Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಪಟಾಕಿಮುಕ್ತ ದೀಪಾವಳಿ ಆಚರಿಸುವ ಉದ್ದೇಶದಿಂದ ಗಂಗೊಳ್ಳಿಯ ಉದ್ಯಮಿ ಭಾಸ್ಕರ ವಿಠಲ ಶೆಣೈ ಅವರ ಕುಟುಂಬದ ಸದಸ್ಯರು ಗಂಗೊಳ್ಳಿಯ ಸುಮಾರು ಹತ್ತಕ್ಕೂ ಮಿಕ್ಕಿ ಕುಟುಂಬಗಳಿಗೆ ದಿನಸಿ ಸಾಮಾಗ್ರಿಗಳನ್ನು ವಿತರಿಸಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಗಂಗೊಳ್ಳಿಯಲ್ಲಿರುವ ಅನೇಕ ಬಡ ಕುಟುಂಬಗಳು ಇತರರಂತೆ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳಬೇಕು. ನಮ್ಮಂತೆ ಇತರರು ಸಂತೋಷದಿಂದ ಹಬ್ಬದ ಸವಿಯನ್ನು ಸವಿಯುವಂತಾಗಬೇಕು ಎಂಬ ಕಳಕಳಿಯೊಂದಿಗೆ ಭಾನುವಾರ ಗಂಗೊಳ್ಳಿಯ ವಿವಿಧೆಡೆ ತೆರಳಿದ ಗಂಗೊಳ್ಳಿಯ ಉದ್ಯಮಿ ಜಿ.ವಿಠಲ ಭಾಸ್ಕರ ಶೆಣೈ ಅವರು ಕುಟುಂಬಗಳಿಗೆ ಅಗತ್ಯವಿರುವ ದಿನಸಿ ಸಾಮಾಗ್ರಿ ಮತ್ತು ಸಿಹಿತಿಂಡಿಯನ್ನು ವಿತರಿಸಿ ದೀಪಾವಳಿ ಹಬ್ಬದ ಶುಭ ಕೋರಿದರು. ಪಟಾಕಿ ಕೊಳ್ಳುವುದರಿಂದ ಹಣ ಪೋಲು, ಪಟಾಕಿ ಸುಡುವುದರಿಂದ ಆರೋಗ್ಯವೂ ಹಾಳು. ದೀಪಾವಳಿ ಬೆಳಕಿನ ಹಬ್ಬವೇ ಹೊರತು ಪಟಾಕಿಗಳ ಹೆಸರಿನಲ್ಲಿ ಹಣವನ್ನು ಪೋಲು ಮಾಡುವ ಹಬ್ಬವಲ್ಲ. ಪಟಾಕಿ ಕೊಳ್ಳುವ ಬದಲು ಆ ಹಣವನ್ನು ಅನೇಕ ಬಡ ಕುಟುಂಬಗಳ ಅಗತ್ಯತೆಗಳಿಗೆ ನೀಡುವ ಮೂಲಕ ಅರ್ಥಪೂರ್ಣವಾಗಿ ದೀಪಾವಳಿ ಆಚರಿಸುವಲ್ಲಿ ಮುಂದಿನ ಪೀಳಿಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು ಇಲ್ಲಿನ ಇತಿಹಾಸ ವಿಭಾಗದ ವತಿಯಿಂದ ‘ಸ್ವಾತಂತ್ರ್ಯದ ನೆನಪುಗಳು’ ಎಂಬ ವಿಚಾರದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ನಾವುಂದ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಗಣೇಶ್ ಉಪನ್ಯಾಸ ನೀಡಿದರು. ಪ್ರಾಂಶುಪಾಲರಾದ ಪ್ರೊ.ಬಿ.ಎ ಮೇಳಿ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಉಮೇಶ್ ಮಯ್ಯ ಉಪಸ್ಥಿತರಿದ್ದರು. ಇತಿಹಾಸ ಉಪನ್ಯಾಸಕರಾದ ಕುಮಾರಿ ಶರಾವತಿ ಸ್ವಾಗತಿಸಿದರು. ಇತಿಹಾಸ ಉಪನ್ಯಾಸಕರಾದ ವಿಘ್ನೇಶ್ವರ ವಂದಿಸಿದರು. ವಿದ್ಯಾರ್ಥಿನಿ ಪಿ.ಜಿ ಚೈತನ್ಯ ತೃತೀಯ ಬಿ.ಎ ಕಾರ್ಯಕ್ರಮ ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟಿಕರಣಗೊಳ್ಳಲಿರುವ ಕಾರಂತರ ಬೈಲು ರಸ್ತೆ, 10 ಲಕ್ಷ ರೂ. ವೆಚ್ಚದಲ್ಲಿ ಸುಲ್ತಾನ್ ಮೊಹಲ್ಲಾ ರಸ್ತೆ, 5 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟಿಕರಣಗೊಳ್ಳಲಿರುವ ಸುಗ್ಗಿಬೈಲು ಹೋಗುವ ರಸ್ತೆಗೆ ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಗುದ್ದಲಿ ಪೂಜೆ ನೆರವೇರಿಸಿದರು. ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಜಿ.ಪುತ್ರನ್, ತಾಪಂ ಸದಸ್ಯರಾದ ಸುರೇಂದ್ರ ಖಾರ್ವಿ, ರಾಜು ದೇವಾಡಿಗ, ಗಂಗೊಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸೀತಾರಾಮ ಶೆಟ್ಟಿ, ಜಿಲ್ಲಾ ಪಂಚಾಯತ್ ಇಂಜಿನಿಯರ್ ರಾಜ್‌ಕುಮಾರ್, ಗ್ರಾಪಂ ಸದಸ್ಯರಾದ ರೇಷ್ಮಾ ಖಾರ್ವಿ, ಸುಶೀಲ ಶೇರುಗಾರ್, ಸರೋಜಿನಿ, ಕಮಲ, ಯೂನಿಸ್ ಸಾಹೇಬ್, ಅಬ್ದುಲ್ ಹಾದಿ, ಗಂಗೊಳ್ಳಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ದುರ್ಗರಾಜ್ ಪೂಜಾರಿ, ಸ್ಥಳೀಯರಾದ ದಿನೇಶ ಪೂಜಾರಿ, ಇಂದಿರಾ ಪೂಜಾರಿ, ನಾಗರಾಜ್ ಶೇರುಗಾರ್, ವಾಸುದೇವ ಶೇರುಗಾರ್, ಪ್ರಕಾಶ ಕಾರಂತ್, ಗುತ್ತಿಗೆದಾರ ಚಂದ್ರ ಖಾರ್ವಿ, ನಿವೃತ್ತ ಮುಖ್ಯೋಪಾಧ್ಯಾಯ ಜಿ.ಮಹಮ್ಮದ್ ರಫೀಕ್ ಮೊದಲಾದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಆರಕ್ಷಕ ಠಾಣೆಯಲ್ಲಿ ಬೆಳಿಗ್ಗೆ ದೀಪಾವಳಿಯ ಪ್ರಯುಕ್ತ ವಿಶೇಷ ಲಕ್ಷ್ಮೀಪೂಜೆ ಹಾಗೂ ಆಯುಧಪೂಜೆ ವಿಜೃಭಣೆಯಿಂದ ನಡೆಯಿತು. ವೃತ್ತ ನಿರೀಕ್ಷಕ ರಾಘವ ಪಡೀಲ್, ಠಾಣಾಧಿಕಾರಿ ಸಂತೋಷ್ ಆನಂದ್ ಕಾಯ್ಕಿಣಿ, ಸಿಬ್ಬಂದಿಗಳು ಹಾಗೂ ಇವರೆಲ್ಲರ ಕುಟುಂಬ ಸದಸ್ಯರು ಪೂಜೆಯಲ್ಲಿ ಪಾಲ್ಗೊಂಡಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮುಂಬಯಿ: ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ ಇದರ 2016-18 ರ ಅವಧಿಗೆ ನೂತನ ಅಧ್ಯಕ್ಷರಾಗಿ ಮಂಜುನಾಥ ಬಿಲ್ಲವ ಶಿರೂರು ಆಯ್ಕೆಯಾಗಿದ್ದಾರೆ. ಸುರೇಶ ಎಸ್. ಪೂಜಾರಿ (ಗೌರವಾಧ್ಯಕ್ಷರು), ಎನ್. ಜಿ. ಪೂಜಾರಿ (ಉಪಾಧ್ಯಕ್ಷರು), ನರಸಿಂಹ ಎಮ್. ಬಿಲ್ಲವ (ಉಪಾಧ್ಯಕ್ಷರು), ಸೂರ್ಯ ಎಸ್. ಪೂಜಾರಿ (ಗೌರವ ಪ್ರಧಾನ ಕಾರ್ಯದರ್ಶಿ), ಸೀಮಾ ಲೊಕೇಶ್ ಪೂಜಾರಿ (ಜತೆ ಕಾರ್ಯದರ್ಶಿ), ಉದಯ ಕೆ. ಪೂಜಾರಿ (ಜತೆ ಕಾರ್ಯದರ್ಶಿ), ಅಶೋಕ ಎನ್. ಪೂಜಾರಿ (ಗೌರವ ಕೋಶಾಧಿಕಾರಿ), ಜಗನ್ನಾಥ ಆರ್. ಪೂಜಾರಿ (ಜತೆ ಕೋಶಾಧಿಕಾರಿ), ಶ್ರೀಧರ ವಿ. ಪೂಜಾರಿ (ಜತೆ ಕೋಶಾಧಿಕಾರಿ) ಹಾಗೂ ಕುಂದಾಪುರದ ಶ್ರೀ ನಾರಾಯಣಗುರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದತ್ತಿ ಸಂಸ್ಥೆಗೆ ಸಂಘದ ಪ್ರತಿನಿಧಿಯಾಗಿ ಪ್ರಭಾಕರ ಆರ್. ಪೂಜಾರಿ ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ವಿಧಾನಸಭಾ ವ್ಯಾಪ್ತಿಯ ಗ್ರಾಮಗಳ ನಿವೇಶನ ರಹಿತ ಬಡ ಕೂಲಿ ಕಾರ್ಮಿಕರು ಭೂಮಿ ಹಕ್ಕುಪತ್ರಕ್ಕಾಗಿ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿ ವರ್ಷ ಐದು ಕಳೆದರೂ ಇಲ್ಲಿಯ ತನಕ ತುಂಡು ಭೂಮಿಯನ್ನು ನಿವೇಶನ ರಹಿತರಿಗೆ ನೀಡಲು ಸಾಧ್ಯವಾಗಲಿಲ್ಲ. ಶಾಸಕರ, ಸಂಸದರ ಸಂಬಳ ಏರಿಕೆಯಾಗುತ್ತಲೇ ಇದೆ. ಆದರೆ ಸರಕಾರಕ್ಕೆ ಮಾತ್ರ ಬಡ ಕೃಷಿ ಕೂಲಿಕಾರರ ಬಗ್ಗೆ ಕಾಳಜಿ ಇದ್ದಂತಿಲ್ಲ ಎಂದು ಕರ್ನಾಟಕ ಪ್ರಾಂತ್ಯ ಕೃಷಿ, ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ದಾಸ್ ಭಂಡಾರಿ ವ್ಯಂಗವಾಡಿದರು. ಬೈಂದೂರು ವಿಶೇಷ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ನಿವೇಶನ ರಹಿತರು ಭೂಮಿ ಹಕ್ಕುಪತ್ರಕ್ಕಾಗಿ ಸಲ್ಲಿಸಿದ್ದ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡುವಂತೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ಜನಸಾಮಾನ್ಯರು ಬೆವರು ಸುರಿಸಿ ದುಡಿದು ತೆರಿಗೆ ಕಟ್ಟಿದ ಹಣದಲ್ಲಿ ಜನಪ್ರತಿನಿಧಿಗಳು ಮೆರೆಯುತ್ತಿದ್ದು, ರಿಯಲ್ ಎಸ್ಟೇಟ್, ಗುತ್ತಿಗೆ ಕಾಮಗಾರಿ, ಅಕ್ರಮ ವ್ಯವಹಾರಗಳ ಮೂಲಕ ಬಡವರನ್ನು ಲೂಟಿ ಮಾಡುತ್ತಿದ್ದಾರೆ. ಸರಕಾರವೂ ಕೂಡಾ ಈ ವ್ಯವಸ್ಥೆಯಲ್ಲಿ ಶಾಮೀಲಾಗಿದ್ದು, ಸರ್ಕಾರಿ ಭೂಮಿಯನ್ನು ಬಡನಿವೇಶನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ಆವಿಷ್ಕಾರದೊಂದಿಗೆ ಹೊಸ ಉದ್ದಿಮೆಯನ್ನು ಪ್ರಾರಂಭಿಸುವ ಬಗ್ಗೆ (ಸ್ಟಾರ್ಟಪ್) ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಮಾಂಟೆಕ್ಶರ್ ಮತ್ತು ಉದ್ಮಾ ಟೆಕ್ನಾಲಜೀಸ್ ಇದರ ಐಟಿ ವಿಭಾಗದ ಮುಖ್ಯಸ್ಥರಾದ ಶಿವ ಪ್ರಸಾದ ಕೆ. ತರಬೇತಿ ನೀಡಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ.ಉಮೇಶ್ ಮಯ್ಯ ಕಾರ್ಯಕ್ರಮ ಸಂಘಟಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರಾವಳಿಯ ಗ್ರಾಮೀಣ ಪತ್ರಿಕೋದ್ಯಮದ ಹೆಸರು ಬಂದಾಗಲೆಲ್ಲಾ ಅಗ್ರಪಂಕ್ತಿಯಲ್ಲಿ ನಿಲ್ಲುವ ಹಿರಿಯ ಪತ್ರಕರ್ತ, ವಿಜಯ ಕರ್ನಾಟಕದ ದೈನಿಕ ಕುಂದಾಪುರದ ಸಿನಿಯರ್ ಕಾಫಿ ಎಡಿಟರ್ ಜಾನ್ ಡಿಸೋಜಾ ಅವರಿಗೆ ಪ್ರಸಕ್ತ ಸಾಲಿನ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಬಿಎಸ್ಸಿ ಪದವೀಧರರಾಗಿರುವ ಜಾನ್ ಡಿಸೋಜಾ ಅವರನ್ನು ಸೆಳದದ್ದು ಪತ್ರಿಕೋದ್ಯಮ ಕ್ಷೇತ್ರ. ವಿದ್ಯಾರ್ಥಿಯಾಗಿದ್ದಾಗಲೇ ಕುಂದಪ್ರಭ ವಾರಪತ್ರಿಕೆಯ ಮೂಲಕ ಪತ್ರಿಕೋದ್ಯಮದ ಪ್ರವೇಶಿಸಿದ ಅವರು ಗ್ರಾಮಾಂತರ ಪ್ರದೇಶಗಳು ಹಾಗೂ ತನಿಖಾ ವರದಿಗಾಗಿ ಸುತ್ತಾಟ, ಮನೆ ಮನೆಗೆ ಪತ್ರಿಕೆಯ ಹಾಕುವುದರಿಂದ ಹಿಡಿದು ಸ್ಥಳೀಯ ಪತ್ರಿಕೆಯ ಎಲ್ಲಾ ಆಯಾಮಗಳಲ್ಲಿಯೂ ಅನುಭವ ಪಡೆದವರು. ಅದರ ನಡುವೆ ಜೈಕೊಂಕಣಿ ಕೊಂಕಣಿ ಭಾಷಿಕ ಪತ್ರಿಕೆಯ ಹೊಣೆಗಾರಿಕೆ. ಪದವಿಯ ಬಳಿಕ ೧೯೯೯ರಿಂದ ಒಂದು ವರ್ಷ ಕುಂದಪ್ರಭದ ವರದಿಗಾರರಾಗಿ ಆ ಬಳಿಕ ೨೦೦೧ರಲ್ಲಿ ಹೊಸತಾಗಿ ಆರಂಭಗೊಂಡಿದ್ದ ವಿಜಯ ಕರ್ನಾಟಕ ಪತ್ರಿಕೆಯ ಕುಂದಾಪುರದ ವರದಿಗಾರರಾದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಅಲ್ಲಿಂದಿಚಿಗೆ ಜಾನ್ ಅವರು ಹಿಂತಿರುಗಿ ನೋಡಿದ್ದಿಲ್ಲ. ಸಾಮಾನ್ಯರನ್ನೂ ಸೆಳೆಯುವ ತನ್ನ ವಿಶಿಷ್ಟ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಂಗ್ಲೆಂಡಿನ ಭಾರತೀಯ ದೂತಾವಾಸ ಆಗಸ್ಟ್‌ನಲ್ಲಿ ಲಂಡನಿನ ಜಿಮಖಾನಾ ಬಯಲಿನಲ್ಲಿ ಏರ್ಪಡಿಸಿದ್ದ ಭಾರತದ 70ನೆಯ ಸ್ವಾತಂತ್ರ್ಯೋತ್ಸವದಲ್ಲಿ ಬಡಗುತಿಟ್ಟಿನ ಯಕ್ಷಗಾನದ ತುಣುಕೊಂದನ್ನು ಪ್ರದರ್ಶಿಸಿ ಜಾಗತಿಕ ಮಾಧ್ಯಮಗಳೂ ಸೇರಿ ನೆರೆದವರ ಗಮನ ಸೆಳೆದಿದ್ದ ಕುಂದಾಪುರದ ತರುಣರಿಬ್ಬರು ನವೆಂಬರ್ ಮೊದಲ ವಾರದಲ್ಲಿ ಲಂಡನ್ ನಗರದ ಪ್ರಮುಖ ಪ್ರದರ್ಶನ ಕೇಂದ್ರಗಳಲ್ಲಿ ನಡೆಯುವ ’ಲಂಡನ್ ಇಂಟರ್‌ನ್ಯಾಶನಲ್ ಆರ್ಟ್ ಫೆಸ್ಟಿವಲ್’ನಲ್ಲಿ ಇನ್ನೊಮ್ಮೆ ಮಿಂಚುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಅಲ್ಲಿನ ಡಂಕ್ಯಾಸ್ಟರ್ ನಗರದಲ್ಲಿ ವೈದ್ಯರಾಗಿರುವ ಬೈಂದೂರು ಮೂಲದ ಗುರುಪ್ರಸಾದ ಪಟ್ವಾಲ್ ಮತ್ತು ಬ್ರಿಸ್ಟಲ್‌ನ ಏರ್‌ಬಸ್ ವಿಮಾನ ತಯಾರಿಕಾ ಕಂಪನಿಯಲ್ಲಿ ತಂತ್ರಜ್ಞರಾಗಿರುವ ಯೋಗೀಂದ್ರ ಮರವಂತೆ ನವಂಬರ್ 5ರಂದು ಇಲ್ಫೋರ್ಡ್‌ನ ರೆಡ್‌ಬ್ರಿಜ್ ಟೌನ್‌ಹಾಲ್‌ನಲ್ಲಿ ’ಕಂಸವಧೆ’ಯ ದೃಶ್ಯವೊಂದನ್ನು ಪ್ರಸ್ತುತಪಡಿಸಲು ಆಮಂತ್ರಿತರಾಗಿದ್ದಾರೆ. ಲಂಡನ್ ಕೇಂದ್ರವಾಗಿಸಿಕೊಂಡು 2012ರಿಂದ ಭಾರತೀಯ ಕಲೆಯನ್ನು ಪ್ರಚುರಪಡಿಸುತ್ತಿರುವ ವಯಲಿನ್ ವಿದುಷಿ ಜ್ಯೋತ್ಸ್ನಾ ಶ್ರೀಕಾಂತ್ ಅವರ ಕಲಾಸಂಸ್ಥೆ ’ಧ್ರುವ್ ಆರ್ಟ್ಸ್’ ಈ ಐದು ದಿನಗಳ ಫೆಸ್ಟಿವಲ್‌ನ ಆಯೋಜಕ. ಭಾರತವೂ ಸೇರಿದಂತೆ ವಿವಿಧ ದೇಶಗಳ ಖ್ಯಾತನಾಮ ಸಂಗೀತ, ನೃತ್ಯ ಕಲಾವಿದರು ಇದರಲ್ಲಿ ಪ್ರದರ್ಶನ…

Read More

ದಿವ್ಯಾಧರ ಶೆಟ್ಟಿ ಕೆರಾಡಿ | ಕುಂದಾಪ್ರ ಡಾಟ್ ಕಾಂ ಲೇಖನ. ಮತ್ತೆ ಬಂದಿದೆ ದೀಪಾವಳಿ. ಜಗತ್ತೇ ಸಂಭ್ರಮದಿಂದ ಆಚರಿಸುವ ಬೆಳಕಿನ ಹಬ್ಬದ ಗಮ್ಮತ್ತೆ ವಿಶೇಷವಾದುದು. ಇಂದಿನ ಅಬ್ಬರದ ದೀಪಾವಳಿ, ಚೈನಾ ಪಟಾಕಿಗಳ ಸದ್ದಿನ ಎದುರು ನಾವು ಬಾಲ್ಯದಲ್ಲಿ ಹೊಡೆಯುತ್ತಿದ್ದ ಲಕ್ಷ್ಮೀ ಪಟಾಕಿಯ ಸದ್ದೇ ಈಗ ಕೇಳಿಸುತ್ತಿಲ್ಲ ನಮ್ಮ ಹಳ್ಳಿ ಬಾಲ್ಯದ ಕಡೆಗೆ, ಕಳೆದು ಹೋದ ಆ ಕಾಲದ ದೀಪಾವಳಿಯ ನೆನಪುಗಳ ಮನೆಯೊಳಗೊಮ್ಮೆ ಮೆಲ್ಲಗೆ ಹೋಗಿ ಹಳೆಯ ಮೆಲಕುಗಳ ಹಣತೆಯನ್ನು ಸಾಲಾಗಿ ಜೊಡಿಸಿ ಹಚ್ಚಿಟ್ಟು ಬರೋಣವೇ? ಅಪ್ಪ ನಂಗೆ ನೆಲ್ಚಕ್ರ ಬೇಕ್, ಅಮ್ಮಾ ನಂಗ್ ಸುರ್ ಸುರ್ ಕಡ್ಡಿ ಬೇಕ್ ನಂಗ್ ಎಲ್ ಕೇಪ್, ನಂಗ್ ರೀಲ್ ಕೇಪ್, ಒಂದೇ ಎರಡೇ ದೀಪಾವಳಿ ಬಂತೆಂದರೆ ಅದೆಂಥ ಸಂಭ್ರಮ. ಊರಹಬ್ಬಕ್ಕಿಂತಾ ಗಮ್ಮತ್ತು. ದೊಡ್ಡ ದೊಡ್ಡ ಪಟಾಕಿ, ಹೊಸ ಹೊಸ ಬಟ್ಟೆಯ ಇಂದಿನ ಈ ಸಂಭ್ರಮ ಇದೆಲ್ಲ ನಾವು ನೋಡಿದ್ದೆ ನೆನಪಿಲ್ಲ. ಬಾಲ್ಯದ ದೀಪಾವಳಿ ಬಡತನದಲ್ಲೆ ಕಳೆದರೂ ಇದ್ದುದರಲ್ಲೆ ಅದೆಷ್ಟು ಶ್ರೀಮಂತಿಕೆ ಕಂಡ ಸಂಭ್ರಮ. ಆ…

Read More