Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ | ಝೆನ್ ಕಥೆಗಳು ನಿಜವಾದ ದಾರಿ ನಿನಕ್ಯು ಕೊನೆಯುಸೆರೆಳೆಯುವುದಕ್ಕೆ ಮುಂಚೆ ಝೆನ್ ಗುರು ಇಕ್ಯು ಅವರನ್ನು ಭೇಟಿ ಮಾಡಿದರು. ‘ನಾನು ನಿನ್ನನ್ನು ಮುನ್ನಡೆಸಬೇಕೇ?’ ಎಂದು ಗುರುಕ ಕ್ಯು ಕೇಳಿದರು. ಆಗ ನಿನಕ್ಯು, ‘ನಾನು ಏಕಾಂಗಿಯಾಗಿಬಂದಿದ್ದೇನೆ, ಏಕಾಂಗಿಯಾಗೇ ಹೋಗುತ್ತೇನೆ. ನೀವು ನನಗೆ ಹೇಗೆ ನೆರವು ನೀಡಲು ಸಾಧ್ಯ?’ ಇಕ್ಯು ಉತ್ತರಿಸಿದರು, ‘ನೀನು ನಿಜವಾಗಿಯೂ ಬರುತ್ತೇನೆ ಹಾಗೂ ಹೋಗುತ್ತೇನೆ ಎಂದು ಭಾವಿಸುವುದಾದರೆ ಅದು ನಿನ್ನ ಭ್ರಮೆ. ಆಗಮನ ಹಾಗೂ ನಿರ್ಗಮನ ಇಲ್ಲದ ದಾರಿಯನ್ನು ನಾನು ತೋರಿಸುತ್ತೇನೆ,’ ಈ ಮಾತಿನೊಂದಿಗೆ ಇಕ್ಯು ಎಷ್ಟು ಸ್ಪಷ್ಟವಾಗಿ ದಾರಿ ತೋರಿಸಿದರು ಎಂದರೆ, ನಿನಕ್ಯು ಮುಗುಳ್ನಕ್ಕ ಹಾಗೂ ಕೊನೆಯುಸಿರೆಳೆದ. ಶಿಲಾ ಬುದ್ಧನ ಬಂಧನ ಓರ್ವ ವರ್ತಕ ಹತ್ತಿ ಸುರುಳಿಗಳನ್ನು ಹೊತ್ತುಕೊಂಡು ಪ್ರಯಾಣ ಬೆಳೆಸುತ್ತಿದ್ದ. ಬಿಸಿಲೇರಿದ್ದರಿಂದ ಬಳಲಿದ ಆತ, ಬೃಹತ್ ಬುದ್ಧನ ವಿಗ್ರಹದ ಅಡಿಯಲ್ಲಿ ಆಶ್ರಯ ಪಡೆದ. ಸ್ವಲ್ಪ ಹೊತ್ತಿನ ನಂತರ ಎದ್ದು ನೋಡಿದಾಗ ಆತನ ಸರಕು ಕಳುವಾಗಿತ್ತು. ತಕ್ಷಣ ಆತ ಪೊಲೀಸರಿಗೆ ದೂರು ನೀಡಿದೆ. ನ್ಯಾಯಾಧೀಶ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ತಾಲೂಕಿನ ಒಂದು ಗ್ರಾಮ ಪಂಚಾಯತ್‌ಗೆ ಕೊಡಮಾಡುವ ’ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ಕುಂದಾಪುರ ತಾಲೂಕು ವಂಡ್ಸೆ ಗ್ರಾಮ ಪಂಚಾಯತ್ ಆಯ್ಕೆಯಾಗಿದೆ. ವಂಡ್ಸೆ ಗ್ರಾಮ ಪಂಚಾಯತ್ ಬಯಲು ಶೌಚಮುಕ್ತ ಗ್ರಾಮವಾಗಿದ್ದು ಶೇ.100ಮನೆಗಳಲ್ಲಿಯೂ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಶೇ.100 ತೆರಿಗೆ ವಸೂಲಾತಿ, ಲೆಕ್ಕಪರಿಶೋಧನಾ ವರದಿಯಲ್ಲಿ ಪರಿಪೂರ್ಣತೆ, ಉದ್ಯೋಗ ಖಾತರಿ ಯೋಜನೆಯ ಸಮರ್ಪಕ ಅನುಷ್ಠಾನ, ಪ್ರತಿಮನೆಗೂ ಉತ್ತಮ ರಸ್ತೆ ಸೌಕರ‍್ಯ, ಕಾಂಕ್ರೆಟ್ ರಸ್ತೆ ನಿರ್ಮಾಣ, ವಸತಿ ಯೋಜನೆ ಸಮರ್ಪಕ ಅನುಷ್ಠಾನ, ಸಂಜೀವಿನಿ ಯೋಜನೆಯ ಮೂಲಕ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳಿಗೆ ಸಾಲ ಸೌಲಭ್ಯ, ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ, ಪ್ರತಿಮನೆಗೂ ಮೀಟರ್ ಅಳವಡಿಕೆ ಮೂಲಕ ಕುಡಿಯುವ ನೀರು ಸರಬರಾಜು ಯೋಜನೆ ಚಾಲ್ತಿ, ಘನತ್ಯಾಜ್ಯ ವಿಲೇವಾರಿಗೆ ಸಿದ್ಧಪಡಿಸಲಾದ ರೂಪುರೇಷೆ , ಸಮರ್ಪಕ ಜೋಡಿ ಲೆಕ್ಕ ನಿರ್ವಹಣೆ, 14ನೇ ಹಣಕಾಸು ಹಾಗೂ ಶಾಸನಬದ್ಧ ಅನುದಾನಗಳ ವಿನಿಯೋಗ, ಪಂಚತಂತ್ರ ನಿರ್ವಹಣೆ, ಸಕಾಲ ಸೇವೆ, ಮಾಹಿತಿ ಹಕ್ಕು ಸೇವೆ, ಸಂಪನ್ಮೂಲ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಹಿಳಾ ವೇದಿಕೆಯ ಆಶ್ರಯದಲ್ಲಿ ‘ಕುಂದಾಪುರದ ಮಹಿಳಾ ಉದ್ಯಮಿಗಳೊಂದಿಗೆ ಸಂವಾದ’ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಹಿಳಾ ವೇದಿಕೆಯ ಸದಸ್ಯೆ ಗೀತಾ ಪ್ರಭು ಸಂಶೋಧನಾ ಪ್ರಬಂಧ “ವುಮನ್ ಎಂಟರಪ್ರಿನರ್ಶಿಪ್ ಇನ್ ಕುಂದಾಪುರ” ಕುರಿತು ವಿವರಸಿ ಮಾತನಾಡಿ ಮಹಿಳೆಯಾದವಳು ತನ್ನ ಜೀವನದಲ್ಲಿ ಎಲ್ಲಾ ನಿರ್ಧಾರಕ್ಕೂ ಬೇರೆಯವರ ಮೇಲೆ ಅವಲಂಬಿತವಾಗಬಾರದು. ಅವರಿಗೂ ತನ್ನ ಜೀವನವನ್ನು ನಿರ್ಧರಿಸುವ ಹಕ್ಕಿದೆ ಎಂದು ಅಭಿಪ್ರಾಯಪಟ್ಟರು. ಉದ್ಯಮಿ ಶರ್ಮಿಳಾ ಮಾತನಾಡಿ ಸಂಸಾರ, ಸಮಾಜದಿಂದ ಯಾವುದೇ ಬೆಂಬಲವಿಲ್ಲದೇ ತನ್ನ ಜೀವನದಲ್ಲಿ ನಾನೇನಾದರೂ ಸಾಧನೇ ಮಾದಬೇಕೆಂದು ನನ್ನದೇ ಆದ ಗಾರ್ಮೇಂಟ್ ಉದ್ಯಮವನ್ನು ಆರಂಭಿಸಿದೆ. ಅದರಲ್ಲಿ ಯಶಸ್ಸನ್ನು ಸಹ ಪಡೆದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ಮಹಿಳಾ ಉದ್ಯಮಿಗಳಾದ ಸಹನಾ.ಆರ್.ಶೆಟ್ಟಿ, ಮಹಿಮಾ, ರೇಖಾ ಕಾರಂತ್, ಶುಭಾ, ಜುಲಿಯಸ್, ಸುಮನ್ ಡಿ.ಪ್ರಭು, ನಯನಾ ಕಾಮತ್ ಮತ್ತು ಮಹಿಳಾ ವೇದಿಕೆಯ ಸಂಯೋಜಕರಾದ ಡಾ.ಯಶವಂತಿ ಕೆ. ಉಪಸ್ಥಿತರಿದ್ದರು. ವಿದ್ಯಾರ್ಥಿನಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೋಟರಿ ಇಂಡಿಯಾ ಲಿಟ್ರಸಿ ಮಿಷನ್ ಅಡಿಯಲ್ಲಿ ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ವತಿಯಿಂದ ನೇಷನ್ ಬಿಲ್ಡರ್ ಪ್ರಶಸ್ತಿಯನ್ನು ಕುಂದಾಪುರ ಸರಕಾರಿ ಪ. ಪೂ ಕಾಲೇಜಿನ ಉಪಪ್ರಾಂಶುಪಾಲರಾದ ಅರುಣಕುಮಾರ್ ಶೆಟ್ಟಿಯವರಿಗೆ ಪ್ರಧಾನಿಸಲಾಯಿತು. ಸನ್‌ರೈಸ್ ಕ್ಲಬ್ ಹಾಲ್‌ನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ರೋಟರಿ ಸನ್‌ರೈಸ್‌ನ ಅಧ್ಯಕ್ಷರಾದ ಕೆ. ನರಸಿಂಹ ಹೊಳ್ಳ ಸ್ವಾಗತಿಸಿದು. ಸ್ಥಾಪಕಾಧ್ಯಕ್ಷರಾದ ದಿನಕರ ಆರ್. ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಕೆ.ಎಸ್. ಮಂಜುನಾಥ ಸನ್ಮಾನಿತರನ್ನು ಪರಿಚಯಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅರುಣ ಕುಮಾರ ಶೆಟ್ಟಿಯವರು ರೋಟರಿಯಂತಹ ಅಂತರಾಷ್ಟ್ರೀಯ ಸಂಸ್ಥೆಯ ಈ ಗೌರವ, ನನ್ನನ್ನು ಇನ್ನಷ್ಟು ಹೆಚ್ಚು ಪಾವಿತ್ರ್ಯತೆಯಿಂದ ಶಿಕ್ಷಕ ವೃತ್ತಿ ನಿಭಾಯಿಸಲು ಪ್ರೇರಣೆ ನೀಡಿದೆ ಎಂದರು. ಕಾರ್ಯದರ್ಶಿ ನಾಗೇಶ ನಾವುಡ ವಂದಿಸಿದರು. ಸದಸ್ಯರಾದ ಸದಾನಂದ ಉಡುಪ, ಉಲ್ಲಾಸ ಕ್ರಾಸ್ತ, ಬಿ.ಎಂ. ಚಂದ್ರಶೇಖರ, ಸತೀಶ ಎನ್. ಶೇರೆಗಾರ್, ಎಲ್.ಜೆ. ಫೆರ್ನಾಂಡೀಸ್, ಕೆ.ಹೆಚ್. ಚಂದ್ರಶೇಖರ, ಗಜಾನನ ಭಟ್, ಕಲ್ಪನಾ ಭಾಸ್ಕರ ಮತ್ತಿತರರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಬಿಲ್ಲವ ಸಮಾಜ ಸೇವಾ ಸಂಘ ಇದರ ಇಧೀನ್ ಘಟಕ ಕುಂದಾಪುರ ತಾಲೂಕು ಬಿಲ್ಲವ ಮಹಿಳಾ ಘಟಕ ಎರಡು ವರ್ಷ ಅಧಿಗೆ ಅಧ್ಯಕ್ಷೆಯಾಗಿ ಕುಂದಾಪುರ ಲಯನೆಸ್ ಕ್ಲಾಬ್ ಮಾಜಿ ಅಧ್ಯಕ್ಷಕೆ ವೀಣಾ ರಾಜೀವ ಕೋಟ್ಯಾನ್ ಆಯ್ಕೆ ಆಗಿದ್ದಾರೆ. ಉಪಾಧ್ಯಕ್ಷರು-ಪ್ರೇಮಾ ಆನಂದ್, ಅನುಪಮಾ ಕಿಶೋರ್, ಕುಸುಮಾ ಗೋಪಾಲ್, ಗಿರಿಜಾ ಮಾಣಿ ಗೋಪಾಲ್, ಕಾರ‍್ಯದರ್ಶಿ-ಸೀಜಾ ಸುರೇಶ್ ಸಾಲ್ಯಾನ್, ಜೊತೆ ಕಾರ‍್ಯದರ್ಶಿ-ಸುನೇತ್ರಾ ಸತೀಶ್ ಕೋಟ್ಯಾನ್, ಖಜಾಂಚಿ-ಶೋಭಾ ಮೋಹನ್ ಪೂಜಾರಿ, ಕ್ರೀಡಾ ಕಾರ‍್ಯದರ್ಶಿ-ಗುಲಾಬಿ ಜಯಸೂರ್ಯ, ಕಮಲಾ ಶ್ರೀನಿವಾಸ್, ಶೋಭಾ ಬಸವ ಪೂಜಾರಿ, ಶೈಲಾ ಗಂಗಾಧರ್, ಸಾಂಸ್ಕೃತಿಕ ಕಾರ‍್ಯದರ್ಶಿ-ಸುಗುಣಾ ಮಹಾಬಲ, ಲಲಿತಾ ಭಾಸ್ಕರ್, ಶರ್ಮಿಳಾ, ಸುಧಾ ರತ್ನಾಕರ್, ಸಂಘಟನಾ ಕಾರ‍್ಯದರ್ಶಿ-ಕಾವೇರಿ, ಸುಶೀಲಾ, ಆನಂದಿ, ಸುಶೀಲಾ ಶಂಕರ್, ಗೌರವ ಸಲಹೆಗಾರರು-ಕುಂದಾಪುರ ಪುರಸಭೆ ಕೌನ್ಸಿಲರ್ ಗುಣರತ್ನಾ, ಗೋಪಾಡಿ ಗ್ರಾಪಂ ಉಪಾಧ್ಯಕ್ಷೆ ಕಲ್ಪನಾ ಭಾಸ್ಕರ್, ಹೇಮಾ ಬಾಬು ಪೂಜಾರಿ, ಕುಂಭಾಶಿ ಗ್ರಾಪಂ ಸದಸ್ಯೆ ರಾಧಾದಾಸ್, ಲಲಿತಾ ಸುವರ್ಣ, ಶಶಿಕಲಾ ಬಿಜೂರು ಆಯ್ಕೆ ಆಗಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರದ ಶ್ರೀ ಬಗಳಾಂಬ ತಾಯಿ ದೇವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷರಾಗಿ ಕೆ.ಬಿ. ಪ್ರಕಾಶ್ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಸೀತಾರಾಮ್ ಹೇರಿಕುದ್ರು, ಉಪಾಧ್ಯಕ್ಷರಾಗಿ ರಾಜ ಮಠದಬೆಟ್ಟು, ಕಾರ್ಯದರ್ಶಿಯಾಗಿ ರಮೇಶ ಮಕ್ಕಿ ಹಳೆಅಳಿವೆ, ಜೊತೆ ಕಾರ್ಯದರ್ಶಿಯಾಗಿ ಶರತ್ ಕೋಟೇಶ್ವರ, ಲೆಕ್ಕ ಪರಿಶೋಧಕರಾಗಿ ಸಂತೋಷ ಕೋಟೇಶ್ವರ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುಧೀರ್ ಕೃಷ್ಣ, ಸಂಘಟನಾ ಕಾರ್ಯದರ್ಶಿಯಾಗಿ ಉದಯ, ಮುಖ್ಯ ಸಲಹೆಗಾರರಾಗಿ ಚಂದ್ರಶೇಖರ, ಕರುಣಾಕರ, ಜನಾರ್ಧನ, ಸುರೇಶ ರೋಯಲ್, ನಾಗರಾಜ, ಸದಸ್ಯರಾಗಿ ಗಣೇಶ ಡಿ. ನಾಯಕ್, ಸುಧೀರ್ ಬಿ. ಕುಂದರ್, ರತ್ನಾಕರ ಗಾಣಿಗ, ಅಣ್ಣಯ್ಯ ಹೋಬಳಿದಾರ್, ಗಣೇಶ ವಡೇರಹೋಬಳಿ, ರಘು, ಕಿರಣ್ ಮೆಂಡನ್, ನಿತ್ಯಾನಂದ, ವಿಜೇಂದ್ರ, ಪ್ರಜ್ವಲ್, ದೀಕ್ಷಿತ್, ಪವನ್, ರಂಜಿತ್, ರಾಜೇಂದ್ರ ಶೇಟ್, ರಾಘವೇಂದ್ರ ಕೋಟೇಶ್ವರ, ವೀಣಾ ಪ್ರಕಾಶ, ವಿನಯ ಹೇರಿಕುದ್ರು, ಪೂರ್ಣಿಮಾ ಕೋಟೇಶ್ವರ, ಸುಶೀಲ ಮರವಂತೆ, ರತ್ನ ಕೋಟೇಶ್ವರ ಆಯ್ಕೆಯಾದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಈ ಕಾಲಘಟ್ಟದಲ್ಲಿ ಸರಕಾರ ಕ್ರೀಡೆಗೆ ನೀಡುತ್ತಿರುವ ಬೆಂಬಲ ಬಹಳ ಕಡಿಮೆ. ಆ ನಿಟ್ಟಿನಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳು ಮುಖ್ಯವಾಗಿ ಶಿಕ್ಷಣ ಸಂಸ್ಥೆಗಳು ಬೆಂಬಲ ನೀಡಬೇಕು ಎಂದು ಉಪ್ಪುಂದ ಯುವ ಉದ್ಯಮಿ ಬಿ.ಎಸ್ ಸುರೇಶ ಶೆಟ್ಟಿ ಹೇಳಿದರು. ಕುಂದಾಪುರ ಗಾಂಧಿ ಮೈದಾನದಲ್ಲಿ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜು ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಕಬ್ಬಡಿ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು. ಕುಂದಾಪುರ ಎಜುಕೇಶ್ನ್ ಸೊಸೈಟಿ ಅಧ್ಯಕ್ಷ ಬಿ.ಎಂ. ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿ, ನಮ್ಮ ನಾಲ್ಕು ಸಂಸ್ಥೆಯಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡೆಗೆ ಪ್ರಾಮುಖ್ಯತೆ ನೀಡುತ್ತಿದು, ವಿದ್ಯಾರ್ಥಿಗಳು ಸಂಸ್ಥೆ ನೀಡುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆ ಎಂದರು. ಕುಂದಾಪುರ ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಚಟುವಟಿಕೆಗಳ ಸಂಚಾಲಕ ನಾಗರಾಜ ಶೆಟ್ಟಿ, ಕುಂದಾಪುರ ಎಜ್ಯುಕೇಶನ್ ಸೊಸೈಟಿ ಕಾರ್ಯದರ್ಶಿ ಸೀತಾರಾಮ ನಕ್ಕತ್ತಾಯ ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಬಿ ನಾಯಕ್ ಶುಭಾಶಂಸನೆ ಮಾಡಿದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಎಲ್ಲೆಲ್ಲೂ ಅಸ್ಪೃಷ್ಯಹತೆ ತಾಂಡವಾಡುತ್ತಿದ್ದ ಕಾಲಘಟ್ಟದಲ್ಲಿ ಅವರ್ಣಿಯರು ದೇವಸ್ಥಾನ ಪ್ರವೇಶ ನಿಷೇಧ ನಡುವೆಯೂ ದೇವಸ್ಥಾನಗಳ ಸ್ಥಾಪಿಸಿ, ಮೌನ ಕ್ರಾಂತಿ ಮೂಲಕ ಸಾಮಾಜಿಕ ನ್ಯಾಯ ಎತ್ತಿಹಿಡಿದ ಮಹಾನ್ ಮಾನವತಾವಾದಿ ಬ್ರಹ್ಮಶ್ರೀ ನಾರಾಯಣಗುರು ಎಂದು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಕುಂದಾಪುರ ತಾಲೂಕು ಆಡಳಿತ, ರಾಷ್ರೀಯ ಹಬ್ಬಗಳ ದಿನಾಚರಣಾ ಸಮಿತಿ, ಕುಂದಾಪುರ ತಾಲೂಕು ಪಂಚಾಯತ್ ಆಶ್ರಯದಲ್ಲಿ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಶ್ರೀ ನಾರಾಯಣಗುರು ಜಯಂತಿ ಉದ್ಘಾಟಿಸಿ, ಮಾತನಾಡುತ್ತಿದ್ದರು. ಶ್ರೀ ನಾರಾಯಣ ಗುರು ಬಿಲ್ಲವ ಸಮುದಾಯಕ್ಕೆ ಸೀಮಿತವಾಗಿರದೆ, ದೀನ-ದಲಿತರ, ಹಿಂದುಳಿದವರ ಗುರುವಾಗಿದ್ದರು. ಶಿಕ್ಷಣಿಕ, ಸಮಾಜಿಕ ಹಾಗೂ ಆರ್ಥಿಕ ಪರಿವರ್ತನೆ ಮೂಲಕ ಸಮಾಜಕ್ಕೆ ಸಮಾನತೆ ಸಾರಾ ಬೋಧಿಸಿದರು. ಅವರ ತತ್ವ ಸಿದ್ದಾಂತ ಬದುಕಿನಲ್ಲಿ ಅಳವಡಿಸಿಕೊಂಡು ನಡೆದಾಗ ಮಾತ್ರ ಅದಕ್ಕೊಂದು ಅರ್ಥ ಬರುತ್ತದೆ. ಈ ನಿಟ್ಟಿನಲ್ಲಿ ಸರಕಾರ ವತಿಯಿಂದ ಶ್ರೀ ನಾರಾಯಣ ಗುರು ಜಯಂತಿ ಆಚರಣೆ ಅಭಿನಂದೀಯ ಎಂದರು. ಕುಂದಾಪುರ ತಾಲೂಕು ಪಂಚಾಯತ್ ಅಧ್ಯಕ್ಷೆ ಜಯಶ್ರೀ ಸುಧಾಕರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಬಾಷೆ ಮತ್ತು ಸಾಹಿತ್ಯದ ಬೆಳವಣಿಗೆಯಲ್ಲಿ ಸರ್ವರ ಹಿತವೂ ಅಡಗಿದೆ.ಮಾನವೀಯತೆಯ ಬಾಷೆ ನಮ್ಮದಾಗಬೇಕು.ಸಾಹಿತ್ಯದಿಂದ ಮಹಾಮಾನವರಾಗುವ ಚಮತ್ಕಾರ ಸಾಧ್ಯವಿದೆ. ಮಾತೃಬಾಷೆಯ ಮೇಲಿರುವಷ್ಟೆ ಗೌರವ ಅಭಿಮಾನ ರಾಷ್ಟ್ರಬಾಷೆಯ ಬಗೆಗೆ ಕೂಡ ಇರಬೇಕು ಎಂದು ಕುಂದಾಪುರದ ಭಂಡಾರ್‌ಕರ‍್ಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ. ಎಮ್. ಗೊಂಡ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ರೋಟರಿ ಸಭಾಂಗಣದಲ್ಲಿ ಭಾರತ ಸರಕಾರದ ಯುವ ಕಾರ‍್ಯಾಲಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಉಡುಪಿ, ಡಾ.ಬಿ.ಆರ್ ಅಂಬೇಡ್ಕರ್ ಯುವಕ ಮಂಡಲ (ರಿ)ಗಂಗೊಳ್ಳಿ ಮತ್ತು ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಹಿಂದಿ ದಿನಾಚರಣೆ ಕಾರ‍್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ನಮ್ಮ ದಿನನಿತ್ಯದ ಪ್ರಾರ್ಥನೆಯಲ್ಲಿ ನಮ್ಮ ದೇಶ ಭಾಷೆಯನ್ನು ಉಳಿಸುವ ಕಾಯುವ ಸೈನಿಕರನ್ನು ಸ್ಮರಿಸಿಕೊಳ್ಳಬೆಕು ಅವರ ಕ್ಷೇಮಕ್ಕಾಗಿ ಪ್ರಾರ್ಥಿಸಬೇಕು ಎಂದು ಅವರು ಹೇಳಿದರು, ಸರಸ್ವತಿ ವಿದ್ಯಾಲಯದ ಹಿಂದಿ ಉಪನ್ಯಾಸಕ ನಾರಾಯಣ ಈ ನಾಯ್ಕ್ ,ಯುವಕ ಮಂಡಲದ ಅಧ್ಯಕ್ಷ ಕಿರಣ್ ಉಪಸ್ಥಿತರಿದ್ದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ಅನಂತ ಚತುರ್ದಶಿ ವೃತಾಚರಣೆ ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆ ಶ್ರೀ ದೇವತಾ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ ಕೋಟಿ ತೀರ್ಥದಲ್ಲಿ ಗಂಗಾಪೂಜೆ, ಶೇಷಪೂಜೆ, ನಂತರ ಅನಂತ ಕಲಶವನ್ನು ಪುರಮೆರವಣಿಗೆಯೊಂದಿಗೆ ದೇವಳಕ್ಕೆ ತಂದು ಸ್ಥಾಪಿಸಿ ಕಲ್ಪೋಕ್ತ ಪೂಜೆ,ಗ್ರಂಥಿ ಪೂಜೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಚತುರ್ದಶ ನಮಸ್ಕಾರಗಳು,ಮಹಾ ಸಂತರ್ಪಣೆ ನಡೆದವು. ರಾತ್ರಿ ಅಷ್ಟಾವಧಾನ ಸೇವೆ ಜರಗಿತು. ಧಾರ್ಮಿಕ ವಿಧಿವಿಧಾನ ದೇವಳದ ಅರ್ಚಕರಾದ ವೇ.ಮೂ.ಶ್ರೀನಿವಾಸ ಭಟ್ ಹಾಗೂ ವೇ.ಮೂ.ಪ್ರಶಾಂತ ಭಟ್ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ನಡೆದವು. ಈ ಸಂಧರ್ಭದಲ್ಲಿ ದೇವಳದ ಮೋಕ್ತೇಸರರು,ಹತ್ತು ಸಮಸ್ತರು ಹಾಗೂ ಸಮಾಜ ಭಾಂದವರು ಉಪಸ್ಥಿತರಿದ್ದರು. ಗಂಗೊಳ್ಳಿ : ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅನಂತ ಚತುರ್ದಶೀ ವೃತಾಚರಣೆಯಂದು ಅಲಂಕೃತ ದೇವರು.

Read More