ್ರಂಭಣೆಯಿಂದ ನೆಡೆಸಿ ದೇವರ ವಾಕ್ಯದ ಭಕ್ತಿಯನ್ನು ಆಚರಿಸಲಾಯಿತು ಜೀವನವೆಂಬ ನಾವೆಗೆ, ದೇವರ ವಾಕ್ಯವೆ ಆಧಾರ ಎಂಬ ಧ್ಯೇಯ ವಾಕ್ಯದ ಈ ಪೂಜಾ ವಿಧಿಯನ್ನು ತಲ್ಲೂರು ಇಗರ್ಜಿಯ ಧರ್ಮಗುರು ವಂ| ವಿಕ್ಟರ್ ಡಿಸೋಜಾ ನೆಡೆಸಿ ಕೊಟ್ಟು, ನಾವೆಯು ಸುರಕ್ಷಿತವಾಗಿ ಮುನ್ನಡೆಯ ಬೇಕಿದ್ದರೆ ಅದಕ್ಕೆ ಚಾಲಕನ ಮಾರ್ಗದರ್ಶನ ಬೇಕಾಗುತ್ತದೆ, ಹಾಗೇ ನಾವು ಜೀವನದಲ್ಲಿ ಮುನ್ನಡೆಯ ಬೇಕಾದರೆ ಪವಿತ್ರ ಧರ್ಮ ಗ್ರಂಥ, ಅದರಲ್ಲಿರುವರ ದೇವರ ವಾಕ್ಯಗಳು ನಮಗೆ ಮಾರ್ಗದರ್ಶನ ನೀಡುತ್ತದೆ. ಬಾಳಲ್ಲಿ ನೀವು ಪರಿವರ್ತನೆಗೊಳ್ಳಬೇಕು. ನಮ್ಮ ಜೀವನದಲ್ಲಿ ಎಸ್ಟು ಸಾಧನೆ ಮಾಡಿದರೂ, ಬಡವರ ಕಣ್ಣಿರನ್ನು ಒರೆಸಲಿಕ್ಕಾಗದಿದ್ದರೆ ನಿಮ್ಮ ಸಾಧನೆ ವ್ಯರ್ಥ ಎಂದು ಅವರು ಸಂದೇಶ ನೀಡಿದರು ಕಲ್ಯಾಣಪುರ ವಲಯ ಪ್ರಧಾನ, ಕಲ್ಯಾಣಪುರ ಕಾಥೆಡ್ರಾಲನ ರೆಕ್ಟರ್ ಧರ್ಮಗುರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್‌ಕಾರ‍್ಸ್ ಕಾಲೇಜಿನಲ್ಲಿ “ವಿಶ್ವ ಏಡ್ಸ್ ದಿನ”ದ ಪ್ರಯುಕ್ತ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕು ಘಟಕ ಮತ್ತು ಯೂತ್ ರೆಡ್‌ಕ್ರಾಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಚಿನ್ಮಯಿ ಆಸ್ಪತ್ರೆ ಕುಂದಾಪುರ ಇದರ ನಿರ್ದೇಶಕರಾದ ಡಾ| ಉಮೇಶ್ ಪುತ್ರನ್ ಮಾತನಾಡಿ ನಾವು ಏಡ್ಸ್ ದಿನವನ್ನು ಆಚರಣೆ ಮಾಡುವಂತಾಗಬಾರದು. ಇದರ ಬಗ್ಗೆ ಅರಿವು ಮೂಡಿಸಿ, ಏಡ್ಸ್‌ನ್ನು ನಿಯಂತ್ರಣಕ್ಕೆ ತರುವಂತಾಗಬೇಕು ಅಂತ ತಿಳಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ| ಎನ್.ಪಿ. ನಾರಾಯಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಕುಂದಾಪುರ ತಾಲೂಕು ಘಟಕದ ಸಭಾಪತಿಗಳಾದ ಎಸ್. ಜಯಕರ ಶೆಟ್ಟಿಯವರು ಪ್ರಾಸ್ತಾವಿಕ ಮಾತನ್ನಾಡಿದರು. ಕಾರ್ಯಕ್ರಮದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕು ಘಟಕದ ಪದಾಧಿಕಾರಿಗಳಾದ ಡಾ| ಹೆಚ್.ಎಸ್. ಮಲ್ಲಿ, ಮುತ್ತಯ್ಯ ಶೆಟ್ಟಿ, ಶ್ರೀ ಶಿವರಾಮ ಶೆಟ್ಟಿ ಹಾಗೂ ಕಾರ್ಯಕ್ರಮದ ಸಂಯೋಜಕರಾದ ಪ್ರೊ. ಸತ್ಯನಾರಾಯಣ ಉಪಸ್ಥಿತರಿದ್ದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಿ.ಎಂ. ಗೊಂಡ ಎಲ್ಲರನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ತಲ್ಲೂರಿನ ಪಿಡಬ್ಲ್ಯೂಡಿ ಕಂಟ್ರ್ಯಾಕ್ಟರ್ ಟಿ. ಕೆ. ಶೇಖರ ಶೆಟ್ಟಿ ಕಡೇಮನೆ ತಲ್ಲೂರು (೪೬ ವ.) ಅವರು ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಡಿ. ೦೨ರಂದು ಹೃದಯಾಘಾತದಿಂದ ನಿಧನರಾದರು. ಪಿಡಬ್ಲ್ಯೂಡಿ ಗುತ್ತಿಗೆದಾರರಾಗಿ, ಎಲ್‌ಐಸಿ ಪ್ರತಿನಿಧಿಯಾಗಿರುವ ಇವರು ತಲ್ಲೂರಿನ ಶ್ರೀ ಕುಂತಿಯಮ್ಮ ದೇವಸ್ಥಾನ, ತಲ್ಲೂರು ರಾಜಾಡಿಯ ಶ್ರೀ ರಕ್ತೇಶ್ವರಿ ದೇವಸ್ಥಾನ, ತಲ್ಲೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪದಾಧಿಕಾರಿಯಾಗಿ, ರೋಟರಿ ಸಮುದಾಯ ದಳ ತಲ್ಲೂರಿನ ಅಧ್ಯಕ್ಷರಾಗಿ ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಸಕ್ರೀಯವಾಗಿ ತಮ್ಮನ್ನು ತೊಡಗಿಸಿಕೊಂಡು ಪರಿಸರದಲ್ಲಿ ಜನಾನುರಾಗಿಯಾಗಿದ್ದರು. ಮೃತರು ಪತ್ನಿ, ಒರ್ವ ಪುತ್ರಿ, ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.
