ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಹಿರಿಯ ಅಧಿಕಾರಿಗಳು ಹಾಗೂ ರಾಜಕಾರಣಿಯೋರ್ವರ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾದ ಡಿವೈಎಸ್‌ಪಿ ಗಣಪತಿ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ಬೈಂದೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಪ್ರಕರಣವನ್ನು ಸಿಬಿಐಗೆ ವಹಿಸಿ ಸಮಗ್ರ ತನಿಖೆ ಆದೇಶಿಸಬೇಕು ಹಾಗೂ ಪ್ರಕರಣದಲ್ಲಿ ಭಾಗಿಯಾದವರು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. ಬೈಂದೂರು ಪದವಿ ಹಾಗೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನಾ ಜಾಥಾ ನಡೆಸಿದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಮ್ಮ ಸಂಸ್ಕೃತಿ, ಸಂಪ್ರದಾಯಗಳು ಮುಂದಿನ ಪೀಳಿಗೆಗೆ ತಲುಪಬೇಕಾದರೇ ಯುವ ಜನತೆಗೆ ಈಗಿನಿಂದಲೇ ಆ ಬಗೆಗೆ ಒಲುವು ಮೂಡಿಸುವುದಲ್ಲದೇ ಕಲೆಯ ಮೂಲ ಸ್ವರೂಪವನ್ನು ಹಾಗೇಯೇ ಉಳಿಸಿಕೊಳ್ಳಬೇಕಾದರೇ ಕಲಾವಿದರು ಅನುಭವ ಹಾಗೂ ಕಲಾ ಪ್ರಕಾರಗಳನ್ನು ದಾಖಲೀಕರಣಗೊಳಿಸುವ ಕಾರ್ಯ ತುರ್ತಾಗಿ ಆಗಬೇಕಿದೆ ಎಂದು ಉಡುಪಿ ಜಿಲ್ಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಎಂ. ರವಿಕುಮಾರ್ ಹೇಳಿದರು. ಪರಿಶಿಷ್ಟ ಪಂಗಡ, ಬುಡಕಟ್ಟು ಜನಾಂಗದ ರಂಗತಂಡ ’ಸಮ್ಮಿಲನ(ರಿ) ಯಳಜಿತ’ ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದೊಂದಿಗೆ ಯಳಜಿತದ ನಾಟ್ಯ ಗಣೇಶ ರಂಗಮಂದಿರದಲ್ಲಿ ಆಯೋಜಿಸಲಾದ ವನಸಿರಿಯಲ್ಲೊಂದು ರಂಗತರಂಗ-2016 ಎರಡನೇ ದಿನದ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಅವರು ಮಾತನಾಡಿದರು. ಕನ್ನಡ ಭಾಷೆ, ಸಂಸ್ಕೃತಿಯನ್ನು ಕಲೆ, ಸಾಹಿತ್ಯ, ಜನಪದ ಮುಂದಾದವುಗಳ ಮೂಲಕ ಜೀವಂತವಾಗಿರಿಸಲು ನಿರಂತರವಾಗಿ ಶ್ರಮಿಸುತ್ತಿರುವ ಸಂಘಟನೆಗಳಿಗೆ, ಕಲಾವಿದರುಗಳಿಗೆ ಇಲಾಖೆಯಿಂದ ಅಗತ್ಯ ನೆರವು ನೀಡಲಾಗುತ್ತಿದೆ. ಅದನ್ನು ಸದ್ಭಳಕೆ ಮಾಡಿಕೊಳ್ಳುವ ಕಾರ್ಯ ಮಾತ್ರ ನಡೆಯಬೇಕಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಾಧನ ಸಂಗಮ ಟ್ರಸ್ಟ್ ಮತ್ತು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಕುಂದಾಪುರ ನಾವಡರ ಕೆರಿ ಶ್ರೀ ಪ್ರಸನ್ನ ಗಣಪತಿ ಸಭಾಭವನದಲ್ಲಿ ದಾಸರ ಪದಗಳು ಗಾಯನ ನಡೆಯಿತು. ಸಾಧನ ಸಂಗಮ ಕಿರು ಹೊತ್ತಿಗೆ ಅಕ್ಷಯ ಉದ್ಯಮಿ ಎ. ಎನ್ ಗೋಪಾಲ್ ಅಂಪಾರು ಬಿಡುಗಡೆ ಮಾಡಿ, ಭಾರತೀಯ ಪರಂಪರಾಗತ ಜ್ಞಾನದ ಸದ್ಭಳಕೆಯಿಂದ ಆರೋಗ್ಯ ಪೂರ್ಣ ಸಮಾಜ ಸಾಧ್ಯ. ಈ ಪುಸ್ತಕ ಆಕ್ಷಯ ಇದಕ್ಕೆ ಪೂರಕ ಮಾಹಿತಿ ಒದಗಿಸುವಲ್ಲಿ ಸಫಲವಾಗಿದೆ ಎಂದರು. ಕುಂದಾಪುರ ಸಾಧನ ಸಂಗಮ ಟ್ರಸ್ಟ್ ಅಧ್ಯಕ್ಷ ನಾರಾಯಣ ಐತಾಳ್ ಅಧ್ಯಕ್ಷತೆ ವಹಿಸಿದ್ದರು. ಮುರಳಿಧರ ಐತಾಳ್ ಹಾಗೂ ಸುಧೀಂದ್ರ ಉಪಸ್ಥಿತರಿದ್ದರು, ಕಲಾಚವಿದ ಮಂಜುನಾಥ ಮಯ್ಯ ವಂದಿಸಿದರು. ದಾಸರಪದಗಳ ಕಾರ್ಯಕ್ರಮ ಗಜಾನನ ಹೆಬ್ಬಾರ ಹಾಗೂ ಬಳಗದವರು ನಡೆಸಿಕೊಟ್ಟರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವರ್ಷಪೂರ್ತಿ ಕೃಷಿ-ಕೂಲಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಜನರಿಗೆ ಕಲಾಸಕ್ತಿ ವಿಶಿಷ್ಟವಾಗಿದ್ದು, ಸೂಕ್ತ ವೇದಿಕೆ ದೊರೆತರೆ ಅವರ ಪ್ರತಿಭೆ ಅನಾವರಣಗೊಳ್ಳುವುದಲ್ಲದೇ ಅಂತಹ ಅವಕಾಶಗಳನ್ನು ಒದಗಿಸಿಕೊಡುವ ಮೂಲಕ ಸಾಂಸ್ಕೃತಿಕ ಆಸಕ್ತಿಯನ್ನು ಪ್ರೋತ್ಸಾಹಿಸಿದಂತಾಗುವುದು ಎಂದು ಯಳಜಿತ ಸಿದ್ಧಿವಿನಾಯಕ ಸಾಂಸ್ಕೃತಿಕ ಕೇಂದ್ರದ ಮಂಗೇಶ್ ಶೆಣೈ ಹೇಳಿದರು. ಪರಿಶಿಷ್ಟ ಪಂಗಡ, ಬುಡಕಟ್ಟು ಜನಾಂಗದ ರಂಗತಂಡ ‘ಸಮ್ಮಿಲನ(ರಿ) ಯಳಜಿತ’ ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದೊಂದಿಗೆ ಯಳಜಿತದ ನಾಟ್ಯ ಗಣೇಶ ರಂಗಮಂದಿರದಲ್ಲಿ ಆಯೋಜಿಸಲಾದ ವನಸಿರಿಯಲ್ಲೊಂದು ರಂಗತರಂಗ-2016 ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಶುಭಶಂಸನೆಗೈದರು. ಗೊಳಿಹೊಳೆ ಗ್ರಾಪಂ ಅಧ್ಯಕ್ಷ ರಾಜು ಪೂಜಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭಹಾರೈಸಿದರು. ಯಳಜಿತ ಸ.ಹಿ.ಪ್ರಾ ಶಾಲೆ ಎಡಿಎಂಸಿ ಅಧ್ಯಕ್ಷ ಸುಬ್ಬಣ್ಣ ಕೊಠಾರಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯರುಗಳಾದ ಕುಪ್ಪಯ್ಯ ಪೂಜಾರಿ, ಶಿವರಾಜ ನಾಯ್ಕ್, ಯಳಜಿತ ಸಹಿಪ್ರಾ ಶಾಲೆಯ ಮುಖ್ಯೋಪಧ್ಯಾಯ ನಾರಾಯಣ ಹೋಬಳಿದಾರ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜನಪದ ಕಲಾವಿದ ರಾಮ ಮರಾಠಿ, ಅಧ್ಯಾಪಕ ಕೆ.ಎಂ. ಹೊಸೇರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗಂಗೊಳ್ಳಿ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಗಂಗೊಳ್ಳಿಯ ಪ್ರಸಿದ್ಧ ಉದ್ಯಮಿ ಎಂ.ಜಿ.ರಾಘವೇಂದ್ರ ಭಂಡಾರ್‌ಕಾರ್ ಆಯ್ಕೆಯಾಗಿದ್ದಾರೆ. ಪ್ರದೀಪ ಡಿ.ಕೆ. (ಐಪಿಪಿ), ದುರ್ಗಾರಾಜ್ ಪೂಜಾರಿ, ಉದಯಶಂಕರ ರಾವ್, ಲಕ್ಷ್ಮೀಕಾಂತ ಮಡಿವಾಳ (ಉಪಾಧ್ಯಕ್ಷರು), ನಾರಾಯಣ ಇ.ನಾಯ್ಕ್ (ಕಾರ್ಯದರ್ಶಿ), ಜನಾರ್ದನ ಪೂಜಾರಿ ಪೆರಾಜೆ, ಪ್ರಕಾಶ ಪೂಜಾರಿ (ಜತೆ ಕಾರ್ಯದರ್ಶಿಗಳು), ಉಮೇಶ ಮೇಸ್ತ (ಕ್ಲಬ್ ಸರ್ವಿಸ್ ನಿರ್ದೇಶಕ), ವಾಸುದೇವ ಶೇರುಗಾರ್ (ಕಮ್ಯುನಿಟಿ ಸರ್ವಿಸ್ ನಿರ್ದೇಶಕ), ಡಾ.ಕಾಶೀನಾಥ ಪೈ (ವೊಕೇಶನಲ್ ಸರ್ವಿಸ್ ನಿರ್ದೇಶಕ), ಎಚ್. ಗಣೇಶ ಕಾಮತ್ (ಇಂಟರ್‌ನ್ಯಾಶನಲ್ ಸರ್ವಿಸ್ ನಿರ್ದೇಶಕ), ಶಿವಾನಂದ ಪೂಜಾರಿ (ನ್ಯೂ ಜನರೇಶನ್ ನಿರ್ದೇಶಕ), ಲಿಪ್ಟನ್ ಒಲಿವೇರಾ (), ನಾಗರಾಜ ಶೆಟ್ಟಿ (ಕೋಶಾಧಿಕಾರಿ), ಥೋಮಸ್ ಪಿ.ಎ. (ಬುಲೆಟಿನ್ ಎಡಿಟರ್), ಎಚ್.ಗಣೇಶ್ ಕಾಮತ್, ಜನಾರ್ದನ ಪೂಜಾರಿ, ಉಮೇಶ ಮೇಸ್ತ (ಸಲಹೆಗಾರರು) ಆಯ್ಕೆಯಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಹೋಬಳಿ ವ್ಯಾಪ್ತಿಯಲ್ಲಿ ಅಕ್ರಮ ಸಕ್ರಮ ಜಮೀನಿಗೆ ಅರ್ಜಿ ಸಲ್ಲಿಸಿದ ೫೮ ಕುಟುಂಬಗಳಿಗೆ ಶಾಸಕ ಗೋಪಾಲ ಪೂಜಾರಿ ಹಕ್ಕುಪತ್ರ ವಿತರಿಸಿದರು. ಅಕ್ರಮ ಸಕ್ರಮ ಸಮಿತಿಯ ಸದಸ್ಯರಾದ ವಿಜಯ ಶೆಟ್ಟಿ, ಬೋಜ ನಾಯ್ಕ, ಮಾಜಿ ಜಿ.ಪಂ ಅಧ್ಯಕ್ಷ ರಾಜು ಪೂಜಾರಿ, ಮಾಜಿ ತಾ.ಪಂ. ಸದಸ್ಯ ರಮೇಶ ಗಾಣಿಗ, ತಾ.ಪಂ. ಸದಸ್ಯ ಜಗದೀಶ ದೇವಾಡಿಗ, ರಿಯಾಜ್ ಅಹಮದ್, ವಿಶೇಷ ತಹಶೀಲ್ದಾರ ಕಿರಣ ಗೋರಯ್ಯ ಮತ್ತಿತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಿಂದಿನ ಸಾಲಿನ ಸಾಧನೆಗಳ ವರದಿ, ಇಲಾಖೆಗಳ ಕಾರ್ಯಕ್ರಮಗಳ ಮಾಹಿತಿ ಜತೆಗೆ ಸಾರ್ವಜನಿಕರು ಎತ್ತಿದ ವಿಷಯಗಳ ಕುರಿತು ಉಪಯುಕ್ತ ಚರ್ಚೆಗೆ ನಡೆದ ಮರವಂತೆ ಗ್ರಾಮಸಭೆ ವೇದಿಕೆಯಾಯಿತು. ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅನಧಿಕೃತವಾಗಿ ತೆರೆಯಲಾಗುತ್ತಿರುವ ಎಲ್‌ಕೆಜಿ, ಯುಕೆಜಿ ತರಗತಿಗಳಿಗೆ ಅಂಗನವಾಡಿ ಪ್ರಾಯದ ಮಕ್ಕಳನ್ನು ಸೇರಿಸಿಕೊಂಡು ಅವರಿಗೆ ಇಂಗ್ಲಿಷ್ ಕಲಿಸುತ್ತಿರುವುದನ್ನು ನಾಗರಾಜ್ ಬಲವಾಗಿ ವಿರೋಧಿಸಿ, ಮಕ್ಕಳ ಆರಂಭಿಕ ಶಿಕ್ಷಣ ಕನ್ನಡದಲ್ಲೇ ಆಗಬೇಕು ಎಂದು ಪ್ರತಿಪಾದಿಸಿದರು. ಉತ್ತರಿಸಿದ ಅಂಗನವಾಡಿ ಮೇಲ್ವಿಚಾರಕಿ ಈ ಬಗ್ಗೆ ಸವಿತಾ ಶೆಟ್ಟಿ ತಮಗೂ ಈ ಬಗ್ಗೆ ಆತಂಕವಿದೆ ಎಂದು ಹೇಳಿ ಈ ಮಕ್ಕಳು ಸರಕಾರದ ಮಹತ್ವಾಕಾಂಕ್ಷೆಯ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಸೌಲಭ್ಯಗಳಿಂದ ವಂಚಿರಾಗುತ್ತಿದ್ದಾರೆ. ಆದರೆ ತಾವು ಈ ವಿಷಯದಲ್ಲಿ ಅಸಹಾಯಕರು ಎಂದರು. ಜನಾರ್ದನ ಖಾರ್ವಿ, ರಾಮಕೃಷ್ಣ ಖಾರ್ವಿ, ಮೋಹನ ಖಾರ್ವಿ ಸೋಲಾರ್ ಬೀದಿದೀಪ ಅಳವಡಿಸುವಾಗ ಎಲ್ಲ ವಾರ್ಡ್‌ಗಳಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು. ಹಲವೆಡೆ ಬೀದಿದೀಪಗಳು ಬೆಳಗದಿರುವುದನ್ನು ಪ್ರಸ್ತಾಪಿಸಿದ ಚಂದ್ರ ಖಾರ್ವಿ, ಎಂ. ವಿನಾಯಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಎಜುಕೇಶನ್ ಆಂಡ್ ರಿಸರ್ಚ್ ಸಂಸ್ಥೆಯಿಂದ ನಡೆದ ಬಿಎಸ್ಪಿ ಇಡ್ ಹಾಗೂ ಎಂಎಸಿ ಇಡ್ ಪ್ರವೇಶ ಪ್ರರೀಕ್ಷೆಯಲ್ಲಿ ಕುಂದಾಪುರದ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಚೈತನ್ಯಲಕ್ಷ್ಮಿ ರಾಜ್ಯಮಟ್ಟದಲ್ಲಿ 9ನೇ ರ‍್ಯಾಂಕ್ ಹಾಗೂ ರಾಷ್ಟ್ರೀಯ ಮಟ್ಟದ 35ನೆಯ ರ‍್ಯಾಂಕ್ ಪಡೆದಿರುತ್ತಾರೆ ಎಂದು ಕಾಲೇಜಿನ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ನಮ್ಮ ಹಿರಿಯರು ಬಹಳ ಹಿಂದಿನಿಂದಲೂ ಆಯುರ್ವೇದಿಕ್ ಔಷಧಿಗಳನ್ನು ಉಪಯೋಗಿಸುತ್ತಿದ್ದು, ಇಂದಿನ ದಿನಗಳಲ್ಲಿ ಯುವಜನರು ಅಲೋಪತಿ ಔಷಧಿಗಳನ್ನು ಬಳಸುತ್ತಿದ್ದಾರೆ. ಅಲೋಪತಿ ಔಷಧಿಗಳ ಅತಿಯಾದ ಬಳಕೆಯಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹೀಗಾಗಿ ಜನರು ಆಯುರ್ವೇದ ಔಷಧಿಗಳನ್ನು ಬಳಸಬೇಕು ಎಂದು ಗಂಗೊಳ್ಳಿ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ನಾಕುದಾ ಜೂನುಲ್ ಅಭಿದ್ದೀನ್ ಸಾಹೇಬ್ ಹೇಳಿದರು. ಅವರು ಗಂಗೊಳ್ಳಿಯ ಮೊಯಿದ್ದೀನ್ ಮಸೀದಿ ಕಟ್ಟಡದಲ್ಲಿ ಆಲ್‌ಪೈನ್ ಅಸೋಸಿಯೇಟ್ಸ್ ಮಂಗಳೂರು ಇವರ ಆಲ್‌ಪೈನ್ ಆಯುರ್ವೇದಿಕ್ ಎಂಡ್ ಯುನಾನಿ ಮೆಡಿಕಲ್ಸ್ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಮೌಲಾನಾ ಅಬ್ದುಲ್ ಮತೀನ್, ಮೌಲಾನಾ ಅಬ್ದುಲ್ ವಹಾಬ್, ಪತ್ರಕರ್ತ ಬಿ.ರಾಘವೇಂದ್ರ ಪೈ, ನಿವೃತ್ತ ಮುಖ್ಯೋಪಾಧ್ಯಾಯ ಮಹಮ್ಮದ್ ರಫೀಕ್ ಮೊದಲಾದವರು ಶುಭ ಹಾರೈಸಿದರು. ಮೊಮಿನ್ ಮಹಮ್ಮದ್ ಗೌಸ್, ಮೆಡಿಕಲ್ಸ್‌ನ ಮಾಲೀಕ ಜಹೀರ್ ಅಹಮ್ಮದ್ ನಾಕುದಾ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಂಕೋಲಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಡಸ್ಟರ್ ಕಾರು ಹಾಗೂ ಟ್ಯಾಂಕರ್ ನಡುವೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಕುಂದಾಪುರ ಟಿ.ಟಿ ರಸ್ತೆಯ ನಿವಾಸಿ ಗುರುರಾಜ ಪೂಜಾರಿ (29) ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಕುಂದಾಪುರದ ಕಂಪ್ಯೂಟರ್ ಸೆಂಟರೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಗುರುರಾಜ್, ಮಂಗಳವಾರ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾಕ್ಕೆ ಕೆಲಸದ ನಿಮಿತ್ತ ಸ್ನೇಹಿತನೊಂದಿಗೆ ತೆರಳಿ ಕುಂದಾಪುರಕ್ಕೆ ಮರುಳುತ್ತಿರುವಾಗ ಅಂಕೋಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಸ್ಟರ್ ಕಾರು ಹಾಗೂ ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿತ್ತು. ಅಫಘಾತದ ತೀವ್ರತೆಗೆ ಟ್ಯಾಂಕ್ ಮಗುಚಿ ಬಿದ್ದು ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿತ್ತು. ಕಾರು ಚಲಾಯಿಸುತ್ತಿದ್ದ ಗುರುರಾಜ್ ಗೆ ಗಂಭೀರ ಗಾಯಗಳಾಗಿ ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಮಣಿಪಾಲಕ್ಕೆ ಕೊಂಡೊಯ್ದು ತೀವ್ರ ನಿಗಾ ಘಟಕದಲ್ಲಿರಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಅವರು ಶುಕ್ರವಾರ ರಾತ್ರಿ ಮೃತಪಟ್ಟಿದ್ದರು. ಕಾರಿನಲ್ಲಿದ್ದ ಸ್ನೇಹಿತ ಅಪಘಾತದಿಂದ ಪಾರಾಗಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ ಟಿ.ಟಿ ರಸ್ತೆಯ ಆನಂದ…
