Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಶಂಕರನಾರಾಯಣ: ಇಲ್ಲಿನ ಮದರ್ ತೆರೇಸಾ ಹೈಸ್ಕೂಲ್ ವಿಭಾಗದ ವಾರ್ಷಿಕ ಬಹುಮಾನ ವಿತರಣೆ ಕಾರ್ಯಕ್ರಮದ ಅಂಗವಾಗಿ ಅಭ್ಯುದಯ – 2025 ವೈವಿಧ್ಯಮಯ ಕಾರ್ಯಕ್ರಮವು ಸಂಭ್ರಮ ಹಾಗೂ ಸಡಗರದಿಂದ ಹಮ್ಮಿಕೊಳ್ಳಲಾಯಿತು.  ಉಡುಪಿ ಜಿಲ್ಲಾ ಮಾಜಿ ವಿದ್ಯಾಂಗ ಉಪ ನಿರ್ದೇಶಕರಾದ ದಿವಾಕರ ಶೆಟ್ಟಿ ಹಾಗೂ ವಿಜಯ ಕರ್ನಾಟಕ ದಿನಪತ್ರಿಕೆಯ ಖ್ಯಾತ ಹಿರಿಯ ಪತ್ರಕರ್ತರಾದ ಜಾನ್ ಡಿಸೋಜ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ದಿವಾಕರ ಶೆಟ್ಟಿ ಅವರು ಮಾತನಾಡಿ, ವಿದ್ಯಾರ್ಥಿಗಳು ಶಾಲಾ ದಿನಗಳಲ್ಲಿ ಶಿಸ್ತು ಬದ್ಧ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಉತ್ತಮ ಗುರಿಯನ್ನು ಇರಿಸಿಕೊಂಡು ಶ್ರದ್ಧೆಯಿಂದ ಅಧ್ಯಯನ ಮಾಡಿ ಬದುಕಿನಲ್ಲಿ ಪ್ರಗತಿ ಸಾಧಿಸಬೇಕು ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಪ್ರಸಿದ್ಧ ಪತ್ರಕರ್ತ ಜಾನ್ ಡಿಸೋಜ ಅವರು ಮಾತನಾಡಿ, ಒಂದು ಮಗು ಪಠ್ಯದ ಶಿಕ್ಷಣವನ್ನಷ್ಟೇ ಪಡೆದರೆ ಶಿಕ್ಷಣ ಅಪೂರ್ಣವೆನಿಸುತ್ತದೆ. ಅದರ ಜೊತೆಗೆ ಜೀವನ ಮೌಲ್ಯಗಳು ಅಳವಡಿಸಿಕೊಳ್ಳುವುದು ಕೂಡಾ ಅತ್ಯವಶ್ಯಕ. ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ಬಗ್ಗೆ ನನಗೆ ಅಪಾರ ಹೆಮ್ಮೆ ಇದೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕುಂದಾಪುರದಿಂದ ನೆರಳಕಟ್ಟೆ ಕಡೆಗೆ ತೆರಳುತ್ತಿದ್ದ ಕೆಎಸ್ಆರ್‌ಟಿಸಿ ಬಸ್ಸಿಗೆ, ತಲ್ಲೂರು ಕಡೆ ಬರುವ ಟಿಪ್ಪರ್‌ ಡಿಕ್ಕಿಯಾದ ಪರಿಣಾಮ ಬಸ್‌ ಜಖಂಗೊಂಡು ಇಬ್ಬರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡ ಘಟನೆ ಸೋಮವಾರ ಸಂಜೆ ತಲ್ಲೂರು – ನೇರಳಕಟ್ಟೆಯ ಶೆಟ್ರಕಟ್ಟೆ ತಿರುವಿನಲ್ಲಿ ನಡೆದಿದೆ. ಅಪಘಾತದಲ್ಲಿ 12ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿದ್ದು ಎಲ್ಲರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಟಿಪ್ಪರ್ ಚಾಲಕ ರಾಘವೇಂದ್ರ ಎಂಬುವವರು ತನ್ನ ಅತೀ ವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿ ನೇರಳಕಟ್ಟೆಯ ಶೆಟ್ರಕಟ್ಟೆ ತಿರುವಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ಸಿಗೆ ಎದುರುಗಡಯಿಂದ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಬಲಬದಿ ಜಖಂ ಆಗಿದೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 15 ಪ್ರಯಾಣಿಕರಿಗೆ ಗಾಯಗೊಂಡಿದ್ದಾರೆ. ಅದರಲ್ಲಿ 3 ಜನ ವಿದ್ಯಾರ್ಥಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ವಿದ್ಯಾರ್ಥಿಗಳ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿದ್ದಾರೆ. ಓರ್ವ ವಿದ್ಯಾರ್ಥಿ ಅಪಾಯದಿಂದ ಪಾರಾಗಿದ್ದಾರೆ. ಉಳಿದ ಗಾಯಾಳುಗಳನ್ನು ಕುಂದಾಪುರದ ಸರಕಾರಿ ಹಾಗೂ ಆದರ್ಶ ಅಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ್‌ ಕೊಡ್ಗಿ ಅವರು ತಮ್ಮ ಪ್ರದೇಶ ಅಭಿವೃದ್ಧಿ ನಿಧಿ ಅಡಿಯಲ್ಲಿ ಮಹೇಂದ್ರ ಕಂಪನಿಯ ಬೊಲೆರೋ ಜೀಪನ್ನು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಸೋಮವಾರ ಹಸ್ತಾಂತರಿಸಿದರು. ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಶಾಸಕ ಕೊಡ್ಗಿ ಅವರು, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ್, ಐಪಿಎಸ್ ಅವರಿಗೆ ಜೀಪಿನ ಕೀ ಯನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ತಿಮ್ಮಪ್ಪ ಗೌಡ, ಪೊಲೀಸ್ ಉಪಾಧೀಕ್ಷಕರು, ಡಿಎಆರ್ ಉಡುಪಿ, ರವಿ ಕುಮಾರ್, ಪೊಲೀಸ್ ನಿರೀಕ್ಷಕರು, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಹಾಗೂ ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯ ಸಹಾಯಕ ಆಡಳಿತ ಅಧಿಕಾರಿಯವರಾದ ಗೋಪಾಲ್, ಪೊಲೀಸ್‌ ಉಪನಿರೀಕ್ಷಕರುಗಳಾದ ಹರೀಶ್‌, ಸುಧಾರಾಣಿ ಮೊದಲಾದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೆಂಗಳೂರು: ಬೈಂದೂರು ಉತ್ಸವ 2026ರ ಪೂರ್ವಭಾವಿಯಾಗಿ ಬೆಂಗಳೂರಿನ ಬೈಂದೂರು ಉತ್ಸವ ಸಮಿತಿ ನೇತೃತ್ವದಲ್ಲಿ ವಿಜಯನಗರದ ಬಂಟರ ಸಂಘದಲ್ಲಿ ಉತ್ಸವ ಪೂರ್ವಭಾಗಿ ಸಭೆ, ‘ವಿದ್ಯಾ ಬೆಳಕು’ ಯೋಜನೆ ಪೋಸ್ಟರ್ ಅನಾವರಣ ಹಾಗೂ ಅಧಿಕೃತ ಆಹ್ವಾನ ಪತ್ರಿಕೆ ಬಿಡುಗಡೆ ಸಮಾರಂಭವು ನಡೆಯಿತು. ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನಮ್ಮ ಉತ್ಸವಗಳು ಕೇವಲ ಆಚರಣೆಗೆ ಸೀಮಿತವಾಗಿಲ್ಲ. ಸುಶಿಕ್ಷಿತ ಹಾಗೂ ಸುರಕ್ಷಿತ ಬೈಂದೂರು ನಿರ್ಮಾಣ ನಮ್ಮ ನಿಜವಾದ ಗುರಿ. ಆರೋಗ್ಯವೇ ಭಾಗ್ಯ. ಬೈಂದೂರು ಜನತೆಗೆ ಇನ್ಸುರೆನ್ಸ್ ಸೌಲಭ್ಯ ಒದಗಿಸುವ ಗುರಿ ಶ್ಲಾಘನೀಯ. ಅನಾರೋಗ್ಯ ಮುಕ್ತ ಬೈಂದೂರು ನಿರ್ಮಾಣಕ್ಕಾಗಿ ಸರ್ಕಾರ ಹಾಗೂ ಸಂಘ ಸಂಸ್ಥೆಗಳ ಸಹಕಾರದಿಂದ ಎಲ್ಲರಿಗೂ ಇನ್ಸುರೆನ್ಸ್ ಮಾಡಿಸುವ ಅಭಿಯಾನ ಯಶಸ್ವಿಯಾಗಬೇಕು. ಬೈಂದೂರಿನ ಅಭಿವೃದ್ಧಿಗೆ ಸಣ್ಣ ಉದ್ದಿಮೆಗಳ ಪಾತ್ರವೂ ದೊಡ್ಡದು. ಉತ್ಸವದ ಮೂಲಕ ಸಂಜೀವಿನಿ ಸ್ವಸಹಾಯ ಸಂಘಗಳಿಂದ ಸ್ಥಳೀಯ ಉದ್ಯಮ, ಉದ್ಯೋಗ ಕಲೆ, ಶಿಕ್ಷಣ, ಆರೋಗ್ಯಕ್ಕೆ ಪ್ರೋತ್ಸಾಹ ನೀಡುವ ಕಾರ್ಯ ನಮ್ಮೆಲ್ಲರಿಗೂ ಹೆಮ್ಮೆಯ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಯೋಗಾಸನ ಭಾರತ್‌ ಸಂಸ್ಥೆಯು ಮಹಾರಾಷ್ಟ್ರದ ಸಂಗಮ್ ನರ್ನಲ್ಲಿ ಆಯೋಜಿಸಿದ್ದ 6ನೇ ಜ್ಯೂನಿಯರ್‌ ಮತ್ತು ಸೀನಿಯರ್ ರಾಷ್ಟ್ರೀಯ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ಶಂಕರನಾರಾಯಣ ಪೊಲೀಸ್ ಠಾಣೆಯ ಸಿಬ್ಬಂದಿ ಗುರುದಾಸ್ ಅವರು ಪ್ರಥಮ ಸ್ಥಾನದೊಂದಿಗೆ ಗೋಲ್ಡ್‌ ಮೆಡಲ್‌ ಪಡೆದು ಅಂತರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ. ಅಂತರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸಲಿರುವ ಯೋಗಪಟುಗಳ ತಂಡದಲ್ಲಿ, ಗುರುದಾಸ್‌ ಅವರು ಕರ್ನಾಟಕದಿಂದ ಆಯ್ಕೆಯಾದ ಏಕೈಕ ಪೊಲೀಸ್‌ ಸಿಬ್ಬಂದಿಯಾಗಿದ್ದಾರೆ.  ಉತ್ತಮ ಯೋಗಪಟುವಾಗಿರುವ ಗುರುದಾಸ್‌ ಅವರು ಈ ಹಿಂದೆಯೂ ಅನೇಕ ಯೋಗಾಸನ ಕ್ರೀಡಾಕೂಟದಲ್ಲಿ ಪಾಲ್ಗೊಂಡು ರಾಜ್ಯ, ರಾಷ್ಟ್ರಮಟ್ಟದಲ್ಲಿ ಪದಕ ಗೆದ್ದುಕೊಂಡಿದ್ದರು. ಇದೀಗ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವುದು, ಅವರ ಪ್ರತಿಭಾ ಸಂಪನ್ನತೆಗೆ ಗರಿ ಮೂಡಿದಂತಾಗಿದೆ. ಗುರುದಾಸ್‌ ಅವರು ತಗ್ಗರ್ಸೆ ಗ್ರಾಮದ ಮಂಜುನಾಥ ಜಿ ಹಾಗೂ ಕಾವೇರಿ ದಂಪತಿಗಳ ಪುತ್ರರಾಗಿದ್ದು, ಪತ್ನಿ ರೂಪಾ ಅವರೊಂದಿಗೆ ಕುಂದಾಪುರದಲ್ಲಿ ವಾಸವಾಗಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರು ಸ್ವಾವಲಂಬಿ ಬದಕನ್ನು ಕಾಣುತ್ತಿದ್ದಾರೆ. ಇದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಕೋಟದ ಮಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸತೀಶ್ ಹೆಚ್. ಕುಂದರ್ ಹೇಳಿದರು. ಅವರು ಭಾನುವಾರ ಕೋಟದ ಮಣೂರು ಶ್ರೀ ರಾಜಲಕ್ಷ್ಮಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕೋಟ ವಲಯ ಹಮ್ಮಿಕೊಂಡ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಕೋಟ ವಲಯಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮನೆಯಿಂದಲೇ ಹೊರಬಾರದಿದ್ದ ಕಾಲಘಟ್ಟವೊಂದಿತ್ತು ಆದರೆ ಶ್ರೀ ಕ್ಷೇತ್ರದ ಖಾವಂದರ ಗ್ರಾಮಾಭಿವೃದ್ಧಿ ಯೋಜನೆಯಿಂದ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ದೊರಕಿದೆ ಎಂದರಲ್ಲದೆ ಇಂತಹ ಯೋಜನೆಗಳು ಮಹಿಳೆಯರ ಉನ್ನತಿಗೆ ಮತ್ತಷ್ಟು ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸಲಿ ಎಂದು ಶುಭಹಾರೈಸಿದರು. ಇದೇ ವೇಳೆ ಕೋಟ ವಲಯದ ವಿವಿಧ ಒಕ್ಕೂಟಗಳ ಅಧ್ಯಕ್ಷರಾದ ಗೀತಾ, ಸುಮತಿ, ರೇವತಿ ಶೆಟ್ಟಿ, ಮಾಲಿನಿ, ಲಲಿತಾ ಭಾಸ್ಕರ್, ಸವಿತಾ, ಜಯಂತಿ ಒಟ್ಟು ಎಂಟು ಒಕ್ಕೂಟಗಳಿಂದ ಅಧಿಕಾರ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಕುಂಭಾಸಿ ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನದಲ್ಲಿ ಜ.6 ಮಂಗಳವಾರದಂದು ಅಂಗಾರಕ ಸಂಕಷ್ಟಹರ ಚತುರ್ಥಿ ಪ್ರಯುಕ್ತ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಈ ಪ್ರಯುಕ್ತ ದೇವಳದಲ್ಲಿ ಲೋಕಕಲ್ಯಾಣಾರ್ಥ ಸಹಸ್ರ ನಾರಿಕೇಳ ಗಣಯಾಗ ನಡೆಯಲಿದ್ದು ಮಹಾ ಅನ್ನಸಂತರ್ಪಣೆ ಹಾಗೂ ರಾತ್ರಿ 8ಕ್ಕೆ ರಜತ ರಥೋತ್ಸವ ನಡೆಯಲಿದೆ. ಅಂಗಾರಕ ಸಂಕಷ್ಟಹರ ಚತುರ್ಥಿ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 4.30ರಿಂದ 6ರತನಕ ಕುಂಭಾಸಿ ಶ್ರೀವಿಶ್ವೇಶ್ವರ ಮಹಿಳಾ ಭಜನಾ ಮಂಡಳಿ ಆನೆಗುಡ್ಡೆ ಕುಂಭಾಸಿ ಅವರಿಂದ ಭಜನಾ ಕಾರ್ಯಕ್ರಮ, ಉಡುಪಿ ನಾಗರಾಜ ಶೇಟ್ ಹಾಗೂ ಬಳಗದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದು ದೇವಳದ ಆಡಳಿತ ಅನುವಂಶಿಕ ಧರ್ಮದರ್ಶಿ ಕೆ. ಶ್ರೀರಮಣ ಉಪಧ್ಯಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಮಕ್ಕಳಿಗೆ ಬಾಲ್ಯದಿಂದಲೇ ನಮ್ಮ ಕೌಟುಂಬಿಕ ವ್ಯವಸ್ಥೆಗಳು, ಸಂಸ್ಕೃತಿ, ಸಂಸ್ಕಾರಗಳ ಬಗ್ಗೆ ತಿಳಿಸಬೇಕು. ದೇಶದಲ್ಲಿನ ಪದ್ಧತಿ, ಅನ್ಯೋನ್ಯತೆ ಉಳಿದರೆ ಮಾತ್ರ ದೇಶ ಉಳಿಯುತ್ತದೆ. ದೇಶದ, ಸಮಾಜದ ಬೆಳವಣಿಗೆಗೆ ಪ್ರತಿಯೊಂದು ಸಮಾಜದ ಕೊಡುಗೆ ಇದೆ. ಜಾತಿ ಮನೆಯ ಹಾಗೂ ಸಮಾಜದ ಸಾಮರಸ್ಯ, ಸ್ವಾಸ್ಥ್ಯವನ್ನು ಗಟ್ಟಿ ಮಾಡಬೇಕೇ ಹೊರತು ಅದರ ಹೆಸರಿನಲ್ಲಿ ಬೇಧ ಮಾಡಬಾರದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಸಹ ಕಾರ್ಯವಾಹ ಹರಿಕೃಷ್ಣ ಹೇಳಿದರು. ಅವರು ಸೇವಾ ಸಂಗಮ ಟ್ರಸ್ಟ್ ಕುಂದಾಪುರ ಇವರ ಆಶ್ರಯದಲ್ಲಿ ಕುಂದಾಪುರ ರೋಟರಿ ಲಕ್ಷ್ಮೀ ನರಸಿಂಹ ಕಲಾ ಮಂದಿರದಲ್ಲಿ ಭಾನುವಾರ ನಡೆದ ಬಾಲಸಂಗಮ- ಮಾತೃಸಂಗಮ 2026 ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಕ್ತಾರರಾಗಿ ಮಾತನಾಡಿದರು. ಪ್ರಕೃತಿ ಉಳಿಸುವ ಜವಾಬ್ದಾರಿ ಎಲ್ಲರದ್ದಾಗಬೇಕು. ಸ್ವದೇಶಿ ವಸ್ತುಗಳನ್ನು ಉಪಯೋಗಿಸಿದರೆ ದೇಶದ ಏಳಿಗೆ, ಪ್ರಗತಿ ಸಾಧ್ಯವಿದೆ. ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳನ್ನು ಮತ್ತು ತಾಯಂದಿರನ್ನು ಗೌರವಿಸಿ ಪೂಜೆ ಮಾಡುತ್ತೇವೆ. ಮಕ್ಕಳ ಮುಂದಿನ ಭವಿಷ್ಯ ರೂಪಿಸುವಲ್ಲಿ ತಾಯಂದಿರ ಪಾತ್ರ ಮಹತ್ವದ್ದಾಗಿದೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಸಲ್ಲ ಬದಲಾಗಿ ಜಾಗೃತರಾಗಿ ಕಾಪಾಡಿಕೊಳ್ಳಿ ಎಂದು ಕೋಟ ವಿವೇಕ ವಿದ್ಯಾಸಂಸ್ಥೆಯ ನಿವೃತ್ತ ಪ್ರಾಂಶುಪಾಲರಾದ ಚಿತ್ರಾ ಕಾರಂತ ಹೇಳಿದರು. ಅವರು ಭಾನುವಾರ ಪ್ರಾಥಮಿಕ ಆರೋಗ್ಯ ಕೇಂದ್ರ, ಕಾರ್ಕಡ ಸಾಲಿಗ್ರಾಮ ಇಲ್ಲಿ ಯೆನೆಪೋ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಗೆಳೆಯರ ಬಳಗ ಕಾರ್ಕಡ, ಸಾಲಿಗ್ರಾಮ  ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ, ಕಾರ್ಕಡ – ಸಾಲಿಗ್ರಾಮ ಇವರ ಸಂಯುಕ್ತ ಆಶ್ರಯದಲ್ಲಿ ಡಾ. ಕೋಟ ಶಿವರಾಮ ಕಾರಂತರ ಸ್ಮರಣಾರ್ಥ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಕಾರಂತರ ಬಗ್ಗೆ ಗೆಳೆಯರ ಬಳಗಕ್ಕೆ ಅಗಾಧ ಅಭಿಮಾನದ ಹಿನ್ನಲ್ಲೆಯಲ್ಲಿ ಕಳೆದ ಸಾಕಷ್ಟು ವರ್ಷಗಳಿಂದ ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಾ ಬಂದಿದ್ದಾರೆ ಇದು ಶ್ಲಾಘನಾರ್ಹ ಕಾರ್ಯ ಎಂದರು. ಸಭೆಯ ಅಧ್ಯಕ್ಷತೆಯನ್ನು ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ ವಹಿಸಿ ಸ್ವಾಗತಿಸಿದರು. ಸಾಲಿಗ್ರಾಮ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಜಯಶೀಲಾ ಆಚಾರ್ಯ ಶುಭಾಶಂಸನೆಗೈದರು ಮುಖ್ಯ ಅತಿಥಿಗಳಾಗಿ ಯೆನೆಪೋಯ ವೈದ್ಯಕೀಯ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಹೆಬ್ರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಪ್ರಾಥಮಿಕ ವಿಭಾಗದ ಕೊಂಕಣಿ ಕಂಠಪಾಠ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿಯ ವಿದ್ಯಾರ್ಥಿನಿ ಸನ್ನಿಧಿ ಖಾರ್ವಿ  ದ್ವಿತೀಯ ಸ್ಥಾನ ಪಡೆದಿರುತ್ತಾಳೆ. ಈಕೆ ಅರುಣ್ ಖಾರ್ವಿ ಹಾಗೂ ಭವಾನಿ ಖಾರ್ವಿ ದಂಪತಿಯ ಪುತ್ರಿ.

Read More