Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸೇವೆಯನ್ನೇ ಮುಖ್ಯ ಧ್ಯೇಯವಾಗಿಟ್ಟುಕೊಂಡು ದೇಶದಾದ್ಯಂತ ಸನಾತನ ಹಿಂದು ಧರ್ಮದ ರಕ್ಷಣೆಯಲ್ಲಿ ಹಾಗೂ ಭಾರತೀಯ ಪರಂಪರೆ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೇತೃತ್ವದಲ್ಲಿ ರಚನೆಯಾದ ಸೇವಾಸಂಗಮ ಶಿಶುಮಂದಿರ ಕೇವಲ ಮಕ್ಕಳಿಗಲ್ಲದೇ ಮಾತೆಯರಿಗೂ ಧರ್ಮ ಜಾಗೃತಿ ಮೂಡಿಸುವ ಕೇಂದ್ರವಾಗಿದೆ ಎಂದು ಭಗವದ್ಗೀತಾ ಸಮಿತಿ ಅಧ್ಯಕ್ಷ ರಾಮಕೃಷ್ಣ ಶೇರುಗಾರ್ ಬಿಜೂರು ಹೇಳಿದರು. ಬೈಂದೂರು ಸೇವಾಸಂಗಮ ಶಿಶುಮಂದಿರ ಕಟ್ಟಡದ ನೂತನ ಮೇಲ್ಮಹಡಿಯನ್ನು ಉದ್ಘಾಟಿಸಿ, ನಂತರ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ರೋಟರಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು. ಹಿಂದು ಧರ್ಮದ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಧರ್ಮಕ್ಕೆ ಅನೇಕ ವಿಘ್ನಗಳು ಅಡಚಣೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ನಾವೆಲ್ಲರೂ ಜಾತಿಭೇಧ ಮರೆತು ಒಗ್ಗೂಡಬೇಕಿದೆ ಎಂದ ಅವರು ಆಂಗ್ಲಮಾಧ್ಯಮ ಶಿಕ್ಷಣದ ಮಧ್ಯೆಯೂ ಕೂಡ ಇಂದಿನ ಸಂಸ್ಕ್ರತಿಯ ಉಳಿವಿನ ದೃಷ್ಠಿಯಿಂದ ನಮ್ಮ ದೇಶದ ಇತಿಹಾಸ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಹೊರಾಡುತ್ತಿರುವ ಸೆವಾಸಂಗಮದ ಆಡಳಿತ ಮಂಡಳಿ ಸದಸ್ಯರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಒಂದು ಧರ್ಮದ ಪರವಾಗಿರುವ ರಾಷ್ಟ್ರವಾದ ಎಂದಿಗೂ ರಾಷ್ಟ್ರೀಯತೆಯಾಗದು. ಎಲ್ಲಾ ಧರ್ಮ, ಭಾಷೆ, ಪಂಗಡವನ್ನೊಳಗೊಂಡ ಸಂವಿಧಾನ ಮಾತ್ರ ಭಾರತದ ಶ್ರೇಷ್ಠ ಗ್ರಂಥ. ಎಲ್ಲರನ್ನೂ ಸಮಾನರಾಗಿ, ಗೌರವದಿಂದ ಕಾಣುವ, ಎಲ್ಲವನ್ನೂ ಒಳಗೊಂಡ ಸಂವಿಧಾನದ ಮೂಲ ತತ್ವವೇ ರಾಷ್ಟ್ರೀಯತೆ ಎಂದು ಮಣಿಪಾಲ ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಕೇಂದ್ರದ ನಿರ್ದೇಶಕ ವರದೇಶ ಹಿರೇಗಂಗೆ ಹೇಳಿದರು. ಸಮುದಾಯ ಕುಂದಾಪುರ ಇಲ್ಲಿನ ನೇತಾಜಿ ಸಭಾಭವನದಲ್ಲಿ ಆಯೋಜಿಸಿದ್ದ ’ರಾಷ್ಟ್ರೀಯತೆ – ಒಂದು ಮಾತುಕತೆ’ ಸಮುದಾಯ ಸಮೂಹ ಅಧ್ಯಯನದ ವಿಚಾರ ಸಂಕೀರಣದಲ್ಲಿ ಅವರು ಮಾತನಾಡಿದರು. ಭಾತರದ ಮಟ್ಟಿಗೆ ರಾಷ್ಟ್ರೀಯತೆ ಎನ್ನುವುದು ಆಧುನಿಕ ಸೃಷ್ಠಿ. ಇಲ್ಲಿ ವಿವಿಧ ಬಗೆಯ ರಾಷ್ಟ್ರೀಯತೆಯನ್ನು ಕಾಣಬಹುದಾದರೂ ಸಂವಿಧಾನವೇ ಪರಮೋಚ್ಚವಾದದ್ದು. ಇದು ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ದೇಶದ ಪ್ರಜೆಯೊಬ್ಬ ತನಗೆ ಬಡತನದಿಂದ, ಕೋಮುವಾದದಿಂದ, ಜಾತೀಯತೆಯಿಂದ ಮುಕ್ತಿಬೇಕು ಎಂದು ಹೇಳಿದರೆ, ನೆರೆಯ ರಾಷ್ಟ್ರವನ್ನು ಹೊಗಳಿದರೇ ಅದು ರಾಷ್ಟ್ರವಿರೋಧಿ ಎನ್ನಲಾಗದು. ಗಡಿಯ ರೇಖೆಗಳು ನಮ್ಮ ಸೃಷ್ಠಿ. ಮನುಷತ್ವಕ್ಕೆ ಗಡಿಗಳಿಲ್ಲ. ಮಾನವೀಯತೆಯನ್ನು ಮೀರಿತ ರಾಷ್ಟ್ರೀಯತೆಯೂ ಇಲ್ಲ ಎಂದವರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಾರ್ಮಿಕರ ಹದಿನೇಳು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದೇಶದ ಹನ್ನೊಂದು ಕಾರ್ಮಿಕ ಸಂಘಟನೆಗಳು ಸೆ.೦೨ರಂದು ಹಮ್ಮಿಕೊಂಡ ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರ ಯಶಸ್ವಿಗೊಳಿಸುವ ಪ್ರಯುಕ್ತ ತಾಲೂಕಿನಾದ್ಯಂತ ಮೂರು ದಿನಗಳ ಕಾಲ ವಾಹನ ಪ್ರಚಾರ ಜಾಥಾಕ್ಕೆ ಬೈಂದೂರು ಬಸ್ ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು. ಸಿಐಟಿಯು ತಾಲೂಕು ಅಧ್ಯಕ್ಷ ಎಚ್. ನರಸಿಂಹ ಜಾಥಾ ಉದ್ಘಾಟಿಸಿ ಮಾತನಾಡಿ, ಅಂದು ಬ್ರಿಟಿಷರ ವಿರುದ್ದ ಹೋರಾಡಿ ಕಾರ್ಮಿಕ ಕಾನೂನನ್ನು ಪಡೆದಿದೆ. ಆದರೆ ಸ್ವತಂತ್ರ ಭಾರತದಲ್ಲಿ ಇಂದಿನ ಕೇಂದ್ರ ಸರಕಾರ ೪೪ ಕಾನೂನನ್ನು ತಿದ್ದುಪಡಿ ಮಾಡಲು ಹೊರಟಿರುವುದು ಖಂಡನೀಯ ಕ್ರಮವಾಗಿದೆ. ಬೆಲೆ ಏರಿಕೆ ನಿಯಂತ್ರಿಸಲು ಸರ್ಕಾರ ವಿಫಲವಾಗಿದ್ದು, ರಸ್ತೆ ಸಾರಿಗೆ ನೌಕರರನ್ನು ಜೈಲಿಗಟ್ಟುವ ಕಾನೂನಿಗೆ ಸಚಿವ ಸಂಪುಟ ಅನುಮೋದನೆ ನೀಡಿರುವುದು ದುರಾದೃಷ್ಟಕರ. ಸರ್ಕಾರದ ಇಂತಹ ನೀತಿಗಳ ವಿರುದ್ದ ತಾಲೂಕಿನಲ್ಲಿ ಮಷ್ಕರ ಯಶಸ್ವಿಗೊಳಿಸಬೇಕಾಗಿದೆ ಎಂದು ಕರೆ ನೀಡಿದರು. ಈ ಸಂದರ್ಭ ಸಿಐಟಿಯು ಮುಖಂಡ ಸುರೇಶ ಕಲ್ಲಾಗರ್, ಇಂಡಕ್ ಅಧ್ಯಕ್ಷ ಲಕ್ಷ್ಮಣ ಶೆಟ್ಟಿ, ಕಾರ್ಯದರ್ಶಿ ಮಾಣಿ ಉದಯ ಪೂಜಾರಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಾಗರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಬೈಂದೂರು 2015-16ನೇ ಸಾಲಿನಲ್ಲಿ 253 ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿ 71.94 ಲಕ್ಷ ರೂ. ಲಾಭಗಳಿಸಿದೆ ಎಂದು ಸೊಸೈಟಿಯ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ತಿಳಿಸಿದರು. ಸೋಮವಾರ ಬೈಂದೂರಿನ ಪ್ರಧಾನ ಕಛೇರಿಯಲ್ಲಿ ಜರುಗಿದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಪ್ರಸ್ತುತ ಆರ್ಥಿಕ ವರ್ಷದಲ್ಲಿ ಸೋಸೈಟಿಯು 26.92ಕೋಟಿ ರೂ. ಠೇವಣಿ ಸಂಗ್ರಹಿಸಿ, 21.23ಕೋಟಿ ರೂ. ಸಾಲರುವುದಲ್ಲದೇ ಆರ್ಥಿಕ ವರ್ಷದಲ್ಲಿ ಒಟ್ಟು 253ಕೋಟಿ ವಹಿವಾಟು ನಡೆಸಿದೆ. 71.94ಲಕ್ಷ ರೂ. ಲಾಭಾಂಶದಲ್ಲಿ ಸದಸ್ಯರಿಗೆ ಶೇ.14 ಡಿವಿಡೆಂಟ್ ಘೋಷಿಸಲಾಗಿದೆ ಎಂದರು. ಗ್ರಾಹಕರೊಂದಿಗೆ ಉತ್ತಮ ಭಾಂದವ್ಯ ಹೊಂದಿ ವ್ಯವಹಾರ ನಡೆಸುತ್ತಿರುವ ಸಾಗರ್ ಕ್ರೆಡಿಟ್ ಕೋ-ಆಪರೇಟಿವ್ ಈಗಾಗಲೇ ೬ ಶಾಖೆಗಳನ್ನು ಹೊಂದಿದ್ದು ಮುಂದಿನ ದಿನಗಳಲ್ಲಿ ಜನರ ಬೇಡಿಕೆಗನುಗುಣವಾಗಿ ಹೆಚ್ಚಸಲಾಗುವುದು ಎಂದ ಅವರು ಉನ್ನತ ವ್ಯಾಸಂಗದಲ್ಲಿ ತೊಡಗಿಕೊಳ್ಳುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಸಲುವಾಗಿ ಸಂಸ್ಥೆಯ ಈಗಾಗಲೇ ಆರ್ಥಿಕ ಸಹಾಯ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಅದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬಳ್ಕೂರು ಗ್ರಾಮದಲ್ಲಿರುವ ಸರಕಾರಿ ಸ್ಥಳ ನಿವೇಶನ ರಹಿತರಿಗೆ ಹಕ್ಕು ಪತ್ರ ವಿತರಣೆ ಮಾಡಲು ಒತ್ತಾಯಿಸಿ ಬಳ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತ ಅರ್ಜಿದಾರರ ಬೃಹತ್ ಸಮಾವೇಶ ಬಳ್ಕೂರು ಗ್ರಾಮ ಪಂಚಾಯತ್ ಹಳೇ ಕಛೇರಿ ವಠಾರದಲ್ಲಿ ಜರಗಿತು. ಸಿಐಟಿಯು ಕುಂದಾಪುರ ತಾಲೂಕು ಅಧ್ಯಕ್ಷ ಎಚ್. ನರಸಿಂಹ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಾ ಬಳ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗುರುತಿಸಲಾದ ಸರಕಾರಿ ಸ್ಥಳ ಸುಮಾರು ೨೯ ಎಕ್ರೆಯನ್ನು ಬಡ ನಿವೇಶನ ರಹಿತರಿಗೆ ಹಕ್ಕು ಪತ್ರ ವಿತರಣೆ ಮಾಡುವುದಕ್ಕೆ ಕ್ರಮ ಕೈಗೊಳ್ಳಬೇಕೆಂದು ಸರಕಾರವನ್ನು ಒತ್ತಾಯಿಸಿದ್ದಾರೆ. ಕೃಷಿ ಕೂಲಿಕಾರರ ಸಂಘದ ತಾಲೂಕು ಅಧ್ಯಕ್ಷ ರಾಜೀವ ಪಡುಕೋಣೆ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ – ಮುಖಂಡರಾದ ರಮೇಶ ಗುಲ್ವಾಡಿ, ಜ್ಯೋತಿ ಉಪಾಧ್ಯ, ಮಹಾಬಲ ಬಳ್ಕೂರು ಮೊದಲಾದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಆಶ್ರಯದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉಪ್ಪಿನಕುದ್ರುವಿನ ನೇತಾಜಿ ಕಮಿಟಿ ಫ್ರೆಂಡ್ಸ್‌ನ ಅಧ್ಯಕ್ಷ ದಿನೇಶ್ ದೇವಾಡಿಗ ಅವರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ತಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಆನಂದ ಬಿಲ್ಲವ, ಕುಂದಾಪುರ ತಾಲೂಕು ಪಂಚಾಯತ್ ಸದಸ್ಯ ಕರುಣಾಕರ ಪೂಜಾರಿ, ನಾರಾಯಣ ವಿಕಲ ಚೇತನ ಶಾಲೆಯ ಮುಖ್ಯಸ್ಥ ಸುರೇಶ್ ತಲ್ಲೂರು, ನೇತಾಜಿ ಕಮಿಟಿ ಫ್ರೆಂಡ್ಸ್‌ನ ಗೌರವಾಧ್ಯಕ್ಷ ವಿಜೇಯ ಮೆನೇಜಸ್, ಯುವಕ ಮಂಡಲದ ಅಧ್ಯಕ್ಷ ಗಿರೀಶ್ ನಾಯಕ್, ಗಿರೀಶ್ ಹಲ್ಸ್‌ನಾಡು ಉಪ್ಪಿನಕುದ್ರು, ಅಕಾಡೆಮಿಯ ಅಧ್ಯಕ್ಷ ಭಾಸ್ಕರ ಕೊಗ್ಗ ಕಾಮತ್, ನಾಗೇಶ್ ಶ್ಯಾನುಭಾಗ್ ಇನ್ನಿತರರು ಉಪಸ್ಥಿತರಿದ್ದರು. ನೇತಾಜಿ ಕಮಿಟಿ ಫ್ರೆಂಡ್ಸ್ ವತಿಯಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ತಲ್ಲೂರಿನ ನಾರಾಯಣ ವಿಕಲ ಚೇತನರ ವಿಶೇಷ ತರಬೇತಿ ಕೇಂದ್ರದ ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ಜರುಗಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದ ಭಂಡಾರ್‌ಕಾರ್ಸ್ ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ ಕಾಲೇಜಿನ ಎ.ವಿ. ಹಾಲ್‌ನಲ್ಲಿ ನಡೆಯಿತು. ಮಹಾಸಭೆಯಲ್ಲಿ ಸಂಘದ ಕಾರ್ಯದರ್ಶಿ ರಂಜಿತ್ ಕುಮಾರ್ ಶೆಟ್ಟಿ ವಕ್ವಾಡಿ ವರದಿ ವಾಚಿಸಿದರು. ಕೋಶಾಧಿಕಾರಿ ಕೆ. ಶಾಂತರಾಮ್ ಆಯ ವ್ಯಯ ಮಂಡಿಸಿದರು. ಅಧ್ಯಕ್ಷ ಕೆ. ಕಾರ್ತಿಕೇಯ ಮಧ್ಯಸ್ಥ ಎರಡು ವರ್ಷಗಳ ಕಾಲ ಹಳೆ ವಿದ್ಯಾರ್ಥಿ ಸಂಘವನ್ನು ಉತ್ತಮವಾಗಿ ಮುನ್ನಡೆಸಲು ಸಹಕರಿಸಿದ ಸದಸ್ಯರಿಗೆ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು ಇದೇ ಸಂದರ್ಭದಲ್ಲಿ ಮುಂದಿನ ಎರಡು ವರ್ಷ ಅವಧಿಗೆ ನೂತನ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳ ಆಯ್ಕೆ ಪ್ರಕ್ರಿಯೆಗೆ ಚುನಾವಣಾಧಿಕಾರಿಯಾಗಿ ಹಿರಿಯ ಸದಸ್ಯ ಕೃಷ್ಣಾನಂದ ಚಾತ್ರ ಅವರನ್ನು ನೇಮಿಸಿದ್ದು, ಅಧ್ಯಕ್ಷ ಮತ್ತು ಕಾರ್ಯದರ್ಶಿಯನ್ನು ಮುಂದಿನ ಎರಡು ವರ್ಷಗಳ ಅವಧಿಗೆ ಪುನರಾಯ್ಕೆ ಮಾಡುವ ಕುರಿತು ಸಭೆ ನಿರ್ಧರಿಸಿತು. ಸಂಘದ ಪೂರ್ವಾಧ್ಯಕ್ಷ ರಾಜೀವ ಕೋಟ್ಯಾನ್ ಅವರು ಕೆ. ಕಾರ್ತಿಕೇಯ ಮಧ್ಯಸ್ಥರನ್ನು ಅಧ್ಯಕ್ಷ ಹಾಗೂ ರಂಜಿತ್ ಕುಮಾರ್ ಶೆಟ್ಟಿಯವರನ್ನು ಕಾರ್ಯದರ್ಶಿಯಾಗಿ ಸೂಚಿಸಿದರು. ಸಂಘದ ಉಪಾಧ್ಯಕ್ಷ ಸಂದೀಪ ಪೂಜಾರಿ ಅನುಮೋದಿಸಿದರು. ಮುಂಬರುವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗೋಪಾಲಕೃಷ್ಣ ವಿವಿಧೋದ್ದೇಶ ಸೇವಾ ಸಹಕಾರಿ ಸಂಘವು ಅಭಿವೃದ್ಧಿ ಪಥದಲ್ಲಿ ಮುನ್ನೆಡೆಯುತ್ತಿದ್ದು, ಶೀಘ್ರದಲ್ಲಿ ಕುಂದಾಪುರದಲ್ಲಿ ಕೇಂದ್ರ ಕಛೇರಿಯನ್ನು ತೆರೆಯಲಿದ್ದು, ನಾವುಂದ ಹಾಗೂ ಬೈಂದೂರಿನಲ್ಲಿ ಶಾಖಾ ಕಛೇರಿಗಳಾಗಿ ಕಾರ್ಯನಿರ್ವಹಿಸಲಿವೆ. ಸಂಘದ ಅಧೀನದಲ್ಲಿ ಸ್ವಸಹಾಯ ಗುಂಪುಗಳ ರಚನೆ ಮಾಡಿ ಪ್ರಧಾನ ಕಛೇರಿ ಸ್ಥಳಾಂತರದಂದು ಉದ್ಘಾಟಿಸಲಾಗುವುದು. ಸದಸ್ಯರು ತಮ್ಮ ಗ್ರಾಮ ವ್ಯಾಪ್ತಿಯಲ್ಲಿ ಸ್ವಸಹಾಯ ಗುಂಪುಗಳ ರಚನೆ ಮಾಡುವುದರ ಮೂಲಕ ಸ್ವಾವಲಂಬನೆಗೆ ಒತ್ತು ನೀಡಬೇಕಾಗಿದೆ ಎಂದು ಗೋಪಾಲಕೃಷ್ಣ ವಿವಿಧೋದ್ದೇಶ ಸೇವಾ ಸಹಕಾರಿ ಸಂಘ ನಿ., ನಾವುಂದ ಇದರ ಅಧ್ಯಕ್ಷರಾದ ರಮೇಶ ಗಾಣಿಗ ಕೊಲ್ಲೂರು ಹೇಳಿದರು. ನಾವುಂದದ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ನಡೆದ ಗೋಪಾಲಕೃಷ್ಣ ವಿವಿಧೋದ್ದೇಶ ಸೇವಾ ಸಹಕಾರಿ ಸಂಘ ೯ನೇ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘವು ವರದಿ ವರ್ಷದಲ್ಲಿ ೩೬೩೩ ಸದಸ್ಯರನ್ನು ಹೊಂದಿ, ಒಟ್ಟು ರೂ. ೪೯,೫೦,೮೮೦ ಪಾಲುಹಣವನ್ನು ಹೊಂದಿದೆ.ವಿವಿಧ ಠೇವಣಿಗಳಿಂದ ಒಟ್ಟು ರೂ.೪,೭೭,೨೮,೪೨೦.೩೦ ಠೇವಣಾತಿ ಹೊಂದಿದ್ದು, ಹಿಂದಿನ ಸಾಲಿಗೆ ಹೋಲಿಸಿದರೆ ಠೇವಣಿ ಸಂಗ್ರಹಣೆಯಲ್ಲಿ ರೂ.೧,೧೯,೨೯,೭೧೨ರಷ್ಟು ಜಾಸ್ತಿಯಾಗಿದ್ದು, ಶೇ.೩೩.೩೨ರಷ್ಟು ವೃದ್ದಿಯಾಗಿದೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಇಂದು ನಮ್ಮ ದೇಶದಲ್ಲಿ ಪರಿಸರದಲ್ಲಿರುವ ಕಸ ಕಲ್ಮಶಗಳನ್ನು ಸ್ವಚ್ಛಗೊಳಿಸುವ ಯೋಜನೆ ಜಾರಿಯಲ್ಲಿದೆ. ಹಾಗೆಯೇ ಇಂದು ನಮ್ಮ ಮನ ಮನಸ್ಸಿನಲ್ಲಿರುವ ಅಶುದ್ಧವನ್ನು ಹೋಗಲಾಡಿಸುವುದು ಅಗತ್ಯವಾಗಿದೆ. ಸಾಹಿತ್ಯ ಎಂದರೆ ಒಂದು ಅಕ್ಷರ, ಒಂದು ಪದ, ಒಂದು ವಾಕ್ಯ ಗುಚ್ಛ, ಒಂದು ಪುಸ್ತಕವಲ್ಲ, ಸಾಹಿತ್ಯ ಎಂದರೆ ಅದು ಒಂದು ಶಕ್ತಿ. ಸಾಹಿತ್ಯದ ಮಾಧ್ಯಮವಾದ ಒಂದು ಪುಸ್ತಕದಿಂದ ಒಂದು ಉತ್ತಮ ಮಾನವನ ನಿರ್ಮಾಣ ಸಾಧ್ಯವಿದೆ ಎಂದು ಮೈಸೂರು ಜಯಜಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಕುಮಾರಿ ತೃಪ್ತಿ ಕೆ.ಆರ್. ಹೇಳಿದರು. ಅವರು ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಮಹಾತ್ಮ ಗಾಂಧಿ ಸಭಾಭವನದಲ್ಲಿ ಉಡುಪಿ ಕಾಸರಗೋಡು ಜಿಲ್ಲೆ ಸಹಿತ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ (ರಿ.) ಮಂಗಳೂರು ಸಹಯೋಗದೊಂದಿಗೆ ಕೋಟ ವಿವೇಕ ವಿದ್ಯಾ ಸಂಸ್ಥೆಗಳು, ಡಾ.ಕೋಟ ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆ(ರಿ.) ಸಾಲಿಗ್ರಾಮ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ೨೩ನೇ ವರ್ಷದ ಮಕ್ಕಳ ಸಾಹಿತ್ಯಿಕ, ಸಾಂಸ್ಕೃತಿಕ ಸಮ್ಮೇಳನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರತಿಯೊಂದು ಮಗು ಹುಟ್ಟಿನಿಂದಲೇ ಮಾನವ ಹಕ್ಕುಗಳನ್ನು ಪಡೆದಿರುತ್ತದೆ. ಮಾನವ ಹಕ್ಕುಗಳಿಗೆ ಯಾವುದೇ ಜಾತಿ, ಧರ್ಮ, ಲಿಂಗ, ಮತ ಬೇಧಯಿಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ಈ ಹಕ್ಕು ಅನ್ವಯಿಸುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಪ್ರಜೆಯೂ ಮಾನವ ಹಕ್ಕುಗಳ ಕುರಿತು ಯೋಚಿಸಬೇಕಾದದ್ದು ಇಂದಿನ ತುರ್ತು ಎಂದು ಕಾಳಾವಾರ ವರದರಾಜ ಎಮ್. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೋಟೆಶ್ವರದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ನಿತ್ಯಾನಂದ ಎನ್. ಹೇಳಿದರು. ಅವರು ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಮಾನವ ಹಕ್ಕುಗಳ ಘಟಕದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಸಂಯೋಜಕಿ ಶ್ರೀಮತಿ ಅನಿತಾ ಅಲೈಸ್ ಡಿ’ಸೋಜಾ ಸ್ವಾಗತಿಸಿದರು. ಗಣಕಯಂತ್ರ ವಿಭಾಗದ ಉಪನ್ಯಾಸಕಿ ಕು. ವಿಜಯಲಕ್ಷ್ಮೀ ವಂದಿಸಿದರು. ವಿದ್ಯಾರ್ಥಿ ಪ್ರತಿನಿಧಿ ಪ್ರಿಯಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ದೀಪಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Read More