ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಾಧ್ಯಮಗಳು ರಾಜಕೀಯ ಮತ್ತು ಅಹಿತಕರ ಘಟನೆಗಳನ್ನು ವರದಿ ಮಾಡುವುದಕ್ಕೆ ಮಾತ್ರ ಪ್ರಾಮುಖ್ಯತೆ ನೀಡದೇ ಸಮಾಜದಲ್ಲಿರುವ ಕಡು ಬಡವರನ್ನು ಗುರುತಿಸಿ ಅಂತಹ ಅಶಕ್ತರ ಬದುಕಿಗೆ ದಾರಿದೀಪವಾಗುವಂತಹ ವರದಿಗಳ ಬಗ್ಗೆ ಬೆಳಕು ಚೆಲ್ಲಿದರೆ ಸಮಾಜದಲ್ಲಿ ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ಬದಲಾವಣೆ ತರಲು ಸಾಧ್ಯವಿದೆ ಎಂದು ರಾಜೇಶ್ ಶಿಬಾಜೆ ರಾಜ್ಯ ಪ್ರಶಸ್ತಿ ಪುರಸ್ಕೃತ ವಿಜಯ ಕರ್ನಾಟಕದ ಹಿರಿಯ ವರದಿಗಾರ ಜಾನ್‌ಡಿಸೋಜ ಅವರು ಅಭಿಪ್ರಾಯಪಟ್ಟರು. ಕೋಟೇಶ್ವರ ರೋಟರಿ ಭವನದಲಿ ನಡೆದ ರೋಟರ‍್ಯಾಕ್ಟ್ ಕ್ಲಬ್ ಕೋಟೇಶ್ವರ ಇದರ ಪದಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಯುವಕರು ಅಪಘಾತ ಘಟನೆಗಳ ಸನ್ನಿವೇಶವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣ ಅಥವಾ ಮಾಧ್ಯಮಗಳಿಗೆ ರವಾನಿಸುವಂತಹ ಕೆಲಸವನ್ನು ಬಿಟ್ಟು ಆ ಕ್ಷಣ ಸಮಯದ ಅರಿವಿನ ಜೊತೆಗೆ ಮಾನವೀಯತೆಯಿಂದ ಕೆಲಸ ಮಾಡಬೇಕು. ಪ್ರಸ್ತುತ ಸಮಾಜದಲ್ಲಿ ಹೆಚ್ಚಿನ ಯುವ ಜನಾಂಗ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ಯುವಕರು ರೋಟರಿಯ ಅಂಗಸಂಸ್ಥೆಯಾದ ರೋಟರ‍್ಯಾಕ್ಟ್‌ನಲ್ಲಿ ಸದಸ್ಯರಾಗಿ ಸೇವಾಕಾರ್ಯ ಮಾಡುತ್ತಿರುವುದು ಜತೆಗೆ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಕ್ವಾಡಿಯಲ್ಲಿನ ಗುರುಕುಲ ಪಬ್ಲಿಕ್ ಸ್ಕೂಲ್‌ನಲ್ಲಿ ‘ಇಕೊ ಕ್ಲಬ್’ ಉದ್ಘಾಟಿಸಲಾಯಿತು. ಮುಖ್ಯ ಅತಿಥಿ ಡಾ. ಎನ್.ಎ ಮಧ್ಯಸ್ಥ ದೀಪ ಬೆಳಗಿಸಿ ಕಾರ‍್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಪರಿಸರ ಕಾಳಜಿಯ ಮಹತ್ವವನ್ನು ತಿಳಿಸಿದರು. ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳಲು ಹಾಗೂ ಮಾನವನ ಬದುಕಿಗೆ ಆಸರೆಯಾಗಿರುವ ಗಿಡಮರಗಳ ರಕ್ಷಣೆ ಹಾಗೂ ಪೋಷಣೆಯ ಅನಿವಾರ್ಯತೆಯನ್ನು ತಿಳಿ ಹೇಳಿದರು. ಗುರುಕುಲ ಕಾಲೇಜಿನ ಪ್ರಾಂಶುಪಾಲರಾದ ಚೆನ್ನಬಸಪ್ಪ ಮಾತನಾಡಿ ವಿದ್ಯಾರ್ಥಿಗಳು ಪರಿಸರ ಸ್ವಚ್ಚತೆಯನ್ನು ಕಾಪಾಡಿಕೊಂಡು ನೈರ್ಮಲ್ಯತೆಯತ್ತ ಗಮನಹರಿಸಲು ತಿಳಿಸಿದರು. ಗುರುಕುಲ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲರಾದ ಶ್ರೀ. ಸಾಯಿಜು ನಾಯರ್‌ರವರು ಮಾತನಾಡಿ ಪ್ರಕೃತಿ ರಕ್ಷಣೆ ನಮ್ಮೆಲ್ಲರ ಹೊಣೆ, ಪ್ರಕೃತಿಯನ್ನು ನಾವು ರಕ್ಷಿಸಿದರೆ ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ ಎಂದು ತಿಳಿಸಿದರು. ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬಾಂಡ್ಯ ಎಜ್ಯುಕೆಶನ್ ಟ್ರಸ್ಟ್‌ನ ಜಂಟಿ ಕಾರ‍್ಯ ನಿರ್ವಹಣಾಧಿಕಾರಿ ಅನುಪಮ ಎಸ್ ಶೆಟ್ಟಿ ಮಾತನಾಡಿ ಔಷಧಿಯ ಸಸ್ಯಗಳ ಮಹತ್ವವನ್ನು ತಿಳಿಸಿದರು. ಕಾರ‍್ಯಕ್ರಮದಲ್ಲಿ ಟ್ರಸ್ಟ್‌ನ ಜಂಟಿ ಕಾರ‍್ಯನಿರ್ವಹಣಾಧಿಕಾರಿ ಸುಭಾಶ್ಚಂದ್ರ ಶೆಟ್ಟಿ ಹಾಗೂ ಶಾಲೆಯ ಉಪಪ್ರಾಂಶುಪಾಲೆ ಸುನಂದಾ ಎಸ್ ಪಾಟೀಲ್‌ರವರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶೈಕ್ಷಣಿಕ ಅಧ್ಯಯನ, ಶೋಧನೆ ಮತ್ತು ಉದ್ಯೋಗ ವ್ಯಕ್ತಿಯ ಬದುಕಿನ ಮಹತ್ತರ ಮೂರು ಹಂತಗಳು. ಕ್ರೀಯಾಶೀಲತೆ, ಕೌಶಾಲಾಭಿವೃದ್ಧಿ, ಸಂವಹನ ಮತ್ತು ಉದ್ಯೋಗದ ಬಗೆಗಿನ ಜ್ಞಾನ, ಹಾಗೂ ವೃತ್ತಿಮೌಲ್ಯಗಳನ್ನು, ವಿದ್ಯಾರ್ಥಿಗಳು ಶೈಕ್ಷಣಿಕ ಹಂತದಲ್ಲೇ ಮೈಗೂಡಿಸಿಕೊಂಡರೆ ಉದ್ಯೋಗವೇ ನಿಮ್ಮ ಹಿಂದೆ ಬಂದು ನಿಲ್ಲುತ್ತದೆ ಎಂದು ಮಂಗಳೂರು ಎಸ್‌ಡಿಎಂ ಕಾನೂನು ಮಹಾವಿದ್ಯಾಲಯದ ಪ್ರಾಧ್ಯಾಪಕಿ ಚಂದ್ರಲೇಖಾ ವಿ. ಹೇಳಿದರು. ಛತ್ರಪತಿ ಯುವ ಸೇನೆಯು ಕುಂದಾಪುರ ತಾಲೂಕು ಮರಾಠಿ ವಿದ್ಯಾರ್ಥಿಗಳಿಗಾಗಿ ಬ್ಯೆಂದೂರಿನ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಔದ್ಯೋಗಿಕ ಆಪ್ತಸಮಾಲೋಚನ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಮಾನವ ಸಂಪನ್ಮೂಲ ಹಿರಿಯ ವ್ಯವಸ್ಥಾಪಕ ನಂದಿಗದ್ದೆ ಸದಾಶಿವ ನಾಯ್ಕ ಮಾತನಾಡಿ, ಶೈಕ್ಷಣಿಕ ವಿಭಾಗದಲ್ಲಿನ ಸಾಧನೆಯೆ ಸಮುದಾಯದ ಬೆಳವಣಿಗೆಗೆ ಸಹಕಾರಿ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವು ಇಲಾಖೆಗಳು ಮತ್ತು ಖಾಸಗಿ ವಲಯಗಳ ಸಮಗ್ರ ಪರಿಚಯ, ಔದ್ಯೋಗಿಕ ಮಾಹಿತಿ ಇಂದಿನ ಯುವಜನಾಂಗಕ್ಕೆ ನೀಡುವ ಅಗತ್ಯತೆ ಇದೆ. ಮಾಹಿತಿಯ ಕೊರತೆಯೆ ನಿರುದ್ಯೋಗವನ್ನ ಹುಟ್ಟುಹಾಕುತ್ತದೆ. ಆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ದೇಶದ ಕರಾವಳಿ ತೀರಗಳ ಭದ್ರತೆ ದೃಷ್ಟಿಯಿಂದ ಕೆಲವೊಂದು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಮೀನುಗಾರರು ಹಾಗೂ ಸಾರ್ವಜನಿಕರು ಅಗತ್ಯ ಸಹಕಾರ ನೀಡಬೇಕು. ಕರಾವಳಿ ತೀರದ ರಕ್ಷಣೆ ಉದ್ದೇಶದಿಂದ ಕಠಿಣ ಕ್ರಮಕೈಗೊಳ್ಳುವುದು ಅನಿವಾರ್ಯವಾಗಿದ್ದು, ಯಾರಿಗೂ ತೊಂದರೆ ಪಡಿಸುವ ಉದ್ದೇಶ ಇಲ್ಲ ಎಂದು ಇಂಡಿಯನ್ ಕೋಸ್ಟ್ ಗಾರ್ಡ್‌ನ ಅಸಿಸ್ಟೆಂಟ್ ಕಮಾಂಡರ್ ಕೆ.ವರುಣ್ ಹೇಳಿದರು. ಅವರು ಗಂಗೊಳ್ಳಿ ಬಂದರು ಪ್ರದೇಶದಲ್ಲಿರುವ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ಮೀನುಗಾರರ ರಕ್ಷಣೆ, ಸುರಕ್ಷತೆ ಹಾಗೂ ಭದ್ರತೆ ಬಗ್ಗೆ ಮೀನುಗಾರರಿಗೆ ಮಾಹಿತಿ ನೀಡಿ ಮಾತನಾಡಿದರು. ಆಗಸ್ಟ್ 15ರಂದು ಕರಾವಳಿ ತೀರಗಳ ಮೂಲಕ ದೇಶದಲ್ಲಿ ಉಗ್ರರ ದಾಳಿ ಸಾಧ್ಯತೆ ಇರುವುದರಿಂದ ಕರಾವಳಿ ತೀರಗಳಲ್ಲಿ ಭದ್ರೆತ ಹೆಚ್ಚಿಸಲಾಗಿದೆ. ತೀರದಲ್ಲಿ ಅಥವಾ ಸಮುದ್ರದಲ್ಲಿ ಅನುಮಾನಾಸ್ಪದ ವ್ಯಕ್ತಿಗಳನ್ನು ಯಾ ಅನುಮಾಸ್ಪದ ಬೋಟು, ದೋಣಿಯನ್ನು ಕಂಡರೆ ಸ್ಥಳೀಯ ಪೊಲೀಸ್ ಠಾಣೆ, ಕರಾವಳಿ ಪೊಲೀಸ್ ಠಾಣೆ ಅಥವಾ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು. ಹೊರರಾಜ್ಯದ ಮೀನುಗಾರರನ್ನು ನೋಡಿದರೆ ಅವರ…
ಪರಿಸ್ಥಿತಿ ನಿಯಂತ್ರಣಕ್ಕೆ ಲಘು ಲಾಠಿ ಪ್ರಹಾರ. ಸ್ಥಳಕ್ಕೆ ಎಸ್ಪಿ ಅಣ್ಣಾಮಲೈ ಭೇಟಿ ಕುಂದಾಪ್ರ ಡಾಟ್ ಕಾಂ ವರದಿ ಬೈಂದೂರು: ಉಪ್ಪುಂದ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಭಟ್ಕಳದಿಂದ ಕುಂದಾಪುರಕ್ಕೆ ತೆರಳುತ್ತಿದ್ದ ಸರಕಾರಿ ಬಸ್ಸು ಹಾಗೂ ಹುಬ್ಬಳ್ಳಿ ಮುಂಬೈನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ಸುಗಳ ನಡುವಿನ ಅಫಘಾತದಲ್ಲಿ ಸರಕಾರಿ ಬಸ್ಸಿನಲ್ಲಿದ್ದ ವಿದ್ಯಾರ್ಥಿಯೋರ್ವ ಗಂಭೀರವಾಗಿ ಗಾಯಗೊಂಡು ದಾರುಣವಾಗಿ ಮೃತಪಟ್ಟ ಘಟನೆಗೆ ನಡೆಯುತ್ತಿದ್ದಂತೆ ಆಕ್ರೋಶಗೊಂಡ ವಿದ್ಯಾರ್ಥಿಗಳು ಹೆದ್ದಾರಿ ಮಧ್ಯೆಯೇ ನಿಂತು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರಗೆಡವಿದ ಘಟನೆ ನಡೆದಿದೆ. ಸತತ ಎರಡು ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ತಡೆ ನಡೆಸಿದ ವಿದ್ಯಾರ್ಥಿಗಳು ಬಸ್ ಡ್ರೈವರ್‌ಗಳನ್ನು ಬಂಧಿಸಬೇಕು, ಮೃತರ ಹುಡುಗನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು, ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಠಿಯಿಂದ ಹೆಚ್ವುವರಿ ಸರಕಾರಿ ಬಸ್ಸುಗಳನ್ನು ಓಡಿಸಬೇಕು ಎಂದು ರಸ್ತೆಯಲ್ಲಿಯೇ ಕುಳಿತು ಆಗ್ರಹಿಸಿದರು. ಸರಕಾರಿ ಬಸ್ಸುಗಳಲ್ಲಿ ವಿದ್ಯಾರ್ಥಿಗಳ ಬಗ್ಗೆ ಬೇಜವಾಬ್ದಾರಿ ತೋರುತ್ತಿರುವುದಲ್ಲದೇ ಇತರೆ ಪ್ರಯಾಣಿಕರು ಹತ್ತಿದ ಮೇಲೆ ಬಸ್ ಹತ್ತಿಸಿಕೊಳ್ಳಲಾಗುತ್ತಿದೆ. ನೂರಾರು ವಿದ್ಯಾರ್ಥಿಗಳ ಈ ಭಾಗದಿಂದ ಕಾಲೇಜಿಗೆ ತೆರಳುತ್ತಿದ್ದರೂ ಸಮಯಕ್ಕೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಭಟ್ಕಳದಿಂದ ಕುಂದಾಪುರಕ್ಕೆ ತೆರಳುತ್ತಿದ್ದ ಸರಕಾರಿ ಬಸ್ಸು ಹಾಗೂ ಹುಬ್ಬಳ್ಳಿ ಮುಂಬೈನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ಸುಗಳ ನಡುವಿನ ಅಫಘಾತದಲ್ಲಿ ಸರಕಾರಿ ಬಸ್ಸಿನಲ್ಲಿದ್ದ ವಿದ್ಯಾರ್ಥಿಯೋಬ್ಬ ಗಂಭೀರವಾಗಿ ಗಾಯಗೊಂಡು ದಾರುಣವಾಗಿ ಮೃತಪಟ್ಟ ಘಟನೆ ಉಪ್ಪುಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವರದಿಯಾಗಿದೆ. ಕುಂದಾಪುರ ಬಿ.ಬಿ. ಹೆಗ್ಡೆ ಕಾಲೇಜಿನ ತೃತೀಯ ಬಿಕಾಂ ವಿದ್ಯಾರ್ಥಿ ರಾಘವೇಂದ್ರ ಶೆಟ್ಟಿ (20) ಮೃತ ದುರ್ದೈವಿ. ಘಟನೆಯ ವಿವರ: ಭಟ್ಕಳದಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸು ಉಪ್ಪುಂದದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಮುಂದೆ ಬರುತ್ತಿದ್ದ ವೇಳೆ, ಉಪ್ಪಂದ ಹೋಟೆಲೊಂದರ ಎದುರು ನಿಲ್ಲಿಸಿದ್ದ ವಿಆರ್‌ಎಲ್ ಸಂಸ್ಥೆಯ ವಿಜಯಾನಂದ ಖಾಸಗಿ ವೋಲ್ಪೋ ಬಸ್ಸು ಕುಂದಾಪುರ ಕಡೆಗೆ ಸಾಗಲು ಒಮ್ಮೆಲೇ ರಾಷ್ಟ್ರೀಯ ಹೆದ್ದಾರಿ ಪ್ರವೇಶಿಸಿದ್ದರ ಪರಿಣಾಮ ಹಿಂಬದಿಯ ಬಾಗಿಲು ಹಾಗೂ ಬಾಗಿಲಿನ ಮೆಟ್ಟಿನಿಂದ ಮೇಲೆ ಹತ್ತುತ್ತಿದ್ದ ವಿದ್ಯಾರ್ಥಿಗೆ ಖಾಸಗಿ ಬಸ್ಸಿನ ಮುಂಭಾಗ ಬಡಿದಿತ್ತು. ಅಫಘಾತದ ತೀವ್ರತೆಗೆ ವಿದ್ಯಾರ್ಥಿ ಕೆಳಗೆ ಬಿದ್ದು ತಲೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಆತನನ್ನು ಕುಂದಾಪುರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆಯೇ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಾವು ದಿನನಿತ್ಯ ಸೇವಿಸುವ ಆಹಾರ ಕಲಬೆರಕೆಯಿಂದ ಕೂಡಿದೆ. ಹಣ್ಣು-ತರಕಾರಿಗಳಿಗೆ ರಾಸಾಯನಿಕಗಳ ಸಿಂಪಡಿಸಲಾಗುತ್ತಿದೆ. ಇವೇ ಮುಂತಾದ ಕಾರಣದಿಂದಾಗಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು ಇವುಗಳ ಬಗೆಗೆ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ನಿವೃತ್ತ ಶಿಕ್ಷಕಿ ಸುಧಾಮೂರ್ತಿ ಹೇಳಿದರು. ಕುಸುಮ ಫೌಂಡೇಶನ್ ದತ್ತು ಸ್ವೀಕರಿಸಿರುವ ನಾಗೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಉತ್ತಮ ಗುಣಮಟ್ಟದ ಆಹಾರವನ್ನು ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ ಎಂದ ಅವರು ಮಕ್ಕಳಿಗೆ ವನಮಹೋತ್ಸವದ ಪ್ರಾಮುಖ್ಯತೆ ಹಾಗೂ ಪರಿಸರ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು. ಕುಸುಮ ಫೌಂಡೇಶನ್‌ನ ಮ್ಯಾನೇಜಿಂಗ್ ಟ್ರಸ್ಟಿ ನಳಿನ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳಿಗೆ ಗಿಡಗಳನ್ನು ವಿತರಿಸಲಾಯಿತು. ಶಾಲೆಯ ಅಧ್ಯಾಪಕ ವೃಂದ, ಎಸ್‌ಡಿಎಮ್‌ಸಿ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಕುಸುಮ ಫೌಂಡೆಶನ್‌ನ ಸಿಬ್ಬಂದಿಗಳು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಗುರುರಾಜ್ ಸ್ವಾಗತಿಸಿ, ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಂಕಪಟ್ಟಿಯಲ್ಲಿನ ಗೊಂದಲ ಹಾಗೂ ತಪ್ಪು ಫಲಿತಾಂಶದಿಂದಾಗಿ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದ್ದು, ವಿಶ್ವವಿದ್ಯಾನಿಲಯ ಈ ಕೂಡಲೇ ಸಮಸ್ಯೆಗೆ ಸ್ಪಂದಿಸಬೇಕೆಂದು ಇಲ್ಲಿನ ಭಂಡಾರ್ಕಾರ್ಸ ಕಾಲೇಜಿನ ವಿದ್ಯಾರ್ಥಿಗಳು ಆಗ್ರಹಿಸಿದರು. ಕುಂದಾಪುರ ಪ್ರೆಸ್‌ಕ್ಲಬ್‌ನಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ತಮ್ಮ ಅಳಲು ತೋಡಿಕೊಂಡ ವಿದ್ಯಾರ್ಥಿಗಳು, ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕೆಲವು ಕಾಲೇಜುಗಳ ವಿದ್ಯಾರ್ಥಿಗಳ ಒಂದನೇ, ಮೂರನೇ ಸೆಮಿಸ್ಟರ್‌ನ ಫಲಿತಾಂಶ ನೀಡದೇ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ವಿ.ವಿ ಆಟವನ್ನಾಡುತ್ತಿದೆ. ಈವರೆಗೂ ಎಪ್ರಿಲ್ 2016 ಎರಡನೇ ಮತ್ತು ನಾಲ್ಕನೇ ಸೆಮಿಸ್ಟರ್ ಪರೀಕ್ಷೆ ಮುಗಿದು 2016 ರ ಒಂದು, ಮೂರು ಮತ್ತು ಐದನೇ ಸೆಮಿಸ್ಟರ್ ಆರಂಭವಾಗಿದೆ. ಆದರೆ ಈವರೆಗೂ ೨೦೧೫ರ ನವೆಂಬರ್ ಡಿಸೆಂಬರ್‌ನ ಮೂರನೇ ಮತ್ತುಐದನೇ ಸೆಮಿಸ್ಟರ್ ನಲ್ಲಿಓದುತ್ತಿರುವ ವಿದ್ಯಾರ್ಥಿಗಳ ಸರಿಯಾದ ಮತ್ತು ಸೂಕ್ತ ರೀತಿಯ ಫಲಿತಾಂಶ ವಿದ್ಯಾರ್ಥಿಗಳ ಕೈಗೆ ಬಂದಿಲ್ಲ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿರುವ ಮಂಗಳೂರು ವಿಶ್ವವಿದ್ಯಾನಿಲಯದ ನಿಲುವಿಗೆ ಏನನ್ನು ಹೇಳಬೇಕು ಎಂಬುದೇ ತಿಳಿಯದಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕಿನ್ನರ ಪ್ರಕಾಶನ ಮಣಿಪಾಲ ಹಾಗೂ ಕೊಂಕಣಿ ಸಂಸಾರ ಪ್ರತಿಷ್ಠಾನದ ವತಿಯಿಂದ ಚಿಕ್ಕಮಂಗಳೂರು ಜಿಲ್ಲೆಗೆ ವರ್ಗಾವಣೆಗೊಂಡ ಜಿಲ್ಲೆಯ ಎಸ್ಪಿ ಕೆ. ಅಣ್ಣಾಮಲೈ ಅವರನ್ನು ಬನ್ನಂಜೆಯ ಎಸ್ಪಿ ಕಛೇರಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಉಡುಪಿಗೆ ಎಸ್ಪಿ ಕಛೇರಿಗೆ ಆಗಮಿಸಿದ್ದ ಪಶ್ಚಿಮ ವಲಯ ನೂತನ ಐಜಿ ಅರುಣ್ ಚಕ್ರವರ್ತಿ ಅವರನ್ನು ಉಡುಪಿಯ ನಾಗರೀಕರು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಮಣಿಪಾಲ ಪ್ರಸನ್ನ ಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಹರಿಪ್ರಸಾದ್ ರೈ ಬೆಳ್ಳಿಪಾಡಿ, ಸಮಾಜ ಸೇವಕ ಉಡುಪಿ ವಿಶ್ವನಾಥ ಶೆಣೈ, ಲೇಖಕಿ ಶಾರದಾ ಭಟ್, ಹಿರಿಯ ಪತ್ರಕರ್ತ ಶೇಖರ ಅಜೆಕಾರು, ಕಿನ್ನರ ಪ್ರಕಾಶನದ ಅಧ್ಯಕ್ಷ ಡಾ. ನಾಗೇಶ್ ಕುಮಾರ್ ಜಿ. ರಾವ್, ವಿಜಯ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಶ್ರೀ ರಾಮಕ್ಷತ್ರಿಯ ಮಾತೃಮಂಡಳಿಯ 2016-17ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ಆಶಾ ಜಗದೀಶ್ ಪಟವಾಲ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ವನಜಾ ರಾಮ. ಎಚ್, ಗಂಗಾ ಕೆ. ಜಿ. ಶಂಕರ್, ಸುಂದರಿ ಗಣಪತಿ. ಕಾರ್ಯದರ್ಶಿಯಾಗಿ ವನಜಾ ಭಾಸ್ಕರ್ ಜೊತೆ ಕಾರ್ಯದರ್ಶಿಯಾಗಿ ರೇವತಿ, ಆಶಾ ಕಿಶೋರ್, ಆಶಾ ದಿನೇಶ್, ವಸಂತಿ ವಾಸುದೇವ್, ಕೋಶಾಧಿಕಾರಿಯಾಗಿ ಗಾಯತ್ರಿ ರಾಮ, ಪೂರ್ಣಿಮಾ ರವಿರಾಜ್, ಲೆಕ್ಕ ಪರಿಶೋಧಕರಾಗಿ ಲಲಿತಾ ಕೆಶವ ನಾಯ್ಕ್ ಆಯ್ಕೆಯಾಗಿದ್ದಾರೆ.
