ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ನೆಮ್ಮದಿ ಚಾರಿಟೇಬಲ್ ಟ್ರಸ್ಟ್ ಹುಟ್ಟಿ ಎರಡುವರೆ ತಿಂಗಳಿನಲ್ಲಿ ಈ ಭಾಗದಲ್ಲಿ ಒಂದು ಉತ್ತಮ ಜನಪರ ಸೇವೆಯನ್ನು ಮಾಡುವುದರ ಮೂಲಕ ಈ ಭಾಗದ ಬಡಜನರ ಅನುಕೂಲಕ್ಕಾಗಿ ಹುಟ್ಟಿಕೊಂಡ ಯುವಪಡೆಯ ಒಂದು ಶಕ್ತಿಯಾಗಿದೆ, ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವವರ ಸಹಾಯಕ್ಕಾಗಿ ನಿಂತಿದೆ ಅಲ್ಲದೆ ರಕ್ತದಾನದಂತಹ ಉತ್ತಮ ಕೆಲಸವನ್ನು ಈ ಭಾಗದಲ್ಲಿ ಮಾಡುವೂದರ ಮೂಲಕ ಯುವಪೀಳಿಗೆಯವರಲ್ಲಿ ಜನಸೇವೆಯ ಕಿಚ್ಚನ್ನು ಮೂಡಿಸುವ ಕೆಲಸ ಮಾಡಿದೆ ಎಂದು ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಕರ್ಕುಂಜೆಯಲ್ಲಿ ನಡೆದ ಉಚಿತ ಕಣ್ಣಿನ ತಪಾಸಣಾ ಶೀಬಿರ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೆಮ್ಮದಿ ಚಾರಿಟೇಬಲ್ ಟ್ರಸ್ಟ್(ರಿ.)ಕೌಂಜೂರು ಇವರ ನೇತೃತ್ವದಲ್ಲಿ ರೆಡ್‌ಕ್ರಾಸ್ ರಕ್ತನಿಧಿ ಕುಂದಾಪುರ ಘಟಕ ಮತ್ತು ಪಾರ್ವತಿ ಮಹಾಬಲ ಶೆಟ್ಟಿ ಸ್ಮಾರಕ ಕಣ್ಣಿನ ಆಸ್ಪತ್ರೆ, ಶಿರೂರು ಮುದ್ಧುಮನೆ ಇವರ ಸಹಯೋಗದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ಉಚಿತ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ರಂದು ಸರಕಾರಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಶ್ರೀ ಕೃಷ್ಣ ಪರಮಾತ್ಮನು ಮನುಕುಲಕ್ಕಾಗಿ ನೀಡಿದ ಭಗವದ್ಗೀತೆಯನ್ನು ಪಠಿಸಿ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಮಾತ್ರ ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ ಮತ್ತು ಯಶಸ್ವಿ ಜೀವನವನ್ನು ನಡೆಸಲು ಸಾಧ್ಯ ಗಂಗೊಳ್ಳಿಯ ಉದ್ಯಮಿ ಜಿ.ವಿಠಲ ಭಾಸ್ಕರ ಶೆಣೈ ಹೇಳಿದರು. ಗಂಗೊಳ್ಳಿಯ ಸಂಪಿಗೆ ಜಟ್ಟಿಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಭಗತ್ ಸಿಂಗ್ ಅಭಿಮಾನಿ ಬಳಗ ಮತ್ತು ಸಂಪಿಗೆ ಜಟ್ಟಿಗೇಶ್ವರ ದೇವಸ್ಥಾನದ ಸಮಿತಿಯ ಜಂಟಿ ಆಶ್ರಯದಲ್ಲಿ ಜರಗಿದ ಭಗವದ್ಗೀತೆ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಧಾರ್ಮಿಕ ಚಿಂತಕ ಮಂಗೇಶ ಶೆಣೈ ಅವರು ಭಗವದ್ಗೀತೆಯ ಮಹಿಮೆ ಮತ್ತು ಅದನ್ನು ಪಠಿಸುವ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು. ಸಂಪಿಗೆ ಜಟ್ಟಿಗೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಮತ್ತು ಭಗತ್ ಸಿಂಗ್ ಅಭಿಮಾನಿ ಬಳಗದ ಸದಸ್ಯರು ಉಪಸ್ಥಿತರಿದ್ದರು.ಸಂಪಿಗೆ ಜಟ್ಟಿಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಮೊಕ್ತೇಸರ ಕುಷ್ಟ ದೇವಾಡಿಗ ಸ್ವಾಗತಿಸಿದರು. ಉಮಾನಾಥ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ಸವಿತಾ ಯು.ದೇವಾಡಿಗ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶ್ರೀಮದ್ಭಗವದ್ಗೀತೆಯು ವ್ಯಕ್ತಿತ್ವ ವಿಕಸನದಲ್ಲಿ ಔಚಿತ್ಯ ಪ್ರಜ್ಞೆಯನ್ನು ಬೋಧಿಸುತ್ತಾ ಸಂತುಲಿನ ಜೀವನ ಪದ್ಧತಿಯನ್ನು ಆಪೇಕ್ಷಿಸುತ್ತದೆ. ಅತಿಯಾದಲ್ಲಿ ಎಲ್ಲವೂ ನ್ಯೂನತೆಯಾಗುವುದರಿಂದ ಸಮಚಿತ್ತ, ಶುದ್ಧಚಾರಿತ್ಯ ಪ್ರತಿ ವ್ಯಕ್ತಿಯ ಆಂತರಿಕ ಮತ್ತು ಸಾಮಾಜಿಕ ಕರ್ತವ್ಯಗಳನ್ನು ನಿರ್ವಹಿಸುವಲ್ಲಿನ ಪ್ರಾಮುಖ್ಯತೆಯನ್ನು ಸಾರುತ್ತದೆ. ಕಾಲಾಬಾಧಿತವಾಗದೇ ಇಂದಿಗೂ ಸೂತ್ರಪ್ರಾಯವಾಗಿರುವ ಈ ಕಿರು ಗ್ರಂಥ ವಿಶ್ವ ಮಾನ್ಯವಾಗಿದೆ ಎಂದು ಯಳಜೀತ್ ಶ್ರೀ ಸಿದ್ಧಿವಿನಾಯಕ ಸಾಂಸ್ಕೃತಿಕ ಕೇಂದ್ರದ ಸಂಚಾಲಕ ಮಂಗೇಶ್ ಶೆಣೈ ಹೇಳಿದರು. ಹೇರಂಜಾಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜ್ಯ ಶಿರಸಿ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಶ್ರೀಗಳ ಮಾರ್ಗದರ್ಶನ ಹಾಗೂ ಆಶೀರ್ವಾದದೊಂದಿಗೆ ನಡೆಯುವ ಭಗವದ್ಗೀತಾ ಸಪ್ತಾಹದ ಪ್ರಯುಕ್ತ ನಡೆದ ಪೂರ್ವಭಾವಿ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಖಂಬದಕೋಣೆ ಗ್ರಾಪಂ ಸದಸ್ಯ ಹೇರಂಜಾಲು ಪರಂಜ್ಯೋತಿ ಐತಾಳ್ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭ ಸಂತ ವೈ. ಮಂಗೇಶ್ ಶೆಣೈ ಹಾಗೂ ಅವರ ಶಿಷ್ಯವೃಂದದವರು ಸುಮಾರು ಎರಡು ತಾಸು ಭಗವದ್ಗೀತಾ ಪಠನ ಮಾಡಿದರು. ಸಂಚಾಲಕ ಸುಬ್ರಹ್ಮಣ್ಯ ಉಡುಪ, ನಿವೃತ್ತ ಶಿಕ್ಷಕ ಮೆಟ್ಟಿನಹೊಳೆ ಬಡಿಯಾ ಹಾಂಡ, ಕಾಲ್ತೋಡು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಾವಯವ ಮತ್ತು ರಸಗೊಬ್ಬರ ನಡುವೆ ಸಮತೋಲನ ಕಾಪಾಡುವ ಅಗತ್ಯವಿದೆ. ಅದರ ಕುರಿತು ತರಬೇತಿ ಪಡೆದುಕೊಳ್ಳಬೇಕು. ಅದರೊಂದಿಗೆ ಹೈನುಗಾರಿಕೆ, ಕೋಳಿಸಾಕಣೆ ನಡೆಸುವುದಲ್ಲದೆ ಸುಲಭದಲ್ಲಿ ಆರೋಗ್ಯ ನೀಡುವ ವಿವಿಧ ತರಕಾರಿ, ಹಣ್ಣುಗಳನ್ನು ಬೆಳೆಸಿ ಮನೆಯ ಖರ್ಚಿಗೆ ಬಳಸಿಕೊಂಡು ಸ್ವಾವಲಂಬನೆ ಸಾಧಿಸಬೇಕು ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಕರೆ ನೀಡಿದರು. ಶಿರೂರು ಶ್ರೀವೆಂಕಟರಮಣ ಸಭಾಭವನದಲ್ಲಿ, ಸಂಸದರ ಆದರ್ಶಗ್ರಾಮ ಯೋಜನೆ, ಪ್ರಾದೇಶಿಕ ಸಾವಯವ ಕೃಷಿ ಕೇಂದ್ರ ಬೆಂಗಳೂರು, ಗ್ರಾಮ ಪಂಚಾಯತ್ ಶಿರೂರು, ಕೃಷಿ ಇಲಾಖೆ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸಾವಯವ ಕೃಷಿಯ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಾಲ್ಕು ದಶಕಗಳ ಹಿಂದೆ ದೇಶದಲ್ಲಿ ಅನ್ನದ ಕೊರತೆ ಇದ್ದಾಗ ರಾಸಾಯನಿಕ ಗೊಬ್ಬರ ಬಳಸಿ ಹಸಿರು ಕ್ರಾಂತಿ ಸಾಧಿಸಲಾಯಿತು. ಆದರೆ ಅತಿಯಾದ ರಸಗೊಬ್ಬರ ಬಳಕೆಯಿಂದ ಭೂಮಿ ಸತ್ವ ಕಳೆದುಕೊಳ್ಳುತ್ತಿರುವುದರಿಂದ ಸಾವಯವ ಕೃಷಿಗೆ ಮರಳುವುದು ಈಗ ಅನಿವಾರ್ಯವೆನಿಸಿದೆ. ಬೇಸಾಯವೆಂದರೆ ಹೆಚ್ಚು ರಾಸಾಯನಿಕ ಗೊಬ್ಬರ ಬಳಸಿ ಬೆಳೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಬೆಳಗಾವಿಯಲ್ಲಿ ನಡೆದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ಪ್ರಥ್ವೀನ್ ಆರ್. ಗಾಣಿಗ ಇವರು ಬೆಳ್ಳಿ ಪದಕ ಪಡೆದಿರುತ್ತಾರೆ. ಇವರು ಕೊಲ್ಲೂರಿನ ರಮೇಶ್ ಗಾಣಿಗ ಮತ್ತು ನಯನ ಆರ್. ಗಾಣಿಗರವರ ಪುತ್ರನಾಗಿದ್ದು, ಇವರಿಗೆ ದೈಹಿಕ ಶಿಕ್ಷಣ ಉಪನ್ಯಾಸಕ ಸುಕೇಶ್ ಶೆಟ್ಟಿ ಹೊಸಮಠ ತರಬೇತಿ ನೀಡಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೀರ್ತಿಶೇಷ ಶ್ರೀ ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಟ್ರಸ್ಟ್ ಆಶ್ರಯದಲ್ಲಿ ಕುಂದಾಪುರ ಆರ್.ಎನ್.ಶೆಟ್ಟಿ ಕಲ್ಯಾಣ ಭವನದಲ್ಲಿ ಜರುಗಿದ ಯಡ್ತರೆ ಮಂಜಯ್ಯ ಶೆಟ್ಟಿ 103ನೇ ಜನ್ಮ ಜಯಂತಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಹೆ ವಿಶ್ರಾಂತ ಕುಲಪತಿ ಪದ್ಮಭೂಷಣ ಡಾ. ಬಿ. ಎಂ. ಹೆಗ್ಡೆ ಹಾಗೂ ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಪಿ. ಜಯರಾಮ ಭಟ್ ಅವರಿಗೆ ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಾಜಿ ಮುಖ್ಯಮಂತ್ರಿ ಹಾಲಿ ಸಂಸದ ಡಾ.ವೀರಪ್ಪ ಮೋಯ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಬಿ.ಜಗನ್ನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಎ.ಜಿ.ಕೊಡ್ಗಿ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪಚಂದ್ರ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಪುರಸಭೆ ಅಧ್ಯಕ್ಷೆ ವಸಂತಿ ಮೋಹನ್ ಸಾರಂಗ, ಪ್ರೊ. ಎಂ. ಸುಬ್ಬಣ್ಣ ಶೆಟ್ಟಿ ಕೋಟೇಶ್ವರ, ನೇತ್ರ ತಜ್ಞ ಡಾ. ವೈ. ಎಸ್. ಹೆಗ್ಡೆ, ಮಂಗಳೂರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ,ಅ.27: ಇಂದು ಮುಂಜಾನೆಯ ಹೊತ್ತಿನಲ್ಲಿ ಅಪರೂಪವೆಂಬಂತೆ ತಾಲೂಕಿನಾದ್ಯಂತ ಮಂಜು ಮುಸುಕಿದ ವಾತಾವರಣ ಕಂಡುಬಂತು. ಮಲೆನಾಡು ಹಾಗೂ ಘಟ್ಟ ಪ್ರದೇಶಗಳಲ್ಲಷ್ಟೇ ಕಾಣಸಿಗುವ ಮಂಜಿನ ಮುಂಜಾವು ಕಂಡು ಕರಾವಳಿಗರು ಉಲ್ಲಾಸಿತರಾಗಿದ್ದರು. ಕುಂದಾಪುರ ತಾಲೂಕಿನ ಬಹುಭಾಗಗಳಲ್ಲಿ ಮಂಜಿನ ವಾತಾವರಣವಿತ್ತು. ಕೊಲ್ಲೂರು ಘಾಟಿ, ಬಾಳೆಬರೆ ಘಾಟಿಯ ತನಕ ಸಹಜವಾಗಿ ನಿತ್ಯವೂ ಮಂಜಿನ ವಾತಾವರಣವಿದ್ದರೂ ಸಮುದ್ರ ತೀರಕ್ಕೆ ಹತ್ತಿರವಿರುವ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವುದು ತೀರಾ ಕಡಿಮೆ. ಚಳಿಗಾಲ ಆರಂಭಗೊಳ್ಳುತ್ತಿದ್ದಂತೆ ಮುಂಜಾನೆಯಲ್ಲಿ ಕರಾವಳಿಯ ಭಾಗಗಳಲ್ಲಿ ಕಂಡುಬಂದ ಮಂಜು ಮುಸುಕಿದ ವಾತಾವರಣ ಮಲೆನಾಡು ಸೊಬಗನ್ನು ನೆನಪಿಸುವಂತಿತ್ತು. ತಾಲೂಕಿನ ಬೈಂದೂರು, ಗಂಗೊಳ್ಳಿ, ತಲ್ಲೂರು, ಕುಂದಾಪುರ ಭಾಗಗಳಲ್ಲಿ ಕಂಡುಬಂದ ಮಂಜು ಮುಸುಕಿದ ವಾತಾವರಣದ ಚಿತ್ರಗಳು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ ಅವರ ೮೯ನೇ ಜನ್ಮದಿನಾಚರಣೆಯನ್ನು ಜಾತ್ಯತೀತ ಜನತಾ ದಳ ಬೈಂದೂರು ಘಟಕದ ವತಿಯಿಂದ ಆಚರಿಸಲಾಯಿತು ಈ ಸಂದರ್ಭ ಬೈಂದೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು. ಬೈಂದೂರು ಜಾತ್ಯತೀತ ಜನತಾ ದಳದ ಬ್ಲಾಕ್ ಅಧ್ಯಕ್ಷ ಬಿ. ಟಿ ಮಂಜುನಾಥ, ಮನ್ಸೂರ್ ಮರವಂತೆ, ಸದಾನಂದ ಕಾಂಚನ್, ರಮ್ಯ ಮೇಸ್ತ್, ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಮಹೇಂದ್ರ ಶೆಟ್ಟಿ, ಹಾಗೂ ಡಾ. ರುದ್ರ ಗೌಡ ಪಾಟೀಲ್ ಮತ್ತಿತ್ತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಲೇಷ್ಯಾದಲ್ಲಿ ನಡೆದ ಜೇನ್-ಅಓ ಸಿನಿಯರ್ ಕಾಮನ್‌ವೆಲ್ತ್ ವೇಯ್ಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ತಾಲೂಕಿನ ವಂಡ್ಸೆ ಸಮೀಪದ ಜಡ್ಡುವಿನ ಗುರುರಾಜ್ ಪೂಜಾರಿ ಪ್ರಥಮ ಸ್ಥಾನ ಗಳಿಸುವ ಮೂಲಕ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ಕಾಮನ್‌ವೆಲ್ತ್ ವೇಯ್ಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಗುರುರಾಜ್ 108ಕೆ.ಜಿ ಸ್ನಾಚ್ ಹಾಗೂ 141ಕೆ.ಜಿ ಜರ್ಕ್ ಸೇರಿ ಒಟ್ಟು 249ಕೆ.ಜಿ ಭಾರವನ್ನು ಎತ್ತುವ ಮೂಲಕ ಪದಕದ ಗುರಿ ತಲುಪಿದ್ದಾರೆ. ಗುರುರಾಜ್ ಪೂಜಾರಿ ಅವರಿಗೆ ‘ಕುಂದಾಪ್ರ ಡಾಟ್ ಕಾಂ’ನ ಅಭಿನಂದನೆಗಳು ಇದನ್ನೂ ಓದಿ ► ಕ್ರೀಡಾಕ್ಷೇತ್ರದ ಹೊಸ ಭರವಸೆ ಗುರುರಾಜ್ ಪೂಜಾರಿ – http://kundapraa.com/?p=18402
ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಸಾಕಷ್ಟು ಅಭಿವೃದ್ಧಿ ಹೊಂದಿದ ಕುಂದಾಪುರ ತಾಲೂಕಿನ ಗ್ರಾಮೀಣ ಪ್ರದೇಶಗಳು ಅದೆಷ್ಟೋ ಕಡೆ ಇನ್ನೂ ಮೂಲಭೂತ ಸೌಕರ್ಯಗಳು ವಂಚಿತವಾಗಿವೆ. ದಬ್ಬಾಳಿಕೆ, ಪಾಳಗಾರಿಕೆಗಳ ನಡುವೆಯೂ ಭೂ ಮಾಲಕರು ಮೂಲಭೂತ ಸೌಕರ್ಯಗಳ ವಂಚನೆಗೆ ಇನ್ನೂ ಕಡಿವಾಣ ಹಾಕುತ್ತಲೇ ಇದ್ದಾರೆ ಎಂಬುದಕ್ಕೆ ತಾಲೂಕಿನ ಹೆಂಗವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಂಬತ್ತು ಸಮೀಪದ ನಕ್ಸಲ್ ಪೀಡಿತ ಕೊಡಾಬೈಲ್ ಎನ್ನುವ ಪ್ರದೇಶದ ಸ್ಪಷ್ಟ ಉದಾಹರಣೆ. ಕೊಡಾಬೈಲಿನಲ್ಲಿ ಸುಮಾರು 25 ಮನೆಗಳಿವೆ. ಒಟ್ಟು ಮುನ್ನೂರಾ ಐವತ್ತೆರಡು ಜನ ವಾಸವಿದ್ದಾರೆ. ಆದರೆ ಇವರು ಸಂಪೂರ್ಣವಾಗಿ ಮೂಲಭೂತ ಸೌಕರ್ಯ ವಂಚಿತರಾಗಿದ್ದಾರೆ. ಈ ಪ್ರದೇಶಕ್ಕೆ ಬರಬೇಕಾದರೆ ಒಂದು ರಸ್ತೆ ನಿರ್ಮಾಣ ಇದುವರೆಗೂ ಸಾಧ್ಯವಾಗಿಲ್ಲ. ವಿಶೇಷವೆಂದರೆ ಈ ಪ್ರದೇಶದಲ್ಲಿ ರಸ್ತೆ ಇದೆ. ಆದರೆ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೆ ಸ್ಥಳೀಯರೊಬ್ಬರು ಆಕ್ಷೇಪ ಸಲ್ಲಿಸಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿರುವುದೇ ಈ ಎಲ್ಲಾ ಸಮಸ್ಯೆಗೆ ಮೂಲ ಕಾರಣ. ಕೊಡಾಬೈಲಿನಲ್ಲಿ ಸುಮಾರು ಹತ್ತು ವಿದ್ಯಾರ್ಥಿಗಳು ಕಿರಿಯ ಪ್ರಾಥಮಿಕ ಶಾಲೆಗೆ, ೧೫ ಮಕ್ಕಳು ಹಿರಿಯ…
