ಮಾಧ್ಯಮಗಳು ಅಶಕ್ತರ ಬದುಕಿಗೆ ದಾರಿದೀಪವಾಗಬೇಕಿದೆ: ಜಾನ್ ಡಿಸೋಜ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಾಧ್ಯಮಗಳು ರಾಜಕೀಯ ಮತ್ತು ಅಹಿತಕರ ಘಟನೆಗಳನ್ನು ವರದಿ ಮಾಡುವುದಕ್ಕೆ ಮಾತ್ರ ಪ್ರಾಮುಖ್ಯತೆ ನೀಡದೇ ಸಮಾಜದಲ್ಲಿರುವ ಕಡು ಬಡವರನ್ನು ಗುರುತಿಸಿ ಅಂತಹ ಅಶಕ್ತರ ಬದುಕಿಗೆ ದಾರಿದೀಪವಾಗುವಂತಹ ವರದಿಗಳ ಬಗ್ಗೆ ಬೆಳಕು ಚೆಲ್ಲಿದರೆ ಸಮಾಜದಲ್ಲಿ ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ಬದಲಾವಣೆ ತರಲು ಸಾಧ್ಯವಿದೆ ಎಂದು ರಾಜೇಶ್ ಶಿಬಾಜೆ ರಾಜ್ಯ ಪ್ರಶಸ್ತಿ ಪುರಸ್ಕೃತ ವಿಜಯ ಕರ್ನಾಟಕದ ಹಿರಿಯ ವರದಿಗಾರ ಜಾನ್‌ಡಿಸೋಜ ಅವರು ಅಭಿಪ್ರಾಯಪಟ್ಟರು.

Call us

Click Here

ಕೋಟೇಶ್ವರ ರೋಟರಿ ಭವನದಲಿ ನಡೆದ ರೋಟರ‍್ಯಾಕ್ಟ್ ಕ್ಲಬ್ ಕೋಟೇಶ್ವರ ಇದರ ಪದಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಯುವಕರು ಅಪಘಾತ ಘಟನೆಗಳ ಸನ್ನಿವೇಶವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣ ಅಥವಾ ಮಾಧ್ಯಮಗಳಿಗೆ ರವಾನಿಸುವಂತಹ ಕೆಲಸವನ್ನು ಬಿಟ್ಟು ಆ ಕ್ಷಣ ಸಮಯದ ಅರಿವಿನ ಜೊತೆಗೆ ಮಾನವೀಯತೆಯಿಂದ ಕೆಲಸ ಮಾಡಬೇಕು. ಪ್ರಸ್ತುತ ಸಮಾಜದಲ್ಲಿ ಹೆಚ್ಚಿನ ಯುವ ಜನಾಂಗ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ಯುವಕರು ರೋಟರಿಯ ಅಂಗಸಂಸ್ಥೆಯಾದ ರೋಟರ‍್ಯಾಕ್ಟ್‌ನಲ್ಲಿ ಸದಸ್ಯರಾಗಿ ಸೇವಾಕಾರ್ಯ ಮಾಡುತ್ತಿರುವುದು ಜತೆಗೆ ಈ ಕ್ಲಬ್‌ನಲ್ಲಿ ಗುರುತಿಸಿಕೊಂಡು ಸಮಾಜದಲ್ಲಿ ಬೆಳಕಿಗೆ ಬಾರದ ಯುವಕರನ್ನು ಗುರುತಿಸಿ ಸನ್ಮಾನಿಸಿರುವುದು ಅಭಿನಂದನೀಯಎಂದರು.

ರೋಟರ‍್ಯಾಕ್ಟ್ ಕ್ಲಬ್‌ನ ನೂತನ ಅಧ್ಯಕ್ಷ ಅರುಣ್ ದೇವಾಡಿಗ ವಕ್ವಾಡಿ ಮತ್ತು ಕಾರ್ಯದರ್ಶಿ ಸುಬ್ರಹ್ಮಣ್ಯ ಮೊಗವೀರ ಅವರಿಗೆ ಕೋಟೇಶ್ವರ ರೋಟರಿ ಕ್ಲಬ್‌ನ ಅಧ್ಯಕ್ಷ ಶಂಕರ ನಾಯ್ಕ್ ಪದಪ್ರದಾನ ಮಾಡಿದರು. ಈ ಸಂದಂರ್ಭದಲ್ಲಿ ನಿಕಟ ಪೂರ್ವ ಅಧ್ಯಕ್ಷರ ಹೊಸ ಆಲೋಚನೆಯ ಬೆಸ್ಟ್ ಮೆಂಬರ್ ೨೦೧೫-೧೬ ಪ್ರಶಸ್ತಿಯನ್ನು ಕ್ಲಬ್‌ನ ಸದಸ್ಯರಾದ ಪ್ರಶಾಂತ ಆಚಾರ್ಯ, ರಾಮಚಂದ್ರ ಆಚಾರ್ಯ, ಪ್ರದೀಪ ದೇವಾಡಿಗ, ಶಶಾಂಕ ಮಂಜ, ಯೋಗೀಶ್ ಎಸ್. ಕುಂದರ್ ಅವರಿಗೆ ವಿತರಿಸಲಾಯಿತು.

ಸಂಸ್ಥೆಯ ಒಂದು ವರ್ಷದಲ್ಲಿ ಆದ ಕಾರ್ಯಕ್ರಮಗಳ ಹಿನ್ನಲೆಯ ’ಕೊಡಿ’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಬೀಜಾಡಿ ಮೂಡು ಅಂಗನವಾಡಿ ಕೇಂದ್ರಕ್ಕೆ ನೀರಿನ ಡ್ರಮ್ ಕೊಡುಗೆ ನೀಡಲಾಯಿತು. ನೂತನವಾಗಿ ೧೪ಜನ ಸದಸ್ಯರನ್ನು ಸಂಸ್ಥೆಗೆ ಸೇರ್ಪಡೆಗೊಳಿಸಲಾಗಿದ್ದು, ಪದಪ್ರದಾನ ನಡೆಯಿತು.

ವಿಜಯ ಕರ್ನಾಟಕದಲ್ಲಿ ಪ್ರಕಟವಾದ ’ಹಳ್ಳಿ ಹುಡುಗನ ಕೈಯಲ್ಲಿ ಅರಳಿತು ಪೇಪರ್ ಆರ್ಟ್’ ವಿಶೇಷ ವರದಿ ಪರಿಗಣಿಸಿ ಯುವ ಪೇಪರ್ ಆರ್ಟ್ ಪ್ರತಿಭೆ ಹೆಂಗವಳ್ಳಿ ರವಿಪ್ರಸಾದ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.

Click here

Click here

Click here

Click Here

Call us

Call us

ಜಿಲ್ಲಾ ರೋಟರ‍್ಯಾಕ್ಟ್ ಸಮಿತಿ ಸಭಾಪತಿ ಪಿಹೆಚ್‌ಎಫ್ ಶೈಲೇಂದ್ರ ರಾವ್, ಜಿಲ್ಲಾ ರೋಟರ‍್ಯಾಕ್ಟ್ ಪ್ರತಿನಿಧಿ ಜಯರಾಜ್, ವಲಯ ರೋಟರ‍್ಯಾಕ್ಟ್ ಪ್ರತಿನಿಧಿ ರಾಘವೇಂದ್ರ ಕೆ.ಸಿ, ಕೋಟೇಶ್ವರ ರೋಟರ‍್ಯಾಕ್ಟ್ ಸಭಾಪತಿ ಸುಧೀರ್ ಶೆಟ್ಟಿ ನೂಜಿ, ನಿಕಟ ಪೂರ್ವ ಅಧ್ಯಕ್ಷ ರಾಘವೇಂದ್ರ ಎಸ್. ಬೀಜಾಡಿ ಉಪಸ್ಥಿತರಿದ್ದರು. ರಾಘವೇಂದ್ರ ಎಸ್. ಬೀಜಾಡಿ ಸ್ವಾಗತಿಸಿದರು. ಅರುಣ್ ದೇವಾಡಿಗ ವಕ್ವಾಡಿ ವಾರ್ಷಿಕ ವರದಿ ವಾಚಿಸಿದರು. ಶ್ರೀರಾಜ್ ಎಸ್. ಆಚಾರ್ಯ, ಶಿವಾನಂದ ದೊಡ್ಡೋಣಿ ಅತಿಥಿಗಳನ್ನು ಪರಿಚಯಿಸಿದರು. ರವಿ ಕಟ್ಕೆರೆ ಕಾರ್ಯಕ್ರಮ ನಿರೂಪಿಸಿದರು. ಸುಬ್ರಹ್ಮಣ್ಯ ಮೊಗವೀರ ವಂದಿಸಿದರು.

????????????????????????????????????
????????????????????????????????????

Leave a Reply