ಕುಂದಾಪುರದ ಮಹಿಳಾ ಉದ್ಯಮಿಗಳೊಂದಿಗೆ ಸಂವಾದ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಹಿಳಾ ವೇದಿಕೆಯ ಆಶ್ರಯದಲ್ಲಿ ‘ಕುಂದಾಪುರದ ಮಹಿಳಾ ಉದ್ಯಮಿಗಳೊಂದಿಗೆ ಸಂವಾದ’ ಕಾರ್ಯಕ್ರಮ ನಡೆಯಿತು.

Call us

Click Here

ಕಾರ್ಯಕ್ರಮದಲ್ಲಿ ಮಹಿಳಾ ವೇದಿಕೆಯ ಸದಸ್ಯೆ ಗೀತಾ ಪ್ರಭು ಸಂಶೋಧನಾ ಪ್ರಬಂಧ “ವುಮನ್ ಎಂಟರಪ್ರಿನರ್ಶಿಪ್ ಇನ್ ಕುಂದಾಪುರ” ಕುರಿತು ವಿವರಸಿ ಮಾತನಾಡಿ ಮಹಿಳೆಯಾದವಳು ತನ್ನ ಜೀವನದಲ್ಲಿ ಎಲ್ಲಾ ನಿರ್ಧಾರಕ್ಕೂ ಬೇರೆಯವರ ಮೇಲೆ ಅವಲಂಬಿತವಾಗಬಾರದು. ಅವರಿಗೂ ತನ್ನ ಜೀವನವನ್ನು ನಿರ್ಧರಿಸುವ ಹಕ್ಕಿದೆ ಎಂದು ಅಭಿಪ್ರಾಯಪಟ್ಟರು.

ಉದ್ಯಮಿ ಶರ್ಮಿಳಾ ಮಾತನಾಡಿ ಸಂಸಾರ, ಸಮಾಜದಿಂದ ಯಾವುದೇ ಬೆಂಬಲವಿಲ್ಲದೇ ತನ್ನ ಜೀವನದಲ್ಲಿ ನಾನೇನಾದರೂ ಸಾಧನೇ ಮಾದಬೇಕೆಂದು ನನ್ನದೇ ಆದ ಗಾರ್ಮೇಂಟ್ ಉದ್ಯಮವನ್ನು ಆರಂಭಿಸಿದೆ. ಅದರಲ್ಲಿ ಯಶಸ್ಸನ್ನು ಸಹ ಪಡೆದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ಮಹಿಳಾ ಉದ್ಯಮಿಗಳಾದ ಸಹನಾ.ಆರ್.ಶೆಟ್ಟಿ, ಮಹಿಮಾ, ರೇಖಾ ಕಾರಂತ್, ಶುಭಾ, ಜುಲಿಯಸ್, ಸುಮನ್ ಡಿ.ಪ್ರಭು, ನಯನಾ ಕಾಮತ್ ಮತ್ತು ಮಹಿಳಾ ವೇದಿಕೆಯ ಸಂಯೋಜಕರಾದ ಡಾ.ಯಶವಂತಿ ಕೆ. ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಉದಾ ಅಲಿಯಾ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಶಿಲ್ಪಾ ಮತ್ತು ರೋಹಿಣಿ ವ್ಯಕ್ತಿ ಪರಿಚಯವನ್ನು ಮಾಡಿದರು.

Leave a Reply