Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ನವರಾತ್ರಿಯ ಅಂಗವಾಗಿ ಪ್ರಸಿದ್ಥ ಯಾತ್ರಾಸ್ಥಳ ಕೊಲ್ಲೂರಿಗೆ ಆಗಮಿಸಿದ್ದ ಸಹಸ್ರಾರು ಭಕ್ತರು ವಿಜಯದಶಮಿಯಂದು ತಮ್ಮ ಮಕ್ಕಳಿಗೆ ವಿದ್ಯಾರಂಭ ಮಾಡಿಸಿದರು. ಶ್ರೀ ಮೂಕಾಂಬಿಕಾ ದೇವಸ್ಥಾನದ ಪ್ರಾಂಗಣದ ಸರಸ್ವತಿ ಮಂಟಪದ ಮುಂಭಾಗದಲ್ಲಿ ಮಕ್ಕಳಿಗೆ ಪ್ರಾಥಃಕಾಲದಿಂದಲೇ ಅಕ್ಷರಾಭಾಸ ಮಾಡಿಸಲಾಯಿತು. ಹೆತ್ತವರು ಕಾಲಿನ ಮೇಲೆ ಮಕ್ಕಳನ್ನು ಕುರಿಸಿಕೊಂಡು ವಿದ್ಯಾರಂಭ ಮಾಡಿಸಲಾಗುತ್ತದೆ. ಅರ್ಚಕರು ಚಿನ್ನದಿಂದ ಮಗುವಿನ ನಾಲಗೆಯ ಮೇಲೆ ಓಂ ಎಂದು ಬರೆಯುತ್ತಾರೆ, ಬಳಿಕ ಹೆತ್ತವರು ಮಗುವಿನ ಬೆರಳಿಂದ ಅಕ್ಕಿ ತುಂಬಿದ ಹರಿವಾಣದಲ್ಲಿ ಓಂ ಎಂದು ಬರೆಯಿಸಿ ಬಳಿಕ ಮಾತೃಭಾಷೆಯಲ್ಲಿ ಅ,ಆ,ಇ ಬರೆಸುವ ಮೂಲಕ ಅಕ್ಷರಾಭ್ಯಾಸ ಮಾಡಿಸಲಾಗುತ್ತದೆ. ಇದರಿಂದ ಮಕ್ಕಳ ನಾಲಿಗೆಯ ಮೇಲೆ ಸರಸ್ವತಿ ದೇವಿ ನೆಲೆಸಿ ಅವರ ಶೈಕ್ಷಣಿಕ ಭವಿಷ್ಯ ಸಮೃದ್ಧಿಯಾಗುತ್ತದೆ ಎಂಬ ನಂಬಿಕೆ ಭಕ್ತರದ್ದು. ನವಾನ್ನಪ್ರಾಶನ: ಎಳೆಯ ಕಂದಮ್ಮಗಳಿಗೆ ನವಾನ್ನಪ್ರಾಶನದ ಮೂಲಕ ಮೊದಲ ಭಾರಿಗೆ ಅನ್ನವನ್ನು ತಿನ್ನಿಸಲಾಗುತ್ತದೆ. ಶ್ರೀ ಮೂಕಾಂಬಿಕೆಯ ಸನ್ನಿಧಿಯಲ್ಲಿ ಅನ್ನಾಹಾರ ಆರಂಭಿಸಿದ ಮಗು ಮುಂದೆ ಯಾವುದೇ ರೀತಿಯ ಅನಾರೋಗ್ಯದಿಂದ ಬಳಲುವುದಿಲ್ಲ ಎಂಬುದು ನಂಬಿಕೆ. ಈ ಬಾರಿ ಕೊಲ್ಲೂರಿನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮುತ್ತೂಟ್ ಫೈನಾನ್ಸ್ ಸಂಸ್ಥೆಯ ಬೈಂದೂರು ಶಾಖಾ ವ್ಯವಸ್ಥಾಪಕ ಮಹೇಶ್ ಸುವರ್ಣ (32) ಸೋಮವಾರ ಶಾಖಾ ಕಚೇರಿಯಲ್ಲಿ ಕರ್ತವ್ಯ ನಿರತರಾಗಿದ್ದಾಗ ತೀವ್ರ ಹೃದಯಾಘಾತದಿಂದ ನಿಧನರಾದರು. ರಕ್ತದೊತ್ತಡದಲ್ಲಿ ಒಮ್ಮೆಲೇ ತೀವ್ರ ಕುಸಿತವಾದ ಕಾರಣ ಹೃಯಾಘಾತ ಸಂಭವಿಸಿತು ಎನ್ನಲಾಗಿದೆ. ಬ್ರಹ್ಮಾವರದ ಇಂದಿರಾನಗರ ನಿವಾಸಿ ಶೀನ ಮರಕಾಲ ಅವರ ಪುತ್ರರಾದ ಮಹೇಶ್ ಐದು ತಿಂಗಳ ಹಿಂದೆ ಚಿಕ್ಕಮಗಳೂರು ಶಾಖೆಯಿಂದ ಇಲ್ಲಿಗೆ ಶಾಖಾಧಿಕಾರಿಯಾಗಿ ಬಡ್ತಿಹೊಂದಿ ಬಂದಿದ್ದರು. ಶಾಲಾ ದಿನಗಳಿಂದಲೂ ಕ್ರೀಡಾಪಟುವಾಗಿದ್ದ ಅವರು ಕೊಕ್ಕೋ ಮತ್ತು ಕ್ರಿಕೆಟ್ ಆಟದಲ್ಲಿ ಪರಿಣತಿ ಹೊಂದಿದ್ದರು. ಬ್ರಹ್ಮಾವರದ ಎಂಜೋಯ್ ಕ್ರಿಕೆಟರ‍್ಸ್ ತಂಡದ ಸದಸ್ಯರಾಗಿ ವಿಶೇಷ ಸಾಧನೆ ಮಾಡಿದ್ದರು. ಅವಿವಾಹಿತರಾಗಿರುವ ಅವರು ತಂದೆ, ತಾಯಿ, ಇಬ್ಬರು ಸಹೋದರರು ಮತ್ತು ಸಹೋದರಿಯನ್ನು ಅಗಲಿದ್ದಾರೆ. ಅವರ ಅಂತಿಮ ಸಂಸ್ಕಾರ ಮಂಗಳವಾರ ಬ್ರಹ್ಮಾವರದಲ್ಲಿ ನಡೆಯಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶ್ರೀ ರಾಮಚಂದ್ರ ದೇವಸ್ಥಾನದ ಶ್ರೀ ರಾಮಕ್ಷತ್ರಿಯ ಯುವಕ ಮಂಡಳಿಯ 30ನೇ ವರ್ಷದ ಶಾರದೋತ್ಸವದ ಪುರಮೆರವಣಿಗೆ ವಿಜೃಂಭಣೆಯಿಂದ ಜರುಗಿತು. ಡೋಲು, ಕೀಲು ಕುದುರೆ, ಡೈನಾಸಾರೋ, ಬೆಂಕಿಯಾಟ, ಹುಲಿವೇಶ ಟ್ಯಾಬ್ಲೋ ಸಾರ್ವಜನಿಕರ ಗಮನ ಸೆಳೆದವು. ಬೈಂದೂರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಕೊನೆಯಲ್ಲಿ ಶಾರದಾ ಮಾತೆಯ ಜಲಸ್ತಂಭನ ಕಾರ್ಯಕ್ರಮ ಜರುಗಿತು.  More photos of Sharadotsava here – https://www.facebook.com/kundapra/posts/1203626803044421

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶ್ರೀ ಸೇನೇಶ್ವರ ದೇವಸ್ಥಾನದ ಸಾರ್ವಜನಿಕ ಶಾರದೋತ್ಸವ ಸಮಿತಿಯ 43ನೇ ವರ್ಷದ ಶಾರದೋತ್ಸವದ ಪುರಮೆರವಣಿಗೆ ವಿಜೃಂಭಣೆಯಿಂದ ಜರುಗಿತು. ಡೋಲು, ಕೀಲು ಕುದುರೆ, ಕೋಳಿ, ನಾರದ, ಟ್ಯಾಬ್ಲೋ ಗಮನ ಸೆಳೆದವು. ಬೈಂದೂರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಕೊನೆಯಲ್ಲಿ ಶಾರದಾ ಮಾತೆಯ ಜಲಸ್ತಂಭನ ಕಾರ್ಯಕ್ರಮ ಜರುಗಿತು. More Photos here – https://www.facebook.com/kundapra/posts/1203616506378784

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಚಂಡಿಕಾಯಾಗ ಹಾಗೂ ನವರಾತ್ರಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರಗಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮಣಿಪಾಲ ಸಮೀಪ ಮಣ್ಣಪಳ್ಳದ ದೇವಸ್ಥಾನದ ಬಳಿಯ ರಸ್ತೆಯಲ್ಲಿ ಶನಿವಾರ ರಾತ್ರಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬೈಂದೂರಿನ ಖ್ಯಾತ ಮಕ್ಕಳ ತಜ್ಞ ಡಾ. ರವಿರಾಜ್ ಅವರ ಪುತ್ರ ಹಿಮಾಂಶು ರಾವ್ (16) ಅವರ ಬ್ರೈನ್ ಡೆಡ್ ಆಗಿದ್ದು, ಆತನ ಅಂಗಾಂಗ ದಾನಕ್ಕೆ ಪೋಷಕರು ನಿರ್ಧರಿಸಿದ್ದಾರೆ. ಹಿಮಾಂಶುವಿನ ಕಣ್ಣು (ಕಾರ್ನಿಯಾ), ಕಿಡ್ನಿ, ಲಿವರ್ ದಾನ ಮಾಡಲು ನಿರ್ಧರಿಸಲಾಗಿದ್ದು ಸೋಮವಾರ ಬೆಳಿಗ್ಗೆ ಗ್ರೀನ್ ಕಾರಿಡಾರ್ ಮೂಲಕ, ಝೀರೊ ಟ್ರಾಫಿಕ್ ನಲ್ಲಿ 6 ಗಂಟೆಗೆ ಬೆಂಗಳೂರಿಗೆ ರವಾನೆ ಮಾಡಲಾಗಿದೆ. ಗಂಭೀರ ಗಾಯಗೊಂಡ ಹಿಮಾಂಶುವನ್ನು ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅಫಘಾತದಲ್ಲಿ ಬೈಕ್ ಸವಾರಿ ಮಾಡುತ್ತಿದ್ದ ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಹರ್ಷಿತ್ ಶಿರ್ವ (19) ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೇ, ಸಹ ಸವಾರ ಹಿಮಾಂಶುವಿಗೆ ಗಂಭೀರವಾಗಿ ಗಾಯಗಳಾಗಿ ಬ್ರೈನ್ ಡೆಡ್ ಆಗಿತ್ತು. ನೋವಿನಲ್ಲಿಯೂ ಪೊಷಕರು ಅಂಗಾಂಗದಾನಕ್ಕೆ ಮುಂದಾಗುವ ಮೂಲಕ ಮಾದರಿ ಕಾರ್ಯವೆಸಗಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಕರ್ನಾಟಕದ ರೈತರ ಹಿತದೃಷ್ಠಿಯಿಂದ ಕಾವೇರಿ ನೀರು ಹಂಚಿಕೆಯ ವಿಚಾರದಲ್ಲಿ ಕಠಿಣ ನಿರ್ಧಾರ ಕೈಗೊಂಡು ಸತ್ಯಾಗ್ರಹ ಮಾಡಿದ್ದೇನೆಯೇ ಹೊರತು ಇದರಲ್ಲಿ ನನ್ನ ಸ್ವಾರ್ಥ ರಾಜಕೀಯ ಇಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು. ಅವರು ಕೊಲ್ಲೂರು ಶ್ರೀ ಮೂಕಾಂಬಿಕೆಯ ದರ್ಶನ ಪಡೆಯುವ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹಿಂದಿನ ದ್ವಿಸದಸ್ಯ ಪೀಠಕ್ಕೆ ರಾಜ್ಯ ಸರಕಾರ ಸರಿಯಾಗಿ ಮನರಿಕೆ ಮಡಿಕೊಡದ ನೆಲೆಯಲ್ಲಿ ನ್ಯಾಯಾಲಯ ನೀಡಿದ ತೀರ್ಪು ಹಲವರು ಗೊಂದಲಗಳಿಗೆ ಕಾರಣವಾಗಿತ್ತು. ಈಗ ಅಧ್ಯಯನ ತಂಡ ನೀಡಿದ ವರದಿಯನ್ನು ತ್ರಿಸದಸ್ಯ ಪೀಠದಿಂದ ವಿಚಾರಣೆ ನಡೆಯಬೇಕಾಗಿದೆ. ಯವುದೇ ರೀತಿಯ ಸಂಧಾನ ಫಲಕಾರಿಯಾಗದು ಎಂದರು. ಕಾವೇರಿ ನೀರಿನ ಹಂಚಿಕೆಯ ಹೋರಾಟ 1993ರಿಂದ ಪ್ರಾರಂಭಗೊಡಿದ್ದು, ಈವರೆಗೂ ಅಂತ್ಯ ಕಂಡಿಲ್ಲ. ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಸುದೀರ್ಘ ಮಾತುಕತೆ ನಡೆಸಿದ್ದು, ತಕ್ಷಣ ಸ್ಪಂದಿಸಿದ ಅವರು ಅಟಾರ್ನಿ ಜನರಲ್ ಹಾಗೂ ನಾಲ್ಕು ರಾಜ್ಯಗಳ ಅಧಿಕಾರಿಗಳಿರುವ ಅಧ್ಯಯನ ತಂಡವನ್ನು ಜಲಾಶಯಗಳ ಸ್ಥಿತಿಗತಿಯ ಪರಿಶೀಲನೆಗಾಗಿ ಕಳುಹಿಸಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಬಿಜೆಪಿ ಯುವಮೋರ್ಚಾ ಬೈಂದೂರು ಜಿಲ್ಲಾ ಪಂಚಾಯತ್ ಕ್ಷೇತ್ರ ಶಕ್ತಿಕೇಂದ್ರದ ಅಧ್ಯಕ್ಷರಾಗಿ ಯುವ ಉದ್ಯಮಿ ವಿಕ್ರಮ್ ಪೂಜಾರಿ, ಕಾರ್ಯದರ್ಶಿಯಾಗಿ ಗಣೇಶ್ ಗಾಣಿಗ ತಗ್ಗರ್ಸೆ ನೇಮಕಗೊಂಡಿದ್ದಾರೆ. ಇತ್ತಿಚಿಗೆ ನಡೆದ ಬಿಜೆಪಿ ಯುವಮೋರ್ಚಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಬೈಂದೂರು ಬಿಜೆಪಿ ಯುವಮೋರ್ಚಾದ ನೂತನ ಅಧ್ಯಕ್ಷ ಶರತ್ ಶೆಟ್ಟಿ ಉಪ್ಪುಂದ ಅವರು ನೇಮಿಸಿದ ಶಕ್ತಿಕೇಂದ್ರದ ಪದಾಧಿಕಾರಿಗಳನ್ನು ಹಿರಿಯ ಮುಖಂಡರ ಸಮ್ಮುಖದಲ್ಲಿ ಗೌರವಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನವರಾತ್ರಿಯ ಅಂಗವಾಗಿ ಕುಂದಾಪುರದ ಖಾರ್ವಿಕೇರಿ ಮಹಾಕಾಳಿ ದೇವಿಯ ದೇವಸ್ಥಾನವು ಸಿಂಗಾರ ಹೂವಿನಿಂದ ಆಕರ್ಷಿತವಾಗಿ ಅಲಂಕಾರಗೊಂಡಿತ್ತು. ಉಡುಪಿ ಜಿಲ್ಲೆಯಲ್ಲಿಯೇ ಸಂಪೂರ್ಣ ಸಿಂಗಾರ ಹೂವಿನಿಂದ ದೇವಸ್ಥಾನವನ್ನು ಅಲಂಕರಿಸಿರುವುದು ಪ್ರಥಮ ಎನ್ನಲಾಗುತ್ತಿದ್ದು ಭಕ್ತರು ನೀಡಿದ ಸಾವಿರದ ಐನೂರಕ್ಕೂ ಮಿಕ್ಕಿ ಸಿಂಗಾರದ ಗೊನೆಯಿಂದ ಅತ್ಯಂತ ಸುಂದರವಾಗಿ ದೇವಳವನ್ನು ಅಲಂಕರಿಸಲಾಗಿದೆ. ಪಡುಬಿದ್ರೆಯ ರಾಮಚಂದ್ರ ಭಟ್ ಮತ್ತು ತಂಡದವರಿಂದ ಗರ್ಭ ಗುಡಿ ಮತ್ತು ದೇವರನ್ನ ಸಿಂಗರಿಸಿದ್ದಾರೆ. ಪ್ರಕಾಶ್ ಖಾರ್ವಿ ಮತ್ತು ನರೇಂದ್ರ ನೇತ್ರತ್ವದ ತಂಡ ದೇವಸ್ಥಾನದ ಹೊರಾಂಗಣ ಅಲಂಕರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷರಾದ ಜಯಾನಂದ ಖಾರ್ವಿ, ಉಪಾಧ್ಯಕ್ಷರಾದ ಪ್ರಕಾಶ್ ಆರ್ ಖಾರ್ವಿ, ಮಹಿಳಾ ಘಟಕದ ಉಪಾಧ್ಯಕ್ಷೆ ಲಕ್ಷ್ಮೀ ಮಾಧವ್ ಖಾರ್ವಿ ಪ್ರಮುಖರಾದ ದಾಸ್ ಖಾರ್ವಿ, ನಾರಾಯಣ್ ಖಾರ್ವಿ, ನಾಗರಾಜ್ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: 150 ವರ್ಷ ಇತಿಹಾಸವುಳ್ಳ ಅಂಚೆ ಇಲಾಖೆಯಲ್ಲಿ ಶಾಪಗ್ರಸ್ಥ ಗ್ರಾಮೀಣ ಅಂಚೆ ನೌಕರರ ಸಮಸ್ಯೆ ಇತ್ಯರ್ಥಗೊಸಬೆಕೇಂದು, ಯಾವುದೇ ಸೌಲಭ್ಯವನ್ನು ನೀಡದೆ ದಿನದ 8 ರಿಂದ 10 ಗಂಟೆಗಳ ಕಾಲ ಕೆಲಸ ನಿರ್ವಹಿಸಿದರೂ ಕೂಡಾ ಇಲಾಖೆಯು 3 ರಿಂದ 5 ಗಂಟೆಗಳಿಗೆ ಮಾತ್ರ ಸಂಬಳ ನೀಡಿ ಇದುವರೆಗೂ ವಂಚಿಸುತ್ತಾ ಬಂದಿದೆ ಎಂದು ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಅಧ್ಯಕ್ಷರಾದ ಬಸವ ಬಿಲ್ಲವ ಆರೋಪಿಸಿದರು. ಕೇಂದ್ರದ ನರೇಂದ್ರ ಮೋದಿ ಯವರ ಸರಕಾರವು ಕೇಂದ್ರ ಸರಕಾರಿ ನೌಕರರ ಹಿತಾರಕ್ಷಣೆಗಾಗಿ ಬೋನಸ್ ಮಿತಿಯನ್ನು 3500 ದಿಂದ 7000 ಕ್ಕೆ ಅನುಮೋದಿಸಿದ್ದು, ಸದ್ರಿ ಆದೇಶವನ್ನು ನಮ್ಮ ಅಂಚೆ ಇಲಾಖೆಯು ಇಲಾಖಾ ನೌಕರರಿಗೆ ಮಾತ್ರ ನೀಡಿ, ಬಡ ಗ್ರಾಮೀಣ ಅಂಚೆ ನೌಕರರಿಗೆ ನೀಡದೆ ಶೋಷಿಸುತ್ತಾ ಬಂದಿದೆ ಎಂದರು. ಕೇಂದ್ರ ಸಂಘಟನೆಯ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಎಸ್. ಮಹಾದೇವಯ್ಯನವರು ನೆತ್ರತ್ವದಲ್ಲಿ ಉಡುಪಿ ಪ್ರಧಾನ ಅಂಚೆ ಕಛೇರಿಯ ಎದುರುಗಡೆ ಧರಣಿ ಹಮ್ಮಿಕೊಳ್ಳಲಾಯಿತು ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಕಾರ್ಯದರ್ಶಿ ಸಂತೋಷ ಮಧ್ಯಸ್ಥ, ಖಜಾಂಜಿ…

Read More