ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪರಸ್ಪರ ಪ್ರೀತಿ, ವಿಶ್ವಾಸದಿಂದ ಬಾಳಿದಾಗ ಮಾತ್ರ ಸಂಪತ್ತು, ಯಶಸ್ಸು ಸಿಗುತ್ತದೆ. ಈ ನೆಲೆಯಲ್ಲಿ ಕ್ಲಬ್ಬಿನ ಎಲ್ಲಾ ಸಹೋದರಿಯರು ಊರಿಗೆ ಹಾಗೂ ಸಮಾಜಕ್ಕೆ ಮಾದರಿಯಾಗುವಂತಹ ಕೆಲಸಗಳನ್ನು ಮಾಡುವಂತಾದಾಗ ಮಾತ್ರ ಕತ್ತಲೆಯ ಒಳಗಿರುವ ಜ್ಞಾನ, ಭರವಸೆಗಳೆಂಬ ಬೆಳಕಿನ ಬೀಜದಂತೆ ಭವಿಷ್ಯದ ಬಾಳು ಬೆಳಗುತ್ತದೆ ಎಂದು ಇನ್ನರ ವೀಲ್ ಜಿಲ್ಲಾ 3182ರ ಡಿಸ್ಟ್ರಿಕ್ಟ್ ಚೇರ್ಮನ್ ಚಿತ್ರಾ ರಾವ್ ಹೇಳಿದರು. ಬೈಂದೂರು ಇನ್ನರ್ ವೀಲ್ ಕ್ಲಬ್ ಘಟಕಕ್ಕೆ ಅಧಿಕೃತ ಭೇಟಿನೀಡಿ ಸಂಜೆ ರೋಟರಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು. ಮಹಿಳೆಯರ ರಕ್ಷಣೆಯ ಬಗ್ಗೆ ಅಲ್ಲಲ್ಲಿ ಜಾಗೃತಿ ಸಮಾವೇಶ, ಕಷ್ಟದಲ್ಲಿರುವವರಿಗೆ, ನೊಂದವರಿಗೆ ತಕ್ಷಣ ಸ್ಪಂದಿಸುವ ಹಾಗೂ ಮಕ್ಕಳಿಗೆ ಪ್ರಕೃತಿ ರಕ್ಷಣೆ, ನೀರಿನ ಮಿತ ಬಳಕೆ ಮತ್ತು ಆರೋಗ್ಯದ ಬಗ್ಗೆ ಮಾರ್ಗದರ್ಶನ ನೀಡುವ ಶೈಕ್ಷಣಿಕ ಕಾರ್ಯಕ್ರಮ ನಡೆಸುವ ಮೂಲಕ ಮಾನವೀಯತೆಯ ಸೇವೆ ನಿಮ್ಮಿಂದಾಗಲಿ ಎಂದರು. ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ಆಶಾ ಕಿಶೋರ್ ಅಧ್ಯಕ್ಷತೆವಹಿಸಿ ಸ್ವಾಗತಿಸಿದರು. ಈ ಸಂದರ್ಭ ಉಪ್ಪಂದ ಜಿಎಸ್ಬಿ ಸಮಾಜದ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಹಿಸ್ ಗ್ರೇಸ್ ಮಾಂಟೆಸ್ಸರಿ ಹೌಸ್ ಆಫ್ ಚಿಲ್ಡ್ರನ್ ಕೋಡಿಯಲ್ಲಿ ಮರಿಯಾ ಮಾಂಟೆಸ್ಸರಿ ಯವರ ಜನ್ಮದಿನವನ್ನು ಆಚರಣೆ ಮಾಡಲಾಯಿತು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಮಾಸ್ಟರ್ ಮೆಹಮೂದ್ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದರು. ಬ್ಯಾರೀಸ್ ಸೀಸೈಡ್ ಪಬ್ಲಕ್ ಸ್ಕೂಲ್ನ ಮುಖ್ಯೋಪಾಧ್ಯಾಯಿನಿ ರೇಷ್ಮಾ ಡಿ’ಸೋಜರವರು ಉಪಸ್ಥಿತರಿದ್ದರು. ಮಾಂಟೆಸ್ಸರಿ ಶಿಕ್ಷಕಿ ಜೆನಿಫರ್ ಲೂಯಿಸ್ ಮರಿಯಾ ಮಾಂಟೆಸ್ಸರಿ ಯವರ ಕಿರು ಪರಿಚಯವನ್ನು ನೀಡಿದರು. ಮಾಂಟೆಸ್ಸರಿ ವಿದ್ಯಾರ್ಥಿಗಳಾದ ಮೊಹಮ್ಮದ್ ರಿಹಾನ್ ಮತ್ತು ಫಾತಿಮಾ ಸುಹಾನಾ ಸ್ವಾಗತಿಸಿದರು. ವಿದ್ಯಾರ್ಥಿನಿ ರಾಫಿದಾ ವಂದಿಸಿದರು. ಮಾಂಟೆಸ್ಸರಿ ಶಿಕ್ಷಕಿ ಗಾಯಿತ್ರಿ ಕಾರ್ಯಕ್ರಮವನ್ನು ನಿರ್ವಹಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಟೆಂಪೋ, ರಿಕ್ಷಾ, ಟ್ಯಾಕ್ಸಿ ಮಾಲಕರ ಮತ್ತು ಚಾಲಕರ ವಿವಿಧೋದ್ದೇಶ ಸಹಕಾರ ಸಂಘ ನಿ. ಬೈಂದೂರು ಇದರ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ವಿಶ್ವನಾಥ ಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ವೆಂಕಟೇಶ ಪೂಜಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ನಿರ್ದೇಶಕರುಗಳಾಗಿ ಮಹಾಬಲ ದೇವಾಡಿಗ, ಮುಡೂರ ಪೂಜಾರಿ ಯಡ್ತರೆ, ಪ್ರವೀಣ ಕುಮಾರ್, ಮುಡೂರ ಪೂಜಾರಿ ನೀರ್ಗದ್ದೆ, ಮಧುಕರ ಶೇಟ್, ಸಂದೀಪ್, ಟಿ. ವಿಜಯ, ಮಲ್ಲಿಕಾ ಎ. ಪೂಜಾರಿ ಹಾಗೂ ಗಂಗಾದೇವಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಡಿಸೆಂಬರ್ 9 ರಿಂದ 13 ರ ತನಕ ಕಾಸರಗೋಡು ಜಿಲ್ಲೆಯ ಬದಿಯಡ್ಕದಲ್ಲಿ ನಡೆಯಲಿರುವ ವಿಶ್ವ ತುಳುವೆರೆ ಆಯನದ ಪ್ರಚಾರದ ಭಾಗವಾಗಿ ಬಸ್ರೂರು ತುಳುವೇಶ್ವರದಿಂದ ಕಾಸರಗೋಡು ತುಳುವನದವರೆಗೆ ಮೂರು ತಿಂಗಳುಗಳ ಕಾಲ ನಡೆಯುವ ರಥಯಾತ್ರೆಗೆ ವ್ಯೆಭವಯುತ ಸ್ವಾಗತ ನೀಡಲಾಯಿತು. ಮಾರಣಕಟ್ಟೆ ಕ್ಷೇತ್ರದ ಆನುವಂಶಿಕ ಆಡಳಿತ ಮುಕ್ತೇಸರರಾದ ಸಿ. ಸೀತಾರಾಮ ಶೆಟ್ಟಿ ಮಾತನಾಡಿ ತುಳುನಾಡಿನ ಸಂಸ್ಕ್ರತಿಯ ಸಂರಕ್ಷಣೆಗಾಗಿ ನಡೆಯುತ್ತಿರುವ ತುಳುವೆರೆ ಆಯನೋ ಯಶಸ್ವಿಯಾಗಲಿ ಎಂದು ಶುಭಹಾರಸಿದರು. ಈಸಂದಭ೯ದಲ್ಲಿ ಶ್ರೀಕ್ಷೇತ್ರದ ಅಕ್ಔಟೆಂಟ್ ಕೆ.ನಾರಾಯಣ ಶೆಟ್ಟಿ , ನಿವೖತ್ತ ಅಧ್ಯಾಪಕ ಕೆ ಶಂಕರ ಶೆಟ್ಟಿ , ದೇವಳದ ಸಿಬ್ಬಂದಿಗಳು ಉಪಸ್ತಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ರಾಷ್ಟ್ರೀಯ ಭಾವೈಕ್ಯತಾ ದಿನದ ಅಂಗವಾಗಿ ವಿದ್ಯಾರ್ಥಿಗಳು ಭಾವೈಕ್ಯತಾ ಪ್ರತಿಜ್ಞೆ ಸ್ವೀಕರಿಸಿದರು. ಉಪನ್ಯಾಸಕ ಭಾಸ್ಕರ ಶೆಟ್ಟಿ ಪ್ರತಿಜ್ಞಾ ವಿಧಿ ಭೋಧಿಸಿದರು. ಪ್ರಾಂಶುಪಾಲೆ ಕವಿತಾ ಎಮ್ ಸಿ ಉಪನ್ಯಾಸಕ ವೃಂದದವರು ಪಾಲ್ಗೊಂಡಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಅರ್ಟ್ ಆಫ್ ಲೀವಿಂಗ್ನ ಶ್ರೀ ರವಿಶಂಕರ ಗುರೂಜಿ ತಮ್ಮ ಶಿಷ್ಯರೊಂದಿಗೆ ಮಂಗಳವಾರ ಕೊಲ್ಲೂರಿಗೆ ಭೇಟಿ ನೀಡಿ ಶ್ರೀಮೂಕಾಂಬಿಕೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಕಮಲಶಿಲೆಗೆ ಪ್ರಯಾಣ ಬೆಳೆಸಿದರು. ಈ ಸಂದರ್ಭದಲ್ಲಿ ಪಂಚಭಾಷಾ ಚಲನಚಿತ್ರ ನಟಿ ರಾಧಿಕಾ ತಮ್ಮ ಪತಿ ನಟ ಶರತ್ಬಾಬುಯೊಂದಿಗೆ ದೇವಳಕ್ಕೆ ಆಗಮಿಸಿ ಶ್ರೀ ದೇವಿಗೆ ವಿಶೇಷ ಪೂಜೆ ಹಾಗೂ ಚಂಡಿಕಾಹೋಮ ಸೇವೆ ಸಲ್ಲಿಸಿದರು. ದೇವಳದ ಪರವಾಗಿ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎಚ್. ಕೃಷ್ಣಮೂರ್ತಿ ಇವರನ್ನು ಸ್ವಾಗತಿಸಿ ಪ್ರಸಾದ ನೀಡಿ ಗೌರವಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಸನ್ರೈಸ್ನ ಆನ್ಸ್ ಕ್ಲಬ್ನ ಸ್ಥಾಪಕ ಅಧ್ಯಕ್ಷರಾಗಿ ಶೀಲಾ ಚಂದ್ರಶೇಖರ ಆಯ್ಕೆಯಾಗಿದ್ದಾರೆ. ರೋಟರಿ ಕ್ಲಬ್ ಕುಂದಾಪುರ ಸನ್ರೈಸ್ 12 ವರ್ಷಗಳ ನಂತರ ನೂತನವಾಗಿ ಆನ್ಸ್ ಕ್ಲಬ್ನ್ನು ಆರಂಭಿಸುತ್ತಿದ್ದು, ಕಾರ್ಯದರ್ಶಿಯಾಗಿ ಸಹನಾ ನಾವುಡ ಆಯ್ಕೆಯಾಗಿದ್ದಾರೆ ಎಂದು ರೋಟರಿ ಸನ್ರೈಸ್ ಅಧ್ಯಕ್ಷ ಕೆ. ನರಸಿಂಹ ಹೊಳ್ಳ ತಿಳಿಸಿದ್ದಾರೆ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶ್ರೀ ರಾಮಕ್ಷತ್ರಿಯ ಮಾತೃಮಂಡಳಿ ಆಶ್ರಯದಲ್ಲಿ ಬೈಂದೂರಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಪುಟಾಣಿಗಳಿಂದ ಮುದ್ದು ಕೃಷ್ಣ ಸ್ಪರ್ಧೆ ಜರುಗಿತು. ಸುಮಾರು 60 ಮಕ್ಕಳು ಭಾಗವಹಿಸಿದ್ದರು. ಮಾತೃ ಮಂಢಳಿಯ ಅಧ್ಯಕ್ಷೆ ಆಶಾ ಜಗದೀಶ ಪಟವಾಲ್, ಕಾರ್ಯದರ್ಶಿ ವನಜಾ ಭಾಸ್ಕರ್ ಹಾಗೂ ಸರ್ವ ಸದಸ್ಯರು ಹಾಜರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಅದರಲ್ಲಿ ಭಾಗವಹಿಸಿ ಪ್ರತಿಭೆ ಅನಾವರಣಗೋಳಿಸುವುದು ಮಹತ್ವವಾಗಿದೆ. ಜನಸಂಖ್ಯೆಯಲ್ಲಿ ಭಾರತ ಮುಂದುವರಿದ ರಾಷ್ಟ್ರವಾಗಿದ್ದು, ಕ್ರೀಡಾ ಕ್ಷೇತ್ರದಲ್ಲಿ ಹಿಂದುಳಿದಿರುವುದು ದುರದೃಷ್ಟಕರ ಎಂದು ತಾಪಂ ಸದಸ್ಯ ಜಗದೀಶ ದೇವಾಡಿಗ ಹೇಳಿದರು. ಬಿಜೂರು ಪ್ರೌಢ ಶಾಲೆಯಲ್ಲಿ ನಡೆದ ವಲಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು. ನಮ್ಮಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿದ್ದು ಅವರಿಗೆ ಪ್ರೋತ್ಸಾಹದ ಜತೆ ಸೂಕ್ತ ತರಬೇತಿ ನೀಡುವ ವ್ಯವಸ್ಥೆ ಆಗಬೇಕಾಗಿದೆ. ಗ್ರಾಮೀಣ ಮಟ್ಟದಲ್ಲಿ ಪ್ರತಿಭೆಗಳನ್ನು ಗುರುತಿಸುವ ಮೂಲಕ ಸರಕಾರ ಕ್ರೀಡೆಗಾಗಿ ಪ್ರತೇಕ ಅನುದಾನದ ನೀಡುವ ಅವಶ್ಯಕತೆ ಇದೆ ಎಂದ ಅವರು ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳಿಗೆ ಶುಭಕೋರಿದರು. ಬಿಜೂರು ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣ ಮೂರ್ತಿ ಆಧ್ಯಕ್ಚತೆ ವಹಿಸಿದ್ದರು. ನೂತನವಾಗಿ ನಿರ್ಮಾಣಗೊಂಡ ಪ್ರೌಢ ಶಾಲೆಯ ಅಕ್ಷರದಾಸೋಹ ಕೊಠಡಿಯನ್ನು ಎಸ್ಡಿಎಂಸಿ ಕಾರ್ಯಾಧ್ಯಕ್ಷ ಬಿ. ರಘರಾಮ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಿಜೂರು ಗ್ರಾಪಂ ಆಧ್ಯಕ್ಷೆ ಲೋಲಾಕ್ಷಿ ದೇವಾಡಿಗ, ಸದಸ್ಯ ಕೆ.ಟಿ ರಾಜೇಶ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಡಾ.ಬಿ.ಆರ್.ಅಂಬೇಡ್ಕರ್ ಯುವಕ ಮಂಡಲ, ಅಮೃತಾ ಯುವತಿ ಮಂಡಲ, ಅರ್ಚನಾ ಮಹಿಳಾ ಮಂಡಲ ಮೇಲ್ಗಂಗೊಳ್ಳಿ ಮತ್ತು ಪಂಚಗಂಗಾವಳಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಗಂಗೊಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 6ನೇ ವರ್ಷದ ‘ಮುದ್ದು ಕೃಷ್ಣ’ ವೇಷ ಸ್ಪರ್ಧೆಯು ಮೇಲ್ಗಂಗೊಳ್ಳಿಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜರಗಿತು. ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಚೆಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿಯ ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ ಮಾಜಿ ಅಧ್ಯಕ್ಷ ಬಿ.ಲಕ್ಷ್ಮೀಕಾಂತ ಮಡಿವಾಳ ಶುಭಾಶಂಸನೆಗೈದರು. ಸವಿತಾ ಸಮಾಜದ ಉಡುಪಿ ಜಿಲ್ಲಾ ಸಂಘಟಕ ಮಂಜುನಾಥ ಸಾಲಿಯಾನ್ ಮಕ್ಕಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ಮಹಿಳಾ ಮಂಡಲದ ಅಧ್ಯಕ್ಷೆ ವಿನೋದಾ ಕೆ., ತೀರ್ಪುಗಾರರಾದ ಆಶಾ, ಜ್ಯೋತಿ ಉಪಸ್ಥಿತರಿದ್ದರು. ಯುವತಿ ಮಂಡಲದ ಸದಸ್ಯೆ ನಯನಾ ಸ್ವಾಗತಿಸಿದರು. ಯುವತಿ ಮಂಡಲದ ಕಾರ್ಯದರ್ಶಿ ಸಹನಾ ಕೆ. ಕಾರ್ಯಕ್ರಮ ನಿರೂಪಿಸಿದರು. ಯುವಕ ಮಂಡಲದ ಸ್ಥಾಪಕ ಅಧ್ಯಕ್ಷ ಭಾಸ್ಕರ ಎಚ್.ಜಿ. ವಂದಿಸಿದರು. ಸ್ಪರ್ಧೆಯಲ್ಲಿ ಸುಮಾರು…
