ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶ್ರೀ ಸಿದ್ಧಿ ವಿನಾಯಕ ವಸತಿ ಶಾಲೆಯಲ್ಲಿ ಹಟ್ಟಿಅಂಗಡಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಗುರುಪೂರ್ಣಿಮೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ನಮ್ಮ ಶಾಲೆಯ ಸಂಸ್ಕೃತ ಶಿಕ್ಷಕರಾದ ರಾಮಕೃಷ್ಣ ಉಡುಪರವರು ಗುರುಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗುರುಪೂರ್ಣಿಮೆಯ ಹಿನ್ನೆಲೆ ಹಾಗೂ ಗುರುವಿನ ಮಹತ್ವದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು. ನಂತರ ಶಾಲಾ ಶಿಕ್ಷಕಿಯರು ಗುರುವಿಗೆ ಗೌರವ ಸಲ್ಲಿಸುವ ಹಾಡನ್ನು ಹಾಡಿದರು. ಶಂಕರಾಚಾರ್ಯ ವಿರಚಿತ ಗುರ್ವಷ್ಟಕವನ್ನು ವಿದ್ಯಾರ್ಥಿಗಳಿಗೆ ಕೇಳಿಸಲಾಯಿತು. ಶಾಲಾ ಮುಖ್ಯೋಪಾಧ್ಯಾನಿಯಾದ ಸುಜಾತಾ ಸದಾರಾಮ, ಶಿಕ್ಷಕ ವೃಂದದವರು ಹಾಗೂ ಇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಯಣ: ಗುರು ಎಂದರೆ ವ್ಯಕ್ತಿಯಲ್ಲ ಅದೊಂದು ಶಕ್ತಿ. ಗುರು ಶಿಷ್ಯರ ನಡುವೆ ಇರುವ ಪವಿತ್ರ ಬಾಂಧವ್ಯದ ಪ್ರತೀಕವಾದ ಗುರುಪೂರ್ಣಿಮೆ ದಿನವನ್ನು ಮದರ್ ತೆರೆಸಾ ಮೆಮೋರಿಯಲ್ ಶಾಲಾ ವಿಭಾಗದಲ್ಲಿ ಇತ್ತೀಚಿಗೆ ಆಚರಿಸಲಾಯಿತು . ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಗುರುವಿನ ಮೇಲೆ ಇರುವ ಭಕ್ತಿ ಹಾಗೂ ಗುರು ಶಿಷ್ಯರ ನಡುವಿನ ಬಾಂಧವ್ಯವನ್ನು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಪ್ರಹಸನ , ಭಾಷಣ ನೃತ್ಯ ಹಾಗೂ ಸಂಗೀತದ ಮೂಲಕ ತಿಳಿಸಿದರು. ಗುರುಗಳ ಆಶೀರ್ವಾದವನ್ನು ಪಡೆದ ವಿದ್ಯಾರ್ಥಿಗಳಲ್ಲಿ ವಿದ್ಯೆಯ ಜೊತೆಗಿರುವ ಸಂಸ್ಕಾರವನ್ನು ಗುರುತಿಸಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯಿನಿ ಮಮತಾ ಪೂಜಾರಿ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಗುರುಪೂರ್ಣಿಮೆಯ ಮಹತ್ವವನ್ನು ತಿಳಿಸಿದರು. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಗುರುವಿನ ಮಹತ್ವವನ್ನು ಸಾರುವ ಮೂಲಕ ಗುರು ಪೂರ್ಣಿಮಾ ಕಾರ್ಯಕ್ರಮವು ಅರ್ಥ ಪೂರ್ಣ ವಾಗಿ ನೆರವೇರಿತು. ಈ ಸಂಭ್ರಮಾಚರಣೆಯಲ್ಲಿ ಆಡಳಿತ ಮಂಡಳಿಯವರು ಶಿಕ್ಷಕರು ಹಾಗೂ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ ಅಧಿನಿಮಯ 1997 ರ ಕಲಂ 25 ರನ್ವಯ ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್ ಸಭೆಯ ನಿರ್ಣಯದಂತೆ ಜಿಲ್ಲೆಯಲ್ಲಿರುವ ಪ್ರವರ್ಗ ಬಿ ಗೆ ಸೇರಿದ 01 ಹಾಗೂ ಸಿ ಗೆ ಸೇರಿದ 22 ಒಟ್ಟು 23 ದೇವಸ್ಥಾನಗಳಿಗೆ ವ್ಯವಸ್ಥಾಪನ ಸಮಿತಿಯನ್ನು ಮೂರು ವರ್ಷಗಳ ಅವಧಿಗೆ ರಚಿಸಲು ಆಸಕ್ತ ಭಕ್ತಾದಿಗಳು ಹಾಗೂ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರವರ್ಗ ಬಿ. ದೇವಸ್ಥಾನದ ವಿವರ:ಬ್ರಹ್ಮಾವರ ತಾಲೂಕು ಆರೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ. ಪ್ರವರ್ಗ ಸಿ. ದೇವಸ್ಥಾನದ ವಿವರ:ಬೈಂದೂರು ತಾಲೂಕು ನಾವುಂದ ಗ್ರಾಮದ ಅರೆಹೊಳೆ ಶ್ರೀ ವಿನಾಯಕ ದೇವಸ್ಥಾನ, ಹೇರಂಜಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಮಸ್ಕಿ ಹೆರಂಜಾಲು ಶ್ರೀ ಗೋಪಾಲ ಮತ್ತು ವಿನಾಯಕ ದೇವಸ್ಥಾನ. ಕುಂದಾಪುರ ತಾಲೂಕು ಮೊಳಹಳ್ಳಿ ಶ್ರೀ ಉಮಾಮಹೇಶ್ವರ ದೇವಸ್ಥಾನ, ಉಪ್ಪಿನಕುದ್ರು ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ, ಸೇನಾಪುರದ ಬೆಳವಿನಮಕ್ಕಿ ಶ್ರೀ ಮಹಾಗಣಪತಿ ದೇವಸ್ಥಾನ, ಕೊಡ್ಲಾಡಿ ಕೂಡಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ನಾವುಂದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಇಕೋ ಕ್ಲಬ್, ಸ್ಪೋರ್ಟ್ಸ್ ಕ್ಲಬ್, ಸಾಂಸ್ಕತಿಕ ಸಂಘ, ರೇಂಜರ್ಸ್ ಮತ್ತು ರೋವರ್ಸ್ ಘಟಕಗಳ ಉದ್ಘಾಟನೆ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಸುಜಾತ ಎಂ. ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಮಕೃಷ್ಣ ನರ್ಸಿಂಗ್ ಹೋಮ್ ಕುಂದಾಪುರ ಇಲ್ಲಿನ ಪ್ರಧಾನ ಸಲಹೆಗಾರರು ಮತ್ತು ಸಮಗ್ರ ಚರ್ಮರೋಗ ತಜ್ಞರಾದ ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿಯಾದ ಅಜಿತ್ ಎಂ. ಅವರಿಂದ ಮಕ್ಕಳಿಗೆ ಪ್ರೇರಣಾತ್ಮಕ ಉಪನ್ಯಾಸವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ಚಂದ್ರಶೇಖರ ಲಗಳೂರು, ದೈಹಿಕ ಶಿಕ್ಷಣ ಉಪನ್ಯಾಸಕರಾದ ಜೀವನ್ ಕುಮಾರ್ ಶೆಟ್ಟಿ, ಅರ್ಥಶಾಸ್ತ್ರ ಉಪನ್ಯಾಸಕರಾದ ನೇತ್ರಾವತಿ, ಕನ್ನಡ ಉಪನ್ಯಾಸಕರಾದ ನಾಗೇಶ್ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಉಮೇಶ್ ಕುಂದರ್ ಮತ್ತು ಲೋಕೇಶ್, ಮೆಡಿಕಲ್ ರೆಪ್ರೆಸೆಂಟೇಟಿವ್ ಸುಕುಮಾರ ಉಪಸ್ಥಿತರಿದ್ದರು. ಉಪನ್ಯಾಸಕಿ ಸಾವಿತ್ರಿ ಎಸ್. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗಣಿತಶಾಸ್ತ್ರ ಇತಿಹಾಸ ಉಪನ್ಯಾಸಕರಾದ ಗಣೇಶ್ ನಿರೂಪಿಸಿ, ಭೌತಶಾಸ್ತ್ರ ಉಪನ್ಯಾಸಕರಾದ ಗಾಯತ್ರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ತೆಕ್ಕಟ್ಟೆಯ ವಿಶ್ವ ವಿನಾಯಕ ಸಿ.ಬಿ.ಎಸ್.ಇ ಸ್ಕೂಲ್ನಲ್ಲಿ ವಿದ್ಯಾರ್ಥಿ ಸಂಸತ್ತಿನ ರಚನೆಯನ್ನು ಮಾಡಿ ಪದಗ್ರಹಣ ಕಾರ್ಯಕ್ರಮವನ್ನು ಆಯೋಜಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೋಟ ಪೊಲೀಸ್ ಠಾಣಾಧಿಕಾರಿ ರಾಘವೇಂದ್ರ ಸಿ. ಅವರು ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಪದಗ್ರಹಣ ಮಾಡಿ ಮಾತನಾಡಿ, ವಿದ್ಯಾರ್ಥಿ ನಾಯಕರನ್ನು ಅಭಿನಂದಿಸಿ ಉತ್ತಮ ನಾಯಕತ್ವವನ್ನು ನಡೆಸಲು ಶಿಸ್ತು ಪಾಲನೆ ಬಹುಮುಖ್ಯ. ವಿದ್ಯಾರ್ಥಿ ಸಂಸತ್ತಿನ ಜವಾಬ್ದಾರಿಗಳು ಹಾಗೂ ಕಾರ್ಯ ವೈಖರಿಯ ಕುರಿತು ವಿವರಿಸಿದರು. ಇತರರನ್ನು ಮುನ್ನಡೆಸಿ ಮುನ್ನಡೆಯುವುದೇ ನಿಜವಾದ ನಾಯಕತ್ವ. ಉತ್ತಮ ನಾಯಕನಲ್ಲಿ ಜೀವನ ಮೌಲ್ಯಗಳು, ಮಾನವೀಯ ಮೌಲ್ಯಗಳು ಹೊಂದಿದ್ದು ಇತರರನ್ನು ಅರಿತುಕೊಂಡು ಮುನ್ನಡೆಯುವ ಮನೋಭಾವನೆ ಇರಬೇಕು. ಪ್ರತೀಯೊಬ್ಬರಿಗೂ ಈ ದೇಶದ ಸಂವಿಧಾನ ಹಾಗೂ ಕಾನೂನಿನ ಅರಿವು ಮೂಡಿಸಬೇಕು. ವಿದ್ಯಾರ್ಥಿಗಳಿಗೆ ಮಕ್ಕಳ ಸುರಕ್ಷತಾ ಕಾನೂನುಗಳು ಹಾಗೂ ಮಾದಕ ವ್ಯಸನ, ಲೈಂಗಿಕ ದೌರ್ಜನ್ಯ, ಸೈಬರ್ ವಂಚನೆಗಳ ಕುರಿತು ನಿದರ್ಶನಗಳೊಂದಿಗೆ ವಿದ್ಯಾರ್ಥಿಗಳಿಗೆ ಅರಿವನ್ನು ಮೂಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಮ್ಯಾನೇಜಿಂಗ್ ಡೈರೆಕ್ಟರ್ ಎಮ್. ಪ್ರಭಾಕರ ಶೆಟ್ಟಿ ಅವರು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ರೈತರಿಂದಲೇ ಬೆಳೆ ಸಮೀಕ್ಷೆ ಕೈಗೊಳ್ಳಲು ಮೊಬೈಲ್ ಆ್ಯಪ್ನ್ನು ಅಭಿವೃದ್ದಿ ಪಡಿಸಲಾಗಿದ್ದು, ಇಲಾಖೆಯ ಪ್ರೂಟ್ಸ್ ತಂತ್ರಾಂಶದ ಎಫ್.ಐ.ಡಿ ಸಂಖ್ಯೆಯನ್ನು ಹೊಂದಿರುವ ರೈತರು ಗೂಗಲ್ ಪ್ಲೇ ಸ್ಟೋರ್ನಿಂದ “ಮುಂಗಾರು ರೈತರ ಬೆಳೆ ಸಮೀಕ್ಷೆ 2025” ಆ್ಯಪ್ನ್ನು ಡೌನ್ಲೋಡ್ ಮಾಡಿಕೊಂಡು, ನಂತರ “ಇ-ಕೆವೈಸಿ ಮೂಲಕ ಆಧಾರ್ ದೃಢೀಕರಿಸಿ” ಆಯ್ಕೆಯನ್ನು ಮಾಡಿ ಆಧಾರ್ ಸಂಖ್ಯೆಯನ್ನು ದಾಖಲಿಸಿ, ಜನರೇಟ್ ಓ.ಟಿ.ಪಿ ಆಯ್ಕೆಯನ್ನು ಮಾಡಬೇಕು. ನಂತರದಲ್ಲಿ ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಗೆ ಸ್ವೀಕೃತವಾಗುವ ಓ.ಟಿ.ಪಿ ಯನ್ನು ದಾಖಲಿಸಬೇಕು. ರೈತರ ಎಫ್.ಐ.ಡಿ ಸಂಖ್ಯೆಗೆ ಜೋಡಣೆಯಾಗಿರುವ ಎಲ್ಲಾ ಜಮೀನುಗಳ ಮಾಹಿತಿಯು ಡೌನ್ಲೋಡ್ ಆಗುತ್ತದೆ. ಮುಂದಿನ ಹಂತದಲ್ಲಿ ಸರ್ವೆ ನಂಬರ್, ಹಿಸ್ಸಾ, ಮಾಲೀಕನ ಹೆಸರು ಆಯ್ಕೆ ಮಾಡಿ ಕ್ಷೇತ್ರವನ್ನು ನಮೂದಿಸಬೇಕು. ಸರ್ವೆ ನಂಬರ್ಗಳ ಗಡಿ ರೇಖೆಯೊಳಗೆ ನಿಂತು ಬೆಳೆ ವಿವರವನ್ನು ದಾಖಲಿಸಿ ಫೋಟೋ ತೆಗೆದು ಮಾಹಿತಿಯನ್ನು ಅಪ್ಲೋಡ್ ಮಾಡಬೇಕು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ಲಯನ್ಸ್ ಕ್ಲಬ್ ಕೋಸ್ಟಲ್ ಇದರ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಬಂಟರೆ ಯಾನೆ ನಾಡವರ ಸಂಕೀರ್ಣದ ಆರ್ ಎನ್ ಶೆಟ್ಟಿ ಸಭಾಭವನದ ಎಸ್. ಎಸ್ ಹಾಲ್ ನಲ್ಲಿ ನಡೆಯಿತು. 317 ಸಿಯ ಮಾಜಿ ಜಿಲ್ಲಾ ಗವರ್ನರ್ ಎಂ.ಜೆ.ಎಫ್ ದಿವಾಕರ ಶೆಟ್ಟಿ ಭದ್ರಾವತಿ ಪದಗ್ರಹಣ ನೆರವೇರಿಸಿದರು. ಡಾ. ಅಂಪಾರು ನಿತ್ಯಾನಂದ ಶೆಟ್ಟಿ ನೂತನ ಅಧ್ಯಕ್ಷರಾಗಿ, ಭುಜಂಗ ಶೆಟ್ಟಿ ರಟ್ಟಾಡಿ ಕಾರ್ಯದರ್ಶಿಯಾಗಿ, ಅಣ್ಣಪ್ಪ ಶೆಟ್ಟಿ ಯರುಕೋಣೆ ಕೋಶಾಧಿಕಾರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಾಂತೀಯ ಅಧ್ಯಕ್ಷರಾದ ರಜತ್ ಹೆಗ್ಡೆ, ವಲಯ ಅಧ್ಯಕ್ಷರಾದ ವಸಂತರಾಜ್ ಶೆಟ್ಟಿ, ಎಕ್ಸ್ಟೆನ್ಷನ್ ಚಯರ್ ಪರ್ಸನ್ ಅರುಣ್ ಕುಮಾರ್ ಹೆಗ್ಡೆ, ಪ್ರಾಂತೀಯ ಕಾರ್ಯದರ್ಶಿ ಏಕನಾಥ್ ಬೋಳಾರ್, ಕ್ಲಬ್ ನ ಸ್ಥಾಪಕ ಅಧ್ಯಕ್ಷರಾದ ಅಶೋಕ್ ಶೆಟ್ಟಿ ಸಂಸಾಡಿ ಶುಭಾಶಂಸನೆಗೈದರು. ನಮಿತಾ ಪ್ರಭಾಕರ ಶೆಟ್ಟಿ ಅವರ ಪ್ರಾರ್ಥನೆ ಮೂಲಕ ಸಮಯಕ್ಕೆ ಸರಿಯಾಗಿ ಸಭಾ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ನ ಸದಸ್ಯರಾದ ಪ್ರಶಾಂತ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕೋಟ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಐರೋಡಿ ಗ್ರಾಮ ಪಂಚಾಯತ್ ಎದುರು 9/ 11 ಸಮಸ್ಯೆ , ಅಕ್ರಮ ಸಕ್ರಮ 53 ಮತ್ತು 57 ಅರ್ಜಿ ತಿರಸ್ಕಾರ , ವೃದ್ಧಾಪ್ಯ ವೇತನ ಮತ್ತು ಸಂಧ್ಯಾ ಸುರಕ್ಷಾ ರದ್ದತಿ ಮತ್ತು ವಿದ್ಯುತ್ ದರ ಏರಿಕೆ ಕುರಿತು ಬಿಜೆಪಿ ಮಾಡುತ್ತಿರುವ ಅಪಪ್ರಚಾರಕ್ಕೆ ಕಾಂಗ್ರೆಸ್ ಪಕ್ಷದಿಂದ ಜನತೆಗೆ ವಾಸ್ತವ ವಿಚಾರ ತಿಳಿಸುವ ಮತ್ತು ಬಿಜೆಪಿ ಸುಳ್ಳು ಪ್ರತಿಭಟನೆ ವಿರುದ್ಧ ಕಾಂಗ್ರೆಸ್ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಂಕರ್ ಎ. ಕುಂದರ್ ಅವರು ಪ್ರಸ್ತಾವಿಕವಾಗಿ ಮಾತನಾ̧ಡಿ ಬಿಜೆಪಿಯವರು ಸುಳ್ಳುಗಳನ್ನು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಗ್ಯಾರಂಟಿಗಳು ರದ್ದದಾದರೆ ಮುಂದೆ ನಾವು ಅಧಿಕಾರಕ್ಕೆ ಇರಬಹುದೆಂದು ಹಂಬಲಿಸುತ್ತಿದ್ದಾರೆ ಇವರ ಸುಳ್ಳುಗಳು ಇನ್ನೂ ಹೆಚ್ಚು ದಿನ ನಡೆಯಲ್ಲ ಎಂದು ಬಿಜೆಇ ಸುಳ್ಳಿನ ಪ್ರತಿಭಟನೆಯನ್ನು ಖಂಡಿಸಿದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹಾಗೂ ನಾಗೇಶ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಗುರುವಾರದಂದು ಗುರುಪೂರ್ಣಿಮೆಯ ಪ್ರಯುಕ್ತ ವ್ಯಾಸಪೂಜೆಯು ಹಟ್ಟಿಅಂಗಡಿ ಶಾಂತಾರಾಮ ಸಭಾಂಗಣದಲ್ಲಿ ನಡೆಯಿತು. ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ಶಾಲಾ ಪ್ರಾಂಶುಪಾಲರಾದ ಶರಣ ಕುಮಾರರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಲಾಶಿಕ್ಷಕವೃಂದದವರು ’ಕಲಿಸು ಗುರುವೆ ನೀ ಕಲಿಸು’ಎಂಬ ಗೀತೆಯನ್ನು ಸುಮಧುರವಾಗಿ ಹಾಡಿ ಮಕ್ಕಳಿಗೆ ಆನಂದವನ್ನು ಉಂಟುಮಾಡಿದರು. ಶಾಲೆಯ ಸಂಸ್ಕೃತ ಅಧ್ಯಾಪಕರಾದ ರಾಮಕೃಷ್ಣ ಉಡುಪರು ಗುರುಪೂರ್ಣಿಮೆಯ ಮಹತ್ವವನ್ನು ತಿಳಿಸುತ್ತಾ ಎಲ್ಲಾ ಗುರುಗಳು ಅವರ ಗುರುಗಳನ್ನು ಸ್ಮರಿಸುವ ಈ ದಿನ ಜಗತ್ತಿಗೆ ಆದಿಗುರುವಾದ ವೇದವ್ಯಾಸರನ್ನು ಸ್ಮರಿಸುವ ಪುಣ್ಯದಿನ. ದೇಶದ ಎಲ್ಲಾ ವೇದಪರಂಪರೆಗಳಿಗೂ ಸನ್ಮಾರ್ಗವಿತ್ತು, ಎಲ್ಲಾ ದೇವ ದೇವತೆಯರನ್ನು ಆರಾಧಿಸುವ ಜನರ ಮನಸ್ಸಿನಲ್ಲಿ ದೇವರ ನಂಬಿಕೆ, ಜ್ಞಾನ ಮತ್ತು ದೃಢಭಕ್ತಿಯನ್ನು ಜನಿಸುವ ಹದಿನೆಂಟು ಪುರಾಣಗಳನ್ನು ಸಂರಚಿಸಿ, ಉಪನಿಷತ್ತಿನ ಸಾರವನ್ನು ಸರ್ವರಿಗೂ ಬೋಧಿಸಿದ ಗುರುವೆಂದರೆ ವೇದವ್ಯಾಸರು. ಭಗವದ್ಗೀತೆ, ವಿಷ್ಣುಸಹಸ್ರನಾಮವೇ ಮೊದಲಾದ ಪುಣ್ಯತಮವಾದ ವಿಚಾರಗಳನ್ನು ಸಮಾಜಕ್ಕೆ ಒದಗಿಸಿದ ಗುರು ವೇದವ್ಯಾಸರು. ಅಂತಹ ಗುರುಗಳನ್ನು ನಮ್ಮ ಶಿಕ್ಷಕರಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕೋಡಿ ಗ್ರಾಮ ಪಂಚಾಯತ್ ನೇತ್ರತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಪಂಚವರ್ಣ ಸಂಘಟನೆ ಕೋಟ ಇವರ ಸಂಯೋಜನೆಯೊಂದಿಗೆ ಶಿಶುಅಭಿವೃದ್ಧಿ ಯೋಜನೆ ಬ್ರಹ್ಮಾವರ, ಸಮನ್ವಯ ಸಂಜೀವಿನಿ ಒಕ್ಕೂಟ ಕೋಡಿ ಹಾಗೂ ಎಸ್ಎಲ್ಆರ್ಎಂ ಘಟಕ ಕೋಡಿ ಇವರ ಸಹಕಾರದೊಂದಿಗೆ ಕೋಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಖಾರ್ವಿ ಅಧ್ಯಕ್ಷತೆಯಲ್ಲಿ ಮನೆಗೊಂದು ಗಿಡ ನೆಡುವ ಎರಡನೇ ವರ್ಷದ ಮೂರು ತಿಂಗಳ ಪರಿಸರ ಸ್ನೇಹಿ ಹಸಿರು ಜೀವ ಅಭಿಯಾನ ಜರಗಿತು. ಗ್ರಾಮ ಪಂಚಾಯತ್ ಸದಸ್ಯರಾದ ಕೃಷ್ಣ ಪೂಜಾರಿ ಪಿ, ಪ್ರಭಾಕರ್ ಮೆಂಡನ್, ಸತೀಶ್ ಜಿ. ಕುಂದರ್ ಕಾರ್ಯಕ್ರಮದ ಮುಂದಾಳತ್ವ ವಹಿಸಿದರು. ಭಾನುವಾರ ಹೊಸಬೆಂಗ್ರೆ ಅಂಗನವಾಡಿ ಬಾಲಾವಿಕಾಸ ಸಮಿತಿ ಅಧ್ಯಕ್ಷ ಸುಲೋಚನಾ ದಿವಾಕರ್ ಕುಂದರ್ ಮನೆಯಿಂದ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಂಜೀವಿನಿ ಅಧ್ಯಕ್ಷೆ ಪೂರ್ಣಿಮ, ಮಾಜಿ ಸಂಜೀವಿನಿ ಅಧ್ಯಕ್ಷೆ ದೀಪಾ ಆರ್ ಖಾರ್ವಿ, ಸ್ತ್ರೀ ಶಕ್ತಿ ಸಂಘದ ಸದಸ್ಯೆ ಶಾರದಾ, ಸುಜಾತ ಖಾರ್ವಿ, ಹಾಗೂ ಸ್ಥಳೀಯರು ಭಾರತಿ, ಸವಿತಾ ಪುಟಾಣಿಗಳು ಶ್ರೀಯಾ, ತೃಪ್ತಿ, ಸಂಭ್ರದ್ಧಿ,…
