ಭಂಡಾರ್ಕಾರ್ಸ್ ಕಾಲೇಜು: ನನ್ನ ಮೆಚ್ಚಿನ ಪುಸ್ತಕ ಕಾರ್ಯಕ್ರಮ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪುಸ್ತಕ ಎನ್ನುವುದು ಜ್ನಾನದ ತನ್ನದಾಗಿಸಿಕೊಳ್ಳುತ್ತಾನೆ. ಈ ಹವ್ಯಾಸವನ್ನು ವಿದ್ಯಾರ್ಥಿಗಳು ಕಾಲೇಜಿನ ದಿನದಿಂದಲೇ ಆರಂಭಿಸಬೇಕು. ಓದು ಎನ್ನುವುದು ಕೇವಲ ಪಠ್ಯಪುಸ್ತಕ, ಆಕರ ಗ್ರಂಥಗಳಿಗೆ ಸೀಮಿತವಾಗಬಾರದು. ಪ್ರತಿದಿನ ದಿನಪತ್ರಿಕೆಗಳಿಂದಲೇ ಓದನ್ನು ಆರಂಭಿಸಬೇಕು ಅಲ್ಲಿನ ಅಂಕಣ ಬರಹಗಳು, ಅಲ್ಲಿ ಪ್ರಕಟವಾಗುವ ಲೇಖನಗಳನ್ನು ಓದುತ್ತಾ ವಾರಪತ್ರಿಕೆ, ಮಾಸಪತ್ರಿಕೆ, ಕಥೆ ಕಾದಂಬರಿಗಳತ್ತ ಓದು ವಿಸ್ತಾರಗೊಳಿಸಬೇಕೆಂದು ಡಾ.ಚಂದ್ರಾವತಿ ಶೆಟ್ಟಿಯವರು ಹೇಳಿದರು.

Call us

Click Here

ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಕನ್ನಡ ವಿಭಾಗ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಹಮ್ಮಿಕೊಂಡ “ನನ್ನ ಮೆಚ್ಚಿನ ಪುಸ್ತಕ” ಕಾರ್ಯಕ್ರಮದಲ್ಲಿ ಮುಖ್ಯಾತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಓದುವ ಹವ್ಯಾಸವುಳ್ಳವರಿಗೆ ಅನುಭವದೊಂದಿಗೆ ಆತ್ಮವಿಶ್ವಾಸವು ಹೆಚ್ಚುತ್ತದೆ. ಅದು ಬದುಕಿನಲ್ಲಿ ತಲೀತ್ತಿ ನಡೆಯುವುದಕ್ಕೆ ಪ್ರೇರಣೆಯಾಗುತ್ತದೆ. ಎನ್ನುತ್ತಾ ಭಂಡಾರ್ಕಾರ್ಸ್ ಕಾಲೇಜಿನ ಪುಸ್ತಕ ಪ್ರೇಮಿಗಳ ಬಳಗ ಇನ್ನಷ್ಟು ವೃದ್ಧಿಯಾಗಲಿ. ನಿಸರ್ಗದ ಸೌಂದರ್ಯವನ್ನು ಸಮತೋಲನವನ್ನು ಗಿಳಿಗಳ ಬಳಗ ಹೆಚ್ಚಿಸುವಂತೆ ಪುಸ್ತಕ ಓದುವ ವಿದ್ಯಾರ್ಥಿಗಳ ಬಳಗ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಮಾತನಾಡಿ ಯಾವುದೇ ಕೃತಿಯ ಹಿಂದೆ ಲೇಖಕನಿರುತ್ತಾನೆ. ಕೃತಿಯನ್ನು ಓದುವುದೆಂದರೆ ಆ ಲೇಖಕನ ವಿಚಾರಗಳನ್ನು ಅರ್ಥೈಸಿಕೊಂಡಂತೆ. ಕೃತಿಯ ಮುಖೇನ ಅವರ ಚಿಂತನೆಗಳನ್ನು ಅರ್ಥೈಸುವಂತೆ ಅವರನ್ನು ಪ್ರತ್ಯಕ್ಷದಲ್ಲಿ ನೋಡುವ ಅವರ ಮಾತುಗಳನ್ನು ಆಲಿಸುವ ಹವ್ಯಾಸವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಹಲವು ಪುಸ್ತಕಗಳನ್ನು ಓದುವುದೆಂದರೆ ಹಲವು ಲೇಖಕರನ್ನು ಅರ್ಥ ಮಾಡಿಕೊಂಡಂತೆ. ಇಂತಹ ಪ್ರವೃತ್ತಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಕಾರ್ಯಕ್ರಮ ಸಂಯೋಜಕಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ರೇಖಾ ಬನ್ನಾಡಿ ಉಪಸ್ಥಿತರಿದ್ದರು.

Click here

Click here

Click here

Click Here

Call us

Call us

‘ನನ್ನ ಮೆಚ್ಚಿನ ಪುಸ್ತಕ’ ಸ್ಪರ್ಧೆಯ ಬಹುಮಾನವನ್ನು ವಿತರಿಸಲಾಯಿತು. ಪ್ರಥಮ- ಶ್ರಿಯಾ ಭಟ್ಟ (ಪ್ರಥಮ ಬಿ.ಸಿ.ಎ) ದ್ವಿತೀಯ- ದಕ್ಷಾ ಶೆಟ್ಟಿ (ದ್ವಿತೀಯ ಬಿಎಸ್.ಸಿ) ತೃತೀಯ- ರಜತ ಶೆಟ್ಟಿ (ಪ್ರಥಮ ಬಿ.ಸಿ.ಎ) ಬಹುಮಾನ ಪಡೆದರು.  ತೀರ್ಪುಗಾರರಾಗಿ ಕನ್ನಡ ಉಪನ್ಯಾಸಕರಾದ ಪ್ರೊ.ಗಣಪತಿ ಭಟ್, ಉಪನ್ಯಾಸಕಿಯರಾದ ಸೌಮ್ಯ ಹೆಚ್ ಮತ್ತು ಮೈತ್ರಿ ಸಹಕರಿಸಿದರು.

ಪುಸ್ತಕ ಪ್ರೇಮಿ ಬಳಗದ ಅಧ್ಯಕ್ಷೆ ವಿದ್ಯಾರ್ಥಿನಿ ದಿಶಾ ಗುಲ್ವಾಡಿ, ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯದರ್ಶಿ ವಿದ್ಯಾರ್ಥಿ ಶ್ರೀರಾಜ್ ವಂದಿಸಿದರು. ವಿದ್ಯಾರ್ಥಿನಿ ಮಹಾಲಕ್ಷ್ಮಿ ಕಾರ್ಯಕ್ರಮ ನಿರ್ವಹಿಸಿದರು.

Leave a Reply