ಕುಂದಾಪುರ ಖಾರ್ವಿಕೇರಿ ಮಹಾಕಾಳಿ ದೇವಸ್ಥಾನದಲ್ಲಿ ಸಂಭ್ರಮದ ನವರಾತ್ರಿ ಉತ್ಸವ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನವರಾತ್ರಿಯ ಅಂಗವಾಗಿ ಕುಂದಾಪುರದ ಖಾರ್ವಿಕೇರಿ ಮಹಾಕಾಳಿ ದೇವಿಯ ದೇವಸ್ಥಾನವು ಸಿಂಗಾರ ಹೂವಿನಿಂದ ಆಕರ್ಷಿತವಾಗಿ ಅಲಂಕಾರಗೊಂಡಿತ್ತು. ಉಡುಪಿ ಜಿಲ್ಲೆಯಲ್ಲಿಯೇ ಸಂಪೂರ್ಣ ಸಿಂಗಾರ ಹೂವಿನಿಂದ ದೇವಸ್ಥಾನವನ್ನು ಅಲಂಕರಿಸಿರುವುದು ಪ್ರಥಮ ಎನ್ನಲಾಗುತ್ತಿದ್ದು ಭಕ್ತರು ನೀಡಿದ ಸಾವಿರದ ಐನೂರಕ್ಕೂ ಮಿಕ್ಕಿ ಸಿಂಗಾರದ ಗೊನೆಯಿಂದ ಅತ್ಯಂತ ಸುಂದರವಾಗಿ ದೇವಳವನ್ನು ಅಲಂಕರಿಸಲಾಗಿದೆ.

Call us

Click Here

ಪಡುಬಿದ್ರೆಯ ರಾಮಚಂದ್ರ ಭಟ್ ಮತ್ತು ತಂಡದವರಿಂದ ಗರ್ಭ ಗುಡಿ ಮತ್ತು ದೇವರನ್ನ ಸಿಂಗರಿಸಿದ್ದಾರೆ. ಪ್ರಕಾಶ್ ಖಾರ್ವಿ ಮತ್ತು ನರೇಂದ್ರ ನೇತ್ರತ್ವದ ತಂಡ ದೇವಸ್ಥಾನದ ಹೊರಾಂಗಣ ಅಲಂಕರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷರಾದ ಜಯಾನಂದ ಖಾರ್ವಿ, ಉಪಾಧ್ಯಕ್ಷರಾದ ಪ್ರಕಾಶ್ ಆರ್ ಖಾರ್ವಿ, ಮಹಿಳಾ ಘಟಕದ ಉಪಾಧ್ಯಕ್ಷೆ ಲಕ್ಷ್ಮೀ ಮಾಧವ್ ಖಾರ್ವಿ ಪ್ರಮುಖರಾದ ದಾಸ್ ಖಾರ್ವಿ, ನಾರಾಯಣ್ ಖಾರ್ವಿ, ನಾಗರಾಜ್ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.

Leave a Reply