Author: ನ್ಯೂಸ್ ಬ್ಯೂರೋ

ಕುಂದಾಪುರ: ಹೆಮ್ಮಾಡಿ ಜನತಾ ಪ.ಪೂ ಕಾಲೇಜಿನಲ್ಲಿ ನ.೨೬ ರಂದು ಭಾರತೀಯ ಸಂವಿಧಾನ ದಿನಾಚರಣೆ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಹಾಗೂ ರಾಜಕೀಯ ಶಾಸ್ತ್ರ ಉಪನ್ಯಾಸಕ ಸುಧಾಕರ ವಕ್ವಾಡಿ ಅವರು ಸಂವಿಧಾನದ ಪೂರ್ವ ಪೀಠಿಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಮಾಣ ವಿಧಿ ಬೋಧಿಸಿಸುತ್ತಾ ಸಂವಿಧಾನವು ರಾಷ್ಟ್ರಕ್ಕೆ ಸೂಚಿಸಿರುವ ಗುರಿ ಮತ್ತು ಉದ್ದೇಶಗಳನ್ನು ಪೀಠಿಕೆ ಸ್ಪಷ್ಟಪಡಿಸುತ್ತದೆ. ಪ್ರಸ್ತಾವನೆಯು ಸಂವಿಧಾನದ ಅವಿಭಾಜ್ಯ ಅಂಗವಾಗಿದ್ದು, ಸಂವಿಧಾನ ನಿರ್ಮಾಪಕರು ರಾಷ್ಟ್ರವು ಮುಂದೆ ಹೇಗೆ ಸಾಗಬೇಕೆಂದು ಸೂಚಿಸಿರುವ ಮಾರ್ಗ ಮತ್ತು ಅದರಲ್ಲಿ ಅಡಕವಾಗಿರುವ ಅಂಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ವಿವರಿಸಿದರು.

Read More

ಕುಂದಾಪುರ: ಘಟನೆಯೊಂದರ ವರದಿಗೆ ತೆರಳಿದ್ದ ಪತ್ರಕರ್ತನನ್ನು ಕುಂದಾಪುರದ ಉಪ ನಿರೀಕ್ಷಕ ನಾಸೀರ್ ಹುಸೇನ್ ವಿನಾಕಾರಣ ತಡೆದು, ಎಳೆದಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಇಂದು ವರದಿಯಾಗಿದೆ. ಘಟನೆಯ ವಿವರ: ಹಿರಿಯ ಪತ್ರಕರ್ತ ಜಾನ್ ಡಿಸೋಜ ಎಂದಿನಂತೆ ಕುಂದಾಪುರ ಸಂಗಮ್ ಸೇತುವೆಯ ಬಳಿ ನಡೆದ ವ್ಯಕ್ತಿಯೋರ್ವರ ಆತ್ಮಹತ್ಯೆ ಪ್ರಕರಣದ ವರದಿಗಾಗಿ ಘಟನಾ ಸ್ಥಳಕ್ಕೆ ತೆರಳಿದ್ದರು. ಅದಾಗಲೇ ಅಲ್ಲಿ ನೂರಾರು ಹಲವಾರು ಜಮಾಯಿಸಿದ್ದರು. ಜಾನ್ ಸೇತುವೆಯ ಪಕ್ಕ ನಿಂತ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾಗ ಹಿಂಬದಿಯಿಂದ ಬಂದ ಕುಂದಾಪುರದ ಪಿಎಸ್‌ಐ ನಾಸೀರ್ ಹುಸೆನ್ ಜಾನ್ ಅವರ ಬೆನ್ನಿಗೆ ಬಲವಾಗಿ ಗುದ್ದಿದ್ದಾರೆನ್ನಲಾಗಿದೆ. ಅಚಾನಕ್ ಘಟನೆಯಿಂದ ವಿಚಲಿತರಾದ ಪತ್ರಕರ್ತರು ಎಸ್‌ಐ ಅವರ ಕೃತ್ಯವನ್ನು ಪ್ರಶ್ನಿಸಿದಾಗ ನೀವು ಪತ್ರಕರ್ತರೆಂಬದು ತನಗೆ ತಿಳಿಯಲಿಲ್ಲ ಎಂಬ ಉಡಾಫೆಯ ಉತ್ತರವನ್ನು ನೀಡಿದ್ದಾರೆ. ಪತ್ರಕರ್ತರಿಗೆ ವಿಶೇಷ ಸ್ಥಾನಮಾನವಿರುವುದಿಲ್ಲ. ಆದರೆ ಜನಸಾಮಾನ್ಯರಿಗಾದರೂ ಒಂದೇ ಸಮನೆ ಹೀಗೆ ಮಾಡುವುದು ಸರಿಯಲ್ಲ ಎಂದು ಹೇಳಿದಾಗ ಈರ್ವರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ನಡುವೆ ಸ್ಥಳದಲ್ಲಿ ಪೋಟೋ ತೆಗೆಯುತ್ತಿದ್ದ ವರದಿಗಾರ ಶ್ರೀಕಾಂತ ಹೆಮ್ಮಾಡಿಯನ್ನು ಕೂಡ ಹಿಡಿದು ಎಳೆದಿದ್ದಾರೆ…

Read More

ಮೂಡುಬಿದಿರೆ: ‘ಸೃಜನಶೀಲತೆಯನ್ನು ಕಳೆದುಕೊಂಡಾಗ ಅಸಹಿಷ್ಣುತೆ ಹೆಚ್ಚಾಗುತ್ತದೆ. ಸೃಜನಶೀಲತೆ ಜೀವಂತವಾಗಿದ್ದರೆ ಅಸಹಿಷ್ಣುತೆಯ ಮಾತು ಹುಟ್ಟುವುದೇ ಇಲ್ಲ’ ಎಂದು ಸಾಹಿತಿ ಹೇಳಿದರು. ಆಳ್ವಾಸ್ ನುಡಿಸಿರಿಯಲ್ಲಿ ಕೆ.ಎಸ್. ನರಸಿಂಹ ಸ್ವಾಮಿ ನೆನಪು ಸಂಸ್ಮರಣೆಯಲ್ಲಿ ಮಾತನಾಡಿದ ಅವರು, ‘ಒತ್ತಾಯವನ್ನು ಹೇರುವ ಕಾಲವಿದು. ಎಷ್ಟೇ ಒತ್ತಡ ಬಂದರೂ ಸೃಜನಶೀಲ ಲೇಖಕ ತನ್ನ ಅಂತರಂಗದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕು. ಇಂದಿನ ದಿನಗಳಲ್ಲಿ ಲೇಖಕರು ತಮ್ಮ ಸೃಜನಶೀಲತೆಯನ್ನು ಒತ್ತೆ ಇಡುತ್ತಿದ್ದಾರೆ. ಸಮಾಜದಲ್ಲಿ ಕೇಳುವವರಿದ್ದಾರೆ ಆದರೆ, ಲೇಖಕರು ಹೇಳುವ ಶಕ್ತಿಯನ್ನು ಕಳೆದುಕೊಂಡಿದ್ದಾರೆ. ಸೃಜನಶೀಲ ಶಕ್ತಿಯನ್ನು ಉಳಿಸಿಕೊಳ್ಳಬೇಕು’ ಎಂದು ಪ್ರತಿಪಾದಿಸಿದರು. ಕೆಎಸ್ಎನ್ ಅವರು ಕೇವಲ ಪ್ರೇಮಕವಿಯಲ್ಲ. ಬದಲಿಗೆ ಅವರು ಎಲ್ಲ ವಿಚಾರಗಳನ್ನು ಸೂಚ್ಯವಾಗಿ ಹೇಳಿದ ಕವಿ. ಆದ್ದರಿಂದ ರೈತರ ಆತ್ಮಹತ್ಯೆ, ಭಯೋತ್ಪಾದನೆ ಹೆಚ್ಚುತ್ತಿರುವ ಇಂದಿನ ಕಾಲದಲ್ಲಿ ನಾವೆಲ್ಲ ಕೆಎಸ್ಎನ್ ಅವರತ್ತ ವಾಲಬೇಕಿದೆ’ ಎಂದು ಹೇಳಿದರು. ಅಧಿಕಾರ ಮತ್ತು ಭೋಗ ಜನರನ್ನು ಗಾಢವಾಗಿ ಪ್ರಭಾವ ಬೀರುವ ಅಂಶಗಳು. ಅಧಿಕಾರದ ಬಗ್ಗೆ ಬೇಕಾದಷ್ಟು ಕಾವ್ಯಗಳಿವೆ. ಆದರೆ, ಭೋಗದ ಬಗ್ಗೆ ಇರುವ ಕಾವ್ಯಗಳ ಸಂಖ್ಯೆ ತುಂಬಾ ಕಡಿವೆ. ಶೃಂಗಾರ ಕಾವ್ಯವನ್ನು ಎಚ್ಚರಿಕೆಯಿಂದ ಬರೆಯಬೇಕು.…

Read More

ಎನ್. ಪೂಜಾ ಪಕ್ಕಳ. ಈ ಚಿತ್ರಗಾರನ ಕಲಾಕುಂಚಕ್ಕೆ ಕಣ್ಣ ಮುಂದಿನ ವಸ್ತುಗಳೇ ವಿಷಯಗಳು. ನೈಜತೆ ಮತ್ತು ಜನಜೀವನಕ್ಕೆ ಹತ್ತಿರವಾದ ಚಿತ್ರಗಳನ್ನು ಬರೆಯಬೇಕು ಮತ್ತು ಅವು ನೋಡುಗನನ್ನು ಆಕರ್ಷಿಸುವಂತಿರಬೇಕು ಎನ್ನುವುದು ಚಿತ್ರಗಾರ ಗಿರೀಶ್ ಕನಸು. ಬೈಂದೂರಿನ ತಗ್ಗರ್ಸೆ ಗಿರೀಶ್ ಪ್ರತಿಭೆಗೆ ತಾಯಿಯೇ ಸ್ಪೂರ್ತಿ. 25ರ ಹರೆಯದ ಈತನಿಗೆ ಆರಂಭದಲ್ಲಿ ಗೆರೆಗಳ ಆಟವಾಗಿ ತೋರಿದ ಈ ಕಲೆ ಮುಂದೆ ಬದುಕಿನ ದಾರಿಯಾಯಿತು. ಗಿರೀಶ್ ಎಂಬ ಚಿತ್ರಕಾರನ ಕಲಾಕುಂಚ ಆರಂಭಗೊಂಡಿದ್ದು ಬಾಲ್ಯದಲ್ಲಿ. ಮಣ್ಣಿನ ಕಲಾಕೃತಿಗಳನ್ನು ರಚಿಸುವುದರಲ್ಲಿ ಪ್ರಾವಿಣ್ಯತೆ ಹೊಂದಿದ್ದ ಗಿರೀಶ್ ತನ್ನ ಶಾಲಾ ದಿನಗಳಲ್ಲಿಯೇ ಹಲವು ಸ್ವರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದವರು. ಯಾರೋ ಪ್ರಾಣಿಗಳನ್ನು ಕೊಲ್ಲಲು ಇಟ್ಟ ಸಿಡಿಮದ್ದು ಈತನ ಕೈಬೆರಳುಗಳನ್ನು ಕಿತ್ತುಕೊಂಡಿತ್ತು. ಆ ಘಟನೆಯ ನಂತರ ಬಾಲ್ಯದ ಆಸಕ್ತಿಯ ಕಲೆಯನ್ನು ಮುಂದುವರಿಸಲು ಇವರ ಕೈಗಳು ಅಂದುಕೊಂಡ ಹಾಗೆ ಸಹಕರಿಸಲಿಲ್ಲ. ಹಾಗೆಂದು ಗಿರೀಶ್ ಛಲ ಬಿಡಲಿಲ್ಲ. ಫಲವಾಗಿ ತಾವು ಬಯಸಿದ ಕಲಾಕುಂಚ ಲೋಕಕ್ಕೆ ತನ್ನನ್ನು ಪರಿಚಯಿಸಿಕೊಂಡರು. ತಗ್ಗರ್ಸೆಯ ಗಣೇಶ್ ಗಾಣಿಗ ಮತ್ತು ತಾಯಿ ಸೀತಾ ದಂಪತಿಗಳ ಮಗನಾದ ಗಿರೀಶ್  ಬಿ.ವಿ.ಎ…

Read More

ಮೂಡುಬಿದಿರೆ: ಮಹಿಳಾ ಪರ ಆಲೋಚನೆಯುಳ್ಳ ಬಹುದೊಡ್ಡ ಪುರುಷ ಪಡೆಯು ನಮ್ಮಲ್ಲಿದ್ದು ಇವರೇ ಮೊಟ್ಟಮೊದಲಿಗೆ ಮಹಿಳಾ ಚಳುವಳಿಗೆ ರೂಪುರೇಷೆಯನ್ನು ಹಾಕಿಕೊಟ್ಟರು ಎಂದು ಚಿಂತಕಿ ಗಾಯತ್ರಿ ನಾವಡ ಅಭಿಪ್ರಾಯಪಟ್ಟರು. ಆಳ್ವಾಸ್ ನುಡಿಸಿರಿಯ ಎರಡನೇ ದಿನ ರತ್ನಾಕರ ವರ್ಣ ವೇದಿಯಕೆ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ‘ಮಹಿಳಾ ಚಳುವಳಿ: ಹೊಸತನದ ಹುಡುಕಾಟ’ ಎಂಬ ವಿಷಯದ ಕುರಿತು ವಿಶೇಷೋಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಚಳುವಳಿಯ ಸ್ವರೂಪ ಕಾಲಕಾಲಕ್ಕೆ ಬದಲಾಗುತ್ತಾ ಬಂದಿದ್ದು ಎಲ್ಲಾ ಕಾಲಗಳ್ಲಲಿಯೂ ಸ್ತ್ರೀಯರು ಕೆಲವೆಡೆ ಪುರುಷರಿಗೆ ಬೆಂಗಾವಲಾಗಿ ನಿಂತರೆ ಇನ್ನೂ ಕೆಲವೆಡೆ ತಾವೇ ಸಕ್ರಿಯವಾಗಿ ಚಳುವಳಿಗಳಲ್ಲಿ ಭಾಗವಹಿಸಿರುವುದನ್ನು ಗಮನಿಸಬಹುದು ಎಂದರು. ದಕ್ಷಿಣ ಕರ್ನಾಟಕದ ಮಹಿಳೆಚಿiರು ಉಪ್ಪಿನ ಸತ್ಯಾಗ್ರಹದಲ್ಲಿ ಮತ್ತು ಉತ್ತರ ಕರ್ನಾಟಕದ ಮಹಿಳೆಯರು ಕರನಿರಾಕರಣೆ ಮೊದಲಾದವುಗಳ್ಲಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಎಂದರು.

Read More

ಮೂಡುಬಿದಿರೆ: ಹೊಸತನವೆನ್ನುವುದು ಸಮಾಜದ ಜೀವಂತಿಕೆಯ ಸಾಕ್ಷಿ. ಇದು ಹಿಂದಿನ ಬೇರುಗಳ ಗಟ್ಟಿಯಾಗಿಸುತ್ತಾ ಕಾಲಕ್ಕೆ ತಕ್ಕಂತೆ ಮಾರ್ಪಾಡುಗಳಾಗುತ್ತಾ ಸಾಗುತ್ತದೆ. ಅನುಕರಣೆ ಹೊಸತನ್ನು ಸೃಷ್ಟಿಸೋಲ್ಲ. ಸೃಜಶೀಲತೆಯ ಹಿಂದೆ ಸಾಗುವವರಿಗೆ ಕಂಟಕ ಸಾಮಾನ್ಯ ಎಂದು ಸಾಹಿತಿ ವಸುಧೇಂದ್ರ ಹೇಳಿದರು. ಆಳ್ವಾಸ್ ನುಡಿಸಿರಿಯ ಎರಡನೇ ದಿನ ರತ್ನಾಕರ ವರ್ಣ ವೇದಿಯಕೆ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ಜರುಗಿದ ವಿಚಾರಗೋಷ್ಠಿಯಲ್ಲಿ ಆಧುನಿಕ ಕನ್ನಡ ಸಾಹಿತ್ಯ: ಹೊಸತನದ ಹುಡುಕಾಟ’ ಏಕೀಕರಣೋತ್ತರ ಸಾಹಿತ್ಯ ಎಂಬ ವಿಷಯದಲ್ಲಿ ಮಾತನಾಡಿದರು. ನಮ್ಮ ನಿಲುವನ್ನು ವ್ಯಕ್ತಪಡಿಸುವ ಸಾಮಾಜಿಕ ತಾಣಗಳು ಇಂದು ಪ್ರಬಲವಾದ ಅಸ್ತ್ರವಾಗಿ ಬೆಳೆದಿದೆ. ಹೊಸ ಮಾಧ್ಯಮಗಳನ್ನು ಬಳಸಿಕೊಳ್ಳುತ್ತಾ ಜಗತ್ತಿಗೆ ತೆರೆದುಕೊಂಡಂತೆಲ್ಲ ಮತ್ತಷ್ಟು ಹೊಸತನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

Read More

ಮೂಡುಬಿದಿರೆ: ಹೊಸತನದ ಹುಡುಕಾಟದಲ್ಲಿದ್ದ ಏಕೀಕರಣಪೂರ್ವ ಸಾಹಿತ್ಯ ವಿಶ್ವ ಸಾಹಿತ್ಯ ಬೆಳಕನ್ನು ಕನ್ನಡ ಸಾಹಿತ್ಯದ ಮೇಲೆ ಬೀರಿದ್ದವು. ಬರೆದದ್ದನ್ನು ಓದಬೇಕು ಮತ್ತು ಎಲ್ಲರಿಗೂ ತಲುಪಬೇಕು ಎಂಬ ಅನಿವಾರ್ಯತೆ ಅಂದಿನ ಸಾಹಿತ್ಯಕ್ಕಿತ್ತು ಎಂದು ಡಾ. ಜಿ. ಬಿ. ಹರೀಶ್ ಹೇಳಿದರು. ಆಳ್ವಾಸ್ ನುಡಿಸಿರಿಯ ಎರಡನೇ ದಿನ ರತ್ನಾಕರವರ್ಣಿ ವೇದಿಯಲ್ಲಿ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ಜರುಗಿದ ವಿಚಾರಗೋಷ್ಠಿಯಲ್ಲಿ ಏಕೀಕರಣ ಪೂರ್ವ ಸಾಹಿತ್ಯ’ ಎಂಬ ವಿಷಯದ ಕುರಿತು ಮಾತನಾಡಿದರು. ಜಡ್ಡುಗಟ್ಟಿದ ಭಾಷೆಗೆ ಹೊಸ ಜೀವ ತುಂಬುವ ಕೆಲಸವನ್ನು ಕುವೆಂಪು, ಬೆಂದ್ರೆ, ಮಾಸ್ತಿ, ಕಾರಂತರಾದಿಯಾಗಿ ಅನೇಕ ಸಾಹಿತಿಗಳು ಮಾಡಿದ್ದಾರೆ. ಹೊಸ ಪದಸಂಪತ್ತನ್ನು ಕನ್ನಡದಕ್ಕೆ ತೆಗೆದುಕೊಂಡು ಬಂದಿದ್ದಾರೆ. ಕನ್ನಡ ಕೇಂದ್ರಿತ ಉದಾರತೆ, ಸಂಪರ್ಕಕ್ಕೆ ಕಷ್ಟಸಾಧ್ಯವಾದ ಕಾಲದಲ್ಲೂ ಸಾಹಿತಿಗಳು ಕನ್ನಡ ಕಟ್ಟಿದ ಕಾರ್ಯ ಅನನ್ನುವಾದುದು.

Read More

ಕುಂದಾಪುರ: ಸಮೀಪದ ಹೇರಿಕುದ್ರು ರಾಷ್ಟ್ರೀಯ ಹೆದ್ದಾರಿ ೬೬ರ ಸೇತುವೆಗೆ ಕುಂದಾಪುರ ಅಗ್ನಿ ಶಾಮಕ ದಳದ ಸಿಬ್ಬಂದಿಯೊರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ವರದಿಯಾಗಿದ್ದು, ಮೃತರು ಕುಂದಾಪುರ ಅಗ್ನಿಶಾಮಕ ದಳದ ಸಿಬ್ಬಂದಿ ಮದ್ದುಗುಡ್ಡೆಯ ನಿವಾಸಿ ಭಾಸ್ಕರ(45) ಎಂದು ತಿಳಿದುಬಂದಿದೆ. ಗುರುವಾರ ರಾತ್ರಿಯ ಪಾಳಿಯಲ್ಲಿದ್ದ ಭಾಸ್ಕರ್ ಶುಕ್ರವಾರ ಬೆಳಿಗ್ಗೆ ಡ್ಯೂಟಿ ಮುಗಿಸಿ ಮನೆಗೆ ಬಂದಿದ್ದರು. ಮನೆಯಲ್ಲಿ ಬೆಳಗ್ಗಿನ ತಿಂಡಿ ತಿಂದು ಅವರ ಟಿವಿಎಸ್ ಬೈಕಿನಲ್ಲಿ ಪೇಟೆಗೆ ತೆರಳಿದ್ದರು. ಸುಮಾರು ಒಂದು ಗಂಟೆಯ ಬಳಿಕ ರಾಷ್ಷ್ರೀಯ ಹೆದ್ದಾರಿ ೬೬ರಲ್ಲಿ ಸಂಗಮ್ ಹೇರಿಕುದ್ರು ಸೇತುವೆಗೆ ಸರಳಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅಗ್ನಿಶಾಮಕ ದಳದ ನಿಷ್ಠಾವಂತ ಸಿಬ್ಬಂದಿಯಾಗಿದ್ದ ಭಾಸ್ಕರ್ ಉತ್ತಮ ಈಜುಗಾರರಾಗಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. (ಕುಂದಾಪ್ರ ಡಾಟ್ ಕಾಂ ಸುದ್ದಿ) ಘಟನಾ ಸ್ಥಳಕ್ಕೆ ಕುಂದಾಪುರ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಶವವನ್ನು ಮೇಲೆತ್ತಿದರು. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

Read More

ಆಳ್ವಾಸ್ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದದಲ್ಲಿ ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರೀ ಮೂಡುಬಿದಿರೆ: ದೇಶದಲ್ಲಿ ಅಸಹಿಷ್ಣುತೆ ವಿರೋಧಿಸಿ ಪ್ರಶಸ್ತಿ ಪಾವಾಸು ಮಾಡುತ್ತಿದ್ದಾರೆ. ಆದರೆ ಪ್ರಶಸ್ತಿ ವಾಪಾಸು ಮಾಡದವರೂ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಆವೇಶದಲ್ಲಿ, ಪೂರ್ವಾಪರವನ್ನಿಟ್ಟುಕೊಂಡು ನಡೆಸುತ್ತಿರುವ ಪ್ರಶಸ್ತಿ ವಾಪಾಸಾತಿ ಸಮೂಹ ಸನ್ನಿಯಾಂತಾಗಿದೆ. ಅರ್ಹತೆ, ಪ್ರೀತಿ, ಗೌರವದಿಂದ ನೀಡುವ ಪ್ರಶಸ್ತಿಯನ್ನು ಹಿಂದಿರುಗಿಸುವ ಪ್ರಕ್ರಿಯೆ ಸರಿಯಲ್ಲ. ಪ್ರಶಸ್ತಿ ಹಿಂದಿರುಗಿಸದೇ ಸುಮ್ಮನಿರುವವರು ನಿಷ್ಕ್ರೀಯರು ಎಂದರ್ಥವಲ್ಲ. ಅವರದ್ದೇ ರೀತಿಯಲ್ಲಿ ತಮ್ಮ ನಿಲುವನ್ನು ಪ್ರಕಟಿಸುತ್ತಿದ್ದಾರೆ.  ಇದು ಆಳ್ವಾಸ್ ನುಡಿಸಿರಿ 2015ರ ಸಮ್ಮೇಳನಾಧ್ಯಕ್ಷ ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರೀ ಅವರ ಸ್ಪಷ್ಟ ನುಡಿ. ಆಳ್ವಾಸ್ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು. ಸಾಹಿತ್ಯ ಸಮಾಜವನ್ನು ಸನ್ಯಾರ್ಗದಲ್ಲಿ ಕೊಂಡೊಯ್ಯುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಇದನ್ನು ತಾನು ಒಪ್ಪುವುದಿಲ್ಲ. ಸಾಹಿತ್ಯ ಪೂರ್ಣಪ್ರಮಾಣದಲ್ಲಿ ಸಮಾಜದ ಮೇಲೆ ಪ್ರಭಾವ ಬೀರುತ್ತದೆ ಎಂಬ ವಾದದಲ್ಲಿಯೂ ಹುರುಳಿಲ್ಲ. ಒಂದಿಷ್ಟು ಜನಸಮುದಾಯದ ಮೇಲೆ ಪ್ರಭಾವ ಬೀರಿ ಸಾಮಾಜಿಕ ಕಾಳಜಿಗೆ ಕಾರಣವಾಗಬಹುದು ಎಂದರು. ಪರಿಷತ್ ನಡೆಸುವ ಸಮ್ಮೇಳನದ ಅಧ್ಯಕ್ಷರಾಗಬೇಕೆಂಬ ಬಯಕೆ ಇತ್ತೆ ಎಂಬ ಪ್ರಶ್ನೆಗೆ, ಅಧ್ಯಕ್ಷನಾಗುವ ವಿಚಾರದಲ್ಲಿ…

Read More

ಕುಂದಾಪುರ: ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ಈ ಸ್ಯಾಟಲೈಟ್ ಯುಗದ ಆಧುನಿಕ ಜೀವನದ ನಾಗಾಲೋಟದಲ್ಲಿ ತನ್ನತನವನ್ನು ಕಳೆದುಕೊಳ್ಳದೆ, ಸಂಸ್ಕಾರಯುಕ್ತ ಜೀವನ ಕ್ರಮ ರೂಢಿಸಿಕೊಳ್ಳುವಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿರಬೇಕು ಎಂದು ಜೇಸಿಐ ಪೂರ್ವ ವಲಯಾಧಿಕಾರಿ ಮಂಜುಳಾ ಪ್ರಸಾದ್ ಹೇಳಿದರು. ಅವರು ಕುಂದಾಪುರ ಕೋಡಿ ಕಿನರಾ ಬೀಚ್‌ನ ಚಂದ್ರಕಾಂತ್ ಶೆಣೈ ರಿಸಾರ್ಟ್‌ನಲ್ಲಿ ನಡೆದ ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ನ ಕುಟುಂಬ ಸಮ್ಮಿಲನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಹಿಳೆ ಇಂದು ಪೋಷಕರಿಗೆ ಸನ್ನಡತೆಯ ಮಗಳಾಗಿ, ಗಂಡನಿಗೆ ಮನಮೆಚ್ಚಿದ ಮಡದಿಯಾಗಿ, ಮಕ್ಕಳಿಗೆ ಮಮತೆಯ ತಾಯಿಯಾಗಿ, ಸಮಾಜಕ್ಕೆ ಆದರ್ಶ ಮಹಿಳೆಯಾಗಿ ಬೆಳೆಯಲು ಸಂಸ್ಕಾರಯುಕ್ತ ಜೀವನ ಕ್ರಮ ರೂಢಿಸಿ ಕೊಂಡಲ್ಲಿ ಮಾತ್ರ ಸಾಧ್ಯ ಎಂದರು. ರೋಟರಿ ಜೋನಲ್ ಲೆಫ್ಟಿನೆಂಟ್ ಗಜೇಂದ್ರ ಶೆಟ್ಟಿ ಮಾತನಾಡಿ, ರೋಟರಿಯಂತಹ ಸಮಾಜಮುಖಿ ಸಂಘಟನೆಯಲ್ಲಿ ಮಹಿಳೆಯರ ಉಪಸ್ಥಿತಿ ಮತ್ತು ಭಾಗವಹಿಸುವಿಕೆ ಅಗತ್ಯ ಎಂದರು. ರೋಟರಿ ವಲಯ ೧ರ ಅಸಿಸ್ಟೆಂಟ್ ಗವರ್ನರ್ ಸತೀಶ್ ಎನ್. ಶೇರೆಗಾರ್ ಅವರು ರೋಟರಿ ಸನ್‌ರೈಸ್‌ನ ಮುಂದಿನ ಬೆಳವಣಿಗೆ ಬಗ್ಗೆ ಸಲಹೆ ನೀಡಿದರು. ಕಾರ್ಯಕ್ರಮದ…

Read More