Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಲೇಖನ. ವೈದೇಹಿ, ಕನ್ನಡ ನಾಡು ಕಂಡ ಸಹೃದಿಯಿ ಸಾಹಿತಿ. ಕನ್ನಡ ಸಾಹಿತ್ಯ ಲೋಕವನ್ನು ತಮ್ಮದೇ ವಿಭಿನ್ನ ಆಯಾಮದ ಕಥೆ-ಕವಿತೆಗಳಿಂದ ಶ್ರೀಮಂತಗೊಳಿಸಿದವರು. ಕುಂದಾಪುರ ಕನ್ನಡದಲ್ಲೇ ಅನೇಕ ಕೃತಿಗಳನ್ನು ರಚಿಸಿ, ಕುಂದಗನ್ನಡದ ಕಂಪನ್ನು ಹಲವೆಡೆ ಪಸರಿಸಿದವರು. ವೈದೇಹಿಯವರ ಅನೇಕ ಕಥೆ-ಕವನಗಳು ಅಸಂಖ್ಯಾತ ಜನರ ಮೆಚ್ಚುಗೆಗೆ ಪಾತ್ರವಾಗಿದ್ದು, ಸ್ತ್ರೀ ಲೋಕದ ಸೂಕ್ಷ್ಮತೆಯ ಅನಾವರಣ ಎಲ್ಲೆಡೆ ಬಿಂಬಿತವಾಗಿದೆ. ವೈದೇಹಿಯವರ ಕೃತಿಗಳು ಈಗಾಗಲೇ ಧಾರಾವಾಹಿ, ನಾಟಕಗಳಾಗಿಯೂ ನೋಡುಗರನ್ನು ಆಕರ್ಷಿಸಿದೆ. ಇವರ “ಅಮ್ಮಚ್ಚಿಯೆಂಬ ನೆನಪು” ಕೃತಿ ಇದೀಗ ಸಿನೆಮವಾಗುತ್ತಿರುವುದು ಹೊಸ ಸುದ್ದಿ. ಹೌದು. ಈ ಹಿಂದೆ ವೈದೇಹಿಯವರ “ಅಕ್ಕು”, “ಪುಟ್ಟಮ್ಮತ್ತೆ ಮತ್ತು ಮೊಮ್ಮಗಳು” ಹಾಗೂ “ಅಮ್ಮಚ್ಚಿಯೆಂಬ ನೆನಪು” ಸಣ್ಣ ಕತೆಗಳನ್ನು ಒಗ್ಗೂಡಿಸಿ “ಅಕ್ಕು” ಎಂಬ ನಾಟಕವನ್ನು ಚಂಪಾ ಶೆಟ್ಟಿಯವರು ರಂಗ ಮಂಟಪ ತಂಡಕ್ಕೆ ಕಟ್ಟಿಕೊಟ್ಟಿದ್ದರು. ಸಂಪೂರ್ಣ ಕುಂದಾಪುರ ಕನ್ನಡದಲ್ಲೇ ಇರುವ ಈ ನಾಟಕ ಇದಾಗಲೆ 50ನೇ ಪ್ರದರ್ಶನದತ್ತದಾಪುಗಾಲಿಡುತ್ತಿದೆ. ಇದರ ಹೊಸ್ತಿಲಲ್ಲೇ ಚಂಪಾ ಶೆಟ್ಟಿಯವರು “ಎಪ್ರಾನ್ ಪ್ರೊಡಕ್ಷನ್” ಲಾಂಛನದಡಿ ಅದೇ ಕತೆಯನ್ನಾದರಿಸಿ “ಅಮ್ಮಚ್ಚಿಯೆಂಬ ನೆನಪು” ಚಲನಚಿತ್ರದ ಸಿದ್ದತೆಯಲ್ಲಿದ್ದಾರೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೀಚ್ ಉತ್ಸವದ ಮೂಲಕ ಪ್ರವಾಸೋದ್ಯಮದ ಅಭಿವೃದ್ಧಿಗೆ ಹೊಸ ದಾರಿ ಕಂಡುಕೊಂಡಂತಾಗಿದೆ. ಪ್ರಪಂಚದ ಸಣ್ಣ ಸಣ್ಣ ದೇಶಗಳ ದೊಡ್ಡ ವ್ಯವಹಾರ ಪ್ರವಾಸೋದ್ಯಮವೇ ಆಗಿದೆ. ಪ್ರವಾಸಿ ತಾಣಗಳ ಅಭಿವೃದ್ಧಿಯಾದಂತೆ ಸ್ಥಳೀಯ ಜೀವನ ಮಟ್ಟವೂ ಹೆಚ್ಚುತ್ತದೆ, ಸರಕಾರ ಆ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸುತ್ತದೆ ಎಂದು ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಹೇಳಿದರು. ಅವರು ಬೈಂದೂರು ಸೋಮೇಶ್ವರ ಬೀಚಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಬೈಂದೂರು ಬೀಚ್ ಉತ್ಸವ 2017ರ ಸಮಾರೋಪ ಸಮಾರಂಭದಲ್ಲಿ ಸ್ಮರಣ ಸಂಚಿಕೆ ಮುಖಪುಟ ಅನಾವರಣಗೊಳಿಸಿ ಮಾತನಾಡಿದರು. ಪ್ರವಾಸಿ ತಾಣಗಳ ಅಭಿವೃದ್ಧಿಯೊಂದಿಗೆ ಪರಿಸರದ ಜನರಿಗೂ ವಿಪುಲವಾದ ಉದ್ಯೋಗವಕಾಶಗಳು ತೆರೆದುಕೊಳ್ಳುತ್ತವೆ. ಹೋಂಸ್ಟೇ ಮಾಡಿಕೊಂಡರೇ ಪ್ರವಾಸೋದ್ಯಮ ಇಲಾಖೆಯೇ ನೆರವು ನೀಡುತ್ತದೆ. ಪ್ರವಾಸೋದ್ಯಮ ಬೆಳೆದಂತೆಲ್ಲ ಆರ್ಥಿಕ ಸುಧಾರಣೆಯಾಗುವುದಲ್ಲದೇ ಊರಿನ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಾಣಗೊಳ್ಳುತ್ತದೆ ಎಂದರು. ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಓಂಗಣೇಶ್ ಉಪ್ಪುಂದ ಸಮಾರೋಪ ನುಡಿಗಳನ್ನಾಡಿದರು. ಬೈಂದೂರು ಹೊಲಿಕ್ರಾಸ್ ಚರ್ಚ್ ರೆವರೆಂಡ್ ಫಾದರ್ ರೋನಾಲ್ಡ್ ಮಿರಾಂದ, ಜಿಪಂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರತೀ ಮಗುವೂ ವಿಶ್ವ ಮಾನವನಾಗಿ ಜಗತ್ತಿನ ಬೆಳಕು ಕಾಣುತ್ತದೆ. ಪರಿಸರ ಒಡನಾಟದಿಂದ ಸಹಜವಾಗಿಯೇ ಬೆಳೆಯುತ್ತಾ ಅಲ್ಪ ಮಾನವರಾಗಿ ಪರಿರ್ವತನೆ ಆಗುತ್ತಾರೆ. ಆದರೆ ಉತ್ತಮ ಶಿಕ್ಷಣದ ಪಡೆಯುವ ಮೂಲಕ ಕುವೆಂಪು ಏರಿದ ವಿಶ್ವ ಮಾನವತೆಯ ಕಡೆಗೆ ಸಾಗುತ್ತಾನೆ ಎಂದು ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವಿಕಾಸ್ ಹೆಗ್ಡೆ ಅಭಿಪ್ರಾಯಪಟ್ಟರು. ಕುಂದಾಪುರ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ಇಲ್ಲಿನ ಮಿನಿ ವಿಧಾನ ಸೌಧ, ಕೋರ್ಟ್ ಹಾಲ್‌ನಲ್ಲಿ ಶುಕ್ರವಾರ ನಡೆದ ವಿಶ್ವಮಾನವ ದಿನಾಚರಣೆ ಉದ್ಘಾಟಿಸಿ ಮಾತನಾಡುತ್ತಿದ್ದರು. ಸಮಾಜದಲ್ಲಿ ಶಾಂತಿ, ಸೌಹಾದತೆ ಮರೆಯಾಗುತ್ತಿದ್ದು, ವಿಶ್ವ ಮಾನವ ಶ್ರೇಷ್ಠತೆ ಅರಿವು ಕಡಿಮೆ ಆಗುತ್ತಿದೆ. ಸಹೋದರತೆ, ಸಹಬಾಳ್ವೆ, ಸಂಯಮ, ಕೂಡಿ ಬಾಳಿವ ಕಲ್ಪನೆ ವಿಶ ಮಾನವ ಸ್ಥಾನದ ಮೆಟ್ಟಿಲಾಗಿದ್ದು, ಕುವೆಂಪು ಸಾಗಿಬಂದ ದಾರಿಯ ಅನುಸರಿಸುವುದರ ಮೂಲಕ ಸಾಮಾನ್ಯ ಕೂಡಾ ವಿಶ್ವಮಾನವ ಪಟ್ಟಕ್ಕೆ ಏರಲು ಸಾಧ್ಯೆ ಎಂದು ಹೇಳಿದರು. ಕುಂದಾಪುರ ಪುರಸಭೆ ಉಪಾಧ್ಯಕ್ಷ ರಾಜೇಶ್ ಕಾವೇರಿ ಅಧ್ಯಕ್ಷತೆ ವಹಿಸಿದ್ದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿಶಾಲವಾದ ಕರಾವಳಿ ತೀರ ಸೌಂದರ್ಯದ ನೆಲೆಬೀಡು. ಸರಕಾರ ಸಮುದ್ರಕ್ಕೆ ಕಲ್ಲು ಹಾಕಲು ನೀಡಿದ ಆದ್ಯತೆಯನ್ನು ಬೀಚ್ ಅಭಿವೃದ್ಧಿಗೆ ನೀಡಿಲ್ಲ. ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಯಾದಂತೆ ಕರ್ನಾಟಕದಲ್ಲಿ ಈವರೆಗೂ ಆಗಿಲ್ಲ. ಹೀಗೆಂದವರು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ. ಬೀಜಾಡಿ-ಕೋಟೇಶ್ವರ ಹಳಅಳಿವೆ ಬೀಚ್‌ನಲ್ಲಿ ಕುಂದಾಪುರ ಊರ್‌ಮನಿ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕುಂದಾಪುರ ತಾಲೂಕು ಪಂಚಾಯತ್ ಅಧ್ಯಕ್ಷ ಜಯಶ್ರೀ ಸುಧಾಕರ ಮೊಗವೀರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯೆ ಲಕ್ಷ್ಮೀ ಮಂಜು ಬಿಲ್ಲವ, ಶ್ರೀಲತಾ ಸುರೇಶ್ ಶೆಟ್ಟಿ, ಕುಂದಾಪುರ ಪುರಸಭೆ ಉಪಾಧ್ಯಕ್ಷ ರಾಜೇಶ್ ಕಾವೇರಿ, ತಾ.ಪಂ ಸದಸ್ಯೆ ರೂಪಾ ಪೈ, ಕೋಟೇಶ್ವರ ಗ್ರಾಪಂ ಅದ್ಯಕ್ಷೆ ಜಾನಕಿ ಬಿಲ್ಲವ, ಬೀಜಾಡಿ ಗ್ರಾಪಂ ಅಧ್ಯಕ್ಷೆ ಸಾಕು ಬೀಜಾಡಿ, ಮೀನುಗಾರಿಕ ಅಭಿವೃದ್ದಿ ನಿಗಮ ಮಾಜಿ ಅಧ್ಯಕ್ಷ ಹೆರಿಯಣ್ಣ ಚಾತ್ರಬೆಟ್ಟು,  ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಅನಿತಾ ಮೊದಲಾದವರು ಉಪಸ್ಥಿತರಿದ್ದರು. ಕೋಟೇಶ್ವರ ಬೀಚ್ ಉತ್ಸವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ತಾಲೂಕಿನ ಪ್ರವಾಸಿ ತಾಣಗಳ ಅಭಿವೃದ್ಧಿಗೆ ನಿರಂತವಾಗಿ ಶ್ರಮಿಸಲಾಗುತ್ತಿದೆ. ಸೋಮೇಶ್ವರ ಬೀಚ್ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ರಾಜ್ಯ ಸರಕಾರದಿಂದ ಅನುದಾನ ನೀಡಲಾಗಿದ್ದು, ಮೊದಲ ಹಂತದ ಕಾಮಗಾರಿ ಈಗಾಗಲೇ ನಡೆದಿದ್ದು, ಎರಡನೇ ಹಂತದ ಅನುದಾನ ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಬೆಸುಗೆ ಫೌಂಡೇಶನ್ ರಿ. ಬೈಂದೂರು, ಗ್ರಾಮ ಪಂಚಾಯತ್ ಪಡುವರಿ ಹಾಗೂ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ಜರುಗಿದ ಬೈಂದೂರು ಬೀಚ್ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೈಂದೂರು ತಾಲೂಕು ಹಂತ ಹಂತವಾಗಿ ಅಭಿವೃದ್ಧಿಯಾಗಲಿದ್ದು, ಆಡಳಿತಾತ್ಮಕ ಹಾಗೂ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದರು. ನಿವೃತ್ತ ಐ.ಎಫ್.ಎಸ್ ಅಧಿಕಾರಿ ಜಗನ್ನಾಥ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಪಶ್ಚಿಮಘಟ್ಟ ಹಾಗೂ ಅರಬ್ಬಿ ಸಮುದ್ರದ ನಡುವೆ ಇರುವ ಸುಂದರ ಪ್ರದೇಶ ಮನಮೋಹಕವಾಗಿದ್ದು ಪ್ರಕೃತಿದತ್ತವಾಗಿ ಉತ್ತಮ ಪ್ರವಾಸಿ ತಾಣಗಳನ್ನು ಹೊಂದಿದೆ. ಇದರನ್ನು ಅಭಿವೃದ್ದಿಪಡಿಸುವ ಕೆಲಸ ಹೆಚ್ಚಾಗಿ ಆಗಬೇಕಿದೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೆಸುಗೆ ಫೌಂಡೇಶನ್ ರಿ. ಬೈಂದೂರು, ಪಡುವರಿ ಗ್ರಾಮ ಪಂಚಾಯತ್ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ಸೋಮೇಶ್ವರದಲ್ಲಿ ಜರುಗುತ್ತಿರುವ ಬೈಂದೂರು ಬೀಚ್ ಉತ್ಸವ 2017ರ ವಿವಿಧ ಕಾರ್ಯಕ್ರಮಗಳು ಹಾಗೂ ಸ್ವರ್ಧೆಗಳಿಗೆ ಗಾಳಿಪಟ ಉತ್ಸವದ ಮೂಲಕ ಚಾಲನೆ ದೊರೆಯಿತು. ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಬೈಂದೂರು ಸುತ್ತಲಿನ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿ ಹಿನ್ನೆಡೆಯನ್ನು ಕಂಡಿದ್ದು ಆದರೆ ಈ ಉತ್ಸವದ ಮೂಲಕ ಅದಕ್ಕೊಂದು ವೇಗ ದೊರೆತಿದೆ ಎಂದರು. ಗಾಳಿಪಟ ಉತ್ಸವಕ್ಕೆ ಚಾಲನೆ ನೀಡುವ ಸಂದರ್ಭ ಗುಡೇಮನೆ ನಾಗಪ್ಪ ಶೇರುಗಾರ್ ಅಧ್ಯಕ್ಷತೆ ವಹಿಸಿದರು. ಮುಖ್ಯ ಅಥಿತಿಗಳಾಗಿ ಪಡುವರಿ ಗ್ರಾ.ಪಂ ಅಧ್ಯಕ್ಷೆ ದೀಪಾ ಶೆಟ್ಟಿ, ಪಡುವರಿ ಗ್ರಾ.ಪಂ.ಸದಸ್ಯರಾದ ಮಾಣಿಕ್ಯ ಹೋಬಳಿದಾರ್, ಎಸ್. ತಿಮ್ಮಪ್ಪ, ಶಿವರಾಮ ಪೂಜಾರಿ, ಸೋಡಿತಾರ್ ಸುಬ್ರಾಯ ಶೇರುಗಾರ್, ಸಂಜು ದೇವಾಡಿಗ, ಶ್ರೀ ರಾಮ ಭಜನಾ ಮಂಡಳಿ ಸೋಮೇಶ್ವರ ಇದರ ಅಧ್ಯಕ್ಷ ಪರಮೇಶ್ವರ, ಬೆಸುಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೆಸುಗೆ ಫೌಂಡೇಶನ್ ರಿ. ಬೈಂದೂರು, ಗ್ರಾಮ ಪಂಚಾಯತ್ ಪಡುವರಿ, ಉಡುಪಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ಬೈಂದೂರು ಸೋಮೇಶ್ವರ ಬೀಚ್ನಲ್ಲಿ ಡಿಸೆಂಬರ್ 28 ಹಾಗೂ 29ರಂದು ಬೈಂದೂರು ಬೀಚ್ ಉತ್ಸವ ಜರುಗಲಿರುವ ಬೀಚ್ ಉತ್ಸವಕ್ಕೆ ಕೊನೆ ಕ್ಷಣದ ಸಿದ್ಧತೆಗಳು ಜರುಗುತ್ತಿವೆ. ಬೈಂದೂರಿನಲ್ಲಿ ಪ್ರಪ್ರಥಮ ಭಾರಿಗೆ ಆಯೋಜನೆಗೊಂಡಿರುವ ಬೈಂದೂರು ಬೀಚ್ ಉತ್ಸವಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನ ದೊರೆಯುತ್ತಿದ್ದು, ಪಡುವರಿ ಸೋಮೇಶ್ವರ ಕಡಲತೀರ ಸಿಂಗರಿಸಿಕೊಳ್ಳುತ್ತಿದೆ. ಉತ್ಸವಕ್ಕಾಗಿ ಬೀಚ್ ಪರಿಸರವನ್ನು ಸ್ವಚ್ಛಗೊಳಿಸಲಾಗಿದ್ದು, ವೇದಿಕೆ, ಪ್ರದರ್ಶನ ಮಳಿಗೆಗಳು, ಅಮ್ಯೂಸ್ ಮೆಂಟ್ ಪಾರ್ಟ್ ಮುಂದಾದವುಗಳ ಜೋಡಣೆಯ ಅಂತಿಮ ಹಂತದ ಸಿದ್ಧತೆ ನಡೆದಿದೆ. ಸೋಮೇಶ್ವರದಿಂದ ಅಳಿವೆಯ ತನಕ ವಿದ್ಯುದೀಪಗಳ ಅಲಂಕಾರ, ಬಣ್ಣದ ಚಿತ್ತಾರದಿಂದ ಬೀಚ್ ಪರಿಸರ ಶುಭ್ರವಾಗಿ ಕಂಗೊಳಿಸುತ್ತಿದೆ. ದಿ. 28 ಡಿಸೆಂಬರ್ 2017ರ ಗುರುವಾರ ಬೆಳಿಗ್ಗೆ 9 ಗಂಟೆಗೆ ಗಾಳಿಪಟ ಉತ್ಸವ ಸ್ವರ್ಧೆಗೆ ಚಾಲನೆ, 9:30ಕ್ಕೆ ಸೂಪರ್ ಸೆಲ್ಫಿ ಸ್ವರ್ಧೆಗೆ ಚಾಲನೆ, 10ಗಂಟೆಗೆ ಮರಳುಶಿಲ್ಪ ಅನಾವರಣ, 10:30ಕ್ಕೆ ಚಿತ್ರಸಿರಿ, ಚಿತ್ರಕಲಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪರಿಪೂರ್ಣತೆ ಮತ್ತು ಪರಿಪಕ್ವತೆ ಸಾಧನೆ ಎಂಬ ನಾಣ್ಯದ ಎರಡು ಮುಖಗಳಿದ್ದಂತೆ. ವಿದ್ಯಾರ್ಥಿಗಳು ತಮ್ಮ ಶಾಲಾ ಮತ್ತು ಕಾಲೇಜು ಹಂತಗಳಲ್ಲಿ ವಿಷಯವಾರು ಪರಿಕಲ್ಪನೆಗಳನ್ನು ಮಾತ್ರ ಕರಗತ ಮಾಡಿಕೊಳ್ಳದೇ, ಜೀವನದ ಮೌಲ್ಯದ ಬಗ್ಗೆ ಸಂಪೂರ್ಣವಾದ ಅರಿವನ್ನು ತಂದುಕೊಳ್ಳಬೇಕು. ಯಾವ ವಿದ್ಯಾಸಂಸ್ಥೆ ವಿದ್ಯಾರ್ಥಿಗಳ ಸಮಗ್ರ ವಿಕಾಸಕ್ಕೆ ವಿಫುಲವಾದ ಅವಕಾಶವನ್ನು ಹಾಗೂ ವೇದಿಕೆಯನ್ನು ನಿರ್ಮಾಣಮಾಡಿಕೊಡುತ್ತದೆಯೋ ಅಂತಹ ಶಿಕ್ಷಣ ಸಂಸ್ಥೆ ಸಮಾಜದ ಮುಂದಿನ ಆಶೋತ್ತರಗಳನ್ನು ಈಡೇರಿಸಲು ಉತ್ತಮ ವೇದಿಕೆಯಾಗುತ್ತದೆ ಎಂದು ಗುರುಕುಲ ವಿದ್ಯಾಸಂಸ್ಥೆಯ 12ನೇ ವರ್ಷದ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ  ಎಮ್.ಜಿ.ಎಮ್ ಕಾಲೇಜು ಉಡುಪಿ ನಿರ್ವತ್ತ ಪ್ರಾಂಶುಪಾಲರು ಕುಸುಮ ಕಾಮತ್ ತಮ್ಮ ಅನುಭವನ್ನು ಹಂಚಿಕೊಂಡರು. ಗುರುಕುಲ ವಿದ್ಯಾಸಂಸ್ಥೆಯ ವಿಶಾಲವಾದ ಆವರಣದಲ್ಲಿ ರಂಗು ರಂಗಿನ ಬೆಳಕಿನ ನಡುವೆ ತನ್ನ 12ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕರಾದ ಶ್ರೀ.ಬಸ್ರೂರು ಅಪ್ಪಣ್ಣ ಹೆಗ್ಡೆ ರವರು ವಹಿಸಿದ್ದರಲ್ಲದೇ ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ಗುರುಕುಲ ಹೇಗೆ ಸಮಾಜಮುಖಿ ಶಿಕ್ಷಣ ಸಂಸ್ಥೆಯಾಗುದೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕುಸುಮ ಫೌಂಡೇಶನ್ ನಾಗೂರು ಸಾರಥ್ಯದಲ್ಲಿ ಜರುಗುತ್ತಿರುವ ವಾರ್ಷಿಕ ಸಾಂಸ್ಕೃತಿಕ ಉತ್ಸವ ‘ಕುಸುಮಾಂಜಲಿ-2017’ ನಾಗೂರಿನಲ್ಲಿ ಅದ್ಧೂರಿಯಾಗಿ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಪ್ರೇಕ್ಷಕರು ಭಾಗವಹಿಸಿದರು. ಎಸ್.ಡಿ.ಪಿ.ಟಿ. ಪ್ರಥಮ ದರ್ಜೆ ಕಾಲೇಜು ಕಟೀಲು ಇಲ್ಲಿನ ಪ್ರಾಶುಂಪಾಲರಾದ ಎಮ್. ಬಾಲಕೃಷ್ಣ ಶೆಟ್ಟಿ ಇವರು ದಿಕ್ಸೂಚಿ ಭಾಷಣ ಮಾಡಿ ಸಂಸ್ಕೃತಿ ಹಾಗೂ ಕಲೆಯ ಉಳಿಯುವಿಕೆಗೆ ಕುಸುಮ ಫೌಂಡೇಶನ್‌ನ ಕೊಡುಗೆಯನ್ನು ಶ್ಲಾಘಿಸಿದರು. ಸಂಸ್ಥೆಯು ನಿಸ್ವಾರ್ಥ ಸಾಮಾಜಿಕ ಸೇವೆಗಾಗಿ ಕೊಡಮಾಡುವ ಪ್ರತಿಷ್ಠಿತ ‘ಕುಸುಮಶ್ರೀ’ ಪ್ರಶಸ್ತಿಯನ್ನು ಪ್ರೊ. ಎ.ವಿ. ನಾವಡ, ನಿವೃತ್ತ ಪ್ರಾಧ್ಯಾಪಕರು ಮತ್ತು ಡೀನ್ ಕನ್ನಡ ವಿಶ್ವವಿದ್ಯಾನಿಲಯ, ಹಂಪಿ ಹಾಗೂ ಡಾ. ಗಾಯತ್ರಿ ನಾವಡ, ಸಂಶೋಧಕರು ಮತ್ತು ವಿಮರ್ಶಕರು, ಮಂಗಳೂರು ದಂಪತಿಗಳಿಗೆ ಇವರು ಜಾನಪದ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಪರಿಗಣಿಸಿ ಪ್ರಧಾನ ಮಾಡಿದರು. ಅವರು ಮಾತನಾಡಿ ಜಾನಪದ ಕಲೆ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ, ಈ ನಿಟ್ಟಿನಲ್ಲಿ ಕುಸುಮ ಸಂಸ್ಥೆ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು. ಕಾರ್ಯಕ್ರಮದ ಚಾನಲ್ ಪಾರ್ಟನರ್ ಮುಂಬೈನ ಶುಭಸಾಗರ್…

Read More