ಕುಂದಾಪುರ ತಾಲೂಕು ಹವ್ಯಕಸಭಾ ವಾರ್ಷಿಕೋತ್ಸವ, ಸನ್ಮಾನ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ,
ಕುಂದಾಪುರ: ತಾಲೂಕು ಹವ್ಯಕಸಭಾದ ೧೬ನೆ ವಾರ್ಷಿಕೋತ್ಸವವು ರವಿವಾರ ಉಪ್ಪುಂದದ ರಾಘವೇಂದ್ರ ಮಠದ ಆವರಣದಲ್ಲಿ ನಡೆಯಿತು. ಸಭಾದ ಅಧ್ಯಕ್ಷ ಎಂ. ನಾಗರಾಜ ಭಟ್ ಅಧ್ಯಕ್ಷತೆ ವಹಿಸಿ, ಅತಿಥಿಗಳನ್ನು ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿದ್ದ ಕರ್ನಾಟಕ ಬ್ಯಾಂಕ್ ಮಹಾ ಪ್ರಬಂಧಕ ಯು. ಸುಭಾಶ್ಚಂದ್ರ ಪುರಾಣಿಕ್ ಮಾತನಾಡಿ ಸಮುದಾಯ ಸಂಘಟನೆಯ ಗಾತ್ರಕ್ಕಿಂತ ಅದು ನಡೆಸುವ ಚಟುವಟಿಕೆ ಹೆಚ್ಚು ಪ್ರಸ್ತುತವೆನಿಸುತ್ತದೆ. ಅದು ಸಭೆ, ಸಮಾರಂಭಗಳಿಗೆ ಸಮಯ, ಹಣ ವಿನಿಯೋಗಿಸುವ ಬದಲು ಧಾರ್ಮಿಕ ಕಾರ್ಯಕ್ರಮಗಳಿಗೆ ಒತ್ತು ನೀಡಬೇಕು. ಸದಸ್ಯರಲ್ಲಿ ಸಂಸ್ಕೃತಿ ಮತ್ತು ಧರ್ಮ ಜಾಗೃತಿಗೆ ಕ್ರಮ ಕೈಗೊಳ್ಳಬೇಕು. ಯುವಜನರು ಧನಾತ್ಮಕ ಮನೋಧರ್ಮ ಹೊಂದುವಂತೆ, ಕ್ರಿಯಾಶೀಲರಾಗುವಂತೆ ಅವರಿಗೆ ಪ್ರೇರಣೆ, ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು. ಇನ್ನೋರ್ವ ಮುಖ್ಯ ಅತಿಥಿ ಕುಂದಾಪುರ ಭಂಡಾರ್ಕಾರ‍್ಸ್ ಕಾಲೇಜಿನ ಪ್ರಾಧ್ಯಾಪಕ ಜಿ. ಎಸ್. ಹೆಗಡೆ ಅವರು ಶುಭ ಹಾರೈಸಿದರು.

Call us

Click Here

ಸುಭಾಶ್ಚಂದ್ರ ಪುರಾಣಿಕ್ ಮತ್ತು ಮರವಂತೆ ದುರ್ಗಾಯಕ್ಷೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಎಂ. ಜಗದೀಶ ಅವಭೃತ್ ಅವರನ್ನು ಸನ್ಮಾನಿಸಲಾಯಿತು. ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶ್ರೇಷ್ಠ ಅಂಕ ಗಳಿಸಿದ್ದ ಬಸ್ರೂರಿನ ವೆಂಕಟೇಶ ಪುರಾಣಿಕ, ಸಾಯಿ ಗಣೇಶ್, ಉಪ್ಪುಂದದ ಸುಗಂಧಿನಿ ಭಟ್, ಹಕ್ಲಾಡಿಯ ಸುಮಂತ ಹೆಬ್ಬಾರ್, ಬೈಂದೂರಿನ ಆಶ್ರಿತಾ ಭಟ್ ಅವರನ್ನು ಪುರಸ್ಕರಿಸಲಾಯಿತು.

ಕಾರ್ಯದರ್ಶಿ ಯು. ಸಂದೇಶ ಭಟ್ ಸಂಘದ ವರದಿಯನ್ನು, ಕೋಶಾಧಿಕಾರಿ ಪಿ. ಶ್ರೀಧರ ಭಟ್ ಆಯವ್ಯಯ ವಿವರವನ್ನು ಮಂಡಿಸಿದರು. ಮಾಜಿ ಅಧ್ಯಕ್ಷ ಯು. ಮಂಜುನಾಥ ಭಟ್ ವಂದಿಸಿದರು.

Leave a Reply