ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಟೆಂಪೋ, ರಿಕ್ಷಾ, ಟ್ಯಾಕ್ಸಿ ಮಾಲಕರ ಮತ್ತು ಚಾಲಕರ ವಿವಿಧೋದ್ದೇಶ ಸಹಕಾರ ಸಂಘ ನಿ. ಬೈಂದೂರು ಇದರ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ವಿಶ್ವನಾಥ ಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ವೆಂಕಟೇಶ ಪೂಜಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ನಿರ್ದೇಶಕರುಗಳಾಗಿ ಮಹಾಬಲ ದೇವಾಡಿಗ, ಮುಡೂರ ಪೂಜಾರಿ ಯಡ್ತರೆ, ಪ್ರವೀಣ ಕುಮಾರ್, ಮುಡೂರ ಪೂಜಾರಿ ನೀರ‍್ಗದ್ದೆ, ಮಧುಕರ ಶೇಟ್, ಸಂದೀಪ್, ಟಿ. ವಿಜಯ, ಮಲ್ಲಿಕಾ ಎ. ಪೂಜಾರಿ ಹಾಗೂ ಗಂಗಾದೇವಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.