Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತ್ಯಾಗ ಬಲಿದಾನಗಳ ಹಬ್ಬವೆಂದೇ ಪ್ರಸಿದ್ಧಿ ಪಡೆದ ಬಕ್ರೀದ್ ಹಬ್ಬವನ್ನು ಕುಂದಾಪುರ ತಾಲೂಕಿನಾದ್ಯಂತ ಮುಸ್ಲಿಂ ಭಾಂದವರಿಂದ ಸಡಗರದಿಂದ ಆಚರಿಸಲಾಯಿತು. ಶಿರೂರು, ಬೈಂದೂರು, ನಾವುಂದ, ಗಂಗೊಳ್ಳಿ, ಕುಂದಾಪುರ, ಕಂಡ್ಲೂರು, ಗುಲ್ವಾಡಿ ಸೇರಿದಂತೆ ತಾಲೂಕಿನ ಎಲ್ಲಾ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಯಮ ಮಾಡಿಕೊಂಡರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಇಲ್ಲಿನ ಕೋಡಿ ಕನ್ಯಾನದ ಮನೆಯ ಶೆಡ್‌ನಲ್ಲಿ ಮಾರಾಟ ಮಾಡುವ ಸಲುವಾಗಿ ದನ ಕಡಿದು ಮಾಂಸ ಮಾಡುತ್ತಿದ್ದವರನ್ನು ಮೂವರನ್ನು ಕೋಟ ಪೊಲೀಸ್‌ರು ಬಂಧಿಸಿದ್ದಾರೆ. ಶೆಡ್‌ನಲ್ಲಿ ಎರಡು ದನವನ್ನು ಕಡಿದು ಮಾಂಸ ಮಾಡುತ್ತಿದ್ದ ಮುನೀರ್, ಫಿರೋಝ್ ಮತ್ತು ಅಸ್ಲಾಂ ಎಂಬುವವರನ್ನು ಬಂಧಿಸಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಡಿ ಕನ್ಯಾನದ ಶನೀಶ್ವರ ದೇವಸ್ಥಾನದ ಬಳಿಯ ಮನೆಯೊಂದರಲ್ಲಿ ದನವನ್ನು ಕಡಿಯುವ ಕುರಿತು ಬಂದ ಮಾಹಿತಿ ಮೇರೆಗೆ ಕೋಟ ಪೊಲೀಸ್ ಉಪನಿರೀಕ್ಷಕ ಕಬ್ಬಾಳ್‌ರಾಜ್ ಎಚ್.ಡಿ. ಮತ್ತು ಸಿಬ್ಬಂದಿಗಳು ಮುನಿರ್ ಅವರ ಮನೆಯ ಶೆಡ್‌ಗೆ ತೆರಳಿ ತಪಾಸಣೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಒಟ್ಟು ಎರಡು ದನವನ್ನು ಕಡಿಯಲಾಗಿದ್ದು, ಒಂದು ದನವನ್ನು ಸಂಪೂರ್ಣ ಮಾಂಸ ಮಾಡಿದ್ದು, ಇನ್ನೊಂದನ್ನು ಮಾಂಸ ಮಾಡುವ ಸಿದ್ಧತೆಯಲ್ಲಿದ್ದಾಗ ಪೊಲೀಸ್‌ರಿಗೆ ಸಿಕ್ಕಿಬಿದ್ದಿದ್ದಾರೆ. ಬಕ್ರೀದ್ ಹಬ್ಬದ ಹಿನ್ನಲೆಯಲ್ಲಿ ಮಾಂಸ ಮಾಡಿ ಉದ್ದೇಶದಿಂದ ದನಗಳನ್ನು ಕಡಿಯಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇತಿಹಾಸ ಪ್ರಸಿದ್ಧ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ರಂಜಿತ್‌ಕುಮಾರ್ ಶೆಟ್ಟಿ ವಕ್ವಾಡಿ ನೇತೃತ್ವದಲ್ಲಿ ಶ್ರೀ ಕೃಪಾಪೋಷಿತ ಯಕ್ಷಗಾನ ಮಂಡಳಿ ಹಟ್ಟಿಯಂಗಡಿ ಮೇಳಕ್ಕೆ ಚಾಲನೆ ನೀಡಲಾಯಿತು. ಸಾಗರದ ಮಾಜಿ ಶಾಸಕ ಎಲ್.ಟಿ. ತಿಮ್ಮಪ್ಪ ಹೆಗ್ಡೆ ಅವರು ಯಕ್ಷಗಾನ ಮೇಳಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಯಕ್ಷಗಾನ ಸಂಶೋಧಕ ಪಾದೇಕಲ್ಲು ವಿಷ್ಣು ಭಟ್ ಮಾತನಾಡಿ ಯಕ್ಷಗಾನಕ್ಕೆ ಸಾಹಿತ್ಯ ಮಾನ್ಯತೆ ದೊರೆಯ ಬೇಕಿದೆ. ಯಕ್ಷಗಾನದ ಭಾಷಾ ಜ್ಞಾನ, ವೈಖರಿ ಅಗಾಧವಾಗಿದ್ದು ಕನ್ನಡದ ಸಾಹಿತ್ಯ ಜಗತ್ತನ್ನು ಶ್ರೀಮಂತಗೊಳಿಸೆದೆ ಆದುದರಿಂದ ಯಕ್ಷಗಾನ ಸಾಹಿತ್ಯವೆಂಬುದನ್ನು ಪರಿಗಣಿಸಬೇಕಾದ ಅಗತ್ಯವಿದೆ ಎಂದರು. ಶುಭಾಶಂಸನೆ ಮಾಡಿದ ಮಣಿಪಾಲ ಎಂ ಐ ಟಿಯ ಉಪನ್ಯಾಸಕ ಉದಯಕುಮಾರ ಶೆಟ್ಟಿ ಮಾತನಾಡಿ ಸಾಹಿತ್ಯಿಕ ಸಾಂಸ್ಕೃತಿಕ ನೆಲಗಟ್ಟಿನ ಹಟ್ಟಿಯಂಗಡಿಯಲ್ಲಿ ಉದಯವಾದ ಯಕ್ಷಗಾನ ಮೇಳ ಪೌರಾಣಿಕ ಪ್ರಸಂಗಗಳ ಮೂಲಕ ಜನಮಾನಸದಲ್ಲಿ ಅಚ್ಚಳಿಯದೇ ಉಳಿಯುವಂತಾಗಲಿ. ಯಕ್ಷಗಾನ ಕ್ಷೇತ್ರಕ್ಕೆ ಅನನ್ಯ ಸೇವೆ ಸಲ್ಲಿಸುವಂತಾಗಲಿ ಎಂದರು. ಈ ಸಂದರ್ಭದಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪುಸ್ತಕ ಎನ್ನುವುದು ಜ್ನಾನದ ತನ್ನದಾಗಿಸಿಕೊಳ್ಳುತ್ತಾನೆ. ಈ ಹವ್ಯಾಸವನ್ನು ವಿದ್ಯಾರ್ಥಿಗಳು ಕಾಲೇಜಿನ ದಿನದಿಂದಲೇ ಆರಂಭಿಸಬೇಕು. ಓದು ಎನ್ನುವುದು ಕೇವಲ ಪಠ್ಯಪುಸ್ತಕ, ಆಕರ ಗ್ರಂಥಗಳಿಗೆ ಸೀಮಿತವಾಗಬಾರದು. ಪ್ರತಿದಿನ ದಿನಪತ್ರಿಕೆಗಳಿಂದಲೇ ಓದನ್ನು ಆರಂಭಿಸಬೇಕು ಅಲ್ಲಿನ ಅಂಕಣ ಬರಹಗಳು, ಅಲ್ಲಿ ಪ್ರಕಟವಾಗುವ ಲೇಖನಗಳನ್ನು ಓದುತ್ತಾ ವಾರಪತ್ರಿಕೆ, ಮಾಸಪತ್ರಿಕೆ, ಕಥೆ ಕಾದಂಬರಿಗಳತ್ತ ಓದು ವಿಸ್ತಾರಗೊಳಿಸಬೇಕೆಂದು ಡಾ.ಚಂದ್ರಾವತಿ ಶೆಟ್ಟಿಯವರು ಹೇಳಿದರು. ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಕನ್ನಡ ವಿಭಾಗ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಹಮ್ಮಿಕೊಂಡ “ನನ್ನ ಮೆಚ್ಚಿನ ಪುಸ್ತಕ” ಕಾರ್ಯಕ್ರಮದಲ್ಲಿ ಮುಖ್ಯಾತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಓದುವ ಹವ್ಯಾಸವುಳ್ಳವರಿಗೆ ಅನುಭವದೊಂದಿಗೆ ಆತ್ಮವಿಶ್ವಾಸವು ಹೆಚ್ಚುತ್ತದೆ. ಅದು ಬದುಕಿನಲ್ಲಿ ತಲೀತ್ತಿ ನಡೆಯುವುದಕ್ಕೆ ಪ್ರೇರಣೆಯಾಗುತ್ತದೆ. ಎನ್ನುತ್ತಾ ಭಂಡಾರ್ಕಾರ್ಸ್ ಕಾಲೇಜಿನ ಪುಸ್ತಕ ಪ್ರೇಮಿಗಳ ಬಳಗ ಇನ್ನಷ್ಟು ವೃದ್ಧಿಯಾಗಲಿ. ನಿಸರ್ಗದ ಸೌಂದರ್ಯವನ್ನು ಸಮತೋಲನವನ್ನು ಗಿಳಿಗಳ ಬಳಗ ಹೆಚ್ಚಿಸುವಂತೆ ಪುಸ್ತಕ ಓದುವ ವಿದ್ಯಾರ್ಥಿಗಳ ಬಳಗ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಲಿ ಎಂದು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಡಾ.ಕೋಟ ಶಿವರಾಮ ಕಾರಂತರ ಕನಸು ನನಸು ಮಾಡುವ ದಾರಿಯಲ್ಲಿರುವ ಕೋಟತಟ್ಟು ಗ್ರಾಮ ಪಂಚಾಯಿತಿ ಉಡುಪಿ ಜಿಲ್ಲೆಯಲ್ಲಿ ಮಾತ್ರವಲ್ಲಿ ಇಡೀ ರಾಜ್ಯದಲ್ಲೆ ಮಾದರಿ ಗ್ರಾಮ ಪಂಚಾಯಿತಿಯಾಗಿ ರೂಪುಗೊಂಡಿದೆ. ಕಾರಂತರ ಸಾಹಿತ್ಯ ಥೀಂ ಪಾರ್ಕ ಮೂಲಕ ನಿತ್ಯ ನೂತನವಾಗುತ್ತಿರುವುದು ಸಂತಸದ ವಿಚಾರ ಎಂದು ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದರು. ಅವರು ಕೋಟ ಥೀಂ ಪಾರ್ಕನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಬೆಂಗಳೂರು, ಕೋಟತಟ್ಟು ಗ್ರಾಮ ಪಂಚಾಯಿತಿ, ಕೋಟ ಡಾ.ಶಿವರಾಮ ಕಾರಂತ ಪ್ರತಿಷ್ಠಾನ (ರಿ.) ಕೋಟ ಇವರ ಸಹಭಾಗಿತ್ವದಲ್ಲಿ ಆಯೋಜಿಸಲಾದ ಡಾ.ಶಿವರಾಮ ಕಾರಂತ ವಿಷಯಾಧಾರಿತ ರಾಜ್ಯಮಟ್ಟದ ಸಿಮೆಂಟ್ ಶಿಲ್ಪಕಲಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಇದೇ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ ೨೫ರಂದು ನಡೆಯಲಿರುವ ಪಂಚಾಯತ್ ಕ್ರೀಡಾ ಕೂಟ ಹೊಳಪು ಇದರ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಬೆಂಗಳೂರು ಇದರ ಅಧ್ಯಕ್ಷ ಮಹಾದೇವಪ್ಪ ಶಂಭುಲಿಂಗಪ್ಪ ಶಿಲ್ಪಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಂಸ್ಕೃತಿಯ ಪ್ರೀತಿ ಜೀವನದಲ್ಲಿ ಹೊಸ ಬದುಕನ್ನು ರೂಪಿಸುತ್ತದೆ. ಮಾನವೀಯ ಮೌಲ್ಯ ವೃದ್ಧಿಸಿ ಸಮಾಜಮುಖಿ ಚಿಂತನೆಗಳನ್ನು ಕಲ್ಪಿಸುತ್ತದೆ. ಅದೇ ರೀತಿ ಕೇವಲ ಪುಸ್ತಕದ ಜ್ಞಾನ ಜೀವನಕ್ಕೆ ಸಾಕಾಗುವುದಿಲ್ಲ. ಶಿಕ್ಷಣೇತರ ಚಟುವಟಿಕೆಗಳು ಜೀವನದದ್ದುಕ್ಕಕ್ಕೂ ನೆನಪಿನಲ್ಲಿ ಉಳಿದು ಸಾಂಸ್ಕೃತಿಕವಾಗಿ ಎಲ್ಲವನ್ನು ಎದುರಿಸುವ ಧೈರ್ಯ ತುಂಬಲು ಸಹಕಾರಿಯಾಗುತ್ತದೆ ಎಂದು ಮೀನುಗಾರಿಕಾ, ಯುವಜನ ಸೇವೆ, ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಬೈಂದೂರು ರತ್ತೂಬಾಯಿ ಜನತಾ ಪೌಢಶಾಲೆಯಲ್ಲಿ ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ನಡೆದ ಸಾಂಸ್ಕೃತಿಕ ಸೌರಭ ಉದ್ಘಾಟಿಸಿ ಮಾತನಾಡಿದರು. ಸಾಂಸ್ಕೃತಿಕ ಸಿರಿವಂತಿಕೆ ಪಡೆದ ಭಾರತದೇಶ ವಿಶ್ವದಲ್ಲಿ ಪ್ರಥಮ ಸ್ಥಾನದಲ್ಲಿದೆ. ಹಿಂದಿನವರಿಂದ ಪರಂಪರಾಗತವಾಗಿ ಬಂದಿರುವ ಹಲವು ಕಲೆಗಳನ್ನು ಮುಂದಿನ ಪೀಳಿಗೆಯವರೆಗೂ ವಿಸ್ತರಿಸುವ ನಿಟ್ಟಿನಲ್ಲಿ ಸರಕಾರ ಇಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಹೊಸ ಪ್ರತಿಭೆಗಳಗೆ ಉತ್ತೇಜನ ನೀಡುತ್ತಿದೆ. ಇದು ಕೇವಲ ಮನರಂಜನೆ ಮಾತ್ರ ಸೀಮಿತಗೊಳಿಸದೇ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಶಾಸಕ ಕೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಕ್ವಾಡಿಯಲ್ಲಿನ ಗುರುಕುಲ ಪಬ್ಲಿಕ್ ಸ್ಕೂಲ್‌ನಲ್ಲಿ ಸಾಹಿತ್ಯ ಮತ್ತು ಕಲೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಲಿಟರರಿ ಕ್ಲಬ್ ನ ಉದ್ಘಾಟನೆ ಹಾಗೂ ವಾರ್ತಾಸಂಪದ ಲರ್ನಿಂಗ್ ಲೈವ್‌ಲಿ ಪತ್ರಿಕೆಯ ಬಿಡುಗಡೆ ಮಾಡಲಾಯಿತು. ಕಾರ‍್ಯಕ್ರಮದ ಮುಖ್ಯ ಅತಿಥಿಗಳಾಗಿ ಭಂಡಾರ್ಕಾಸ್ ಕಾಲೇಜಿನ ಇಂಗ್ಲೀಷ್ ಪ್ರಾಧ್ಯಾಪಕರಾದ ಡಾ. ಹಯವದನ ಉಪಾದ್ಯಾ ಮಾತನಾಡಿ ಮಕ್ಕಳಲ್ಲಿ ಭಾಷಾಭಿಮಾನ ಹಾಗೂ ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಳ್ಳುವ ಬಗೆಯನ್ನು ವಿವರಿಸಿದರು. ಕವಿ ಅಥವಾ ಸಾಹಿತಿಯಾಗಬೇಕಾದರೆ ನಾವು ಇನ್ನೊಬ್ಬರ ವ್ಯಕ್ತಿತ್ವವನ್ನು ಅರ್ಥಮಾಡಿಕೊಂಡು ಅವರಂತೆ ಆಲೋಚಿಸುವ ಅನುಭವಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಉತ್ತಮ ಪಾತ್ರಗಳನ್ನು ಸೃಷ್ಠಿಸಿ ನಾಟಕ, ಕತೆ, ಕಾದಂಬರಿಗಳನ್ನು ಬರೆಯಲು ಸಾಧ್ಯವಾಗುತ್ತದೆ ಎಂದು ಮಕ್ಕಳಿಗೆ ತಿಳಿಸಿದರು. ಬಾಂಡ್ಯಾ ಎಜ್ಯುಕೇಶನ್ ಟ್ರಸ್ಟ್ ನ ಜಂಟಿ ಕಾರ‍್ಯನಿರ್ವಹಣಾಧಿಕಾರಿ ಅನುಪಮ ಎಸ್ ಶೆಟ್ಟಿ ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಪ್ರಾಂಶುಪಾಲ ಶಾಯಿಜು ನಾಯರ್, ಉಪಪ್ರಾಂಶುಪಾಲೆ ಸುನಂದಾ ಪಾಟೀಲ್ ಹಾಗೂ ಶಾಲೆಯ ಶೈಕ್ಷಣಿಕ ಸಂಘಟಕರಾದ ಎಮ್.ಎನ್.ವಿ.ಪಿ ನಾಯ್ಡು ಕಾರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅಧ್ಯಾ ಸ್ಮಿತಾರವರು ಲಿಟರರಿ ಕ್ಲಬ್ ನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಕೋ ಕ್ಲಬ್‌ನ ಸಹಯೋಗದೊಂದಿಗೆ ವಿವಿಧ ಸಂಘಗಳನ್ನು ಖಂಬದಕೋಣೆ ವಲಯ ಶಿಕ್ಷಣ ಸಂಯೋಜಕ ವೆಂಕಪ್ಪ ಉದ್ಘಾಟಿಸಿದರು. ಶಾಲೆಯೆಂದರೆ ಚಟುವಟಿಕೆಗಳ ಒಂದು ಮಹಾನದಿ ಇದ್ದಂತೆ. ಇಲ್ಲಿ ಕೊಡುವ ಪ್ರತಿಯೊಂದು ಆಧ್ಯತೆಗಳು, ವಿಷಯಗಳು ಹನಿ ಹನಿಯಾಗಿ ಜೊತೆಗೂಡಿ ಜ್ಞಾನ ಸಾಗರವನ್ನು ಸೇರುತ್ತದೆ. ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ಚಟುವಟಿಕೆಗಳನ್ನು ವಿವಿಧ ಸಂಘಗಳು ಮುಖ್ಯವಾಗಿರುತ್ತದೆ ಎಂದರು. ಸಾಂಸ್ಕ್ರತಿಕ, ಸಾಹಿತ್ಯಿಕ, ಕ್ರೀಡಾ, ಭಾಷಾ , ಕಲೆ ಮತ್ತು ಲಲಿತ ಕಲೆಗಳ ಸಂಘಗಳನ್ನು ಅನಾವರಣಗೊಳಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಶಾಲೆಯ ಶಿಕ್ಷಕಿ ಮಮತಾ ಪೂಜಾರಿ ವಹಿಸಿಕೊಂಡಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಪ್ರವೀಣ್ ಕುಮಾರ್ ಕೆ.ಪಿ ಸಂಘದ ಸಲಹಾಗಾರರಾಗಿ, ಸಂಯೋಜಕರಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲೆಯ ಸಂಸ್ಥಾಪಕರಾದ ಡಾ.ಎನ್.ಕೆ.ಬಿಲ್ಲವ ರವರ ಸಂಪೂರ್ಣ ಸಹಕಾರದೊಂದಿಗೆ ಕಾರ್ಯಾರಂಭಗೊಂಡ ಉದ್ಘಾಟಿತ ಸಂಘಗಳ ಪ್ರತಿನಿಧಿಯಾಗಿ ಒಬ್ಬೊಬ್ಬ ವಿದ್ಯಾರ್ಥಿಯನ್ನು ಆಯ್ಕೆಮಾಡಲಾಯಿತು. ಶಿಕ್ಷಕಿ ವಂದನ ರವರು ನಿರ್ವಹಿಸಿದರು. ಶಿಕ್ಷಕಿ ಸಂಗೀತಾ ಬಿಲ್ಲವ ಸ್ವಾಗತಿಸಿ ಶಿಕ್ಷಕ ಶಂಶುದ್ಧೀನ್ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಸರ್ಕಾರ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜನರ ಸೇವೆಗೆಂದೇ ಇರುವುದು. ಜನರ ನೀಡಿದ ತೆರಿಗೆ ಹಣದಿಂದಲೇ ನಮ್ಮ ಈ ವ್ಯವಸ್ಥೆಗೆ ಸಂಬಳ ಬರುತ್ತಿದೆ ಎನ್ನುವುದನ್ನು ನಾವು ಮರೆಯಬಾರದು, ಇಲ್ಲಿ ಪ್ರಜೆಗಳೆ ಪ್ರಭುಗಳು. ಕಾಲಮಿತಿಯ ಒಳಗೆ ತಕ್ಷಣ ಜನರ ಸಮಸ್ಯೆಗಳಿಗೆ ನಾವು ಅಧಿಕಾರಿಗಳು ಸ್ಪಂದಿಸಬೇಕಾದ ಅಗತ್ಯತೆ ಇದೆ. ನಮ್ಮೀ ಜಿಲ್ಲೆಯಲ್ಲಿ ಭೃಷ್ಟಾಚಾರ ರಹಿತ ಆಡಳಿತವನ್ನು ನಡೆಸಿ, ರಾಜ್ಯದಲ್ಲಿ ಎಲ್ಲರಿಗೂ ಮಾದರಿಯಾಗಬೇಕು ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಅವರು ಸಾಲಿಗ್ರಾಮ ಗಿರಿಜಾ ಕಲ್ಯಾಣಮಂಟಪದಲ್ಲಿ ನಡೆದ ಕೋಟ ಹೋಬಳಿ ಜನಸ್ಪಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸರ್ಕಾರ ಕಳೆದ ೩ವರ್ಷಗಳಲ್ಲಿ ಅನೇಕ ಜನಹಿತ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ.ಉಡುಪಿ ಜಿಲ್ಲೆಯಲ್ಲಿ ೬೪ಸಾವಿರ ಕುಟುಂಬಗಳಿಗೆ ಬಿ.ಪಿ.ಎಲ್ ಕಾರ್ಡ್ ನೀಡಲಾಗಿದೆ. ಉಚಿತ ಅಕ್ಕಿ, ಹೈನುಗಾರರಿಗೆ ಸಬ್ಸಿಡಿ, ಕ್ಷೀರಭಾಗ್ಯ, ಶೂ ಭಾಗ್ಯ, ಮನಸ್ವಿನಿ ಯೋಜನೆ, ಇತ್ತೀಚೆಗೆ ಬಂದ ಬಾಪೂಜಿ ಸೇವಾ ಯೋಜನೆಯಂತಹ ಅನೇಕ ಜನಪರ ಕಾರ್ಯಕ್ರಮಗಳು ಜನರನ್ನು ತಲುಪಿವೆ ಎಂದರು. ೯೪ಸಿ ಯಡಿಯಲ್ಲಿ ಇನ್ನೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇತಿಹಾಸ ಪ್ರಸಿದ್ಧ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿ ಮಹೋತ್ಸವದ ಅಂಗವಾಗಿ ಶ್ರೀ ದೇವರಿಗೆ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ದೇವಳದ ಧರ್ಮದರ್ಶಿ ಹೆಚ್. ರಾಮಚಂದ್ರ ಭಟ್ ಅವರ ಮಾರ್ಗದರ್ಶನದಲ್ಲಿ ಲಕ್ಷ ದೂರ್ವಾರ್ಚನೆ, ಸಿಂದೂರಾರ್ಚನೆ ನೆರವೇರಿತು. ಸಾವಿರಾರು ಭಕ್ತರು ಪಾಲ್ಗೊಂಡು ಶ್ರೀ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸುರತ್ಕಲ್‌ನ ಜೆ. ಡಿ. ವೀರಪ್ಪ ಅವರಿಂದ ದೇವಳಕ್ಕೆ ಪುಸ್ಷಲಂಕಾರ ಸೇವೆ ನಡೆಯಿತು.

Read More