Author: ನ್ಯೂಸ್ ಬ್ಯೂರೋ

ಕುಂದಾಪುರ: ಪಶ್ಚಿಮ ಘಟ್ಟಗಳನ್ನು ಸಂರಕ್ಷಿಸುವ ಉದ್ದೇಶದಿಂದ ಕೇಂದ್ರ ಸರಕಾರವು ಜಾರಿಗೊಳಿಸ ಹೊರಟಿರುವ ಕಸ್ತೂರಿರಂಗನ್ ವರದಿಯ ಕರಿಛಾಯೆ ಮತ್ತೆ ಕುಂದಾಪುರ ತಾಲೂಕಿನ ಗ್ರಾಮಗಳ ಮೇಲೆ ಬಿದ್ದಿದೆ. ವರದಿಯ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಮರು ನೋಟಿಸು ಜಾರಿಯಾಗಿರುವುದಲ್ಲದೇ ನಾಲ್ಕು ಹೊಸ ಗ್ರಾಮಗಳನ್ನು ಹೊಸದಾಗಿ ಸೇರಿಸಿಕೊಂಡು ವಿವರಣೆ ಕೇಳಿರುವುದು ಜನರನ್ನು ಮತ್ತೆ ಗೊಂದಲಕ್ಕೀಡು ಮಾಡಿದೆ. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ಕುಂದಾಪುರ ತಾಲೂಕಿನ ಶಂಕರನಾರಾಯಣ ವಲಯ ಅರಣ್ಯ ವ್ಯಾಪ್ತಿಯ ಅಮಾಸೆಬೈಲು, ಮಚ್ಚಟ್ಟು, ಹೊಸಂಗಡಿ, ಯಡಮೊಗೆ, ಹಳ್ಳಿಹೊಳೆ ಗ್ರಾಮ ಪಂಚಾಯತಿಗಳಿಗೆ ಅ.28ರದು ಮರು ನೋಟಿಸು ಜಾರಿಗೊಳಿಸಿದ್ದು, ಈ ಬಗ್ಗೆ ವಿವರಣೆ ನೀಡುವಂತೆ ಕೋರಲಾಗಿದೆ. ಕಳೆದ ವರ್ಷ ಈ ಭಾಗದಲ್ಲಿ ಜನವಾಸ್ತವ್ಯ ಹಾಗೂ ಕೃಷಿ ಭೂಮಿ ಪ್ರದೇಶಗಳನ್ನು ಕಸ್ತೂರಿರಂಗನ್ ವರದಿಗೆ ಸೇರ್ಪಡೆಗೊಳಿಸುವುದನ್ನು ವಿರೋಧಿಸಿ ಭಾರಿ ಜನಾಂದೋಲನವೇ ನಡೆದಿತ್ತು. ಇದಕ್ಕೆ ಸ್ಪಂದಿಸಿದ್ದ ರಾಜ್ಯ ಸರಕಾರವು ಮಂತ್ರಿಮಂಡಲದ ಉಪಸಮಿತಿಯನ್ನು ರಚಿಸಿ ಅರಣ್ಯ ಸಚಿವ ರಮಾನಾಥ ರೈ ನೇತೃತ್ವದಲ್ಲಿ ಉಸ್ತುವಾರಿ ಮಂತ್ರಿಗಳ ಸಹಯೋಗದೊಂದಿಗೆ ವರದಿ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಭೇಟಿ ನೀಡಿ…

Read More

ಕುಂದಾಪುರ: ಅಧಿಕಾರಿಗಳ ತಮ್ಮ ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾನೂನಿನಂತೆ ಕೆಲಸ ಮಾಡಿದರೆ ಜನ ನಮ್ಮ ಕೆಲಸವನ್ನು ಮೆಚ್ಚಿ ವಿಶ್ವಾಸ ಇಡುತ್ತಾರೆ. ಕಳೆದ ಎರಡು ವರ್ಷ ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ಆಗಿ ಮಾಡಿದ ಕೆಲಸ ತೃಪ್ತಿ ತಂದಿದೆ ಎಂದು ಜಿಪಂ ಸಿಇಓ ಕನಗವಲ್ಲಿ ಹೇಳಿದರು. ಕುಂದಾಪುರ ತಾಲೂಕ್ ಪಂಚಾಯಿತಿ ಮತ್ತು ವಿವಿಧ ಇಲಾಖೆ ಆಶ್ರಯದಲ್ಲಿ ತಾಲೂಕ್ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿ, ನನ್ನ ಅಧಿಕಾರಾವಧಿಯಲ್ಲಿ ಗ್ರಾಪಂ.ನಲ್ಲಿರುವ ಪಿಡಿಓ ಕೊರೆತೆ ನೀಗಿಸಿ, ಜನರ ಸಮಸ್ಯೆಗೆ ತಕ್ಷಣ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಜನೋಪಯೋಗಿ ಕೆಲಸ ಮಾಡಿದರೆ ಜನ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಎನ್ನೋದಕ್ಕೆ ನೀವು ನೀಡುತ್ತಿರುವ ಅಭಿನಂದನೆ ಸಾಕ್ಷಿ ಎಂದ ಅವರು, ಬೀದರ್ ಜಿಲ್ಲೆಯಲ್ಲಿದ್ದಾಗಲೂ ಗುಣಮಟ್ಟದ ಸೇವೆ ಮೂಲಕ ಇಂದಿಗೂ ನನ್ನನ್ನು ಅವರು ನೆನಪಿಟ್ಟುಕೊಂಡಿದ್ದಾರೆ ಎಂದು ತಿಳಿಸಿದರು. ಕುಂದಾಪುರ ತಾಪಂ. ಅಧ್ಯಕ್ಷ ಭಾಸ್ಕರ ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಉಪಾಧ್ಯಕ್ಷೆ ಮಮತಾ ಆರ್.ಶೆಟ್ಟಿ, ಶಿಕ್ಷಣ ಸ್ಥಾಯಿನ…

Read More

ಬೈಂದೂರು: ಪ್ರತಿಯೊಂದು ಮಗುವಿನಲ್ಲೂ ತನ್ನದೇ ಆದ ಪ್ರತಿಭೆ ಇದೆ. ಅದನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿ ಉತ್ತಮ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸುವ ಕೆಲಸ ಪಾಲಕರು ಹಾಗೂ ಶಿಕ್ಷಕರಿಂದ ನಿರಂತರವಾಗಿ ಆಗಬೇಕಿದೆ. ಇದು ಮಕ್ಕಳ ಉಜ್ವಲ ಭವಿಷ್ಯಕ್ಕೆ ನಾಂದಿನಾಗಲಿದೆ ಎಂದು ಉಡುಪಿ ಜಿ.ಪಂ ಅಧ್ಯಕ್ಷೆ ಸವಿತಾ ಶಿವಾನಂದ ಕೋಟ್ಯಾನ್ ಹೇಳಿದರು. ಅವರು ನಾಗೂರು ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣದಲ್ಲಿ ಕ್ರಾಂತಿಯನ್ನೇ ಮಾಡಿ ರಾಜ್ಯದಲ್ಲಿ ಗುರುತಿಸಿಕೊಂಡ ಉಡುಪಿ ಜಿಲ್ಲೆಯ ಮಕ್ಕಳು ಶಿಕ್ಷಣ ಶಿಕ್ಷಣದೊಂದಿಗೆ ಶಿಕ್ಷಣೇತರ ಚಟುವಟಿಕೆಗಳಲ್ಲಿಯೂ ಸಾಧನೆಗೈದಿದ್ದಾರೆ. ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸುವ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳ ಆಯೋಜನೆಗೆ ಪ್ರತಿಯೊಬ್ಬರ ಶ್ರಮ, ಪಾಲುದಾರಿಕೆ ಇದ್ದರೇ ಮಾತ್ರ ಅದು ಯಶಸ್ಸು ಕಾಣಲು ಸಾಧ್ಯ ಎಂದರು. ಕಿರಿಮಂಜೇಶ್ವರ ಗ್ರಾ.ಪಂ ಅಧ್ಯಕ್ಷೆ ಲಲಿತಾ ಖಾರ್ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ನಾಗೂರು ಆಂಜನೇಯ ದೇವಸ್ಥಾನದಿಂದ ಆರಂಭಗೊಂಡ ಪುರಮೆರವಣಿಗೆಗೆ ಜಿ.ಪಂ ಸದಸ್ಯ ಬಾಬು ಶೆಟ್ಟಿ ಚಾಲನೆ ನೀಡಿದರು. ಜಿ.ಪಂ ಆರೋಗ್ಯ ಮತ್ತು…

Read More

ಕುಂದಾಪುರ: ಕುಂಭಾಶಿ ರಾಷ್ಟ್ರೀಯ ಹೆದ್ದಾರಿಯ ಕರ್ನಾಟಕ ಬ್ಯಾಂಕ್ ಬಳಿ ಇದ್ದ ಡಿವೈಡರ್ ಬಂದ್ ಮಾಡಿ ಸ್ವಾಗತ ಗೋಪುರದ ಬಳಿ ನಿರ್ಮಿಸಿರುವುದನ್ನು ವಿರೋಧಿಸಿ, ಕೊರವಡಿ, ಕುಂಭಾಶಿ, ಗೋಪಾಡಿ, ಬೀಜಾಡಿ ಗ್ರಾಮಸ್ಥರು ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಲಾಭಿ ಮತ್ತು ಒತ್ತಡಕ್ಕೆ ಮಣಿದು ಕುಂಭಾಶಿ ಕರ್ನಾಟಕ ಬ್ಯಾಂಕ್ ಬಳಿ ಇದ್ದ ಡಿವೈಡರ್ ಕಟ್ ಮಾಡಿದ್ದರಿಂದ ಕರಾವಳಿ ಭಾಗದ ಜನರಿಗೆ ಸಂಚಾರ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಆಕ್ರೋಶಿತಗೊಂಡಿರುವ ಗ್ರಾಮಸ್ಥರು ಕುಂಭಾಶಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು. ಸರ್ವಿಸ್ ರಸ್ತೆ ಕೂಡಾ ಮಾಡದೆ ಏಕಾಏಕಿ ಹೆದ್ದಾರಿ ಅಧಿಕಾರಿಗಳು ಡಿವೈಡರ್ ಕಟ್ ಮಾಡಿದ್ದಾರೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು. ಸ್ವಾಗತ ಗೋಪುರ ಬಳಿ ಡಿವೈಡರ್ ನಿರ್ಮಿಸಿದ್ದು ಇದರಿಂದ ಅಪಘಾತಗಳು ಹೆಚ್ಚಿ, ಇದೂವರಗೆ ನಾಲ್ವರು ಪ್ರಾಣ ಕಳೆದುಕೊಂಡಿದ್ದು, ಐದು ಜನ ಗಂಭಿರ ಗಾಯಗೊಂಡಿದ್ದಾರೆ. ಕರ್ನಾಟಕ ಬ್ಯಾಂಕ್ ಸಮೀಪಿ ಪ್ರದೇಶ ಸರಕ್ಷಿತವಾಗಿದ್ದು ಅಲ್ಲಿ ಡಿವೈಡರ್ ನಿರ್ಮಿಸಬೇಕು. ಜನರ ಭಾವನೆಗೆ ಬೆಲೆಕೊಟ್ಟು ಕರ್ನಾಟಕ ಬ್ಯಾಂಕ್ ಬಳಿ ಡಿವೈಡರ್ ನಿರ್ಮಿಸದಿದ್ದರೆ ಶಾಂತವಾಗಿ…

Read More

ಬೈಂದೂರು: ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ವಾರ್ಷಿಕ ಜಾತ್ರೆಯು ಡಿಸೆಂಬರ್ ೨೬ರಂದು ನಡೆಯಲಿದ್ದು, ಶಾಸಕ ಕೆ. ಗೋಪಾಲ ಪೂಜಾರಿ ನೇತೃತ್ವದಲ್ಲಿ  ದೇವಳದ ಸಭಾಭವನದಲ್ಲಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ನಡೆಯಿತು. ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಪ್ರದಾಯದಂತೆ ನಡೆಸಿಕೊಂಡು ಬರುವುದರೊಂದಿಗೆ, ಜಾತ್ರೆಯು ಶಿಸ್ತುಬದ್ದವಾಗಿ ನಡೆಸಲು ಸ್ವಯಂ ಸೇವಕರನ್ನು ಬಳಸಿಕೊಳ್ಳಬೇಕು ಅದಕ್ಕಾಗಿ ಸ್ಥಳಿಯ ಮಿನೂಗಾರ ಸಂಘಟನೆ, ಸ್ವಸಹಾಯ ಗುಂಪುಗಳು ಹಾಗೂ ಯುವಕಮಂಡಳಿಗಳ ಸದಸ್ಯರ ಸೇವೆಗಳನ್ನು ಬಳಸಿಕೊಳ್ಳಬೇಕು ಎಂದು ಶಾಸಕರು ಸಲಹೆ ನೀಡಿದರು. ಮುಖ್ಯವಾಗಿ ಕುಡಿಯುವ ನೀರು, ಸ್ವಚ್ಚತೆ ಹಾಗೂ ಸುವ್ಯವಸ್ಥೆಗೆ ಹೆಚ್ಚು ಪಾಮುಖ್ಯತೆ ನೀಡುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ನಿರ್ದೆಶನ ನೀಡಿದರು, ಜಾತ್ರಾ ಮಹೋತ್ಸವವು ಯಶಸ್ವಿಯಾಗಿ ನಡೆಯಲು ಹಾಗೂ ದೇವಳದ ಕೆರೆಯ ಪುನರನಿರ್ಮಾಣ ಹಾಗೂ ರಥಬೀದಿ ಕಾಂಕ್ರೇಟ್ ರಸ್ತೆ ನಿರ್ಮಿಸಿ ಕೊಡುವ ಸಂಪೂರ್ಣ ಭರವಸೆಯನ್ನು ಸಹ ಶಾಸಕರು ನೀಡಿದರು. ಉಪ್ಪುಂದ ಗ್ರಾಪಂ ಅಧ್ಯಕ್ಷೆ ದುಗ್ಗಮ್ಮ, ಶಿಕ್ಷಣ ಮತ್ತು ಆರೋಗ್ಯಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ದೇವಳದ ಪ್ರದಾನ ಅರ್ಚಕ ಪ್ರಕಾಶ ಉಡುಪ, ವ್ಯವಸ್ಥಾಪನಾ ಸಮಿತಿ…

Read More

ಕುಂದಾಪುರ: ರೋಟರಿ ಕ್ಲಬ್ ಸಿದ್ದಾಪುರ-ಹೊಸಂಗಡಿಯ ಆತಿಥ್ಯದಲ್ಲಿ ನಡೆದ ರೋಟರಿ ವಲಯ ಸಾಂಸ್ಕೃತಿಕ ಸ್ಪರ್ಧೆ ರಂಗತರಂಗದಲ್ಲಿ ಗಾಯನ ಸ್ಪರ್ಧೆಯಲ್ಲಿ ಉದ್ಯಮಿ ರವಿರಾಜ್ ಶೆಟ್ಟಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ರೋಟರಿ ಕ್ಲಬ್ ಕುಂದಾಪುರದ ಪೂರ್ವಾದ್ಯಕ್ಷರಾಗಿ, ಪ್ರಸಕ್ತ ಸಾಲಿನಲ್ಲಿ ರೋಟರಿ ವಲಯ 1ರ ಕ್ರೀಡಾ ಸಂಯೋಜಕರಾಗಿ, ಹಂಗಳೂರಿನ ಗೆಳೆಯರ ಬಳಗದ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿದ್ದಾರೆ.

Read More

ಕುಂದಾಪುರ: ದೃಶ್ಯ ಮಾಧ್ಯಮಗಳು ನಮ್ಮನ್ನು ಮಾನಸಿಕವಾಗಿ ಬಡವರನ್ನಾಗಿಸುತ್ತಿವೆ. ಇಂದಿನ ಯುವಕರು ಟಿ.ವಿ ಮೊಬೈಲಿನಲ್ಲಿಯೇ ಕಳೆದುಹೋಗುತ್ತಿದ್ದಾರೆ. ಏನನ್ನಾದರೂ ಮಾಡಿ ಪ್ರಸಿದ್ಧಿ ಪಡೆಯುವ ಗೀಳು ಹತ್ತಿಸಿಕೊಂಡಿದ್ದಾರೆ. ಆದರೆ ಪುಸ್ತಕದ ಓದು, ಸಾಹಿತ್ಯ ನಮ್ಮನ್ನು ಶ್ರೀಮಂತಗೊಳಿಸುವುದಲ್ಲದೇ, ಮಾನಸಿಕವಾಗಿಯೂ ಸದೃಡರನ್ನಾಗಿಸುತ್ತದೆ ಎಂದು ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ಆರ್ಥಿಕ ನಿಯಂತ್ರಕ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಹೇಳಿದರು. ಅವರು ಕಂದಾವರ ರಘುರಾಮ ಶೆಟ್ಟಿ ಅಭಿನಂದನಾ ಸಮಾರಂಭ ’ಕಂದಾವರ-೮೦’ರಲ್ಲಿ ಅಭಿನಂದನಾ ಗ್ರಂಥ ಕೆಂದಾವರೆ ಬಿಡುಗಡೆಗೊಳಿಸಿ ಮಾತನಾಡಿದರು. ಯಕ್ಷಗಾನ ಕಲಾವಿದರು, ವೇಷಭೂಷಣ ಸೇರಿದಂತೆ ಎಲ್ಲಾ ಪ್ರಕಾರಗಳ ದಾಲೀಕಣವಾದಾಗ ಅದು ಮುಂದಿನ ಜನಾಂಗ ತಲುಪಿ ತನ್ನ ನಿರಂತರತೆ ಕಾಯ್ದುಕೊಳ್ಳುತ್ತದೆ. ಕಂದಾವರ ರಘುರಾಮ ಶೆಟ್ಟಿಯವರಂತಹ ಪ್ರಸಂಗಕರ್ತರ ಉತ್ಕೃಷ್ಟವಾದ ಸಾಹಿತ್ಯ ಕೃತಿಗಳು ಮುಂದಿನ ಜನಾಂಗಕ್ಕೆ ಬೆಳಕಾಗಬೇಕಿದೆ ಎಂದರು. ಬಸ್ರುರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೆಶ್ವರ ದೇವಸ್ಥಾನ ಧರ್ಮದರ್ಶಿ ಸೀತಾರಾಮ ಶೆಟ್ಟಿ, ಪೋಲ್ಯ ಉಮೇಶ್ ಶೆಟ್ಟಿ, ಎಂಐಟಿ ಮಣಿಪಾಲದ ಪ್ರಾಧ್ಯಾಪಕ ಎಸ್.ವಿ. ಉದಯಕುಮಾರ್ ಶೆಟ್ಟಿ, ಬಸ್ರೂರು…

Read More

ಕುಂದಾಪುರ: ಮನೆಯ ಎದುರಿಗೆ ಹಾಕುವ ರಂಗೋಲಿ ಮಂಗಳ ಸೂಚಕ. ಇದು ನಮ್ಮ ಸಂಸ್ಕೃತಿಯ ಪ್ರತಿಬಿಂಬವಿದ್ದಂತೆ. ಇಂತಹ ಕಲೆಗಳು ಬದುಕಿನ ಅವಿಭಾಜ್ಯ ಅಂಗವಾಗಿ ಬೆಳೆದಾಗ ಅದು ಕಲಾಕಾರನಿಗೂ ಮುದ ನೀಡುತ್ತದೆ ಎಂದು ಆನೆಗುಡ್ಡೆ ಶ್ರೀ ವಿನಾಯಕ ದೇವಳದ ಅನುವಂಶಿಕ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ ಹೇಳಿದರು. ಕುಂದಪ್ರಭ ಕುಂದಾಪುರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆನೆಗುಡ್ಡೆ ಶ್ರೀ ವಿನಾಯಕ ದೇವಳದಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ರಂಗೋಲಿ ಸ್ವರ್ಧೆಯಲ್ಲಿ ಹಾಗೂ ಪ್ರದರ್ಶನವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಕರ್ನಾಟಕ ಬ್ಯಾಂಕ್ ನಿರ್ದೇಶಕ ಡಾ. ಎಚ್, ರಾಮಮೋಹನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಧರ್ಮದರ್ಶಿ ರಮಣ ಉಪಾಧ್ಯಾಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ದುಗ್ಗೇ ಗೌಡ, ಜನಪದ ಸಂಶೋಧಕ ಕನರಾಡಿ ವಾದಿರಾಜ ಭಟ್, ಕುಂದಾಪುರ ಶ್ರೀ ರಾಮಕ್ಷತ್ರಿಯ ಸಂಘದ ಅಧ್ಯಕ್ಷ ಸುರೇಶ್ ಬೆಟ್ಟಿನ್, . ಕೆ.ಕೆ ರಾಮನ್, ಎಸ್. ಸೋಮಶೇಖರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಕುಂದಪ್ರಭ ಸಂಪಾದಕ ಯು.ಎಸ್. ಶೆಣೈ ಸ್ವಾಗಿತಿಸಿದರು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ…

Read More

ಕುಂದಾಪುರ: ರಕ್ತದಾನ ಎಲ್ಲಾ ದಾನಗಳಿಗಿಂತ ಮಿಗಿಲಾದುದು. ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯವೂ ಸುಧಾರಿಸುವುದಲ್ಲದೇ ಇನ್ನೊಂದು ಜೀವವನ್ನು ಉಳಿಸಿದ ಪುಣ್ಯವೂ ಲಭಿಸುತ್ತದೆಎಂದು ಉದ್ಯಮಿ ಸುರೇಶ್ ಡಿ. ಪಡುಕೋಣೆ ಹೇಳಿದರು. ಕುಂದಾಪುರ ದೇವಾಡಿಗ ಸಮಾಜ ಸೇವಾ ಸಂಘ ಹಾಗೂ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಕುಂದಾಪುರ ಘಟಕದ ಆಶ್ರಯದಲ್ಲಿ ನಡೆದ ಸ್ವಯಂ ಪ್ರೆರೀತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.  ಕಾರ್ಯಕ್ರಮದ ಅಧ್ಯಕ್ಷತೆನ್ನು ಕುಂದಾಪುರ ದೇವಾಡಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ನಾರಾಯಣ ದೇವಾಡಿಗ ವಹಿಸಿದ್ದರು. ರೆಡ್‌ಕ್ರಾಸ್ ಘಟಕದ ಅಧ್ಯಕ್ಷ ಜಯಕರ ಶೆಟ್ಟಿ, ಲಯನ್ಸ್ ಮಣಿಪಾಲದ ಅಧ್ಯಕ್ಷ ಬಿ.ಜಿ. ಮೋಹನ್‌ದಾಸ್, ಕುಂದಾಪು ರೆಡ್‌ಕ್ರಾಸ್ ವೈದ್ಯಾಧಿಕಾರಿ ಎಚ್.ಎಸ್. ಮಲ್ಲಿ, ಮಾಜಿ ಜಿ.ಪಂ ಉಪಾಧ್ಯಕ್ಷ ರಾಜು ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು. ಕುಂದಾಪುರ ದೇವಾಡಿಗ ಸಮಾಜದ ಮಾಜಿ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಕಾರ್ಯಕ್ರಮ ನಿರೂಪಿಸಿದರು. ಉದಯ ಹೇರಿಕುದ್ರು ವಂದಿಸಿದರು.

Read More

ಬೈಂದೂರು: ಶ್ರೀಕ್ಷೇತ್ರದ ವತಿಯಿಂದ ಮದ್ಯಮುಕ್ತ ಗ್ರಾಮವನ್ನಾಗಿಸಲು ಪ್ರತೀ ಗ್ರಾಮ ಮಟ್ಟದಲ್ಲಿ ಮದ್ಯವರ್ಜನ ಶಿಬಿರಗಳ ಮೂಲಕ ಕುಡಿತಕ್ಕೆ ದಾಸರಾಗಿರುವವರ ಮನಪರಿವರ್ತಿಸಿ ಅವರು ನವಜೀವನ ನಡೆಸುವ ಮಾರ್ಗವನ್ನು ರೂಪಿಸುತ್ತಿದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ವೈನ್ ಶಾಪ್ ಮಾಲಿಕರು ಹಳ್ಳಿ ಹಳ್ಳಿಗಳ ಗೂಡಂಗಡಿಯಲ್ಲಿ ಅಕ್ರಮವಾಗಿ ಮದ್ಯ ದಾಸ್ತಾನು ಮಾಡಿ ಅಲ್ಲಿ ಮಾರಾಟ ಮಾಡಿಸುತ್ತಿದ್ದಾರೆ. ಇದರಿಂದ ಆ ಪ್ರದೇಶಗಳ ಪ್ರತೀ ಮನೆಗಳಲ್ಲಿ ಕುಡಿತದ ಚಟವು ಸಾಂಕ್ರಾಮಿಕ ರೋಗದಂತೆ ಹರಡುತ್ತಿದೆ ಎಂದು ಕುಂದಾಪುರ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ ಕಳವಳ ವ್ಯಕ್ತಪಡಿಸಿದರು. ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಉಪ್ಪುಂದ, ಖಂಬದಕೋಣೆ ವಲಯದ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ಜನಜಾಗೃತಿ ವೇದಿಕೆ ಕುಂದಾಪುರ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳ ಹಾಗೂ ಇತರ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಡೆದ ೮೯೩ನೇ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಹಳ್ಳಿಪ್ರದೇಶಗಳ ಗೂಡಂಗಡಿಯಲ್ಲಿ ಮದ್ಯ…

Read More