ಶ್ರೇಯಾಂಕ ಎಸ್ ರಾನಡೆ. | ಕುಂದಾಪ್ರ ಡಾಟ್ ಕಾಂ ಲೇಖನ. ಎಲ್ಲಾ ರಾಜಕೀಯ ಪಂಡಿತರ ಲೆಕ್ಕಾಚಾರವನ್ನು ತಲೆಕೆಳಗೆ ಮಾಡುವ ಮೂಲಕ, ಸ್ಥಾಪಿತ ರಾಜಕೀಯ ಶಕ್ತಿಗಳನ್ನು ಬೀಳಿಸಿದ ಡೊನಾಲ್ಡ್ ಟ್ರಂಪ್ ಅಮೆರಿಕದ 45ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದು ಮೋದಿಯವರನ್ನು ಟ್ರಂಪ್ ರೀತಿಯ ವ್ಯಕ್ತಿತ್ವದವರೆಂದೋ, ಟ್ರಂಪ್ ಮೋದಿಯವರಷ್ಟೇ ಉತ್ತಮರೆಂದೋ ಹೇಳುವ ಪ್ರಯತ್ನವಲ್ಲ. ಆದರೆ ಭಾರತದ ಅನುಕೂಲಕ್ಕೆ ತಕ್ಕಂತಹ ಸೂಕ್ತ ಸಮಯ, ವಾತಾವರಣ “ನ ಭೂತೋ ಭವಿಷ್ಯತಿಃ” ಎಂಬಂತೆ ಅಮೆರಿಕದಲ್ಲಿ ನಿರ್ಮಾಣಗೊಂಡಿದೆ. 21ನೇ ಶತಮಾನ ಭಾರತ ಹಾಗೂ ಉಪಖಂಡದ್ದಾಗಲು ಭಾರತ ಈ ಸಮಯವನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು. ಭಾರತ ಹಾಗೂ ಅಮೆರಿಕಾದ ಸಮಾನ ಆಸಕ್ತಿಗಳನ್ನು ದ್ವಿಪಕ್ಷೀಯ ಬಾಂಧವ್ಯದ ಮತ್ತೊಂದು ದಿಕ್ಕಿಗೆ ಕೊಂಡೊಯ್ಯಬೇಕು. ಜನರ ಮಾನಸಿಕತೆಯನ್ನು ಬದಲಾಯಿಸಲು ಹೊರಟಿದ್ದ ಅಸತ್ಯ, ದೋಷಪೂರ್ಣ ಸಮೀಕ್ಷೆಗಳನ್ನು ಅಮೆರಿಕ ನಿರಾಕರಿಸಿದೆ. ಕಡೆಯ ಕೆಲವು ಘಂಟೆಗಳ ವರೆಗೂ ಹಿಲರಿ ಕ್ಲಿಂಟನ್ 90% ಗೆಲ್ಲುವ ಅಭ್ಯರ್ಥಿ ಎಂದು ಸಾರಸಗಟಾಗಿ ಟ್ರಂಪ್ ಕಾರ್ಡ್ನ ಮುಂದೆ ಜೀವಂತವಿರುವ ಅತೀ ಜನಪ್ರಿಯ ಅಧ್ಯಕ್ಷ ಬಿಲ್ ಕ್ಲಿಂಟನ್ ಕಸರತ್ತು, ಒಬಾಮಾ ಆಡಳಿತದ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ರೋಟರಿ ಕ್ಲಬ್ನ ಆಶ್ರಯದಲ್ಲಿ ನಡೆದ 2016-17ರ ರೋಟರಿ ವಲಯ 1ರ ಸಾಂಸ್ಕೃತಿಕ ಸ್ಪರ್ಧೆ ಹಿಗ್ಗಿನ ಬುಗ್ಗೆ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕುಂದಾಪುರ ಸನ್ರೈಸ್ ವಿವಿಧ ವಿಭಾಗಗಳಲ್ಲಿ 5 ಪ್ರಥಮ, 5 ದ್ವಿತೀಯ, 2 ತೃತೀಯ ಒಟ್ಟು 12 ಪ್ರಶಸ್ತಿಗಳನ್ನು ಪಡೆದು ಅಗ್ರಮಾನ್ಯ ಸ್ಥಾನದೊಂದಿಗೆ ಚಾಂಪಿಯನ್ಶಿಪ್ನ್ನು ತನ್ನದಾಗಿಸಿಕೊಂಡಿದೆ. ವೈಯಕ್ತಿಕ ಗೀತೆ, ಯುಗಳ ಗೀತೆ, ಸಮೂಹ ನೃತ್ಯ, ಚಿತ್ರಕಲೆ, ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ, ಭಾವಗೀತೆ, ಸಮೂಹ ಗಾನ, ವೈಯಕ್ತಿಕ ನೃತ್ಯ, ಪ್ರಹಸನ, ಫ್ಯಾಶನ್ ಶೋಗಳಲ್ಲಿ ದ್ವಿತೀಯ, ಚಿತ್ರಕಲೆಯಲ್ಲಿ ಎರಡು ತೃತೀಯ ಸ್ಥಾನವನ್ನು ಬಾಚಿಕೊಂಡು ರೋಟರಿ ಸನ್ರೈಸ್ ಇತಿಹಾಸದಲ್ಲಿ ಪ್ರಥಮ ಬಾರಿಗೆ ವಲಯ ಸಾಂಸ್ಕೃತಿಕ ಸ್ಫರ್ಧೆಯಲ್ಲಿ ಚಾಂಪಿಯನ್ ಪಟ್ಟ ಗಳಿಸಿ ವಲಯದಲ್ಲಿ ತನ್ನ ಹಿರಿಮೆಯನ್ನು ಸ್ಥಾಪಿಸಿದೆ. ರೋಟರಿ ಸನ್ರೈಸ್ ಅಧ್ಯಕ್ಷರಾದ ಕೆ. ನರಸಿಂಹ ಹೊಳ್ಳ ಪ್ರಶಸ್ತಿ ಸ್ವೀಕರಿಸಿ ಕ್ಲಬ್ನ ಸದಸ್ಯರ ಅವಿರತ ಪರಿಶ್ರಮಕ್ಕೆ ಕೃತಜ್ಞತೆ ಸಲ್ಲಿಸಿದರು. ಹಿಗ್ಗಿನ ಬುಗ್ಗೆ ಸಮಾರೋಪ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ನ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಎಲ್ಲಾ ಪ್ರದೇಶಗಳು ಅಭಿವೃದ್ಧಿ ಹೊಂದುತ್ತಿದ್ದರೂ ಗಂಗೊಳ್ಳಿ ಮಾತ್ರ ಅಭಿವೃದ್ಧಿಯಲ್ಲಿ ಹಿನ್ನಡೆ ಕಾಣುತ್ತಿದೆ. ಗಂಗೊಳ್ಳಿ ಅಭಿವೃದ್ಧಿ ದೃಷ್ಟಿಯಿಂದ ಎಲ್ಲರಲ್ಲೂ ಒಗ್ಗಟ್ಟು ಮುಖ್ಯವಾಗಿದೆ. ಗಂಗೊಳ್ಳಿಯಲ್ಲಿ ಕಳೆದ ಎರಡು ವರ್ಷಗಳಿಂದ ಬಡರೋಗಿಗಳಿಗೆ ಸೇವೆ ನೀಡುತ್ತಿರುವ ಸೋಷಿಯಲ್ ಸ್ಟೋರ್ಟ್ಸ್ ಚಾರಿಟೇಬಲ್ ಸಂಸ್ಥೆಯ ಅಂಬುಲೆನ್ಸ್ ಸೇವೆಯು ಗ್ರಾಮದ ಜನರಿಗೆ ಇನ್ನಷ್ಟು ವ್ಯವಸ್ಥಿತವಾಗಿ ಕ್ಲಪ್ತ ಸಮಯಕ್ಕೆ ದೊರೆಯುವಂತಾಗಬೇಕು ಎಂದು ಗೋವಾದ ಉದ್ಯಮಿ ಮೌಲಾನಾ ಇಬ್ರಾಹಿಂ ಗಂಗೊಳ್ಳಿ ಹೇಳಿದರು. ಅವರು ಗಂಗೊಳ್ಳಿಯ ಶ್ರೀ ರಾಮ ಮಂದಿರದ ಬಳಿ ಗಂಗೊಳ್ಳಿಯ ಸೋಷಿಯಲ್ ಸ್ಟೋರ್ಟ್ಸ್ ಚಾರಿಟೇಬಲ್ ಸಂಸ್ಥೆಯ ಪ್ರಾಯೋಜಿತ ಸೂಪರ್ ಸ್ಟಾರ್ ಕ್ರಿಕೆಟರ್ಸ್ ಇವರ ೨೪x೭ ಅಂಬುಲೆನ್ಸ್ನ ನೂತನ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿದರು. ಮೌಲಾನಾ ವಹಾಬ್ ಸಾಹೇಬ್ ಆಶೀರ್ವನ ನೀಡಿದರು. ನಿವೃತ್ತ ಮುಖ್ಯೋಪಾಧ್ಯಾಯ ಶಬ್ಬೀರ್ ಸಾಹೇಬ್, ಮೌಲಾನಾ ಅಬ್ಬು ಸಾಹೇಬ್, ಮೌಲಾನಾ ಮಹಮ್ಮದ್ ಗೌಸ್ ಹಾಗೂ ಸೂಪರ್ ಸ್ಟಾರ್ ಕ್ರಿಕೆಟರ್ಸ್ ಸಂಸ್ಥೆಯ ಸದಸ್ಯರು ಸೂಪರ್ ಸ್ಟಾರ್ ಕ್ರಿಕೆಟರ್ಸ್ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಂದಿನ ವ್ಯಾವಹಾರಿಕಾ ಜಗತ್ತಿನಲ್ಲಿ ಸೇವಾ ಮನೋಭಾವ ಕ್ಷೀಣಿಸುತ್ತಿದೆ. ಸಮಾಜ ಸೇವೆ ಕುರಿತು ವಿಶಾಲ ಮನೋಭಾವನೆ ಇಟ್ಟುಕೊಂಡು ಸಾಮಾಜಿಕ, ಶೈಕ್ಷಣಿಕ ಅರಿವು ರೂಢಿಸಿಕೊಂಡು ಮುನ್ನಡೆದಾಗ ಅಂತಹ ಸೇವೆ ಸಾರ್ಥಕ ಎನ್ನಿಸಿಕೊಳ್ಳುತ್ತದೆ ಎಂದು ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು. ಬಿಜೂರು ವಜ್ರದುಂಬಿ ಗೆಳೆಯರ ಬಳಗ ಇವರ ಆಶ್ರಯದಲ್ಲಿ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ದ್ವೀತಿಯ ಬಾರಿಗೆ ಕೆ.ಎಂ.ಸಿ. ಮಣಿಪಾಲ ಚರ್ಮ ರೋಗ ತಜ್ಞರಿಂದ ನಡೆದ ಉಚಿತ ಚರ್ಮರೋಗ ಚಿಕಿತ್ಸಾ ಶಿಬಿರ ಹಾಗೂ ಹೆಗ್ಡೆ ಆಂಡ್ ಹೆಗ್ಡೆ ಕಂಪೆನಿಯವರು ಕೊಡಮಾಡಿದ ಉಚಿತ ಔಷಧ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವೈದ್ಯ ವೃತ್ತಿಯಲ್ಲಿ ಸಮಾಜ ಸೇವೆ ಕುರಿತು ಸೇವಾ ಮನೋಭಾವನೆ ಇಟ್ಟುಕೊಂಡು ಸೇವೆಗೈಯುವವರೇ ಯಶಸ್ವಿ ವೈದ್ಯರೇನಿಸಿಕೊಳ್ಳುತ್ತಾರೆ, ತಮ್ಮ ತಮ್ಮ ಬದುಕನ್ನು ರೂಪಿಕೊಳ್ಳಲು ಮಾತ್ರ ಹವಣಿಸುತ್ತಿರುವ ಈ ದಿನಗಳಲ್ಲಿ ಗ್ರಾಮೀಣ ಭಾಗದವರಿಗೆ ತಜ್ಞ ವೈದ್ಯರಿಂದ ಆರೋಗ್ಯ ಸೇವೆಯನ್ನು ಒದಗಿಸುವ ಮೂಲಕ ಬಡ ವರ್ಗದ ಜನ ಸಾಮಾನ್ಯರಿಗೆ ಆರೋಗ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಪುರಾಣ ಪ್ರಸಿದ್ಧ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸದಲ್ಲಿ ಜರಗುವ ಶ್ರೀದೇವರ ವಿಶ್ವರೂಪ ದರ್ಶನ ಸೇವೆಯು ಬೆಳಗಿನ ಜಾವ 5:30 ಕ್ಕೆ ಜರಗಿತು. ಪ್ರಾತ:ಕಾಲ 3:30ರಿಂದ ಸುಪ್ರಭಾತ, ಭಜನೆ, ೫ಕ್ಕೆ ದೀಪಾಲಂಕಾರ, ೫.೪೫ರಿಂದ ಜಾಗರ ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ವಿಧಿವಿಧಾನಗಳೊಂದಿಗೆ ಜರಗಿದವು. ದೇವಳದ ಒಳ ಹಾಗೂ ಹೊರ ಪ್ರಾಂಗಣವನ್ನು ಹಣತೆ ದೀಪಗಳಿಂದ ಬೆಳಗಲಾಗಿತ್ತು. ದೇವಳದ ವಿವಿಧೆಡೆಯಲ್ಲಿ ಹಾಕಲಾಗಿದ್ದ ರಂಗೋಲಿಗಳು ಭಕ್ತರ ಕಣ್ಮನ ಸೆಳೆದವು. ಸಹಸ್ರಾರು ಭಕ್ತರು ಶ್ರೀದೇವರ ವಿಶ್ವರೂಪ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಎಸ್.ವೆಂಕಟರಮಣ ಆಚಾರ್ಯ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು. ದೇವಳದ ತಾಂತ್ರಿಕ ವೇದಮೂರ್ತಿ ಜಿ.ವಸಂತ ಭಟ್, ದೇವಳದ ಆಡಳಿತ ಮೊಕ್ತೇಸರ ಎನ್.ಸದಾಶಿವ ನಾಯಕ್, ವೇದಮೂರ್ತಿ ಜಿ.ನಾರಾಯಣ ವಿಶ್ವನಾಥ ಆಚಾರ್ಯ, ವೇದಮೂರ್ತಿ ಜಿ.ವೇದವ್ಯಾಸ ಕೆ.ಆಚಾರ್ಯ, ಎಸ್.ಪಾಂಡುರಂಗ ಆಚಾರ್ಯ, ಜಿ.ವೆಂಕಟೇಶ ನಾಯಕ್, ಸೇನಾಪುರ, ಗಂಗೊಳ್ಳಿ ಆಚಾರ್ಯ ಕುಟುಂಬಸ್ಥರು, ಊರಿನ ಹತ್ತು ಸಮಸ್ತರು, ಭಜಕರು ಉಪಸ್ಥಿತರಿದ್ದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಲಯನ್ಸ್ ಕ್ಲಬ್ ಬೈಂದೂರು ಉಪ್ಪುಂದ ಆಶ್ರಯದಲ್ಲಿ ಪ್ರಸಾದ ನೇತ್ರಾಲಯ ಉಡುಪಿ (ಕಣ್ಣಿನ ಸೂಪೆರ್ ಸ್ಪೆಷಾಲಿಟಿ ಆಸ್ಪತ್ರೆ) ನೇತೃತ್ವದಲ್ಲಿ ನ.13ನೇ ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12:30ರ ವರೆಗೆ ಉಪ್ಪುಂದ ಮಾತಶ್ರೀ ಸಭಾ ಭವನದಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಲಿರುವುದು ಕಣ್ಣಿನ ತೊಂದರೆ ಇರುವವರು ಶಿಬಿರದಲ್ಲಿ ಭಾಗವಹಿಸುವಂತೆ ಲಯನ್ಸ್ ಕ್ಲಬ್ ಬೈಂದೂರು ಉಪ್ಪುಂದದ ಅಧ್ಯಕ್ಷ ಡಾ| ವೆಂಕಟೇಶ ಉಪ್ಪುಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಚುನಾವಣೆ ಅಮೇರಿಕಾದ ಸಂಪ್ರದಾಯವಾದಿಗಳಿಗೂ ಆಧುನಿಕವಾದಿಗಳಿಗೂ ನಡೆಯುತ್ತಿರುವ ನೇರ ಸ್ಪರ್ಧೆ. ಅಮೇರಿಕನ್ನರಿಗೆ ಟ್ರಂಪ್ ಕೂಡ ಬೇಕು. ಹಿಲರಿ ಕೂಡ ಬೇಕು ಆದರೆ ಆರಿಸಬೇಕಾದ್ದು ಒಬ್ಬರನ್ನು. ಶ್ರೇಯಾಂಕ ಎಸ್ ರಾನಡೆ | ಕುಂದಾಪ್ರ ಡಾಟ್ ಕಾಂ ಲೇಖನ. ವಿಶ್ವವೇ ಕುತೂಹಲದಿಂದ ಎದುರು ನೋಡುತ್ತಿರುವ ಮುಕ್ತ ಜಗತ್ತಿನ ಅತ್ಯಂತ ಪ್ರಾಚೀನ ಪ್ರಜಾಪ್ರಭುತ್ವ ಹಾಗೂ ಶಕ್ತಿಶಾಲಿ ಅಮೇರಿಕಾ ದೇಶದ 58ನೇ ಅಧ್ಯಕ್ಷೀಯ ಚುನಾವಣೆ ನವೆಂಬರ್ 8ರಂದು ನಿರ್ಣಾಯಕವಾಕಲಿದೆ. ಶ್ವೇತಭವನದ ಅಭ್ಯರ್ಥಿಯ ಆಯ್ಕೆಯ 21 ತಿಂಗಳುಗಳ ಚುನಾವಣಾ ಪ್ರಚಾರದ ಜ್ವರ ನಕಾರಾತ್ಮಕವಾಗಿ, ನಿರಾಸಾದಾಯಕವಾಗಿ ಕೊನೆಗೊಂಡಿದೆ. ಅಮೇರಿಕಾದ ಇತಿಹಾಸದಲ್ಲಿಯೇ ನಂಬಿಕೆಗಳಿಗೆ ಅರ್ಹವಿರದ, ನೀರಸವಾದ ಇಬ್ಬರು ಅಭ್ಯರ್ಥಿಗಳು ಅಧ್ಯಕ್ಷೀಯ ಚುನಾವಣೆಯನ್ನು ಅತ್ಯಂತ ಕೀಳುಮಟ್ಟಕ್ಕೆ ಕೊಂಡೊಯ್ದು ನಿಲ್ಲಿಸಿದ್ದಾರೆ. ಅದಕ್ಕೆ ಕಹಿಯಾಗಿ, ಖಾರವಾಗಿ ಧ್ರುವೀಕರಣಗೊಂಡಿರುವ ಮತದಾರ ಸಮುದಾಯಗಳೇ ಸಾಕ್ಷಿ. ಮಹಾ ತತ್ವಜ್ಞಾನಿ ಅರಿಸ್ಟಾಟಲ್ ಪ್ರಕಾರ ಪ್ರಜಾಭುತ್ವ ಎಂದರೆ ”ಇರುವ ಕೆಟ್ಟ ವ್ಯವಸ್ಥೆಗಳಲ್ಲಿರುವ ಉತ್ತಮ ಆಯ್ಕೆ”. ಅಮೇರಿಕಾದ ಮತದಾರರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಇರುವ ಇಬ್ಬರೂ ಕೆಟ್ಟ ಅಭ್ಯರ್ಥಿಗಳ ಮಧ್ಯೆಯೇ ಗೋಚರಿಸುವ ಉತ್ತಮರನ್ನು ಆರಿಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನೆಂಪು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯೋರ್ವ ತನ್ನ ಮನೆಯಲ್ಲಿಯೇ ನೆಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ. ಹಟ್ಟಿಯಂಗಡಿ ಗ್ರಾಪಂ ಕೆಂಚನೂರು ನಿವಾಸಿ ಸೀನ ಎಂಬುವವರ ಪುತ್ರ ರಾಜೇಶ್ (16) ಮೃತ ದುರ್ದೈವಿ. ನೆಂಪು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿದ್ಯಾರ್ಥಿಯಾಗಿದ್ದ ರಾಜೇಶ್ ತನ್ನ ಮನೆಯವರ ಬಳಿ ಓದಿನಲ್ಲಿ ಆಸಕ್ತಿ ಇಲ್ಲ ಎಂದು ಹೇಳುತ್ತಿದ್ದ ಎನ್ನಲಾಗಿದೆ. ಕಳೆದ ನಾಲ್ಕು ದಿನಗಳಿಂದ ಮನೆಯಲ್ಲಿಯೇ ಇದ್ದ ಆತ ಸೋಮವಾರ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ರಾಜೇಶ್, ತಂದೆ ತಾಯಿ, ಓರ್ವ ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಪರಿಸರದ ಮಕ್ಕಳ ಸಂಗೀತಾಸಕ್ತಿ ಪ್ರೋತ್ಸಾಹ ಶ್ಲಾಘನಾರ್ಯ: ಪ್ರಕಾಶ್ಚಂದ್ರ ಶೆಟ್ಟಿ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕುಸುಮಾ ಫೌಂಡೇಶನ್ ಸಂಸ್ಥೆಯ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿನ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದೊಂದಿದೆ ಹಮ್ಮಿಕೊಂಡಿರುವ ಪ್ರತಿವರ್ಷದಂತೆ ಈ ಭಾರಿಯೂ ಆಯೋಜಿಸಲಾಗುತ್ತಿರುವ ಕುಸುಮಾಂಜಲಿ 2016 ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಆಯೋಜಿಸಲಾಗುತ್ತಿರುವ ಗಾನಕುಸುಮದ ಎರಡನೇ ಆವೃತ್ತಿಯ ಮೊದಲ ಸುತ್ತಿನ ಆಯ್ಕೆಗೆ ಗಾಯನ ಸ್ವರ್ಧೆ ನಾಗೂರಿನ ಲಲಿತಾಕಲಾ ಮಂದಿರದಲ್ಲಿ ಜರುಗಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಕಲಿಸುವ ಪರಿಣತಿ ಹೊಂದಿರುವ ಗುರು, ಕಲಿಕೆಗೆ ಬದ್ಧನಾದ ಶಿಷ್ಯ ಮತ್ತು ಪ್ರಾಮಾಣಿಕ ಆಸಕ್ತಿ ಇರುವ ಶ್ರೋತೃಗಳೆಂಬ ತ್ರಿವೇಣಿ ಸಂಗಮವಾದರೆ ಅಲ್ಲಿ ಸಂಗೀತ ಔನ್ನತ್ಯ ಸಾಧಿಸುತ್ತದೆ. ಈ ತ್ರಿವೇಣಿ ಸಂಗಮಕ್ಕೆ ಪರಸ್ಪರ ಪ್ರಭಾವಿಸುವ ಮತ್ತು ಪ್ರಭಾವಿತವಾಗುವ ಗುಣವಿದೆ ಎಂದರು. ತಾಲೂಕಿನ ಮಕ್ಕಳಲ್ಲಿನ ಸಂಗೀತ ಕಲಾ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕೆಂಬ ತುಡಿತದೊಂದಿಗೆ ಕುಸುಮ ಫೌಂಡೇಶನ್ ಕಳೆದ ಮೂರು ವರ್ಷಗಳಿಂದ ಪ್ರತಿಭಾನ್ವೇಷಣೆ ತೊಡಗಿ ಕುಸುಮಾಂಜಲಿ ಹಾಗೂ ಗಾನಕುಸುಮ ಸ್ಪರ್ಧೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ಪ್ರಕರಣಗಳಲ್ಲಿ ರಾಜಿಯಾಗಬಹುದಂತ ಪ್ರಕರಣಗಳಲ್ಲಿ ವಾದಿ ಹಾಗೂ ಪ್ರತಿವಾದಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದಲ್ಲಿ ಅಂತಹ ಪ್ರಕರಣಗಳನ್ನು ಕುಂದಾಪುರದ ನ್ಯಾಯಾಲಯದಲ್ಲಿ ನ.7 ರಿಂದ ನ.12 ರವರೆಗೆ ನಡೆಯುವ ಬೃಹತ್ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಇತ್ಯರ್ಥಪಡಿಸಿ ಆದೇಶ ನೀಡಲಾಗುವುದು ಎಂದು ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರಾಜಶೇಖರ ವಿ. ಪಾಟೀಲ್ ತಿಳಿಸಿದ್ದಾರೆ. ಕುಂದಾಪುರದ ನ್ಯಾಯಾಲಯ ಸಂಕೀರ್ಣದ ಬಾರ್ ಅಸೋಸೀಯೇಶನ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಪ್ರಕರಣದಲ್ಲಿ ರಾಜಿ ಮಾಡಿಕೊಳ್ಳಬಹುದಾದ ಕೆಲವೊಂದು ಕ್ರಿಮಿನಲ್ ಪ್ರಕರಣ, ಚೆಕ್ ಬೌನ್ಸ್ ಪ್ರಕರಣ, ವಾಹನ ಅಪಘಾತ ಪ್ರಕರಣ, ಪತಿ-ಪತ್ನಿ ಪ್ರಕರಣ, ಕಂದಾಯ, ಕಾರ್ಮಿಕ ಹಾಗೂ ಅರಣ್ಯ ಇಲಾಖಾ ವ್ಯಾಪ್ತಿಯ ಕೆಲವೊಂದು ಆಯ್ದ ಪ್ರಕರಣಗಳಲ್ಲಿ ರಾಜಿ ಸಂಧಾನದ ಮೂಲಕ ಬಾಕಿ ಉಳಿದಿರುವ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಅವಕಾಶ ನೀಡಲಾಗುವುದು. ಮೇಲ್ಮನವಿ ಹಂತದಲ್ಲಿ ಇರುವ ಇಂತಹ ಪ್ರಕರಣಗಳನ್ನು ರಾಜಿ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ಹೇಳಿದ ಅವರು ಕಾನೂನು…
