ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆಯ ಸಬ್ಸಿಡಿಯನ್ನು ಬಿಡುಗಡೆಗೊಳಿಸಿದ ರಾಜ್ಯ ಸರಕಾರಕ್ಕೆ ಕುಂದಾಪುರ ತಾಲೂಕು ಸಾಂಪ್ರದಾಯಿಕ ನಾಡದೋಣಿ ಮೀನುಗಾರ ಒಕ್ಕೂಟ ಅಭಿನಂದನೆ ಸಲ್ಲಿಸಿದ್ದಾರೆ. ಮೀನುಗಾರರಿಗೆ ಸೀಮೆಎಣ್ಣೆ ಸಬ್ಸಿಡಿ ಬಿಡುಗಡೆಗೊಳಿಸಲು ಸಹಕರಿಸಿದ ರಾಜ್ಯದ ಮೀನುಗಾರಿಕಾ ಸಚಿವ ಪ್ರಮೋದ ಮಧ್ವರಾಜ್, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಯು.ಟಿ.ಖಾದರ್, ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಅವರನ್ನು ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಎಚ್.ಮಂಜು ಬಿಲ್ಲವ, ಉಪ್ಪುಂದ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಕೆ.ಸೋಮಶೇಖರ ಖಾರ್ವಿ, ಶಿರೂರು ವಲಯ ಅಲ್ಪಸಂಖ್ಯಾತ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಕಬ್ಸಿ ಮಹಮ್ಮದ್, ಶಿರೂರು ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ನಾಗಪ್ಪ ಮೊಗವೀರ ಹಾಗೂ ನಾಡದೋಣಿ ಮೀನುಗಾರರು ಅಭಿನಂದನೆ ಸಲ್ಲಿಸಿದ್ದಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮನಃಶಾಸ್ತ್ರ ವಿಭಾಗದ ವತಿಯಿಂದ ಅಂತರಾಷ್ಟ್ರೀಯ ಮಾನಸಿಕ ಆರೋಗ್ಯ ದಿನಾಚರಣೆ ನಡೆಯಿತು. ಭಂಡಾರ್ಕಾರ್ಸ್ ಪದವಿ ಕಾಲೇಜು ಪ್ರಾಂಶುಪಾಲ ಡಾ. ಎನ್. ಪಿ.ನಾರಾಯಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಎ.ವಿ.ಬಾಳಿಗಾ ಆಸ್ಪತ್ರೆಯ ಆಪ್ತಸಮಾಲೋಚಕ ಬಿ.ಎಸ್.ಮಹೇಶ್, ಮನಃಶಾಸ್ತ್ರ ವಿಭಾಗದ ಮುಖ್ಯಸ್ಥೆ ಸವಿತಾ ಕೆ. ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗ ಆಶ್ರಯದಲ್ಲಿ ರಾಷ್ಟ್ರಮಟ್ಟದ ಕಂಪ್ಯೂಟರ್ ನೆಟ್‌ವರ್ಕಿಂಗ್ ಕಾರ್ಯಗಾರ ನಡೆಯಿತು. ಹೈದ್ರಾಬಾದ್ ಐಐಟಿ ಪ್ರತಿನಿಧಿ ಸೀನಿಯರ್ ನೆಟ್‌ವರ್ಕ ಇಂಜಿನಿಯರ್ ನೀರಜ್ ಕುಮಾರ್ ಉದ್ಘಾಟಿಸಿ, ಇಂದಿನ ತಾಂತ್ರಿಕ ಯುಗದಲ್ಲಿ ವಿದ್ಯಾರ್ಥಿಗಳು ಪ್ರಾಯೋಗಿಕ ಜ್ಞಾನದಿಂದ ತಂತ್ರಜ್ಞಾನದ ವಿಷಯ ಅರ್ಥಮಾಡಿಕೊಳ್ಳುವ ಅವಶ್ಯಕತೆ ಇದ್ದು, ಇಂಜಿನಿಯರಿಂಗ್ ಶಿಕ್ಷಣದಿಂದ ಕಷ್ಟಕರ ಎನ್ನುವ ಎಲ್ಲಾ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಕಂಡು ಹಿಡಿಯಲು ಸಾದ್ಯ ಎಂದು ಹೇಳಿದರು. ಕಾಲೇಜು ಪ್ರಾಂಶುಪಾಲ ಡಾ. ಮೋಹನ್ ದಾಸ್ ಭಟ್ ಅಧ್ಯಕ್ಷತೆ ವಹಸಿ, ಯಾವುದೇ ಕಾಲೇಜು ಪ್ರಗತಿ ಹೊಂದಬೇಕಾದರೆ ಚಟುವಟಿಕೆಗಳು ಪ್ರಧಾನ ಪಾತ್ರವಹಿಸುತ್ತದೆ. ವಿದ್ಯಾರ್ಥಿಗಳು ಪುಸ್ತಕದಲ್ಲಿನ ವಿಷಯಗಳಿಗೆ ಮಾತ್ರ ಸೀಮಿತವಾಗಿರದೆ, ತಾಂತ್ರಿಕ ಕೇತ್ರದಲ್ಲಿನ ಎಲ್ಲಾ ವಿಷಯಗಳ ಜ್ಞಾನವನ್ನು ಪಡೆದು ಕೊಳ್ಳಬೇಕಾಗಿ ಸಲಹೆ ನೀಡಿದರು ಮೂಡ್ಲಕಟ್ಟೆ ವಿದ್ಯಾಲಯವು ಐ.ಐ.ಟಿ ಹೈದಾಬಾದ್ ಮತ್ತು ಐ.ಐ.ಟಿ ಭುವನೇಶ್ವರ್ ನಡೆಸುವ ಕಾರ‍್ಯಗಾರದ ವಲಯ ಕೇಂದ್ರವಾಗಿ ಆಯ್ಕೆಗಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ‍್ಯಾಗಾರಗಳನ್ನು ನಡೆಸಿ ವಿದ್ಯಾರ್ಥಿಗಳ ಪ್ರಾಯೋಗಿಕ ಜ್ಞಾನವನ್ನು ವೃದ್ಧಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಕೊಲ್ಲೂರು ಗ್ರಾಪಂ ಮಾಜಿ ಉಪಾಧ್ಯಕ್ಷ ಉದಯ್ ಶೇರುಗಾರ್ ಅವರ ಮೇಲೆ ಕೊಲ್ಲೂರಿನ ದಳಿ ಎಂಬಲ್ಲಿ ಮಾರಣಾಂತಿಕ ಹಲ್ಲೆ ನಡೆಸಿ, ನಗದು ದೋಚಿ ಪರಾರಿಯಾಗಿದ್ದ ದುಷ್ಕರ್ಮಿಗಳ ಪೈಕಿ ಈರ್ವರನ್ನು ಅದೇ ದಿನ ರಾತ್ರಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆಯ ವಿವರ: ಬೈಕಿನಲ್ಲಿ ಕೊಲ್ಲೂರಿನಿಂದ ಸುಬ್ಬರಸನ ತೊಪ್ಲುವಿನ ಮನೆಗೆ ತೆರಳುತ್ತಿದ್ದ ಉದಯ ಶೇರುಗಾರ್ ಅವರನ್ನು ಕೊಲ್ಲೂರು-ಶಿವಮೊಗ್ಗ ರಾಜ್ಯ ಹೆದ್ದಾರಿಯ ದಳಿಯ ಎಂಬಲ್ಲಿ ಇನ್ನೋವಾ ಕಾರಿನಲ್ಲಿ ಬಂದ ದರೋಡೆಕೋರರ ತಂಡವೊಂದು ಅಡ್ಡಗಟ್ಟಿ ಕಣ್ಣಿಗೆ ಮೆಣಸಿನ ಪುಡಿ ಎರಚಿ ರಾಡ್‌ನಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿತ್ತು. ಬಳಿಕ ಉದಯ್ ಅವರ ಬೈಕ್ ಕೀ, ಸುಮಾರು ರೂ.8 ಸಾವಿರ ಬೆಲೆಯ ಮೊಬೈಲ್ ಮತ್ತು ನಗದು ಒಂದು ಸಾವಿರ ಕಸಿದುಕೊಂಡಿದ್ದ ದಷ್ಕರ್ಮಿಗಳು ಅದೇ ಮಾರ್ಗದಲ್ಲಿ ಬಂದ ಜೀಪನ್ನು ನೋಡಿ ಅಲ್ಲಿಂದ ಪರಾರಿಯಾಗಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಘಟನೆಯ ಬಗ್ಗೆ ದೂರು ದಾಖಲಿಸಿಕೊಂಡ ಕೊಲ್ಲೂರು ಪೊಲೀಸರು ವೃತ್ತ ನಿರೀಕ್ಷಕ ರಾಘವ ಪಡೀಲ್ ಮಾರ್ಗದರ್ಶನಲ್ಲಿ ಕೊಲ್ಲೂರು ಠಾಣಾಧಿಕಾರಿ ಶೇಖರ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ನಮ್ಮ ನಮ್ಮಲ್ಲಿನ ಜಾತಿ ತಾರತಮ್ಯವನ್ನು ಹೋಗಲಾಡಿಸಿ ಭಗವದ್ಗೀತೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಏಕತೆಯಿಂದ ನೆಮ್ಮದಿಯ ಜೀವನ ನಡೆಸಲು ಪ್ರಯತ್ನಿಸಬೇಕು. ನಮ್ಮ ಸಮೃದ್ಧ ಜೀವನಕ್ಕೆ ಬೇಕಾಗುವ ಎಲ್ಲಾ ವಿಷಯಗಳನ್ನು ಹಾಗೂ ಸದ್ವಿಚಾರಗಳನ್ನು ಹೊಂದಿರುವ ಹಿಂದುಗಳ ಪರಮ ಪವಿತ್ರವಾದ ಭಗವದ್ಗೀತೆ ಎಲ್ಲರ ಮನೆ ಮನಗಳಲ್ಲಿ ನೆಲೆಸುವಂತಾಗಬೇಕು ಎಂದು ಗಂಗೊಳ್ಳಿಯ ಉದ್ಯಮಿ ಜಿ.ವಿಠಲ ಭಾಸ್ಕರ ಶೆಣೈ ಹೇಳಿದರು. ಅವರು ಗಂಗೊಳ್ಳಿಯ ಮಲ್ಯರಬೆಟ್ಟು ಶ್ರೀ ಜಟ್ಟಿಗೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ವೃತಾಚರಣೆ ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ಭಗವದ್ಗೀತಾ ಅಭಿಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಧಾರ್ಮಿಕ ಚಿಂತಕ ಮಂಗೇಶ ಶೆಣೈ ಅವರು ಭಗವದ್ಗೀತೆಯ ಮಹಿಮೆ ಮತ್ತು ಅದನ್ನು ಪಠಿಸುವ ಬಗ್ಗೆ ಪ್ರವಚನ ನೀಡಿದರು. ವರಮಹಾಲಕ್ಷ್ಮೀ ವೃತಾಚರಣೆ ಸಮಿತಿ ಅಧ್ಯಕ್ಷೆ ಅನಿತಾ ಪುಂಡಲೀಕ ಖಾರ್ವಿ, ಕಾರ್ಯದರ್ಶಿ ಜಯಂತಿ ಹರೀಶ ಖಾರ್ವಿ, ಜತೆ ಕಾರ್ಯದರ್ಶಿ ಸಾವಿತ್ರಿ ಖಾರ್ವಿ ಹಾಗೂ ವರಮಹಾಲಕ್ಷ್ಮೀ ವೃತಾಚರಣೆ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಜಿ.ವಿಠಲ ಶೆಣೈ ಕಾರ್ಯಕ್ರಮ ಆಯೋಜಿಸಿದ್ದರು. ದೇವಳದ ಆಡಳಿತ ಮಂಡಳಿಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶಾಂತಿ ಸೌಹಾರ್ದತೆಗೆ ಹೆಸರಾಗಿರುವ ಆನಗಳ್ಳಿ ಗ್ರಾಮದ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಉಂಟಾಗುವಂತ ಹೇಳಿಕೆ ನೀಡಿರುವ ರಂಗಕರ್ಮಿ ಸುರೇಶ ಆನಗಳ್ಳಿ ಅವರು ಸಾರ್ವಜನಿಕ ಕ್ಷಮೆ ಕೇಳಬೇಕು ಎಂದು ಆನಗಳ್ಳಿ ಗ್ರಾಮಸ್ಥ ಭಾಸ್ಕರ ಬಿಲ್ಲವ ಹೇಳಿದ್ದಾರೆ. ಕುಂದಾಪುರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುರೇಶ ಆನಗಳ್ಳಿ ಅವರು ಅವರ ಸೋದರನ ಮೇಲೆ ನಡೆದಿರುವ ಹಲ್ಲೆಯನ್ನು ಮುಂದಿಟ್ಟುಕೊಂಡು ಆನಗಳ್ಳಿ ಗ್ರಾಮಕ್ಕೆ ಕೆಟ್ಟ ಹೆಸರು ಕಟ್ಟುವುದು ಸರಿಯಲ್ಲ. ವೈಯಕ್ತಿಕ ವಿಚಾರವನ್ನಿಟ್ಟುಕೊಂಡು ಈ ರೀತಿ ಗೊಂದಲಕಾರಿ ಹೇಳಿಕೆ ನೀಡುವುದು ಸರಿಯಲ್ಲ . ಅವರಿಗೆ ಅನ್ಯಾಯವಾಗಿದ್ದರೆ ಕಾನೂನು ಹೋರಾಟ ನಡೆಸಲಿ. ಅದು ಬಿಟ್ಟು ಆನಗಳ್ಳಿ ಗ್ರಾಮದ ಬಗ್ಗೆ, ಜನಪ್ರತಿನಿಧಿಗಳ ಬಗ್ಗೆ ಕೆಟ್ಟದ್ದಾಗಿ ಮಾತನಾಡಬಾರದು ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಕೆ.ಎಂ.ಗೋಪಾಲ ಮಾತನಾಡಿ ಆನಗಳ್ಳಿಯಲ್ಲಿ ನಾವು ಗೂಂಡಸಂಸ್ಕೃತಿ ಕಂಡಿಲ್ಲ. ಕಪೋಲಕಲ್ಪನೆಯ ವಿಚಾರಗಳನ್ನು ಇಟ್ಟುಕೊಂಡು, ಗ್ರಾಮದ ಬಗ್ಗೆ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದು ಇಲ್ಲಸಲ್ಲದ ಹೇಳಿಕೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಸಮಿತಿಯ ಕರೆಯ ಮೇರೆಗೆ ಮನೆ, ನಿವೇಶನ ರಹಿತ ಅರ್ಜಿದಾರರಿಗೆ, ಸರಕಾರಿ ಜಮೀನು ಗುರುತಿಸಿ ನಿವೇಶನ ಹಕ್ಕು ಪತ್ರ ಮಂಜೂರು ಮಾಡಲು ಆಗ್ರಹಿಸಿ ರಾಜ್ಯಾದ್ಯಂತ ವಿವಿಧ ಕಾರ್ಮಿಕ ಸಂಘಟನೆಗಳ ಬೆಂಬಲದೊಂದಿಗೆ ನಿವೇಶನ ರಹಿತರು ೯೪ಸಿ, ೯೪ಸಿಸಿ ಕಲಂನಡಿಯ ಅರ್ಜಿದಾರರು ನವಂಬರ್ ೧೮ ರಂದು ಜೈಲ್ ಭರೋ ಹೋರಾಟ ಚಳವಳಿ ನಡೆಸುವುದರ ಮೂಲಕ ಯಶಸ್ವಿಗೊಳಿಸಬೇಕು ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಜಿ.ಎನ್. ನಾಗರಾಜ ಕರೆ ನೀಡಿದರು. ಅವರು ಕೃಷಿ ಕೂಲಿಕಾರರ ಸಂಘದ ಕುಂದಾಪುರ ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು, ಸಮ್ಮೇಳನದ ಆರಂಭದಲ್ಲಿ ಸಂಘದ ಧ್ವಜಾರೋಹಣವನ್ನು ಉಡುಪಿ ಜಿಲ್ಲಾಧ್ಯಕ್ಷ ಯು. ದಾಸಭಂಡಾರಿ ನೆರವೇರಿಸಿ, ಹುತಾತ್ಮ ಸ್ತಂಭಕ್ಕೆ ಗೌರವ ಅರ್ಪಣೆ ಮಾಡಲಾಯಿತು. ಮನೆ ನಿವೇಶನ ಅರ್ಜಿದಾರರಿಗೆ ಕೂಡಲೇ ಭೂಮಿ ಹಕ್ಕು ಪತ್ರ ವಿತರಣೆ ಮಾಡಬೇಕು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸಮರ್ಪಕವಾಗಿ ಜ್ಯಾರಿಗೊಳಿಸಬೇಕು. ಭೂಕಂದಾಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಐರೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಂಗಾರಕಟ್ಟೆಯಲ್ಲಿರುವ ವಾಟರ್ ವೇಸ್ ಶಿಪ್ ಯಾರ್ಡ್‌ಗೆ ಮಂಗಳವಾರದಂದು ಬ್ರಹ್ಮಾವರ ವಿಶೇಷ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ಭೇಟಿ ನೀಡಿ ಪರಿಶೀಲನೆ ನಡೆಸಿ ತೆರಳಿದ ಬೆನ್ನಲ್ಲೆ ಬುಧವಾರದಂದು ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ವಿಶೇಷ ತಹಶೀಲ್ದಾರ್ ಸಹಿತ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಶೀಘ್ರದಲ್ಲಿ ಮರಳುಗಾರಿಕೆ ಸಂಬಂಧಿತ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಪಡಿಸಿದರು. ಶಿಪ್ ನಿರ್ಮಾಣ ಸಂಸ್ಥೆಯಾದ ವಾಟರ್ ವೇಸ್ ಆವರಣದಲ್ಲಿ ಮರಳುಗಾರಿಕೆ ನಡೆಯುತ್ತಿದೆ ಮತ್ತು ಅನಧಿಕೃತವಾಗಿ ಹೂಳೆತ್ತುವ ಕೆಲಸವಾಗುತ್ತಿದೆ ಎನ್ನುವ ಸಾರ್ವಜನಿಕರ ದೂರು ಬರುತ್ತಿದೆ. ತಹಶೀಲ್ದಾರ್ ಅವರು ಭೇಟಿ ನೀಡಿ ಸುಮಾರು 900 ಯುನಿಟ್ ಮರಳು ಇದೆ ಎಂದು ಅಂದಾಜಿಸಿ, ಮರಳನ್ನು ಪಿಡಬ್ಯ್ಲೂಡಿ ಇಲಾಖೆಗೆ ಹಸ್ತಾಂತರಿಸಿದ್ದರು ಮತ್ತು ಅಕ್ರಮ ಮರಳುಗಾರಿಕೆ ನಡೆದಿರುವುದು ಖಚಿತವಾಗಿದ್ದರು ಕೂಡ ಅಧಿಕಾರಿಗಳು ಯಾವುದೇ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉಪ್ಪುಂದ ಶಾಲೆಬಾಗಿಲಿನ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಮಾರುತಿ ಅಲ್ಟೋ ಕಾರಿಗೆ ತಡರಾತ್ರಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗಲಿದ್ದು ಕಾರು ಸಂಪೂರ್ಣ ಹಾನಿಯಾಗಿದೆ. ಟೈಲರ್ ವೃತ್ತಿಮಾಡಿಕೊಂಡಿರುವ ಕುಮಾರ್ ಗಾಣಿಗ ಎಂಬುವವರು ತಮ್ಮ ಅಂಗಡಿಯ ಮುಂದೆ ನಿಲ್ಲಿಸಿದ ಕಾರಿಗೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಕ್ಕಪಕ್ಕದವರು ತಕ್ಷಣ ಬೆಂಕಿ ಆರಿಸುವಲ್ಲಿ ನೆರವಾಗಿದ್ದಾರೆ. ಅಷ್ಟರಲ್ಲಾಗಲೇ ಕಾರು ಸಂಪೂರ್ಣ ಬೆಂಗಿಗಾಹುತಿಯಾಗಿತ್ತು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಬಸ್ ನಿಲ್ದಾಣದಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ಇಬ್ಬರು ಚಿಕ್ಕ ಬಾಲಕಿಯರನ್ನು ರಕ್ಷಿಸಿ ಉಡುಪಿ ನಿಟ್ಟೂರಿನ ಮಕ್ಕಳ ಕಲ್ಯಾಣ ಸಮಿತಿ ಬಾಲಕಿಯರ ಬಾಲ ಮಂದಿರದ ಅಧಿಕಾರಿಗಳ ವಶಕ್ಕೆ ನೀಡಿಲಾಗಿದೆ. ಬೈಂದೂರು ಠಾಣಾಧಿಕಾರಿ ಸಂತೋಷ್ ಆನಂದ್ ಕಾಯ್ಕಿಣಿ ಬೆಳಿಗ್ಗೆ ಬಸ್ ನಿಲ್ದಾಣದಲ್ಲಿ ರೌಂಡ್ಸ್‌ನಲ್ಲಿ ಧಾರವಾಡ ಜಿಲ್ಲೆಯ ಕಲಘಟಗಿಯ ಮಂಜುಳಾ ಎಂಬ ಮಹಿಳೆ 2 ಮಕ್ಕಳ ಜತೆಗೆ ಸಾರ್ವಜನಿಕರಿಂದ ಭಿಕ್ಷಾಟನೆ ಮಾಡುತ್ತಿರುವುದನ್ನು ಗಮನಿಸಿ ಅವರ ಹಿನ್ನೆಲೆಯನ್ನು ವಿಚಾರಿಸಿದ್ದಾರೆ. ಮಾನಸಿಕ ಅಸ್ವಸ್ಥೆಯಂತೆ ವರ್ತಿಸಿದ ಆಕೆ ತನ್ನ ಗಂಡ ಶಂಕರ ಮರಣಹೊಂದಿ ಮೂರು ವರ್ಷವಾಗಿದ್ದು, ಮಕ್ಕಳು ಯಾರೆಂದು ಸರಿಯಾಗಿ ತಿಳಿಸದೇ ವ್ಯತಿರಿಕ್ತ ಹೇಳಿಕೆಯಿಂದ ಅನುಮಾನಗೊಂಡ ಠಾಣಾಧಿಕಾರಿ, ಮಹಿಳೆ ಮತ್ತು ಮಕ್ಕಳನ್ನು ಠಾಣೆಗೆ ಕರೆತಂದು ಭಿಕ್ಷಾಟನೆ ಮಾಡದಂತೆ ಎಚ್ಚರಿಕೆ ನೀಡಿದ್ದಲ್ಲದೇ ಮಹಿಳೆಯೊಂದಿಗೆ ಮಕ್ಕಳನ್ನು ಕಳುಹಿಸಿದರೆ ಪುನಃ ಭಿಕ್ಷಾಟನೆ ಮಾಡುವ ಸಾಧ್ಯತೆಯಿದೆ ಎಂಬ ನೆಲೆಯಲ್ಲಿ ನಿಟ್ಟೂರಿನ ಮಕ್ಕಳ ಕಲ್ಯಾಣ ಸಮಿತಿ ಬಾಲಕಿಯರ ಬಾಲ ಮಂದಿರದ ಅಧಿಕಾರಿಗಳ ವಶಕ್ಕೆ ನೀಡಿದ್ದು, ದಾಖಲೆಗಳೊಂದಿಗೆ ತಂದೆ ತಾಯಿಯರು ಬಂದರೆ…
