Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗಂಗೊಳ್ಳಿ ಗ್ರಾಮ ಪಂಚಾಯತ್‌ನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಅನೇಕ ಜನರಿಗೆ ವರ್ಷದಲ್ಲಿ ಕನಿಷ್ಠ ೧೦೦ ದಿನ ಉದ್ಯೋಗ ನೀಡಲು ಸರಕಾರ ಮುಂದಾಗಿರುವುದರಿಂದ ಜನರು ಸ್ವಾವಲಂಬಿ ಜೀವನ ನಡೆಸಲು ಸಹಾಯಕವಾಗಿದೆ. ಜನರು ಈ ಯೋಜನೆಯಡಿ ಹೆಸರನ್ನು ನೊಂದಾಯಿಸಿಕೊಂಡು ಈ ಯೋಜನೆ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಲು ಮುಂದಾಗಬೇಕು. ಈ ಯೋಜನೆಯಡಿ ನೀಡಲಾಗುತ್ತಿರುವ ಕೂಲಿ ಹಣವನ್ನು ಹೆಚ್ಚಿಸಲು ಸಂಬಂಧಪಟ್ಟ ಇಲಾಖೆಯ ಮೇಲೆ ಒತ್ತಡ ಹೇರಲು ಪ್ರಯತ್ನಿಸುವುದಾಗಿ ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಜಿ.ಪುತ್ರನ್ ಹೇಳಿದರು. ಅವರು ಗಂಗೊಳ್ಳಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ೨೦೧೭-೧೮ನೇ ಸಾಲಿನ ಕಾರ್ಮಿಕ ಆಯ-ವ್ಯಯವನ್ನು ತಯಾರಿಸುವ ಬಗ್ಗೆ ಜರುಗಿದ ಗಂಗೊಳ್ಳಿ ಗ್ರಾಮ ಪಂಚಾಯತ್‌ನ ಗ್ರಾಮಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಯಶಸ್ಸಿಗಾಗಿ ಗ್ರಾಮದಲ್ಲಿ ವಾರ್ಡ್‌ಸಭೆ ಮತ್ತು ಗ್ರಾಮಸಭೆಯನ್ನು ಆಯೋಜಿಸಿ ಜನರಿಂದ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ…

Read More

ಮೂಡುಬಿದಿರೆ: ಜಾಗತಿಕ ಭಾಷೆಗಳು ನಮ್ಮನ್ನು ಆಳುತ್ತಿರುವ, ಆಕ್ರಮಿಸುತ್ತಿರುವ ಹೊತ್ತಿನಲ್ಲಿ ನಮ್ಮ ಸೋದರ ಭಾಷೆಯ ಆಗುಹೋಗುಗಳನ್ನು ಅರಿಯುವ ಹಿನ್ನೆಲೆಯಲ್ಲಿ ಆಳ್ವಾಸ್ ನುಡಿಸಿರಿಯಲ್ಲಿ `ಸೋದರ ಭಾಷೆಗಳು-ನಾಳೆಗಳ ನಿರ್ಮಾಣ’ ವಿಚಾರ ಗೋಷ್ಠಿ ನಡೆಯಿತು. ಗೋಷ್ಠಿಯಲ್ಲಿ ಕನ್ನಡ, ತಮಿಳು, ಮಲೆಯಾಳಂ ಭಾಷೆಗಳಲ್ಲಿ ನಡೆಯುತ್ತಿರುವ ಪ್ರಗತಿಪರ ಬದಲಾವಣೆಗಳ ಕುರಿತು ವಿದ್ವಾಂಸರು ತಮ್ಮ ವಿಚಾರವನ್ನು ಮಂಡಿಸಿದರು. ತಮಿಳು ಭಾಷೆ-ನಾಳೆಗಳ ನಿರ್ಮಾಣ ತಮಿಳು ಭಾಷೆಯಲ್ಲಾಗಿರುವ, ಆಗುತ್ತಿರುವ ತ್ವರಿತ ಬದಲಾವಣೆಗಳ ಕುರಿತು ಮಾತನಾಡಿದ ಡಾ. ತಮಿಳ್ ಸೆಲ್ವಿ, ಕರ್ನಾಟಕದಲ್ಲಿ ನಾಳೆಗಳನ್ನು ನಿರ್ಮಾಣ ಮಾಡುವ ಮೊದಲು ನಮ್ಮ ಸೋದರ ಭಾಷೆಗಳಲ್ಲಿ ಏನಾಗುತ್ತಿದೆಯೆಂಬುದನ್ನು ಅರಿತುಕೊಳ್ಳುವುದು ತುಂಬಾ ಮುಖ್ಯ. ವಾಸ್ತವದಲ್ಲಿ ನಮ್ಮಿಂದ ಮಾಡಲಾಗದ ಕಾರ್ಯವನ್ನು ತಮ್ಮ ಕಾವ್ಯಗಳ ಮೂಲಕ ಕವಿಗಳು ಮಾಡುತ್ತಾರೆ. ಭಾಷೆಗೆ ಆ ಅಂತಸ್ಸತ್ವ ಇದೆ. ಹೀಗಾಗಿ ನಾವು ಭಾಷೆಯನ್ನು ಅಭಿವೃದ್ಧಿಪಡಿಸುವತ್ತ ಹೆಚ್ಚಿನ ಗಮನ ಹರಿಸಬೇಕು. ಇಂದು ನಾವು ಒಳ್ಳೆಯ ಬೀಜಗಳನ್ನು ಬಿತ್ತಿದರೆ ನಾಳೆ ಅದು ಸದೃಢ ಹೆಮ್ಮರವಾಗಲು ಸಾಧ್ಯ. ಆದ್ದರಿಂದ ತುಂಬಾ ಜಾಗೃತಪ್ರಜ್ಞೆಯಿಂದ ನಾವು ಭಾಷೆ-ಸಂಸ್ಕೃತಿಯ ಕೆಲಸವನ್ನು ಮಾಡಬೇಕೆಂದು ಅಭಿಪ್ರಾಯಪಟ್ಟರು. `ತಮಿಳರು ತಮ್ಮ ಭಾಷೆಯನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಂಬದಕೋಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಾದ ಕಿರಣ 7ನೇ ತರಗತಿ ವಿಭಾಗ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಪಡೆದು ರಾಜ್ಯ ಮಟ್ಟಕ್ಕೆ, ಶಶಿಕಲಾ ೮೦ ಮೀಟರ್ ಅಡೆತಡೆ ಓಟದಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಜಿಲ್ಲಾ ಮಟ್ಟಕ್ಕೆ, ಅಕ್ಷಯ ಎತ್ತರ ಜಿಗಿತದಲ್ಲಿ ತಾಲೂಕು ಮಟ್ಟದಲ್ಲಿ ದ್ವಿತೀಯ ಜಿಲ್ಲಾ ಮಟ್ಟಕ್ಕೆ ಆಯ್ಕೆ, ವಿಸ್ಮಿತಾ ೮೦ ಮೀಟರ್ ಅಡೆತಡೆ ಓಟದಲ್ಲಿ ತಾಲೂಕು ಮಟ್ಟದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ.

Read More

ಶಾಂಭವಿ ಎಂ. ಜೆ | ಕುಂದಾಪ್ರ ಡಾಟ್ ಕಾಂ ವರದಿ ಮೂಡುಬಿದಿರೆ: ಸೊಂಡಿಲೆತ್ತಿ ಘೀಳಿಡುವ ಆನೆಗಳು, ಗರ್ಜಿಸಿ ಬೆದರಿಸುವ ಹುಲಿ ಸಿಂಹ, ಡಿಜೆ ಧ್ವನಿಗೆ ತಕ್ಕಂತೆ ತಲೆಯಾಡಿಸುವ ಚಿಂಪಾಂಜಿ. ದೂರದಿಂದ ನೋಡುವವರಿಗೆ ಎಲ್ಲವೂ ಜೀವಂತ ಪ್ರಾಣಿಗಳೇ. ಸಮೀಪಕ್ಕೆ ತೆರಳಿದರಷ್ಟೇ ತಿಳಿಯುವುದು ಅವು ಸುಂದರ ಮಾನವ ನಿರ್ಮಿತ ಕಲಾಕೃತಿಗಳು. ಆಳ್ವಾಸ್ ನುಡಿಸಿರಿಯಲ್ಲಿ ರತ್ನಾಕರವರ್ಣಿ ವೇದಿಕೆಯ ಮುಂಭಾಗದಲ್ಲಿದಲ್ಲಿ ನಿಲ್ಲಿಸಲಾಗಿದ್ದ ಈ ಆಕ್ಷನ್ ಕಲಾಕೃತಿಗಳು ಪ್ರೇಕ್ಷಕರ ಆಕರ್ಷಣೆಯ ಕೇಂದ್ರಬಿಂದು. ಕೇರಳದ ಜೇಡಿಗೋಬೆ ಕಲಾವಿದರಿಂದ ಮೂಡಿಬಂದ ಪ್ರಾಣಿಗಳ ಕಲಾಕೃತಿಗಳು ಹದಿನಾರು ಮಂದಿಯ ತಂಡದೊಂದಿಗೆ ಮೂರು ದಿನಗಳ ಕಾಲ ಪ್ರದರ್ಶನಕ್ಕಾಗಿ ವಿದ್ಯಾಗಿರಿ ಮೈದಾನದಲ್ಲಿ ನೆಲೆಕಂಡಿವೆ. ಕಲಾಕೃತಿಗಳನ್ನು ಮೆಟಲ್, ಕಬ್ಬಿಣ, ಪೈಬರ್ ಹಾಗೂ ಕಪ್ಪು ಬಟ್ಟೆಗಳನ್ನು ಬಳಸಿ ರಚಿಸಲಾಗಿದ್ದು ವಿದ್ಯುತ್ ಸಹಾಯದಿಂದ ಪ್ರಾಣಿಗಳು ಕಿವಿ, ಕತ್ತು, ಸೊಂಡಿಲುಗಳನ್ನು ಅಲ್ಲಾಡಿಸುತ್ತವೆ. ಕೆಳಭಾಗದಲ್ಲಿ ಗಾಲಿಗಳನ್ನು ಅಳವಡಿಸಿರುವುದರಿಂದ ಒಂದೆಡೆಯಿಂದ ಮತ್ತೊಂಡೆಗೆ ಸುಲಭವಾಗಿ ಸಾಗಿಸುತ್ತೇವೆ ಎನ್ನುತ್ತಾರೆ ಕೇರಳದ ಆದರ್ಶ್. ಆನೆ ಹುಲಿ ಸಿಂಹವನ್ನು ಕಾಡು, ಮೃಗಾಲದಲ್ಲಿ ನೋಡುತ್ತೇವೆ ಆದರೆ ಇಷ್ಟೊಂದು ಬೃಹದಾಕಾರದ ಪ್ರಾಣಿಗಳ ಪ್ರತಿರೂಪವನ್ನು ಹತ್ತಿರದಿಂದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದ ಪ್ರತಿಷ್ಠಿತ ವಿದ್ಯಾಸಂಸ್ಥೆ ಗುರುಕುಲ ಪಬ್ಲಿಕ್ ಸ್ಕೂಲ್ ನಲ್ಲಿ ೧೧ನೇ ವಾರ್ಷಿಕೋತ್ಸವದ ಅಂಗವಾಗಿ ೨೦೧೬-೧೭ನೇ ಸಾಲಿನ ಸಾಂಸ್ಕ್ರತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ನೀಡಿ ವಿತರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಆಸರೆ ಚಾರಿಟೇಬಲ್ ಟ್ರಸ್ಟ್‌ನ ಮುಖ್ಯಸ್ಥೆ ಡಾ. ಆಶಾಜ್ಯೋತಿ ರೈ ರವರು ಮಾತನಾಡಿ ಋಗ್ವೇದದಲ್ಲಿ ಹೇಳಿರುವಂತೆ ಶಿಕ್ಷಣವು ವಿದ್ಯಾರ್ಥಿಗಳಿಗೆ ಸಂಸ್ಕ್ರತಿಯನ್ನು ಪ್ರತಿಬಿಂಬಿಸುವ ದಾರಿ ದೀಪವಾಗಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯು ಮಹತ್ವಾಕಾಂಕ್ಷೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಪಾಲಕ ಶಿಕ್ಷಕರೀರ್ವರು ವಿದ್ಯಾರ್ಥಿಗಳನ್ನು ಕೇವಲ ಹಣಕ್ಕಾಗಿ ವೃತ್ತಿಯನ್ನು ಮಾಡಲು ಪ್ರೇರೇಪಿಸದೇ, ಸಮಾಜದ ಮೌಲ್ಯಗಳನ್ನು ಆದರ್ಶಗಳನ್ನು ಹೊತ್ತು ಸಾಗುವ ವಾಹಕಗಳನ್ನಾಗಿ ರೂಪಿಸಬೇಕು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಾಂಡ್ಯ ಎಜುಕೇಶನ್ ಟ್ರಸ್ಟ್‌ನ ಜಂಟಿ ಕಾರ್ಯ ನಿರ್ವಹಕಿ ಅನುಪಮ.ಎಸ್.ಶೆಟ್ಟಿ ಮಾತನಾಡಿ ಅತಿಯಾದ ಪ್ರೀತಿಯಿಂದ ಮಕ್ಕಳನ್ನು ದುರ್ಬಲರನ್ನಾಗಿ ಮಾಡದೇ ಸ್ವಾಭಾವಿಕವಾಗಿ ಮಕ್ಕಳನ್ನು ಬೆಳೆಯಲು ಅನುವು ಮಾಡಿಕೊಡಬೇಕು ಎಂದು ಪಾಲಕರಿಗೆ ಸಂದೇಶವನ್ನು ನೀಡಿದರು. ಬಾಂಡ್ಯ ಎಜ್ಯುಕೇಶನ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಹಣಾಧಿಕಾರಿ ಸುಭಾಶ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು. ಪದವಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಇಂದು ಸುಮಾರು ನಾಲ್ಕು ಮಿಲಿಯನ್ ಬಡ ಮಕ್ಕಳಿಗೆ ಆಹಾರ ಸಿಗುತ್ತಿಲ್ಲ. ಅವರಲ್ಲಿ ಸಾವಿರಾರು ಮಂದಿ ‘ನೈಡ್ಸ್’ ಎಂಬ ಖಾಯಿಲೆಯಿಂದ ಬಳಲುತಿದ್ದಾರೆ. ಪೌಷ್ಟಿಕ ಆಹಾರದ ಕೊರತೆಯಿಂದಾಗಿ ಗರ್ಭಿಣಿಯರಿಗೆ ಸರಿಯಾದ ಆಹಾರ ಸಿಗುತ್ತಿಲ್ಲ. ಶಾಲಾ ಮಕ್ಕಳಿಗೆ ಬಿಸಿ ಊಟ ಕೊಡುವುದಕ್ಕಿಂತ, ಗರ್ಭಿಣಿಯರಿಗೆ ಪೌಷ್ಠಿಕ ಆಹಾರ ನೀಡುವುದು ಸೂಕ್ತ ಎಂದು . ಎಂದು ಡಾ. ಬಿ.ಎಂ. ಹೆಗ್ಡೆ ಹೇಳಿದರು. ಆಳ್ವಾಸ್ ನುಡಿಸಿರಿಯ ರತ್ನಾಕರವರ್ಣಿ ವೇದಿಕೆ, ಪುಂಡಲೀಕ ಹಾಲಂಬಿ ಸಭಾಂಗಣದಲ್ಲಿ ‘ಆರೋಗ್ಯ ಮತ್ತು ಆಹಾರ’ ಎಂಬ ವಿಷಯದ ಕುರಿತು ವಿಶೇಷೋಪನ್ಯಾಸದಲ್ಲಿ ಅವರು ಮಾತನಾಡಿದರು. ಪ್ರತಿದಿನವೂ ಎಲ್ಲರಿಗೂ ಆಹಾರವು ದಕ್ಕುವಂತೆ ಮಾಡಿ, ನಾನು ಬದುಕಿ ಇತರರನ್ನೂ ಬದುಕಲು ಬಿಡುವಂತಹ ದೃಡಸಂಕಲ್ಪ ಮಾಡಬೇಕು. ಮನಸ್ಸು ಸಂತಸದಿಂದ ಇದ್ದರೆ ಆರೋಗ್ಯ ಚನ್ನಾಗಿರುತ್ತದೆ. ಸಂತಸ ಎನ್ನುವುದು ಕನ್ನಡಿ ಇದ್ದ ಹಾಗೆ. ಬೇರೆಯವರಿಗೆ ಖುಷಿ ಕೊಟ್ಟರೆ ಸಂತೋಷ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ನುಡಿಸಿರಿಯಲ್ಲಿ ಇಂತಹ ಜನರನ್ನು ಉತ್ತೇಜನಗೊಳಿಸುವ ಕಾರ್ಯಕ್ರಮಗಳು ಇನ್ನಷ್ಟು ಆಗಲಿ ಎಂದರು.

Read More

ಮೂಡುಬಿದಿರೆ: ನಾಡು ನುಡಿ ಸಂಸ್ಸೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ೨೦೧೬ ಉದ್ಘಾಟನೆಗೆ ಪೂರ್ವಭಾವಿಯಾಗಿ ರಾಜ್ಯದ ವಿವಿಧೆಡೆಗಳಿಂದ ಭಾಗವಹಿಸಿದ್ದ ಕಲಾತಂಡಗಳು ಪ್ರೇಕ್ಷಕರ ಗಮನ ಸೆಳೆದವು. ಕಲಾತಂಡ ಮೆರಗು: ನುಡಿಸಿರಿಯಲ್ಲಿ 50ಕ್ಕೂ ಅಧಿಕ ಕಲಾತಂಡಗಳು ಭಾಗವಹಿಸಿದ್ದರು. ಆಳ್ವಾಸ್ ಮುಖ್ಯದ್ವಾರದಿಂದ ರತ್ನಾಕರವರ್ಣಿ ವೇದಿಕೆಯ ತನಕ ನಡೆದ ಮೆರವಣಿಗೆಯಲ್ಲಿ ನೂರಾರು ಕಲಾವಿದರು ಭಾಗವಹಿಸಿದ್ದರು. ರಂಜಿತ್ ಕಾರ್ಕಳ ಅವರ ಪೂತನಿ, ಮಂಡ್ಯ ಜಾನಪದ ಕಲಾತಂಡದ ನಂದಿ ಧ್ವಜ, ಪಕ್ಕಿನಿಶಾನೆ, 13 ಮಂದಿ ಕಲಾವಿದರು, ಕೊಂಬು, ಚೆಂಡೆ, ಆಟಿಕಳೆಂಜ, ಕೊರಗರ ಗಜಾಮೇಳ, ಮಂಗಳೂರು ಡೋಲು, ಚಾಮರಾಜನಗರ ತಂಡದ ಗೊರವರಕುಣಿತ, , ಸೋಮನ ಕುಣಿತ, ಪೂಜಾಕುಣಿತ, ಚಿತ್ರದುರ್ಗ ಜಾನಪದ ತಂಡದ ಮರಗಾಲು, ವೀರಭದ್ರನಕುಣಿತ, ಚಿತ್ರದುರ್ಗ ಬ್ಯಾಂಡ್ ಸೆಟ್ ಹೊನ್ನಾವರ ಜಾನಪದತಂಡದ ಹಾಲಕ್ಕಿ, ಹಾವೇರಿ ಜಿಲ್ಲೆಯ, ಬೆಂಡರಕುಣಿತ ರಮೇಶ್ಕಲ್ಲಡ್ಕ ಅವರ ಡ್ರಾಗನ್, ಕೇರಳದ ದೇವರ ವೇಷ, ಕುಂದಾಪುರ ಜಾನಪದ ಕಲಾತಂಡ ಡೋಲು, ಬಿಜಾಪುರ ಲಂಬಾಣಿತಂಡದ ಲಂಬಾಣಿ, ಬೆದ್ರ ಪ್ರೆಂಡ್ಸ್ ಹುಲಿವೇಷ, ವಿಜಯ್ ಮತ್ತು ತಂಡ, ಉಡುಪಿಯ ಕರಗ ಕೋಲಾಟ, ಬಳ್ಳಾರಿ ತಂಡದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕೋಟೇಶ್ವರ: ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಕೋಟೇಶ್ವರದ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನಕ್ಕೆ ಮೂರು ದಿನಗಳ ಮೊಕ್ಕಾಂಗೆ ತಾ ೧೬ ನವೆಂಬರ್‌ನಂದು ಕೇರಳದ ಕಾಂಜ್ಞಂಗಾಡಿನಿಂದ ಕೋಟೇಶ್ವರಕ್ಕೆ ಆಗಮಿಸಿದರು. ಸ್ವಾಮೀಜಿಯವರನ್ನು ಪೂರ್ಣ ಕುಂಭ ಸ್ವಾಗತದ ಮೂಲಕ ಬರಮಾಡಿಕೊಳ್ಳಲಾಯಿತು ನಂತರ ದೇವಾಲಯದ ವತಿಯಿಂದ ಪಾದಪೂಜೆ ಸೇವೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಮೊಕ್ತೇಸರರು, ಊರ ಪರವೂರ ಸಮಾಜ ಬಾಂಧವರು ಉಪಸ್ಥಿತರಿದ್ದರು. ಸಂಜೆ ಚೈತನ್ಯ  ಕುಲಕರ್ಣಿ ಮುಂಬೈ ಇವರಿಂದ ಭಜನ್ ಸಂಧ್ಯಾ ಕಾರ್ಯಕ್ರಮ ದೇವಸ್ಥಾನದಲ್ಲಿ ನಡೆಯಲಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಿವೃತ್ತ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಐ. ವಸಂತಕುಮಾರಿ (೭೧) ಅಲ್ಪಕಾಲದ ಅಸ್ವಾಸ್ಥ್ಯದ ಕಾರಣ ಗುರುವಾರ ಬೆಂಗಳೂರಿನ ಅಪೊಲೊ ಆಸ್ಪತ್ರೆಯಲ್ಲಿ ನಿಧನರಾದರು. ಕನ್ನಡ ಪಂಡಿತ ಐರೋಡಿ ಯಜ್ಞನಾರಾಯಣ ಉಡುಪ-ಸಾಂಪ್ರದಾಯಿಕ ಹಾಡುಗಳ ಗಾಯಕಿ ರುಕ್ಮಿಣಿ ಉಡುಪ ದಂಪತಿಯ ಪುತ್ರಿ ಆಗಿರುವ ಅವರು ಬಸ್ರೂರು, ಕುಂದಾಪುರ, ಕೋಟೇಶ್ವರ, ಬೈಂದೂರು ಮತ್ತು ನಾವುಂದ ಪ್ರೌಢಶಾಲೆಗಳಲ್ಲಿ ವಿಜ್ಞಾನ ಶಿಕ್ಷಕಿಯಾಗಿ ದುಡಿದಿದ್ದರು. ಮುಖ್ಯೋಪಾಧ್ಯಾಯಿನಿ ಹುದ್ದೆಗೆ ಬಡ್ತಿಗೊಂಡ ಬಳಿಕ ಮರವಂತೆ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರು. ವಿಜ್ಞಾನ ವಿಷಯದ ಪರಿಣಾಮಕಾರಿ ಬೋಧನೆ ಮತ್ತು ಶಾಲಾಭಿವೃದ್ಧಿಯ ಮೂಲಕ ಗುರುತಿಸಲ್ಪಟ್ಟಿದ್ದ ಅವರಿಗೆ ೨೦೦೨-೦೩ನೆ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿತ್ತು. ಅವರು ಪತಿ ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ, ಬೈಂದೂರಿನ ತೆರಿಗೆ ಸಲಹೆಗಾರ ಜತೀಂದ್ರ ಮತ್ತು ಬ್ರಿಸ್ಟಲ್‌ನ ಏರ್‌ಬಸ್ ವಿಮಾನ ತಯಾರಿ ಸಂಸ್ಥೆಯ ಹಿರಿಯ ತಂತ್ರಜ್ಞ ಯೋಗಿಂದ್ರ ಸೇರಿ ಇಬ್ಬರು ಪುತ್ರರನ್ನು ಅಗಲಿದ್ದಾರೆ.

Read More