ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಕುಂದಾಪುರ ತಾಲೂಕಿನ ಕಂಚುಗೋಡು ನಿವಾಸಿ ಚಂದ್ರ ಖಾರ್ವಿ ಅವರ ಮಗ ಭರತ್ ಖಾರ್ವಿ ಅವರ ವೈದ್ಯಕೀಯ ಚಿಕಿತ್ಸೆಗೆ ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದಿಂದ ೨೦ ಸಾವಿರ ರೂ.ಗಳನ್ನು ನೀಡಲಾಯಿತು. ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಎಚ್.ಮಂಜು ಬಿಲ್ಲವ ಅವರು ಭರತ್ ಖಾರ್ವಿ ಅವರ ಮನೆಗೆ ತೆರಳಿ ಸಹಾಯಧನದ ಚೆಕ್‌ನ್ನು ಹಸ್ತಾಂತರಿಸಿದರು. ಸಂಘದ ಉಪಾಧ್ಯಕ್ಷ ಮೋಹನ ಖಾರ್ವಿ ಎಪಿ., ಮಾಜಿ ಅಧ್ಯಕ್ಷ ಡಿ.ಚಂದ್ರ ಖಾರ್ವಿ, ಮಡಿ ಶಂಕರ ಖಾರ್ವಿ, ಬಿ.ಸುರೇಶ ಬಂಗೇರ ಕೋಡಿ, ನಾಗಪ್ಪಯ್ಯ ಪಟೇಲ್ ಹಾಗೂ ನಾಡದೋಣಿ ಮೀನುಗಾರರ ಸಂಘದ ಸದಸ್ಯರು ಉಪಸ್ಥಿತರಿದ್ದರು .
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ನೆಹರೂ ಮೈದಾನದಲ್ಲಿ ಯಕ್ಷಗಾನ ಪ್ರದರ್ಶನ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕು ಎಂಬ ಯಕ್ಷಗಾನ ಅಭಿಮಾನಿಗಳು ಹಾಗೂ ಸಾರ್ವಜನಿಕರ ಒಕ್ಕೂರಲ ಒತ್ತಾಯ, ಚರ್ಚೆ ನಡುವೆ ಅಂತಿಮ ತೀರ್ಮಾನವನ್ನು ಜಿಲ್ಲಾ ಉಸ್ತವಾರಿ ಸಚಿವರು ಕಾದಿರಿಸಿದ್ದು, ಯಕ್ಷಭಿಮಾನಿಗಳು ನಿರ್ಣಯ ಹೇಗೆ ಬರಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೆಹರು ಮೈದಾನದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ನಿಡುವ ಕುರಿತು ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಇಲಾಖೆ ಅಧಿಕಾರಿಗಳು, ಯಕ್ಷಪ್ರಿಯರು, ಕಲಾವಿದರು ಹಾಗೂ ಸಾರ್ವಜನಿಕರ ಅಭಿಪ್ರಾಯ ಕಲೆ ಹಾಕಲಾಗಿದ್ದು, ಒಂದಿಬ್ಬರು ಬಿಟ್ಟರೆ ಮತ್ತೆಲ್ಲರೂ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ನೀಡುವಂತೆ ಸಲಹೆ ಮಾಡಿದರು. ಇದಕ್ಕೆ ಇಲಾಖೆ ಅಧಿಕಾರಿಗಳು ಕೂಡಾ ಪರೀಕ್ಷೆ ಸಮಯ ಹೊರತು ಪಡಿಸಿ, ಯಕ್ಷಗಾನ ಪ್ರದರ್ಶನಕ್ಕೆ ಅವಾಕಾಶ ನೀಡಲು ಅಭ್ಯಂತರವಿಲ್ಲ ಎನ್ನುವ ಅಭಿಪ್ರಾಯ ಸಭೆಯಲ್ಲಿ ಮೂಡಿಬಂತು. ಯಕ್ಷಾಗಾನ ಅಭಿಮಾನಿ ರಾಮಕೃಷ್ಣ ಹೇರ್ಳೆ, ಮಾಜಿ ಕುಂದಾಪುರ ಪುರಸಭೆ ಅಧ್ಯಕ್ಷ ನರಸಿಂಹ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿ ಜಿಲ್ಲೆ ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಕುಂದಾಪುರ ಸೈಂಟ್ ಮೇರಿಸ್ ಸಂಯುಕ್ತ ಕಾಲೇಜು ಆಶ್ರಯದಲ್ಲಿ ಕುಂದಾಪುರ ಗಾಂಧಿ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜು ಕ್ರೀಡಾ ಕೂಟದಲ್ಲಿ ಕಲ್ಯಾಣಪುರ ವಿಲಾಗ್ರಿಸ್ ಪದವಿಪೂರ್ವ ಕಾಲೇಜು ತಂಡ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ಕಲ್ಯಾಣಪುರ ವಿಲಾಗ್ರಿಸ್ ಪದವಿಪೂರ್ವ ಕಾಲೇಜು ಬಾಲಕರ ತಂಡ ಸಮಗ್ರ ಪ್ರಶಸ್ತಿ ಪಡೆದಿದ್ದು, ನಿಟ್ಟೆ ಡಾ.ಎನ್.ಎಸ್.ಎ.ಎಂ. ಪದವಿಪೂರ್ವ ಕಾಲೇಜ್ ಬಾಲಕಿಯರು ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಮಣಿಪಾಲ ಪದವಿಪೂರ್ವ ಕಾಲೇಜು ಸಂಗಮೇಶ್ ಬಾಲಕರ ವೀರಾಗ್ರೇಸ ಪ್ರಶಸ್ತಿ ಪಡೆದೆಕೊಂಡರೆ, ಬಾಲಕಿಯರ ವಿಭಾಗದಲ್ಲಿ ನಿಟ್ಟೆ ಡಾ.ಎನ್.ಎಸ್.ಎ.ಎಂ. ಪದವಿಪೂರ್ವ ಕಾಲೇಜು ಭೂಮಿಕಾ ವೀರಾಗ್ರಣಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಕುಂದಾಪುರ ಪುರಸಭೆ ಉಪಾಧ್ಯಕ್ಷ ರಾಜೇಶ್ ಕಾವೇರಿ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪದಲ್ಲಿ ಉಡುಪಿ ಧರ್ಮಪ್ರಾಂತ್ಯ ಛಾನ್ಸಿಲರ್ ವಂ. ವೆಲೇರಿಯನ್ ಮೆಂಡೋನ್ಸಾ ಪ್ರಶಸ್ತಿ ಪ್ರದಾನ ಮಾಡಿದರು. ಜಿಲ್ಲಾ ಕ್ರೀಡಾ ಸಂಯೋಜಕ ಎಸ್.ಶ್ರೀಧರ ಶೆಟ್ಟಿ ಕ್ರೀಡಾ ಕೂಟದಲ್ಲಿ ಶ್ರಮಿಸಿದವರಿಗೆ ಅಭಿನಂದನೆ ಸಲ್ಲಿಸಿದರು. ಕುಂದಾಪುರ ಸಹಾಯಕ ಧರ್ಮಗುರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ/ಬೈಂದೂರು: ಹಳೆ ನೋಟುಗಳನ್ನು ಒಪ್ಪಿಸಿ ಹೊಸ ನೋಟು ಪಡೆಯಲು ಹಾಗೂ ಖಾತೆಗೆ ಹಣ ಜಮೆ ಮಾಡಲು ಕಳೆದ ಕೆಲವು ದಿನಗಳಿಂದ ಜನರು ದಿನವಿಡಿ ಬ್ಯಾಂಕುಗಳ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗೆ ಬ್ಯಾಂಕುಗಳ ಹೊರಕ್ಕೆ ಬಿಸಿಲಿನಲ್ಲಿ ನಿಲ್ಲುವವರು ಹಾಗೂ ನೋಟು ಬದಲಾವಣೆಯ ಅರ್ಜಿಗಳನ್ನು ತುಂಬಲು ತಿಳಿಯದವರಿಗಾಗಿ ಕುಂದಾಪುರ ತಾಲೂಕಿನ ಕೆಲವೆಡೆ ಯುವಕರ ತಂಡ ಬ್ಯಾಂಕಿನ ಗ್ರಾಹಕರ ನೆರವಿಗೆ ಬಂದಿದೆ. ಬೈಂದೂರು ಸಮೀಪದ ಕಂಬದಕೋಣೆ ವಿಜಯ ಬ್ಯಾಂಕಿನ ಎದುರು ದಿನವೂ ಸರತಿ ಸಾಲು ನಿರ್ಮಾಣವಾಗಿರುವುದನ್ನು ಮನಗಂಡ ಪರಿಸರದ ಯುವಕರು ಬಿಸಿಲಿನಲ್ಲಿ ನಿಲ್ಲುವವರಿಗಾಗಿ ಬ್ಯಾಂಕಿನ ಎದುರು ಶ್ಯಾಮಿಯಾನ ವ್ಯವಸ್ಥೆ ಮಾಡಿಕೊಟ್ಟಿದೆ. ಬೈಂದೂರು ಕ್ಷೇತ್ರ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶರತ್‌ಕುಮಾರ್ ಶೆಟ್ಟಿ ಹಾಗೂ ಬೈಂದೂರು ಬಿಜೆಪಿ ಯುವಮೋರ್ಚಾ ಕಂಬದಕೋಣೆ ಸ್ಥಾನೀಯ ಸಮಿತಿ ಅಧ್ಯಕ್ಷ ಅಧ್ಯಕ್ಷ ರಾಘವೇಂದ್ರ ದೇವಾಡಿಗ ಮತ್ತವರ ತಂಡ ಶ್ಯಾಮಿಯಾನ ಹಾಕಿಸಿ ನೆರಳಾಗಿದ್ದಾರೆ. ಗಂಗೊಳ್ಳಿಯ ಬ್ಯಾಂಕುಗಳನ್ನು ಜನರ ಸರತಿ ಸಾಲು ಕಂಡ ವೀರ ಸಾವರ್ಕರ ದೇಶಪ್ರೇಮಿ ಬಳಗ…
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯಲಿರುವ ಆಳ್ವಾಸ್ ನುಡಿಸಿರಿ-2016 ನಾಡು ನುಡಿಯ ಸಮ್ಮೇಳನಕ್ಕೆ ಪೂರಕವಾಗಿ ನ.17ರಿಂದ 20ರವರೆಗೆ ಕೃಷಿ ಸಿರಿ ನಡೆಯಲಿದೆ. ಹಲವಾರು ವೈವಿಧ್ಯತೆಗಳೊಂದಿಗೆ ಮೂಡಿಬರಲಿದೆ ಎಂದು ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 150 ಮಳಿಗೆಗಳಿಗೆ ಉಚಿತ ವ್ಯವಸ್ಥೆ: ಕೃಷಿ ಸಂಬಂಧಿ ಪರಿಕರಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆಯೂ ಈ ಕೃಷಿ ಉತ್ಸವದಲ್ಲಿದ್ದು ಈಗಾಗಲೇ 150ಕ್ಕೂ ಮಿಕ್ಕಿ ರಾಜ್ಯಮಟ್ಟದ ಕೃಷಿ ಮಳಿಗೆಗಳು ಹೆಸರು ನೋಂದಾಯಿಸಿಕೊಂಡಿವೆ. ತಂತ್ರಜ್ಞಾನಾಧಾರಿತ ಆಧುನಿಕ ಕೃಷಿ ಉಪಕರಣಗಳು ಈ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿದ್ದು ಗ್ರಾಮೀಣ ಭಾಗದ ಕೃಷಿಕರಿಗೆ ಆಧುನಿಕತೆಯ ಪರಿಚಯ ಮಾಡಿಕೊಡುವುದು ಮಾತ್ರವಲ್ಲ ಕೃಷಿಕರ ಅಗತ್ಯತೆಗಳನ್ನು ಪೂರೈಸುವಲ್ಲಿಯೂ ಈ ಕೃಷಿಸಿರಿ ಪ್ರಯತ್ನಿಸಲಿದೆ. ಕೃಷಿ ಸಂಸ್ಕೃತಿಯಿಂದ ದೂರವಿರುವ ಆಧುನಿಕ ಯುವ ಪೀಳಿಗೆಗೆ ಆಹಾರ ಸಂಸ್ಕೃತಿಯನ್ನು ಪರಿಚಯಿಸುವುದು ಮಾತ್ರವಲ್ಲ ಅವರ ಜ್ಞಾನದ ಪರಿಧಿಯನ್ನು ವಿಸ್ತರಿಸುವಲ್ಲಿಯೂ ಸಹಕಾರಿಯಾಗಲಿದೆ. ಕೃಷಿ ಉಪಕರಣ, ಕೃಷಿ ಪರಿಕರ ಹಾಗೂ ಆಹಾರೋತ್ಪನ್ನಗಳ ಪ್ರದರ್ಶನ, ಪ್ರಾತ್ಯಕ್ಷಿಕೆ ಮತ್ತು ಮಾರಾಟಗಳು ನಡೆಯಲಿದ್ದು ಮಳಿಗೆದಾರರಿಗೆ ಮಳಿಗೆಯು ಉಚಿತವಾಗಿದೆ ಹಾಗೂ ಮಳಿಗೆದಾರರ ತಂಡಕ್ಕೆ ಉಚಿತ…
ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಯಕ್ಷಗಾನ ತಿರುಗಾಟ ಆರಂಭಗೊಂಡು ದಿನಕಳೆಯುತ್ತಿದ್ದರೂ ಕುಂದಾಪುರದ ನೆಹರೂ ಮೈದಾನದಲ್ಲಿ ಯಕ್ಷಗಾನ ಪ್ರದರ್ಶನ ನೋಡುವ ಭಾಗ್ಯವಿಲ್ಲ. ಯಾರದ್ದೋ ಸ್ವಪ್ರತಿಷ್ಠೆಗೆ ವಿಶ್ವಮಾನ್ಯ ಕಲೆಯ ನೆಲೆಯಲ್ಲಿಯೇ ಕಂಟಕ ತಂದಿಟ್ಟಿರುವುದು ಯಕ್ಷಪ್ರಿಯರನ್ನು ನಿರಾಶೆಗೊಳಿಸಿದೆ. ವಾಸ್ತವವಾಗಿ ಯಕ್ಷಗಾನ ಪ್ರದರ್ಶನದಿಂದ ಯಾರಿಗೆ ತೊಂದರೆಯಾಗುವುದೆಂಬ ಕಾರಣ ನೀಡಿದ್ದರೋ ಅಲ್ಲಿನ ಪರಿಸ್ಥಿತಿ ಮಾತ್ರ ಚಿಂತಾಜನಕ. ಮೈದಾನದ ಅಕ್ಕಪಕ್ಕವಿರುವ ಹಾಸ್ಟೆಲ್‌ಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೇ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದ ಬಗ್ಗೆ ಕೆಲವು ಮಹನೀಯರಿಗೆ ಚಿಂತೆ ಹತ್ತಿಕೊಂಡಿದ್ದು ಒಟ್ಟಿನಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿಪಡಿಸುತ್ತಿರುವವರ ಹಿಂದೆ ಸ್ವಹಿತಾಸ್ತಿಯೂ ಅಡಗಿರಬಹುದೆಂಭ ಆರೋಪ ಕೇಳಿಬರುತ್ತಿದೆ. ಯಕ್ಷಗಾನಕ್ಕೆ ವಿರೋಧಿಸುವವರು ಹಾಸ್ಟೆಲ್ ಪರಿಸ್ಥಿತಿ ಅವಲೋಕಿಸಿದ್ದಾರೆ? ಶಾಲೆ, ಹಾಸ್ಟೆಲ್, ಸ್ವಚ್ಛತೆ, ಭದ್ರತೆಯನ್ನು ಮುಂದಿಟ್ಟುಕೊಂಡು ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ ಮಾಡುತ್ತಿರುವವರು ಒಮ್ಮೆ ಹಾಸ್ಟಲ್‌ಗೆ ಭೇಟಿ ನೀಡಿ ಪರೀಕ್ಷಿಸಲಿ. ಎಂತಾ ಪರಿಸರದಲ್ಲಿ ಮಕ್ಕಳು ದಿನಕಳೆಯುತ್ತಿದ್ದಾರೆ ಎನ್ನುವ ಕನಿಷ್ಟ ಅರಿವಾದರೂ ಮೂಡುತ್ತದೆ. ಹಾಸ್ಟೆಲ್ ಮೂಲಭೂತ ಸೌಲಭ್ಯ, ಸ್ವಚ್ಛತೆ ಬಗ್ಗೆ ಕಾಳಜಿಯಿದ್ದರೆ ಮೊದಲು ಹಾಸ್ಟೆಲ್ ವ್ಯವಸ್ಥೆ ಸರಿಪಡಿಸಲಿ. ಹಾಸ್ಟೆಲ್ ಮುಂದಿರುವ ಪಾಯಿಖಾನೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮೂಡಲಕಟ್ಟೆ ರೈಲ್ವೆ ನಿಲ್ದಾಣದಲ್ಲಿ ಎಕ್ಷ್‌ಪ್ರೆಸ್ ರೈಲು ನಿಲುಗಡೆಗೆ ಆಗ್ರಹಿಸಿ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಸಲ್ಲಿಸಿದರು. ಮೂಡಲಕಟ್ಟೆ ರೈಲ್ವೆ ನಿಲ್ದಾಣದ ಮೂಲಕ ಕೊಚ್ಚುವೇಲಿ, ಬಿಕಾನೇರ್ ಎಕ್ಷ್‌ಪ್ರೆಸ್ ಬೆಳಗ್ಗೆ ೬.೪೫ಕ್ಕೆ ತೆರಳುತ್ತಿದ್ದು ಬೈಂದೂರು, ಮುರುಡೇಶ್ವರ ಕುಮುಟಾ, ಗೋವಾ, ಮುಂಬೈ, ಗುಜರಾತ್, ರಾಜಸ್ತಾನ ಪ್ರವಾಸಿ ತಾಣಗಳಿಗೆ ಹೋಗಲು ಅನುಕೂಲವಾಗುವ ಜೊತೆ ಗೋವಾಕ್ಕೆ ತೆರಳೀ, ಅದೇ ದಿನ ಹಿಂದಕ್ಕೆ ಮರುಳಲು ಅವಕಾಶ ಇರುವುದರಿಂದೆ ಈ ರೈಲುಗಳು ನಿಲುಗಡೆಯಾದರೆ ಉತ್ತಮ ಎಂದು ಸಮಿತಿ ಮನವಿಯಲ್ಲಿ ತಿಳಿಸಿದೆ. ಸಂಸದೆ ಶೋಭಾ ಕರಂದ್ಲಾಜ್ ರೈಲು ನಿಲುಗಡೆ ಬಗ್ಗೆ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಕುಂದಾಪುರ ರಾಜಸ್ತಾನ ಸಮುದಾಯ ಮುಖಂಡ ಮಘುರಾಮ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಆಟ್ಕೆರೆ ಬಾಬು ಪೈ, ರೈಲು ಹೋರಾಟ ಸಮಿತಿ ಹಂಗಾಮಿ ಕಾರ‍್ಯದರ್ಶಿ ಜೋಯ್ ಜೆ.ಕಾರ‍್ವಾಲೋ, ಗಣೇಶ್ ಪುತ್ರನ್, ವಿವೇಕ್ ನಾಯಕ್, ಉದಯ ಭಂಡಾರ್‌ಕಾರ್, ಪದ್ಮನಾಭ ಶೆಣೈ, ವಿವೇಕ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾರ್ಟೂನು ಕಲೆಯ ಬಗೆಗೆ ಒಲವು ಬೆಳೆಸುತ್ತಾ, ಜನಸಾಮಾನ್ಯರು ಹಾಗೂ ಯುವ ಪೀಳಿಗೆಯಲ್ಲಿ ಕಾರ್ಟೂನು ಬಗೆಗೆ ಅಭಿರುಚಿಯನ್ನು ಬೆಳೆಸುವ ಉದ್ದೇಶದೊಂದಿಗೆ ಸತತ ಮೂರು ವರ್ಷಗಳಿಂದ ಕಾರ್ಟೂನು ಕುಂದಾಪ್ರದ ನೇತೃತ್ವದಲ್ಲಿ ಜರುಗುತ್ತಿರುವ ‘ಕಾರ್ಟೂನು ಹಬ್ಬ’ ಈ ಭಾರಿಯೂ ನ.26 ರಿಂದ ನ29ರ ವರೆಗೆ ನಾಲ್ಕು ದಿನಗಳ ಕಾಲ ಕುಂದಾಪುರದ ಕಲಾಮಂದಿರದಲ್ಲಿ (ಬೋರ್ಡ್ ಹೈಸ್ಕೂಲ್) ಜರುಗಲಿದೆ. ಕಾರ್ಟೂನು ಕುಂದಾಪ್ರ, ವಿಭಿನ್ನ ಐಡಿಯಾಸ್ ಅರ್ಪಿಸುವ ಟಿಎನ್‌ಎಸ್ ‘ಕಾರ್ಟೂನು ಹಬ್ಬ’ ನವೆಂಬರ್ 26ರಂದು ಚಾಲನೆಗೊಳ್ಳಲಿದೆ. ಕಾರ್ಟೂನು ಹಬ್ಬದಲ್ಲಿ ವಿದ್ಯಾರ್ಥಿನಿಯರಿಗಾಗಿ ಮಾಯಾ ಕಾಮತ್ ಕಾರ್ಟೂನು ಸ್ವರ್ಧೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಕಾರ್ಟೂನು ಮೊಗ್ಗು ಸ್ವರ್ಧೆ, ವಿದ್ಯಾರ್ಥಿ ಹಾಗೂ ಸಾರ್ವಜನಿಕರಿಗಾಗಿ ಸೈಬರ್ ಕಾರ್ಟೂನು ಸ್ವರ್ಧೆ, ಕ್ಯಾರಿಕೇಚರ್, ಡೈಲಾಗ್ ರೈಟಿಂಗ್ ಹಾಗೂ ಸೆಲ್ಫಿ ಕಾರ್ನ್‌ರ್ ಸ್ವರ್ಧೆಗಳು ಜರುಗಲಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಖ್ಯಾತ ವ್ಯಂಗ್ಯಚಿತ್ರಕಾರರೊಂದಿಗಿನ ಮಾತುಕತೆ ‘ಮಾಸ್ಟರ್ ಸ್ಟ್ರೋಕ್’, ಲೈವ್ ಕ್ಯಾರಿಕೇಚರ್ ಮೂಲಕ ಶಾಲೆಗೆ ದೇಣಿಗೆ ನೀಡುವ ‘ಚಿತ್ರನಿಧಿ’, ಭವಿಷ್ಯದ ಪತ್ರಕರ್ತರೊಂದಿಗೆ ಎಡಿಟೋರಿಯಲ್ ಕಾರ್ಟೂನ್ ಒಳಪದರವನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇತರೆ ವಿಷಯಗಳಿಗೆ ನೀಡುವ ಪ್ರೋತ್ಸಾಹ ಕ್ರೀಡೆಗೆ ದೊರೆಯುತ್ತಿಲ್ಲ. ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ಹೊಸ ಕ್ರೀಡಾ ನೀತಿ ಜಾರಿಗೆ ತರುವ ಚಿಂತನೆಯಿದ್ದು, ಮುಂದಿನ ವಿಧಾನ ಸಭಾ ಅಧಿವೇಶನದಲ್ಲಿ ಹೊಸ ಕ್ರೀಡೆ ನೀತಿ ರೂಪಿಸುವ ಬಗ್ಗೆ ಗಮನ ಸೆಳೆಯಲಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದರು. ಉಡುಪಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಕುಂದಾಪುರ ಸೈಂಟ್ ಮೇರಿಸ್ ಸಂಯುಕ್ತ ಪದವಿಪೂರ್ವ ಕಾಲೇಜ್ ಆಶ್ರಯದಲ್ಲಿ ಕುಂದಾಪುರ ಗಾಂಧಿ ಮೈದಾನದಲ್ಲಿ ನಡೆದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ’ಶೈನ್-೨೦೧೬’ ಕ್ರೀಡಾಕೂಟ ದ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಮಾತನಾಡುತ್ತಿದ್ದರು. ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪಾಲ್ಗೊಳ್ಳುವ ಕ್ರೀಡಾ ಪಟುಗಳಿಗೆ ಅನುಕೂಲ ದೃಷ್ಟಿಯಲ್ಲಿ ಹೊಸ ಕ್ರೀಡಾ ನೀತಿ ರೂಪಿಸಿ ಪ್ರೋತ್ಸಾಹ ನೀಡುವ ಉದ್ದೇಶ ಸರಕಾರಕ್ಕಿದ್ದು, ಕ್ರೀಡಾ ಕೂಟದಲ್ಲಿ ಭಾಗವಹಿಸಿದ ಕ್ರೀಡಾಳುಗಳಿಗೆ ಪ್ರೋತ್ಸಾಹ ಧನ ನೀಡುವ ಪ್ರಯತ್ನ ಸಾಗಿದೆ. ಅನುದಾನ ಕೂಡಾ ಹೆಚ್ಚಿಸುವ ಪ್ರಯತ್ನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಶಂಕರನಾರಾಯಣದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜರಗಿದ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ೯ನೇ ತರಗತಿ ವಿದ್ಯಾರ್ಥಿ ಸುಕೇಶ್ ಆರ್.ಜಿ. ಅವರು ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
