ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ,ಡಿ1: ತಾಲೂಕಿನ ಬಳ್ಕೂರು ಗ್ರಾಮ ಪಂಚಾಯತ್‌ನ ಬಳಿ ರಸ್ತೆ ಬದಿಯಲ್ಲಿ ನೆಲಕ್ಕುರುಳಿದ್ದ ಮರದಲ್ಲಿ ಮರದ ಬುಡದಲ್ಲಿದ್ದ ಜೇನು ಹುಳು ದಾಳಿ ನಡೆಸಿದ ಪರಿಣಾಮ ಗ್ರಾಮಸ್ಥ ಸೇರಿದಂತೆ ಪಂಚಾಯತ್ ಸಿಬ್ಬಂಧಿಗಳು ಘಟನೆಯನ್ನು ಅಸ್ವಸ್ಥಗೊಂಡಿದ್ದಾರೆ. ಘಟನೆಯಲ್ಲಿ ಬಡಾಬೆಟ್ಟು ನಿವಾಸಿ ಮಹೇಂದ್ರ, ಬಳ್ಕೂರು ನಿವಾಸಿಗಳಾದ ಲಕ್ಷ್ಮೀ, ಶಾರದಾ, ಜಯಲಕ್ಷ್ಮಿ, ಪ್ರಭಾಕರ ಬಿಲ್ಲವ, ಬಳ್ಕೂರು ಗ್ರಾಪಂ ಸಿಬ್ಬಂಧಿಗಳಾದ ಲಕ್ಷ್ಮೀ ಪೂರ್ಣಿಮಾ ಜೇನು ದಾಳಿಗೊಳಗಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹೇಂದ್ರ ಅವರ ಮೇಲೆ ಮೊದಲು ದಾಳಿ ಮಾಡಿದ್ದ ಜೇನು ಬಳಿಕ ಪಂಚಾಯತ್ ಸಿಬ್ಬಂಧಿಗಳು ಹಾಗೂ ಅವರನ್ನು ತಪ್ಪಿಸಲು ಬಂದ ಸ್ಥಳೀಯರ ಮೇಲೆಯೂ ದಾಳಿ ಮಾಡಿತ್ತು. ಇಂದು ಬೆಳಿಗ್ಗೆಯಷ್ಟೇ ಖಂಬದಕೋಣೆ ಪ್ರಾಥಮಿಕ ಶಾಲೆಯ ಮಕ್ಕಳ ಮೇಲೆ ಗುರುಗುಂಜಿ ಹುಳು ದಾಳಿ ಮಾಡಿ 17 ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ► ಖಂಬದಕೋಣೆ: ವಿದ್ಯಾರ್ಥಿಗಳಿಗೆ ಗುರುಗುಂಜಿ ಹುಳು ಕಡಿತ. ಅಪಾಯದಿಂದ ಪಾರು – http://kundapraa.com/?p=19611 .
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿಗೆ ಸಮೀಪದ ಖಂಬದಕೋಣೆ ಪ್ರಾಥಮಿಕ ಶಾಲೆ ಸಮೀಪದ ತೆಂಗಿನ ಮರಕ್ಕೆ ಕಟ್ಟಿದ್ದ ಗುರುಗುಂಜಿ ಹುಳುವಿನ ಗೂಡಿಗೆ ಹದ್ದು ಕುಕ್ಕಿದ ಪರಿಣಾಮ ಶಾಲಾ ವಠಾರದಲ್ಲಿ ನಿಂತಿದ್ದ ಮಕ್ಕಳಿಗೆ ಗುರುಗುಂಜಿ ಹುಳು ಕಚ್ಚಿ ಗಾಯಗೊಂಡ ಘಟನೆ ವರದಿಯಾಗಿದೆ. ಗಂಭೀರ ಗಾಯಗೊಮಡ ವಿದ್ಯಾರ್ಥಿಗಳನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಿಗ್ಗೆ ವಿದ್ಯಾರ್ಥಿಗಳು ಶಾಲೆಯ ಆವರಣದೊಳಗಡೆ ನಿಂತಿಕೊಂಡಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಗುರುಗುಂಜಿ ಹುಳುವಿನ ಗೂಡಿಗೆ ಹದ್ದು ಬಡಿದು ಚೆಲ್ಲಾಪಿಲ್ಲಿಯಾದ ಹುಳಗಳು ಸಮೀಪದ ಶಾಲೆಯ ಆವರಣದೊಳಗಿದ್ದ ಮಕ್ಕಳನ್ನು ಸುತ್ತುವರಿದು ಕಚ್ಚಿದೆ. ಘಟನೆ ನಡೆದ ತಕ್ಷಣ ಸಾರ್ವಜನಿಕರ ಸಹಕಾರದೊಂದಿಗೆ ಶಾಲಾ ಶಿಕ್ಷಕ ನಾಗ ದೇವಾಡಿಗ ವಿದ್ಯಾರ್ಥಿಗಳನ್ನು ಕೂಡಲೆ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಘಟನೆಯಲ್ಲಿ ವೀಕ್ಷಿತಾ(9) ಹಾಗೂ ಶಶಿಕಲಾ(13) ಎಂಬ ವಿದ್ಯಾಥಿಗಳಿಗೆ ಜಾಸ್ತಿ ಪ್ರಮಾಣದಲ್ಲಿ ಜೇನು ಕಚ್ಚಿದ್ದರಿಂದ ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು ಚೇತರಿಸಿಕೊಂಡಿದ್ದಾರೆ. ಉಳಿದಂತೆ ಪ್ರಜ್ವಿತಾ(7), ಸುಜನ್(8), ಆದರ್ಶ್(9), ಹರ್ಷಿತ್(10), ಅಂಜಲಿ(10) ಅಂಕುಶ್(12), ಸುಭಾಶ್(12),…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಶ್ರೀ ರಾಮ ವಿವಿದೋದ್ಧೇಶ ಟ್ರಸ್ಟ್ ಹಾಗೂ ವಿದ್ಯಾಂಗ ಉಪನಿರ್ದೇಶಕರ ಕಚೇರಿ ಉಡುಪಿಯ ಸಹಯೋಗದೊಂದಿಗೆ ಯಡ್ತರೆ ಜೆ.ಎನ್. ಆರ್. ಸಭಾಭವನದಲ್ಲಿ ಒಂದು ದಿನದ ಪ್ರೇರಣಾ ಮತ್ತು ವೃತ್ತಿ ಮಾರ್ಗದರ್ಶನ ಶಿಬಿರವನ್ನು ಆಯೋಜಿಸಿತ್ತು. ಶ್ರೀ ರಾಮಾ ವಿವಿದೋದ್ಧೇಶ ಟ್ರಸ್ಟ್ ಬೈಂದೂರಿನ ಆಡಳಿತ ಟ್ರಸ್ಟೀ ಬಿ. ರಾಮಕೃಷ್ಣ ಶೇರೆಗಾರ್ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ ವಿದ್ಯಾರ್ಥಿಗಳು ಈ ಶಿಬಿರದ ಸಂಪೂರ್ಣ ಪ್ರಯೋಜನವನ್ನು ಪಡೆದು ಫಲಿತಾಂಶವನ್ನು ಹೆಚ್ಚಿಸಬೇಕೆಂದು ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯಕ್ ರವರುವಹಿಸಿದ್ದರು. ತಾಲೂಕು ಪಂಚಾಯತ್ ಸದಸ್ಯ ಪುಷ್ಪರಾಜ ಶೆಟ್ಟಿ, ಶ್ರೀ ರಾಮಾ ವಿವಿದೋದ್ಧೇಶ ಟ್ರಸ್ಟ್‌ನ ವಿಶ್ವಸ್ಥರಾದ ಶ್ರೀ ವೆಂಕಟ್ರಮಣ ಬಿಜೂರು ಶ್ರೀನಿವಾಸ ಬಿಜೂರು, ವಿಶ್ವೇಶ್ವರ ಎನ್. ಶ್ರೀನಿವಾಸ ಮದ್ದೋಡಿಯವರು ಉಪಸ್ಥಿತರಿದ್ದರು. ವಿಷಯ ಪರಿವೀಕ್ಷಣಾಧಿಕಾರಿಗಳಾದ ನಾಗರಾಜರವರು ಸ್ವಾಗತಿಸಿದರು, ಟ್ರಸ್ಟ್ ನ ಸಂಚಾಲಕ ಶಿಕ್ಷಕ ಆನಂದ ಮದ್ದೋಡಿಯವರು ಪ್ರಸ್ತಾವನೆಗೈದರು. ಜಿಲ್ಲಾ ಅಕ್ಷರದಾಸೋಹದ ಸಹಾಯಕ ಅಧಿಕಾರಿ ಚಂದ್ರ ನಾಯ್ಕ ರವರು ಕಾರ್ಯಕ್ರಮವನ್ನು ಸಂಯೋಜಿಸಿ ನಿರೂಪಿಸಿದ್ದರು. ರತ್ತುಬಾಯಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಕುಂದಾಪುರದ ಸಹನಾ ಕನ್ವೆಶ್ಯನ್ ಹಾಲ್‌ನಲ್ಲಿ ನಡೆದ ೬ನೇ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ಪಂಚ್-೨೦೧೬ರಲ್ಲಿ ಆರ್.ಎನ್.ಶೆಟ್ಟಿ ಕಾಲೇಜಿನ ವಿದ್ಯಾರ್ಥಿನಿ ಸಾಹಿತ್ಯ ಎಂ.ಡಿ. ೧೪-೧೬ರ ವಯೋಮಾನದ ಬಾಲಕಿಯರ ವಿಭಾಗದ ಕಟಾದಲ್ಲಿ ತೃತೀಯ, ಕಮಿಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾನೆ. ಈಕೆ ಕುಂದಾಪುರದ ಕ್ರೈಂ ಎಸ್ಸೈ ದೇವರಾಜ್ ಹಾಗೂ ಶಿಕ್ಷಕಿ ರತ್ನ ಇವರ ಪುತ್ರಿ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ರೋಟರಿ ವಲಯ೧ರ ಕ್ರೀಡಾಕೂಟ ಸ್ಪೂರ್ತಿ-೨೦೧೬ ಕುಂದಾಪುರದ ಗಾಂಧಿ ಮೈದಾನದಲ್ಲಿ ನ. ೨೭ರಂದು ಉದ್ಘಾಟನೆಗೊಂಡಿತು. ಕ್ರೀಡಾಕೂಟವನ್ನು ರೋಟರಿ ಸಹಾಯಕ ಗವರ್ನರ್ ಮಧುಕರ ಹೆಗ್ಡೆ ಉದ್ಘಾಟಿಸಿ, ಕ್ರೀಡಾಕೂಟ ಆಯೋಜನೆಯಲ್ಲಿ ಶಿಸ್ತು ಅಚ್ಚುಕಟ್ಟುತನದೊಂದಿಗೆ ಯಶಸ್ವಿಯಾಗಿ ಸಂಘಟಿಸುತ್ತಿರುವ ರೋಟರಿ ಕುಂದಾಪುರದ ಕಾರ್ಯಚಟುವಟಿಕೆ ಪ್ರಶಂಸನೀಯ. ಸ್ಪರ್ಧೆಗಿಂತ ಭಾಗವಹಿಸುವಿಕೆ ತುಂಬಾ ಮಹತ್ವದ್ದಾಗಿದ್ದು, ನಮ್ಮೆಲ್ಲರ ಭಾಂದವ್ಯ ವೃದ್ಧಿಗೆ ಸಹಕಾರಿಯಾಗಿದೆ ಎಂದು ಕ್ರೀಡಾಳುಗಳಿಗೆ ಶುಭಕೋರಿದರು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಮುಖ್ಯಅತಿಥಿಗಳಾಗಿ ಜೋನಲ್ ಲೆಫ್ಟಿನೆಂಟ್ ಡಾ. ರವಿಕಿರಣ್, ರೋಟರಿ ವಲಯ ಕ್ರೀಡಾ ಸಂಯೋಜಕ ಮನೋಜ್ ನಾಯರ್, ಕ್ರೀಡಾಕೂಟ ಸಂಚಾಲಕ ರಂಜಿತ್ ಶೆಟ್ಟಿ, ರೋಟರಿ ಕುಂದಾಪುರ ಸದಸ್ಯ ರೋವನ್ ಡಿ’ಕೋಸ್ಟಾ ಉಪಸ್ಥಿತರಿದ್ದರು. ರೋಟೇರಿಯನ್ಸ್, ಆನ್ಸ್, ಅನೆಟ್ಸ್ ಮೂರು ವಿಭಾಗದಲ್ಲಿ ವಿವಿಧ ಸ್ಪರ್ಧೆಗಳು ನಡೆಯಿತು. ರೋಟರಿ ವಲಯ ೧ರ ವ್ಯಾಪ್ತಿಗೊಳಪಡುವ ರೋಟರಿ ಕ್ಲಬ್ ಸಿದ್ಧಾಪುರ ಹೊಸಂಗಡಿ, ರೋಟರಿ ಕ್ಲಬ್ ಗಂಗೊಳ್ಳಿ, ರೋಟರಿ ಕ್ಲಬ್ ಬೈಂದೂರು, ರೋಟರಿ ಕ್ಲಬ್ ಕುಂದಾಪುರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟೇಶ್ವರ: ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ಕಾಶೀಮಠದ ಶ್ರೀಮದ್ ಭುವನೇಂದ್ರ ತೀರ್ಥ ಸ್ವಾಮೀಜಿಯವರ ಪುಣ್ಯತಿಥಿ ಜರಗಿತು. ಮಧ್ಯಾಹ್ನ ವಿಶೇಷ ಪೂಜೆ, ಮಹಾಸಂತರ್ಪಣೆ ನಡೆಯಿತು. ಸಂಜೆ ಬೆಳ್ಳಿ ಪಲ್ಲಕ್ಕಿ ಉತ್ಸವ, ಅಷ್ಠಾವಧಾನ ಸೇವೆ, ವಸಂತ ಪೂಜೆ ನಡೆಯಿತು. ರಾತ್ರಿ ನಡೆದ ಗುಣಗಾನದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀಧರ ಕಾಮತ್ ಮಾತನಾಡುತ್ತಾ ಸ್ವಾಮೀಜಿಯವರು ಆಯುರ್ವೇದದಲ್ಲಿ ಆಳವಾಗಿ ಅಧ್ಯಯನ ಮಾಡಿದ್ದಾಗಿ ಮತ್ತು ಸ್ವತ: ಔಷದಿಗಳನ್ನು ತಯಾರಿಸಿ ಸಮಾಜದ ಎಲ್ಲಾ ವರ್ಗದ ಜನರ ಖಾಯಿಲೆಗಳನ್ನು ಗುಣಪಡಿಸಿದ್ದರು ಎಂದು ದೃಷ್ಟಾಂತದ ಮೂಲಕ ಹೇಳಿದರು. ಧಾರ್ಮಿಕ ವಿಧಿ ವಿಧಾನಗಳು ಶ್ರೀನಿವಾಸ್ ಭಟ್ ಇವರ ನೇತೃತ್ವದಲ್ಲಿ ನಡೆಯಿತು. ಎಲ್ಲಾ ಕಾರ್ಯಕ್ರಮಗಳಿಗೆ ಸಮಾಜ ಬಾಂಧವರು ಭಾಗವಹಿಸಿ ಶ್ರೀ ಹರಿಗುರು ಕೃಪೆಗೆ ಪಾತ್ರರಾದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜಿ. ಎಸ್. ನಂಜಯ್ಯನ ಮಠ ಸಮಿತಿ ಶಿಫಾರಸ್ಸಿನಂತೆ ೪೩೯ ಗ್ರಾಮ ಪಂಚಾಯತ್ ರಚಿಸಿದ ನಂತರ ಜನಪ್ರತಿನಿಧಿಗಳ ಬೇಡಿಕೆ ಆಧರಿಸಿ ಹೊಸ ಗ್ರಾಮ ಪಂಚಾಯತ್‌ಗಳಿಗೆ ಮೂಲ ಸೌಕರ್ಯ ಅಭಿವೃದ್ಧಿಗೋಸ್ಕರ ೨೦ ಲಕ್ಷ ಅನುದಾನ ಬಿಡುಗಡೆ ಮಾಡಲು ಸರ್ಕಾರ ಆದೇಶ ಹೊರಡಿಸಿದರೂ, ಆದೇಶ ಭರವಸೆಯಾಗಿಯೇ ಉಳಿದಿದೆಯೇ ಹೊರತು ಯಾವ ಚಿಕ್ಕಾಸು ಗ್ರಾಮ ಪಂಚಾಯತ್‌ಗಳಿಗೆ ಬಿಡುಗಡೆಯಾಗದಿರಲು ಕಾರಣವೇನು ಎಂದು ಕೋಟಾ ಶ್ರೀನಿವಾಸ ಪೂಜಾರಿ ವಿಧಾನ ಪರಿಷತ್‌ನಲ್ಲಿ ಪ್ರಶ್ನಿಸಿದರು. ಇನ್ನೂ ೩೯೨ ಗ್ರಾಮ ಪಂಚಾಯತ್‌ಗಳಿಗೆ ಸ್ವಂತ ಕಟ್ಟಡವಿಲ್ಲ, ಸರ್ಕಾರಿ ನಿವೇಶನವು ಮಂಜೂರಾಗದೇ ಶಾಲೆಯ ಕೊಠಡಿಗಳಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ, ಗ್ರಾಮ ಪಂಚಾಯತ್‌ಗಳ ದೈನಂದಿನ ಕೆಲಸ ಕಾರ್ಯ ನಡೆಯುತ್ತಿದ್ದು ಇದರಿಂದ ಶಾಲಾ ಮಕ್ಕಳಿಗೂ ಮತ್ತು ಶಿಕ್ಷಕರಿಗೂ ತೊಂದರೆಯಾಗುತ್ತಿರುವ ಬಗ್ಗೆ ಅವರು ಉಲ್ಲೇಖಿಸಿದರು. ಗ್ರಾಮ ಪಂಚಾಯತ್‌ಗಳ ಕಾರ್ಯ ನಿರ್ವಹಣೆಗೆ ಪಿ.ಡಿ.ಓ, ಕಾರ್ಯದರ್ಶಿ, ಲೆಕ್ಕ ಸಹಾಯಕರು ಸೇರಿದಂತೆ ಗ್ರಾಮ ಪಂಚಾಯತ್‌ಗಳಿಗೆ ಬೇಕಾದ ಸಿಬ್ಬಂದಿಗಳ ವ್ಯವಸ್ಥೆ ಸಹ ಸರಿಯಾಗಿ ಮಾಡಿಲ್ಲ. ೪೬೦ ಗ್ರಾಮ ಪಂಚಾಯತ್‌ಗಳಿಗೆ ಹೊಸ ಕಟ್ಟಡ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಗಾಂಧಿ ಮೈದಾನದ ಎದುರು ನೂತನವಾಗಿ ನಿರ್ಮಾಣಗೊಂಡ ಅತ್ಯಾಧುನಿಕ ವಾಣಿಜ್ಯ ಮಳಿಗೆ ‘ಶ್ರೀ ಮೂಕಾಂಬಿಕಾ ಕಾಂಪ್ಲೆಕ್ಸ್’ ಲೋಕಾರ್ಪಣೆಗೊಂಡಿತು. ಬೈಂದೂರು ಶ್ರೀ ಸೇನೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚೆನ್ನಕೇಶವ ಉಪಾಧ್ಯಾಯ ಉದ್ಘಾಟಿಸಿ ಮಾತನಾಡಿ ಜೀವನದಲ್ಲಿ ನಿರಂತರ ಉತ್ಸಾಹ, ಧನತ್ಮಕವಾದ ಚಿಂತನೆಗಳಿದ್ದರೆ. ಅಂತಹವರಿಗೆ ದೇವರ ಸಹಾಯವಿರುತ್ತದೆ. ಆ ದಿಸೆಯಲ್ಲಿ ಇಂದಿನ ಯುವಜನತೆ ಸಮಾಜದ ಹಾಗೂ ಊರಿನ ಅಭಿವೃದ್ಧಿಯ ಪರ ದಿಕ್ಕು ಬದಲಾಯಿಸುವ ಉದ್ದೇಶದಿಂದ ಯಾವುದೇ ಉದ್ಯಮ, ವ್ಯವಹಾರ ಮಾಡುವಂತಾಗಲು ಧೈರ್ಯದಿಂದ ಮುಂದುವರಿದಾಗ ಮಾತ್ರ ಖಂಡಿತವಾಗಿಯೂ ಯಶಸ್ಸು ದೊರಕುವುದು ಎಂದರು. ಪ್ರತಿಯೊಬ್ಬ ವ್ಯಕ್ತಿಗೂ ಹುಟ್ಟೂರಿನ ಋಣ ದೊಡ್ಡದೆನಿಸಿಕೊಳ್ಳುತ್ತದೆ. ಬದುಕು, ಉದ್ಯೋಗಕ್ಕಾಗಿ ಎಲ್ಲಿಗೇ ತೆರಳಿದರೂ ತನ್ನೂರಿನ ಮಣ್ಣಿನ ಋಣ ತೀರಿಸುವ ಗುಣ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಹಲವಾರು ವರ್ಷಗಳಿಂದ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ದುಡಿಮೆಯ ಒಂದು ಭಾಗವನ್ನು ತನ್ನೂರಿನ ಅಭಿವೃದ್ಧಿಗಾಗಿ ತೊಡಗಿಸಿಕೊಂಡ ಮಂಜುನಾಥ ಎಸ್. ಪಡುವರಿಯವರ ಕಾರ್ಯ ಅನುಕರಣೀಯ ಎಂದರು. ಉದ್ಯಮಿಗಳಾದ ಬಿ. ಜಗನ್ನಾಥ ಶೆಟ್ಟಿ, ಪಿ. ಸೂಲಿಯಣ್ಣ ಶೆಟ್ಟಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮೂರು ಮುತ್ತು ಖ್ಯಾತಿಯ ಕುಂದಾಪುರದ ರೂಪಕಲಾ ಸಂಸ್ಥೆಯ ನಿರ್ದೇಶಕ, ಪ್ರಸಿದ್ಧ ಕಲಾವಿದ ಸತೀಶ ಪೈ ಅವರನ್ನು ಬೆಂಗಳೂರಿನ ಗೋಕುಲ್ ಮಿತ್ರ ಬಳಗ ಇದರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಜರಗಿದ ಸಮಾರಂಭದಲ್ಲಿ ಅತಿಥಿಗಳಾದ ಹೊಟೇಲ್ ಉದ್ಯಮಿ ಎಂ.ಪಿ.ಪ್ರಭು, ಪಿ.ಸುರೇಶ, ಪಿ.ಸತ್ಯ, ಎಸ್.ಎಂ.ರಘು, ಬೆಂಗಳೂರು ಯಕ್ಷ ಪ್ರತಿಷ್ಠಾನದ ಅಧ್ಯಕ್ಷ ಮಣೂರು ವಾಸುದೇವ ಮಯ್ಯ ಮೊದಲಾದವರು ಕಲಾವಿದ ಕೆ.ಸತೀಶ ಪೈ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಅಭಿನಂದಿಸಿದರು. ಬೆಂಗಳೂರಿನ ಗೋಕುಲ್ ಮಿತ್ರ ಬಳಗದ ಜಯಂತ ಪೂಜಾರಿ ಹಟ್ಟಿಯಂಗಡಿ, ರಮೇಶ ಕುಮಾರ್ ಚೋರಾಡಿ, ಕಲಾವಿದರಾದ ಅಶೋಕ ಶ್ಯಾನುಭಾಗ್ ಕುಂದಾಪುರ, ಕೆ.ಸಂತೋಷ ಪೈ ಕುಂದಾಪುರ, ನಾಗೇಶ ಕಾಮತ್, ನವೀನ ಭಟ್ ಹಟ್ಟಿಯಂಗಡಿ, ಬಿ.ಗಣೇಶ ಶೆಣೈ ಗಂಗೊಳ್ಳಿ, ಮಣಿಕಂಠ, ನಾಗೇಶ ಹಾಲಾಡಿ, ಶ್ವೇತಾ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಳೆಯ 500, 1000 ನೋಟುಗಳ ರದ್ಧತಿಯ ಬಳಿಕ ಹೊಸ ನೋಟುಗಳು ಸಮರ್ಪಕವಾಗಿ ಜನರ ಕೈಸೇರುವಲ್ಲಿ ವಿಳಂಬವಾಗುತ್ತಿರುವುದಿಂದ ಗ್ರಾಮೀಣ ಭಾಗದ ಜನಸಾಮಾನ್ಯರು ತೀರಾ ತೊಂದರೆ ಅನುಭವಿಸುವಂತಾಗಿದೆ. ರೈತರು, ಮೀನುಗಾರರು, ಕೂಲಿ ಕಾರ್ಮಿಕರು, ಚಿಲ್ಲರೆ ವ್ಯಾಪಾರಿಗಳು ಹಾಗೂ ಮಹಿಳೆಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು ಕೈಯಲ್ಲಿ ಹಣವಿಲ್ಲದೇ, ವ್ಯವಹಾರ ವಹಿವಾಟು ನಡೆಸದ ಪರಿಸ್ಥಿತಿ ಬಂದೊದಗಿದೆ. ಹಳೆಯ ನೋಟು ನಿಷೇಧಿಸಿ 22 ದಿನಗಳೇ ಕಳೆದರೂ ಹೊಸ ನೋಟುಗಳು ಗ್ರಾಮೀಣ ಭಾಗವನ್ನು ತಲುಪುತ್ತಿಲ್ಲ. ಎರಡು ಸಾವಿರದ ನೋಟುಗಳಗೆ ಚಿಲ್ಲರೆ ದೊರೆಯದ ಸ್ಥಿತಿ ನಿರ್ಮಾಣವಾಗಿದೆ ಎಂದು ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ವಿಷಾದ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಭಾಗದ ಜನರ ಬಹುಪಾಲು ವ್ಯವಹಾರ ನಡೆಯುವುದೇ ಸಹಕಾರಿ ಸಂಘಗಳು ಹಾಗೂ ಸಹಕಾರಿ ಬ್ಯಾಂಕುಗಳ ಮುಖಾಂತರ. ಲಕ್ಷಾಂತರ ರೈತರು, ಕೂಲಿ ಕಾರ್ಮಿಕರ ಉಳಿತಾಯ ಖಾತೆಗಳ ಸಹಕಾರಿ ಸಂಘಗಳಲ್ಲಿವೆ. ಬ್ಯಾಂಕುಗಳಲ್ಲಿ ನೋಟು ವಿನಮಯ, ಠೇವಣಿಗೆ ಅವಕಾಶ ಮಾಡಿಕೊಟ್ಟು ಸಹಕಾರಿ ಸಂಘಗಳಲ್ಲಿ ಈ…
