ಶಂಕರನಾರಾಯಣ ವಲಯದ 5 ಗ್ರಾಮಗಳಿಗೆ ಮತ್ತೆ ಕಸ್ತೂರಿ ರಂಗನ್ ವರದಿಯ ಆತಂಕ

Call us

Call us

Call us

Call us

ಕುಂದಾಪುರ: ಪಶ್ಚಿಮ ಘಟ್ಟಗಳನ್ನು ಸಂರಕ್ಷಿಸುವ ಉದ್ದೇಶದಿಂದ ಕೇಂದ್ರ ಸರಕಾರವು ಜಾರಿಗೊಳಿಸ ಹೊರಟಿರುವ ಕಸ್ತೂರಿರಂಗನ್ ವರದಿಯ ಕರಿಛಾಯೆ ಮತ್ತೆ ಕುಂದಾಪುರ ತಾಲೂಕಿನ ಗ್ರಾಮಗಳ ಮೇಲೆ ಬಿದ್ದಿದೆ. ವರದಿಯ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಮರು ನೋಟಿಸು ಜಾರಿಯಾಗಿರುವುದಲ್ಲದೇ ನಾಲ್ಕು ಹೊಸ ಗ್ರಾಮಗಳನ್ನು ಹೊಸದಾಗಿ ಸೇರಿಸಿಕೊಂಡು ವಿವರಣೆ ಕೇಳಿರುವುದು ಜನರನ್ನು ಮತ್ತೆ ಗೊಂದಲಕ್ಕೀಡು ಮಾಡಿದೆ.

Call us

Click Here

Click here

Click Here

Call us

Visit Now

Click here

ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ಕುಂದಾಪುರ ತಾಲೂಕಿನ ಶಂಕರನಾರಾಯಣ ವಲಯ ಅರಣ್ಯ ವ್ಯಾಪ್ತಿಯ ಅಮಾಸೆಬೈಲು, ಮಚ್ಚಟ್ಟು, ಹೊಸಂಗಡಿ, ಯಡಮೊಗೆ, ಹಳ್ಳಿಹೊಳೆ ಗ್ರಾಮ ಪಂಚಾಯತಿಗಳಿಗೆ ಅ.28ರದು ಮರು ನೋಟಿಸು ಜಾರಿಗೊಳಿಸಿದ್ದು, ಈ ಬಗ್ಗೆ ವಿವರಣೆ ನೀಡುವಂತೆ ಕೋರಲಾಗಿದೆ. ಕಳೆದ ವರ್ಷ ಈ ಭಾಗದಲ್ಲಿ ಜನವಾಸ್ತವ್ಯ ಹಾಗೂ ಕೃಷಿ ಭೂಮಿ ಪ್ರದೇಶಗಳನ್ನು ಕಸ್ತೂರಿರಂಗನ್ ವರದಿಗೆ ಸೇರ್ಪಡೆಗೊಳಿಸುವುದನ್ನು ವಿರೋಧಿಸಿ ಭಾರಿ ಜನಾಂದೋಲನವೇ ನಡೆದಿತ್ತು. ಇದಕ್ಕೆ ಸ್ಪಂದಿಸಿದ್ದ ರಾಜ್ಯ ಸರಕಾರವು ಮಂತ್ರಿಮಂಡಲದ ಉಪಸಮಿತಿಯನ್ನು ರಚಿಸಿ ಅರಣ್ಯ ಸಚಿವ ರಮಾನಾಥ ರೈ ನೇತೃತ್ವದಲ್ಲಿ ಉಸ್ತುವಾರಿ ಮಂತ್ರಿಗಳ ಸಹಯೋಗದೊಂದಿಗೆ ವರದಿ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಅಹವಾಲುಗಳನ್ನು ಕೇಳಿ ಬಳಿಕ ಕೇಂದ್ರಕ್ಕೆ ವರದಿ ಸಲ್ಲಿಸಲಾಗಿತ್ತು. ಆದರೆ ಇದೀಗ ಮತ್ತೆ ಗ್ರಾಮಗಳನ್ನು ವರದಿಯಲ್ಲಿ ಸೇರಿಸಿಕೊಂಡು ವಿವರಣೆ ಕೇಳಿರುವುದು ಗ್ರಾಮಸ್ಥರನ್ನು ಆತಂಕಕ್ಕೆ ಒಡ್ಡಿದೆ. (ಕುಂದಾಪ್ರ ಡಾಟ್ ಕಾಂ ವರದಿ)

ಕಸ್ತೂರಿ ರಂಗನ್ ವರದಿಯ ವಿಚಾರದಲ್ಲಿ ಕೆಸರೆರಚಾಟ ನಿಲ್ಲಿಸಿ: ಭಾರತೀಯ ಕಿಸಾನ್ ಸಂಘ

ಕಸ್ತೂರಿರಂಗನ್ ವರದಿಯ ಅನುಷ್ಠಾನದ ವಿಚಾರದಲ್ಲಿ ರಾಜಕೀಯ ಕೆಸರೆರಚಾಟ ಜೋರಾಗಿ ನಡೆಯುತ್ತಿದೆಯೇ ಹೊರತು ಮತ್ತೇನು ನಡೆಯುತ್ತಿಲ್ಲ. ಕೇರಳ ಸರಕಾರ ಈ ಬಗ್ಗೆ ತನ್ನ ಶಿಫಾರಸ್ಸನ್ನು ಒಂದು ವರ್ಷ ಹಿಂದೆಯೇ ನೀಡಿ, ತನ್ನ ರಾಜ್ಯದಲ್ಲಿ ಸೂಚಿಸಲಾಗಿದ್ದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ 3115 ಚ.ಕಿ.ಮೀ. ಕೈ ಬಿಡುವಂತೆ ಮಾಡುವಲ್ಲಿ ಸಫಲವಾಗಿದೆ. ಆದರೆ ಇನ್ನೂ ಸಮಗ್ರ ವರದಿ ನೀಡದ ಕರ್ನಾಟಕ ಸರಕಾರದ ಮಂತ್ರಿಗಳು ಎಲ್ಲಾ ರಾಜ್ಯಗಳಿಗೂ ನಮ್ಮ ಶಿಫಾರಸ್ಸು ಮಾದರಿ ಎಂಬ ರೀತಿಯಲ್ಲಿ ನೀಡಿದ್ದೇವೆ ಎಂದು ಬೊಗಳೆ ಬಿಡುತ್ತಿದ್ದಾರೆ ಎಂದು ಜಿಲ್ಲಾ ಅಧ್ಯಕ್ಷ ಬಿ.ವಿ.ಪೂಜಾರಿ, ಪೆರ್ಡೂರು ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಜಪ್ತಿ ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

ರಾಜ್ಯ ಸರಕಾರಕ್ಕೆ ಕೇಂದ್ರ ಸರಕಾರ ನೀಡಿದ್ದ ಸಮಯಾವಕಾಶ ಅಗಸ್ಟ್ 31ಕ್ಕೆ ಮುಗಿದಿದ್ದು, ಜನಸಾಮಾನ್ಯರಿಗೆ ಸಲಹೆ ಮತ್ತು ಆಕ್ಷೇಪ ಸಲ್ಲಿಸಲು ಸೆಪ್ಟೆಂಬರ್ 4 ರಿಂದ 60 ದಿನಗಳ ಕಾಲಾವಕಾಶವನ್ನು ಕೇಂದ್ರ ಸರಕಾರ ನೀಡಿದ್ದು ಕೊನೆಯಾಗಿದೆ. ಕೊನೆಗಳಿಗೆಯಲ್ಲಿ ಆಕ್ಷೇಪ ಸಲ್ಲಿಸುವಂತೆ ಜನರಲ್ಲಿ ಕೋರಿರುವ ಈ ಬಾಗದ ಸಂಸದರು ಅಗಸ್ಟ 3 ರಂದು ಕೇಂದ್ರ ಸರಕಾರ ಕರೆದಿದ್ದ ಪಶ್ಚಿಮ ಘಟ್ಟ ಪ್ರದೇಶದ ಸಂಸದರ ಸಭೆಯಲ್ಲಿ ಭಾಗವಹಿಸಿದ್ದರೇ? ಭಾಗ ವಹಿಸಿದ್ದರೆ ಆ ಸಭೆಯಲ್ಲಿ ತಮ್ಮ ಸಲಹೆ ದಾಖಲಿಸಿದ್ದರೇ? ಎಂಬ ಬಗ್ಗೆ ಜನರಿಗೆ ಉತ್ತರಿಸಬೇಕಾಗಿದೆ. (ಕುಂದಾಪ್ರ ಡಾಟ್ ಕಾಂ ವರದಿ)

Call us

ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘ, ತಜ್ಞರೊಂದಿಗೆ ಚರ್ಚಿಸಿ, ಜನಜೀವನಕ್ಕೆ ತೊಂದರೆಯಾಗುವ ಅಂಶಗಳನ್ನು ಕೈಬಿಡುವ ನಿಟ್ಟಿನಲ್ಲಿ ತನ್ನ ಶಿಫಾರಸ್ಸನ್ನು 2015 ಅಕ್ಟೋಬರ್ 25ರಂದು ಕೇಂದ್ರಕ್ಕೆ ಕಳುಹಿಸಿ, ಅದರ ಪ್ರತಿಯನ್ನು ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು, ಉಸ್ತುವಾರಿ ಸಚಿವರು ಹಾಗೂ ಅರಣ್ಯ ಸಚಿವರಿಗೂ ಕಳುಹಿಸಿದೆ. ಜೊತೆಗೆ ಜಿಲ್ಲೆಯ ಬೇರೆ ಬೇರೆ ಸ್ಥಳಿಯಾಡಳಿತ, ಸಂಘ ಸಂಸ್ಥೆ ಮೊದಲಾದವುಗಳಿಂದ ಸುಮಾರು 40ಕ್ಕೂ ಹೆಚ್ಚು ಆಕ್ಷೇಪಗಳನ್ನು ಕಳುಹಿಸುವಲ್ಲಿ ಸಫಲವಾಗಿದೆ ಎಂದವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

fifteen − 1 =