ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಆಶ್ರಯದಲ್ಲಿ ಕುಂದಾಪುರದ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂಟರ‍್ಯಾಕ್ಟ್ ಕ್ಲಬ್ ಪದಪ್ರದಾನ ಸಮಾರಂಭ ಜರುಗಿತು. ರೋಟರಿ ಸನ್‌ರೈಸ್ ಅಧ್ಯಕ್ಷ ಕೆ. ನರಸಿಂಹ ಹೊಳ್ಳ ಅವರು ಇಂಟರ‍್ಯಾಕ್ಟ್ ಕ್ಲಬ್‌ನ ಅಧ್ಯಕ್ಷೆ ಶ್ರೇಯಾ ಎಸ್. ಪೂಜಾರಿ, ಕಾರ್ಯದರ್ಶಿ ಆಶೀಷ್ ಚಂದ್ರನ್, ಖಜಾಂಚಿ ಧನ್ವಿ ಎಸ್. ಜೋಗಿ ಅವರಿಗೆ ಪದಪ್ರದಾನ ನೆರವೇರಿಸಿದರು. ಅತಿ ವಂದನೀಯ ಫಾದರ್ ಅನಿಲ್ ಡಿ,ಸೋಜಾ ಅವರು ಅಧ್ಯಕ್ಷತೆವಹಿಸಿದ್ದರು. ಇಂಟರ‍್ಯಾಕ್ಟ್ ಕ್ಲಬ್ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ರೋಟರಿ ಸನ್‌ರೈಸ್ ಸದಸ್ಯ ಉಲ್ಲಾಸ್ ಕ್ರಾಸ್ತಾ ಕೊಡಮಾಡಿದ ೫ಸಾವಿರ ರೂ.ಗಳನ್ನು ಹಸ್ತಾಂತರಿಸಲಾಯಿತು. ರೋಟರಿ ಜೋನಲ್ ಲೆಫ್ಟಿನೆಂಟ್ ಅಬುಶೇಖ್ ಸಾಹೇಬ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಇಂಟರ‍್ಯಾಕ್ಟ್ ಕ್ಲಬ್ ಛೇರ್‌ಮೆನ್ ಜಗದೀಶ್ ಚಂದ್ರನ್, ಶಾಲೆಯ ಇಂಟರ‍್ಯಾಕ್ಟ್ ಕೋ ಆರ್ಡಿನೆಟರ್ ಲೂಯಿಸ್ ಪ್ರಶಾಂತ ರೆಬೆರೋ, ಸಿಸ್ಟರ್ ಜೋಯ್ಸ್‌ಲಿನ್ ಎ.ಸಿ, ರೋಟರಿ ಸನ್‌ರೈಸ್ ಸದಸ್ಯರಾದ ಸದಾನಂದ ಉಡುಪ, ಡುಂಡಿರಾಜ್, ದಿನೇಶ್ ಗೋಡೆ, ಕಲ್ಪನಾ ಭಾಸ್ಕರ್, ಉಲ್ಲಾಸ್ ಕ್ರಾಸ್ತಾ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗಂಗೊಳ್ಳಿ ಗ್ರಾಮ ಪಂಚಾಯತ್‌ನಿಂದ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಕೇವಲ ಮಾತಿನಲ್ಲೇ ಕಾಲಹರಣ ಮಾಡಲಾಗುತ್ತಿದೆ. ಸದಸ್ಯರ ನಡುವಿನ ಕಚ್ಚಾಟದಿಂದ ಅಭಿವೃದ್ಧಿ ಕಾರ್ಯ ಸ್ಥಗಿತಗೊಂಡಿದೆ. ತಮ್ಮ ಕೆಲಸಕಾರ್ಯಗಳಿಗೆ ಜನರು ಪಂಚಾಯತ್‌ಗೆ ಅಲೆದು ಅಲೆದು ಸುಸ್ತಾಗಿದ್ದಾರೆ. ಗಂಗೊಳ್ಳಿ ಗ್ರಾಮ ಪಂಚಾಯತ್ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ ಎಂದು ಗ್ರಾಮಸ್ಥರು ಗ್ರಾಮ ಪಂಚಾಯತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗಂಗೊಳ್ಳಿಯ ಶ್ರೀ ವೀರೇಶ ಮಾಂಗಲ್ಯ ಮಂದಿರದಲ್ಲಿ ಜರಗಿದ ಗಂಗೊಳ್ಳಿ ಗ್ರಾಮ ಪಂಚಾಯತ್‌ನ ೨೦೧೬-೧೭ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯಲ್ಲಿ ಪಂಚಾಯತ್ ಆಡಳಿತದ ಮತ್ತು ಕಾರ್ಯವೈಖರಿ ವಿರುದ್ಧ ಗ್ರಾಮಸ್ಥರು ಹರಿಹಾಯ್ದರು. ಗ್ರಾಮಸಭೆಗಳಲ್ಲಿ ಕೈಗೊಂಡ ನಿರ್ಣಯ ಯಾವುದೂ ಅನುಷ್ಠಾನಗೊಳ್ಳುತ್ತಿಲ್ಲ. ಗ್ರಾಮಸಭೆಯ ನಿರ್ಣಯಗಳಿಗೆ ಯಾವುದೇ ಬೆಲೆ ಇಲ್ಲ. ನಿರ್ಣಯಗಳು ಕೇವಲ ಪುಸ್ತಕದಲ್ಲಿ ಮಾತ್ರ. ಗ್ರಾಮಸ್ಥರ ಬೇಡಿಕೆಗಳಿಗೆ ಸ್ಥಳೀಯಾಡಳಿತ ಸ್ಪಂದಿಸುತ್ತಿಲ್ಲ. ದಾರಿದೀಪ, ಸ್ವಚ್ಛತೆ, ಕುಡಿಯುವ ನೀರು ವಿಚಾರದಲ್ಲಿ ಸ್ಥಳೀಯಾಡಳಿತ ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಿದೆ. ಸಕಾಲದಲ್ಲಿ ನೀಡಿದ ಅರ್ಜಿಗಳನ್ನು ಗ್ರಾಮ ಪಂಚಾಯತ್‌ನಲ್ಲಿ ಸ್ವೀಕರಿಸುತ್ತಿಲ್ಲ. ಜನರನ್ನು ಅನಗತ್ಯವಾಗಿ ಪಂಚಾಯತ್‌ಗೆ ಸುತ್ತಾಡಿಸಲಾಗುತ್ತಿದೆ ಎಂದು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ಕಾಟಕ ಅಮಾವಾಸ್ಯೆ ಪ್ರಯುಕ್ತ ನದಿ-ಕಡಲ ಸಂಗಮದ ಅಪೂರ್ವ ತಾಣ ಮರವಂತೆಯ ಪುರಾಣ ಪ್ರಸಿದ್ಧ ಮಹಾರಾಜ ಶ್ರೀ ವರಾಹ ಸ್ವಾಮಿ ದೇವಸ್ಥಾನದಲ್ಲಿ ಸಮುದ್ರ ಸ್ನಾನ ಹಾಗೂ ವಾರ್ಷಿಕ ಜಾತ್ರೆ ಮಹೋತ್ಸವವು ಸಂಭ್ರಮ-ಸಡಗರದಿಂದ ನಡೆಯಿತು. ನಸುಕಿನಿಂದಲೇ ಆಸುಪಾಸಿನ ಊರುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಮರವಂತೆಗೆ ಆಗಮಿಸಿ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಾಚೆಗಿನ ಸಮುದ್ರದಲ್ಲಿ ಸ್ನಾನಗೆ„ದು ಬಳಿಕ ಶ್ರೀ ವರಾಹ ಸ್ವಾಮಿ ದೇವಸ್ಥಾನದ ಬಳಿಯಿರುವ ಸೌಪರ್ಣಿಕಾ ನದಿಯಲ್ಲಿ ಸ್ನಾನಗೈದು ಶ್ರೀದೇವರ ದರ್ಶನ ಪಡೆದು ಹರಕೆ ಸಲ್ಲಿಸಿದರು. ಕರ್ಕಾಟಕ ಅಮಾವಾಸ್ಯೆ ಜಾತ್ರೆಯ ಸಂಪ್ರದಾಯದಂತೆ ನವವಧುವರರು, ಕೃಷಿಕರು ಹಾಗೂ ಸ್ಥಳೀಯ ಭಾಗದ ಮೀನುಗಾರರು (ಮರವಂತೆ) ಭಾರೀ ಸಂಖ್ಯೆಯಲ್ಲಿ ಆಗಮಿಸಿ ಶ್ರೀವರಾಹ ಸ್ವಾಮಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ಕ್ಷೇತ್ರದ ಭಕ್ತರು ಈ ಸಂದರ್ಭದಲ್ಲಿ ವರ್ಷದ ಹರಕೆಯನ್ನು ಒಪ್ಪಿಸಿದರು. ಭಕ್ತರು ಶ್ರೀ ದೇವರ ದರ್ಶನ, ಪೂಜೆ-ಪುನಸ್ಕಾರದಲ್ಲಿ ಸುಸೂತ್ರವಾಗಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ದೇವಸ್ಥಾನದ ಆಡಳಿತ ಮಂಡಳಿಯು ವ್ಯವಸ್ಥೆ ಮಾಡಿತ್ತು. ಶ್ರೀದೇವರ ದರ್ಶನ ಪಡೆಯುವುದಕ್ಕಾಗಿ ಭಕ್ತಾದಿಗಳು ಸುಮಾರು ಅರ್ಥ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗ್ರೂಪ್ ಜಿಎಸ್‌ಬಿ ಹೆಲ್ಪ್‌ಲೈನ್ ಚಾರೀಟೇಬಲ್ ಟ್ರಸ್ಟ್ ವತಿಯಿಂದ ಹೆಚ್.ಐ.ವಿ ಬಾದಿತ ಬಡಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಧನ ಸಹಾಯ ಮಾಡಲಾಯಿತು. ಶ್ರೀಮತಿ ಕವಿತಾ ಶ್ಯಾನುಬಾಣ್ ರವರು ತಮ್ಮ ತಂದೆಯ ಸ್ಮರಣಾರ್ಥ ನೀಡಿದ ಬ್ಯಾಗ್‌ಗಳನ್ನು ಮಕ್ಕಳಿಗೆ ವಿತರಿಸಲಾಯಿತು. ಟ್ರಸ್ಟಿಗಳಲ್ಲೊರ್ವರಾದ ಜಯಶ್ರೀ ಭಟ್ ಧನ ಸಹಾಯ ಹಸ್ತಾಂತರಿಸಿದರು. ಜಿಲ್ಲೆಯ ಹೆಚ್.ಐ.ವಿ ಸೋಂಕಿತ ಪರ ಹೋರಾಟಗಾರ ಸಂಜೀವ ವಂಡ್ಸೆಯವರು ಉಪಸ್ಥಿತರಿದ್ದರು. ವರದಿ : ರಕ್ಷಿತ ಕುಮಾರ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪ್ರತಿಯೊಬ್ಬ ವ್ಯಕ್ತಿಯೂ ಇನ್ನೋಬ್ಬರಿಗಿಂತ ಭಿನ್ನನಾಗಿರುತ್ತಾನೆ ಈ ಭಿನ್ನತೆಯೇ ಒಬ್ಬರನ್ನು ಉಳಿದವರಿಗಿಂತ ಶ್ರೇಷ್ಠನನ್ನಾಗಿ ಪರಿಗಣಿಸುವಂತೆ ಮಾಡುತ್ತದೆ ಕೆಲಸದಲ್ಲಿ ಶ್ರಧ್ಧೆ ಪರಿಸರದ ಕುರಿತು ಕಾಳಜಿ ಲೋಕೋತ್ರತರ ದೃಷ್ಠಿಯಿಂದ ಸಕಲ ಜೀವಿಗಳ ಒಳಿತನ್ನು ಬಯಸುವುದು ಮಹಾತ್ಮರ ಲಕ್ಷಣ ಜೀವನದ ನಡಿಗೆ ಆ ದಿಸೆಯಲ್ಲಿರುವುದು ಲೇಸು ವ್ಯಕ್ತಿ ನಶ್ವರ ಸಾಧನೆ ಶಾಶ್ವತ ಶ್ರೇಷ್ಠ ತತ್ವಗಳನ್ನು ಶ್ರೇಷ್ಠ ಸಾಧಕರನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದು ಬೈಂದೂರು ವಲಯ ಶ್ರೀಮದ್ ಭಗವದ್ಗೀತಾ ಜಯಂತಿ ಆಚರಣ ಸಮಿತಿಯ ಗೌರವಾಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ ಹೇಳಿದರು. ಉಪ್ಪುಂದ ಶಂಕರ ಕಲಾಮಂದಿರದಲ್ಲಿ ಸ್ವರ್ಣವಲ್ಲಿ ಸೋಂದಾ ಗಂಗಾದರೇಂದ್ರ ಸರಸ್ವತಿ ಸ್ವಾಮೀಜಿಯವರು ಹಮ್ಮಿಕೊಂಡ ಶ್ರೀ ಭಗವದ್ಗೀತಾ ಸಪ್ತಾಹ ಆಚರಣೆಯ ರೂಪುರೇಷೆ ಕುರಿತು ಸಮಾಲೋಚನಾ ಸಭೆಯಲ್ಲಿ ಭಗವದ್ಗೀತಾ ಜಯಂತಿ ಆಚರಣ ಸಮಿತಿಯ ಹೊಳ್ಳ ದಂಪತಿಗಳಿಗೆ ನೀಡಿದ ಗೌರವ ಸ್ವೀಕರಿಸಿ ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಶ್ರೀಮದ್ ಭಗವದ್ಗೀತಾ ಜಯಂತಿ ಆಚರಣ ಸಮಿತಿಯ ಸಂಯೋಜಕ ಬಿ.ರಾಮಕೃಷ್ಣ ಶೇರುಗಾರ್ ವಹಿಸಿದ್ದರು ವೇದಿಕೆಯಲ್ಲಿ ಮುಖ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಆಶ್ರಯದಲ್ಲಿ ನಡೆಯುವ ತಿಂಗಳ ಕಾರ್ಯಕ್ರಮದ ಅಂಗವಾಗಿ ತಲ್ಲೂರು ವಿಠಲ ಭಜನಾ ಮಂಡಳಿ ಸದಸ್ಯರಿಂದ ಭಜನೋತ್ಸವ ಹಾಗೂ ಸುಗಮ ಸಂಗೀತ ಜರಗಿತು. ಇದೇ ಸಂದರ್ಭದಲ್ಲಿ ಖ್ಯಾತ ಗಾಯಕಿ ಶ್ರೀಮತಿ ಪ್ರಮೀಳಾ ಕುಂದಾಪುರ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿ ವಿಕ್ರಮ್ ಮೇಲಾಡಿ ಯು.ಆರ್. ಅವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಉದ್ಯಮಿ ಟಿ.ಎನ್. ಪ್ರಭು ತಲ್ಲೂರು, ಪದ್ಮನಾಭ ಪ್ರಭು, ಸೂರ್ಯನಾರಾಯಣ ಮಯ್ಯ, ಯು. ವೆಂಕಟರಮಣ ಹೊಳ್ಳ, ಉದಯ ಭಂಡಾರ್‌ಕಾರ್, ನಾಗೇಶ್ ಶ್ಯಾನುಭಾಗ್, ರಮೇಶ್ ಮೇಲಾಡಿ, ಸದಾಶಿವ ಐತಾಳ್, ಅಕಾಡೆಮಿಯ ಅಧ್ಯಕ್ಷ ಭಾಸ್ಕರ ಕೊಗ್ಗ ಕಾಮತ್, ಭಜನಾ ಮಂಡಳಿಯ ಸದಸ್ಯರಾದ ಮಮತಾ ಪ್ರಭು, ದೇವಕಿ ಪ್ರಭು, ರಜನಿ ಪ್ರಭು ಇನ್ನಿತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉಪ್ಪುಂದ ಅಂಬಾಗಿಲಿನಲ್ಲಿ ಬಸ್ ಅಪಘಾತದಲ್ಲಿ ಮೃತಪಟ್ಟ ಕುಂದಾಪುರ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ತೃತೀಯ ಬಿಕಾಂ ವಿದ್ಯಾರ್ಥಿ ಉಪ್ಪುಂದದ ರಾಘವೇಂದ್ರ ಶೆಟ್ಟಿ ಅವರಿಗೆ ಸಂತಾಪ ಸೂಚಕ ಸಭೆ ಉಪ್ಪುಂದ ಜ್ಯೂನಿಯರ್ ಕಾಲೇಜು ಆವರಣದಲ್ಲಿ ಜರುಗಿತು. ಮಹಾಈಶ್ವರ ಸೇವಾ ಸಮಿತಿಯ ಗೌರವಾಧ್ಯಕ್ಷ ನವೀಂದ್ರಚಂದ್ರ ಉಪ್ಪುಂದ, ಬೈಂದೂರು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶರತ್ ಶೆಟ್ಟಿ ಉಪ್ಪುಂದ, ವಿರೇಂದ್ರ ಶೆಟ್ಟಿ, ವಿದ್ಯಾರ್ಥಿ ದರ್ಶನ್ ಶೇಟ್ ಮೊದಲಾದವರು ವೇದಿಕೆಯಲ್ಲಿದ್ದರು. ಬೈಂದೂರು ಉಪ್ಪುಂದದಿಂದ ವಿವಿಧ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಆಯೋಜಿಸಿದ ಸಭೆಯಲ್ಲಿ ನಾಗರಿಕರೂ ಭಾಗವಹಿಸಿ ಮೃತ ರಾಘವೇಂದ್ರ ಶೆಟ್ಟಿ ಅವರ ಪೋಟೋಗೆ ಪುಷ್ಪಾರ್ಪಣೆ ಮಾಡಿದರು. Read this ► ಉಪ್ಪುಂದಲ್ಲಿ ಬಸ್ಸುಗಳ ನಡುವೆ ಅಪಘಾತ. ಓರ್ವ ವಿದ್ಯಾರ್ಥಿ ದಾರುಣ ಸಾವು – http://kundapraa.com/?p=16035 ► ಉಪ್ಪುಂದದಲ್ಲಿ ವಿದ್ಯಾರ್ಥಿ ಸಾವು: 2 ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ತಡೆ – http://kundapraa.com/?p=16049 ► ಭಟ್ಕಳ ಕುಂದಾಪುರ ಹೆಚ್ಚುವರಿ ಬಸ್ ಬಿಡಿ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಬೈಂದೂರು 2015-16ನೇ ಸಾಲಿನಲ್ಲಿ 36.19 ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿ 34,96,115 ರೂ. ಲಾಭಗಳಿಸಿದೆ. ಹಿಂದಿನ ನಾಲ್ಕು ಆರ್ಥಿಕ ವರ್ಷಗಳಿಗೆ ಹೋಲಿಸಿದರೇ ಲಾಭಾಂಶ ಶೇ.೩೬ರಷ್ಟು ವೃದ್ಧಿ ಸಾಧಿಸಿದೆ ಎಂದು ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು. ಭಾನುವಾರ ಸಂಘದ ಪ್ರಧಾನ ಕಛೇರಿಯಲ್ಲಿ ಜರುಗಿದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಪ್ರಸ್ತುತ ಆರ್ಥಿಕ ವರ್ಷದಲ್ಲಿ ಸಹಕಾರಿಯು 8,16,20,756 ರೂ. ಠೇವಣಿ ಸಂಗ್ರಹಿಸಿದ್ದರೇ 7,94,42,775 ರೂ. ಸಾಲರುವುದಲ್ಲದೇ ಆರ್ಥಿಕ ವರ್ಷದಲ್ಲಿ ಒಟ್ಟು 36.19ಕೋಟಿ ವಹಿವಾಟು ನಡೆಸಿದೆ. 34.96ಲಕ್ಷ ಲಾಭಾಂಶದಲ್ಲಿ ಸದಸ್ಯರಿಗೆ ಶೇ.13 ಡಿವಿಡೆಂಟ್ ಘೋಷಿಸಲಾಗಿದೆ ಎಂದರು. ಕಳೆದ ಸಾಲಿನ ಕಾರ್ಯಯೋಜನೆಯಲ್ಲಿ ನಿಗದಿಪಡಿಸಿದ ಠೇವಣಿ, ಸಾಲ, ಅನುತ್ಪಾದಕ ಸಾಲ, ಸುಸ್ತಿ ಸಾಲ ಹಾಗೂ ಮುಂಗಡ ಲಾಭಗಳಿಕೆಯಲ್ಲಿ ನಿಗದಿತ ಗುರಿಯನ್ನು ಮೀರಿ ಸಂಸ್ಥೆ ಮುನ್ನಡೆಯುತ್ತಿದ್ದರೇ, ಗ್ರಾಹಕರ ಸಹಕಾರ, ನಿಧಿಗಳ ಸಮರ್ಪಕ ನಿರ್ವಹಣೆ, ಸಾಲಗಳ ವಿತರಣೆ ಹಾಗೂ ಸಮಯೋಜಿತ ಹೂಡಿಕೆಗಳಿಂದಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಟ್ಕಳ-ಕುಂದಾಪುರಕ್ಕೆ ಶಾಲಾ-ಕಾಲೇಜು ಅವಧಿಯಲ್ಲಿ ಹೆಚ್ಚುವರಿ ಸರಕಾರಿ ಬಸ್ಸುಗಳನ್ನು ಬಿಡುವಂತೆ ವಿವಿಧ ಕಾಲೇಜು ವಿದ್ಯಾರ್ಥಿಗಳ ತಂಡ ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗೀಯ ನಿಯಂತ್ರಕರಿಗೆ ಮನವಿ ಸಲ್ಲಿಸಿದರು. ಶಿರೂರು, ಬೈಂದೂರು, ಉಪ್ಪುಂದ ನಾವುಂದ ಭಾಗಗಳಿಂದ ಸುಮಾರು ಒಂದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕುಂದಾಪುರ ಮುಂತಾದೆಡೆ ಕಾಲೇಜುಗಳಿಗೆ ತೆರಳುತ್ತಿದ್ದು ಈ ಅವಧಿಯಲ್ಲಿ ಹೆಚ್ಚುವರಿ ಬಸ್ಸುಗಳಿಲ್ಲದ ಕಾರಣ ಬಸ್ಸುಗಳಲ್ಲಿ ನೂಕುನುಗ್ಗಲು ಉಂಟಾಗಿ ಅಪಾಯಕಾರ ಸಂದರ್ಭಗಳು ಎದುರಾಗುತ್ತಿದೆ. ಪಾಸ್ ಹೊಂದಿರುವ ವಿದ್ಯಾರ್ಥಿಗಳನ್ನು ಬಸ್ ಹತ್ತಿಸಿಕೊಳ್ಳಲು ಚಾಲಕ, ನಿರ್ವಾಹಕರು ಹಿಂದೇಟು ಹಾಕುತ್ತಿದ್ದಾರೆ. ಶೀಘ್ರವೇ ಈ ಭಾಗಕ್ಕೆ ಬಸ್ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಮನವಿಗೆ ಸ್ಪಂದಿಸಿದ ಅಧಿಕಾರಿಗಳು ವಿದ್ಯಾರ್ಥಿಗಳ ಸಮಸ್ಯೆಗೆ ಶೀಘ್ರವೇ ಸ್ಪಂದಿಸುವುದಾಗಿ ಭರವಸೆ ನೀಡಿದ್ದಾರೆ. ಉಪ್ಪಂದ ಬಸ್ ಅಫಘಾತದಲ್ಲಿ ಕಾಲೇಜು ವಿದಾರ್ಥಿಯೋರ್ವ ಮೃತಪಟ್ಟ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ವಿದ್ಯಾರ್ಥಿ ಸಮೂಹ ಸಾರಿಗೆ ಇಲಾಖೆಯ ಅಸಹಕಾರ ಧೋರಣೆಯ ವಿರುದ್ದ ತಿರುಗಿ ಬಿದ್ದು ಗಂಟೆಗಳ ಕಾಲ ಹೆದ್ದಾರಿ ತಡೆ ನಡೆಸಿದ್ದರು. ಘಟನಾ ಸ್ಥಳಕ್ಕಾಗಮಿಸಿದ್ದ ಉಡುಪಿ ಎಸ್ಪಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಡೂರು-ಕುಂಜ್ಞಾಡಿಯಲ್ಲಿ ಸಾಕಷ್ಟು ವಿದ್ಯಾರ್ಥಿಗಳಿದ್ದರೂ, ಹೆಚ್ಚುವರಿ ಶಿಕ್ಷಕರ ನೆವದಲ್ಲಿ ಶಿಕ್ಷಕರ ವರ್ಗಾವಣೆ ಖಂಡಿಸಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಮತ್ತು ಹಳೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಶಾಲಾ ಮುಂಭಾಗ ಕೂತು ಪ್ರತಿಭಟನೆ ನಡೆಸಿದರೆ, ಸಾರ್ವಜನಿಕರು ಅವರಿಗೆ ಸಾಥ್ ನೀಡಿದರು. ಕನ್ನಡ ಮಾಧ್ಯಮ ಶಾಲೆ ಉಳಿಸುವ ನಿಟ್ಟಿನಲ್ಲಿ ಶಾಲಾ ಎಸ್ಡಿಎಂಸಿ ಸದಸ್ಯರು ಪ್ರಯತ್ನಿ ಮಾಡಿದರೆ ಶಿಕ್ಷಕರ ವರ್ಗಾವಣೆ ಮೂಲಕ ಕನ್ನಡ ಶಾಲೆ ಕೊಲ್ಲುವ ಕೆಲಸ ಸರಕಾರ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಹೆಚ್ಚುವರಿ ಹೆಸರಲ್ಲಿ ಶಿಕ್ಷಕರ ವರ್ಗಾವಣೆಯಿಂದ ಮಕ್ಕಳ ವಿದ್ಯಾಭ್ಯಾಸ ಕುಂಠಿತವಾಗುತ್ತದೆ. ವರ್ಗಾವಣೆ ಆದೇಶ ಹಿಂದಕ್ಕೆ ಪಡೆಯದಿದ್ದರೆ ಉಗ್ರ ಹೋರಾಟಕ್ಕೆ ನಾವು ಸಿದ್ದ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಇಡೂರು ಕುಂಜ್ಞಾಡಿ ಗ್ರಾಪಂ ಅಧ್ಯಕ್ಷೆ ಸಾವಿತ್ರಿ ಆಚಾರ‍್ಯ, ಉಪಾಧ್ಯಕ್ಷೆ ಸಾಧಮ್ಮ ಶೆಡ್ತಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ್ ದೇವಾಡಿಗ, ಸಂತೋಷ್ ಕುಮಾರ್ ಶೆಟ್ಟಿ ಹೇಸಿನಬೇರು, ಆನಂದ ಪೂಜಾರಿ, ರಾಜು ನಾಯ್ಕ್, ಬಾಲಕೃಷ್ಣ ಶೆಟ್ಟಿ ಇಂಬು, ಅಣ್ಣಪ್ಪ…
