ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: 150 ವರ್ಷ ಇತಿಹಾಸವುಳ್ಳ ಅಂಚೆ ಇಲಾಖೆಯಲ್ಲಿ ಶಾಪಗ್ರಸ್ಥ ಗ್ರಾಮೀಣ ಅಂಚೆ ನೌಕರರ ಸಮಸ್ಯೆ ಇತ್ಯರ್ಥಗೊಸಬೆಕೇಂದು, ಯಾವುದೇ ಸೌಲಭ್ಯವನ್ನು ನೀಡದೆ ದಿನದ 8 ರಿಂದ 10 ಗಂಟೆಗಳ ಕಾಲ ಕೆಲಸ ನಿರ್ವಹಿಸಿದರೂ ಕೂಡಾ ಇಲಾಖೆಯು 3 ರಿಂದ 5 ಗಂಟೆಗಳಿಗೆ ಮಾತ್ರ ಸಂಬಳ ನೀಡಿ ಇದುವರೆಗೂ ವಂಚಿಸುತ್ತಾ ಬಂದಿದೆ ಎಂದು ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಅಧ್ಯಕ್ಷರಾದ ಬಸವ ಬಿಲ್ಲವ ಆರೋಪಿಸಿದರು. ಕೇಂದ್ರದ ನರೇಂದ್ರ ಮೋದಿ ಯವರ ಸರಕಾರವು ಕೇಂದ್ರ ಸರಕಾರಿ ನೌಕರರ ಹಿತಾರಕ್ಷಣೆಗಾಗಿ ಬೋನಸ್ ಮಿತಿಯನ್ನು 3500 ದಿಂದ 7000 ಕ್ಕೆ ಅನುಮೋದಿಸಿದ್ದು, ಸದ್ರಿ ಆದೇಶವನ್ನು ನಮ್ಮ ಅಂಚೆ ಇಲಾಖೆಯು ಇಲಾಖಾ ನೌಕರರಿಗೆ ಮಾತ್ರ ನೀಡಿ, ಬಡ ಗ್ರಾಮೀಣ ಅಂಚೆ ನೌಕರರಿಗೆ ನೀಡದೆ ಶೋಷಿಸುತ್ತಾ ಬಂದಿದೆ ಎಂದರು. ಕೇಂದ್ರ ಸಂಘಟನೆಯ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಎಸ್. ಮಹಾದೇವಯ್ಯನವರು ನೆತ್ರತ್ವದಲ್ಲಿ ಉಡುಪಿ ಪ್ರಧಾನ ಅಂಚೆ ಕಛೇರಿಯ ಎದುರುಗಡೆ ಧರಣಿ ಹಮ್ಮಿಕೊಳ್ಳಲಾಯಿತು ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಕಾರ್ಯದರ್ಶಿ ಸಂತೋಷ ಮಧ್ಯಸ್ಥ, ಖಜಾಂಜಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಗಂಗೊಳ್ಳಿಯ ಮಹಾಸತಿ ಪ್ರಾಥಮಿಕ ಮೀನುಗಾರರ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ೨೦೧೫-೧೬ನೇ ಸಾಲಿನ ಮಹಾಸಭೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಜರಗಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಶಾರದಾ ಎಸ್.ಖಾರ್ವಿ ಮಾತನಾಡಿ, ಸಂಘದ ಪಾಲುದಾರರಿಗೆ ಶೇ.೧೦ರಂತೆ ಡಿವಿಡೆಂಡ್ ನೀಡಲು ನೀಡಲು ನಿರ್ಧರಿಸಿದ್ದು, ಸರಕಾರದಿಂದ ಮಹಿಳೆಯರಿಗೆ ಹಾಗೂ ಸಂಘದ ಸದಸ್ಯರಿಗೆ ದೊರೆಯುವ ವಿವಿಧ ಯೋಜನೆಗಳ ಪ್ರಯೋಜನವನ್ನು ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುವುದು ಎಂದರು. ಸಂಘದ ಉಪಾಧ್ಯಕ್ಷೆ ಮಾಲತಿ ಜಿ.ಖಾರ್ವಿ, ನಿರ್ದೇಶಕಿಯರಾದ ನೀಲಾವತಿ ಎಸ್.ಖಾರ್ವಿ, ಶಾರದಾ ಆರ್.ಹೆಗ್ಡೆ, ಶೈಲಾ ಎಂ.ಖಾರ್ವಿ, ಜಯಂತಿ ಆರ್.ಪಟೇಲ್, ದೀಪಾ ಎಸ್.ಖಾರ್ವಿ, ರೇಖಾ ಜಿ.ಖಾರ್ವಿ ಉಪಸ್ಥಿತರಿದ್ದರು. ಸಭೆಯಲ್ಲಿ ಭಾಗವಹಿಸಿದ ೨೦ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು. ನಿರ್ದೇಶಕಿ ಪಾರ್ವತಿ ಬಿ.ಖಾರ್ವಿ ಸ್ವಾಗತಿಸಿದರು. ಸಂಘದ ಲೆಕ್ಕಿಗ ರವಿಚಂದ್ರ ಖಾರ್ವಿ ಅವರು ೨೦೧೬-೧೭ನೇ ಸಾಲಿನ ಆಯವ್ಯಯ ಅಂದಾಜು ಬಜೆಟ್ ಮತ್ತು ೨೦೧೫-೧೬ನೇ ಸಾಲಿನ ಲಾಭಾಂಶ ವಿಂಗಡಣೆಯನ್ನು ಮಂಡಿಸಿದರು. ಸಂಘದ ಕಾರ್ಯದರ್ಶಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗಾಂಧಿ ಜಯಂತಿ ಅಂಗವಾಗಿ ಮರವಂತೆ ಗ್ರಾಮ ಪಂಚಾಯತ್ ವಿಶೇಷ ಗ್ರಾಮಸಭೆ ನಡೆಸಿತು. ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ. ಅಧ್ಯಕ್ಷೆ ಅನಿತಾ ಆರ್. ಕೆ ಗಾಂಧೀಜಿ ಭಾವಚಿತ್ರಕ್ಕೆ ಮಾಲಾರ್ಪಣೆಗೈದು ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಮರವಂತೆಯನ್ನು ಸಂಪೂರ್ಣ ಸ್ವಚ್ಛ ಗ್ರಾಮವಾಗಿ ಪರಿವರ್ತಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಸುಸಜ್ಜಿತ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣವಾಗುತ್ತಿದೆ. ಅದೇ ವೇಳೆ ಗ್ರಾಮವು ಪ್ಲಾಸ್ಟಿಕ್ಮುಕ್ತ ಆಗಬೇಕಾಗಿದೆ. ಪ್ಲಾಸ್ಟಿಕ್ ಬಳಕೆಗೆ ಸರಕಾರ ಈಗಾಗಲೇ ನಿಷೇಧ ಹೇರಿದೆ. ಇದನ್ನು ವ್ಯಾಪಾರಸ್ಥರ ಮತ್ತು ಸಾರ್ವಜನಿಕರ ಗಮನಕ್ಕೆ ತಂದು ಅನುಷ್ಠಾನಿಸಲಾಗುವುದು. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದರು. ಅಭಿವೃದ್ಧಿ ಅಧಿಕಾರಿ ಹರಿಶ್ಚಂದ್ರ ಆಚಾರ್ಯ ಸ್ವಾಗತಿಸಿ, ವಿಶೇಷ ಗ್ರಾಮಸಭೆಯ ಔಚಿತ್ಯವನ್ನು ವಿವರಿಸಿದರು. ಉಪಾಧ್ಯಕ್ಷ ಗಣೇಶ ಪೂಜಾರಿ, ಸದಸ್ಯರು, ಮಾಜಿ ಅಧ್ಯಕ್ಷ ಎಂ. ನರಸಿಂಹ ಶೆಟ್ಟಿ, ಇತರರು ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು ಇಲ್ಲಿ ಇಂಗ್ಲಿಷ್ ವಿಭಾಗದ ಉದ್ಘಾಟನೆ ಹಾಗೂ ಆಧುನಿಕ ಯುಗದಲ್ಲಿ ಇಂಗ್ಲಿಷ್ ಮಹತ್ವ ಎನ್ನುವ ವಿಷಯದ ಬಗ್ಗೆ ಉಪನ್ಯಾಸ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರು ರಘರಾಮ ನಾಯಕ್ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ವಿಭಾಗದ ಮುಖ್ಯಸ್ಥ ಅನಿಲ ಕುಮಾರ್ ವಹಿಸಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಉಮೇಶ ಮಯ್ಯ ಉಪಸ್ಥಿತರಿದ್ದರು. ಇಂಗ್ಲಿಷ್ ವಿಭಾಗದ ಸಂಚಾಲಕಿ ಅಮಿತಾ ಇವರು ಪ್ರಾಸ್ತಾವಿಕ ಮಾತನ್ನಾಡಿದರು, ಪ್ರೇಮಲತಾ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಾವು ನಮ್ಮ ಸಂಸ್ಕೃತಿ ಮತ್ತು ಧರ್ಮವನ್ನು ಉಳಿಸಿ ಬೆಳೆಸಬೇಕಾದರೆ ನಮ್ಮ ಅಂತರಂಗದಿಂದ ಗಟ್ಟಿಯಾಗಬೇಕು. ಟಿ.ವಿ.ಧಾರವಾಹಿಗಳಿಂದ ಇಂದು ನಾವು ಯಾಂತ್ರಿಕ ಸ್ಥಿತಿಯತ್ತ ಹೆಜ್ಜೆ ಇಡುತ್ತಿದ್ದೇವೆ. ನಾವು ಲೌಕಿಕ ಭೋಗದ ಅಮಲಿನಿಂದ ನಮ್ಮ ದೃಷ್ಟಿಕೋನವನ್ನು ಬದಲಿಸುತ್ತಾ ಸಾಗುತ್ತಿರುವುದು ನಮ್ಮ ಧಾರ್ಮಿಕ ಮತ್ತು ಸಾಮಾಜಿಕ ಅಧಃಪತನಕ್ಕೆ ಹಾದಿಯಾಗುವ ಅಪಾಯವಿದೆ ಎಂದು ಸಾಂದೀಪನಿ ಶ್ರೀ ಕೇಮಾರು ಮಠಾಧೀಶ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದ್ದಾರೆ. ಕುಂದಾಪುರ ತಾಲೂಕಿನ ಬೆಳ್ವೆ ಗ್ರಾಮ ಪಂಚಾಯಿತಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕೊಂಜಾಡಿ ಇದರ ಮೂರನೇ ವರ್ಷದ ನವರಾತ್ರಿ ಉತ್ಸವದ ಪ್ರಯುಕ್ತ ದುರ್ಗಾ ಪೂಜೆ, ದುರ್ಗಾ ಹೋಮ, ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮದ ಸಂದರ್ಭ ಆಶೀರ್ವಚನ ಮಾಡುತ್ತಿದ್ದರು. ಹಿಂದೆ ದೇವಸ್ಥಾನಗಳು ಧಾರ್ಮಿಕ ಗ್ರಂಥಾಲಯಗಳಾಗಿದ್ದವು. ಆದರೆ ಇಂದು ಅಂತಹಾ ಧಾರ್ಮಿಕ ಶಿಕ್ಷಣವನ್ನು ದೇವಸ್ಥಾನಗಳು ಕಡಿಮೆ ಮಾಡುತ್ತಿವೆ. ನಮ್ಮ ಪುರಾಣ ಗ್ರಂಥಗಳ ಅಧ್ಯಯನಗಳು ನಮ್ಮ ಧರ್ಮ ರಕ್ಷಣೆಗೆ ಬಹಳ ಮುಖ್ಯ ಎಂದ ಅವರು, ಕೇವಲ ದೇವಸ್ಥಾನಗಳ ನಿರ್ಮಾಣದಿಂದ ದೇವರನ್ನು…
ವಿನಾಯಕ ಕೊಡ್ಸರ ಇದು ಇಂಟರ್ನೆಟ್ ಜಗತ್ತು. ಒಂದು ಸುದ್ದಿ, ಮಾಹಿತಿ ಮಾಧ್ಯಮಗಳಿಗಿಂತ ಮೊದಲು ಮೊಬೈಲ್ನಿಂದ ಓದುಗನ ಕೈ ಸೇರುತ್ತಿದೆ. ಜನ ಟಿವಿ ನೋಡ್ತಾರೋ, ಪೇಪರ್ ಓದ್ತಾರೋ ಗೊತ್ತಿಲ್ಲ. ಆದ್ರೆ ಕೈಯ್ಯಲ್ಲಿರೋ ಮೊಬೈಲ್ನಿಂದ ಆಗಾಗ ಜಾಲತಾಣಗಳನ್ನು ಜಾಲಾಡುತ್ತಾರೆ. ನಗರವಾಸಿಗಳು ಮಾತ್ರ ಈ ಇಂಟರ್ನೆಟ್ ಜಗತ್ತಿಗೆ ಹೊಂದಿಕೊಂಡೋರು ಅನ್ನೋ ಟ್ರೆಂಡ್ ಬದ್ಲಾಗ್ತಿದೆ. ಹಳ್ಳಿ ಮೂಲೆಯವನಿಗೂ ಸ್ಮಾರ್ಟ್ಫೋನ್ ಬಳಕೆ ಗೊತ್ತಾಗಿದೆ. ಹೀಗಿರುವಾಗ ನಮ್ಮ ಮಾಧ್ಯಮಗಳು ಅದೆಷ್ಟು ಎಚ್ಚರವಾಗಿದ್ದರು ಸಾಕಾಗಲಾರದು. ಹೀಗೆಲ್ಲ ಸ್ಪರ್ಧೆ ಎದುರಾಗಿರುವಾಗಲು ನಮ್ಮ ಒಂದಷ್ಟು ಮಾಧ್ಯಮಗಳು ಮತ್ತಷ್ಟು ಬೇಜವಬ್ದಾರಿ ತೋರುತ್ತಿರುವುದು ಬೇಸರದ ಸಂಗತಿ. ಜಾಲತಾಣದಲ್ಲಿ ಜಾಲಾಡುವಷ್ಟು ಜಾಣತನವಿರುವ ವ್ಯಕ್ತಿ ಖಂಡಿತ ವಿವೇಕಿ. ಆತನಿಗೆ ಒಂದು ಸುದ್ದಿಯನ್ನು ಕ್ರಾಸ್ಚೆಕ್ ಮಾಡಿ ಅದರ ಹಿನ್ನೆಲೆಯನ್ನು ಹುಡುಕುವಷ್ಟು ವಿವೇಚನೆ ಇರುತ್ತದೆ. ಇಂತಿಪ್ಪ ಕಾಲದಲ್ಲೂ ನೀವು ನಿಮ್ಮ ಮೂಗಿನ ನೇರಕ್ಕೆ ಸುದ್ದಿಗಳನ್ನು, ಸ್ಟೋರಿಗಳನ್ನು ಮಾಡಿಕೊಂಡು ಯಾರ ಕಿವಿ ಮೇಲೆ ಹೂವು ಇಡಲು ಹೊರಟಿರುವಿರಿ ಎಂಬುದು ಮಾತ್ರ ಅರ್ಥವಾಗುತ್ತಿಲ್ಲ. ಮಾಧ್ಯಮ ಜಾಹೀರಾತು ಆಧಾರಿತ. ಪತ್ರಿಕೆಯೋ, ಟಿವಿಯೋ ಉಳಿಯಬೇಕಾದರೆ ಅದಕ್ಕೆ ಜಾಹೀರಾತು ಬೇಕು.…
ಕುಂದಾಪ್ರ ಡಾಟ್ ಕಾಂ ಮಾಹಿತಿ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವಿವಿಧ ವಿಭಾಗದ ಪೊಲೀಸ್ ಉಪ ನಿರೀಕ್ಷಕ ಹಾಗೂ ಪೊಲೀಸ್ ಪೇದೆ ಹುದ್ದೆಗಳ ನೇಮಕಾತಿ ನಡೆಯಲಿದ್ದು ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಕೆಳಗಿನ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಪೊಲೀಸ್ ಉಪ ನಿರೀಕ್ಷಕ ಹುದ್ದೆ (ಸಿವಿಲ್) ಪುರುಷ, ಮಹಿಳೆ ಪೊಲೀಸ್ ಉಪ ನಿರೀಕ್ಷಕ ಹುದ್ದೆ (ಎಫ್.ಪಿ.ಬಿ) ಪುರುಷ ಮಹಿಳೆ ಪೊಲೀಸ್ ಉಪ ನಿರೀಕ್ಷಕ ಹುದ್ದೆ (ಕೆಎಸ್ಆರ್ಪಿ) ಪುರುಷ ಪೊಲೀಸ್ ಉಪ ನಿರೀಕ್ಷಕ ಹುದ್ದೆ (ಡಿಎಆರ್) ಪುರುಷ ಪೊಲೀಸ್ ಉಪ ನಿರೀಕ್ಷಕ ಹುದ್ದೆ (ವೈರ್ಲೆನ್)ಪುರುಷ ಮಹಿಳೆ ಪೊಲೀಸ್ ಉಪ ನಿರೀಕ್ಷಕ ಹುದ್ದೆ (ಕೆ.ಎಸ್.ಐ.ಎಸ್.ಎಫ್) ಪುರುಷ ಪೊಲೀಸ್ ಕಾನ್ಸ್ಟೆಬಲ್ (ಸಿವಿಲ್) ಪುರುಷ ಮಹಿಳೆ ಪೊಲೀಸ್ ಕಾನ್ಸ್ಟೆಬಲ್ (ಸಶಸ್ತ್ರ ಪಡೆ) ಪುರುಷ ಪೊಲೀಸ್ ಕಾನ್ಸ್ಟೆಬಲ್ (ಕೆ.ಎಸ್.ಐ.ಎಸ್.ಎಫ್) ಪುರುಷ ಪೊಲೀಸ್ ಕಾನ್ಸ್ಟೆಬಲ್ (ಎಫ್.ಪಿ.ಬಿ) ಪುರುಷ ಮಹಿಳೆ ಕುಂದಾಪ್ರ ಡಾಟ್ ಕಾಂ ಮಾಹಿತಿ. ಮಾಹಿತಿ ಇಲ್ಲಿದೆ ಹುದ್ದೆಗಳ ವಿವರ ಹಾಗೂ ಅರ್ಜಿ ಸಲ್ಲಿಸಲು ಕೊನೆಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ತಗ್ಗರ್ಸೆ ಮೊಗವೀರ ಗರಡಿ 17ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಮೊಗವೀರ ಆಯ್ಕೆಯಾಗಿದ್ದಾರೆ. ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ವೆಂಕಟರಮಣ ದೇವಾಡಿಗ, ಉಪಾಧ್ಯಕ್ಷರಾಗಿ ಹರೀಶ್ ಎಚ್. ಎಂ., ನಾಗರಾಜ ದೇವಾಡಿಗ, ಮಹೇಶ್ ಗಾಣಿಗ, ಮಂಜುನಾಥ ದೇವಾಡಿಗ, ಪ್ರಮೋದ್ ಪೂಜಾರಿ ಆಯ್ಕೆಯಾಗಿದ್ದರೇ ಕಾರ್ಯದರ್ಶಿಯಾಗಿ ಅಭಿಲಾಷ್ ಹೆಚ್., ಸತ್ಯನಾರಾಯಣ, ವಾಸುದೇವ್, ರವೀಂದ್ರ ಬಿ. ಆಯ್ಕೆಗೊಂಡಿದ್ದಾರೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕು ಕೇಂದ್ರದಿಂದ ಕೇವಲ ೭ಕಿ.ಮೀ ದೂರವಿರುವ ಅನಾದಿ ಕಾಲದಿಂದಲೂ ಎಲ್ಲ ರೀತಿಯ ವ್ಯಾಪಾರ, ಸೌಲಭ್ಯಗಳಿಗೆ ಕುಂದಾಪುರವನ್ನು ಆಶ್ರಯಿಸಿರುವ ಕಟ್ಬೆಲ್ತೂರು ಗ್ರಾಮವನ್ನು ೨೦ ಕಿ. ಮೀ ದೂರದಲ್ಲಿರುವ ಯಾವುದೇ ಸಮರ್ಪಕ ಸಾರಿಗೆ ಸೌಲಭ್ಯದ ಅನುಕೂಲವಿಲ್ಲದ ಕಂಡ್ಲೂರು ಗ್ರಾಮಾಂತರ ಆರಕ್ಷಕ ಠಾಣೆ ವ್ಯಾಪ್ತಿಗೆ ಸೇರಿಸಿರುವುದು ಅವೈಜ್ಞಾನಿಕ ಕ್ರಮವೆಂದು ಕಟ್ಬೆಲ್ತೂರು ಗ್ರಾಮಸ್ಥರು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿಯವರಿಗೆ ಮನವಿ ಸಲ್ಲಿಸಿದ್ದಾರೆ. ಕಟ್ಬೆಲ್ತೂರು ಗ್ರಾಮವನ್ನು ಕಂಡ್ಲೂರು ಗ್ರಾಮಾಂತರ ಆರಕ್ಷಕ ಠಾಣೆ ವ್ಯಾಪ್ತಿಗೆ ಸೇರಿಸುವ ಯತ್ನ ದೋಷಪೂರಿತವಾಗಿದ್ದು ಮುಂದೊಂದು ದಿನ ಅಪಾಯಕಾರಿಯಾಗಬಲ್ಲದು. ಕಟ್ಬೆಲ್ತೂರು ದೈನಂದಿನ ಬೇಕು ಬೇಡಗಳಿಗೆ ಕಾರ್ಯ ಕಲಾಪಗಳಿಗೆ ಕುಂದಾಪುರವನ್ನು ಅವಲಂಭಿಸಿದ್ದು ಎಲ್ಲ ರೀತಿಯಿಂದಲೂ ಅನುಕೂಲದಿಂದ ಕೂಡಿದೆ ಆದರೆ ಇದೀಗ ಏಕಾಏಕಿ ಕಂಡ್ಲೂರು ಠಾಣೆ ವ್ಯಾಪ್ತಿಗೆ ತರುವ ಪ್ರಯತ್ನ ಅಸಂಬದ್ದವಾಗಿದ್ದು ಯಾವುದೇ ಕಾರಣಕ್ಕೂ ಕಂಡ್ಲೂರು ಠಾಣೆ ವ್ಯಾಪ್ತಿಗೆ ಸೇರಿಸುವುದು ಸಾಧುವಲ್ಲ ಈ ಭಾಗದ ಜನರಿಗೆ ಅನ್ಯಾಯ ಮಾಡಿದಂತಾಗುತ್ತದೆ ಆದುದರಿಂದ ತಕ್ಷಣ ಈ ಪ್ರಯತ್ನವನ್ನು ಹಿಂಪಡೆಯುವಂತೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಜೀವನ ಮೌಲ್ಯಗಳ ಕುರಿತು ಕೇಳಿದರೆ ಮತ್ತು ಅವುಗಳ ಅರಿವು ಗಳಿಸಿಕೊಂಡರೆ ಅದರಿಂದ ಯಾವ ಪ್ರಯೋಜನವೂ ಆಗದು. ಮೌಲ್ಯಗಳಿಗೆ ಮತ್ತು ಬದುಕಿಗೆ ಅರ್ಥ ಬರುವುದು ವ್ಯಕ್ತಿಗಳು ಅವುಗಳನ್ನು ನಡೆ, ನುಡಿಗಳಲ್ಲಿ ಅನುಸರಿಸಿದಾಗ ಮಾತ್ರ ಎಂದು ಕುಂದಾಪುರ ಹೋಲಿ ರೋಸರಿ ಚರ್ಚ್ನ ಸಹಾಯಕ ಧರ್ಮಗುರು ಫಾ. ಜೆರಾಲ್ಡ್ ಸಂದೀಪ್ ಡಿಮೆಲ್ಲೊ ಹೇಳಿದರು. ನಾವುಂದ ರಿಚರ್ಡ್ ಆಲ್ಮೇಡಾ ಮೆಮೋರಿಯಲ್ ಕಾಲೇಜು ಮರವಂತೆಯ ಸಾಧನಾ ಸಮುದಾಯ ಭವನದ ವಿ. ಕೆ. ಕಾಮತ್ ಸಭಾಗೃಗೃಹದಲ್ಲಿ ಶನಿವಾರ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಜೀವನ ಮೌಲ್ಯ ಶಿಕ್ಷಣ ಶಿಬಿರವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ಸಂಚಾಲಕ ಸಿಲ್ವೆಸ್ಟರ್ ಆಲ್ಮೇಡಾ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ರೇಷ್ಮಾ ಎಸ್. ಶೆಟ್ಟಿ ಸ್ವಾಗತಿಸಿದರು. ಪ್ರಾಂಶುಪಾಲ ಎಸ್. ನಾರಾಯಣ ರಾವ್ ಪ್ರಾಸ್ತಾವಿಕ ನುಡಿಗಳನ್ನಾಡಿ ಶಿಬಿರದ ಉದ್ದೇಶ ಮತ್ತು ಅಗತ್ಯವನ್ನು ವಿವರಿಸಿದರು. ನಿರೂಪಿಸಿದ ರೆನಿಟಾ ವಂದಿಸಿದರು. ಶಿಬಿರದಲ್ಲಿ ಫಾ. ಜೆರಾಲ್ಡ್ ಸಂದೀಪ್ ಡಿಮೆಲ್ಲೊ ’ಪ್ರಸ್ತುತ ಜೀವನ ಮೌಲ್ಯಗಳು’ ಕುರಿತು, ಶಿವಮೊಗ್ಗದ…
