Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯವರ ಕಲ್ಪನೆಯ ಜನಪ್ರಿಯ ಯೋಜನೆಯಾದ ಮದ್ಯವರ್ಜನ ಶಿಬಿರದಿಂದ ಸಮಾಜದ ಹಲವು ಮದ್ಯ ವ್ಯಸನಿಗಳನ್ನು ಪಾನಮುಕ್ತಗೊಳಿಸಿ ಅವರಿಗೆ ನವಜೀವನ ನಿರ್ಮಾಣಮಾಡಿದೆ ಎಂದು 929ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು. ನಾಗೂರು ಶಾಂತೇರಿ ಕಾಮಾಕ್ಷಿ ಸಭಾಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ-ಕುಂದಾಪುರ ಹಾಗೂ ವಿವಿಧ ಸಹಕಾರಿ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ 929ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಶಿಬಿರದ ಯಶಸ್ಸಿಗೆ ಆರ್ಥಿಕವಾಗಿ ಸಹಕರಿಸಿದ ಪರಿಸರದ ಸಹಕಾರಿ ಸಂಘಗಳಿಗೆ, ಅರ್ಪಣಾ ಭಾವದಿಂದ ಶ್ರಮವಹಿಸಿ ನಿಸ್ವಾರ್ಥದಿಂದ ದುಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಬಸ್ರೂರು ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭ ಜನಜಾಗೃತಿ ವೇದಿಕೆ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಮತ್ತು ಯೋಗಗುರು ಸುಬ್ಬಯ್ಯ ದೇವಾಡಿಗ ಇವರನ್ನು ಸನ್ಮಾನಿಸಲಾಯಿತು. ಜಿಪಂ ಸದಸ್ಯೆ ಗೌರಿ ದೇವಾಡಿಗ, ತಾಪಂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಒಳ್ಳೆಯ ವಿಚಾರಗಳು ಎಲ್ಲ ಕಡೆಯಿಂದಲೂ ಬರುತ್ತಿರಲಿ ಎಂಬುದು ವೇದಗಳ ಆಶಯ. ಅದು ಎಲ್ಲ ಕಾಲಕ್ಕೂ, ಎಲ್ಲರಿಗೂ ಶ್ರೇಯಸ್ಸನ್ನು ಕರುಣಿಸುವ ದಾರಿ. ಒಮ್ಮುಖ ವಿಚಾರಧಾರೆಗಿಂತ ದ್ವಿಮುಖ, ಬಹುಮುಖೀ ವಿಚಾರ ವಿನಿಮಯಕ್ಕೆ ಅವಕಾಶ ಕಲ್ಪಿಸುವ ವೇದಿಕೆ ಇಂದು ಅವಶ್ಯವಾಗಿದೆ. ದೇಶ, ಕಾಲ, ಪರಿಸ್ಥಿಗಳಿಗೆ ಹೊಂದಿಕೆಯಾಗುವ ಚಿಂತಕರ ಚಾವಡಿ ಕೇವಲ ಬೌದ್ಧಿಕವಾಗಿಲ್ಲದೆ ಭಾವನಾತ್ಮಕ ಸಂಬಂಧಗಳ ಹಿತಮಿತವಾಗಿ ಹೊಂದುವ ಆಶಯದ ಕುಂದ ಅಧ್ಯಯನ ಕೇಂದ್ರದ ಸುವಿಚಾರ ಬಳಗದ ಕಲ್ಪನೆಯೇ ಆಶಾದಾಯಕವೂ ಚೇತೋಹಾರಿಯೂ ಆಗಿದೆ ಎಂದು ಬೆಂಗಳೂರು ಭಾರತೀಯ ವಿದ್ಯಾಭವನದ ಮಾಧ್ಯಮ ಭಾರತೀಯ ನಿರ್ದೇಶಕ ಎಂ. ಜಯರಾಮ ಅಡಿಗ ನುಡಿದರು. ಉಪ್ಪುಂದ ಶಂಕರ ಕಲಾ ಮಂದಿರದಲ್ಲಿ ಕುಂದ ಅಧ್ಯಯನ ಕೇಂದ್ರದ ಸುವಿಚಾರ ಬಳಗದ ಕಾರ್ಯಚಟುವಟಿಕೆಗಳನ್ನು ದೀಪ ಬೆಳಗಿಸಿ ಉದ್ಘಾಟಿಸುತ್ತಾ ನುಡಿದರು. ನಿವೃತ್ತ ಉಪನ್ಯಾಸಕ, ವಿಪ್ರನುಡಿ ಸಂಪಾದಕ ವಿದ್ವಾನ್ ಭಾಸ್ಕರ ಉಡುಪ ವರ್ಷದ ವಿವಿಧ ಮಾಸಗಳಲ್ಲಿ ಆಚರಿಸಬಹುದಾದ ವಿವಿಧ ವೃತಾಚರಣೆಗಳು, ಅವುಗಳ ಹಿನ್ನಲೆ, ಉದ್ದೇಶ ಮತ್ತು ವಿಧಿ ನಿಯಮಗಳ ಕುರಿತು ಉಪನ್ಯಾಸ ನೀಡುತ್ತಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಹೆಚ್ಚಿನ ಯುವಶಕ್ತಿ ಭಾರತ ದೇಶದಲ್ಲಿದೆ. ಆದರೆ ಈ ಶಕ್ತಿಯು ದೇಶದ ಭದ್ರತೆಗೆ ವಿನಿಯೋಗಿಸಲು ಸಿಗುತ್ತಿಲ್ಲ. ಯುವಕರು ಭ್ರಮೆಯ ಗುಂಗಿನಲ್ಲಿ ತೇಲಾಡುತ್ತಿದ್ದಾರೆ. ದೇಶದ ಮುಂದೆ ದೊಡ್ಡ ಸವಾಲುಗಳೇ ಇದ್ದು, ಮುಂದಿನ ದಿನಗಳು ಮತ್ತಷ್ಟು ಕಷ್ಟಕರವಾಗಿದೆ. ಹೀಗಾಗಿ ರಾಷ್ಟ್ರದ ಏಳಿಗೆಗೆ ಒಳಿತಿಗಾಗಿ ನಮ್ಮನ್ನು ಅರ್ಪಿಸಿಕೊಳ್ಳಬೇಕಾಗಿದೆ ಎಂದು ಉಡುಪಿ ಸಂಸ್ಕಾರ ಭಾರತಿಯ ಸಂಚಾಲಕ ವಾಸುದೇವ ಭಟ್ ಹೇಳಿದರು. ಅವರು ಗಂಗೊಳ್ಳಿಯ ಹಿಂದು ಜಾಗರಣ ವೇದಿಕೆ ಆಶ್ರಯದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಜರಗಿದ ಅಖಂಡ ಭಾರತ ಸಂಕಲ್ಪ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸೌಹಾರ್ದತೆ ಮತ್ತು ಸಹಬಾಳ್ವೆಯ ಪ್ರತಿಯೊಬ್ಬ ಭಾರತೀಯನ ಕಣಕಣದಲ್ಲಿ ಇದೆ. ರಾಷ್ಟ್ರ ಧರ್ಮವನ್ನು ಮೀರಿದ ಮತ್ತೊಬ್ಬ ಧರ್ಮವು ದೇಶದ ಬೆಳವಣಿಗೆಗೆ ಅಡ್ಡಗಾಲು ಹಾಕುತ್ತಿದೆ. ಇದರ ಕರಾಳ ಮುಖಗಳು ದೇಶ ಕಟ್ಟಲು ನಮಗೆ ತೊಂದರೆಯನ್ನುಂಟು ಮಾಡುತ್ತಿದೆ. ಕೇವಲ ಕೇರಳಕ್ಕೆ ಸೀಮಿತವಾಗಿದ್ದ ಜಿಹಾದಿ ಉಗ್ರವಾದ ಇಂದು ಕರಾವಳಿಯ ಮುಕ್ಕಾಲು ಭಾಗವನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಈಜು ಎನ್ನುವುದು ಯಾವುದೇ ದುಶ್ಪರಿಣಾಮ ಇಲ್ಲದ, ಎಲ್ಲರೂ ಮಾಡಬಹುದಾದ ಒಂದು ವ್ಯಾಯಾಮ. ದಿನನಿತ್ಯ ಈಜುವುದರಿಂದ ದೇಹಕ್ಕೆ ಉತ್ತಮ ವ್ಯಾಯಾಮ ದೊರೆಯುದರೊಂದಿಗೆ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಈಜು ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಸಾಲಿಗ್ರಾಮ ಸ್ವೀಮ್ಮಿಂಗ್ ಕ್ಲಬ್ ಆಯೋಜಿಸಿದ ಈ ಈಜುಸ್ಪರ್ಧೆ ಈಜುಪಡುಗಳಿಗೆ ಪ್ರೋತ್ಸಾಹ ನೀಡುವಂತಹುದು ಎಂದು ಯುವಜನ ಸೇವೆ, ಕ್ರೀಡೆ, ಮೀನುಗಾರಿಕಾ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಹೇಳಿದರು. ಅವರು ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನದ ಪುಷ್ಕರಣಿಯಲ್ಲಿ ಸಾಲಿಗ್ರಾಮ ಸ್ವಿಮ್ಮಿಂಗ್ ಕ್ಲಬ್, ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ, ಮಹಾಲಸಾ ಎಂಟರ್‌ಪ್ರೈಸಸ್ ಮತ್ತು ಏಕದಂತ ಎಂಟರ್‌ಪ್ರೈಸಸ್ ಇವರ ಸಹಭಾಗಿತ್ವದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿ ದೆಸೆಯಲ್ಲಿರುವ ಇಂದಿನ ಮಕ್ಕಳಿಗೆ ಮನೆಯಲ್ಲಿ ಮತ್ತು ಶಾಲೆಯಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಮಕ್ಕಳಲ್ಲಿರುವ ಕ್ರೀಡಾ ಪ್ರತಿಭೆ ಮರೆಯಾಗುತ್ತಿದೆ. ಆದ್ದರಿಂದ ಹೆತ್ತವರು ಮಕ್ಕಳ ಅಭಿರುಚಿಯನ್ನು ಗಮನಿಸಿ ಅವರ ಭವಿಷ್ಯಕ್ಕೆ ಸಹಕಾರ ನೀಡಬೇಕು ಎಂದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ, ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಹಟ್ಟಿಯಂಗಡಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕುಂದಾಪುರ ಘಟಕದ ಆಶ್ರಯದಲ್ಲಿ ಹಟ್ಟಿಯಂಗಡಿ ಶ್ರೀ ಸಿದ್ಧಿ ವಿನಾಯಕ ವಸತಿ ಶಾಲೆಯಲ್ಲಿ ರಕ್ತ ವರ್ಗೀಕರಣ ಶಿಬಿರ ನಡೆಯಿತು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕುಂದಾಪುರ ಘಟಕದ ಛೇರ್‌ಮೆನ್ ಜಯಕರ ಶೆಟ್ಟಿ ಶಿಬಿರ ಉದ್ಘಾಟಿಸಿದರು. ಹಟ್ಟಿಯಂಗಡಿ ಶ್ರೀ ಸಿದ್ಧಿ ವಿನಾಯಕ ವಸತಿ ಶಾಲೆಯ ಪ್ರಾಂಶುಪಾಲರಾದ ಶರಣ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ರೆಡ್‌ಕ್ರಾಸ್ ಸಂಸ್ಥೆಯ ಶಿವರಾಮ ಶೆಟ್ಟಿ, ಸೀತಾರಾಮ ಶೆಟ್ಟಿ, ರೋಟರಿ ಕ್ಲಬ್ ಕುಂದಾಪುರದ ನಿಕಟಪೂರ್ವಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು, ಸದಸ್ಯರಾದ ಎಚ್. ಎಸ್. ಹತ್ವಾರ್, ಪ್ರವೀಣ್‌ಕುಮಾರ್ ಟಿ ಉಪಸ್ಥಿತರಿದ್ದರು. ಸುಮಾರು 1ಸಾವಿರ ವಿದ್ಯಾರ್ಥಿಗಳು ಶಿಬಿರದ ಪ್ರಯೋಜನ ಪಡೆದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕನ್ನಡದಲ್ಲಿ ಜನಪ್ರಿಯವಾಗಿ ಮನ್ನಣೆ ಪಡೆದ ಭಾವಗೀತೆಗಳನ್ನು ಬಿಟ್ಟು, ವಿಶೇಷವಾಗಿ ಕೆ.ವಿ. ತಿರುಮಲೇಶ, ಬೇಂದ್ರೆಯವರ ಅತ್ಯಂತ ಅರ್ಥ ಸಾಧ್ಯತೆ ಹೊಮ್ಮಿಸುವ ಹಾಡುಗಳನ್ನು ಆಯ್ಕೆ ಮಾಡಿ ಭಿನ್ನ ರೀತಿಯಲ್ಲಿ ಸೃಜನಶೀಲ ಚಿಂತಕ, ಲೇಖಕ ಶ್ರೀ ಗುರುರಾಜ ಮಾರ್ಪಳ್ಳಿ ಹಾಡಿದರು. ಅವರ ಜೊತೆ ಸಹ ಕಲಾವಿದರಾದ ಶ್ರೀ ಗಣೇಶ್ ರಾವ್ ಎಲ್ಲೂರು, ವಿದ್ಯಾರ್ಥಿ ಚಿನ್ಮಯಿ ಸಹಕರಿಸಿದರು. ಅವರು ಕಾಲೇಜಿನ ನೂತನ ಸಭಾಂಗಣದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ ನಡೆದ ಭಾವಗಾನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಹಾಡಿದರು. ವೇದಿಕೆಯ ಸಂಯೋಜಕ ಮತ್ತು ಪ್ರಭಾರ ಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥರು ಮತ್ತು ಪ್ರಭಾರ ಪ್ರಾಂಶುಪಾಲರಾದ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು. ಸಹಸಂಯೋಜಕಿ ರೇಷ್ಮಾ ಶೆಟ್ಟಿ ಸ್ವಾಗತಿಸಿದರು. ಶ್ರೀಕರ ಅತಿಥಿಗಳನ್ನು ಪರಿಚಯಿಸಿದರು, ರಕ್ಷಾ ವಂದಿಸಿದರು, ಲೋಕೇಶ್ ಕಾರ್ಯಕ್ರಮ ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನಕ್ಕೆ ಯುವಜನ ಸೇವೆ, ಕ್ರೀಡೆ, ಮೀನುಗಾರಿಕೆ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಅವರು ಪ್ರಥಮ ಬಾರಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಅನಂತ ಪದ್ಮನಾಭ ಐತಾಳ್ ಆದರದಿಂದ ಸ್ವಾಗತಿಸಿದರು. ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಜನಾರ್ದನ ಅಡಿಗ ದೇವರಿಗೆ ವಿಶೇಷ ಪೂಜೆ ನಡೆಸಿ ಸಚಿವರಿಗೆ ಪ್ರಸಾದ ವಿತರಿಸಿ ಆಶೀರ್ವದಿಸಿದರು. ಬಳಿಕ ದೇವಸ್ತಾನದ ವತಿಯಿಂದ ಸಚಿವರನ್ನು ಶಾಲು ಹೊದಿಸಿ ಸನ್ಮಾನಿ ಗೌರವಸಲಾಯಿತು. ಈ ಸಂದರ್ಭ ಕೋಟ ಶ್ರೀ ಅಮೃತೇಶ್ವರೀ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಆನಂದ ಸಿ ಕುಂದರ್, ಉಡುಪಿ ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ, ಸಾಲಿಗ್ರಾಮ ಸ್ವಿಮ್ಮಿಂಗ್ ಕ್ಲಬ್ ಅಧ್ಯಕ್ಷ ಅನಂತ ಶ್ಯಾನುಭೋಗ್, ದೇವಸ್ಥಾನ ಪಿ.ಸಿ.ಹೊಳ್ಳ, ಶ್ರೀಪತಿ ಅಧಿಕಾರಿ, ತಾರಾನಾಥ ಹೊಳ್ಳ, ಚಂದ್ರಶೇಖರ ಅಡಿಗ, ರೋಟರಿ ಅಧ್ಯಕ್ಷ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ(ರಿ.) ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಧ್ವಜಾರೋಹಣವನ್ನು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಬಿ. ಎಂ. ಸುಕುಮಾರ್ ಶೆಟ್ಟಿ ನೆರವೇರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ, ರಾಜೇಶ್ ಶೆಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕ ರಂಜಿತ್ ಟಿ. ಎನ್., ಕಾಲೇಜಿನ ಬೋಧಕ-ಬೋಧಕೇತರರ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕವನ ವಂದಿಸಿದರು, ಪ್ರಗತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Read More

ದೇಶ ಸೇವೆಗೆ ಸದಾ ಸಿದ್ದರಿರಬೇಕು: ನಿವೃತ್ತ ಯೋಧ ಜಾನ್ಸಿ ಥೋಮಸ್ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ದೇಶಭಕ್ತಿ ಹಾಗೂ ಕಠಿಣ ಪರಿಶ್ರಮದಿಂದ ನಮ್ಮ ಸೈನಿಕರು ಗಡಿ ಕಾಯುತ್ತಿದ್ದಾರೆ. ವಿದ್ಯಾರ್ಥಿಗಳು ಸೈನಿಕರ ತ್ಯಾಗ ಬಲಿದಾನಗಳನ್ನು ಅರಿತು ಸದಾ ದೇಶಸೇವೆಗೆ ಸಿದ್ದರಿರಬೇಕು. ಎಂದು ನಿವೃತ್ತ ಯೋಧ ಜಾನ್ಸಿ ಥೋಮಸ್ ಹೇಳಿದರು. ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೈಂದೂರು, ರೋಟರಿ ಕ್ಲಬ್ ಬೈಂದೂರು ಹಾಗೂ ಕಸಾಪ ಬೈಂದೂರು ಹೋಬಳಿ ಘಟಕದ ಸಹಯೋಗದಲ್ಲಿ ಮಾದರಿ ಶಾಲೆಯಲ್ಲಿ ಜರುಗಿದ 70ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವೀಂದ್ರ ಶಾನುಭೋಗ್ ಧ್ವಜಾರೋಹಣ ನೆರವೇರಿಸಿದರು. ರೋಟರಿ ಬೈಂದೂರು ಅಧ್ಯಕ್ಷ ಮಂಜುನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಜೊತೆ ಕಾರ್ಯದರ್ಶಿ ಯು. ಗೋಪಾಲ ಶೆಟ್ಟಿ, ಸಮೂಹ ಸಂಪನ್ಮೂಲ ವ್ಯಕ್ತಿ ದಿನಕರ ಎಚ್., ರಿಕ್ಷಾ, ಟೆಂಪೋ, ಟ್ಯಾಕ್ಸಿ ಯೂನಿಯನ್ ಅಧ್ಯಕ್ಷ ಮಹಾಬಲ ದೇವಾಡಿಗ, ಇನ್ನರ್ ವೀಲ್ ಬೈಂದೂರು ಅಧ್ಯಕ್ಷೆ ಆಶಾ ಕಿಶೋರ್, ಉಪಸ್ಥಿತರಿದ್ದರು. ರಿಕ್ಷಾ, ಟೆಂಪೋ, ಟ್ಯಾಕ್ಸಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಆರ್ಥಿಕ ಅಭಿವೃದ್ಧಿಯ ಶಕ್ತಿ. ಅಂತರಾಷ್ಟ್ರೀಯ ವ್ಯವಹಾರ ಅಭಿವೃದ್ಧಿಯನ್ನೊಳಗೊಂಡಂತೆ ಅರ್ಥಶಾಸ್ತ್ರದ ಮೂಲ ವಸ್ತುಸ್ಥಿತಿಯನ್ನು ವೈಜ್ಞಾನಿಕ ತಳಹದಿಯೊಂದಿಗೆ ಅಂತರಾಷ್ಟ್ರೀಯ ಮಾರುಕಟ್ಟೆಗೆ ಪರಿಚಯಿಸುತ್ತದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪ್ರಭಾರ ಹಣಕಾಸು ಅಧಿಕಾರಿ, ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಶ್ರೀಪತಿ ಕಲ್ಲೂರಾಯ ಹೇಳಿದರು. ಅವರು ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ಸಂಘದ ಆಶ್ರಯದಲ್ಲಿ ನಡೆದ ’ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಯಾಂತ್ರಿಕ ಕೌಶಲ್ಯ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ, ಶ್ರೀ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ಸಂಘದ ಸಂಚಾಲಕರಾದ ಸುಧಾಕರ್ ಪಾರಂಪಳ್ಳಿ ಸ್ವಾಗತಿಸಿದರು. ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾದ ಮಹೇಶ್ ಕೊಠಾರಿ ಅತಿಥಿಗಳನ್ನು ಪರಿಚಯಿಸಿದರು, ವಿದ್ಯಾರ್ಥಿನಿ ಕಾವ್ಯಾಶ್ರೀ ಕಾರ್ಯಕ್ರಮ ನಿರೂಪಿಸಿದರು, ಸಂಘದ ಸಹ ಸಂಚಾಲಕಿ ಅವಿತಾ ಕೊರಿಯಾ ವಂದಿಸಿದರು.

Read More